Tag: Arvind Kejriwal

  • ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿ ವಿಪಕ್ಷಗಳಿಗೆ ತಿರುಗೇಟು – ಪಿಎಂ, ಸಿಎಂ ವಜಾ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ

    ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿ ವಿಪಕ್ಷಗಳಿಗೆ ತಿರುಗೇಟು – ಪಿಎಂ, ಸಿಎಂ ವಜಾ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ

    ನವದೆಹಲಿ: ಗಂಭೀರ ಅಪರಾಧಕ್ಕಾಗಿ 30 ದಿನಗಳ ಕಾಲ ಜೈಲಿನಲ್ಲಿರುವ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಇತರ ಸಚಿವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂದು ಆದೇಶಿಸುವ 130ನೇ ತಿದ್ದುಪಡಿ ಮಸೂದೆ 2025 ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.

    ಈ ಬಗ್ಗೆ ಪಾಡ್‌ಕಾಸ್ಟ್ನಲ್ಲಿ ಮಾತನಾಡಿರುವ ಅವರು, 5 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾಗುವ ಜನಪ್ರತಿನಿಧಿ ಆ ಹುದ್ದೆಯನ್ನು ತೊರೆಯಬೇಕಾಗುತ್ತದೆ. ಯಾವುದೇ ಸಣ್ಣ ಆರೋಪಕ್ಕೂ ಒಬ್ಬರು ಹುದ್ದೆಯನ್ನು ತೊರೆಯಬೇಕಾಗಿಲ್ಲ. ಇಂದಿಗೂ ಸಹ, ಜನಪ್ರತಿನಿಧಿ ಕಾಯ್ದೆಯಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸಿದರೆ, ಅವರು ಸಂಸತ್ ಸದಸ್ಯ ಸ್ಥಾನದಿಂದ ಬಿಡುಗಡೆ ಹೊಂದುತ್ತಾರೆ ಎಂಬ ನಿಬಂಧನೆ ಇದೆ. ಇದರ ಆಧಾರದ ಮೇಲೆ ಅನೇಕ ಜನರ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು ಮತ್ತು ಶಿಕ್ಷೆಗೆ ತಡೆ ಸಿಕ್ಕ ತಕ್ಷಣ ಅದನ್ನು ಪುನರುಜ್ಜೀವನಗೊಳಿಸಲಾಯಿತು ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಮನೆ ಮನೆ ಕಸ ಸಂಗ್ರಹದ ಆಟೋಗಳ ಸಮಯ ಬದಲಾವಣೆ

    ಮದ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕರಣವನ್ನು ಉಲ್ಲೇಖಿಸಿದ ಅಮಿತ್ ಶಾ, ಈ ಮಸೂದೆ ಜಾರಿಯಲ್ಲಿದ್ದರೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕಾಗುತ್ತಿತ್ತು ಎಂದು ಹೇಳಿದರು. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದು ತಪ್ಪು: ಬಿಕೆ ಹರಿಪ್ರಸಾದ್

    ಕೇಜ್ರಿವಾಲ್ ಹೊರಬಂದ ನಂತರ ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದಾಗ, ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿದರು ಮತ್ತು ಅತಿಶಿ ಅವರನ್ನು ದೆಹಲಿಯ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಏಕೆಂದರೆ ಅವರು ಓಡಾಡಲು ಪ್ರಾರಂಭಿಸಿದ ತಕ್ಷಣ, ಸಾರ್ವಜನಿಕರು ಅವರಿಗೆ ಪ್ರಶ್ನೆಗಳನ್ನು ಕೇಳಿದರು, ಅದಕ್ಕಾಗಿ ರಾಜೀನಾಮೆ ನೀಡಿದರು ಎಂದರು. ಇದನ್ನೂ ಓದಿ: ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

    ವಿರೋಧ ಪಕ್ಷಗಳು ಟೀಕೆಗಳಿಗೆ ಉತ್ತರಿಸಿ, ಅವರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡಲಾಗಿದೆ ಮತ್ತು ಅವರು ಅವಕಾಶವನ್ನು ಪಡೆಯುವುದು ಅವರಿಗೆ ಬಿಟ್ಟದ್ದು. ಜೆಪಿಸಿ ತನ್ನ ಕೆಲಸ ಮಾಡುತ್ತದೆ. ಇರುವವರು ಕೆಲಸ ಮಾಡುತ್ತಾರೆ. ನಾಳೆ, ವಿರೋಧ ಪಕ್ಷವು ಇಂದಿನಿಂದ ನಾಲ್ಕು ವರ್ಷಗಳವರೆಗೆ ಯಾವುದೇ ಕೆಲಸದಲ್ಲಿ ಸಹಕರಿಸದಿದ್ದರೆ, ದೇಶ ನಡೆಯುವುದಿಲ್ಲವೇ? ನಾವು ಮಾಡಬಹುದಾದ ಏಕೈಕ ವಿಷಯವೆಂದರೆ ಅವರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡುವುದು. ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಬಯಸದಿದ್ದರೆ, ಅವರು ಮಾತನಾಡಲು ಬಯಸದಿದ್ದರೆ, ದೇಶದ ಜನರು ಸಹ ಇವುಗಳನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತವರೂರು ಲಕ್ನೋದಲ್ಲಿ ಶುಭಾಂಶು ಶುಕ್ಲಾಗೆ ಭರ್ಜರಿ ಸ್ವಾಗತ

  • ಕೇಜ್ರಿವಾಲ್ ಕಟ್ಟಿಸಿದ ಶೀಶ್ ಮಹಲ್‌ಗೆ ಹೋಗೋಕೆ ಇಷ್ಟವಿಲ್ಲ – ಸಿಎಂ ಆಗಿ 50 ದಿನ ಕಳೆದ್ರೂ ರೇಖಾ ಗುಪ್ತಾಗೆ ಇನ್ನೂ ಅಧಿಕೃತ ನಿವಾಸವಿಲ್ಲ!

    ಕೇಜ್ರಿವಾಲ್ ಕಟ್ಟಿಸಿದ ಶೀಶ್ ಮಹಲ್‌ಗೆ ಹೋಗೋಕೆ ಇಷ್ಟವಿಲ್ಲ – ಸಿಎಂ ಆಗಿ 50 ದಿನ ಕಳೆದ್ರೂ ರೇಖಾ ಗುಪ್ತಾಗೆ ಇನ್ನೂ ಅಧಿಕೃತ ನಿವಾಸವಿಲ್ಲ!

    ನವದೆಹಲಿ: ದೆಹಲಿ (Delhi) ಸಿಎಂ ಆಗಿ ಅಧಿಕಾರ ವಹಿಸಿಕೊಂಡು 50 ದಿನಗಳು ಕಳೆದರೂ ಇನ್ನೂ ರೇಖಾ ಗುಪ್ತಾ (Rekha Gupta) ಅವರಿಗೆ ಅಧಿಕೃತ ನಿವಾಸವನ್ನು ಲೋಕೋಪಯೋಗಿ ಇಲಾಖೆ ನೀಡಿಲ್ಲ. ಇದರಿಂದಾಗಿ ಅವರು ಶಾಲಿಮಾರ್ ಬಾಗ್‌ನಲ್ಲಿರುವ ತಮ್ಮ ನಿವಾಸದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ದೆಹಲಿ ಸಚಿವಾಲಯಕ್ಕೆ ಪ್ರತಿದಿನ ಪ್ರಯಾಣಿಸಬೇಕಾಗಿದೆ.

    ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಆಡಳಿತದ ಅವಧಿಯಲ್ಲಿ ನಿರ್ಮಿಸಲಾದ ಶೀಶ್ ಮಹಲ್‌ಗೆ (Sheesh Mahal) ತೆರಳದಿರಲು ಅವರು ನಿರ್ಧರಿಸಿದ್ದರಿಂದ ಅವರಿಗೆ ಅಧಿಕೃತ ಬಂಗಲೆಯ ಸಮಸ್ಯೆ ಎದುರಾಗಿದೆ. ಅವರ ಈ ನಿರ್ಧಾರ ಅಧಿಕಾರಿಗಳನ್ನು ಪರದಾಡುವಂತೆ ಮಾಡಿದ್ದು, ಇನ್ನೂ ಈ ಸಮಸ್ಯೆ ಪರಿಹಾರ ಸಿಕ್ಕಿಲ್ಲ. ಇದನ್ನೂ ಓದಿ: ಇನ್ನು ಮುಂದೆ ಹೊಟೇಲ್‌ಗಳಲ್ಲಿ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ – ಫೇಸ್ ಐಡಿಯಲ್ಲೇ ದೃಢೀಕರಣ

    ಶಾಲಿಮಾರ್ ಬಾಗ್‌ನ ಅವರ ಪ್ರಸ್ತುತ ನಿವಾಸದಲ್ಲಿ ಹಿರಿಯ ಅಧಿಕಾರಿಗಳು, ವಿಐಪಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಬರುವ ಸಂದರ್ಶಕರಿಂದ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ. ಅದಕ್ಕಾಗಿ ಲಭ್ಯವಿರುವ ಸರ್ಕಾರಿ ಬಂಗಲೆಗಳ ಮೌಲ್ಯಮಾಪನಗಳಾಗಿದ್ದು, ಅವರ ವಸತಿ ಬಗ್ಗೆ ಅಂತಿಮ ನಿರ್ಧಾರ ಬಾಕಿ ಉಳಿದಿದೆ. ಅಲ್ಲದೇ ಕೇಂದ್ರ ಸರ್ಕಾರದ ನಿಧಿಯಿಂದ ಸರ್ಕಾರ ಒದಗಿಸಿರುವ ಬಂಗಲೆಯನ್ನು ಅವರು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಗುಪ್ತಾ ಅವರು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಹತ್ತಿರವಿರುವ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ನಿವಾಸಕ್ಕೆ ಆದ್ಯತೆ ಕೊಟ್ಟಿದ್ದಾರೆ. ಆದಾಗ್ಯೂ, ಆ ವಲಯದಲ್ಲಿ ನಿವಾಸವನ್ನು ಪಡೆಯಲು ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಹಾಗೂ ಕೇಂದ್ರ ಸಂಸ್ಥೆಗಳಿಂದ ಅನುಮತಿ ಮತ್ತು ಹಂಚಿಕೆ ಅಗತ್ಯವಿರುತ್ತದೆ. ಇದರಿಂದ ಬಂಗಲೆ ದೊರೆಯುವುದು ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.

    ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ, ರೇಖಾ ಗುಪ್ತಾ ಅವರು ಶೀಶ್ ಮಹಲ್‌ನಲ್ಲಿ ವಾಸಿಸುವುದಿಲ್ಲ ಎಂದು ಘೋಷಿಸಿದ್ದರು. ಬದಲಿಗೆ ಅದನ್ನು ಸಾರ್ವಜನಿಕರಿಗೆ ಪ್ರವೇಶಿಸಬಹುದಾದ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ಐಷಾರಾಮಿ ಬಂಗಲೆಯೂ 2015 ರಿಂದ ಅಕ್ಟೋಬರ್ 2024 ರವರೆಗೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅಧಿಕೃತ ನಿವಾಸವಾಗಿತ್ತು. ಇದನ್ನೂ ಓದಿ: ಇವಿಎಂ ದುರ್ಬಳಕೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಸ – ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ

  • ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?

    ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?

    ಲುಧಿಯಾನ: ಆಮ್ ಆದ್ಮಿ ಪಕ್ಷ ಪಂಜಾಬ್‌ನ ಲುಧಿಯಾನ ಪಶ್ಚಿಮ ವಿಧಾನಸಭಾ ಉಪಚುನಾವಣೆಗೆ ತನ್ನ ರಾಜ್ಯಸಭಾ ಸಂಸದ ಸಂಜೀವ್ ಅರೋರಾ (Sanjeev Arora) ಅವರನ್ನು ಕಣಕ್ಕಿಳಿಸಿದೆ. ಈ ಬೆಳವಣಿಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ರಾಜ್ಯಸಭೆ ಪ್ರವೇಶದ ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದೆ.

    ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ವದಂತಿಯನ್ನು ಪಕ್ಷ ತಳ್ಳಿ ಹಾಕಿತ್ತು. ಆದರೀಗ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರನ್ನು ಉಪ ಚುನಾವಣೆಗೆ ಕಣಕ್ಕಿಳಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್

    ಚುನಾವಣಾ ಆಯೋಗವು ಲುಧಿಯಾನ ಪಶ್ಚಿಮ (Ludhiana West) ಉಪಚುನಾವಣೆಯ ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ. ನವೆಂಬರ್‌ನಲ್ಲಿ ನಡೆಯುವ ಬಿಹಾರ ವಿಧಾನಸಭಾ ಚುನಾವಣೆಯ ಜೊತೆಗೆ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಭಸ್ಮ ಆಗ್ತಾರೆ – ಸಚಿವ ಜಮೀರ್ ಬ್ಯಾಟಿಂಗ್‌

    ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಎಪಿ ನಾಯಕ ನೀಲ್ ಗರ್ಗ್, ಸಂಜೀವ್ ಅರೋರಾ ಅವರ ಉತ್ತಮ ಕೆಲಸಗಳನ್ನು ಪರಿಗಣಿಸಿ ಲುಧಿಯಾನ ಪಶ್ಚಿಮ ಉಪಚುನಾವಣೆಗೆ ಟಿಕೆಟ್ ನೀಡಲಾಗಿದೆ. ಕೇಜ್ರಿವಾಲ್ ರಾಜ್ಯಸಭೆಗೆ ಹೋಗುತ್ತಾರೆ ಎಂಬ ಊಹಾಪೋಹಗಳು ಸುಳ್ಳು ಮತ್ತು ಬಿಜೆಪಿ ಕಾರ್ಖಾನೆಯಿಂದ ಬಂದಿವೆ.

    ನಾವು ಮೊದಲು ಉಪಚುನಾವಣೆ ಗಮನ ಹರಿಸುತ್ತೇವೆ. ಬಳಿಕ ಮತ್ತು ನಂತರ ರಾಜ್ಯಸಭೆಯತ್ತ ಕೇಂದ್ರೀಕರಿಸುತ್ತೇವೆ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಇಂತಹ ವದಂತಿಗಳನ್ನು ಹರಡುತ್ತಿವೆ. ಇಂತಹ ವದಂತಿಗಳಾಗಿ ನಾನು ತಿರಸ್ಕರಿಸುತ್ತೇನೆ ಎಂದು ನೀಲ್ ಗರ್ಗ್ ಹೇಳಿದರು. ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ಅಂತ್ಯಕ್ರಿಯೆ – ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟ ಪೊಲೀಸರು, ಅರೆಸ್ಟ್ ಆದ ಗಂಡ

  • ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ ಸೇರಿದ ಪಂಜಾಬ್ ನಟಿ

    ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ ಸೇರಿದ ಪಂಜಾಬ್ ನಟಿ

    ನವದೆಹಲಿ: ಕೀರ್ತಿ ಕಿಶನ್‌ನ ಯೂನಿಯನ್ ನಾಯಕ ಬಲದೇವ್ ಸಿಂಗ್ (Baldev Singh) ಅವರ ಪುತ್ರಿ ಪಂಜಾಬ್‌ನ ಬಹುಭಾಷಾ ನಟಿ ಸೋನಿಯಾ ಮನ್ (Sonia Mann), ಎಎಪಿ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ (Arvind Kejriwal) ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ಎಎಪಿಯ ಪಂಜಾಬ್ ಘಟಕವು ಎಕ್ಸ್‌ನಲ್ಲಿ ‘ಕೀರ್ತಿ ಕಿಸಾನ್ ಯೂನಿಯನ್ ನಾಯಕ ಎಸ್ ಬಲದೇವ್ ಸಿಂಗ್ ಅವರ ಪುತ್ರಿ ಹಾಗೂ ಪಂಜಾಬಿ ನಟಿ ಸೋನಿಯಾ ಮಾನ್ ಅವರು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷವನ್ನು ಸೇರಿದ್ದಾರೆ. ಅವರನ್ನು ಆಮ್ ಆದ್ಮಿ ಪಕ್ಷದ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ವಿಧಾನಸಭಾ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ

    ಸೋನಿಯಾ ಮಾನ್ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲೆಯಾಳಂ, ಹಿಂದಿ, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೈಡ್ ಆ್ಯಂಡ್ ಸೀಕ್ ಎಂಬ ಮಲೆಯಾಳಂ ಸಿನಿಮಾದಲ್ಲೂ ನಟಿಸಿದ್ದು, 2014ರಲ್ಲಿ ಹಿಂದಿಯಲ್ಲಿ ತೆರೆಕಂಡ ಕಹಿನ್ ಹೈ ಮೇರಾ ಪ್ಯಾರ್ ಚಿತ್ರದಲ್ಲೂ ಅಭಿನಯಿಸಿದ್ದಾರೆ. 2020ರಲ್ಲಿ ಹ್ಯಾಪಿ ಹಾರ್ಡಿ ಮತ್ತು ಹೀರ್ ಚಿತ್ರಗಳಲ್ಲೂ ನಟಿಸಿದ್ದಾರೆ. ಇದನ್ನೂ ಓದಿ: ಬಿಸಿಸಿಐ, ದುಬೈ ಕಾನ್ಸುಲೇಟ್‌ನಿಂದ ಸಮುದಾಯ ಜಾಗೃತಿ ಕಾರ್ಯಕ್ರಮ: ಕಾನ್ಸುಲ್ ಜನರಲ್ ಸತೀಶ್ ಶಿವನ್ ಸಲಹೆ

    ಸೋನಿಯಾ ತಂದೆ ಬಲದೇವ್ ಸಿಂಗ್ ಮಾಜಿ ನಾಯಕ ಮತ್ತು ಕಾರ್ಯಕರ್ತರಾಗಿದ್ದರು. ಅವರನ್ನು 1980 ರಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದನ್ನೂ ಓದಿ: ರೇಸ್‌ ವೇಳೆ ಮತ್ತೊಂದು ಕಾರಿಗೆ ಡಿಕ್ಕಿ – ಎರಡು ಪಲ್ಟಿಯಾಗಿ ನಿಂತ ನಟ ಅಜಿತ್‌ ಕಾರು

    ಫೆಬ್ರವರಿ 8ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷದ ಹೀನಾಯ ಸೋಲಿನ ನಂತರ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 2027ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಇದನ್ನೂ ಓದಿ: Champions Trophy 2025 | ಟಾಸ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ

  • ಪಂಜಾಬ್ ಸಿಎಂ, ಎಲ್ಲ ಆಪ್ ಶಾಸಕರನ್ನು ಭೇಟಿಯಾದ ಕೇಜ್ರಿವಾಲ್ – ಪಂಜಾಬ್ ಸಿಎಂ ಮಾನ್ ಬದಲಾಗ್ತಾರಾ?

    ಪಂಜಾಬ್ ಸಿಎಂ, ಎಲ್ಲ ಆಪ್ ಶಾಸಕರನ್ನು ಭೇಟಿಯಾದ ಕೇಜ್ರಿವಾಲ್ – ಪಂಜಾಬ್ ಸಿಎಂ ಮಾನ್ ಬದಲಾಗ್ತಾರಾ?

    ಚಂಡೀಗಢ: ದೆಹಲಿಯಲ್ಲಿ ಎಎಪಿ (AAP) ಹೀನಾಯ ಸೋಲಿನ ಬಳಿಕ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಪಂಜಾಬ್‌ನಲ್ಲಿ (Punjab) ಸಿಎಂ ಹಾಗೂ ಆಪ್‌ ಶಾಸಕರನ್ನು ಭೇಟಿಯಾಗಿದ್ದಾರೆ. ಈ ಬೆನ್ನಲ್ಲೇ, ಪಂಜಾಬ್‌ ಸಿಎಂ ಬದಲಾಗ್ತಾರಾ ಎಂಬ ಚರ್ಚೆ ಶುರುವಾಗಿದೆ.

    ದೆಹಲಿಯಲ್ಲಿ ನಡೆದ ಎಎಪಿ ಸಭೆಯಲ್ಲಿ ಕೇಜ್ರಿವಾಲ್, ಹಿರಿಯ ನಾಯಕ ಮನೀಶ್ ಸಿಸೋಡಿಯಾ ಮತ್ತು ಎಲ್ಲಾ ಪಂಜಾಬ್ ಶಾಸಕರು ಮತ್ತು ಪಕ್ಷದ ಇತರ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು. ಇದನ್ನೂ ಓದಿ: ರಣವೀರ್ ಅಲಹಾಬಾದಿಯಾ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ದೂರು

    ರಾಷ್ಟ್ರ ರಾಜಧಾನಿಯ ಕಪುರ್ತಲಾ ಹೌಸ್‌ನಲ್ಲಿ ನಡೆದ ಪಂಜಾಬ್ ಶಾಸಕರ ಸಭೆ ಗಮನ ಸೆಳೆದಿತ್ತು. ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾನ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬದಲಾಯಿಸಲು ಕೇಜ್ರಿವಾಲ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ರಾಜೌರಿ ಗಾರ್ಡನ್‌ನಿಂದ ಹೊಸದಾಗಿ ಆಯ್ಕೆಯಾದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ, ಭಗವಂತ್‌ ಮಾನ್ ಅವರಿಗೆ ‘ಅಸಮರ್ಥ’ ಎಂದು ಹಣೆಪಟ್ಟಿ ಕಟ್ಟುವ ಮೂಲಕ ಅವರನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.

    ದೆಹಲಿ ಚುನಾವಣೆಯಲ್ಲಿ ಸೋತ ನಂತರ, ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಪಂಜಾಬ್ ಶಾಸಕರ ಸಭೆ ಕರೆದಿದ್ದಾರೆ. ಭಗವಂತ್‌ ಮಾನ್ ಅವರನ್ನು ಅಸಮರ್ಥ ಎಂದು ಹಣೆಪಟ್ಟಿ ಕಟ್ಟಿ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಮಹಿಳೆಯರಿಗೆ 1,000 ರೂ. ನೀಡುವ ಭರವಸೆಯನ್ನು ಅವರು ಈಡೇರಿಸಲು, ಮಾದಕ ದ್ರವ್ಯ ಸೇವನೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಪಂಜಾಬ್‌ನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ್ದಾರೆ. ಈಗ, ಅವರು ಎಲ್ಲಾ ವೈಫಲ್ಯವನ್ನು ಭಗವಂತ್ ಮಾನ್ ಅವರ ಮೇಲೆ ಹಾಕಲು ಬಯಸುತ್ತಾರೆ. ಕೇಜ್ರಿವಾಲ್ ಒಳ್ಳೆಯ ವ್ಯಕ್ತಿ. ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರು AAP ಪಂಜಾಬ್ ಶಾಸಕರನ್ನು ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಧ್ಯಕ್ಷರ ಬದಲಾವಣೆ ಚರ್ಚೆ – ಅಮಿತ್ ಶಾ ಭೇಟಿಯಾದ ಸೋಮಣ್ಣ

    ಈ ಹೇಳಿಕೆಯ ಬಗ್ಗೆ ಮಾನ್‌ ಅವರು ನಗುಬೀರಿದ್ದಾರೆ. ‘ಅವರು ಹೇಗೆ ಬೇಕಾದರೂ ಮಾತನಾಡಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಪಂಜಾಬ್ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡುವ ಭರವಸೆಯನ್ನು ಈಡೇರಿಸುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

  • ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ದ್ರೋಹಿಗೆ ಸೋಲಾಗಿದೆ: ಕಾರಜೋಳ

    ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ದ್ರೋಹಿಗೆ ಸೋಲಾಗಿದೆ: ಕಾರಜೋಳ

    ವಿಜಯಪುರ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಪಕ್ಷಕ್ಕೆ ಹಾಗೂ ಪ್ರಧಾನಿ ಮೋದಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳ (Govind Karjol) ಹೇಳಿದರು.

    ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ದೆಹಲಿಯ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಬಹುಮತ ಸಾಧಿಸಿದೆ. ನಾನು ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿ ಅವರ ನಾಯಕತ್ವದಲ್ಲಿ 11 ವರ್ಷಗಳ ಆಡಳಿತ ಅತ್ಯುತ್ತಮವಾಗಿದೆ. ಇದಕ್ಕೆ ಶನಿವಾರ ಹೊರಬಂದಿರುವ ದೆಹಲಿ ಫಲಿತಾಂಶ ಸಾಕ್ಷಿಯಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಕಾಮುಕನಿಗೆ 20 ವರ್ಷ ಕಠಿಣ ಜೈಲು

    ಕೇಜ್ರಿವಾಲ್ ಆಮ್ ಆದ್ಮಿ ಮೂಲಕ ಚುನಾವಣೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದರು. ಸುಳ್ಳು ಹೇಳಿ ಜನರ ಮನಸ್ಸು ಕದ್ದಿದ್ದ ಮಹಾನ್ ದ್ರೋಹಿ ಅವನು. ಸ್ವಾತಂತ್ರö್ಯ ನಂತರ ಇಡೀ ದೇಶದಲ್ಲೇ ಯಾರೂ ಮಾಡದಷ್ಟು ಭ್ರಷ್ಟಾಚಾರವನ್ನು ಅರವಿಂದ್ ಕೇಜ್ರಿವಾಲ್ ಮಾಡಿದ್ದಾನೆ. ವ್ಯವಸ್ಥಿತವಾಗಿ, ಪಾರದರ್ಶಕವಾಗಿ ಬಂದ ವ್ಯವಸ್ಥೆಯನ್ನು ಹಾಳು ಮಾಡಿ, ದುರಾಡಳಿತ ಮಾಡಿದವನು ಎಂದು ಕಿಡಿಕಾರಿದರು.

    ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರೂ ರಾಜೀನಾಮೆ ಕೊಡಲಿಲ್ಲ. ಅವನು ಸಂವಿಧಾನ ದ್ರೋಹಿ, ಜನರು ಅವನಿಗೆ ತಕ್ಕ ಪಾಠ ಕಲಿಸಿದ್ದಾರೆ. ದೆಹಲಿ ಕೇಂದ್ರಾಡಳಿತ ಪ್ರದೇಶ ಇದೆ. ಅದು ಹೆಚ್ಚಿನ ಮಧ್ಯಮ ವರ್ಗದವರು ಇರುವ ಊರು, ಅದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ಟ್ಯಾಕ್ಸ್ ಬರುವ ಪ್ರದೇಶದಲ್ಲಿ ಹೆಚ್ಚು ಅಭಿವೃದ್ಧಿ ಮಾಡಬೇಕಿತ್ತು. ಆದರೆ ಅಲ್ಲಿ ಓಡಾಡಲು ಆಗದ ಸ್ಥಿತಿ ಇದೆ. ದೇಶಕ್ಕೆ ಕೆಟ್ಟ ಪರಿಸ್ಥಿತಿ ತಂದಿದ್ದಾರೆ. ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಅವರಿಗೆ ಪುಕ್ಕಟೆ ಕೊಟ್ಟು ಗೆಲ್ಲುವುದು ಒಂದು ಕೆಟ್ಟ ಸಂಪ್ರದಾಯವಾಗಿದೆ, ಇದಕ್ಕೆ ಇತಿಶ್ರೀ ಹಾಕಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಶಾರ್ಟ್‌ಕಟ್‌ ರಾಜಕೀಯಕ್ಕೆ ಜನರು ಶಾರ್ಟ್ ಸರ್ಕ್ಯೂಟ್ ನೀಡಿದ್ದಾರೆ – ಇದು ವಿಕಾಸದ ಗೆಲುವು ಎಂದ ಮೋದಿ

  • ಬಿಜೆಪಿ ಆಯ್ಕೆ ಮಾಡಿ ಜನರು ಆಪ್ ತಿರಸ್ಕರಿಸಿದ್ದಾರೆ: ಈರಣ್ಣ ಕಡಾಡಿ

    ಬಿಜೆಪಿ ಆಯ್ಕೆ ಮಾಡಿ ಜನರು ಆಪ್ ತಿರಸ್ಕರಿಸಿದ್ದಾರೆ: ಈರಣ್ಣ ಕಡಾಡಿ

    ನವದೆಹಲಿ: ದೆಹಲಿ ಜನತೆ ಬಿಜೆಪಿ ಆಯ್ಕೆ ಮಾಡಿ ಆಪ್‌ ತಿರಸ್ಕರಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ (Eranna Kadadi) ತಿಳಿಸಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯನ್ನು ಬಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ಆಮ್ ಆದ್ಮಿ ಪಕ್ಷವನ್ನು ತಿರಸ್ಕರಿಸಿದ್ದು, ಆ ಪಕ್ಷದ ನೇತಾರ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಮತ್ತು ಉಪಮುಖ್ಯಮಂತ್ರಿ ಮನಿಷ್ ಸೀಸೋಡಿಯಾ ಸೋಲುವ ಮೂಲಕ ಬಾರಿ ಹಿನ್ನೆಡೆ ಉಂಟಾಗಿದೆ. ಹೀಗಾಗಿ, ಬಿಜೆಪಿಗೆ ಆಶೀರ್ವದಿಸಿದ ಮತದಾರ ಬಂಧುಗಳಿಗೆ ಹಾಗೂ ಬಿಜೆಪಿಯನ್ನು ಗೆಲ್ಲಿಸುವಲ್ಲಿ ವಿಶೇಷ ಶ್ರಮವಹಿಸಿದ ದೆಹಲಿ ಬಿಜೆಪಿ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನ ಬಿಜೆಪಿ ಗೆಲ್ಲಿಸಿದ್ದಾರೆ: ಬೊಮ್ಮಾಯಿ

    ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಅಣ್ಣಾ ಹಜಾರೆ ಮತ್ತು ಅವರ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷದ ಸಚಿವ ಸಂಪುಟದ ಹಲವಾರು ಸಚಿವರು ಭ್ರಷ್ಟಾಚಾರ ಕಳಕಿಂತರಾಗಿ ಜೈಲು ಪಾಲಾಗಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಸುಳ್ಳಿನ ಅರಮನೆಯನ್ನೇ ನಿರ್ಮಿಸಿ ಅಧಿಕಾರಕ್ಕೆ ಬಂದ ಅರವಿಂದ್ ಕ್ರೇಜಿವಾಲ್ ಅವರನ್ನು ದೆಹಲಿ ಜನ ತಿರಸ್ಕರಿಸಿದ್ದಾರೆ.‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಜನ ಆಯ್ಕೆ ಮಾಡುವ ಮೂಲಕ ದೆಹಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದರು.

    ಈ ಗೆಲುವಿಗೆ ಕಾರಣೀಭೂತರಾದ ದೆಹಲಿ ಮತದಾರ ಬಂಧುಗಳಿಗೂ ಹಾಗೂ ಗೆಲುವಿಗೆ ಪರಿಶ್ರಮ ವಹಿಸಿದ ಬಿಜೆಪಿ ದೆಹಲಿ ಕಾರ್ಯಕರ್ತರಿಗೂ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

  • ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಮಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮ

    ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಮಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮ

    ಮಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election Results) ಬಿಜೆಪಿ ಭರ್ಜರಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಮಂಗಳೂರಲ್ಲಿ (Mangaluru) ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

    ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ವಿಜಯೋತ್ಸವ ಆಚರಿಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ಶಾಸಕ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಮೇಯರ್ ಮನೋಜ್ ಕುಮಾರ್ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.

    27 ವರ್ಷಗಳ ಬಳಿಕ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಜಯ ಸಾಧಿಸಿದೆ. ಒಂದು ದಶಕ ಆಡಳಿತ ನಡೆಸಿದ ಎಎಪಿ ಹೀನಾಯ ಸೋಲನುಭವಿಸಿದೆ. ಕೇಜ್ರಿವಾಲ್ ಸೇರಿದಂತೆ ಪಕ್ಷದ ಘಟನಾನುಘಟಿ ನಾಯಕರು ಮಕಾಡೆ ಮಲಗಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣಾ ಫಲಿತಾಂಶ ಬಿಜೆಪಿ ಮೇಲಿನ ನಂಬಿಕೆ ವೃದ್ಧಿಸಿದೆ: ಸುಧಾಕರ್ ರೆಡ್ಡಿ

    ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 48, ಎಎಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮೂರನೇ ಬಾರಿಯೂ ಶೂನ್ಯ ಸಾಧನೆ ಮಾಡಿದೆ.

  • ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Dehli Assembly Election) ಬಿಜೆಪಿ 27 ವರ್ಷಗಳ ಬಳಿಕ ಗೆಲವು ಸಾಧಿಸಿದೆ. ಈ ಮೂಲಕ ದೆಹಲಿ ಜನ ಕೇಜ್ರಿವಾಲ್ ನಶೆ ಇಳಿಸುವುದರ ಜೊತೆಗೆ ಎಣ್ಣೆ ಏಟಿಗೆ ಎಎಪಿ (AAP) ಪಕ್ಷಕ್ಕೆ ಸೋಲಿನ ಕಿಕ್ ನೀಡಿದ್ದಾರೆ.

    2014ರ ಲೋಕಸಭೆ ಚುನಾವಣೆ ವೇಳೆ ದೆಹಲಿಯಲ್ಲಿ ಎಎಪಿ ಒಂದು ಸೀಟನ್ನು ಗೆದ್ದರಲಿಲ್ಲ. ಆದರೆ 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಪ್ 70ರಲ್ಲಿ 67 ಸೀಟುಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಒಂದು ಸೀಟು ಗೆಲ್ಲದ ಎಎಪಿ 2020ರ ವಿಧಾನಸಭೆ ಚುನಾವಣೆಯಲ್ಲಿ 63 ಸೀಟುಗಳನ್ನು ಗೆದ್ದು ಬೀಗಿತ್ತು.ಇದನ್ನೂ ಓದಿ: ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

    ಈ ಸಂದರ್ಭದಲ್ಲಿ ದೆಹಲಿ ಜನತೆ ಕೇಂದ್ರಕ್ಕೆ ಬಿಜೆಪಿ ಮತ್ತು ಸ್ಥಳೀಯವಾಗಿ ಎಎಪಿ ಎಂಬ ತೀರ್ಮಾನಿಸಿದೆ ಎನ್ನಲಾಗಿತ್ತು. ಆದರೆ ಇದೀಗ 2025ರ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಎಲ್ಲವೂ ತಿರುಗಿ ಬಿದ್ದಿದೆ.

    ಕಳೆದೆರಡು ವರ್ಷಗಳಲ್ಲಿ ಎಎಪಿ ಪಕ್ಷಕ್ಕೆ ಹಗರಣದ ಅಲೆಗಳು ಅಪ್ಪಳಿಸಿದ್ದವು. ಮದ್ಯ ಹಗರಣದಲ್ಲಿ ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್, ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಗಳಾಗಿ ಜೈಲು ಸೇರಿದ್ದರು. ಈ ಮೂಲಕ ಸಚಿವರು ಸಾಲು ಸಾಲಾಗಿ ಹಗರಣದಲ್ಲಿ ಸಿಲುಕಿ ಜೈಲು ಸೇರಿ ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆಗೆ ಹಾನಿ ಎಸಗಿದರು.

    ಈ ನಡುವೆ `ಜೈಲ್ ಕಾ ಜವಾಬ್ ವೋಟ್ ಸೇ’ ಎಂದು ದೆಹಲಿಯಲ್ಲಿ ಪ್ರಚಾರ ನಡೆಸಿದ್ದರು. ಆದರೂ ಕೇಜ್ರಿವಾಲ್ ಅನುಕಂಪದ ಕ್ಯಾಂಪೇನ್‌ಗೆ ದೆಹಲಿ ಜನರು ಕರಗಲಿಲ್ಲ. ಕಡೆಗೂ ಎಣ್ಣೆ ಏಟಿಗೆ ಕೇಜ್ರಿವಾಲ್ ತಂಡ ನರಳಿ, ಕಿಕ್ ಇಳಿಸುವ ಮೂಲಕ ಮೋದಿ ತಂಡ ಗೆದ್ದು ಬೀಗಿದೆ.ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಶಾಕ್- ನಾಳೆಯಿಂದಲೇ ದರ ಏರಿಕೆ ಜಾರಿ – ಎಷ್ಟು ಕಿ.ಮೀಗೆ ಎಷ್ಟು ದರ?

     

  • ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?

    ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?

    – ಮಿಡ್ಲ್ ಕ್ಲಾಸ್ ಹಾರ್ಟ್ ಗೆದ್ದ ಮೋದಿ ಟೀಂ

    ಮಿಡ್ಲ್ ಕ್ಲಾಸ್ ‌ಹಾರ್ಟ್ ಗೆದ್ದವರೇ ದಿಲ್ಲಿ ಗದ್ದುಗೆ ಗೆದ್ದು ಬಿಟ್ಟರಾ? 27 ವರ್ಷಗಳ ಕಾಲ‌ ಅಧಿಕಾರ ಹಿಡಿಯಲು ತಿಣುಕಾಡಿದ್ದ ಬಿಜೆಪಿ (BJP) ಈಗ ಕ್ಯಾಪಿಟಲ್ ಕ್ಯಾಪ್ಟನ್. ಮೋದಿ-ಶಾ (Modi – Amit Shah) ಜೋಡಿಯ ಚತುರೋಪಾಯಗಳು ದೈತ್ಯ ಕೇಜ್ರಿʻವಾಲ್ʼ ಕೆಡವಿ ಮಕಾಡೆ ಮಲಗಿಸಿಬಿಟ್ಟಿವೆ. ಹಾಗಾದ್ರೆ ಡೆಲ್ಲಿಯಲ್ಲಿ ಏನಾಯ್ತು? ಗೆಲುವಿನ ಸರದಾರರ ಒಳ ರಹಸ್ಯಗಳೇನು? ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ.

    50ರ ತನಕ ಮೋದಿಗೆ ಜಾಗವಿಲ್ಲ ಎಂದಿದ್ದ ಆಪ್ ಮಲಗಿತು ಮಕಾಡೆ:
    ಅಂದು ಭ್ರಷ್ಟಾಚಾರ ವಿರೋಧಿ ಆಂದೋಲನವೇ ಎಎಪಿ ಉದಯಕ್ಕೆ ಕಾರಣ. ಆದ್ರೆ ಇಂದು ಭ್ರಷ್ಟಾಚಾರ ಆರೋಪವೇ ಎಎಪಿ ಪತನಕ್ಕೆ ನಾಂದಿ. ಅವರದೇ ಕಸಪೊರಕೆಯಿಂದ ಎಎಪಿ ಗುಡಿಸಿ ಗುಡ್ಡೇ ಹಾಕಿದೆ ಬಿಜೆಪಿ. ಇದನ್ನ ಭಾರತದ ಪ್ರಜಾಪ್ರಭುತ್ವದ ಬ್ಯೂಟಿ ಅನ್ನಬೇಕೋ? ಚುನಾವಣಾ ಚದುರಂಗದಾಟದ ಫಲಿತಾಂಶ ಅನ್ನಬೇಕೋ..? ಆದ್ರೆ ಗೆಲುವು ಗೆಲುವೇ. ಇದನ್ನೂ ಓದಿ: Delhi Election Results | ಬಜೆಟ್ ಡೇ ಸೂಪರ್ ಓವರ್‌ನಲ್ಲಿ ಸೀತಾರಾಮನ್ ʻಸಿಕ್ಸ್‌ʼ – ಬಿಜೆಪಿ ಚಾಂಪಿಯನ್‌!

    ಮೋದಿ-ಶಾ ಚತುರೋಪಾಯಗಳೇ ಡೆಲ್ಲಿ ಗೆಲ್ಲಿಸಿತಾ?
    ಅಂದಹಾಗೆ ಡೆಲ್ಲಿ ಚುನಾವಣೆಯಲ್ಲಿ ಸಾಮ, ದಾನ, ಭೇದ, ದಂಡ‌ ಮಂತ್ರಗಳನ್ನ ಬಿಜೆಪಿ ಪಠಿಸಿದಂತೆ ಕಾಣುತ್ತೆ. ಡೆಲ್ಲಿಯನ್ನ ಗೆದ್ದೇ ಗೆಲ್ಲಬೇಕೆಂಬ ಹಠ ಮೋದಿ ಅವರಿಗಿತ್ತು. ಆ ಕಾರಣಕ್ಕಾಗಿಯೇ ಕೇಜ್ರಿವಾಲ್ ವಿರುದ್ಧ ಎಲ್ಲ ಶಕ್ತಿಗಳನ್ನ ಒಟ್ಟುಗೂಡಿಸಿದ್ದು ಮೋದಿ, ಶಾ. ಲೋಕಸಭೆಯಲ್ಲಿ ದೂರಾಗಿದ್ದವರಿಗೂ ಮಣೆ ಹಾಕುವುದರ ಜೊತೆಗೆ ಜಾತಿ ಆಧಾರಿತ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ತಂತ್ರ ಫಲಿಸಿದೆ. ಕೇಜ್ರಿವಾಲ್ ಸುತ್ತ ಗಿರಕಿ ಹೊಡೆದ ಎಎಪಿಗೆ ಮೋದಿ ಟೀಂನಿಂದ ಬಿಟ್ಟ ಭ್ರಷ್ಟಾಚಾರ ಬಾಣ ನಾಟಿರುವುದು ಸ್ಪಷ್ಟ. ಇದನ್ನೂ ಓದಿ: ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ: ಕೇಜ್ರಿವಾಲ್‌

    ಡೆಲ್ಲಿ ವಾರ್.. ಬಿಜೆಪಿಯೇ ಸ್ಟಾರ್ – ಎಎಪಿ ಢಮಾರ್:
    ಯೆಸ್, ಎಎಪಿಯನ್ನ ಮಣಿಸಲು ಬಿಜೆಪಿ ಮಾಡಿದ ಹಲವು ಕ್ಯಾಂಪೇನ್‌ಗಳು ಸಕ್ಸಸ್ ಆದಂತೆ ಕಾಣ್ತಿದೆ. ಎಎಪಿ ವಿರುದ್ಧ ಭ್ರಷ್ಟಾಚಾರ ಕ್ಯಾಂಪೇನ್, ಡೆಲ್ಲಿ ಜಾತಿ ಸಮೀಕರಣ ತಂತ್ರ, ಟ್ಯಾಕ್ಸ್ ರಿಲ್ಯಾಕ್ಸ್ -ಮಿಡ್ಲ್ ಕ್ಲಾಸ್ ಟಾರ್ಗೆಟ್, ಪ್ರಧಾನಿ ನರೇಂದ್ರ ಫೇಸ್+ಡೆವಲಪ್ಮೆಂಟ್ ವಿಶನ್, ಕುಂಭಮೇಳ ಮತ್ತು ಧರ್ಮಾಧಾರಿತ ವಿಷಯಗಳನ್ನು ಬಿಜೆಪಿ ಕ್ಯಾಂಪೇನ್ ಮಾಡಿತ್ತು. ಆದ್ರೆ ಎಎಪಿ ಆಯ್ಕೆ ಕೇಜ್ರಿವಾಲ್ ಜೈಲಿನ ಅನುಂಕಪ ನೆಚ್ಚಿಕೊಳ್ಳುವುದರ ಜೊತೆಗೆ ಭ್ರಷ್ಟಾಚಾರ ಕೂಪದ ಆರೋಪದಿಂದ ಹೊರಬರಲು ವಿಲವಿಲ ಎನ್ನುವಂತಾಯ್ತು ಎಂಬುದು ರಾಜಕೀಯ ಪಡಸಾಲೆಯ ಚರ್ಚೆ. ಇದನ್ನೂ ಓದಿ: ಶೀಷ್‌ ಮಹಲ್‌ನಿಂದ ಹೊಸ ಅಬಕಾರಿ ನೀತಿ ಹಗರಣ ವರೆಗೆ – ದೆಹಲಿಯಲ್ಲಿ ಆಪ್‌ ಸೋತಿದ್ದೇಕೆ?

    ಒಟ್ಟಿನಲ್ಲಿ ಡೆಲ್ಲಿ ಪೊಲಿಟಿಕಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೋದಿ-ಶಾ ರಕ್ಷಣಾತ್ಮಕ ಜೊತೆಯಾಟದಿಂದ ಎಎಪಿ ಕಟ್ಟಿದ ಕೇಜ್ರಿ ‘ವಾಲ್’ ಛಿದ್ರ ಛಿದ್ರವಾಗಿದ್ರೆ, ಬಜೆಟ್ ಡೇ ಸೂಪರ್ ಓವರ್ ನಲ್ಲಿ ನಿರ್ಮಲಾ ಸೀತಾರಾಮನ್ ಸೂಪರ್ ಸಿಕ್ಸ್ ನಿಂದ ಬಿಜೆಪಿಗೆ ಬೂಸ್ಟ್ ಸಿಕ್ಕಿ 27 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕೇರಿದೆ. ಆದ್ರೆ ಎಎಪಿ ಟೀಂನಲ್ಲಿ ಕ್ಯಾಪ್ಟನ್ ತಂತ್ರ ಕೈ ಕೊಡುವುದರ ಜೊತೆಗೆ ಹಿಟ್ ವಿಕೆಟ್ ಗಳು ಜಾಸ್ತಿ ಆಗಿ, ಚಾಂಪಿಯನ್ ಪಟ್ಟದಿಂದ ಎಎಪಿ ಔಟ್ ಆಗಿದ್ರೆ, ‘ಕೈ’ ಜಾರಿದ ಮೈತ್ರಿ ಕ್ಯಾಚ್ ನಿಂದ ಕಂಗೆಟ್ಟಿದ್ದ ಟೀಂ ಕಾಂಗ್ರೆಸ್ ಕಳಪೆ ಪ್ರದರ್ಶನನಿಂದ ಮತ್ತೆ ಡಕ್ ಔಟ್ ಆಗಿರೋದಂತೂ ಸತ್ಯ.  ಇದನ್ನೂ ಓದಿ: ಕಾಂಗ್ರೆಸ್‌ ಹ್ಯಾಟ್ರಿಕ್‌ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್‌ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ