Tag: Arvind Kashyap

  • ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ನಿನ್ನೆ ರಾತ್ರಿಯಿಂದಲೇ ನೋಡುಗರಿಗೆ ಲಭ್ಯವಿದೆ. ಇಂದಿನಿಂದ ಥಿಯೇಟರ್ ನಲ್ಲಿ ಅಬ್ಬರಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾ ರಂಗದಲ್ಲೇ ಸಾಕಷ್ಟು ಹೆಸರು ಮಾಡಿರುವ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya)  ಕೂಡ ಸಾಮಾನ್ಯ ನೋಡುಗಳಾಗಿ ಕೂತು ಸಿನಿಮಾ ನೋಡಿ, ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ಸುದೀರ್ಘವಾಗಿ ವಿಮರ್ಶೆ (Review) ಕೂಡ ಮಾಡಿದ್ದಾರೆ.

    ಸಿನಿಮಾ ನೋಡಿದ ಮೇಲೆ ಕೆಲವು ಚಿತ್ರಗಳ ಬಗ್ಗೆ ಮಾತನಾಡುವುದಕ್ಕೆ ಪದಗಳೇ ಸಿಗುವುದಿಲ್ಲ. ಕೆಲವು ಸಿನಿಮಾಗಳು ಮಾತನಾಡಿಸುವುದಿಲ್ಲ, ಅವುಗಳು ಅಂತರಂಗವನ್ನು ಕಲಿಕೆ, ದಿವ್ಯ ಅನುಭವವನ್ನು ನಮಗೆ ದಾಟಿಸಿರುತ್ತವೆ. ಅಂತಹ ಚಿತ್ರಗಳ ಸಾಲಿಗೆ ಕಾಂತಾರ ಸೇರುತ್ತದೆ. ಸಿನಿಮಾ ನೋಡಿದ ನಂತರವೂ ಇನ್ನೂ ನಾನು ಕಾಂತರದಲ್ಲೇ ಇದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ಟೀಮ್ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಈ ಸಿನಿಮಾ ಕೇವಲ ನೋಡುವುದು ಮಾತ್ರವಲ್ಲ, ಅನುಭವಿಸಬೇಕಾದ ಚಿತ್ರ. ಈ ಚಿತ್ರ ನೋಡಿದ ನಂತರ ನಾನು ಭೂತ ಕೋಲ, ದೈವದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ (Arvind Kashyap)  ಅವರ ಕೆಲಸ ಖುಷಿ ಕೊಟ್ಟಿದೆ. ಅವರ ಸಿನಿಮಾಟೋಗ್ರಫಿಯು ನೇರವಾಗಿ ಕಾಂತಾರದೊಳಗೆ ನನ್ನನ್ನು ಕರೆದುಕೊಂಡು ಹೋಯಿತು. ನಾಯಕಿ ಸಪ್ತಮಿ ಗೌಡ (Saptami Gowda) ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.

    ರಿಷಬ್ ಶೆಟ್ಟಿ (Rishabh Shetty)ಯವರನ್ನು ಹಾಡಿಹೊಗಳಿರುವ ರಮ್ಯಾ, ಕೊನೆಯ ಹತ್ತು ನಿಮಿಷಗಳ ಕಾಲ ರಿಷಬ್ ನಟನೆ ಸೂಪರ್ ಎಂದು ಹೇಳಿದ್ದಾರೆ. ಪ್ರೇಕ್ಷಕರು ಸಿನಿಮಾ ನೋಡಿದ ನಂತರ ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತೀರಿ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಗುರುವಾರ ರಾತ್ರಿ ಸಿನಿಮಾ ನೋಡಿರುವ ರಮ್ಯಾ, ಚಿತ್ರತಂಡದ ಜೊತೆಗೆ ಫೋಟೋ ತಗೆದುಕೊಂಡೂ ಸಂಭ್ರಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]