Tag: ArunJaitley

  • ಬಜೆಟ್ 2017: ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿಗೆ ಸಿಕ್ಕಿದ್ದು ಏನು?

    ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ ಕೇಂದ್ರ ಬಜೆಟ್‍ನಲ್ಲಿ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.

    ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳು ಈ ಕೆಳಗಿನಂತಿವೆ.
    * ಹೊಸ 62 ನವೋದಯ ವಿದ್ಯಾಲಯಗಳ ಪ್ರಾರಂಭ.
    * ವಿಶ್ವ ಮಟ್ಟದ ಶಿಕ್ಷಣ ವ್ಯವಸ್ಥೆ ನೀಡಲು 10 ಸಾರ್ವಜನಿಕ ಮತ್ತು 10 ಖಾಸಗಿ ಸಂಸ್ಥೆ ಸಹಾಯ
    * 1 ಸಾವಿರ ಕೋಟಿ ರೂ. ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ ಸ್ಥಾಪನೆ
    * ಶಾಲೆಯ ಲೀವಿಂಗ್ ಸರ್ಟಿಫಿಕೇಟ್, ಕಾಲೇಜ್ ಡಿಗ್ರಿ, ಅಕಾಡೆಮಿಕ್ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಡೆಪಾಸಿಟ್

    ಕೌಶಲ್ಯ ಅಭಿವೃದ್ಧಿಗಾಗಿ
    * ಕೌಶಲ್ಯ ಅಭಿವೃದ್ಧಿಗಾಗಿ 1804 ಕೋಟಿ ರೂ. ಮೀಸಲು
    * 1500 ಬಹು ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆ
    * ಉದ್ಯಮಶೀಲತೆ ಶಿಕ್ಷಣವನ್ನು ನೀಡಲು ಆನ್‍ಲೈನ್ ಕೋರ್ಸ್‍ಗಳನ್ನು ಆರಂಭ
    * ಉದ್ಯಮ ಮತು ಅಕಾಡಮೆಯಾ ಪಾಲುದಾರಿಕೆಯಲ್ಲಿ ನ್ಯಾಷನಲ್ ಬೋರ್ಡ್ ಫಾರ್ ಸ್ಕಿಲ್ ಡೆವಲಪ್‍ಮೆಂಟ್ ಪ್ರಮಾಣ ಪತ್ರ ಸ್ಥಾಪನೆ

    ಉದ್ಯೋಗ:
    * ಹೊಸ ನೌಕರರಿಗೆ ಭಾರತ ಸರ್ಕಾರ ಆರಂಭದ ಮೂರು ವರ್ಷಗಳಲ್ಲಿ ಶೇ.8.33 ರಷ್ಟು ನೌಕರರ ಭವಿಷ್ಯ ನಿಧಿ (ಇಪಿಎಫ್‍ಓ) ನೀಡಲಾಗುತ್ತದೆ. ಈ ಯೋಜನೆಗಾಗಿ ಬಜೆಟ್‍ನಲ್ಲಿ 1000 ಕೋಟಿ ರೂ. ಮೀಸಲು
    * ರಾಷ್ಟ್ರೀಯ ವೃತ್ತಿ ಸೇವೆಯ ಅಡಿ 100 ಮಾದರಿ ಕೆರಿಯರ್ ಸೆಂಟರ್ ಸ್ಥಾಪನೆ