Tag: Arundhati

  • ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

    ಹೆಸರಾಂತ ಯುವ ಸಂಗೀತ ಸಂಯೋಜಕ ಮನೋಜ್ ವಸಿಷ್ಠ ನಿಧನ

    ಸುಗಮ ಸಂಗೀತ (Music) ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯುವ ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ (Manoj Vasistha) ಅನಾರೋಗ್ಯದ ಕಾರಣದಿಂದಾಗಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿ ಇಂದು ಇಹಲೋಕ (Passed Away) ತ್ಯಜಿಸಿದ್ದಾರೆ.

    ಕನ್ನಡ ಕಿರುತೆರೆಯ ಬಹುತೇಕ ರಿಯಾಲಿಟಿ ಶೋಗಳಲ್ಲಿ ಮನೋಜ್ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಪ್ರವೀಣ್ ಡಿ ರಾವ್ ಅವರ ಅನೇಕ ಧಾರಾವಾಹಿ ಶೀರ್ಷಿಕೆಗಳಿಗೆ ಮನೋಜ್ ವಸಿಷ್ಠ ಕೆಲಸ ಮಾಡಿದ್ದಾರೆ. ಪತ್ನಿ ಅರುಂಧತಿ (Arundhati) ಕೂಡ ಗಾಯಕಿ. ಕನ್ನಡ ಕೋಗಿಲೆ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಅರುಂಧತಿ ಮತ್ತು ಮನೋಜ್ ಒಟ್ಟಿಗೆ  ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ.

     

    ರಿಯಾಲಿಟಿ ಶೋಗಳು ಮಾತ್ರವಲ್ಲ, ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನೂ ಈ ಜೋಡಿ ನೀಡಿದೆ. ಅಗಲಿದ ಮನೋಜ್ ಅವರಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಮಧ್ಯಾಹ್ನದ ನಂತರ ಮನೋಜ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಜಯನಗರ ಹೌಸಿಂಗ್ ಸೊಸೈಟಿ ಬಳಿಯ ಬೇ ಅಪಾರ್ಟ್ಮೆಂಟ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಜೇಜಮ್ಮ : ಅನುಷ್ಕಾ ಶೆಟ್ಟಿ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬ್ಲಾಕ್ ಬಾಸ್ಟರ್ ಹಿಟ್ ಅರುಂಧತಿ ಸಿನಿಮಾ ರಿಲೀಸ್ ಆಗಿ ಜನವರಿ ೧೬ಕ್ಕೆ 13 ವರ್ಷ ಕಳೆದಿದ್ದು, ಈ ಚಿತ್ರದ ಪೋಸ್ಟ್‌ವೊಂದನ್ನು ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅರುಂಧತಿ ಸಿನಿಮಾದ ಫೋಟೋವೊಂದನ್ನು ಹಂಚಿಕೊಂಡಿದ್ದು, ಫೋಟೋದಲ್ಲಿ ಅನುಷ್ಕಾ ಕತ್ತಿ ಹಿಡಿದು ಖಡಕ್ ಲುಕ್ ನೀಡಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಅರುಧಂತಿ ಸಿನಿಮಾ ಬಿಡುಗಡೆಗೊಂಡು 13 ವರ್ಷ ಕಳೆದಿದೆ. ಜೇಜಮ್ಮ – ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಇದಾಗಿದ್ದು, ನಾನು ಬಹಳ ಪುಣ್ಯಮಾಡಿದ್ದೇನೆ. ಈ ಸಿನಿಮಾ ನೀಡಿದ್ದಕ್ಕಾಗಿ ಕೋಡಿ ರಾಮಕೃಷ್ಣ, ಶ್ಯಾಮ್ ಪ್ರಸಾದ್ ರೆಡ್ಡಿ ಗುರು ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಅದರಲ್ಲಿಯೂ ಅಭಿನಮಾನಿಗಳು ನೀಡಿದ ಬೆಂಬಲ ಹಾಗೂ ಪ್ರೀತಿಗೆ ಬಹಳ ಧನ್ಯವಾದಗಳು. ಜೊತೆಗೆ ಇದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

    2009ರಲ್ಲಿ ಹಾರರ್, ಥ್ರಿಲ್ಲರ್ ಸಿನಿಮಾ ಅರುಂಧತಿ ಟಾಲಿವುಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾಕ್ಕೆ ನಿರ್ದೇಶಕ ಕೋಡಿ ರಾಮಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದರು ಮತ್ತು ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಬ್ಯಾನರ್ ಅಡಿ ಚಿತ್ರ ಸೊಗಸಾಗಿ ಮೂಡಿಬಂದಿತ್ತು. ಸೋನು ಸೂದ್, ದೀಪಕ್, ಸಯಾಜಿ ಶಿಂಧೆ, ಮನೋರಮಾ ಮತ್ತು ಕೈಕಲಾ ಸತ್ಯನಾರಾಯಣ ಸೇರಿದಂತೆ ಹಲವಾರು ಕಲಾವಿದರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾಕ್ಕೆ ಕೋಟಿ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಕೆ.ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿತ್ತು. ಇದನ್ನೂ ಓದಿ: ಪಂಡಿತ್ ಬಿರ್ಜೂ ಮಹಾರಾಜ್ ನನ್ನ ಗುರುಗಳು ಮಾತ್ರವಲ್ಲ, ಸ್ನೇಹಿತರು ಹೌದು: ಮಾಧುರಿ ದೀಕ್ಷಿತ್

    ಅನುಷ್ಕಾ ಶೆಟ್ಟಿ ಅದ್ಭುತವಾಗಿ ಅಭಿನಯಿಸಿರುವ ಅರುಂಧತಿ ಸಿನಿಮಾಕ್ಕೆ ಎರಡು ಫಿಲ್ಮ್‍ಫೇರ್ ಪ್ರಶಸ್ತಿಗಳು ಲಭಿಸಿದ್ದು, ಎಲ್ಲೆಡೆ ಪ್ರಶಂಸೆ ಗಿಟ್ಟಿಸಿಕೊಂಡಿತ್ತು. 2014ರಲ್ಲಿ ಅರುಂಧತಿ ಚಿತ್ರವನ್ನು ಬಂಗಾಳಿ ಭಾಷೆಯಲ್ಲಿ ರೀಮೇಕ್ ಸಹ ಮಾಡಲಾಗಿತ್ತು.