Tag: Arunachal Pradesh

  • ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ; ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್‌ ಸಿಂಗ್‌

    ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ; ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್‌ ಸಿಂಗ್‌

    ನವದೆಹಲಿ: ಅರುಣಾಚಲ ಪ್ರದೇಶದಲ್ಲಿ (Arunachal Pradesh) ಭಾರತ-ಚೀನಾ ಸೈನಿಕರ (China and India Soldiers) ಘರ್ಷಣೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ (Lok Sabha) ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಸ್ಪಷ್ಟನೆ ಕೊಟ್ಟಿದ್ದಾರೆ. ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ. ನಮ್ಮ ಸೈನಿಕರ ಧೈರ್ಯಕ್ಕೆ ಸಲಾಂ ಹೇಳುತ್ತೇನೆ ಎಂದಿದ್ದಾರೆ.

    ಸಂಘರ್ಷದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಯಾರಿಗೂ ತೀವ್ರ ಗಾಯಗಳೂ ಆಗಿಲ್ಲ. ಚೀನಾ ಸೈನಿಕರು ವಾಪಸ್ ತಮ್ಮ ನೆಲೆಗೆ ತೆರಳಿದ್ದಾರೆ. ಶಾಂತಿ ಕಾಪಾಡಲು ಚೀನಾ ಸೇನಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುತ್ತಿದೆ. ಭಾರತ ಎಲ್ಲ ದಾಳಿಗಳನ್ನು ತಡೆಯುವ ಶಕ್ತಿ ಹೊಂದಿದೆ. ಭಾರತ ಶೌರ್ಯ ಕ್ಷಮತೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಲೋಕಸಭೆಯಲ್ಲಿ ರಾಜನಾಥ್‌ ಸಿಂಗ್‌ ಉತ್ತರಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಭಾರತ – ಚೀನಾ ಸೈನಿಕರ ಸಂಘರ್ಷ ; ರಾಜನಾಥ್ ಸಿಂಗ್ ನಿವಾಸದಲ್ಲಿ ಸಭೆ

    ಈ ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರು ಗಾಯಗೊಂಡಿದ್ದಾರೆ. ನಾನು ಈ ಸದನಕ್ಕೆ ಹೇಳಲು ಬಯಸುತ್ತೇನೆ. ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಮಧ್ಯಪ್ರವೇಶದಿಂದ, ಪಿಎಲ್‌ಎ ಸೈನಿಕರು ತಮ್ಮ ಸ್ವಂತ ಸ್ಥಳಕ್ಕೆ ಹಿಮ್ಮೆಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಆದರೆ ರಾಜನಾಥ್‌ ಸಿಂಗ್‌ ಅವರ ಉತ್ತರಕ್ಕೆ ವಿಪಕ್ಷಗಳು ತೃಪ್ತರಾಗಲಿಲ್ಲ. ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷಗಳು ಆಗ್ರಹಿಸಿದವು. ಆದರೆ ಸ್ಪೀಕರ್‌ ಓಂ ಬಿರ್ಲಾ ಅವರು ಚರ್ಚೆಗೆ ಅವಕಾಶ ನೀಡಲಿಲ್ಲ. ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ

    Live Tv
    [brid partner=56869869 player=32851 video=960834 autoplay=true]

  • ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ

    ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ

    ನವದೆಹಲಿ: ಗಲ್ವಾನ್‌ನಲ್ಲಿ ಭಾರತೀಯ ಯೋಧರಿಂದ(Indian Army) ಪೆಟ್ಟು ತಿಂದಿದ್ದ ಚೀನಾ(China) ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ. ಅರುಣಾಚಲ ಪ್ರದೇಶದ(Arunachal Pradesh) ಗಡಿ ವಾಸ್ತವ ರೇಖೆ(LAC) ಬಳಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಬಡಿದಾಟ ನಡೆದಿದೆ.

    ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9ರ‌ ಬೆಳಗ್ಗೆ ಗಡಿ ಕಾಯುತ್ತಿದ್ದ ಭಾರತ ಸೈನಿಕರನ್ನು ಚೀನಿ ಯೋಧರು ಕೆಣಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ತಿರುಗೇಟು ನೀಡಿದ್ದು, ಎರಡು ಕಡೆ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಎರಡು ಕಡೆಯಲ್ಲೂ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

    ಸಂಘರ್ಷಕ್ಕೆಂದು 300 ಸೈನಿಕರೊಂದಿಗೆ ಚೀನಾ ಪಡೆ ತಯಾರಾಗಿ ಬಂದಿತ್ತು. ದಿಢೀರ್ ದಾಳಿಯಿಂದ ಕ್ಷಣ ಕಾಲ ಭಾರತೀಯ ಸೇನೆ ತಬ್ಬಿಬ್ಬಾದರೂ ತಕ್ಷಣವೇ ಚೇತರಿಸಿಕೊಂಡು ದಿಟ್ಟ ಪ್ರತ್ಯುತ್ತರ ನೀಡಿತು. ಪರಸ್ಪರ ಕಲ್ಲು ತೂರಾಟಗಳು ನಡೆದಿವೆ.

    ಭಾರತೀಯರ ಯೋಧರ ಶೌರ್ಯಕ್ಕೆ ಬೆಚ್ಚಿಬಿದ್ದ ಚೀನಾಸೇನೆ, ಸಂಘಷದಿಂದ ಹಿಂದಡಿಯಿಟ್ಟಿದೆ. ಕೊನೆಗೆ ಉಭಯ ಸೇನೆಗಳು ಸಂಘರ್ಷ ಸ್ಥಳವನ್ನು ತೊರೆದಿವೆ. ಗಾಯಗೊಂಡವರ ಪೈಕಿ ಭಾರತೀಯ ಯೋಧರಿಗಿಂತ ಚೀನಾ ಯೋಧರೇ ಜಾಸ್ತಿ ಎಂದು ತಿಳಿದುಬಂದಿದೆ. ಭಾರತ ಸೇನೆಯ ಗಾಯಾಳು ಯೋಧರನ್ನು ಗುವಾಹಟಿಯ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಪ್ರದೇಶದಲ್ಲಿ ಭಾರತೀಯ ಯೋಧರು ಚೀನಾ ಸೈನಿಕರನ್ನು ತಡೆದಿದ್ದರು. ಸುಮಾರು 200 ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರನ್ನು ತಡೆದ ಭಾರತ ಹಿಂದಕ್ಕೆ ಕಳುಹಿಸಿತ್ತು. ಗಲ್ವಾನ್‌ನಲ್ಲಿ(Galwan Clash )ನಡೆದ ಘರ್ಷಣೆಯ ಎಲ್‌ಎಸಿ ಬಳಿ ದೊಡ್ಡ ಮಟ್ಟದ ಘರ್ಷಣೆ ನಡೆದಿರಲಿಲ್ಲ. ಈಗ ಮತ್ತೆ ಚೀನಾ ತನ್ನ ಕಿರಿಕ್‌ ಬುದ್ಧಿಯನ್ನು ಪ್ರದರ್ಶಿಸಿದೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು. ನಿಜವಾಗಿ ಅಂದು ಏನಾಗಿತ್ತು?

    ಗಲ್ವಾನ್‌ನಲ್ಲಿ ಏನಾಗಿತ್ತು?
    ಭಾರತೀಯ ಸೈನಿಕರು 2020 ಜೂನ್ 15ರ ರಾತ್ರಿ ಗಲ್ವಾನ್ ಕಣಿವೆಯ ಎಲ್‌ಎಸಿ ಜಾಗಕ್ಕೆ ತೆರಳಿ ಚೀನಾ ಅಕ್ರಮವಾಗಿ ನಿರ್ಮಿಸಿದ್ದ ಟೆಂಟ್‌ ಕಿತ್ತು ಎಸೆದಿದ್ದರು. ಈ ವೇಳೆ ಚೀನಾದ ಕರ್ನಲ್ ಕಿ ಫಾಬಾವೊ ಮತ್ತು 150 ಸೈನಿಕರು ಭಾರತೀಯ ಸೈನಿಕರೊಂದಿಗೆ ಸಮಸ್ಯೆಯನ್ನು ಚರ್ಚಿಸುವ ಬದಲು ಘರ್ಷಣೆಗೆ ಇಳಿದಿದ್ದರು.

    ಭಾರತೀಯ ಸೇನೆಯೂ ಇದಕ್ಕೆ ಪ್ರತಿದಾಳಿ ನಡೆಸಿತ್ತು. ಭಾರತದ ಸೇನೆಯ ಅನಿರೀಕ್ಷಿತ ದಾಳಿಯಿಂದ ಪಾರಾಗಲು ಗಲ್ವಾನ್ ನದಿಯನ್ನು ರಾತ್ರಿ ದಾಟುವ ವೇಳೆ ಕನಿಷ್ಠ 38 ಚೀನಿ ಸೈನಿಕರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಚೀನಾ ಇಲ್ಲಿಯವರೆಗೂ ಎಷ್ಟು ತನ್ನ ಸೈನಿಕರು ಸಾವನ್ನಪ್ಪಿದ್ದಾರೆ ಎಂಬುದನ್ನು ಅಧಿಕೃತವಾಗಿ ತಿಳಿಸಿಲ್ಲ.

    ಲಡಾಖ್‌ ಗಡಿಯಲ್ಲಿ ಜೂನ್‌ 15 ರಂದು ನಡೆದ ಗರ್ಷಣೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಹೇಳಿತ್ತು. ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

  • 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

    25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ತಮಿಳುನಾಡು ಕ್ರಿಕೆಟಿಗ ಘಟಾನುಘಟಿಗಳ ದಾಖಲೆಗಳನ್ನ ಉಡೀಸ್ ಮಾಡಿ ಹೊಸ ವಿಶ್ವದಾಖಲೆ ಬರೆದಿದ್ದಾರೆ.

    ವಿಜಯ್ ಹಜಾರೆ ಟ್ರೋಫಿ 2022ರಲ್ಲಿ ತಮಿಳುನಾಡು ಬ್ಯಾಟ್ಸ್‌ಮ್ಯಾನ್‌ 26 ವರ್ಷದ ನಾರಾಯಣ್ ಜಗದೀಶನ್ 141 ಎಸೆತಗಳಲ್ಲಿ ಭರ್ಜರಿ 277 ರನ್ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: 3ನೇ T20 ಪಂದ್ಯದಿಂದ ವಿಲಿಯಮ್ಸನ್ ಔಟ್ – ಕಳೆದ ಪಂದ್ಯದ ಹ್ಯಾಟ್ರಿಕ್ ವೀರನಿಗೆ ನಾಯಕತ್ವದ ಪಟ್ಟ

    ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳ ಪರ ಟಾಸ್ ಸೋತು ಬ್ಯಾಟಿಂಗ್ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 506 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಆರಂಭಿಕನಾಗಿದ್ದ ಸಾಯಿ ಸುದರ್ಶನ್ 102 ಎಸೆತಗಳಲ್ಲಿ 154 ರನ್ ಸಿಡಿಸಿ ಮಿಂಚಿದರು. ಮತ್ತೊಬ್ಬ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿಕೆಟ್ ಕೀಪರ್ ಎನ್. ಜಗದೀಶನ್ ತನ್ನ ಅಮೋಘ ಫಾರ್ಮ್ ಮುಂದುವರಿಸಿ 141 ಎಸೆತಗಳಲ್ಲಿ 277 ರನ್ ಚಚ್ಚಿದರು. ಇದನ್ನೂ ಓದಿ: ಶತಕ ಸಿಡಿಸಿ ಮೆರೆದ ಸೂರ್ಯ – ಕೀವಿಸ್ ಕಿವಿ ಹಿಂಡಿದ ಭಾರತ

    196.45 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಜಗದೀಶನ್ ಇನ್ನಿಂಗ್ಸ್‌ನಲ್ಲಿ 25 ಬೌಂಡರಿ ಮತ್ತು 15 ಸಿಕ್ಸರ್ ಪೇರಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಸಾಯಿ ಸುದರ್ಶನ್ 154 ರನ್ ಗಳಿಸಿದರು. ವಿಜಯ್ ಹಜಾರೆ ಟ್ರೋಫಿ 2022ರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್‌ಮ್ಯಾನ್‌ಗಳ ಲಿಸ್ಟ್‌ನಲ್ಲಿ ಜಗದೀಶನ್ ಮೊದಲ ಸ್ಥಾನದಲ್ಲಿದ್ದಾರೆ. 5 ಇನ್ನಿಂಗ್ಸ್‌ಗಳಲ್ಲಿ 522 ರನ್ ಕಲೆಹಾಕಿರುವ ಜಗದೀಶನ್ ಒಟ್ಟಾರೆ 41 ಪಂದ್ಯಗಳಲ್ಲಿ 1,700ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ ಅನೇಕ ಅರ್ಧಶತಕಗಳು ಒಳಗೊಂಡಿವೆ. ಇದನ್ನೂ ಓದಿ: ಸಿಕ್ಸರ್‌ ವೀರ ಸೂರ್ಯ Vs ಎಬಿಡಿ – ಇಬ್ಬರಲ್ಲಿ ಯಾರು ಬೆಸ್ಟ್‌? – ಟ್ವಿಟ್ಟರ್‌ನಲ್ಲಿ ಟ್ರೆಂಡ್‌

    ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ್ದ ತಂಡಗಳ ಪೈಕಿ ಇಂಗ್ಲೆಂಡ್ 498 ರನ್ ಗಳಿಸಿ ಅಗ್ರಸ್ಥಾನದಲ್ಲಿತ್ತು. ನೆದರ್‌ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸಿತ್ತು. ಈ ದಾಖಲೆಯನ್ನು ಉಡೀಸ್ ಮಾಡಿರುವ ತಮಿಳುನಾಡು ತಂಡ 506 ರನ್‌ಗಳನ್ನು ಗಳಿಸುವ ಮೂಲಕ ಇಂಗ್ಲೆಂಡ್ ದಾಖಲೆಯನ್ನು ಮುರಿದಿದೆ. ಇದೀಗ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, 498 ರನ್ ಗಳಿಸಿದ ಇಂಗ್ಲೆಂಡ್ 2 ಮತ್ತು 4ನೇ ಸ್ಥಾನವನ್ನು ಹಂಚಿಕೊಂಡಿದೆ. ಸರ್ರೆ 3ನೇ ಸ್ಥಾನ (496) ಹಾಗೂ 5ನೇ ಸ್ಥಾನದಲ್ಲಿ ಭಾರತ-ಎ ತಂಡ (458) ಇದೆ.

    ಅಗ್ರಸ್ಥಾನಕ್ಕೇರಿದ ನಾರಾಯಣ್: 277 ರನ್ ಬಾರಿಸಿ ಹೊಸ ದಾಖಲೆ ಬರೆದಿರುವ ನಾರಾಯಣ್ ಜಗದೀಶನ್ ಏಕದಿನ ಕ್ರಿಕೆಟ್ ನಲ್ಲೂ ಅತಿಹೆಚ್ಚು ರನ್‌ಗಳಿಸಿದವರ ಪೈಕಿ ಮೊದಲಿಗರಾಗಿದ್ದಾರೆ. 268 ರನ್ ಗಳಿಸಿದ ಅಲಿಸ್ಟೇರ್ ಬ್ರೌನ್ ಹಾಗೂ 264 ರನ್ ಚಚ್ಚಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಮವಾಗಿ ಎರಡು ಮೂರನೇ ಸ್ಥಾನದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರುಣಾಚಲ ಪ್ರದೇಶದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

    ಅರುಣಾಚಲ ಪ್ರದೇಶದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

    ಇಟಾನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅರುಣಾಚಲ ಪ್ರದೇಶದ (Arunachal Pradesh) ಇಟಾನಗರದ ಹೊಳ್ಳಂಗಿಯಲ್ಲಿ ಶನಿವಾರ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು (Airport) ಉದ್ಘಾಟಿಸಿದ್ದಾರೆ. ಇದು ಈಶಾನ್ಯ ಪ್ರದೇಶದ 16 ನೇ ವಿಮಾನ ನಿಲ್ದಾಣವಾಗಿದೆ.

    ಹೊಸದಾಗಿ ನಿರ್ಮಾಣವಾಗಿರುವ ದೋನಿ ಪೋಲೋ ವಿಮಾನ ನಿಲ್ದಾಣ (Donyi Polo Airport) 640 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 690 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಅರುಣಾಚಲ ಪ್ರದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವಂತೆ ವಿಮಾನ ನಿಲ್ದಾಣಕ್ಕೆ ಹೆಸರಿಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ದೋನಿ ಎಂದರೆ ಸೂರ್ಯ ಮತ್ತು ಪೋಲೋ ಎಂದರೆ ಚಂದ್ರ ಎನ್ನಲಾಗಿದೆ. ಇದನ್ನೂ ಓದಿ: ಮತದಾರರ ಪಟ್ಟಿ ಕಳವು ಆರೋಪ- ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

    ವರದಿಗಳ ಪ್ರಕಾರ, ಹೊಳ್ಳಂಗಿಯಲ್ಲಿ 955 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಟರ್ಮಿನಲ್ 4,100 ಚದರ ಮೀ. ವಿಸ್ತೀರ್ಣವನ್ನು ಹೊಂದಿದೆ. ಇದು ಗಂಟೆಗೆ 200 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.

    ವಿಮಾನ ನಿಲ್ದಾಣದ ಟರ್ಮಿನಲ್ ಆಧುನಿಕ ಕಟ್ಟಡವಾಗಿದ್ದು, ಇಂಧನ ದಕ್ಷತೆ, ನವೀಕರಿಸಬಹುದಾದ ಶಕ್ತಿ ಮತ್ತು ಸಂಪನ್ಮೂಲಗಳ ಮರುಬಳಕೆಯನ್ನು ಉತ್ತೇಜಿಸುತ್ತದೆ ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್‌ಗೆ ಮಸಾಜ್, ವಿಐಪಿ ಸೌಕರ್ಯ – ವೀಡಿಯೋ ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ

    ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ನಹರ್ಲಗುನ್ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಿಂದ 700ಕ್ಕೂ ಹೆಚ್ಚು ಮಳಿಗೆಗಳು ಸುಟ್ಟು ಭಸ್ಮವಾಗಿವೆ.

    ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ (Fire) ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಅಪಾರ್ಟ್‍ಮೆಂಟ್ ಕಿಟಕಿಗಳಿಗೆ ರಾಕೆಟ್ ಬಿಟ್ಟ ಕಿಡಿಗೇಡಿ – ವೀಡಿಯೋ ವೈರಲ್

    ಮೂಲಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡ ಎರಡು ಗಂಟೆಗಳವರೆಗೆ ಕೇವಲ 2 ಮಳಿಗೆಗಳಿಗೆ ಮಾತ್ರ ಆವರಿಸಿತ್ತು. ಆದರೆ ಅಗ್ನಿಶಾಮಕ ದಳ (Fire Department) ಬೆಂಕಿ ನಿಯಂತ್ರಿಸುವಲ್ಲಿ ವಿಫಲವಾದ್ದರಿಂದ ಗಾಢವಾಗಿ ವ್ಯಾಪಿಸಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

    ಇಟಾನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಶುಕ್ರವಾರ ಅರುಣಾಚಲ ಪ್ರದೇಶದ (Arunachal Pradesh) ಅಪ್ಪರ್ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್ ಗ್ರಾಮದಲ್ಲಿ ಪತನಗೊಂಡಿದೆ (Helicopter Crash). ಅಪಘಾತ ನಡೆದಿರುವ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ಸೇನೆ ತಿಳಿಸಿದೆ.

    ಇಂದು ಪತನವಾಗಿರುವ ಹೆಲಿಕಾಪ್ಟರ್ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ತಯಾರಿಸಿದೆ. ರುದ್ರ ಎಂದು ಕರೆಯಲಾಗುವ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ಮಿಗ್ಗಿಂಗ್ ಗ್ರಾಮದಲ್ಲಿ ಪತನವಾಗಿದೆ. ಇದನ್ನೂ ಓದಿ: ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್

    ವರದಿಗಳ ಪ್ರಕಾರ ಘಟನೆ ನಡೆದಿರುವ ಸ್ಥಳದಲ್ಲಿ ಅನುಕೂಲಕರ ರಸ್ತೆ ಸಂಪರ್ಕ ಇಲ್ಲ ಎನ್ನಲಾಗಿದೆ. ಇದೀಗ ಶೋಧ ನಡೆಸಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ

    Live Tv
    [brid partner=56869869 player=32851 video=960834 autoplay=true]

  • ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    ಅರುಣಾಚಲ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಥುಪ್ಟೆನ್ ಟೆಂಪಾ ನಿಧನ

    ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‍ನ (Tawang) ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಥುಪ್ಟೆನ್ ಟೆಂಪಾ(63) (Thupten Tempa) ಅವರು ಇಟಾನಗರದ (Itanagar) ರಾಮಕೃಷ್ಣ ಮಿಷನ್ ಆಸ್ಪತ್ರೆಯಲ್ಲಿ (Ramakrishna Mission Hospital) ನಿಧನರಾಗಿದ್ದಾರೆ.

    ಥುಪ್ಟೆನ್ ಟೆಂಪಾ ಅವರ ನಿಧನಕ್ಕೆ ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿ ಪ್ರೇಮಾ ಖಂಡು (Prema Khandu) ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅರುಣಾಚಲ ಪ್ರದೇಶದ ಹಿರಿಯ ನಾಯಕ ಥುಪ್ಟೆನ್ ಟೆಂಪಾ ಅವರ ನಿಧನದಿಂದ ದುಃಖವಾಗಿದೆ. ಭಗವಾನ್ ಬುದ್ಧ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಮಣಿ ಪದ್ಮೇ ಹಮ್ ಎಂದು ಥುಪ್ಟೆನ್ ಟೆಂಪಾ ಅವರ ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಥುಪ್ಟೆನ್ ಟೆಂಪಾ ಅವರಿಗೆ ಗುರುವಾರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಶುಕ್ರವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಡಿಮೆ ರಕ್ತದೊತ್ತಡ ಹಿನ್ನೆಲೆ ಥುಪ್ಟೆನ್ ಟೆಂಪಾ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ದಿನಗಳ ಅಂತರದಲ್ಲಿ ಎಮ್ಮೆ ಬಳಿಕ ಹಸುವಿಗೆ ಗುದ್ದಿದ ವಂದೇ ಭಾರತ್ ಎಕ್ಸ್‌ಪ್ರೆಸ್

    ರಾಜಕಾರಣಕ್ಕೆ ಸೇರುವ ಮುನ್ನ ಥುಪ್ಟೆನ್ ಟೆಂಪಾ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಹೊಸ ದೆಹಲಿಯ ಜೆಎನ್‍ಯುವಿನಲ್ಲಿ ಇಂಟರ್ ನ್ಯಾಷನಲ್ ರಿಲೇಶನ್ಸ್‌ನಲ್ಲಿ ಎಂಎ ಪದವಿ ಮತ್ತು ರಾಜತಾಂತ್ರಿಕತೆಯಲ್ಲಿ ಎಂಫಿಲ್ ಪಡೆದರು. 2019ರಲ್ಲಿ ಟೆಂಪಾ 2-ತವಾಂಗ್ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಬಿಜೆಪಿಯ ತ್ಸೆರಿಂಗ್ ತಾಶಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಬೆಂಕಿ ಹೊತ್ತಿ 11 ಸಾವು, 38 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಸೇನೆಯ ಚೀತಾ ಹೆಲಿಕಾಪ್ಟರ್ ಪತನ- ಪೈಲಟ್ ಹುತಾತ್ಮ

    ಸೇನೆಯ ಚೀತಾ ಹೆಲಿಕಾಪ್ಟರ್ ಪತನ- ಪೈಲಟ್ ಹುತಾತ್ಮ

    ಇಟಾನಗರ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ (Cheetah Helicopter) ಪತನಗೊಂಡು ಪೈಲಟ್ (Pilot) ಹುತಾತ್ಮರಾಗಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ (Arunachal Pradesh) ನಡೆದಿದೆ.

    ತವಾಂಗ್ ಬಳಿಯ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಸೇನಾ ವಾಯುಯಾನ ಚೀತಾ ಹೆಲಿಕಾಪ್ಟರ್ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪತನಗೊಂಡಿದೆ. ಈ ವೇಳೆ ಓರ್ವ ಪೈಲಟ್ ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಚೀತಾ ಹೆಲಿಕಾಪ್ಟರ್ ಇಬ್ಬರು ಪೈಲಟ್‍ಗಳೊಂದಿಗೆ ಪ್ರತಿದಿನದಂತೆ ಸಂಚರಿಸುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

    ಘಟನೆ ನಡೆದ ತಕ್ಷಣ ಅವರಿಬ್ಬರನ್ನೂ ಹತ್ತಿರದ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಲೆಫ್ಟಿನೆಂಟ್ ಕರ್ನಲ್ ಸೌರಭ್ ಯಾದವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನೊರ್ವ ಸಹ ಪೈಲಟ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ:

    ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೇನೆಯು ತಿಳಿಸಿದೆ. ಇದನ್ನೂ ಓದಿ: ಪುಟಿನ್ ಜೊತೆ ಯಾವುದೇ ಮಾತುಕತೆ ನಡೆಸಲ್ಲ – ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ

    Live Tv
    [brid partner=56869869 player=32851 video=960834 autoplay=true]

  • ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ

    ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ

    ಇಟಾನಗರ: ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾವನ್ನು ಸಂಪರ್ಕಿಸುವ ಸ್ಟ್ರಾಟೆಜಿಕ್ ಸೇತುವೆಯು ಪ್ರವಾಹದಿಂದಾಗಿ ಕೊಚ್ಚಿಹೋದ ಘಟನೆ ನಡೆದಿದೆ.

    ಕೊರೊರು ಗ್ರಾಮದ ಬಳಿ ಓಯಾಂಗ್ ನದಿಯ ಮೇಲೆ ಇರುವ ಸೇತುವೆಯು ಜಿಲ್ಲಾ ಕೇಂದ್ರವಾದ ಕೊಲೊರಿಂಗ್ ಅನ್ನು ಡಾಮಿನ್‍ನೊಂದಿಗೆ ಸಂಪರ್ಕಿಸುತ್ತಿತ್ತು. ಇದು ಭಾರತ-ಚೀನಾ ಗಡಿಯಲ್ಲಿ ಪ್ರಮುಖ ಕೊಂಡಿಯಾಗಿದೆ.

    ಬಿಆರ್‌ಓದ ಪ್ರಾಜೆಕ್ಟ್ ಅರುಣಾಂಕ್ ಮುಖ್ಯ ಇಂಜಿನಿಯರ್ ಬ್ರಿಗ್ ಅನಿರುದ್ಧ್ ಎಸ್. ಕನ್ವರ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರವಾಹದಿಂದಾಗಿ ಕೊಲೊರಿಯಾಂಗ್-ಹುರಿ ರಸ್ತೆಯಲ್ಲಿನ ಸೇತುವೆಯು ಲೀಯಿಂದ ಸುಮಾರು ಒಂದು ಕಿ.ಮೀವರೆಗೆ ಕೊಚ್ಚಿಹೋಗಿದೆ. ಇದರ ಪರಿಣಾಮ ಎಷ್ಟಿತ್ತೆಂದರೆ ಸೇತುವೆಯ ಫಲಕವು 100 ಮೀ. ಕೆಳಗೆ ಕಾಣುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    ಪ್ರಾಜೆಕ್ಟ್ ಅರುಣಾಂಕ್ ಅಡಿಯಲ್ಲಿ 756 ಬಿಆರ್‌ಟಿಎಫ್‍ನ 119 ರಸ್ತೆ ನಿರ್ಮಾಣ ಕಂಪನಿ (ಆರ್‌ಸಿಸಿ)ಯು ಈ ಸೇತುವೆಯನ್ನು ಪುನಃಸ್ಥಾಪಿಸಲು ಯೋಚಿಸಿದೆ. ಇದರ ಆದ್ಯತೆಯ ಮೇಲೆ ಕಾರ್ಯವನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಯಕರ್ತರೊಂದಿಗೆ ನಾಗಿಣಿ ಡ್ಯಾನ್ಸ್ ಮಾಡಿದ ಸಚಿವ ಎಂಟಿಬಿ

    Live Tv
    [brid partner=56869869 player=32851 video=960834 autoplay=true]

  • 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    ಇಟಾನಗರ: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಇಬ್ಬರು ಭಾರತೀಯ ಸೇನಾ ಸಿಬ್ಬಂದಿಯ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ಮೇ 28 ರಂದು ನಾಪತ್ತೆಯಾಗಿದ್ದರು. ಉತ್ತರಾಖಂಡದ 7ನೇ ಗರ್ವಾಲ್ ರೈಫಲ್ಸ್ ಸೈನಿಕರಾದ ಇವರನ್ನು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮುಂಚೂಣಿ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

    2 Soldiers Missing For Two Weeks In Arunachal, Search Ops On, Says Army

    ನಡೆದಿದ್ದೇನು?
    ನಾಯಕ್ ಪ್ರಕಾಶ್ ಸಿಂಗ್ ಮತ್ತು ಲ್ಯಾನ್ಸ್ ನಾಯಕ್ ಹರೇಂದರ್ ಸಿಂಗ್ ಅವರು ತಮ್ಮ ಪೋಸ್ಟ್‌ಗೆ ಸಮೀಪದಲ್ಲಿ ವೇಗವಾಗಿ ಹರಿಯುತ್ತಿದ್ದ ನದಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ವ್ಯಾಪಕವಾದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಎಷ್ಟೇ ಹುಡುಕಿದರು ಸೈನಿಕರನ್ನು ಪತ್ತೆ ಮಾಡುವಲ್ಲಿ ಯಾವುದೇ ಯಶಸ್ಸು ಕಂಡುಬಂದಿಲ್ಲ. ಕಳೆದ ಎರಡು ವಾರಗಳಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ED ನಿಯಂತ್ರಣವನ್ನ ನಮಗೆ ಕೊಟ್ರೆ ಫಡ್ನವಿಸ್ ಕೂಡ ನಮ್ಮ ಸೇನೆಗೆ ಮತ ಹಾಕ್ತಾರೆ: ಸಂಜಯ್ 

    ಜೂನ್ 11(ಶನಿವಾರ) ರಂದು, ಹರೇಂದ್ರ ನೇಗಿ ಅವರ ಪತ್ನಿ ಪೂನಂ ನೇಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಬ್ಬರೂ ಸೈನಿಕರು ನದಿಯ ಬಳಿ ಹೋಗಿರುವುದು ಯಾರಿಗೂ ತಿಳಿದಿಲ್ಲ. ಇದನ್ನು ನಂಬಲು ನನಗೆ ಕಷ್ಟವಾಗುತ್ತದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.