Tag: Arun Singh

  • ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ: ಅರುಣ್ ಸಿಂಗ್

    ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ: ಅರುಣ್ ಸಿಂಗ್

    ಹುಬ್ಬಳ್ಳಿ : ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ನಮ್ಮ ಪಕ್ಷದ ನಾಯಕರಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಬಿಜೆಪಿ (BJP) ಕೋರ್ ಕಮಿಟಿಯಲ್ಲಿ ಇಲ್ಲ. ಅವರ ಹೇಳಿಕೆ ಪಕ್ಷದ ಹೇಳಿಕೆಯಲ್ಲ. ಅಲ್ಪಸಂಖ್ಯಾತ ಮೀಸಲಾತಿ ಬಗ್ಗೆ ಬೆಲ್ಲದ್ ಮತ್ತು ಯತ್ನಾಳ್ ಹೇಳಿದ್ದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ನಾವು ಯತ್ನಾಳ್‍ಗೆ ನೋಟಿಸ್ ಜಾರಿ ಮಾಡಿ ಉತ್ತರ ಪಡೆದಿದ್ದೇವೆ. ಯತ್ನಾಳ್ ಸ್ವಭಾವವೇ ಹಾಗಿದೆ ಏನೂ ಮಾಡಲು ಆಗಲ್ಲ. ನೋಡೋಣ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಶೆಟ್ಟರ್ ಅವರನ್ನು ಪಕ್ಷ ಸೈಡ್‍ಲೈನ್ ಮಾಡಿಲ್ಲ. ಅವರು ಕೋರ್ ಕಮಿಟಿಯಲ್ಲಿದ್ದಾರೆ ಅವರಿಗೂ ಟಿಕೆಟ್ ಸಿಗಲಿದೆ ಎಂದು ಭರವಸೆ ನೀಡಿದರು.

    ರಾಜ್ಯದಲ್ಲಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. 150 ಸೀಟುಗಳೊಂದಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ. ದೇಶದ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಕಚ್ಚಾಡುವ ಸರ್ಕಾರ ನಡೆಸುತ್ತಿದೆ. ದೇಶದಲ್ಲಿ ಬಿಜೆಪಿಯಿಂದ ಪುನಃ ಸರ್ಕಾರ ರಚಿಸುವ ಟ್ರೆಂಡ್ ನಡೆಯುತ್ತಿದೆ. ಬಿಜೆಪಿ ಎಸ್‍ಸಿ, ಎಸ್‍ಟಿ ಕಲ್ಯಾಣಕ್ಕೆ ಸಮರ್ಪಿತವಾಗಿ ಕೆಲಸ ಮಾಡುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡುವಂತಹದ್ದು ಕಾಂಗ್ರೆಸ್‍ನವರು ಏನು ಮಾಡಿದ್ದಾರೆ? ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಏನು ಮಾಡಿದ್ದಾರೆ? ಇದಕ್ಕೆಲ್ಲಾ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಉತ್ತರ ಕೊಡಲಿ ಎಂದ ಸವಾಲು ಹಾಕಿದ ಅವರು, ಕಾಂಗ್ರೆಸ್ ಪಕ್ಷ ಎಸ್‍ಸಿ, ಎಸ್‍ಟಿ ಸಮಾಜವನ್ನು ಭ್ರಮೆಯಲ್ಲಿಟ್ಟಿದೆ. ಕಾಂಗ್ರೆಸ್‍ನವರು (Congress) ಎಸ್‍ಸಿ, ಎಸ್‍ಟಿ ಸಮುದಾಯದ ಅಭಿವೃದ್ಧಿಗೆ ಯಾವುದೇ ಕೆಲಸವನ್ನು ಮಾಡಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರ ಎಸ್‍ಸಿ, ಎಸ್‍ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿ ನೈಜ ಕಾಳಜಿ ಪ್ರದರ್ಶಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆಂಧ್ರ ಸಚಿವೆ ರೋಜಾ ಕಾರಿನ ಮೇಲೆ ಪವನ್ ಕಲ್ಯಾಣ್ ಬೆಂಬಲಿಗರಿಂದ ದಾಳಿ

    ರಾಹುಲ್‌ ಗಾಂಧಿ ನೇತೃತ್ವದ್ದು ಭಾರತ್ ಜೋಡೋ ಯಾತ್ರೆ ಅಲ್ಲ. ಇದು ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆಯಾಗಿದೆ. ಕಾಂಗ್ರೆಸ್‍ನ ಪಾದಯಾತ್ರೆ ಕೇವಲ ಡಿಕೆಶಿ ಮತ್ತು ಸಿದ್ದರಾಮಯ್ಯನವರನ್ನು ಜೋಡಿಸುವ ಯಾತ್ರೆಯಾಗಿದೆ. ರಾಹುಲ್ ಗಾಂಧಿ ಇಬ್ಬರನ್ನೂ ಬಲವಂತವಾಗಿ ಕೂಡಿಸಲು ಹೊರಟಿದ್ದಾರೆ. ಆದರೆ ಡಿಕೆಶಿ ಮತ್ತು ಸಿದ್ದರಾಮಯ್ಯ ಪರಸ್ಪರ ಐದು ನಿಮಿಷ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲ್ಲ. ಪರಸ್ಪರ ಕಚ್ಚಾಟ ಮಾಡಿಕೊಂಡಿದ್ದಾರೆ. ಇದರಿಂದಾಗಿ ಭಾರತ್ ಜೋಡೋ ಯಾತ್ರೆ ಪ್ಲಾಪ್ ಆಗಿದೆ. ಬದಲಾಗಿ ಭಾರತ್ ಜೋಡೋ ದಿಂದ ರಾಹುಲ್ ಗಾಂಧಿಗೆ ಮುಂಜಾನೆ ಸಂಜೆ ವಾಕಿಂಗ್ ಆಗುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    Live Tv
    [brid partner=56869869 player=32851 video=960834 autoplay=true]

  • ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ: ಅರುಣ್‌ ಸಿಂಗ್

    ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ: ಅರುಣ್‌ ಸಿಂಗ್

    ಹಾವೇರಿ: ರಾಹುಲ್ ಗಾಂಧಿಯವರಿಗೆ (Rahul Gandhi) ಯಾವುದೇ ದೂರದೃಷ್ಟಿ ಇಲ್ಲ. ಅವರು, ನೋಡಿಕೊಂಡು ಓದೋದನ್ನು ಬಿಟ್ಟು ಸ್ವಂತವಾಗಿ ಮಾತನಾಡಲಿ ಎಂದು ಬಿಜೆಪಿ (BJP) ಉಸ್ತುವಾರಿ ಅರುಣ್‌ ಸಿಂಗ್ (Arun Singh) ತಿಳಿಸಿದರು.

    ಹಾವೇರಿ (Haveri) ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಾಸೂರು ಪಟ್ಟಣದಲ್ಲಿ ಸರ್ವಜ್ಞನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ರಾಹುಲ್ ಗಾಂಧಿ ಬರೆದುಕೊಟ್ಟ ಭಾಷಣವನ್ನು ಓದುತ್ತಾರೆ. ರಾಹುಲ್ ಗಾಂಧಿ ಮೂವತ್ತು ದಿನಗಳ ಕಾಲ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿಯನ್ನು ನಾಯಕ ಎಂದು ಜನರು ಒಪ್ಪಿಕೊಳ್ಳುವುದಿಲ್ಲ ಎಂದು ಟೀಕಿಸಿದರು.

    ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಮ್ಮ ಸರಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ರಾಜ್ಯದಲ್ಲಿ 2013ರ ಕಾಂಗ್ರೆಸ್ ಇತಿಹಾಸ ಮರುಕಳಿಸಲಿದೆ ಅನ್ನೋದು ಸುಳ್ಳು. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹೆಸರಿಲ್ಲದಂತಾಗಿದೆ. 2023ರ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಇದನ್ನೂ ಓದಿ: ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು – ಜೋ ಬೈಡೆನ್‌

    ಹಳ್ಳಿ ಹಳ್ಳಿಗಳಲ್ಲಿ ಸಮಾಜ ಜಾಗೃತಿ, ಸಮಾನತೆಯ ಸಂದೇಶ ಸಾರಿದ ಸರ್ವಜ್ಞನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದು, ನನ್ನ ಸೌಭಾಗ್ಯ ಎಂದು ಇದೇ ವೇಳೆ ನುಡಿದರು. ಇದನ್ನೂ ಓದಿ: ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಮುತಾಲಿಕ್ ಕರೆ

    Live Tv
    [brid partner=56869869 player=32851 video=960834 autoplay=true]

  • ಉಮೇಶ್ ಕತ್ತಿ ರಾಜಕೀಯ ಜೀವನ ಪುಸ್ತಕವಾಗಬೇಕು: ಅರುಣ್ ಸಿಂಗ್

    ಉಮೇಶ್ ಕತ್ತಿ ರಾಜಕೀಯ ಜೀವನ ಪುಸ್ತಕವಾಗಬೇಕು: ಅರುಣ್ ಸಿಂಗ್

    ಚಿಕ್ಕೋಡಿ: ಉಮೇಶ್ ಕತ್ತಿ ಅವರ ರಾಜಕೀಯ ಜೀವನ ಪುಸ್ತಕವಾಗಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

    ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ದಿವಂಗತ ಉಮೇಶ್ ಕತ್ತಿಯವರ ನಿವಾಸಕ್ಕೆ ಭೇಟಿ ನೀಡಿದ ಅವರು, ಸಚಿವ ಉಮೇಶ್ ಕತ್ತಿ ನನ್ನ ವೈಯಕ್ತಿಕ ಮಿತ್ರ. ಬೆಳಗಾವಿ, ಬೆಂಗಳೂರು(Bengaluru), ದೆಹಲಿಯಲ್ಲಿ ಅನೇಕ ಸಲ ಕುಳಿತು ಮಾತನಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷ ಕಟ್ಟುವ ಬಗ್ಗೆ ಅನೇಕ ಸಲಹೆ ನೀಡುತ್ತಿದ್ದರು. ಉಮೇಶ್ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಅವರ ಅಗಲಿಕೆಯಿಂದಾಗಿ ಪಕ್ಷ ಹಾಗೂ ರಾಜ್ಯಕ್ಕೆ ನಷ್ಟ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    40 ವರ್ಷಗಳ ಕಾಲದಿಂದ ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಈ 40 ವರ್ಷಗಳ ರಾಜಕೀಯ ಜೀವನವು ಪುಸ್ತಕದ ರೂಪದಲ್ಲಿ ಹೊರ ಬರಬೇಕು. ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ, ಅವರ ದೂರದೃಷ್ಟಿ, ಅವರ ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ ಎಂದರು. ಇದನ್ನೂ ಓದಿ: ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

    ಬಳಿಕ ಮಾತನಾಡಿದ ಸಚಿವ ಕೆ. ಸುಧಾಕರ್(Sudhakar) ಅವರು, ಉಮೇಶ್ ಕತ್ತಿ(Umesh Katti) ಅವರ ಅಕಾಲಿಕ ನಿಧನ ನಮ್ಮೆಲ್ಲರಿಗೂ ನೋವನ್ನುಂಟು ಮಾಡಿದೆ. ಅವರದ್ದು, ನನ್ನದು ದೀರ್ಘ ಕಾಲದ ಸ್ನೇಹ ಸಂಬಂಧ. ಉಮೇಶ್ ಕತ್ತಿ ಇದ್ದಲ್ಲಿ ನಗುವಿಗೆ ಬರ ಇರಲಿಲ್ಲ. ಅವರು ಇಲ್ಲದ ನಷ್ಟವನ್ನು ಎದುರಿಸುವಂತಹ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ತಿಳಿಸಿದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ

    ಇದೇ ವೇಳೆ ಉಮೇಶ್ ಕತ್ತಿ ಭಾವಚಿತ್ರಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್(Arun Singh) ಪುಷ್ಪ ನಮನ ಸಲ್ಲಿಸಿದರು. ನಂತರ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಸಚಿವ ಡಾ. ಕೆ. ಸುಧಾಕರ್, ಮುನಿರತ್ನ, ಎಂಟಿಬಿ ನಾಗರಾಜ್, ಸಚಿವ ಭೈರತಿ ಬಸವರಾಜ್ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ

    ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ

    ಬೆಂಗಳೂರು: ರಾಜ್ಯ ಬಿಜೆಪಿ ಸಚಿವರ ಮಾತು ಹೈಕಮಾಂಡ್ ಅಂಗಳ ತಲುಪಿದೆ. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರ ಆಗಿದೆ.

    ಸರ್ಕಾರ ನಡೀತಿಲ್ಲ, ಮ್ಯಾನೇಜ್ ಮಾಡ್ತಿದ್ದೀವಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ಹಾಗೂ ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಸಚಿವ ಶ್ರೀರಾಮುಲು ಹೇಳಿಕೆಗಳಿಂದ ಡ್ಯಾಮೇಜ್ ಆಗಿದೆ. ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲೂ ಸಚಿವರ ಹೇಳಿಕೆಗಳ ಬಗ್ಗೆ ಪ್ರಸ್ತಾಪ ಆಗಿದ್ದು, ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹ ಯಾರೂ ಬಹಿರಂಗವಾಗಿ ನಕಾರಾತ್ಮಕ ಹೇಳಿಕೆ ಕೊಡದಂತೆ ತಾಕೀತು ಮಾಡಿದ್ದಾರೆ. ಈ ಸಂಬಂಧ ಹೈಕಮಾಂಡ್‍ಗೆ ವರದಿ ಕೊಡಲಿದ್ದಾರೆ. ಸಿಎಂ ಬದಲಾವಣೆ ಕುರಿತ ಮಾಜಿ ಶಾಸಕ ಸುರೇಶ್ ಗೌಡರ ಹೇಳಿಕೆಯ ಪರಿಣಾಮದ ಜತೆಗೆ ಸಚಿವರಾದ ಮಾಧುಸ್ವಾಮಿ, ಶ್ರೀರಾಮುಲು ಹೇಳಿಕೆಗಳಿಂದಾದ ಮುಜುಗರ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ ಎನ್ನಲಾಗಿದೆ.

    ಬಿಎಸ್‍ವೈಗೆ ಸ್ಥಾನಮಾನ ಕೊಟ್ಟ ಬಳಿಕ ಪಕ್ಷದ ಒಳಗಿನ & ಹೊರಗಿನ ಚಿತ್ರಣದ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪ ಮಾಡಲಾಗುತ್ತದೆ ಎನ್ನಲಾಗ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು

    ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು

    ಬೆಂಗಳೂರು: ಆಗಸ್ಟ್ 15ರ ನಂತ್ರ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಒಂದಿಷ್ಟು ಬದಲಾವಣೆ ಆಗಬಹುದು ಎಂಬ ಸುಳಿವನ್ನು ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿಗಳಿಗೆ ನೀಡಿದ್ದಾರೆ.

    ಇಂದು ನಡೆದ ಸಂಪುಟ ಸಭೆಯಲ್ಲಿ ಸಿಎಂ ಈ ಮುನ್ಸೂಚನೆ ನೀಡಿದ್ದಾರೆ. ಆದರೆ ಯಾವ ರೀತಿಯ ಬದಲಾವಣೆ ಎಂಬ ಗುಟ್ಟನ್ನು ಬೊಮ್ಮಾಯಿ ಬಿಟ್ಟುಕೊಟ್ಟಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಅವರ ನೇತೃತ್ವದಲ್ಲಿಯೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ಹೈಕಮಾಂಡ್ ಪ್ರತಿನಿಧಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

    ರಾಜ್ಯ ನಾಯಕತ್ವದ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಕೂಡ ಸ್ಪಷ್ಟಪಡಿಸಿದ್ದಾರೆ. ಇತ್ತ ಬಿಎಸ್‍ವೈ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಆದರೆ ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದೇ ಬಿಜೆಪಿ ಎಂದು ಕಾಂಗ್ರೆಸ್ ಕಾಲೆಳೆದಿದೆ. ಇದನ್ನೂ ಓದಿ: 35 ಗ್ರಾಂ ಬೆಳ್ಳಿಯಲ್ಲಿ ಮೂಡಿದ ಸಂಸತ್ ಭವನ

    ಈ ಮಧ್ಯೆ ಯಡಿಯೂರಪ್ಪ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ತಮ್ಮ ಜೊತೆ ಬಂದಿದ್ದ ಸಚಿವರಾದ ಅಶೋಕ್, ಆರಗ ಜ್ಞಾನೇಂದ್ರರನ್ನು ಹೊರಗೆ ಕಳಿಸಿ ಪ್ರತ್ಯೇಕವಾಗಿ ಇಬ್ಬರೇ ಮಾತುಕತೆ ನಡೆಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಬದಲಾವಣೆ ಇಲ್ಲ, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಅರುಣ್ ಸಿಂಗ್

    ಸಿಎಂ ಬದಲಾವಣೆ ಇಲ್ಲ, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಅರುಣ್ ಸಿಂಗ್

    ನವದೆಹಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ರೈತರ ಪರ, ದಲಿತರ ಪರ, ಯುವಕರ ಪರ ಕಾಮನ್ ಮ್ಯಾನ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

    ಮುಖ್ಯಮಂತ್ರಿ ಬದಲಾವಣೆ ವದಂತಿ ಬಗ್ಗೆ ಮಾತನಾಡಿದ ಅವರು, ಸಿಎಂ ಬದಲಿಸುವ ಪ್ರಶ್ನೆ ಇಲ್ಲ, 100% ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದೇವೆ. ಪೂರ್ಣ ಪ್ರಮಾಣದ ಬಹುಮತ ಸಿಗಲಿದ್ದು, ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.  ಇದನ್ನೂ ಓದಿ: 75th Independence Day – ನ್ಯೂಯಾರ್ಕ್‌ ನದಿ ತಟದಲ್ಲಿ ಹಾರಾಡಲಿದೆ 220 ಅಡಿ ಉದ್ದದ ತ್ರಿವರ್ಣ ಧ್ವಜ

    ಸಿಎಂ ಬದಲಾವಣೆ ಎಂದು ಕಾಂಗ್ರೆಸ್ ಗೊಂದಲ ಹುಟ್ಟು ಹಾಕುತ್ತಿದೆ. ಸಿಎಂ ಬದಲಾವಣೆ ಎನ್ನುವುದು ಕಾಂಗ್ರೆಸ್‍ನ ಅತಿದೊಡ್ಡ ಷಡ್ಯಂತ್ರ. ಸಿದ್ದರಾಮಯ್ಯ ಡಿಕೆಶಿ ನಡುವೆ ಒಡಕಿದೆ. ಅದನ್ನು ಮುಚ್ಚಿ ಹಾಕಲು ಸಿಎಂ ಬದಲಾವಣೆ ವಿಚಾರ ಹುಟ್ಟು ಹಾಕಿದ್ದಾರೆ. ಕಾಂಗ್ರೆಸ್ ನಾಯಕರೇ ಇಲ್ಲದ ಪಕ್ಷ ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಸತ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

    ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ: ಒಮರ್ ಅಬ್ದುಲ್ಲಾ

    ಶ್ರೀನಗರ: ನೂಪುರ್ ಶರ್ಮಾ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತುಕೊಂಡಿರುವುದು ಮುಸ್ಲಿಮರ ಭಾವನೆಗೆ ಧಕ್ಕೆಯುಂಟಾಗಿದೆ ಎಂದಲ್ಲ. ವಿದೇಶಿಯರನ್ನು ಓಲೈಸುವುದಕ್ಕಾಗಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿರುವುದು ವಿವಾದ ಸೃಷ್ಟಿಸಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಅದೇ ವಿಚಾರವಾಗಿ ಕೋಮು ಗಲಭೆ ಉಂಟಾಗಿತ್ತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಕಟಣೆ ಹೊರಡಿಸಿರುವ ಬಿಜೆಪಿ `ಯಾವುದೇ ವರ್ಗ ಅಥವಾ ಧರ್ಮವನ್ನು ಅವಹೇಳನ ಮಾಡುವ ಅಥವಾ ಕೀಳಾಗಿ ಕಾಣುವ ಯಾವುದೇ ಸಿದ್ಧಾಂತಗಳಿಗೆ ಬಿಜೆಪಿಯ ಕಠಿಣ ವಿರೋಧವಿದೆ’ ಎಂದು ಹೇಳಿದೆ. ಇದನ್ನೂ ಓದಿ: ಗಗನಸಖಿಯ ಸಮಾಜಮುಖಿ ಕಾಯಕ – ಗಗನದಿಂದ ಬೀಜದುಂಡೆ ಬಿತ್ತನೆ

    ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಯಾವುದೇ ಧಾರ್ಮಿಕ ವ್ಯಕ್ತಿಗಳಿಗೆ ಅವಮಾನಿಸುವುದರ ವಿರುದ್ಧ ಬಿಜೆಪಿ ದಿಢೀರನೆ ಎಚ್ಚೆತ್ತು ಬಹಿರಂಗವಾಗಿ ಖಂಡಿಸಿರುವುದರ ಹಿಂದೆ ವಿದೇಶಿಯರನ್ನು ಓಲೈಸುವ ಗುರಿಯಿದೆ. ಬಿಜೆಪಿಯ ಈ ದಿಢೀರ್ ಎಚ್ಚರವು ಭಾರತದಲ್ಲಿನ ಲಕ್ಷಾಂತರ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯುಂಟಾಗಿರುವುದರ ಕುರಿತಾಗಿ ತೆಗೆದುಕೊಂಡಿರುವ ಕ್ರಮ ಅಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

    ಬಿಜೆಪಿಯು ಯಾವುದೇ ಧರ್ಮ ಹಾಗೂ ಧಾರ್ಮಿಕ ವ್ಯಕ್ತಿಗಳಿಗೆ ಅವಮಾನ ಮಾಡುವುದನ್ನು ಖಂಡಿಸಿದೆ. ಆದರೆ ಭಾರತದ ಲಕ್ಷಾಂತರ ಮುಸ್ಲಿಮರ ಭಾವನೆಗಳನ್ನು ನೋಯಿಸಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ಕ್ಷಮೆಯಾಚಿಸುವ ರೀತಿಯ ಈ ಪ್ರಕಟಣೆಯು ವಿದೇಶಿಗರನ್ನು ಗುರಿಯಾಗಿಸಿ ಮಾಡಿರುವುದೇ ಆಗಿದೆ ಎಂದು ಹೇಳಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಪ್ರಕಟಣೆ ಹೊರಡಿಸಿದ ಕೆಲ ಸಮಯದಲ್ಲೇ ಬಿಜೆಪಿಯು ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ದೆಹಲಿ ಘಟಕದ ಮಾಧ್ಯಮ ವಿಭಾಗದ ನೇತೃತ್ವ ವಹಿಸಿದ್ದ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

  • ಚಿಕ್ಕಬಳ್ಳಾಪುರದಲ್ಲಿ ನಡೆದ ಆರೋಗ್ಯ ಮೇಳ ಜಾಗತಿಕ ದಾಖಲೆ ಬರೆದಿದೆ: ಅರುಣ್ ಸಿಂಗ್ ಶ್ಲಾಘನೆ

    ಚಿಕ್ಕಬಳ್ಳಾಪುರದಲ್ಲಿ ನಡೆದ ಆರೋಗ್ಯ ಮೇಳ ಜಾಗತಿಕ ದಾಖಲೆ ಬರೆದಿದೆ: ಅರುಣ್ ಸಿಂಗ್ ಶ್ಲಾಘನೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಡೆದ ಎರಡು ದಿನಗಳ ಆರೋಗ್ಯ ಮೇಳ ಜಾಗತಿಕ ದಾಖಲೆ ಬರೆದಿದೆ. ಪ್ರಧಾನ ಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೆಚ್ಚಿ ಶ್ಲಾಘಿಸುವಂತ ಮೇಳ ಇದಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಾರ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ  ಅರುಣ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಡಾ.ಕೆ.ಸುಧಾಕರ್ ಫೌಂಡೇಶನ್ ಸಹಯೋಗದಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿತ್ತು. ಚಿಕ್ಕಬಳ್ಳಾಪುರ ನಗರದ ಹೊರವಲಯದ ಎಸ್‍ಜೆಸಿಐಟಿ ಕಾಲೇಜ್ ಆವರಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಮೇಳದ ಎರಡನೇ ದಿನವಾದ ಇಂದು ಅರುಣ್ ಸಿಂಗ್ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ದಲಿತ ಸಿಎಂ ಆಗ್ತಾರೆ ಅಂತ ಕನಸು ಕಾಣೋನು ಹುಚ್ಚ: ಎ.ನಾರಾಯಣಸ್ವಾಮಿ

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್‍ಸಿಂಗ್, ಒಂದೇ ಸೂರಿನಡಿ ತಪಾಸಣೆ, ಚಿಕಿತ್ಸೆ, ಔಷಧ ವಿತರಣೆ ಮತ್ತು ಶಸ್ತ್ರಚಿಕಿತ್ಸೆಯಂತಹ ಸಕಲ ವೈದ್ಯಕೀಯ ಸೌಲಭ್ಯಗಳನ್ನು ಲಕ್ಷಾಂತರ ಜನರಿಗೆ ಕಲ್ಪಿಸಲಾಗಿದೆ. ಉಚಿತವಾಗಿ ಊಟ ಮತ್ತು ಸಾರಿಗೆ ಮತ್ತಿತರ ಸೌಲಭ್ಯಗಳೊಂದಿಗೆ ಆರೋಗ್ಯ ಮೇಳ ನಡೆಸುವುದು ಸುಲಭದ ಕೆಲಸವಲ್ಲ. ಇಂತಹ ಬೃಹತ್ ಮೇಳ ಈ ಹಿಂದೆ ನಡೆದಿರಲು ಸಾಧ್ಯವಿಲ್ಲ. ಯೋಜಿತವಾಗಿ ದೂರದೃಷ್ಟಿಯಿಂದ ಬಡವರು ಮತ್ತು ಮಧ್ಯಮ ವರ್ಗದ ಮುಖ್ಯವಾಗಿ ಗ್ರಾಮೀಣ ಜನರಿಗೆ ವಿವಿಧ ವೈದ್ಯಕೀಯ ಸೇವೆ ಸೌಲಭ್ಯಗಳನ್ನು ಉಚಿತವಾಗಿ ತಲುಪಿಸಲು ಆಯೋಜಿಸಿರುವ ಈ ಆರೋಗ್ಯ ಮೇಳ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಆಯುಷ್ಮಾನ್ ಭಾರತ್ ಕಾರ್ಡ್‍ಗಳ ನೋಂದಣಿಯೂ ಬಹುದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಹಿಂಭಾಗದಲ್ಲಿ ಹಿಂದೂ ದೇವಾಲಯ ಇರಬಹುದು: ಶ್ರೀಶೈಲ ಶ್ರೀ

    ಡಾ.ಕೆ.ಸುಧಾಕರ್ ಮಾತನಾಡಿ. ಚಿಕ್ಕಬಳ್ಳಾಪುರದಲ್ಲಿ ಪ್ರಾಯೋಗಿಕವಾಗಿ ಆಯೋಜಿಸಿರುವ ಎರಡು ದಿನಗಳ ಬೃಹತ್ ಆರೋಗ್ಯ ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ಜಾಗತಿಕ ಮಟ್ಟದ ದಾಖಲೆಯನ್ನು ಬರೆದಿದೆ. ಈ ಪ್ರಯೋಗವನ್ನು ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

  • ಸಚಿವ ಸಂಪುಟದಲ್ಲಿ ಬದಲಾವಣೆ ಮಾಡುವುದು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು: ಅರುಣ್ ಸಿಂಗ್

    ಸಚಿವ ಸಂಪುಟದಲ್ಲಿ ಬದಲಾವಣೆ ಮಾಡುವುದು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು: ಅರುಣ್ ಸಿಂಗ್

    ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಸಕಾಲದಲ್ಲಿ ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಪುಟ ಪುನಾರಚನೆಯು ಮುಖ್ಯಮಂತ್ರಿಯ ಪರಮಾಧಿಕಾರ ಎಂದರು. ಇದನ್ನೂ ಓದಿ : ಪೊಲೀಸರನ್ನೇ ಕಳ್ಳರೆಂದು ಭಾವಿಸಿ ಗೂಸಾ ಕೊಟ್ಟ ಗ್ರಾಮಸ್ಥರು

    BASAVARJ BOMMAI (1)

    ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯತ್ವಕ್ಕೆ ಸ್ಪರ್ಧಿಸಲು ಬಯಸುವವರ ಪಟ್ಟಿಯನ್ನು ರಾಜ್ಯ ಕೋರ್ ಕಮಿಟಿ ಮತ್ತು ರಾಜ್ಯ ಚುನಾವಣಾ ಸಮಿತಿಯು ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡುತ್ತದೆ. ಕೇಂದ್ರ ಸಂಸದೀಯ ಮಂಡಳಿಯು ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯತ್ವಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತದೆ ಎಂದು ಹೇಳಿದರು.

    ಇದೇ ವೇಖೆ ಕಾಂಗ್ರೆಸ್ ಪಕ್ಷದೊಳಗೆ ಗೊಂದಲಗಳಿವೆ. ಬಿಜೆಪಿಯಲ್ಲಿ ನಾಯಕತ್ವ ಮತ್ತಿತರ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ :  ತಿಂಗಳ ಮುತ್ತು: ರಣಬೀರ್ ಕಪೂರ್, ಆಲಿಯಾ ಭಟ್ ಕಿಸ್ಮತ್

  • ಕಾಂಗ್ರೆಸ್ ಗೊಂದಲದ, ಪಿತೂರಿಯ, ನಾಯಕನಿಲ್ಲದ ಪಕ್ಷ: ಅರುಣ್ ಸಿಂಗ್

    ಕಾಂಗ್ರೆಸ್ ಗೊಂದಲದ, ಪಿತೂರಿಯ, ನಾಯಕನಿಲ್ಲದ ಪಕ್ಷ: ಅರುಣ್ ಸಿಂಗ್

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷ ಸದಾ ಗೊಂದಲದ ಪಕ್ಷ. ಆರ್ಟಿಕಲ್ 370, ರಾಮಮಂದಿರ ವಿವಾದ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಎಲ್ಲಾ ಕಡೆ ದ್ವಂದ್ವ ನಿಲುವುಗಳ ಮೂಲಕ ಗೊಂದಲಗಳನ್ನು ಸೃಷ್ಟಿ ಮಾಡಿಕೊಂಡಿದೆ. ಚುನಾವಣೆ ಸಮಯದಲ್ಲೂ ಗೊಂದಲದಲ್ಲಿದೆ. ವ್ಯಾಕ್ಸಿನ್ ವಿಚಾರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವ್ಯಾಕ್ಸಿನ್ ಪಡೆದುಕೊಂಡರೂ ಅದನ್ನು ಮೋದಿ ವ್ಯಾಕ್ಸಿನ್ ಎಂದು ಟೀಕೆ ಮಾಡಿದರು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಟಾಂಗ್ ನೀಡಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ವಿಸ್ಡಮ್ ಶಾಲೆಯಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಸಿಂಗ್, ಕಾಂಗ್ರೆಸ್ ಪಕ್ಷ ಪಿತೂರಿ ಪಕ್ಷ. ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಪಿತೂರಿ ಮಾಡಲು ಪ್ರಯತ್ನಿಸುತ್ತಾರೆ. ಅವರ ಬಳಿ ಅಭಿವೃದ್ಧಿ ಕೆಲಸ ಮಾಡಿರುವ ಆಧಾರಗಳಿಲ್ಲ. ಜನರ ಪರವಾಗಿ ಕೆಲಸ ಮಾಡದೇ ಪಿತೂರಿ ಮಾಡುವ ಪಕ್ಷ ಎಂದೂ ಸಫಲವಾಗಲ್ಲ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 23 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು ಎಂದರು. ಇದನ್ನೂ ಓದಿ: ಭಿನ್ನಾಭಿಪ್ರಾಯ ಹತ್ತಿಕ್ಕಿ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ: ಮೋದಿಗೆ ರಾಹುಲ್‌ ತಿರುಗೇಟು

    ನಾಯಕನಿಲ್ಲದ ಪಕ್ಷ ಕಾಂಗ್ರೆಸ್. ರಾಹುಲ್ ಗಾಂಧಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಲು ಇಷ್ಟಪಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಧ್ಯಕ್ಷರಾಗಲು ಒತ್ತಾಯ ಮಾಡಿದ್ದಾರೆ. ಈ ತರ ಯಾವುದೇ ಪಕ್ಷದಲ್ಲಿ ಇಲ್ಲ. ಇದು ಮೊದಲ ಬಾರಿಗೆ ನಾನು ನೋಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ. ಅವರದ್ದು ಕುಟುಂಬ ರಾಜಕಾರಣದ ಪಕ್ಷ. ಇದರಿಂದ ಕಾಂಗ್ರೆಸ್ ಪಕ್ಷ ನಶಿಸಿ ಹೋಗುತ್ತಿದೆ. ಕರ್ನಾಟಕದ ಜನರಿಗೂ ಕಾಂಗ್ರೆಸ್ ಬಗ್ಗೆ ನಿರಾಶಾಭಾವವಿದೆ ಎಂದು ಹೇಳಿದರು.

    ನಾವು ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ಬಗ್ಗೆ ವಿಭಾಗವಾರು ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದೇವೆ. ಒಂದೊAದು ವಿಧಾನಸಭೆಯಲ್ಲಿ ಯಾವ ರೀತಿ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ರೂಪುರೇಷಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮೂರು ತಂಡಗಳಾಗಿ ಪ್ರವಾಸ ಮಾಡಲಾಗುತ್ತಿದೆ. ಸದ್ಯದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಮೊದಲಿಗಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂಬುದು ಗೊತ್ತಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

    ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಡವರು, ಪರಿಶಿಷ್ಟ ವರ್ಗ, ಪಂಗಡ, ರೈತರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅದು ಕೂಡ ಜನತೆಯ ಬಳಿ ಹೋಗಿ ಮತ ಕೇಳಲು ಉಪಯೋಗವಾಗುತ್ತವೆ ಎಂದರು.

    ಇತ್ತೀಚೆಗೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಐತಿಹಾಸಿಕ ವಿಜಯ ಸಾಧಿಸಿದೆ. ಇದರಿಂದ ಒಂದು ಟ್ರೆಂಡ್ ಸೆಟ್ ಆಗಿದೆ. ಅದೇ ಟ್ರೆಂಡ್ ಮೂಲಕ ಕರ್ನಾಟಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಬಾರಿಯೂ ಬಹುಮತ ಸಾಧಿಸಲಿದ್ದೇವೆ. ನಾವು 150 ಸ್ಥಾನಗಳ ಗುರಿ ಹೊಂದಿದ್ದೇವೆ. ಸದ್ಯ ನಾವು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ಮುಂದಿನ ಬಾರಿ ಸಹ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.