Tag: Arun Singh

  • ಲೋಕಾ ಚುನಾವಣೆಗೆ ಬಿಜೆಪಿ ತಯಾರಿ – ಸಭೆಯಲ್ಲಿ ಏನಾಯ್ತು? ಇನ್‌ಸೈಡ್‌ ವರದಿ ಇಲ್ಲಿದೆ

    ಲೋಕಾ ಚುನಾವಣೆಗೆ ಬಿಜೆಪಿ ತಯಾರಿ – ಸಭೆಯಲ್ಲಿ ಏನಾಯ್ತು? ಇನ್‌ಸೈಡ್‌ ವರದಿ ಇಲ್ಲಿದೆ

    ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ ಭರ್ಜರಿ ತಾಲೀಮು ನಡೆಸುತ್ತಿದ್ದು ಬೆಂಗಳೂರಿನ ರೆಸಾರ್ಟ್‌ನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ನೇತೃತ್ವದಲ್ಲಿ ಸಭೆ ನಡೆದಿದೆ.

    8-9 ಲೋಕಸಭಾ ಕ್ಷೇತ್ರಗಳಲ್ಲಿ (Lok Sabha) ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ತುಮಕೂರು, ವಿಜಯಪುರ, ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾವೇರಿ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಪರ್ಯಾಯ ಅಭ್ಯರ್ಥಿ ಹುಡುಕುವ ಬಗ್ಗೆ ಚರ್ಚೆ ಆಗಿದೆ. ಇದನ್ನೂ ಓದಿ: ದೇವೇಗೌಡರ ಮೂಲಕ ಟಿಕೆಟ್‌ ಲಾಬಿ – ಬಿಜೆಪಿ ನಾಯಕರ ಭೇಟಿ ರಹಸ್ಯ ಏನು?

     

    ಬೆಂಗಳೂರು ಗ್ರಾಮಾಂತರದಲ್ಲಿ (Bengaluru Rural) ಸ್ಪರ್ಧೆಗೆ ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwar) ನಿರಾಸಕ್ತಿ ತೋರಿದ್ದು ಬಿಜೆಪಿ ನಾಯಕರನ್ನು ಸಂಕಷ್ಟಕ್ಕೆ ಸಿಲುಕಿದೆ. ಇನ್ನೂ ಸಮಯ ಇದೆ. ಯೋಚಿಸಿ ಅಭಿಪ್ರಾಯ ತಿಳಿಸುವಂತೆ ಸಿಪಿವೈಗೆ ಅರುಣ್ ಸಿಂಗ್ ಮತ್ತು ಪ್ರಹ್ಲಾದ್‌ ಜೋಶಿ ಸೂಚಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಇನ್ನೂ ಸಭೆಯಲ್ಲಿಸದಾನಂದ ಗೌಡ ಹಾಜರಿದ್ದರೂ ಸ್ಪರ್ಧೆ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ ಎನ್ನಲಾಗಿದೆ. ಈಶ್ವರಪ್ಪ ಮಗನಿಗೆ ಟಿಕೆಟ್ ಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ ಸವಾಲಿರುವ ಕ್ಷೇತ್ರಗಳ ವಸ್ತು ಸ್ಥಿತಿಯನ್ನು ಹೈಕಮಾಂಡ್‌ಗೆ ವಿವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.  ಇದನ್ನೂ ಓದಿ: ನಾವು ರಾಮ ಭಕ್ತರೇ, ಬಾಗಿಲು ತೆಗೆಸಿದ್ದೇ ನಾವು – ಕಾಂಗ್ರೆಸ್‌ನಿಂದ ರಾಮ ಮಂದಿರಕ್ಕೆ ನೀಡಿದ ಕೊಡುಗೆ ಪಟ್ಟಿ ರಿಲೀಸ್‌

     

  • ವಿನಾಶದ ಅಂಚಿನಲ್ಲಿ ಕಾಂಗ್ರೆಸ್ – ಪ್ರಿಯಾಂಕಾ, ರಾಹುಲ್ ಗಾಂಧಿ ಹೋದಲ್ಲೆಲ್ಲಾ ಅವರಿಗೆ ಸೋಲೇ: ಅರುಣ್ ಸಿಂಗ್

    ವಿನಾಶದ ಅಂಚಿನಲ್ಲಿ ಕಾಂಗ್ರೆಸ್ – ಪ್ರಿಯಾಂಕಾ, ರಾಹುಲ್ ಗಾಂಧಿ ಹೋದಲ್ಲೆಲ್ಲಾ ಅವರಿಗೆ ಸೋಲೇ: ಅರುಣ್ ಸಿಂಗ್

    – ಕಾಂಗ್ರೆಸ್ ಏನೇ ಗ್ಯಾರಂಟಿ ನೀಡಿದರೂ ಜನ ನಂಬಲ್ಲ

    ಬಾಗಲಕೋಟೆ: ದೇಶದಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯವರು ಎಷ್ಟೇ ಚುನಾವಣಾ ಪ್ರಚಾರ ಮಾಡಿದರೂ ಪೂರ್ತಿಯಾಗಿ ಕಾಂಗ್ರೆಸ್ (Congress) ಪಕ್ಷ ವಿನಾಶ ಹೊಂದುತ್ತದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಏನೇ ಮಾಡಿದರೂ ಏನೇ ಸುಳ್ಳಿನ ಗ್ಯಾರಂಟಿಗಳನ್ನು ನೀಡಿದರೂ ಜನರು ನಂಬುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು.

    ಬಾಗಲಕೋಟೆ (Bagalkote) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ ಚುನಾವಣೆಯ ನೇತೃತ್ವವನ್ನು ವಹಿಸಿದ್ದ ಪ್ರಿಯಾಂಕಾ ಗಾಂಧಿ ಜನರಿಗೆ ಸುಳ್ಳಿನ ಗ್ಯಾರಂಟಿಗಳನ್ನು ನೀಡಿದ್ದರು. ಉತ್ತರಪ್ರದೇಶದ 403 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದರು. ಇದರಿಂದ ಕಾಂಗ್ರೆಸ್ ಸಾಧನೆ ಎನೆಂದು ತಿಳಿಯುತ್ತದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಮುಗಿದುಹೋದ ಅಧ್ಯಾಯವಾಗಿದೆ ಎಂದು ಲೇವಡಿ ಮಾಡಿದರು.

    ಕಾಂಗ್ರೆಸ ಪಕ್ಷ ಯಾವುದೇ ಘೋಷಣೆ ಮಾಡಿದರೂ ಅದು ಪೂರ್ಣಗೊಳಿಸುವುದಿಲ್ಲ. ನಾವು ಬಡವರ ಕಲ್ಯಾಣ, ಮಧ್ಯಮ ವರ್ಗಕ್ಕಾಗಿ ಅವರ ಉತ್ತೇಜನಕ್ಕಾಗಿ ಭರವಸೆ ನೀಡುತ್ತೇವೆ. ಈಗ ಅರ್ಧ ಲೀ. ನಂದಿನಿ ಹಾಲು, ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಆದರೆ ಕಾಂಗ್ರೆಸ್ ಘೋಷಣೆಗಳು ಬಜೆಟ್‌ಗೆ ವರ್ಕೌಟ್ ಆಗುವುದಿಲ್ಲ. ಈಗಾಗಲೇ ಕಾಂಗ್ರೆಸ್ ಉತ್ತರಾಖಂಡ, ಗೋವಾ, ಅಸ್ಸಾಂ ಉತ್ತರಪ್ರದೇಶದಲ್ಲಿ ಪ್ರತಿ ರಾಜ್ಯದಲ್ಲೂ ಆಗಿದೆ ಎಂದರು.

    ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ಬಿಜೆಪಿ ಘೋಷಣೆ ಮಾಡುತ್ತದೆ. ಈ ಸಂಬಂಧ ಬಿಜೆಪಿ ಸರ್ಕಾರ ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ಜಾರಿಗೆ ಕಟಿಬದ್ಧವಾಗಿದೆ. ಈಗಾಗಲೇ ಉತ್ತರಾಖಂಡದಲ್ಲಿ ಸಮಿತಿ ರಚನೆ ಮಾಡಿದೆ. ಈಗಾಗಲೇ ಕೋಡ್ ರಚನೆ ಪ್ರಕ್ರಿಯೆ ನಡೆದಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ ಅಲ್ಲಿ ಕಾಮನ್ ಸಿವಿಲ್ ಕೋಡ್ ಸ್ಥಾಪನೆಗೆ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಭಿಮಾನಿ ಬಳಗವೇ ನಮ್ಮ ಆನೆ ಬಲ – ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಕಿಚ್ಚ ಸುದೀಪ್‌ ಮನವಿ

    ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಜಿಲ್ಲೆಯ 7 ಅಭ್ಯರ್ಥಿಗಳಾದ ಬಾಗಲಕೋಟೆಯ ವೀರಣ್ಣ ಚರಂತಿಮಠ, ಹುನಗುಂದದ ದೊಡ್ಡನಗೌಡ ಪಾಟೀಲ್, ಬೀಳಗಿಯ ಮುರುಗೇಶ್ ನಿರಾಣಿ, ಮುಧೋಳದ ಗೋವಿಂದ ಕಾರಜೋಳ, ಜಮಖಂಡಿ ಜಗದೀಶ್ ಗುಡಗುಂಟಿ, ಬಾದಾಮಿಯ ದೊಡ್ಡನಗೌಡ ಪಾಟೀಲ್, ತೇರದಾಳದ ಸಿದ್ದು ಸವದಿ, ಸಂಸದ ಪಿಸಿ ಗದ್ದಿಗೌಡರ, ವಿಪ ಮಾಜಿ ಸದಸ್ಯ ನಾರಾಯಣ ಸಾ ಬಾಂಢಗೆ ಮತ್ತಿತರರು ಇದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ಯಂಗ್‌ಸ್ಟರ್ – ಹೆಚ್.ಡಿ.ದೇವೇಗೌಡ

  • ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಿಲ್ಲ, ಪಿಎಫ್‌ಐ ಮಾತ್ರ ಅಭಿವೃದ್ಧಿಯಾಯ್ತು: ಅರುಣ್ ಸಿಂಗ್

    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಿಲ್ಲ, ಪಿಎಫ್‌ಐ ಮಾತ್ರ ಅಭಿವೃದ್ಧಿಯಾಯ್ತು: ಅರುಣ್ ಸಿಂಗ್

    – 40 ಪರ್ಸೆಂಟ್ ಭ್ರಷ್ಟಾಚಾರ ಆಗಿಯೇ ಇಲ್ಲ
    – ಕಾಂಗ್ರೆಸ್ ಮಾಡ್ತಿರೋ ಆಧಾರ ರಹಿತ ಆರೋಪ

    ಮೈಸೂರು: ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಅವರು ಏನೂ ಕೆಲಸ ಮಾಡಲಿಲ್ಲ. ಕೇವಲ ಪಿಎಫ್‌ಐ (PFI) ಮಾತ್ರ ಅಭಿವೃದ್ಧಿ ಆಯಿತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಆರೋಪಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅರುಣ್ ಸಿಂಗ್, ಜನರ ಹಿತ, ದೇಶದ ಹಿತಕ್ಕೆ ಡಬಲ್ ಎಂಜಿನ್ ಸರ್ಕಾರ ಬರಬೇಕಿದೆ. ಕರ್ನಾಟಕದ ವಿಕಾಸದ ಜೊತೆ ದೇಶದ ವಿಕಾಸ ಸೇರಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಮದಾಸ್ 4 ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಈಗ ಅವರು ಶ್ರೀವತ್ಸ ಅವರಿಗೆ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ (BJP) ಮಾತ್ರವೇ ಸಾಧ್ಯ ಎಂದು ಅರುಣ್ ಸಿಂಗ್ ಟಿಕೆಟ್ ಕೈತಪ್ಪಿದ ಶಾಸಕ ರಾಮದಾಸ್ ಅವರನ್ನು ಹಾಡಿ ಹೊಗಳಿದರು.

    ಕಾಂಗ್ರೆಸ್ (Congress) ಕಾಲದಲ್ಲಿ ಹಿಂದೂಗಳ ಹತ್ಯೆಯಾಗಿತ್ತು. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಅದೇ ಸ್ಥಿತಿ ಇತ್ತು. ಒಂದು ರೀತಿ ನೆಗೆಟಿವ್ ವಾತಾವರಣ ಇತ್ತು. ಪಿಎಫ್‌ಐ ಹಾವಳಿ ಹೆಚ್ಚಾಗಿತ್ತು. ಕಾಂಗ್ರೆಸ್ ಇಷ್ಟು ವರ್ಷ ಸಾಮಾಜಿಕ ನ್ಯಾಯಕ್ಕಾಗಿ ಏನೂ ಮಾಡಿಲ್ಲ. ನೀವು ಅಧಿಕಾರದಲ್ಲಿದ್ದಾಗ ಮೀಸಲಾತಿ ಏಕೆ ಹೆಚ್ಚಿಸಿರಲಿಲ್ಲ? 4% ಅಂಸವಿಧಾನತ್ಮಕವಾಗಿ ಮುಸ್ಲಿಮರಿಗೆ ನೀಡಲಾಗಿತ್ತು. ಅದನ್ನು ಲಿಂಗಾಯತ ಒಕ್ಕಲಿಗರಿಗೆ ತಲಾ 2% ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ವಾಪಸ್ಸು ಪಡೆಯುವುದಾಗಿ ಹೇಳಿದ್ದು, ಅದು ಯಾರಿಂದ ವಾಪಸ್ ಪಡೆಯುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೂ ಮಾಡಲಿಲ್ಲ. ಕೇವಲ ಪಿಎಫ್‌ಐ ಮಾತ್ರ ಅಭಿವೃದ್ಧಿ ಆಯಿತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಗದೀಶ್‌ ಶೆಟ್ಟರ್‌ 100ಕ್ಕೆ ನೂರರಷ್ಟು ಗೆಲ್ತಾರೆ – ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

    ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಇಲ್ಲ. ಕಾರಣ ರಾಜ್ಯದಲ್ಲಿ ಭ್ರಷ್ಟಾಚಾರ ಆಗಿಯೇ ಇಲ್ಲ. 40% ಆರೋಪ ಸುಳ್ಳು. ಇದು ಕಾಂಗ್ರೆಸ್ ಮಾಡುತ್ತಿರುವ ಆಧಾರ ರಹಿತ ಆರೋಪ. ಇದು ಜನರನ್ನು ದಿಕ್ಕುತಪ್ಪಿಸೋ ಕೆಲಸ. ಜನರಿಗೂ ಗೊತ್ತಿದೆ ಕಾಂಗ್ರೆಸ್‌ನ ಆರೋಪಕ್ಕೆ ಯಾವುದೇ ಆಧಾರ ಇಲ್ಲ ಎಂದು ಅರುಣ್ ಸಿಂಗ್ ಟಾಂಗ್ ನೀಡಿದರು.

    ಬಿಎಲ್ ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ಆರೋಪ ಹೊರಿಸಿದ ವಿಚಾರವಾಗಿ ಮಾತನಾಡಿದ ಅರುಣ್ ಸಿಂಗ್, ಬಿಎಲ್ ಸಂತೋಷ್ ಒಬ್ಬ ಸಂತ. ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿಯಿಂದ ಎಲ್ಲವನ್ನು ಪಡೆದು, ಸಿಎಂ ಆಗಿ ಈಗ ಈ ರೀತಿ ಮಾತನಾಡುವುದು ಸರಿಯಲ್ಲ. ಈಗ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಮುಂದೆ ಅವರಿಗೆ ಗೊತ್ತಾಗುತ್ತದೆ, ಮುಂದೆ ಸೋತ ನಂತರ ಅವರಿಗೆ ಅರಿವಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದ್ರೆ ಸರಿಯಾಗಿ ಓಡುತ್ತಾ? – ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ

  • ಕಾಂಗ್ರೆಸ್ ಕಾಲದಲ್ಲಿ ಪಿಎಫ್‍ಐ ಜಾಲ ವ್ಯಾಪಕವಾಗಿ ಹಬ್ಬಿತ್ತು: ಅರುಣ್ ಸಿಂಗ್

    ಕಾಂಗ್ರೆಸ್ ಕಾಲದಲ್ಲಿ ಪಿಎಫ್‍ಐ ಜಾಲ ವ್ಯಾಪಕವಾಗಿ ಹಬ್ಬಿತ್ತು: ಅರುಣ್ ಸಿಂಗ್

    ಬೆಳಗಾವಿ: ಕಾಂಗ್ರೆಸ್ ಕಾಲದಲ್ಲಿ ಪಿಎಫ್‍ಐ (PFI) ಜಾಲ ದೇಶಾದ್ಯಂತ ವ್ಯಾಪಕವಾಗಿ ಹಬ್ಬಿತ್ತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಬೆಳಗಾವಿಯಲ್ಲಿ  (Belagavi) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ (Congress) ನಿರಂತರ ಕೆಲಸ ಮಾಡುತ್ತಿದೆ. ಓಲೈಕೆ ರಾಜಕೀಯ ಮಾಡುವುದು ಕಾಂಗ್ರೆಸ್‍ನ ಗುಣವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಪುಕ್ಕಲುತನ ಕಾಡ್ತಿರೋದ್ರಿಂದ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ – ಸಿಂಹ ಕಿಡಿ

    ಕಾಂಗ್ರೆಸ್ ಸತತವಾಗಿ ಚುನಾವಣೆಗಳಲ್ಲಿ ಸೋಲುತ್ತ, ನಿರಂತರವಾಗಿ ಮುಳುಗುತ್ತಿರುವ ಪಕ್ಷವಾಗಿದೆ. ಆದರೆ ದೇಶಾದ್ಯಂತ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ. ಉತ್ತರಾಖಂಡ್ ಹಾಗೂ ಗೋವಾ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದ ಸಾಮಾನ್ಯ ಕಾರ್ಯಕರ್ತರು ಸಹ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿಯುತ್ತಾರೆ ಎಂದಿದ್ದಾರೆ.

    ಲಕ್ಷ್ಮಣ್ ಸವದಿ (Laxman Savadi) ಹಾಗೂ ಜಗದೀಶ್ ಶೆಟ್ಟರ್ (Jagadish Shettar) ಪಕ್ಷ ತೊರೆದ ವಿಚಾರವಾಗಿ ಮಾತನಾಡಿದ ಅವರು, ಹಿರಿಯ ನಾಯಕರಾಗಿ ಪಕ್ಷ ತೊರೆಯುವ ಮುನ್ನ ಯೋಚನೆ ಮಾಡಬೇಕಿತ್ತು. ಭಾರತದ ಪ್ರಜಾಪ್ರಭುತ್ವವನ್ನು ತೆಗಳುವ ರಾಹುಲ್ ಗಾಂಧಿಯವರ (Rahul Gandhi) ಪಕ್ಷಕ್ಕೆ ಹೋಗಿರುವುದು ದುರಾದೃಷ್ಟಕರ ವಿಷಯ. ದೇಶಾದ್ಯಂತ ಜನರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಕೆಲವರು ಮುಳುಗುತ್ತಿರುವ ಕಾಂಗ್ರೆಸ್ ಕಡೆ ಪ್ರಯಾಣಿಸುತ್ತಿದ್ದಾರೆ ಎಂದು ಕುಟುಕಿದರು.

    ಪಕ್ಷದಲ್ಲಿ ಎಲ್ಲರಿಗೂ ಟಿಕೆಟ್ ನೀಡಲು ಆಗುವುದಿಲ್ಲ. ಟಿಕೆಟ್ ಸಿಗದವರಿಗೆ ನೋವಿದೆ. ಆದರೂ ಬಿಜೆಪಿ ಕಾರ್ಯಕರ್ತರು ಒಂದು ಸಿದ್ಧಾಂತಕ್ಕಾಗಿ ಕೆಲಸ ಮಾಡುತ್ತಾರೆ. ಸಮಾಜಸೇವೆ, ದೇಶ ಸೇವೆ ಅವರಿಗೆ ಮುಖ್ಯವಾಗಿದೆ. ಪ್ರಧಾನಿ ಮೋದಿ (Narendra Modi) ನೇತೃತ್ವದಲ್ಲಿ ಕೆಲಸ ಮಾಡುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅವರದ್ದು ಬರೀ ಕುಟುಂಬ ರಾಜಕಾರಣ, ಯಾರು ಪ್ರಶ್ನೆ ಮಾಡಬಾರದು ಅಂದರೆ ಹೇಗೆ: ಎಚ್‌ಡಿಕೆ ವಿರುದ್ಧ ಸುಮಲತಾ ಕಿಡಿ

  • ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

    ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

    ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಕೆಯ ಭರಾಟೆ ಹೆಚ್ಚಾಗಿದೆ. ಘಟಾನುಘಟಿ ನಾಯಕರು ಆಯಾ ತಾಲೂಕುಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್.ಅಶೋಕ್ (R Ashoka), ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara), ಮಾಗಡಿಯಲ್ಲಿ ಜೆಡಿಎಸ್ (JDS) ಅಭ್ಯರ್ಥಿಯಾಗಿ ಹಾಲಿ ಶಾಸಕ ಮಂಜುನಾಥ್ (Majunath) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆ ವೇಳೆ ಎಲ್ಲಾ ನಾಯಕರು ತಮ್ಮ ತಮ್ಮ ಆಸ್ತಿ ವಿವರಗಳನ್ನ ಚುನಾವಣಾ ಆಯೋಗಕ್ಕೆ (Election Commission) ಸಲ್ಲಿಸಿದ್ದಾರೆ. ಇದನ್ನೂ ಓದಿ: 1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್‌- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?

    ಕನಕಪುರ ವಿಧಾನಸಭೆ ಕ್ಷೇತ್ರದಿಂದ ಸ್ಫರ್ಧೆ ಮಾಡ್ತಿರೋ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಬಿಎಸ್ಸಿ ಪದವೀಧರರಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ., ಪತ್ನಿ ಆಸ್ತಿ ಮೌಲ್ಯ 11.50 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಆಸ್ತಿ 70.38 ಕೋಟಿ ರೂ. ಇದೆ. ಅಶೋಕ್ ಅವರ ಒಟ್ಟು ಚರಾಸ್ತಿ 2.18 ಕೋಟಿ ರೂ., ಪತ್ನಿ ಹೆಸರಿನ ಚರಾಸ್ತಿ 1.16 ಕೋಟಿ ರೂ., ಅವಿಭಜಿತ ಕುಟುಂಬದ ಚರಾಸ್ತಿ 8.96ಕೋಟಿ ರೂ. ಇದೆ. ಆರ್. ಅಶೋಕ್ ಸ್ಥಿರಾಸ್ತಿ 3.10 ಕೋಟಿ ರೂ., ಪತ್ನಿ ಹೆಸರಿನ ಸ್ಥಿರಾಸ್ತಿ 10.44 ಕೋಟಿ ರೂ., ಅವಿಭಜಿತ ಕುಟುಂಬದ ಸ್ಥಿರಾಸ್ತಿ 61.42 ಕೋಟಿ ರೂ. ಇದೆ. ಅಶೋಕ್ ಹೆಸರಲ್ಲಿ ಒಟ್ಟು ಸಾಲ, 97.78 ಲಕ್ಷ ಹಾಗೂ ಪತ್ನಿ ಹೆಸರಲ್ಲಿ 64 ಲಕ್ಷ ಸಾಲ ಇದ್ದು, ಅವಿಭಜಿತ ಕುಟುಂಬದ ಸಾಲ 7.95 ಕೋಟಿ ರೂ. ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅಶೋಕ್ ವಾರ್ಷಿಕ ಆದಾಯ 18.44 ಲಕ್ಷ ರೂ. ಆಗಿದ್ದು ಆದಾಯ ಮೂಲ ಕೃಷಿ ಮತ್ತು ಬಾಡಿಗೆ ಎಂದು ತೋರಿಸಲಾಗಿದೆ. ಅಶೋಕ್ ಹೆಸರಿನಲ್ಲಿ 400 ಗ್ರಾಂ ಚಿನ್ನ ಹಾಗೂ 12 ಕೆಜಿ ಬೆಳ್ಳಿ ಇದೆ. ಪತ್ನಿ ಬಳಿ 617 ಗ್ರಾಂ ಚಿನ್ನ, 11 ಕೆ.ಜಿ ಬೆಳ್ಳಿ, 17.5ಲಕ್ಷ ಮೌಲ್ಯ ಡೈಮಂಡ್ ನೆಕ್ಲಸ್ ಇದೆ. 2 ಇನ್ನೋವಾ ಕಾರುಗಳನ್ನ ಆರ್.ಅಶೋಕ್ ಹೊಂದಿದ್ದಾರೆ. ಅಶೋಕ್ ವಿರುದ್ಧ ಎಸಿಬಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಮತ್ತೊಂದು ಪ್ರಕರಣ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಇದನ್ನೂ ಓದಿ: ಹೆಚ್‍ಡಿಡಿ ಮುಂದೆ ಗಳಗಳನೆ ಅತ್ತ ನಿಖಿಲ್ ಕುಮಾರಸ್ವಾಮಿ

    ಸಿ.ಪಿ.ಯೋಗೇಶ್ವರ್ ಆಸ್ತಿ ವಿವಿರ:
    ಯೋಗೇಶ್ವರ್ ಬಿಎಸ್‌ಸಿ ಪದವೀಧರ.
    ಒಟ್ಟು ಸ್ಥಿರಾಸ್ತಿ/ಚರಾಸ್ತಿ ಮೌಲ್ಯ: 30.68 ಕೋಟಿ
    ಯೋಗೇಶ್ಚರ್ ಒಟ್ಟು ಚರಾಸ್ತಿ‌ ಮೌಲ್ಯ: 5.09 ಕೋಟಿ
    ಪತ್ನಿ ಹೆಸರಲ್ಲಿ ಚರಾಸ್ತಿ ಮೌಲ್ಯ: 2.43 ಕೋಟಿ
    ಯೋಗೇಶ್ವರ್ ಸ್ಥಿರಾಸ್ತಿ ಮೌಲ್ಯ: 25.59 ಕೋಟಿ
    ಪತ್ನಿ ಹೆಸರಿನ ಸ್ಥಿರಾಸ್ತಿ ಮೌಲ್ಯ: 21.40 ಕೋಟಿ
    ಸಿಪಿವೈ ವಾರ್ಷಿಕ ಆದಾಯ: 41 ಲಕ್ಷ
    ಸಿಪಿವೈ ಒಟ್ಟು ಸಾಲ: 13.12 ಕೋಟಿ
    ಪತ್ನಿ ಹೆಸರಿನಲ್ಲಿರುವ ಸಾಲ: 3.20 ಕೋಟಿ
    ಸಿಪಿವೈ ಆದಾಯ ಮೂಲ: ಬಾಡಿಗೆ ಮತ್ತು ವ್ಯವಹಾರ
    ಸಾರ್ವಜನಿಕರು ಮತ್ತು ಇತರರಿಂದ ಪಡೆದಿರುವ 1 ಕೆಜಿ ಚಿನ್ನ, 50 ಕೆಜಿ ಬೆಳ್ಳಿ, 250 ಗ್ರಾಂ ಚಿನ್ನಾಭರಣ ಇದೆ.
    ಪತ್ನಿ ಬಳಿ 1.5ಕೆ.ಜಿ ಚಿನ್ನ ಹಾಗೂ 20 ಕೆಜಿ ಬೆಳ್ಳಿ ಇದೆ.
    ಸಿಪಿವೈ ಸ್ವಂತ ಕಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ.
    ಯೋಗೇಶ್ವರ್ ವಿರುದ್ಧ 10 ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

    ಹೆಚ್‌.ಸಿ ಬಾಲಕೃಷ್ಣ:
    ವಿದ್ಯಾರ್ಹತೆ: ಎಂಬಿಬಿಎಸ್ (ಅಪೂರ್ಣ ಪದವಿ)
    ಒಟ್ಟು ಆಸ್ತಿ ಮೌಲ್ಯ: 10.39 ಕೋಟಿ
    ಬಾಲಕೃಷ್ಣ ಸ್ಥಿರಾಸ್ತಿ: 9.93 ಕೋಟಿ
    ಪತ್ನಿ ಹೆಸರಲ್ಲಿ ಸ್ಥಿರಾಸ್ತಿ: 23.52 ಕೋಟಿ
    ಬಾಲಕೃಷ್ಣ ಒಟ್ಟು ಚರಾಸ್ತಿ: 46.75 ಲಕ್ಷ
    ಪತ್ನಿ ಹೆಸರಿನ ಚರಾಸ್ತಿ: 1.20 ಕೋಟಿ
    ಬಾಲಕೃಷ್ಣ ಒಟ್ಟು ಸಾಲ: 1.23 ಕೋಟಿ
    ಪತ್ನಿ ಹೆಸರಲ್ಲಿನಲ್ಲಿರುವ ಸಾಲ: 11.13 ಕೋಟಿ
    ವಾರ್ಷಿಕ ಆದಾಯ: 7.5 ಲಕ್ಷ
    ಆದಾಯ ಮೂಲ: ವ್ಯವಸಾಯ
    ಬಾಲಕೃಷ್ಣ ಬಳಿ ಸ್ವಂತ ಕಾರು ಇಲ್ಲ, ಪತ್ನಿ ಬಳಿ 3 ಕಾರು ಇದೆ.
    ಬಾಲಕೃಷ್ಣ 475 ಗ್ರಾಂ ಚಿನ್ನ ಹಾಗೂ 1.5 ಕೆಜಿ ಬೆಳ್ಳಿ‌, 70 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ.
    ಪತ್ನಿ ಬಳಿ 1.113 ಕೆಜಿ ಚಿನ್ನ, 4 ಕೆಜಿ ಬೆಳ್ಳಿ ಇದೆ.
    ಇನ್ನೂ ಬಾಲಕೃಷ್ಣ ವಿರುದ್ಧ ಕುದೂರು, ರಾಮನಗರ ಗ್ರಾಮಾಂತರ ಠಾಣೆಗಳಲ್ಲಿ ಎರಡು ಪ್ರಕರಣ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸಂಬಂಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ‌.

    ಎ.ಮಂಜುನಾಥ್ ಆಸ್ತಿ ವಿವರ:
    ಎ.ಮಂಜುನಾಥ್ ಬಿಬಿಎಂ ಪದವೀಧರ.
    ಒಟ್ಟು ಆಸ್ತಿ ಮೌಲ್ಯ: 10.65 ಕೋಟಿ
    ಮಂಜುನಾಥ್ ಚರಾಸ್ತಿ ಮೌಲ್ಯ: 1.02 ಕೋಟಿ.
    ಪತ್ನಿ ಹೆಸರಿನ ಚರಾಸ್ತಿ: 55 ಲಕ್ಷ
    ಮಂಜುನಾಥ್ ಸ್ಥಿರಾಸ್ತಿ: 9.45 ಕೋಟಿ
    ಪತ್ನಿ ಹೆಸರಿನಲ್ಲಿರುವ ಸ್ಥಿರಾಸ್ಥಿ: 10.88 ಕೋಟಿ
    ಮಂಜುನಾಥ್‌ ಹೆಸರಲ್ಲಿರುವ ಸಾಲ: 1.18 ಕೋಟಿ
    ಪತ್ನಿ ಹೆಸರಲ್ಲಿರುವ ಸಾಲ: 4.15 ಕೋಟಿ
    ವಾರ್ಷಿಕ ಆದಾಯ: 13.26 ಲಕ್ಷ
    ಪತ್ನಿ ಹೆಸರಲ್ಲಿ 3 ವೈನ್ ಸ್ಟೋರ್ ಇದೆ
    ಮಂಜುನಾಥ್‌ ಬಳಿ 250 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಹೊಂದಿದ್ದಾರೆ.
    ಪತ್ನಿ ಬಳಿ 400 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಇದೆ.
    ಮಂಜುನಾಥ್ ಹೆಸರಲ್ಲಿ 5 ಕಾರು, ಪತ್ನಿ ಹೆಸರಲ್ಲಿ 2 ಕಾರು ಇದೆ.
    ಅಲ್ಲದೇ ಮಂಜುನಾಥ್ ವಿರುದ್ಧ ಮಾಗಡಿ ಮತ್ತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ನಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

  • ಶೆಟ್ಟರ್,  ಸವದಿ ಕಾಂಗ್ರೆಸ್ ಸೇರಿ ಮುಂದೆ ಅನುಭವಿಸ್ತಾರೆ – ಅರುಣ್ ಸಿಂಗ್

    ಶೆಟ್ಟರ್, ಸವದಿ ಕಾಂಗ್ರೆಸ್ ಸೇರಿ ಮುಂದೆ ಅನುಭವಿಸ್ತಾರೆ – ಅರುಣ್ ಸಿಂಗ್

    ಕಲಬುರಗಿ: ಬಿಜೆಪಿಯಿಂದ ಎಲ್ಲಾ ಅಧಿಕಾರ ಅನುಭವಿಸಿ ಪಕ್ಷ ತೊರೆದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Laxman Savadi) ಇಬ್ಬರೂ ಮುಂದೆ ಅನುಭವಿಸುತ್ತಾರೆ ಎಂದು ಬಿಜೆಪಿ (BJP) ನಾಯಕ ಅರುಣ್ ಸಿಂಗ್ (Arun Singh) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವದಿ ಹಾಗೂ ಶೆಟ್ಟರ್ ಇಬ್ಬರೂ ಬಿಜೆಪಿಯಿಂದ ಅಧಿಕಾರ ಅನುಭವಿಸಿದ್ದಾರೆ. ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು, ಸವದಿ ಸೋತರೂ ಡಿಸಿಎಂ ಸ್ಥಾನ ನೀಡಲಾಗಿತ್ತು. ಆದರೂ ಈಗ ಶಾಸಕ ಸ್ಥಾನಕ್ಕಾಗಿ ಪಕ್ಷ ತೊರೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 3 ಪಕ್ಷದ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

    ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನಾಯಕತ್ವದಲ್ಲಿ ಕೆಲಸ ಮಾಡುವುದು ಗೌರವದ ವಿಚಾರವಾಗಿದೆ. ಆಂತಹ ಅವಕಾಶ ಇದ್ದರೂ ಅದರಿಂದ ದೂರ ಹೋದವರು ಭವಿಷ್ಯದಲ್ಲಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಬಿಜೆಪಿ ದೇಶದ ಅತಿ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ (Congress) ಮುಳುಗುತ್ತಿರುವ ಪಕ್ಷವಾಗಿದೆ. ಇಂತಹ ಪಕ್ಷಕ್ಕೆ ಅವರ ಸ್ವಾರ್ಥಕ್ಕಾಗಿ ಹೋಗಿದ್ದಾರೆ. ಅವರು ಮುಳುಗುವ ಹಡಗಿನಲ್ಲಿ ಅಪಾಯದ ಪ್ರಯಾಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪತಿಯನ್ನು ತಬ್ಬಿ ಕಣ್ಣೀರಿಟ್ಟ ಶಿಲ್ಪಾ ಜಗದೀಶ್

  • ರಾಜ್ಯದಲ್ಲಿ 150 ಸ್ಥಾನ ಗೆದ್ದು BJP ಅಧಿಕಾರಕ್ಕೆ ಬರೋದು ಖಚಿತ – ಅರುಣ್ ಸಿಂಗ್ ವಿಶ್ವಾಸ

    ರಾಜ್ಯದಲ್ಲಿ 150 ಸ್ಥಾನ ಗೆದ್ದು BJP ಅಧಿಕಾರಕ್ಕೆ ಬರೋದು ಖಚಿತ – ಅರುಣ್ ಸಿಂಗ್ ವಿಶ್ವಾಸ

    ಬೆಂಗಳೂರು: ಬಿಜೆಪಿ 150 ಸ್ಥಾನ ಪಡೆದು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಅಂತಾ ಬಿಜೆಪಿ (BJP) ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ (Arun Singh) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ವಿಜಯ ಸಂಕಲ್ಪ ಯಾತ್ರೆ ಅತ್ಯುತ್ತಮವಾಗಿ ನಡೆಯುತ್ತಿದೆ. ಪ್ರತಿ ಬೂತ್‌ನಲ್ಲಿ ಬಿಜೆಪಿ ಬಾವುಟ (BJP Flag) ಕಟ್ಟುವ ಕೆಲಸ ಆಗುತ್ತಿದೆ. ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡಲಾಗ್ತಿದೆ. ವಿಜಯ ಸಂಕಲ್ಪ ಯಾತ್ರೆಗೆ (Vijay Sankalp Yatra) ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತಾ ಜನ ಹೇಳ್ತಿದ್ದಾರೆ. ನಾನು ಗದಗ ಜಿಲ್ಲೆಯಲ್ಲಿ ಅಭಿಯಾನ ಮಾಡಿದ್ದೇನೆ. 61 ಸಾವಿರ ಬೂತ್‌ಗೆ ನಾವು ತಲುಪಿದ್ದೇವೆ. ಅಮಿತ್ ಶಾ (Amit Shah), ಜೆ.ಪಿ ನಡ್ಡಾ (JP Nadda), ಸಿಎಂ ಎಲ್ಲರೂ ಅಭಿಯಾನ ಮಾಡ್ತಿದ್ದೇವೆ. ಈ ವಿಜಯ ಸಂಕಲ್ಪ ಯಾತ್ರೆಯಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ 150 ಸ್ಥಾನ ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್

    ವಿಜಯ ಸಂಕಲ್ಪ ಯಾತ್ರೆ ಬಳಿಕ ರಥಯಾತ್ರೆ ಆಯೋಜನೆ ಮಾಡುವ ಪ್ಲಾನ್ ಇದೆ. ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ರಥಯಾತ್ರೆ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಏನು ಬೇಕೋ ಆ ಎಲ್ಲ ಸಿದ್ಧತೆಗಳನ್ನ ಮಾಡಲಾಗುತ್ತಿದೆ ಅಂತಾ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಗಾವಿಯಲ್ಲಿ ಇರೋದು ಬಿಜೆಪಿ ‌ಬಣ ಮಾತ್ರ: ಅರುಣ್ ಸಿಂಗ್

    ಬೆಳಗಾವಿಯಲ್ಲಿ ಇರೋದು ಬಿಜೆಪಿ ‌ಬಣ ಮಾತ್ರ: ಅರುಣ್ ಸಿಂಗ್

    ಬೆಂಗಳೂರು : ಬೆಳಗಾವಿಯಲ್ಲಿ ಬಿಜೆಪಿ (BJP) ಬಣ ಮಾತ್ರ ಇದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ತಿಳಿಸಿದರು.

    ಬೆಳಗಾವಿಯಲ್ಲಿ (Belagavi) ಬಣ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಎಲ್ಲಾ ನಾಯಕರು ಒಟ್ಟಾಗಿ ಇದ್ದಾರೆ. ಬಿಜೆಪಿಯಲ್ಲಿ ಇರುವುದು ಒಂದೇ ಒಂದು ಬಣ ಅದು ಬಿಜೆಪಿ ಬಣವಾಗಿದೆ. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ಮೋದಿ (Narendra Modi), ನಡ್ಡಾ (JP Nadda), ಯಡಿಯೂರಪ್ಪ (BS Yediyurappa) ಸಿಎಂ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

    ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ವಿಚಾರವು ಹಳೆ ವಿಚಾರವಾಗಿದೆ. ಹೊಸದು ಏನಾದರೂ ಇದ್ದರು ಹೇಳಿ ಎಂದು ಯತ್ನಾಳ್‌ಗೆ ನೋಟಿಸ್ ನೀಡಿದ ಬಗ್ಗೆ ಉತ್ತರ ನೀಡಲು ನಿರಾಕರಿಸಿದರು. ಎಲ್ಲ ನಾಯಕರು ಒಂದೇ ಹೇಳುತ್ತಿರೋದು ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ. ಎಲ್ಲರೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ 150 ಸ್ಥಾನ ಪಡೆಯುತ್ತದೆ. ಇದಕ್ಕೆ ಬೇಕಾದ ಕೆಲಸ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ

    ಮಂಡ್ಯದಲ್ಲಿ ಸಚಿವ ಅಶೋಕ್‌ಗೆ ಗೋ ಬ್ಯಾಕ್ ಅಶೋಕ್ ಎಂಬ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ‌ ಬಗ್ಗೆ ನನಗೆ ಮಾಹಿತಿ ಇಲ್ಲ. ಅಶೋಕ್ ಪಕ್ಷದ ಸಿನಿಯರ್ ಲೀಡರ್. ಅನೇಕ ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೆ. ಏನಾಗಿದೆ ಅದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಭವಾನಿ ಅಮ್ಮ – ಸಾಮಾಜಿಕ ಜಾಲತಾಣದಲ್ಲಿ JDS ಬೆಂಬಲಿಗರ ಬ್ಯಾಟಿಂಗ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದಲ್ಲಿ 150 ಸೀಟು ಗೆದ್ದೇ ಗೆಲ್ಲುತ್ತೇವೆ: ಅರುಣ್ ಸಿಂಗ್

    ರಾಜ್ಯದಲ್ಲಿ 150 ಸೀಟು ಗೆದ್ದೇ ಗೆಲ್ಲುತ್ತೇವೆ: ಅರುಣ್ ಸಿಂಗ್

    ಬೆಂಗಳೂರು: ಈ ಬಾರಿಯ ಚುನಾವಣೆ (Election) ಯಲ್ಲಿ ರಾಜ್ಯದಲ್ಲಿ 150 ಸೀಟು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ (Congress) ಪಕ್ಷ ಹೆಸರು ಇಲ್ಲದ ಹಾಗೆ ಆಗುತ್ತಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಕೂಡ ಗೆದ್ದಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪ್ರವಾಸ ನಡೆಯುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಚರ್ಚಿಸುತ್ತಿದ್ದೇವೆ. ಬೂತ್ ಮಟ್ಟದ ಕಾರ್ಯಕರ್ತರಿಂದಲೇ ಪಕ್ಷ ಗೆಲ್ಲುತ್ತದೆ ಎಂದರು.

    ಸಂಘಟನೆ ಮತ್ತು ಕಾರ್ಯಕರ್ತರ ಪಕ್ಷ ಬಿಜೆಪಿ. ರಾಜ್ಯದಲ್ಲಿ 150 ಸೀಟು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷ ಹೆಸರು ಇಲ್ಲದ ಹಾಗೆ ಆಗುತ್ತಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದಿಲ್ಲ. ಹಿಮಾಚಲ ಪ್ರದೇಶ ಮತ್ತು ಗುಜರಾತ್ (Gujrat) ನಲ್ಲಿ ಕೂಡ ಕಾಂಗ್ರೆಸ್ ಸೋಲುತ್ತದೆ. ಎಲ್ಲಾ ಕಡೆ ಬಿಜೆಪಿ (BJP) ಗೆದ್ದುಕೊಂಡು ಬರುತ್ತಿದೆ. ಮುಂದಿನ ದಿನದಲ್ಲೂ ಕರ್ನಾಟಕದಲ್ಲಿ ಬಿಜೆಪಿ ವಿಜಯಶಾಲಿಯಾಗುತ್ತದೆ ಎಂದು ಹೇಳಿದರು.

    ಕರ್ನಾಟಕದಲ್ಲಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ನಾವು ಮಾಡಿರುವ ಕೆಲಸ ನೋಡಿ ಕರ್ನಾಟಕದಲ್ಲಿ ಸಾಕಷ್ಟು ಇನ್ವೆಸ್ಟ್ ಆಗಿದೆ. ರಾಜ್ಯದ ಎಲ್ಲಾ ಸಚಿವರು ಗ್ರೌಂಡ್ ನಲ್ಲಿ ಇಳಿದು ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೆಲಸ ರಾಜ್ಯದ ಜನಕ್ಕೆ ಇಷ್ಟ ಆಗಿದೆ. ಹಾಗಾಗಿ ಮುಂದಿನ ಬಾರಿಯೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿರುತ್ತದೆ. ಕಾಂಗ್ರೆಸ್‍ನವರ ಬಳಿ ಹೇಳಿಕೊಳ್ಳಲು ಏನೂ ಇಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ, ರಾಜ್ಯದಲ್ಲಿ ಎಲ್ಲಿಯೇ ಸ್ಪರ್ಧಿಸಿದರೂ ಸೋಲುತ್ತಾರೆ : ಈಶ್ವರಪ್ಪ

    ಇದೇ ವೇಳೆ ಹಿಂದೂ ಪದದ ಕುರಿತು ಸತೀಶ್ ಜಾರಕಿಹೊಳಿ (Sathish Jarakiholi) ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಹೀಯಾಳಿಸಿಕೊಂಡು ಬರುತ್ತಿದೆ. ರಾಹುಲ್ ಗಾಂಧಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದ ಶಾಸಕರು ಈಥರ ಹೇಳಿಕೆಗಳನ್ನು ಕೊಡುತ್ತಾರೆ. ಈ ನಿಂದನೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

    ರಾಜ್ಯದ ಜನರು ಇದಕ್ಕೆ ಉತ್ತರ ನೀಡುತ್ತಾರೆ. ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‍ನವರು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಡಿಕೆ ಸಿದ್ದರಾಮಯ್ಯ, ರಾಹುಲ್ ಗಾಂಧಿ (Rahul Gandhi) ಮೂರು ಜನ ಇದನ್ನು ಒಪ್ಪಿಕೊಂಡಂತೆ ಆಗುತ್ತದೆ. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಇಲ್ಲಿನವರೇ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಇದರ ಬಗ್ಗೆ ಗಮನ ಹರಿಸಬೇಕು ಎಂದರು.

    ಬಳಿಕ ಅರುಣ್ ಸಿಂಗ್ ಅವರು ಕಲಬುರಗಿಯಲ್ಲಿ ಇಂದು ನಡೆಯಲಿರುವ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ತೆರಳಿದರು. ಇಂದಿನಿಂದ ನಾಲ್ಕು ದಿನಗಳ ಕಾಲ ಜನ ಸಂಕಲ್ಪ ಯಾತ್ರೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಯತ್ನಾಳ್‍ಗೆ ನೋಟಿಸ್ ನೀಡಿ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನ್ ಮಾಡಿದ್ದೇವೆ: ಅರುಣ್ ಸಿಂಗ್

    ಯತ್ನಾಳ್‍ಗೆ ನೋಟಿಸ್ ನೀಡಿ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನ್ ಮಾಡಿದ್ದೇವೆ: ಅರುಣ್ ಸಿಂಗ್

    ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGowda Patil Yatnal) ಅವರ ಹೇಳಿಕೆಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್‌ ಮಾಡದಂತೆ ವಾರ್ನ್ ಮಾಡಿದ್ದೇವೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ವಾರ್ನಿಂಗ್ ಮಾಡಿದ್ದೇವೆ ಎಂದು ಬಿಜೆಪಿ (BJP) ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun Singh) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನು ಮಂತ್ರಿ ಮಾಡಿಲ್ಲ. ಅದಕ್ಕಾಗಿ ಹೀಗೆ ಮಾತನಾಡಿದ್ದಾರೆ. ಯಾರೇ ಆದ್ರು ಪಕ್ಷದ ಚೌಕಟ್ಟಿನಲ್ಲಿ ಮಾಡಬೇಕು. ಪಕ್ಷದ ಹಿರಿಯ ನಾಯಕರನ್ನು ಗೌರವಿಸಬೇಕು. ಯತ್ನಾಳ್ ಇಂತಹ ಹೇಳಿಕೆಗೆ ನೋಟಿಸ್ ಜಾರಿ ಮಾಡಿದ್ದೇವೆ. ಪಕ್ಷಕ್ಕೆ ಡ್ಯಾಮೇಜ್‌ ಮಾಡದಂತೆ ವಾರ್ನ್ ಮಾಡಿದ್ದೇವೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಮಾತನಾಡದಂತೆ ಸೂಚಿಸಿದ್ದೇವೆ. ಈ ಬಗ್ಗೆ ಪಕ್ಷ ಸೂಕ್ತವಾದ ನಿರ್ಧಾರ ಮಾಡಲಿದೆ. ಯಾರು ತಮ್ಮ ಸ್ವಾರ್ಥವನ್ನು ಇಟ್ಟುಕೊಂಡು ಮಾತನಾಡಬಾರದು ಎಂದರು. ಇದನ್ನೂ ಓದಿ: ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ: ಅರುಣ್ ಸಿಂಗ್

    ಬಿಎಸ್‍ವೈ, ಸಿಎಂ ಬೊಮ್ಮಾಯಿ ಒಟ್ಟಾಗಿ ವಿಜಯಸಂಕಲ್ಪ ಯಾತ್ರೆ ಮಾಡಿದ್ರೆ ಬಿಜೆಪಿ ಸೋಲುತ್ತದೆ ಎಂದು ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಅವರ ಹೇಳಿಕೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಯತ್ನಾಳ್ ಹೇಳಿಕೆಯನ್ನು ಪಕ್ಷದ ಕಾರ್ಯಕರ್ತರು ನಿರ್ಲಕ್ಷ್ಯ ಮಾಡುತ್ತಾರೆ. ಅವರು ನಮ್ಮ ಕೋರ್ ಕಮಿಟಿ ಸದಸ್ಯರೂ ಅಲ್ಲ. ಇಂತಹ ಯತ್ನಾಳ್ ಹೇಳಿಕೆ ಪಕ್ಷದ ಕಾರ್ಯಕರ್ತರಿಗೂ ಇಷ್ಟ ಆಗಲ್ಲ. ಯತ್ನಾಳ್ ಅವರು ಬಿಜೆಪಿಯಿಂದ ಗೆದ್ದಿದ್ದಾರೆ. ಈ ಹಿಂದೆ ಪಕ್ಷದಿಂದ ಹೊರಗೆ ಹೋಗಿದ್ರು. ಬಿಜೆಪಿ ಎಲ್ಲಾ ಸಮಾಜ, ಜನಾಂಗದ ಪರವಾಗಿ ಕೆಲಸ ಮಾಡುತ್ತಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್‌ ಅಂತಾ ಮೋದಿ (Narendra Modi) ಸರ್ಕಾರ ಕೆಲಸ ಮಾಡುತ್ತಿದೆ. ಮೋದಿಯವರ ಸರ್ಕಾರ ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅನೇಕ ಸ್ವಾಮೀಜಿ ಅವರೇ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಆಧುನಿಕ ಭಗೀರಥ ಖ್ಯಾತಿಯ ಕಾಮೇಗೌಡ ನಿಧನ

    ಪಂಚಮಸಾಲಿ (Panchamasali) ಮೀಸಲಾತಿ ಹೋರಾಟ ವಿಚಾರಕ್ಕೆ, ಎಸ್‍ಸಿ (SC), ಎಸ್‍ಟಿ (ST) ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಹೆಚ್ಚಳ ಮಾಡಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿಗೆ ಬಿಜೆಪಿ ಬೆಂಬಲಿಸಿದೆ. ಕಾಂಗ್ರೆಸ್ (Congress) ಎಂದಿಗೂ ಮೀಸಲಾತಿ ಹೆಚ್ಚಿಸುವ ಕೆಲಸವನ್ನು ಮಾಡಲಿಲ್ಲ. ಪಂಚಮಸಾಲಿ ಸಮುದಾಯದ ಮೂರು ದೊಡ್ಡ ನಾಯಕರೇ ಮಂತ್ರಿಗಳಿದ್ದಾರೆ. ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಂಕರ್ ಗೌಡ ಪಾಟೀಲ್ ಮುನೇನಕೊಪ್ಪ ಅವರೇ ಪಂಚಮಸಾಲಿ ಸಚಿವರು ಇದ್ದಾರೆ. ಆದ್ರು ಪಂಚಮಸಾಲಿ ಸಮುದಾಯದ ಜನರ ಬೇಡಿಕೆ ಬಗ್ಗೆ ಕುಳಿತು ಸಮಾಲೋಚನೆ ಮಾಡಿದ್ದೇವೆ ಎಂದು ಅರುಣ್ ಸಿಂಗ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]