Tag: Arun Goel

  • ಚುನಾವಣಾ ಆಯುಕ್ತರ ನೇಮಕ – ಮಾ.15 ಕ್ಕೆ ಮೋದಿ ಅಧ್ಯಕ್ಷತೆಯಲ್ಲಿ ಸಭೆ

    ಚುನಾವಣಾ ಆಯುಕ್ತರ ನೇಮಕ – ಮಾ.15 ಕ್ಕೆ ಮೋದಿ ಅಧ್ಯಕ್ಷತೆಯಲ್ಲಿ ಸಭೆ

    ನವದೆಹಲಿ: ಅನುಪ್ ಚಂದ್ರ ಪಾಂಡೆ (Anup Chandra Pandey) ಅವರ ನಿವೃತ್ತಿ ಮತ್ತು ಅರುಣ್ ಗೋಯೆಲ್ (Arun Goel) ಅವರ ಅನಿರೀಕ್ಷಿತ ರಾಜೀನಾಮೆಯಿಂದ ಖಾಲಿಯಾದ ಸ್ಥಾನಗಳಿಗೆ ಮಾರ್ಚ್ 15 ರೊಳಗೆ ಇಬ್ಬರು ಚುನಾವಣಾ ಆಯುಕ್ತರನ್ನು (Election Commissioners) ನೇಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.

    ಚುನಾವಣಾ ಸಮಿತಿಯು ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ಮೊದಲೇ, ಗೋಯೆಲ್ ಅವರು ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಶನಿವಾರ ಅಂಗೀಕರಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಮುನ್ನವೇ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

    ಇದರಿಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಚುನಾವಣಾ ಪ್ರಾಧಿಕಾರದ ಏಕೈಕ ಸದಸ್ಯರಾಗಿ ಉಳಿದಿದ್ದಾರೆ. ಪಾಂಡೆ ಅವರು ಫೆಬ್ರವರಿ 14 ರಂದು 65 ವರ್ಷಗಳನ್ನು ಪೂರೈಸಿದ ನಂತರ ನಿವೃತ್ತಿ ಹೊಂದಿದ್ದರು.

    ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ನೇತೃತ್ವದಲ್ಲಿ ಗೃಹ ಕಾರ್ಯದರ್ಶಿ ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಕಾರ್ಯದರ್ಶಿಯನ್ನು ಒಳಗೊಂಡ ಶೋಧನಾ ಸಮಿತಿಯು ಮೊದಲಿಗೆ ಈ ಎರಡು ಹುದ್ದೆಗಳಿಗೆ ತಲಾ ಐದು ಹೆಸರುಗಳ ಎರಡು ಪ್ರತ್ಯೇಕ ಫಲಕಗಳನ್ನು ಸಿದ್ಧಪಡಿಸುತ್ತದೆ. ಇದನ್ನೂ ಓದಿ: ಸೋಮವಾರವೇ ಬಿಜೆಪಿಯ 2ನೇ ಪಟ್ಟಿ ರಿಲೀಸ್? – ರಾಜ್ಯದ 15 ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ

    ನಂತರ ಪ್ರಧಾನಿ ನೇತೃತ್ವದ ಮತ್ತು ಕೇಂದ್ರ ಸಚಿವ ಹಾಗೂ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಚುನಾವಣಾ ಆಯುಕ್ತರ ನೇಮಕಕ್ಕಾಗಿ ಇಬ್ಬರನ್ನು ಹೆಸರಿಸಲಿದೆ. ಬಳಿಕ ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

    ಆಯ್ಕೆ ಸಮಿತಿಯು ಸದಸ್ಯರ ಅನುಕೂಲಕ್ಕೆ ಅನುಗುಣವಾಗಿ ಮಾರ್ಚ್ 13 ಅಥವಾ 14 ರಂದು ಸಭೆ ನಡೆಸಬಹುದು. ಮಾರ್ಚ್ 15 ರೊಳಗೆ ನೇಮಕಾತಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಂಸದ ಬ್ರಿಜೇಂದ್ರ ಸಿಂಗ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

  • ಲೋಕಸಭಾ ಚುನಾವಣೆ ಮುನ್ನವೇ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

    ಲೋಕಸಭಾ ಚುನಾವಣೆ ಮುನ್ನವೇ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

    ನವದೆಹಲಿ: ಲೋಕಸಭೆ ಚುನಾವಣೆ (Lok Sabha Elections 2024) ಹೊತ್ತಲ್ಲೇ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ಚುನಾವಣಾ ಆಯುಕ್ತ ಅರುಣ್ ಗೋಯೆಲ್ (Arun Goel) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಗೋಯೆಲ್‌ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು (Election Commissioner) ಈಗಾಗಲೇ ಖಾಲಿ ಹುದ್ದೆಯನ್ನು ಹೊಂದಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಬಳಿ ಮಾತ್ರ ಉಳಿದಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಕೈಜೋಡಿಸಿದ ಟಿಡಿಪಿ, ಜೆಎಸ್‌ಪಿ – ಆಂಧ್ರದ ಲೋಕಸಭಾ, ವಿಧಾನಸಭಾ ಚುನಾವಣೆಗೆ ಮೈತ್ರಿ ಸ್ಪರ್ಧೆ

    ಲೋಕಸಭೆ ಚುನಾವಣೆ ದಿನಾಂಕವನ್ನು ಮುಂದಿನ ವಾರ ಘೋಷಿಸುವ ಸಾಧ್ಯತೆಯಿದೆ. ಗೋಯೆಲ್ ಅವರ ರಾಜೀನಾಮೆ ಈಗ ಆ ಟೈಮ್‌ಲೈನ್‌ನಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ.

    ಗೋಯಲ್ ಅವರು 1985 ರ ಬ್ಯಾಚ್ ಐಎಎಸ್ ಅಧಿಕಾರಿ. 2022 ರ ನವೆಂಬರ್ 18 ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ಒಂದು ದಿನದ ನಂತರ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ಅವರ ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಇದನ್ನೂ ಓದಿ: ಲೋಕಸಭೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ – ಇಂಡಿಯಾ ಒಕ್ಕೂಟ ಸೇರುವ ವದಂತಿಗೆ ಮಾಯಾವತಿ ಸ್ಪಷ್ಟನೆ

  • ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ? – ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

    ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ? – ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

    ನವದೆಹಲಿ: ಚುನಾವಣಾ ಆಯೋಗ (Election Commission) ಕೇಂದ್ರದ ಹಿಡಿತದಲ್ಲಿದೆ. ಆಯುಕ್ತರ ನೇಮಕಾತಿ ಸರಿಯಿಲ್ಲ ಎಂದು ನಿನ್ನೆಯಷ್ಟೇ ಸುಪ್ರೀಂಕೋರ್ಟ್ (Supreme Court) ಚಾಟಿ ಬೀಸಿತ್ತು. ಇದ್ರ ಮುಂದುವರಿದ ಭಾಗವಾಗಿ ಇಂದು ಕೂಡ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯೆಲ್ (Arun Goel) ನೇಮಕಾತಿ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿ, ಕೇಂದ್ರದ ಧೋರಣೆ ಬಗ್ಗೆ ಅಸಹನೆ ವ್ಯಕ್ತಪಡಿಸಿದೆ.

    ಮಿಂಚಿನ ವೇಗದಲ್ಲಿ ಅರುಣ್ ಗೋಯೆಲ್‍ರನ್ನು ಏಕೆ ನೇಮಕ ಮಾಡಿದ್ರಿ ಎಂದು ಪ್ರಶ್ನಿಸಿದೆ. ಅರುಣ್ ಗೋಯೆಲ್ ವಿಆರ್‌ಎಸ್‌ ಪಡೆದು 24 ಗಂಟೆ ಕಳೆಯುವುದಕ್ಕೆ ಮೊದಲೇ ತರಾತುರಿಯಲ್ಲಿ ಅರುಣ್ ಗೋಯೆಲ್ ನೇಮಕವನ್ನು ಹೇಗೆ ಪೂರ್ಣಗೊಳಿಸಲಾಯ್ತು ಎಂದು ಸಾಂವಿಧಾನಿಕ ಪೀಠ ಆಶ್ಚರ್ಯ ವ್ಯಕ್ತಪಡಿಸಿದೆ. ಚುನಾವಣಾ ಮುಖ್ಯ ಆಯುಕ್ತರು, ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆಯನ್ನು ಏರ್ಪಾಟು ಮಾಡುವಂತೆ ದಾಖಲಾದ ಅರ್ಜಿಗಳ ವಿಚಾರಣೆ ವೇಳೆ, ಗೋಯೆಲ್ ನೇಮಕ ಸಂಬಂಧ ಕೇಂದ್ರ ಸಲ್ಲಿಸಿದ ವರದಿ ಪರಿಶೀಲಿಸಿ ಹಲವು ಪ್ರಶ್ನೆ ಎತ್ತಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್‌ ಕೊಲೆ ಪ್ರಕರಣ ಲವ್‌ ಜಿಹಾದ್‌ ಅಲ್ಲ – ಅಸಾದುದ್ದೀನ್‌ ಓವೈಸಿ

    ಈ ಸಂದರ್ಭದಲ್ಲಿ, ನೀವು ಸ್ವಲ್ಪ ಸುಮ್ಮನಿರ್ತೀರಾ ಎಂದು ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ಹೇಳಿದ ಘಟನೆಯೂ ನಡೆದಿದೆ. ನಾಲ್ಕು ದಿನಗಳ ಸುಧೀರ್ಘ ವಿಚಾರಣೆ ಮುಗಿದಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

    ಸುಪ್ರೀಂ ಪೀಠದ ಪ್ರಶ್ನೆಗಳ ಸುರಿಮಳೆ:
    ಆಯುಕ್ತರ ಹುದ್ದೆ ಮೇ 15ರಿಂದ ಖಾಲಿ ಇದೆ. ಇಲ್ಲಿ ಅರ್ಜಿವಾದ ಶುರುವಾದ ಕೂಡಲೇ ನೇಮಕಾತಿ ನಡೆದಿದೆ. ಇದ್ಯಾವ ರೀತಿಯ ನೇಮಕ? ನಾವು ಗೋಯೆಲ್ ಸಾಮರ್ಥ್ಯ ಪ್ರಶ್ನಿಸ್ತಿಲ್ಲ. ಅರುಣ್ ಗೋಯೆಲ್ ನೇಮಕಾತಿಯ ಪ್ರಕ್ರಿಯೆ ಪ್ರಶ್ನಿಸುತ್ತಿದ್ದೇವೆ. ಗೋಯೆಲ್ ಕಡತವನ್ನು ಮಿಂಚಿನ ವೇಗದಲ್ಲಿ ಕ್ಲಿಯರ್ ಮಾಡಿದ್ದೇಗೆ? ಅರುಣ್ ಗೋಯೆಲ್ ಫೈಲ್ ಬಂದ ದಿನವೇ ನೇಮಕಾತಿ ಹೇಗೆ ಆಯ್ತು? ಇ.ಸಿ ಹುದ್ದೆಗಾಗಿ ನಾಲ್ವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಈ ಕಡತವನ್ನು ಕಾನೂನು ಇಲಾಖೆ ನ.18 ರಂದು ಪಿಎಂಓಗೆ ಕಳಿಸಿತ್ತು. ಅದೇ ದಿನ ಪ್ರಧಾನಮಂತ್ರಿಗಳು ಒಂದು ಹೆಸರನ್ನು ಪ್ರತಿಪಾದಿಸಿದರು. ನಾಲ್ವರಲ್ಲಿ ಕಿರಿಯರಾದ ಗೋಯೆಲ್ ಹೆಸರನ್ನು ಯಾವ ಆಧಾರದ ಮೇಲೆ ಫೈನಲ್ ಮಾಡಿದ್ದೀರಿ. ಗೋಯೆಲ್ ಸಾಮರ್ಥ್ಯವನ್ನು ಯಾವ ರೀತಿ ಮೌಲ್ಯಮಾಪನ ಮಾಡಿದ್ದೀರಿ. ಇದಕ್ಕೆ ಅನುಸರಿಸಿದ ಪದ್ದತಿ ಏನು ಎಂದು ಚಾಟಿ ಬೀಸಿತು. ಇದನ್ನೂ ಓದಿ: ಸೆನ್ಸೆಕ್ಸ್‌ ಹೈಜಂಪ್‌ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ

    ಅಟಾರ್ನಿ ಜನರಲ್ ವಾದ ಏನು?
    ದಯವಿಟ್ಟು ನೀವು ಕೆಲ ಕಾಲ ಸುಮ್ಮನಿರಿ. ಚುನಾವಣಾ ಆಯುಕ್ತರ ನೇಮಕದಲ್ಲಿ ತಪ್ಪು ನಡೆದಿಲ್ಲ. ಈ ಹಿಂದೆಯೂ 12 ರಿಂದ 24 ಗಂಟೆಯಲ್ಲಿ ನೇಮಕಾತಿ ಆಗಿದೆ. ಕಾನೂನು ಇಲಾಖೆ ಪ್ರತಿಪಾದಿಸಿದ 4 ಹೆಸರುಗಳನ್ನು ಡಿಓಪಿಟಿ ಡೇಟಾ ಬೇಸ್‍ನಿಂದಲೇ ತೆಗೆದುಕೊಳ್ಳಲಾಗಿದೆ. ಈ ವಿವರಗಳೆಲ್ಲಾ ಬಹಿರಂಗವಾಗಿ ಎಲ್ಲರಿಗೂ ಲಭ್ಯ ಆಗುವಂತಿವೆ. ನೇಮಕ ವೇಳೆ ಸೀನಿಯಾರಿಟಿ, ನಿವೃತ್ತಿ ವಯಸ್ಸು ಪರಿಗಣಿಸಲಾಗುತ್ತದೆ. ವಯಸ್ಸಿಗೆ ಬದಲಾಗಿ ಬ್ಯಾಚ್ ಆಧಾರವಾಗಿ ಸೀನಿಯಾರಿಟಿ ಪರಿಗಣಿಸಲಾಗಿದೆ. ಸಣ್ಣ ಸಣ್ಣ ವಿಚಾರಗಳನ್ನು ಕೂಡ ಸುಪ್ರೀಂ ಗಮನಿಸುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ನೇಮಕಾತಿ ವಿಚಾರದಲ್ಲಿ ಎಲ್ಲಾ ಅಂಶಗಳನ್ನು ಸುಪ್ರೀಂ ಪರಿಶೀಲಿಸಬೇಕು ಎಂದು ವಾದ ಮಂಡಿಸಿದರು.

    Live Tv
    [brid partner=56869869 player=32851 video=960834 autoplay=true]