Tag: Arumugasamy Commission

  • ಜಯಲಲಿತಾ ಸಾವಿಗೆ ಆಪ್ತೆ ಶಶಿಕಲಾ ಕಾರಣ – ಸರ್ಕಾರಕ್ಕೆ ವರದಿ ಸಲ್ಲಿಕೆ

    ಜಯಲಲಿತಾ ಸಾವಿಗೆ ಆಪ್ತೆ ಶಶಿಕಲಾ ಕಾರಣ – ಸರ್ಕಾರಕ್ಕೆ ವರದಿ ಸಲ್ಲಿಕೆ

    ಚೆನೈ : ತಮಿಳುನಾಡು(Tamilnadu) ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ(Jayalalithaa Death) ಅವರ ಆಪ್ತೆ ವಿ.ಕೆ ಶಶಿಕಲಾ( Sasikala) ಕಾರಣ ಎಂದು ನ್ಯಾ. ಆರುಮುಗಸ್ವಾಮಿ ಆಯೋಗ (Arumugasamy Commission) ಹೇಳಿದೆ.

    ಜೆ ಜಯಲಲಿತಾ ಅವರ ಸಾವಿನ ಕುರಿತಾದ ತನ್ನ 608 ಪುಟಗಳ ವರದಿಯನ್ನು ನ್ಯಾ. ಆರುಮುಗಸ್ವಾಮಿ ಆಯೋಗ ಸಲ್ಲಿಸಿದ ವರದಿ ಇಂದು ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಇದನ್ನೂ ಓದಿ: ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ಸಮಿತಿಯ ಪರಿಶೀಲನೆಯ ಪ್ರಕಾರ ಜಯಲಲಿತಾ ಸಾವು ಪ್ರಕರಣದಲ್ಲಿ ಅವರ ಆಪ್ತ ಸಹಾಯಕಿ ವಿ.ಕೆ ಶಶಿಕಲಾ, ಡಾ ಶಿವಕುಮಾರ್ (ಜಯಲಲಿತಾ ಅವರ ಆಪ್ತ ವೈದ್ಯ ಮತ್ತು ಶಶಿಕಲಾ ಅವರ ಸಂಬಂಧಿ), ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರನ್ನು ತಪ್ಪಿತಸ್ಥರೆಂದು ಗುರುತಿಸಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕೆಂದು ಹೇಳಿದೆ.

    ನ್ಯಾಯಮೂರ್ತಿ ಎ ಆರುಮುಗಸ್ವಾಮಿ ಸಮಿತಿಯೂ ಜಯಲಲಿತಾ ಆಸ್ಪತ್ರೆಗೆ ದಾಖಲಾದ ದಿನದಿಂದ ಅವರಿಗೆ ನೀಡಿದ ಎಲ್ಲಾ ಬಗೆಯ ಚಿಕಿತ್ಸೆಗಳ ಬಗ್ಗೆ ಅಧ್ಯಯನ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸಮಿತಿಯೂ ಈ ಹಿಂದೆ ವರದಿಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. ಇದಾದ ಬಳಿಕ ಕಳೆದ ಆಗಸ್ಟ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಜಯಾ ಸೀಕ್ರೆಟ್: 75 ದಿನವೂ ಅಪೋಲೋ ಆಸ್ಪತ್ರೆಯ ಸಿಸಿಟಿವಿ ಆಫ್ ಆಗಿತ್ತು!

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರು ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ 75 ದಿನವೂ ಅಪೋಲೋ ಆಸ್ಪತ್ರೆಯ ಎಲ್ಲಾ ಸಿಸಿಟಿವಿಗಳೂ ಆಫ್ ಆಗಿತ್ತು ಎಂದು ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರತಾಪ್ ರೆಡ್ಡಿ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾ. ಎ.ಅರ್ಮುಗಂಸ್ವಾಮಿ ಆಯೋಗದ ಮುಂದೆ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು, ಆಯೋಗಕ್ಕೆ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಕ್ಷಮಿಸಿ, ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ 75 ದಿನವೂ ಆಸ್ಪತ್ರೆಯ ಸಿಸಿಟಿವಿ ಸ್ವಿಚ್ ಆಫ್ ಆಗಿತ್ತು. ಜಯಲಲಿತಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಐಸಿಯುವನ್ನೂ ಮುಚ್ಚಿದ್ದೆವು. ಜಯಾ ಆಗಮನಕ್ಕೂ ಆಗಮಿಸಿದ್ದ ರೋಗಿಗಳನ್ನು ಬೇರೆ ಐಸಿಯುವಿಗೆ ವರ್ಗಾಯಿಸಿದೆವು. ಒಟ್ಟು 24 ಕೊಠಡಿಯಿರುವ ಐಸಿಯುವಿನಲ್ಲಿ ಜಯಲಲಿತಾಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೆವು. ಯಾರೂ ಏನೂ ನೋಡಬಾರದು ಎಂದು ಅವರು ಸಿಸಿಟಿವಿಯನ್ನು ಆಫ್ ಮಾಡಿಸಿದ್ದರು. ಜಯಲಲಿತಾ ಭೇಟಿಗೆ ಯಾವುದೇ ಸಂದರ್ಶಕರಿಗೂ ಅವಕಾಶ ನೀಡಿರಲಿಲ್ಲ ಎಂದರು.

    ಜಯಲಲಿತಾರ ಹತ್ತಿರದ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಿದ್ದೆವು. ಜಯಲಲಿತಾ ಸ್ಥಿತಿ ಗಂಭೀರವಾಗಿದ್ದರಿಂದ ನಾವು ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ಭೇಟಿಗೆ ಡ್ಯೂಟಿಯಲ್ಲಿದ್ದ ವೈದ್ಯರ ಅನುಮತಿ ಪಡೆಯಬೇಕಿತ್ತು ಎಂದು ಪ್ರತಾಪ್ ರೆಡ್ಡಿ ಹೇಳಿದರು.

    ವಾರ್ಡ್ ಬಾಯ್ ನಿಂದ ತೊಡಗಿ ನರ್ಸ್‍ಗಳು, ವೈದ್ಯರವರೆಗೆ ಎಲ್ಲರೂ ಜಯಲಲಿತಾರನ್ನು ಚೆನ್ನಾಗಿ ನೋಡಿಕೊಂಡರು. ವಿದೇಶದಿಂದಲೂ ವೈದ್ಯರು ಬಂದಿದ್ದರು. ಜಯಲಲಿತಾ ಗುಣಮುಖರಾಗುತ್ತಾರೆ ಎಂಬ ನಿರೀಕ್ಷೆ ನಮ್ಮದಾಗಿತ್ತು. ಈಗಾಗಲೇ ನಾವು ಆಯೋಗಕ್ಕೆ ಎಲ್ಲಾ ದಾಖಲೆ ಸಲ್ಲಿಸಿದ್ದೇವೆ. ಆಯೋಗವು ನಮಗೆ ಸೂಚಿಸಿದರೆ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುತ್ತೇವೆ ಎಂದರು.