Tag: Artists

  • Anti Drugs Day | ಡ್ರಗ್ಸ್‌ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸಿ – ನಿರ್ಮಾಪಕ ದಿಲ್‌ರಾಜ್

    Anti Drugs Day | ಡ್ರಗ್ಸ್‌ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸಿ – ನಿರ್ಮಾಪಕ ದಿಲ್‌ರಾಜ್

    ತೆಲಂಗಾಣದಲ್ಲೂ ನಟ, ನಟಿಯರು ಕಲಾವಿದರು ಡ್ರಗ್ಸ್ (Drugs) ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸುವ ನಿರ್ಣಯ ಕೈಗೊಳ್ಳುವ ದಿಟ್ಟ ನಿರ್ಧಾರ ಮಾಡಬೇಕು ಎಂದು ನಿರ್ಮಾಪಕ ದಿಲ್‌ರಾಜ್ (Dil Raju) ಒತ್ತಾಯಿಸಿದ್ರು.

    ವಿಶ್ವ ಮಾದಕ ವಸ್ತು ವಿರೋಧಿ ದಿನದ (Anti Drugs Day) ಅಂಗವಾಗಿ ಇಂದು ತೆಲಂಗಾಣ ಸರ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತೆಲುಗು ನಟರಾದ ರಾಮಚರಣ್, ವಿಜಯ ದೇವರಕೊಂಡ, ನಿರ್ಮಾಪಕ ದಿಲ್‌ರಾಜ್, ಗೋಪಿಚಂದ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಇದನ್ನೂ ಓದಿ: ಡ್ರಗ್ಸ್ ಸೇವನೆ: ನಟ ಶ್ರೀಕಾಂತ್ ಬಳಿಕ ಮತ್ತೋರ್ವ ನಟನ ಬಂಧನ

    ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ದಿಲ್‌ರಾಜ್ ಮಲಯಾಳಂ ಸಿನಿಮಾ ರಂಗದಲ್ಲಿ ನಟ, ನಟಿಯರು ಕಲಾವಿದರು ಡ್ರಗ್ಸ್ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸುವ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ತೆಲಂಗಾಣದಲ್ಲೂ ನಟ, ನಟಿಯರು ಕಲಾವಿದರು ಡ್ರಗ್ಸ್ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸುವ ನಿರ್ಣಯ ಕೈಗೊಳ್ಳುವ ದಿಟ್ಟ ನಿರ್ಧಾರ ಮಾಡಬೇಕು ಎಂದು ವೇದಿಕೆಯಲ್ಲೇ ಒತ್ತಾಯಿಸಿದ್ರು. ಇದನ್ನೂ ಓದಿ: ತಲೈವಾ ಭೇಟಿಯಾದ ಧನ್ಯಾ ರಾಮ್‌ಕುಮಾರ್.. ಯಾಕೆ ಗೊತ್ತೇನು ?

    ಇದೇ ವೇಳೆ ಮಾತನಾಡಿದ ರಾಮ್‌ ಚರಣ್ (Ram Charan), ಒಬ್ಬ ತಂದೆಯಾಗಿ, ನೀವು ರಾಜ್ಯ, ನಗರ, ಶಾಲೆಗಳ ಬಗ್ಗೆ ಯೋಚಿಸಬೇಕು. ನಾಳೆ ನಿಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಬಯಸಿದರೆ, ನೀವು ಈ ಎಲ್ಲಾ ವಿಷಯಗಳ ಬಗ್ಗೆ ಯೋಚಿಸಬೇಕು ಎಂದು ಜಾಗೃತಿ ಮೂಡಿಸಿದ್ರು. ಇದನ್ನೂ ಓದಿ: ಕಮಲ್ `ಥಗ್‌ಲೈಫ್’ಗೆ ಗಾಯದ ಮೇಲೆ ಬರೆ, 25 ಲಕ್ಷ ದಂಡ!

    ಡ್ರಗ್ಸ್ ವಿಚಾರದಲ್ಲಿ ಯುವಕರು ಬಹಳ ಜಾಗರೂಕರಾಗಿರಬೇಕು. ಆರೋಗ್ಯ, ಹಣ, ಯಶಸ್ಸು, ಗೌರವ ಒಬ್ಬ ವ್ಯಕ್ತಿಗೆ ಬಹಳ ಮುಖ್ಯ. ಮಾದಕ ವಸ್ತುಗಳು ವ್ಯಕ್ತಿಯಿಂದ ಇವೆಲ್ಲವನ್ನೂ ಕಸಿದುಕೊಳ್ಳುತ್ತವೆ ಎಂದು ನಟ ವಿಜಯ್ ದೇವರಕೊಂಡ (Vijay Deverakonda) ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ರು. ಇದನ್ನೂ ಓದಿ: ಮ್ಯಾನೇಜರ್‌ನಿಂದಲೇ ಬ್ಯಾಂಕ್ ದರೋಡೆಗೆ ಸ್ಕೆಚ್ – 10.5 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ಮೂವರು ಅರೆಸ್ಟ್

  • ‘ಕಾಂತಾರ 1’ರಲ್ಲಿ ನಟಿಸೋಕೆ ಅರ್ಜಿ ಹಾಕಿಕೊಂಡವರು 25 ಸಾವಿರ

    ‘ಕಾಂತಾರ 1’ರಲ್ಲಿ ನಟಿಸೋಕೆ ಅರ್ಜಿ ಹಾಕಿಕೊಂಡವರು 25 ಸಾವಿರ

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಲಿರುವ ಕಾಂತಾರ ಚಾಪ್ಟರ್ 1 (Kantara 1) ಸಿನಿಮಾಗೆ ಕಲಾವಿದರು (Artists) ಬೇಕಾಗಿದ್ದಾರೆ ಎಂದು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿತ್ತು. ಹಲವಾರು ಪಾತ್ರಗಳು ಇರುವುದರಿಂದ ಕಲಾವಿದರ ವಯಸ್ಸನ್ನೂ ನಿಗದಿ ಪಡಿಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಸಾಕಷ್ಟು ರೆಸ್ಪಾನ್ಸ್ ಬಂದಿದೆ. ಚಿತ್ರತಂಡವೇ ಹೇಳಿಕೊಂಡಂತೆ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ.

    ಕಿರಿಕ್ ಪಾರ್ಟಿ ಮಾಡಿದಾಗಲೂ ಆಡಿಷನ್ ಗೆ ಚಿತ್ರತಂಡ ಕಾಲ್ ಮಾಡಿತ್ತು. ಆಗ ಎರಡು ಸಾವಿರಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದರು. ಕಾಂತಾರ 1 ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಜನರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಚಿತ್ರತಂಡವು ಅದನ್ನು ಪರಿಶೀಲಿಸುವ ಕೆಲಸವನ್ನು ನಡೆಸಿದೆ. ಸಾಮಾನ್ಯ ಕಲಾವಿದರು ಮಾತ್ರವಲ್ಲ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಅವಕಾಶ ಕೇಳಿದ್ದಾರೆ ಎನ್ನವುದು ವಿಶೇಷ.

    ಕಾಂತಾರ ಸಿನಿಮಾದಲ್ಲಿ ನಟಿಸೋಕೆ ಆಸೆ ಇರುವುದಾಗಿ ಪಾಯಲ್ ರಜಪೂತ್ (Payal Rajput) ಮತ್ತು ಕನ್ನಡದ ನಟಿ ಕಾರುಣ್ಯ ರಾಮ್ (Karunya Ram) ಕೂಡ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಆಸೆಯನ್ನು ವ್ಯಕ್ತಪಡಿಸಿರುವ ಕಾರುಣ್ಯ ರಾಮ್, ನನಗೂ ಕಾಂತಾರ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ಅವರು ಕೇಳಿಕೊಂಡಿದ್ದರು.

     

    ಕಾಂತಾರ್ ಚಾಪ್ಟರ್ 1ರ ಚಿತ್ರೀಕರಣದ ಸಿದ್ಧತೆ ಭರ್ಜರಿಯಾಗಿಯೇ ನಡೆಯುತ್ತಿದೆ. ಮೊನ್ನೆಯಷ್ಟೇ ಟೀಸರ್ ವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಿಷಬ್ ಕೈಯಲ್ಲಿ ಒಂದು ಕಡೆ ತ್ರಿಶೂಲ ಮತ್ತೊಂದು ಕಡೆ ಪರಶುರಾಮನ ಕೊಡಲಿ (Kodali) ಇತ್ತು. ಈ ಕೊಡಲಿ ಕುತೂಹಲಕ್ಕೂ ಕಾರಣವಾಗಿತ್ತು.

  • 1 ವರ್ಷದ ಬಳಿಕ ಆಫ್ಘನ್‌ನಲ್ಲಿ ಚಿತ್ರಮಂದಿರಗಳು ಓಪನ್ – ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ತಾಲಿಬಾನ್ ನಿರ್ಬಂಧ

    1 ವರ್ಷದ ಬಳಿಕ ಆಫ್ಘನ್‌ನಲ್ಲಿ ಚಿತ್ರಮಂದಿರಗಳು ಓಪನ್ – ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ತಾಲಿಬಾನ್ ನಿರ್ಬಂಧ

    ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಒಂದು ವರ್ಷದ ನಂತರ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಆದರೆ ಚಲನಚಿತ್ರಗಳಲ್ಲಿ ಮಹಿಳಾ ಕಲಾವಿದರ ಪಾತ್ರಗಳಿಗೆ ನಿರ್ಬಂಧ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಒಂದು ವರ್ಷದ ನಂತರ ಆಫ್ಘನ್‌ನಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಕ್ಕಿರುವುದು ಸಿನಿಪ್ರಿಯರು, ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಲ್ಲಿ ಮಂದಹಾಸ ಮೂಡಿಸಿದೆ. ಇದೇ ವೇಳೆ ಮಹಿಳಾ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳವೂ ವ್ಯಕ್ತವಾಗಿದೆ. ಈಗಾಗಲೇ 37 ಚಲನಚಿತ್ರಗಳು ಹಾಗೂ ಸಾಕ್ಷ್ಯಾಚಿತ್ರಗಳು ಪ್ರದರ್ಶನಕ್ಕೆ ಸಜ್ಜಾಗಿವೆ. ಆದರೆ ಇತ್ತೀಚಿಗೆ ನಿರ್ಮಿಸಲಾದ ಚಿತ್ರಗಳಲ್ಲಿ ಮಹಿಳಾ ನಟಿ ಅತಿಫಾ ಮೊಹಮ್ಮದಿ ಮಾತ್ರವೇ ಏಕೈಕ ಮಹಿಳಾ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಿದವರಿಗೆ 5 ಸಾವಿರ ರೂ. ದಂಡ – ಶ್ರೀನಗರ ಕಾಲೇಜು ಆದೇಶ

    ಚಿತ್ರ ನಿರ್ಮಾಣಕ್ಕೆ ಹಣ ನೀಡುವಂತೆ ಮನವಿ: ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕಿರುವುದು ಚಲನಚಿತ್ರ ನಿರ್ಮಾಪಕರಲ್ಲಿ ಉತ್ಸಾಹ ತರಿಸಿದ್ದು, ನಿರ್ಮಿಸುವ ಚಲನಚಿತ್ರಗಳಿಗೆ ಹಣ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ಕೆಲಸವನ್ನು ಸಂತೋಷದಿಂದ ಮಾಡುತ್ತಿದ್ದೇವೆ. ನಮ್ಮ ಪಾಕೆಟ್ ಮನಿಯಿಂದ ಸಿನಿಮಾಕ್ಕೆ ಖರ್ಚು ಮಾಡಿದ್ದೇವೆ. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಹಣ ನೀಡುವಂತೆ ಮನವಿ ಮಾಡಿರುವುದಾಗಿ ಕಲಾವಿದ ಫಯಾಜ್ ಇಫ್ತಿಕರ್ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಮುಖಂಡ ಝಹ್ರಾ ಮುರ್ತಝಾವಿ, ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರನ್ನು ನಿಷೇಧಿಸಬಾರದು. ಏಕೆಂದರೆ ಇದು ಮಹಿಳೆಯರ ಹಕ್ಕು. ಮಹಿಳೆಯರ ಉಪಸ್ಥಿತಿಯಿಲ್ಲದೇ ಚಲನಚಿತ್ರವು ಉತ್ತಮವಾಗಿ ಮೂಡಿಬರುತ್ತದೆ ಎಂದು ನನಗೆ ಅನ್ನಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕಾದ ಸಿಯಾಟಲ್‍ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ

    ತಾಲಿಬಾನ್ ಕಳೆದ ತಿಂಗಳು ಮಹಿಳೆಯರು ಹಾಗೂ ಹುಡುಗಿಯರು ಅಗತ್ಯವಿಲ್ಲದೇ ಮನೆಯಿಂದ ಹೊರಗೆ ಬಾರದಂತೆ ಹಾಗೂ ಮುಖ ತೋರಿಸದಂತೆ ಆದೇಶಿಸಿತ್ತು. ಇದಕ್ಕೂ ಮುನ್ನ ಹೆಣ್ಣುಮಕ್ಕಳಿಗೆ ಮಾಧ್ಯಮಿಕ ಶಿಕ್ಷಣವನ್ನು ನಿಷೇಧಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೂರು ದಿನಗಳ ಕಾಲ ಕಿರುತೆರೆ ಕಲಾವಿದರ ಟೆಲಿವಿಷನ್ ಪ್ರೀಮಿಯರ್ ಲೀಗ್

    ಮೂರು ದಿನಗಳ ಕಾಲ ಕಿರುತೆರೆ ಕಲಾವಿದರ ಟೆಲಿವಿಷನ್ ಪ್ರೀಮಿಯರ್ ಲೀಗ್

    ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್-ಟಿಪಿಎಲ್ ಶುರುವಾಗ್ತಿದ್ದು, ಇದೇ ತಿಂಗಳ 18, 19 ಹಾಗೂ 20 ಈ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ ಕಿರುತೆರೆ ಕಲಾವಿದರು ಭಾಗಿಯಾಗಲಿದ್ದಾರೆ. ಹಿರಿಯ ಕಲಾವಿದರ ಸಹಾಯ ಮಾಡುವುದು ಈ ಟಿಪಿಎಲ್ ನ ಮುಖ್ಯ ಧ್ಯೇಯವಾಗಿದೆ ಎನ್ನುತ್ತಾರೆ ಟಿಪಿಎಲ್ ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್. ಈ ಬಗ್ಗೆ  ಟಿಪಿಎಲ್ ಬಳಗ ಮಾಧ್ಯಮದರೊಟ್ಟಿಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

    ಕ್ರಿಕೆಟ್ ಪಂದ್ಯಾವಳಿಯ ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್ ಮಾತನಾಡಿ, ಒಳ್ಳೆ ಉದ್ದೇಶ ಇಟ್ಕೊಂಡು ಈ ಪಂದ್ಯಾವಳಿ ಏರ್ಪಡಿಸಲಾಗಿದ್ದು. ಆರು ಜನ ಓನರ್ಸ್ ಗೆ ಧನ್ಯವಾದ ತಿಳಿಸುತ್ತೇನೆ. 16ರಂದು ಜರ್ಸಿ ಲಾಂಚ್ ಹಾಗೂ ಟ್ರೋಫಿ ಲಾಂಚ್ ಮಾಡಲಾಗುತ್ತದೆ. 18, 19 ಹಾಗೂ 20 ಈ ಮೂರು ದಿನಗಳ ಕಾಲ ಕ್ರಿಕೆಟ್ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಲೋಕೇಶ್

    ಅಶ್ವ ಸೂರ್ಯ ರೈಡರರ್ಸ್ ತಂಡದ ನಾಯಕ ಮಂಜು ಪಾವಗಡ ಮಾತನಾಡಿ, ಒಂದೊಳ್ಳೆ ತಂಡಗಳು ಸೇರಿಕೊಂಡು ಕ್ರಿಕೆಟ್ ಆಡ್ತಿದ್ದು, ಪ್ರತಿ ತಂಡಕ್ಕೂ ಓನರ್ ಗಳು ಬೆಂಬಲವಾಗಿ ನಿಂತಿದ್ದಾರೆ ಎಂದರು.  ದಿ ಬುಲ್ ಸ್ಕ್ವಾಡ್, ಭಜರಂಗಿ ಬುಲ್ಸ್, ಎಂಜೆಲ್ ಎಸ್ಐ, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ ಗಳಿರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್ಟ್ ಗ್ಯಾಲರಿಗೆ ವಿದ್ಯುತ್ ನೀಡದೆ ವಂಚನೆ – ಉರುಳು ಸೇವೆ ಮಾಡಲು ಮುಂದಾದ ಚಿತ್ರ ಕಲಾವಿದ

    ಆರ್ಟ್ ಗ್ಯಾಲರಿಗೆ ವಿದ್ಯುತ್ ನೀಡದೆ ವಂಚನೆ – ಉರುಳು ಸೇವೆ ಮಾಡಲು ಮುಂದಾದ ಚಿತ್ರ ಕಲಾವಿದ

    ಮಡಿಕೇರಿ: ಆರ್ಟ್ ಗ್ಯಾಲರಿಗೆ ವಿದ್ಯುತ್ ನೀಡದೆ ನಗರಸಭೆಯ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಮಡಿಕೇರಿ ನಗರದ ಚಿತ್ರ ಕಲಾವಿದ ಸಂದೀಪ್ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.

    ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ನಗರದಲ್ಲಿ ಆರ್ಟ್ ಗ್ಯಾಲರಿ ಸ್ಥಾಪಿಸಬೇಕೆಂದು ಸಂದೀಪ್ ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಸೂಕ್ತ ಸ್ಪಂದನೆ ಸಿಗದ ಕಾರಣ ತಾವೇ ಆಸಕ್ತಿ ವಹಿಸಿ ತಮ್ಮ ಮನೆಯ ಸಣ್ಣದೊಂದು ಕೋಣೆಯಲ್ಲಿ ಆರ್ಟ್ ಗ್ಯಾಲರಿಯನ್ನು ಆರಂಭಿಸಿದರು. ಆದರೆ ಈ ಆರ್ಟ್ ಗ್ಯಾಲರಿಗೆ ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಇಂದು ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಉರುಳು ಸೇವೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು

    ಇಂದು ಜನರಲ್ ತಿಮ್ಮಯ್ಯ ವೃತ್ತದಿಂದ ಉರುಳು ಸೇವೆ ಆರಂಭಿಸುತ್ತಿದ್ದಂತೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಮಡಿಕೇರಿ ಪೊಲೀಸರು ಸಂದೀಪ್‍ರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸದಿದ್ದರೆ ಎಲ್ಲಾ ಧರ್ಮಗಳ ಆಚರಣೆಗೂ ಕುತ್ತು: ಅಮಿನ್ ಮೊಹಿನ್ಸಿನ್

     

  • ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿತ- ಸಂಕಷ್ಟದಲ್ಲಿ ಕಲಾಕಾರರು

    ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿತ- ಸಂಕಷ್ಟದಲ್ಲಿ ಕಲಾಕಾರರು

    – ಆರ್ಥಿಕ ನೆರವು ನೀಡುವಂತೆ ಮನವಿ

    ಕಾರವಾರ: ಗಣೇಶ ಹಬ್ಬ ಹತ್ತಿರ ಬರುತ್ತಿದ್ದು, ಕೊರೊನಾ ಕಾರಣದಿಂದ ಗಣೇಶನ ಮೂರ್ತಿಯನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಮೂರ್ತಿಯನ್ನು ತಯಾರು ಮಾಡುವವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಎಲ್ಲಾ ಉದ್ಯಮಗಳ ಮೇಲೆ ಆರ್ಥಿಕ ಬಿಕ್ಕಟ್ಟನ್ನು ತಂದೊಡ್ಡಿದೆ. ಇದೀಗ ವಿಘ್ನ ನಿವಾರಕ ಗಣಪತಿ ಮೂರ್ತಿ ಕೆಲಸಗಾರರಿಗೂ ಸಂಕಷ್ಟ ಎದುರಾಗಿದ್ದು, ಈ ಬಾರಿ ಗಣಪತಿ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ. ಇದನ್ನೂ ಓದಿ:ತಂದೆ ಸಮಾಧಿ ಬಳಿ ಬಾಲಕಿ ಹುಟ್ಟುಹಬ್ಬ ಆಚರಣೆ

    ಗೊಂದಲದಲ್ಲಿ ಸರ್ಕಾರ: ಕೊರೊನಾ ಮೂರನೇ ಅಲೆಯಿಂದಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಯಾವ ರೀತಿ ಅನುಮತಿ ನೀಡಬೇಕು ಎಂಬ ಗೊಂದಲದಲ್ಲಿದೆ. ಸೆ.5ರಂದು ಈ ಕುರಿತು ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ತೀರ್ಮಾನ ಸಹ ಕೈಗೊಳ್ಳಲಿದೆ. ಆದರೆ ಹಲವು ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಾಗಿದ್ದು, ಸಾರ್ವಜನಿಕ ಉತ್ಸವ ನಡೆಸಲು ಅನುಮತಿ ನಿರಾಕರಿಸಲಾಗುತ್ತಿದೆ.

    ಈ ಬಾರಿ ಬೇಡಿಕೆಯಲ್ಲಿ ಇಳಿಮುಖ: 

    ಮಣ್ಣಿನಿಂದ ಗಣಪತಿ ಮೂರ್ತಿ ತಯಾರಿಕೆಯ ಬೇಡಿಕೆ ಇಳಿಯುತ್ತಿದ್ದು, ಇದರ ಪರಿಣಾಮ ಮೂರ್ತಿ ತಯಾರಕರ ಮೇಲೆ ಆಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಚತುರ್ಥಿಗೆ ಇರುತಿದ್ದ ಮೂರ್ತಿಗಳ ಬೇಡಿಕೆ ದೊಡ್ಡ ಮಟ್ಟದಲ್ಲಿ ಇಳಿದಿದೆ. ಕಾರವಾರ ತಾಲೂಕಿನಲ್ಲೇ 50ಕ್ಕೂ ಹೆಚ್ಚು ಗಣಪತಿ ಮೂರ್ತಿ ತಯಾರಕರಿದ್ದಾರೆ. ಜಿಲ್ಲೆಯಲ್ಲಿ ಇದರ ಸಂಖ್ಯೆ ಸಾವಿರ ದಾಟುತ್ತದೆ. ಇದನ್ನೂ ಓದಿ:ತಂದಿಟ್ಟು ತಮಾಷೆ ನೋಡೋದಕ್ಕೆ ಹೇಳಿರ್ತಾರೆ – ಉಮಾಪತಿ ಬಳಿ ಕ್ಷಮೆ ಕೇಳಿದ್ದ ಭೂಗತ ಪಾತಕಿ ರವಿ

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮೂರು ತಲೆಮಾರಿನಿಂದ ಗಣಪತಿ ತಯಾರಿಸುತ್ತಿರುವ ವಿನಾಯಕ್ ಬಾಂದೇಕರ್, ಈ ಬಾರಿಯ ಕೊರೊನಾದಿಂದ ಸಂಘ ಸಂಸ್ಥೆಗಳು ಮೂರ್ತಿ ತಯಾರು ಮಾಡಲು ಆರ್ಡರ್ ನೀಡುತ್ತಿದ್ದರು. ಇನ್ನೂ ಅಂಗಡಿಯಲ್ಲಿ ಮಾರಾಟ ಮಾಡುವವರು ಸಹ ಮೂರ್ತಿ ತಯಾರಿಕೆಗೆ ಈ ಬಾರಿ ಕಡಿಮೆ ಸಂಖ್ಯೆಯ ಆರ್ಡರ್ ನೀಡಿದ್ದಾರೆ. ಜನರಿಂದಲೂ ಕೂಡ ಆರ್ಡರ್ ಬರುವುದು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗೆ ನಿರ್ಬಂಧವಾಗಿದ್ದು, ಈ ಮಳೆಯ ಹಾನಿಯಿಂದ ಕುಂಬಾರಮಣ್ಣಿನ ಬೇಡಿಕೆ ಇದ್ದರೂ ತಯಾರಿಕೆಗೆ ಬೇಕಾದ ಮಣ್ಣು ಸಿಗುತ್ತಿಲ್ಲ. ಹೀಗಾಗಿ ದುಪ್ಪಟ್ಟು ಹಣ ನೀಡಿ ಮಣ್ಣನ್ನು ಖರೀದಿಸಬೇಕಿದ್ದು, ನಾವು ಮಾಡಿದ ಕೆಲಸಕ್ಕೆ ಸೂಕ್ತ ಹಣ ದೊರಕದೇ ಇತ್ತ ಕೆಲಸವನ್ನು ಸಹ ಬಿಡಲಾಗದ ಸ್ಥಿತಿಗೆ ಕಲಾವಿದರು ಸಿಲುಕಿದ್ದಾರೆ. ಇದನ್ನೂ ಓದಿ:ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

    ಈ ಹಿಂದೆ ಒಂದು ಚಿಕ್ಕ ಗಣಪತಿಗೆ ಮೂರ್ತಿಗೆ 1,000 ರೂ. ದಿಂದ ಆಕೃತಿಗೆ ಅನುಸಾರವಾಗಿ 5,000 ರೂ ಇರುತಿತ್ತು. ಇನ್ನು ದೊಡ್ಡ ಗಣಪತಿಗೆ ಐವತ್ತು ಸಾವಿರದಿಂದ ಎರಡು ಲಕ್ಷ ರೂ. ವರೆಗೆ ಆಕಾರದ ಮೇಲೆ ದರ ನಿಗದಿಯಾಗುತಿತ್ತು. ಆದರೇ ಇದೀಗ ದರವು ಅರ್ಧದಷ್ಟು ಇಳಿದಿದೆ. ಜೊತೆಗೆ ಬೇಡಿಕೆಯು ಸಹ ಇಳಿದಿದೆ.

    ಆರ್ಥಿಕ ಬೆಂಬಲ ನೀಡಬೇಕು: ಜಿಲ್ಲೆಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಟಾಪನೆ ಅಭಿಯಾನ ಸಹ ನಡೆಯುತ್ತಿದೆ. ಹೀಗಾಗಿ ಜನರು ಖರ್ಚು ರಹಿತ ಹಾಗೂ ಪರಿಸರ ಸ್ನೇಹಿ ಗಣಪತಿಯತ್ತ ಮುಖ ಮಾಡಿದ್ದಾರೆ. ಕೇವಲ ಮೂರು ತಿಂಗಳುಗಳ ವ್ಯವಹಾರ ನಡೆಸುವ ಕಲಾವಿದರಿಗೆ ಇದೇ ಆರ್ಥಿಕ ಮೂಲ ಕೂಡ. ಹೀಗಾಗಿ ಕಾರ್ಮಿಕರಿಗೆ ನೀಡಿದಂತೆ ರಾಜ್ಯ ಸರ್ಕಾರ ಈ ವೃತ್ತಿಯವರಿಗೆ ಆರ್ಥಿಕ ಬೆಂಬಲ ನೀಡಬೇಕು ಎಂಬುದು ಕಲಾಕಾರರ ಬೇಡಿಕೆಯಾಗಿದೆ. ಇದನ್ನೂ ಓದಿ:ತಾಲಿಬಾನ್ ಸರ್ಕಾರ ರಚನೆಗೆ ಸಂತೋಷ ವ್ಯಕ್ತಪಡಿಸೋದು ಅನಾಗರೀಕತೆ: ನಾಸಿರುದ್ದೀನ್ ಶಾ

    ಕೊರೊನಾ ಮೂರನೇ ಅಲೆಯಿಂದಾಗಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸುವ ಕುರಿತು ಸೂಕ್ತ ನಿರ್ಧಾರಕ್ಕೆ ಬಾರದೇ ವಿಘ್ನ ನಿವಾರಕ ಗಣಪತಿಗೂ ವಿಘ್ನ ತಂದೊಡ್ಡಿದೆ. ಇದರ ಜೊತೆಗೆ ಕುಂಬಾರು ಮಣ್ಣಿನ ಗಣಪತಿ ತಯಾರಿಕೆಯನ್ನು ನಂಬಿದ ಕಲಾವಿದರಿಗೂ ಸಹ ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದಾರೆ.

  • ಸೋಮಣ್ಣ ಪ್ರತಿಷ್ಠಾನದಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

    ಸೋಮಣ್ಣ ಪ್ರತಿಷ್ಠಾನದಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

    ಬೆಂಗಳೂರು: ನಾಡಪ್ರಭು ಕೆಂಪೇಗೌಡ 512ನೇ ಜಯಂತಿ ಪ್ರಯುಕ್ತ, ಚಲನಚಿತ್ರ ಕಲಾವಿದರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಸೋಮಣ್ಣ ಪ್ರತಿಷ್ಠಾನ ವತಿಯಿಂದ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.

    ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಗೋವಿಂದರಾಜನಗರ ವಾರ್ಡ್ ಪಾಲಿಕೆ ಸೌಧ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮಣ್ಣ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಚಿಂತನೆಯಿಂದ ಬೆಂಗಳೂರು ನಗರ ನಿರ್ಮಾಣ ಮಾಡಿದರು. ಜಾತ್ಯಾತೀತ ನಿಲುವು ಹೊಂದಿದ್ದು, ಎಲ್ಲ ಕಾಯಕ ಸಮಾಜಗಳಾದ ನೇಕಾರ, ಮಂಡಿ ವ್ಯಾಪಾರಿ, ಕುಂಬಾರಿಕೆ ವಿವಿಧ ಕುಶಲಕರ್ಮಿ ಕೆಲಸಗಾರರಿಗೆ ಪೇಟೆಗಳ ನಿರ್ಮಾಣ ಮಾಡಿ, ಉದ್ಯಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು. ಕಾಯಕಯೋಗಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ನಿಲುವಿನ ಪ್ರತಿಪಾದಕರು ಎಂದರು.

    ನಿವೇಶನ ಇಲ್ಲದಿರುವ ಚಲನಚಿತ್ರ ಕಲಾವಿದರು ಮತ್ತು ರಂಗಭೂಮಿ ಕಲಾವಿದರುಗಳು ಪಟ್ಟಿ ಮಾಡಿ ಅರ್ಜಿ ಕೊಟ್ಟರೆ ಕೂಡಲೇ ಮುಖ್ಯಮಂತ್ರಿಗಳ ಹತ್ತಿರ ಚರ್ಚಿಸಿ ಒಂದೂವರೆ ತಿಂಗಳಲ್ಲಿ ವಸತಿ ಅಥವಾ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

    ನಂತರ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಮಾತನಾಡಿ, ಬೆಂಗಳೂರು ನಗರ ವಿಶ್ವವಿಖ್ಯಾತಿ ಪಡೆಯಲು ಮೂಲ ಕಾರಣ ನಾಡಪ್ರಭು ಕೆಂಪೇಗೌಡರು. ಅವರ ಅಭಿವೃದ್ಧಿ ಪರ ಚಿಂತನೆ, ಯೋಜನೆಗಳು ಜಾರಿಗೆ ಬಂದರೆ ಬೆಂಗಳೂರು ನಗರ ಇನ್ನಷ್ಟು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ನಿಂದ ಮುಕ್ತರಾದ್ರೆ ಸಚಿವರಾಗ್ತಾರೆ: ಜೆ.ಸಿ.ಮಾಧುಸ್ವಾಮಿ

  • ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    – ತಲಾ 5 ಸಾವಿರ ನೀಡುವುದಾಗಿ ಘೋಷಿಸಿದ ರಾಕಿ ಭಾಯ್

    ಬೆಂಗಳೂರು: ಕೊರೊನಾ 2ನೇ ಅಲೆ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿದೆ. ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಭಾರೀ ನಷ್ಟವಾಗಿದ್ದು, ಬಡ ಕಲಾವಿದರು, ಕಾರ್ಮಿಕರು ತುತ್ತು ಅನ್ನಕ್ಕೂ ಗತಿ ಪರಿತಪಿಸುತ್ತಿದ್ದಾರೆ. ಅದೇ ರೀತಿ ಹಲವು ಕಲಾವಿದರು ಸಹಾಯವನ್ನು ಸಹ ಮಾಡುತ್ತಿದ್ದಾರೆ. ಇದೀಗ ನಟ ಯಶ್ ಸಹ ಇನ್ನೂ ಒಂದು ಹೆಜ್ಜೆ ಮುಂದೆ ಬಂದು ಬಡ ಕಲಾವಿದರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    ಈ ಕುರಿತು ಟ್ವಿಟ್ಟರ್ ಮೂಲಕ ಪತ್ರವನ್ನು ಬಿಡುಗಡೆಗೊಳಿಸಿರುವ ಯಶ್, ಸುಮಾರು 3 ಸಾವಿರಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ. ಗಳನ್ನು ತಮ್ಮ ಸಂಪಾದನೆಯಿಂದ ನೀಡುವುದಾಗಿ ಘೋಷಿಸಿದ್ದಾರೆ.

    ಈ ಕುರಿತು ಪತ್ರ ಬಿಡುಗಡೆ ಮಾಡಿರುವ ಅವರು, ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಡಿಮೆ ಬುಡಮೇಲು ಮಾಡಿದೆ. ಅದರಲ್ಲೂ ಕಳೆದ ಒಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ ಎಂದಿದ್ದಾರೆ.

    ಸುಮಾರು 3 ಸಾವಿರಕ್ಕೂ ಹೆಚ್ಚಿನ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ.ಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

    ನಮ್ಮ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

  • ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    – ಆದ್ಯತಾ ಗುಂಪಿನಲ್ಲಿ ಕಲಾವಿದರಿಗೂ ಲಸಿಕೆ
    – ವೈಯಕ್ತಿಕವಾಗಿ ಸಹ ಧನ ಸಹಾಯ

    ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

    ಚಿತ್ರರಂಗದ ಪೋಷಕ ಕಲಾವಿದರಿಗೆ ಭರತ್‍ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್ ಕಿಟ್ ವಿತರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಬಹುದು. ತಕ್ಷಣವೇ ಅಂಥ ಕಲಾವಿದರಿಗೆ ಕಡಿಮೆ ದರದಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದರು.

    ಇತ್ತೀಚೆಗೆ ಪ್ರಕಟಿಸಲಾದ ಪ್ಯಾಕೇಜ್‍ನಲ್ಲಿ ಕಲಾವಿದರಿಗೆ 3,000 ಕೊಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಚಿತ್ರರಂಗದ ಪೋಷಕ ಕಲಾವಿದರೂ ಸೇರಿದ್ದಾರಾ ಇಲ್ಲವಾ ಎಂಬ ಬಗ್ಗೆ ಗೊಂದಲವಿದೆ. ಚಿತ್ರರಂಗದ ಕಲಾವಿದರಿಗೂ ಆ ಹಣ ಸಿಗುವ ಬಗ್ಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕ್ರಮ ವಹಿಸುವ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

    ಪೋಷಕ ಕಲಾವಿದರನ್ನು ಆದ್ಯತೆಯ ಗುಂಪು ಎಂದು ಪರಿಗಣಿಸಿ ಅವರಿಗೂ ವ್ಯಾಕ್ಸಿನೇಷನ್ ನೀಡಲಾಗುವುದು. ಈ ಬಗ್ಗೆ ಕಲಾವಿದರ ಪಟ್ಟಿ ನೀಡುವಂತೆ ಕೇಳಲಾಗಿದೆ. ಅಲ್ಲದೆ ಈ ಫುಡ್ ಕಿಟ್ ಪಡೆಯುತ್ತಿರುವ ಎಲ್ಲ ಕಲಾವಿದರಿಗೆ ವೈಯಕ್ತಿಕವಾಗಿ ತಲಾ 1,000 ರೂ. ಚೆಕ್ ನೀಡುವುದಾಗಿ ಇದೇ ವೇಳೆ ಡಿಸಿಎಂ ಹೇಳಿದರು.

    ಸಾವಿನ ಲೆಕ್ಕ ಮುಚ್ಚಿಡುತ್ತಿಲ್ಲ
    ಸರ್ಕಾರ ಕೋವಿಡ್ ಸಾವಿನ ಲೆಕ್ಕವನ್ನು ಮುಚ್ಚಿಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಅರೋಪ ಅಸತ್ಯದಿಂದ ಕೂಡಿದೆ. ಪ್ರತಿ ಸೋಂಕಿತನ ಬಗ್ಗೆಯೂ ಮಾಹಿತಿ ಇದೆ. ಯಾರಾದರೂ ಸಾವನ್ನಪ್ಪಿದರೆ ಆ ಮಾಹಿತಿಯೂ ವಿವಿಧ ಹಂತಗಳಲ್ಲಿ ದಾಖಲಾಗುತ್ತಿದೆ. ಇದೆಲ್ಲವನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ಅವರು ಮಾಡಿರುವ ಆರೋಪದಲ್ಲಿ ಹುರಳಿಲ್ಲ. ಜನರಲ್ಲಿ ಗೊಂದಲ ಉಂಟು ಮಾಡುವುದು ಬೇಡ ಎಂದು ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

    ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಲಸಿಕೆ ಅಭಾವ ಇದೆ ಎನ್ನುವುದು ನಿಜ. ಆದರೆ ಸರ್ಕಾರ ಉತ್ಪಾದಕರಿಂದ ಲಸಿಕೆ ಪಡೆದು ಜನರಿಗೆ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಹಂತ ಹಂತವಾಗಿ ಲಭ್ಯವಾಗುತ್ತಿರುವ ಲಸಿಕೆಯನ್ನು ಆಗಿಂದಾಗ್ಗೆ ಕೊಡಲಾಗುತ್ತಿದೆ. ಆದ್ಯತೆಯ ಮೇರೆಗೆ ಯಾರಿಗೆ ಕೋಡಬೇಕೋ ಅವರಿಗೆ ಕೊಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಮೀಸೆ ಅಂಜನಪ್ಪ, ಉಮೇಶ್ ಹೆಗಡೆ, ಡಿಂಗ್ರಿ ನಾಗರಾಜ್, ಸಿತಾರಾ ಹಾಗೂ ಟ್ರಸ್ಟ್‍ನ ಭರತ್ ಗೌಡ, ನಟರಾದ ಗಣೇಶ್ ರಾವ್ ಕೆಸರ್ಕಾರ್, ಕೆಂಪೇಗೌಡ ಫುಡ್ ಕಿಟ್ ವ್ಯವಸ್ಥೆ ಮಾಡಿದ್ದರು. ಡಿಸಿಎಂ ಅವರು ಸಾಂಕೇತಿಕವಾಗಿ 30 ಕಲಾವಿದರಿಗೆ ಕಿಟ್ ವಿತರಣೆ ಮಾಡಿದ್ದು, ಉಳಿದ 200 ಕಿಟ್‍ಗಳನ್ನು ಕಲಾವಿದರ ಮನೆಗೆ ತಲುಪಿಸಲಾಗುವುದು ಎಂದು ಭರತ್ ಗೌಡ ಮಾಹಿತಿ ನೀಡಿದರು.

  • ನಮ್ಮ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ರೆ ಬೇರಾರು ನಿಲ್ತಾರೆ?: ಸುದೀಪ್

    ನಮ್ಮ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ರೆ ಬೇರಾರು ನಿಲ್ತಾರೆ?: ಸುದೀಪ್

    – ಸರ್ಕಾರಕ್ಕೆ ಕಿಚ್ಚನ ಮನವಿ

    ಬೆಂಗಳೂರು: ಕೊರೊನಾದಿಂದಾಗಿ ರದ್ದಾಗಿರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವಂತೆ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಲಾವಿದರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ನಟ ಕಿಚ್ಚ ಸುದೀಪ್, ಸರ್ಕಾರಕ್ಕೆ ಮನವಿ ಸಹ ಮಾಡಿಕೊಂಡಿದ್ದಾರೆ.

    ನಾನು ಪ್ರತಿಭಟನಾ ನಿರತ ವಾದ್ಯಗೋಷ್ಠಿ ಕಲಾವಿದರ ಜೊತೆಗಿದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನ ಈ ವಿಷಯವಾಗಿ ಗಮನ ಹರಿಸಲು ಮತ್ತು ನಿಮ್ಮಿಂದಾಗುವ ನೆರವನ್ನ ನೀಡಲು ವಿನಂತಿಸುವೆ. ಹಾಗೆ ಈ ಕಲಾವಿದರ ಪರವಾಗಿ ಸರ್ಕಾರ ಸಹ ಪೂರಕ ಕ್ರಮಗಳನ್ನ ಕೈಗೊಳ್ಳಲು ಕೋರುತ್ತೇನೆ. ಏಕೆದಂರೆ ದೂರದರ್ಶನವಿಲ್ಲದ ಕಾಲದಿಂದಲೂ ನಮ್ಮನ್ನ ರಂಜಿಸುತ್ತಿರುವ ಕಲಾ ಬಳಗವನ್ನ ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿದ್ದೇನೆ. ನಮ್ಮ ಈ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ರೆ ಬೇರಾರು ನಿಲ್ಲುತ್ತಾರೆ ಅಲ್ಲವೇ ಎಂದಿದ್ದಾರೆ.

    ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಲಾವಿದರು, ಜಾತ್ರೆ, ಉತ್ಸವ, ರಾಜ್ಯೋತ್ಸವ ನಡೆಸಲು ಪ್ರೋತ್ಸಾಹ ನೀಡಬೇಕು. ವಾದ್ಯಗೋಷ್ಠಿ ಕಲಾವಿದರಿಗೆ 5 ಸಾವಿರ ರೂಪಾಯಿ ಆರ್ಥಿಕ ಸಹಾಯದ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯ ನೀಡಬೇಕು. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ನಮಗೂ ಕೊಡಬೇಕು ಎಂದು ಪ್ರತಿಭಟನಾ ನಿರತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.