Tag: Artillery

  • ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿಯಿಂದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ – ಹೊವಿಟ್ಜರ್ ವಿಶೇಷತೆ ಏನು?

    ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿಯಿಂದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ – ಹೊವಿಟ್ಜರ್ ವಿಶೇಷತೆ ಏನು?

    ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಕೆಂಪು ಕೋಟೆಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ವೇಳೆ ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾದ ಎರಡು ‘ಹೊವಿಟ್ಜರ್’ ಫಿರಂಗಿಗಳಿಂದ ’21 ಗನ್ ಸೆಲ್ಯೂಟ್’ ಮಾಡಲಾಯಿತು.

    ಈ ಫಿರಂಗಿಯನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ), ಶಸ್ತ್ರಾಸ್ತ್ರ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಎಆರ್‌ಡಿಇ) ನೇತೃತ್ವದ ವಿಜ್ಞಾನಿಗಳು ಹಾಗೂ ಫಿರಂಗಿ ಅಧಿಕಾರಿಗಳ ತಂಡ ತಯಾರಿಸಿದೆ.

    ಕಳೆದ ವರ್ಷದವರೆಗೆ 21 ಗನ್ ಸೆಲ್ಯೂಟ್ ಅನ್ನು ಬ್ರಿಟಿಷ್ ನಿರ್ಮಿತ 7 ವಿಂಟೇಜ್ 25 ಪೌಂಡರ್ ಗನ್ ಬಳಸಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಮೊದಲ ಸಲ ಭಾರತದಲ್ಲೇ ತಯಾರಾದ 2 ಹೋವಿಟ್ಜರ್ ಗನ್‌ಗಳನ್ನು ಬಳಸಲಾಗಿದೆ.

    ಏನಿದರ ವಿಶೇಷತೆ?
    ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್(ಎಟಿಎಜಿಎಸ್) ಎಂದೂ ಕರೆಯಲಾಗುವ ಫಿರಂಗಿ, ವಿಶ್ವದ ಲಾಗ್ ರೇಂಜ್ ಫಿರಂಗಿಗಳಲ್ಲಿ ಒಂದಾಗಿದೆ. ಲಾಂಗ್ ರೇಂಜ್ ಫಿರಂಗಿಗಳಿಗೆ ಸಾಮಾನ್ಯವಾಗಿ ಹೋವಿಟ್ಜರ್ ಎಂದೇ ಕರೆಯಲಾಗುತ್ತದೆ. ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನವು ಯಶಸ್ಸನ್ನು ಪಡೆದಿದೆ: ರಾಜ್ಯಪಾಲ

    ಈ ಬಗ್ಗೆ ವಿವರಿಸಿದ ಡಿಆರ್‌ಡಿಒ ಸಂಪನ್ಮೂಲ ಹಾಗೂ ನಿರ್ವಾಹಕ ಸಂಗಮ್ ಸಿನ್ಹಾ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಬಳಸಲಾಗಿರುವ ಫಿರಂಗಿ ಭಾರತಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಇದು ವಿಶ್ವದ ಅತಿ ಉದ್ದ ಶ್ರೇಣಿಯ ಫಿರಂಗಿಯಾಗಿದ್ದು, 45 ರಿಂದ 48 ಕಿ.ಮೀ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.

    ಮೊದಲ ಬಾರಿಗೆ ಇದನ್ನು ಭಾರತದಲ್ಲಿಯೇ ತಯಾರಿಸಲಾಗಿರುವುದು ದೊಡ್ಡ ವಿಚಾರ. ಸ್ವದೇಶೀ ಫಿರಂಗಿಯನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ 21 ಗನ್ ಸೆಲ್ಯೂಟ್‌ಗಾಗಿ ಬಳಸಲಾಗುತ್ತಿದೆ. ಇದನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದುಇದು ಭಾರತೀಯ ಸೇನೆಗೆ ದೊಡ್ಡ ಬಲ ನೀಡಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಅಜಾದಿ ಗೌರವ್ ಯಾತ್ರೆ

    Live Tv
    [brid partner=56869869 player=32851 video=960834 autoplay=true]

  • ಜಾನುವಾರುಗಳನ್ನು ತಪ್ಪಿಸಲು ಹೋಗಿ ಪೊಲೀಸ್‌ ವಾಹನ ಪಲ್ಟಿ

    ಜಾನುವಾರುಗಳನ್ನು ತಪ್ಪಿಸಲು ಹೋಗಿ ಪೊಲೀಸ್‌ ವಾಹನ ಪಲ್ಟಿ

    ಯಾದಗಿರಿ: ಜಾನುವಾರುಗಳ ಮೇಲಾಗುವ ಅಪಘಾತ ತಪ್ಪಿಸಲು ಹೋಗಿ ಪೊಲೀಸ್‌ ವಾಹನವೇ ಪಲ್ಟಿ ಹೊಡೆದ ಘಟನೆ ವಡಗೇರಾ ತಾಲೂಕಿನ ಖಾನಾಪುರ ಬಳಿ ನಡೆದಿದೆ.

    ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಕಲಬುರಗಿಯ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪಿಐ ಪಂಚಾಕ್ಷರಯ್ಯ, ಪೊಲೀಸ್‌ ಪೇದೆ ಪ್ರಶಾಂತ ಹಾಗೂ ಚಾಲಕ ಶ್ರೀಶೈಲ್ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬುಧವಾರ ರಾತ್ರಿ ಕೋರ್ಟ್ ಕೆಲಸ ಮುಗಿಸಿಕೊಂಡು ಬೊಲೆರೊ ಪೊಲೀಸ್‌ ವಾಹನದಲ್ಲಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಕಲಬುರಗಿಗೆ ತೆರಳುತ್ತಿದ್ದರು. ಖಾನಾಪುರ ಸಮೀಪದಲ್ಲಿ ಜಾನುವಾರುಗಳಿಗೆ ಬೊಲೆರೊ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಶ್ರೀಶೈಲ್ ಪ್ರಯತ್ನಿಸಿದರು. ಆದರೆ ಬೊಲೆರೊ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಅದರಲ್ಲಿದ್ದ ಮೂವರಿಗೂ ಗಾಯಗಳಾಗಿವೆ.

    ಈ ಘಟನೆ ವಡಗೇರಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

    ಕಚೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಐನೂರರಿಂದ ಸಾವಿರ ರೂಪಾಯಿ ನೀಡಲೇ ಬೇಕು. ಹಣ ಕೊಟ್ಟರೆ ಬೇಗ ಕೆಲಸವಾಗುತ್ತದೆ. ಹಣ ನೀಡದಿದ್ದರೆ ಸಿಬ್ಬಂದಿ ಅಲೆದಾಡಿಸುತ್ತಾರಂತೆ. ಇದಕ್ಕೆ ಸಾಕ್ಷಿಯೆನ್ನುವಂತೆ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಕೆಲ ಸಿಬ್ಬಂದಿ ಹಣ ತಗೆದುಕೊಂಡು ಕೀ ಪ್ಯಾಡ್ ಕೆಳಗೆ ಇಡುತ್ತಿರುವ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮನೆ, ಆಸ್ತಿ ಖರೀದಿ ಸೇರಿದಂತೆ ನೊಂದಣಿ ಮಾಡಿಸಲು ಬಂದವರಿಂದ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಈ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

  • ರೌಡಿಗಳಿಗೆ ಹೇರ್ ಕಟ್ ಮಾಡಿಸಿದ ಪೊಲೀಸರು

    ರೌಡಿಗಳಿಗೆ ಹೇರ್ ಕಟ್ ಮಾಡಿಸಿದ ಪೊಲೀಸರು

    ಕಲಬುರಗಿ: ಉದ್ದುದ್ದ ಕೂದಲು ಬಿಟ್ಟು ಜನರಿಗೆ ಭೀಕರ ಲುಕ್ ಕೊಡುತ್ತಿದ್ದ ರೌಡಿಗಳಿಗೆ ಕಲಬುರಗಿ ಪೊಲೀಸರು ಹೇರ್ ಕಟ್ ಮಾಡಿಸಿದ್ದಾರೆ.

    ಕಲಬುರುಗಿ ಜಿಲ್ಲೆ ಹಾಗೂ ತಾಲೂಕು ಪೊಲೀಸ್ ಠಾಣೆಗಳಲ್ಲಿ ಇಂದು ಏಕಕಾಲದಲ್ಲಿ ರೌಡಿ ಪರೇಡ್ ನಡೆಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರ, ಆಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 900 ರೌಡಿಗಳು ಈ ಪರೇಡ್‍ಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿತ್ತು.

    ಪರೇಡ್ ನಲ್ಲಿ ಭಾಗವಹಿಸಿದ್ದ ಹಲವು ರೌಡಿಗಳು ಚಿತ್ರ ವಿಚಿತ್ರವಾಗಿ ಉದ್ದ ಕೂದಲು ಬಿಟ್ಟಿದ್ದರು. ಇದನ್ನು ಕಂಡ ಎಸ್ಪಿ ಎನ್. ಶಶಿಕುಮಾರ್ ಸ್ಥಳದಲ್ಲೇ ಹೇರ್ ಕಟ್ ಮಾಡಿಸಿ ಅಪರಾಧ ಚಟುವಟಿಕೆಗಲ್ಲಿ ಭಾಗಿಯಾದಂತೆ ಎಚ್ಚರಿಕೆ ನೀಡಿದ್ದಾರೆ.

    ನವೆಂಬರ್ 10 ರಂದು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸುವ ಸಲುವಾಗಿ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ರೌಡಿ ಪರೇಡ್ ನಡೆಸಲಾಗಿದೆ. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆಯಲ್ಲಿ ಕಲಬುರುಗಿಯ ಅಪಜಲ್‍ಪುರ ಪ್ರದೇಶದಲ್ಲಿ ಗಲಾಟೆ ಸಂಭವಿಸಿತ್ತು. ಸರ್ಕಾರ ಆದೇಶ ಮೇರೆಗೆ ಈ ಬಾರಿಯು ಆಚರಣೆಯನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಶಾಂತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಎಸ್ಪಿ ಎನ್. ಶಶಿಕುಮಾರ್ ತಿಳಿಸಿದರು.

    ಕಲಬುರುಗಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ ಸುಮಾರು 300ಕ್ಕೂ ಹೆಚ್ಚು ರೌಡಿಗಳು ಪರೇಡ್‍ನಲ್ಲಿ ಭಾಗವಹಿಸಿದ್ದರು. ಕೊಲೆ, ಸುಲಿಗೆ ದರೋಡೆ, ಸರಗಳ್ಳತನ, ಪೊಲೀಸ್ ಮೇಲೆ ಹಲ್ಲೆ ಮುಂತಾದ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲಿಸುತ್ತೇವೆ. ಈ ವರ್ಷ 1990ಕ್ಕೂ ಅಧಿಕ ಜನರ ಮೇಲೆ ರೌಡಿ ಶೀಟರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ಸುಮಾರು 280 ಹಳೆ ರೌಡಿಗಳ ಮೇಲೆ ದಾಖಲು ಮಾಡಲಾಗಿದ್ದ ಪ್ರಕರಣಗಳನ್ನು ಕೈಬಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

    ಪೊಲೀಸರ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ರೌಡಿಗಳ ವೇಷವನ್ನು ಬದಲಿಸುವುದರ ಜೊತೆಗೆ ಅವರ ಮನಸ್ಸನ್ನು ಬದಲಿಸುವ ಕಾರ್ಯ ನಡೆಯಬೇಕಿದೆ ಎಂದು ತಿಳಿಸಿದರು.

  • 3 ದಶಕಗಳ ಕನಸು ಆಗ್ತಿದೆ ನನಸು- ನಾಳೆ ಕಲಬುರಗಿ-ಬೀದರ್ ರೈಲ್ವೆ ಯೋಜನೆಗೆ ಪ್ರಧಾನಿಯಿಂದ ಚಾಲನೆ

    3 ದಶಕಗಳ ಕನಸು ಆಗ್ತಿದೆ ನನಸು- ನಾಳೆ ಕಲಬುರಗಿ-ಬೀದರ್ ರೈಲ್ವೆ ಯೋಜನೆಗೆ ಪ್ರಧಾನಿಯಿಂದ ಚಾಲನೆ

    – ಹಳಿ ತಪ್ಪಿದ ಅನ್ನದಾತರ ಬದುಕು

    ಕಲಬುರಗಿ: ಮೂರು ದಶಕಗಳ ಹಿಂದೆ ಘೋಷಿಸಲಾಗಿದ್ದ ಕಲಬುರಗಿ-ಬೀದರ್ ರೈಲು ಯೋಜನೆಗೆ ಕೊನೆಗೂ ಚಾಲನೆ ಸಿಗಲಿದೆ. ಈ ರೈಲು ಮಾರ್ಗವನ್ನು ಪ್ರಧಾನಿ ಮೋದಿಯವರು ಭಾನುವಾರದಂದು ಲೋಕಾರ್ಪಣೆ ಮಾಡಲಿದ್ದಾರೆ.

    ಇದು ಉತ್ತರ ಕರ್ನಾಟಕದ ಮಂದಿಗೆ ಸಂತಸದ ಸುದ್ದಿಯಾದ್ರೂ ಹಳಿಗಾಗಿ ಭೂಮಿ ಕೊಟ್ಟ ಅನ್ನದಾತರ ಬದುಕು ಹಳಿ ತಪ್ಪಿದೆ. ಯೋಜನೆಗಾಗಿ ಕಲಬುರಗಿಯ 6 ಹಳ್ಳಿಗಳಲ್ಲಿ 271 ಎಕರೆ ಜಮೀನನ್ನು ವಶಪಡಿಸಿಕೊಂಡಿತ್ತು. ಆದ್ರೆ ರೈತರಿಗೆ ಕೊಟ್ಟಿದ್ದು ಮಾತ್ರ ಬಿಡಿಗಾಸು. ಅಂದ್ರೆ ಎಕೆರೆಗೆ ಬರೀ 80 ಸಾವಿರ ರೂಪಾಯಿ. ಇದರಿಂದ ಅವರಿಗೆ ಅಪಾರ ನಷ್ಟವಾಗಿದೆ.

    ಇತ್ತ ಕಮಲಾಪುರದಲ್ಲಿ ಗುಂಟೆ ಲೆಕ್ಕಾಚಾರದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆ ಕಲಬುರಗಿ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ರೂ ಪರಿಹಾರವಾಗಿಲ್ಲ. ರೈಲು ಯೋಜನೆ ವಿಷಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಿತ್ತಾಡುತ್ತಿವೆ. ಆದರೆ ಎರಡೂ ಪಕ್ಷಗಳಿಗೆ ರೈತರ ಜಮೀನಿಗೆ ನ್ಯಾಯಯುತ ಪರಿಹಾರ ಕೊಡಿಸಬೇಕೆಂಬ ಕಾಳಜಿ ಮಾತ್ರ ಇಲ್ಲ.