Tag: Article 370

  • ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದ್ದೇವೆ, ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ, ಮೋದಿಗೆ ಗಿಫ್ಟ್ ಕೊಡಿ: ಪ್ರಹ್ಲಾದ್ ಜೋಶಿ

    ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತಿದ್ದೇವೆ, ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ, ಮೋದಿಗೆ ಗಿಫ್ಟ್ ಕೊಡಿ: ಪ್ರಹ್ಲಾದ್ ಜೋಶಿ

    ಧಾರವಾಡ: ದೇಶದಲ್ಲಿ ಮೊದಲು ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು. ಆರ್ಟಿಕಲ್ 370 ( Article 370) ತೆಗೆದು ಉಗ್ರರ ಚಟುವಟಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ನರೇಂದ್ರ ಗ್ರಾಮದಲ್ಲಿ ನಡೆಯುತ್ತಿರುವ ಸಂಸದರ ಕ್ರೀಡೋತ್ಸವದ ಕಬಡ್ಡಿ ಪಂದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ, ಮೊದಲು ಬೆಂಗಳೂರು, ಹೈದರಾಬಾದ್‍ನಲ್ಲಿ ಬಾಂಬ್ ಹಾರುತ್ತಿದ್ದವು. ಈಗ ಎಲ್ಲವೂ ಬಂದ್ ಆಗಿದೆ. ಏಕೆಂದರೆ ಆರ್ಟಿಕಲ್ 370 ಕಿತ್ತೆಸೆಯಲಾಗಿದೆ. ಮೊದಲು ದೇಶದೊಳಗೆ ಬಂದು ಬಾಂಬ್ ಹಾಕುತ್ತಿದ್ದರು. ಈಗ ನಾವು ಪಾಕಿಸ್ತಾನದ ಅವರ ಮನೆಗೆ ನುಗ್ಗಿ ಹೊಡೆಯುತ್ತಿದ್ದೇವೆ. ಚೀನಾಗೂ ಎದುರುತ್ತರ ಕೊಡುತ್ತಿದ್ದೇವೆ. ಈಗ ಎಲ್ಲಿಯಾದರೂ ಬಾಂಬ್ ಹಾರುತ್ತಿವೆಯಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಧರ್ಮಪತ್ನಿಯನ್ನು ನಮಗೆ ಪರಿಚಯಿಸಿ: ಸಿಎಂಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಒತ್ತಾಯ

    ಮೋದಿಯವರು (Narendra Modi) ಆರ್ಟಿಕಲ್ 370 ತೆಗೆದಿದ್ದೇ ಇದಕ್ಕೆಲ್ಲ ಕಾರಣ. ಹೀಗಾಗಿ ಬಿಜೆಪಿಯ 370 ಸ್ಥಾನ ತಾವು ಆರಿಸಿ ಕಳುಹಿಸಬೇಕು. ಇದುವೇ ನೀವು ಮೋದಿಯವರಿಗೆ ಕೊಡುವ ಗಿಫ್ಟ್ ಎಂದು ಹೇಳಿದರು. ಇದನ್ನೂ ಓದಿ: ಪುಟ್ಟಣ್ಣ ಗೆಲುವು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜನರ ಮನಸ್ಥಿತಿಗೆ ಸಾಕ್ಷಿ: ಡಿಕೆಶಿ

  • ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ

    ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ

    – ʻಸುಧಾರಣೆ, ಸಾಧನೆ ಮತ್ತು ಪರಿವರ್ತನೆʼ ಮಂತ್ರದೊಂದಿಗೆ ಹಲವು ಸುಧಾರಣೆ ಜಾರಿ
    – ಭಯೋತ್ಪಾದನೆ ವಿರುದ್ಧ ಹೋರಾಡಲು ಕಠಿಣ ಕಾನೂನು
    – 370ನೇ ವಿಧಿ, ತ್ರಿವಳಿ ತಲಾಖ್‌ ನಿಷೇಧ
    – 10 ವರ್ಷಗಳ ಸಾಧನೆ ವಿವರಿಸಿದ ಪ್ರಧಾನಿ ಮೋದಿ

    ನವದೆಹಲಿ: 17ನೇ ಲೋಕಸಭೆಯು (17th Lok Sabha) ತಲೆಮಾರುಗಳು ನಿರೀಕ್ಷಿಸಿದ್ದನ್ನು ಈಡೇರಿಸಿದೆ. ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಮಂತ್ರದೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡಿದ್ದು, ದೇಶಕ್ಕೆ ಒಂದೇ ಸಂವಿಧಾನ (One Constitution) ಇರಬೇಕು ಎಂಬ ಕನಸನ್ನು ಸಾಕಾರಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ.

    ಬಜೆಟ್‌ ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಲ್ಲಿ ವಿಶೇಷ ಭಾಷಣ ಮಾಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಿದ್ದಾರೆ. 17ನೇ ಲೋಕಸಭೆಯು ಈ ತಲೆಮಾರು ನಿರೀಕ್ಷಿಸಿದ್ದನ್ನು ಈಡೇರಿಸಿದೆ. ಅನೇಕ ಮಹತ್ವದ ಕಾನೂನುಗಳನ್ನು ಜಾರಿಗೊಳಿಸಿದೆ, ಪ್ರಮುಖ ನಿರ್ಣಯಗಳನ್ನ ತೆಗೆದುಕೊಂಡಿದೆ. ಈ ಮೂಲಕ ದೇಶಕ್ಕೆ ಒಂದೇ ಸಂವಿಧಾನ ಇರಬೇಕು ಎಂಬ ಕನಸನ್ನು ಸಾಕಾರಗೊಳಿಸಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ 

    ಹಲವು ತಲೆಮಾರುಗಳು ಒಂದೇ ಸಂವಿಧಾನದ ಕನಸು ಕಂಡಿದ್ದವು. ಅದಕ್ಕೆ ಪೂರಕವಾಗಿ ನಮ್ಮ ಸರ್ಕಾರ ʻಸುಧಾರಣೆ, ಸಾಧನೆ ಮತ್ತು ಪರಿವರ್ತನೆʼ (Reform, Perform And Transform) ಎಂಬ ಮೂರು ಮಂತ್ರಗಳೊಂದಿಗೆ ಕಳೆದ 5 ವರ್ಷಗಳಲ್ಲಿ ಅನೇಕ ಸುಧಾರಣಗಳನ್ನು ಜಾರಿಗೆ ತಂದಿತು. ಭಾರತ ತನ್ನ ಅಧ್ಯಕ್ಷತೆಯಲ್ಲಿ ಜಿ20 ಸಭೆ ಆಯೋಜಿಸಿತು. ಆರ್ಟಿಕಲ್‌ 370 (Article 370) ರದ್ದು ಮಾಡುವ ಮೂಲಕ ಕಾಶ್ಮೀರದ ಜನರಿಗೆ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಿತು ಎಂದು ವಿವರಿಸಿದ್ದಾರೆ.

    ಅಲ್ಲದೇ ತ್ರಿವಳಿ ತಲಾಖ್‌ನಿಂದ ನಮ್ಮ ಮುಸ್ಲಿಂ ಮಹಿಳೆಯರು ಸಂಕಟಪಡುತ್ತಿದ್ದರು. ತ್ರಿವಳಿ ತಲಾಖ್ ನಿಷೇಧವನ್ನು 17ನೇ ಲೋಕಸಭೆ ಈಡೇರಿಸಿದೆ. ಇದರಿಂದ ಮುಸ್ಲಿಂ ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಡೇಟಾ ಸಂರಕ್ಷಣೆ ಕಾಯ್ದೆಯೊಂದಿಗೆ, ಭಯೋತ್ಪಾದನೆ ವಿರುದ್ಧ ಹೋರಾಟಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಿತು. ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಿತು. ಈ ಹಿಂದೆ ಅನೇಕರು ನಮಗೆ ಹೊಸ ಸಂಸತ್‌ ಕಟ್ಟಡ ಬೇಕು ಎಂದು ಹೇಳಿದ್ದರು, ಯಾರೂ ಅದರ ಬಗ್ಗೆ ಚರ್ಚಿಸಲಿಲ್ಲ. ಆದ್ರೆ ಬಿಜೆಪಿ ಅದನ್ನು ಸಾಕಾರಗೊಳಿಸುವ ಕೆಲಸ ಮಾಡಿತು. ಆದ್ದರಿಂದಲೇ ನಾವಿಂದು ಹೊಸ ಸಂಸತ್ತಿನಲ್ಲಿ ಕುಳಿತಿದ್ದೇವೆ ಎಂದು ಹೇಳಿದರು.

    ಬ್ರಿಟಿಷರ ದಂಡ ಸಂಹಿತೆಯಲ್ಲೇ ಬದುಕಿದ್ದು ಸಾಕು:
    ಬ್ರಿಟಿಷರು ನೀಡಿದ್ದ ದಂಡ ಸಂಹಿತೆಯಲ್ಲೇ 75 ವರ್ಷ ಬದುಕಿದ್ದೇವೆ, ಹೊಸ ಪೀಳಿಗೆಯೂ ದಂಡ ಸಂಹಿತೆಯಡಿ ಬದುಕಿರಬಹುದು. ಆದ್ರೆ ಮುಂದಿನ ಪೀಳಿಗೆ ನ್ಯಾಯ ಸಂಹಿತೆಯೊಂದಿಗೆ ಬದುಕುತ್ತದೆ ಎಂದು ಹೆಮ್ಮೆಯಿಂದ ಹೇಳಬಹುದು, ಇದು ನಿಜವಾದ ಪ್ರಜಾಪ್ರಭುತ್ವ ಎಂದು ಮೋದಿ ಬಣ್ಣಿಸಿದರು. ಇದನ್ನೂ ಓದಿ: ಹೀಗೆನ್ನುತ್ತಲೇ 70 ವರ್ಷ ಸರ್ಕಾರ ನಡೆಸಿಕೊಂಡು ಬಂದ್ರು – ಪಕ್ಷ ತೊರೆದ ಬಳಿಕ ಕಾಂಗ್ರೆಸ್‌ ವಿರುದ್ಧ ಶೆಟ್ಟರ್‌ ವಾಗ್ದಾಳಿ

    ಸಂಸದರಿಗೆ ನಮೋ ಧನ್ಯವಾದ:
    ಇಡೀ ವಿಶ್ವವನ್ನೇ ಕಾಡಿದ್ದ ಕೋವಿಡ್‌ ಸಮಯದಲ್ಲಿ ತಮ್ಮ ನಿಧಿಯನ್ನು ಬಿಟ್ಟುಕೊಡುವಂತೆ ಸಂಸದರಿಗೆ ಮನವಿ ಮಾಡಲಾಗಿತ್ತು. ಅದರಂತೆ ಎಲ್ಲ ಸಂಸದರೂ ತಮ್ಮ ನಿಧಿಯನ್ನ ಬಿಟ್ಟುಕೊಟ್ಟರು. ಅಲ್ಲದೇ ಸಂಸದರು ತಮ್ಮ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಿದರು. ಆದರೂ ನಾವು ಬೈಗುಳ ತಿಂದೆವು ಎಂದು ಮೋದಿ ಕಹಿ ಅನುಭವವನ್ನು ಹಂಚಿಕೊಂಡರು. ಇದನ್ನೂ ಓದಿ: ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ ಕೆಡ್ಡಸ- ತುಳುನಾಡಿನಲ್ಲಿ ಆಚರಣೆ ಹೇಗೆ?

  • ಆರ್ಟಿಕಲ್ 370 ಟ್ರೈಲರ್ ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ

    ಆರ್ಟಿಕಲ್ 370 ಟ್ರೈಲರ್ ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ

    ಬಾಲಿವುಡ್ ನಲ್ಲಿ ಮತ್ತೊಂದು ಭರವಸೆಯ ಸಿನಿಮಾ ಮೂಡಿ ಬಂದಿದೆ. ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ (Article 370)ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೈಲರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಾತ್ರಗಳು ಇವೆ.

    ರಿಲೀಸ್ ಆದ ಟ್ರೈಲರ್ (Trailer)ನಲ್ಲಿ ‘ಪೂರಾ ಕಾ ಪೂರಾ ಕಾಶ್ಮೀರ್ (Kashmir), ಭಾರತ್ ದೇಶ್ ಕಾ ಹಿಸ್ಸಾ ಥಾ. ಹೇ ಔರ್ ರೆಹೇಗಾ’ ಎನ್ನುವ ಮಾತು ಮತ್ತೆ ಮತ್ತೆ ಪ್ರೇರೇಪಿಸುತ್ತಿದೆ. ಅಂದಹಾಗೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಫೆಬ್ರವರಿ 23 ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಯಾಮಿ ಗೌತಮ್ ಖಡಕ್ ಎನ್.ಐ.ಎ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

    ಟ್ರೈಲರ್ ನಲ್ಲಿ ಕಾಶ್ಮೀರ ಭಯೋತ್ಪಾದನೆ, ಸೇನಾಧಿಕಾರಿಗಳ ಹೋರಾಟ, ಆರ್ಟಿಕಲ್ 370 ತೆಗೆದರೆ ಏನೆಲ್ಲ ಆಗಲಿದೆ ಎನ್ನುವ ಚರ್ಚೆ. ಭಯೋತ್ಪಾದಕರ ಕುತಂತ್ರ ಹೀಗೆ ಸಾಕಷ್ಟು ವಿಷಯಗಳನ್ನು 2 ನಿಮಿಷ 40 ಸೆಕೆಂಡ್ ನ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಶಾಶ್ವತ್ ಸಚ್ ದೇವ್ ಅವರ ಹಿನ್ನೆಲೆ ಸಂಗೀತ ಸೂಪರ್.

     

    ಕಾಶ್ಮೀರ ಕುರಿತಂತೆ ಈವರೆಗೂ ಬಂದಿರುವ ಯಾವುದೇ ಸಿನಿಮಾ ಸೋತಿಲ್ಲ. ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಹಣ ಬಾಚಿವೆ. ಜೊತೆಗೆ ಅತ್ಯುತ್ತಮ ಪ್ರತಿಕ್ರಿಯೆಯನ್ನೂ ನೋಡುಗರು ಕೊಟ್ಟಿದ್ದಾರೆ. ಆರ್ಟಿಕಲ್ 370 ಚಿತ್ರದ ಕುರಿತು ಈಗಾಗಲೇ ನಿರೀಕ್ಷೆ ಹೆಚ್ಚಿವೆ. ಅದರಲ್ಲೂ ಟ್ರೈಲರ್ ರಿಲೀಸ್ ನಂತರ ಈ ಕಾಯುವಿಕೆ ಇಮ್ಮಡಿಯಾಗಿದೆ.

  • ಆರ್ಟಿಕಲ್ 370 ರದ್ದು, ಸರ್ಕಾರದ ಪರ ತೀರ್ಪು – ಆದೇಶ ಮರು ಪರಿಶೀಲನೆಗೆ ಸುಪ್ರೀಂಗೆ ಅರ್ಜಿ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ (Article 370) ವಿಧಿಯನ್ನು ರದ್ದುಗೊಳಿಸಿದ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿರುವ ಸುಪ್ರೀಕೋರ್ಟ್ (Supreme Court) ಆದೇಶವನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಮುಜಾಫರ್ ಇಕ್ಬಾಲ್ ಖಾನ್ ಎಂಬವರು ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನಿಂದ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.

    ಡಿಸೆಂಬರ್ 11, 2023 ರಂದು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠವು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019ರ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು. ಈ ವೇಳೆ ಆರ್ಟಿಕಲ್ 370 ಒಂದು ತಾತ್ಕಾಲಿಕ ನಿಬಂಧನೆ ಎಂದು ನ್ಯಾಯಾಲಯ ಹೇಳಿತ್ತು. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

    ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾನೂನಿನ ಸಿಂಧುತ್ವವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಬದಲಾಗಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಪ್ರದೇಶಕ್ಕೆ ರಾಜ್ಯತ್ವವನ್ನು ಮರುಸ್ಥಾಪಿಸಲು ಸೂಚಿಸಿತ್ತು.

    ನ್ಯಾಯಾಲಯದ ಈ ತೀರ್ಪಿಗೆ ಹಲವು ಟೀಕೆಗಳು ಬಂದಿದ್ದವು. ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ತೀರ್ಪು ಗೊಂದಲವನ್ನುಂಟುಮಾಡಿದೆ. ಫೆಡರಲಿಸಂ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಮತ್ತು ಸಂವಿಧಾನದ 356 ನೇ ವಿಧಿಯನ್ನು ಬೈಪಾಸ್ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಹೃದ್ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲಿದೆ ರಾಮ್​ ಕಿಟ್​- ಏನಿದು?, ಉಪಯೋಗವೇನು?

  • Article 370 ರದ್ದತಿಯನ್ನು ಸ್ವಾಗತಿಸಿದ ಮಾಜಿ ಪ್ರಧಾನಿ ಹೆಚ್‍ಡಿಡಿ

    Article 370 ರದ್ದತಿಯನ್ನು ಸ್ವಾಗತಿಸಿದ ಮಾಜಿ ಪ್ರಧಾನಿ ಹೆಚ್‍ಡಿಡಿ

    ಹಾಸನ: ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370 (Jammu Kashmir Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Deve Gowda) ಸ್ವಾಗತಿಸಿದ್ದಾರೆ.

    ಇಂದು ಹೊಳೆನರಸೀಪುರ ತಾಲೂಕಿನ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿ ಕಡೆಯ ಕಾರ್ತಿಕ ಮಾಸದ ಅಂಗವಾಗಿ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆರ್ಟಿಕಲ್ 370 ಮೂಲಕ ಕಾಶ್ಮೀರಕ್ಕೆ ವಿಶೇಷ ಸವಲತ್ತು ಕಲ್ಪಿಸಲಾಗಿತ್ತು. ಅದನ್ನು ಲೋಕಸಭೆ, ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡುವ ಮುಖೇನಾ ಆ ಸವಲತ್ತು ರದ್ದು ಮಾಡಿದ್ದರು. ಇದರಿಂದ ಬೇರೆ ರಾಜ್ಯಗಳಿಗೂ, ಅನ್ಯಾಯ, ಅನಕೂಲವಾಗುತ್ತೋ ಅದು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತೆ ಎಂದು ನುಡಿದರು.

    ಐದು ಜನ ನ್ಯಾಯಾಧೀಶರು ಸುಪ್ರೀಂಕೋರ್ಟ್‍ನಲ್ಲಿ (Supreme Court) ತೀರ್ಪು ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಇಂಡಿಯಾ (I.N.D.I.A) ಒಂದು ಕಡೆ, ಇನ್ನೊಂದು ಕಡೆ ಎನ್‍ಡಿಎ ಇದೆ. ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಈ ರಾಷ್ಟ್ರದ ಮಹಾಜನತೆ ಇಂಡಿಯಾ ಪರ ತೀರ್ಪು ಕೊಡುತ್ತಾರೋ, ಎನ್‍ಡಿಎ ಮೈತ್ರಿಕೂಟಕ್ಕೆ ತೀರ್ಪು ಕೊಡ್ತಾರೋ ಕಾದುನೋಡಬೇಕು ಎಂದು ಹೇಳಿದರು.

    ಇದೇ ವೇಳೆ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಗಮನಿಸಿದರೆ ಜನರ ಮನಸ್ಸಿನಲ್ಲಿ ಬಿಜೆಪಿಗೆ ಸ್ವಾಭಾವಿಕವಾಗಿ ಹೆಚ್ಚಿ ಶಕ್ತಿ ಕೊಟ್ಟಿದ್ದಾರೆ ಎಂದರು.

  • Article 370 Verdict: ಸುಪ್ರೀಂ ಆದೇಶವನ್ನು ಗೌರವಯುತವಾಗಿ ಒಪ್ಪುವುದಿಲ್ಲ: ಪಿ ಚಿದಂಬರಂ

    Article 370 Verdict: ಸುಪ್ರೀಂ ಆದೇಶವನ್ನು ಗೌರವಯುತವಾಗಿ ಒಪ್ಪುವುದಿಲ್ಲ: ಪಿ ಚಿದಂಬರಂ

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು (Jammu and Kashmir Special Status) ರದ್ದು ಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರ ಸರಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ (Supreme Court) ಐತಿಹಾಸಿಕ ತೀರ್ಪು ನೀಡಿದ್ದು, ಈ ಆದೇಶವನ್ನು ಗೌರವಯುತವಾಗಿ ಒಪ್ಪುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

    ಆರ್ಟಿಕಲ್‌ 370 ರದ್ದತಿ ಆದೇಶದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಕಟ್ಟುನಿಟ್ಟಾಗಿ ತಿದ್ದುಪಡಿ ಮಾಡುವವರೆಗೆ 370 ಗೌರವಕ್ಕೆ ಅರ್ಹವಾಗಿದೆ. ರಾಜ್ಯವನ್ನು ವಿಭಜಿಸುವ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಅದರ ಸ್ಥಾನಮಾನವನ್ನು ಕಡಿಮೆ ಮಾಡುವ ಪ್ರಶ್ನೆಯನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ಧರಿಸದಿರುವುದು ನಮಗೆ ನಿರಾಶೆಯಾಗಿದೆ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ (Congress) ಯಾವಾಗಲೂ ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿರುವ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಒತ್ತಾಯಿಸುತ್ತದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಕೂಡಲೇ ಸಂಪೂರ್ಣ ರಾಜ್ಯ ಸ್ಥಾನಮಾನ ಮರುಸ್ಥಾಪಿಸಬೇಕು, ಲಡಾಖ್ ಜನರ ಆಶೋತ್ತರಗಳನ್ನೂ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

    ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ನಾವು ಸ್ವಾಗತಿಸುತ್ತೇವೆ. ಅದಾಗ್ಯೂ, ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು, ಒಂದು ವರ್ಷ ಕಾಯಲು ನಿಖರ ಕಾರಣಗಳಿಲ್ಲ ಎಂದು ಚಿದಂಬರಂ (P Chidambaram) ಹೇಳಿದ್ದಾರೆ.

    2019ರ ಆಗಸ್ಟ್‌ 6 ರಂದು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಲವು ಮಂದಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷ ಸ್ಥಾನವನ್ನು ರದ್ದು ಪಡಿಸಿದ ಕೇಂದ್ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ಪ್ರಕಟಿಸಿ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

  • Article 370: ಶೇಕ್ ಅಬ್ದುಲ್ಲಾ ಖುಷಿಪಡಿಸಲು ಜಾರಿಗೆ ತಂದಿದ್ದನ್ನು ಮೋದಿ ಧೈರ್ಯದಿಂದ ರದ್ದು ಮಾಡಿದ್ರು: ಯತ್ನಾಳ್

    Article 370: ಶೇಕ್ ಅಬ್ದುಲ್ಲಾ ಖುಷಿಪಡಿಸಲು ಜಾರಿಗೆ ತಂದಿದ್ದನ್ನು ಮೋದಿ ಧೈರ್ಯದಿಂದ ರದ್ದು ಮಾಡಿದ್ರು: ಯತ್ನಾಳ್

    ಬೆಳಗಾವಿ: ಶೇಕ್ ಅಬ್ದುಲ್ಲಾ ಖುಷಿಪಡಿಸಲು ನೆಹರೂ ಅವರು ಆರ್ಟಿಕಲ್ 370 ಜಾರಿಗೆ ತಂದಿದ್ದರು. ಆದರೆ ಮೋದಿ (Narendra Modi) ಅವರು ಧೈರ್ಯದಿಂದ ಆರ್ಟಿಕಲ್ 370 (Article 370) ರದ್ದು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ (BasanaGouda Patil Yatnal) ಹೇಳಿದ್ದಾರೆ.

    ಬೆಳಗಾವಿ ಸುವರ್ಣ ಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ (Pakistan) ಏಜೆಂಟ್ ನಂತೆ ವರ್ತಿಸುತ್ತಿದ್ದ ಲೋಕಸಭೆ ಸದಸ್ಯನೊಬ್ಬ 370 ರದ್ದು ಪ್ರಶ್ನಿಸಿ ಸುಪ್ರಿಂಕೋರ್ಟಿಗೆ ಹೋಗಿದ್ದ. ಇಂದು ಸುಪ್ರಿಂಕೋರ್ಟ್ (Supreme Court) ಮೋದಿ ಸರ್ಕಾರ ರದ್ದು ಮಾಡಿದ್ದನ್ನ ಮಾನ್ಯ ಮಾಡಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಕನಸು-ನನಸು ಮಾಡಿದ್ದಕ್ಕೆ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಜನ ಸಂಘ ಹುಟ್ಟಿದ್ದು ಆರ್ಟಿಕಲ್ 370 ತೆಗೆದುಹಾಕಬೇಕೆಂದು. ಯಾಕೆಂದರೆ ಒಂದು ದೇಶದಲ್ಲಿ ಎರಡು ಧ್ವಜ ಎರಡು ಸಂವಿಧಾನ ಇರಬಾರದು ಎಂದು ಹೇಳಿದರು. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

    ಇದೇ ವೇಳೆ ಮುಸ್ಲಿಂ ಸ್ಪೀಕರ್ ಕುರಿತು ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಹೇಳಿಕೆ ಸಂವಿಧಾನಕ್ಕೆ ಮಾಡಿದ ಅವಮಾನ. ಸ್ಪೀಕರ್ ಅವರು ಪೀಠಕ್ಕೆ ಬಂದಾಗ ಎಲ್ಲರೂ ಗೌರವ ಕೊಡ್ತೀವಿ. ಅದು ಅಂಬೇಡ್ಕರ್ ಸಂವಿಧಾನ ಹೇಳಿದೆ. ಆದರೆ ಸ್ಪೀಕರ್ ಸ್ಥಾನವನ್ನ ಒಂದು ಜಾತಿಗೆ ಮಾತ್ರ ಸೀಮಿತ ಮಾಡಿದ್ದಾರೆ. ಜಮೀರ್ ಹೇಳಿಕೆ ತಪ್ಪು ಅಂತ ಒಂದು ಮಾತು ಕೂಡ ಸ್ಪೀಕರ್ ಹೇಳಿಲ್ಲ. ಅದು ತಪ್ಪು ಎಂದು ಜಮೀರ್ ರನ್ನ ಉಚ್ಛಾಟನೆ ಮಾಡಬೇಕಿತ್ತು. ಉಚ್ಛಾಟನೆ ಮಾಡಿದ್ರೆ ಸ್ಪೀಕರ್ ಗೌರವ ಹೆಚ್ಚಾಗುತ್ತಿತ್ತು ಎಂದು ಹೇಳಿದರು.

  • ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಮೊದಲು ಹೇಗಿತ್ತು? ಈಗ ಏನು ಬದಲಾವಣೆಯಾಗಿದೆ?

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಮೊದಲು ಹೇಗಿತ್ತು? ಈಗ ಏನು ಬದಲಾವಣೆಯಾಗಿದೆ?

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ (Jammu Kashnir) ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಕಾಶ್ಮೀರ ಈಗ ಸುರಕ್ಷಿತವಾಗಿದೆ. ಭಯೋತ್ಪಾದಕ ಚಟುವಟಿಕೆಗಳು (Terrorist Activity) 10 ಪಟ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಆರ್ಟಿಕಲ್ 370ರ (Article 370) ರದ್ದತಿಯ ನಂತರ, ಜಮ್ಮು ಮತ್ತು ಕಾಶ್ಮೀರವು ಸುಧಾರಣೆಗಳ ನೇತೃತ್ವದ ಪರಿವರ್ತಕ ಬದಲಾವಣೆಯ ಗಮನಾರ್ಹ ಯುಗಕ್ಕೆ ಸಾಕ್ಷಿಯಾಗಿದೆ ಮತ್ತು ಜನರ ಸಾಮೂಹಿಕ ಪ್ರಯತ್ನಗಳಿಂದ ನಡೆಸಲ್ಪಟ್ಟಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ 2014ರ ಮೊದಲು ಜಮ್ಮು ಕಾಶ್ಮೀರ ಹೇಗಿತ್ತು ಮತ್ತು ಈಗ ಹೇಗಿದೆ ಎಂಬ ಸಂಪೂರ್ಣ ಚಿತ್ರಣವನ್ನು ನೀಡಿದೆ. ಇದನ್ನೂ ಓದಿ: Article 370 Verdict: J&K, ಲಡಾಖ್‌ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ – ಅಮಿತ್‌ ಶಾ ಸಂತಸ

    ಭಯೋತ್ಪಾದಕ ಘಟನೆಗಳು:
    1994-2014ರ ನಡುವೆ ಒಟ್ಟು 47,381 ಭಯೋತ್ಪಾದಕ ಘಟನೆಗಳು ನಡೆದಿದ್ದು, ಪ್ರತಿ ವರ್ಷ ಸರಾಸರಿ 2,360 ಭಯೋತ್ಪಾದಕ ಘಟನೆಗಳು ನಡೆದಿದೆ. 2014ರಿಂದ ಒಟ್ಟು 2.197 ಕೃತ್ಯಗಳು ನಡೆದಿದ್ದು, ಪ್ರತಿ ವರ್ಷ ಸರಾಸರಿ 240 ಭಯೋತ್ಪಾದಕ ಘಟನೆಗಳು ನಡೆಯುತ್ತಿವೆ. ಇನ್ನು ನಾಗರಿಕ ಸಾವುನೋವುಗಳಲ್ಲಿ 72% ಕಡಿತವಾಗಿದ್ದು, ಭದ್ರತಾ ಸಿಬ್ಬಂದಿಯ ಸಾವುನೋವುಗಳಲ್ಲಿ 59% ಕಡಿತವಾಗಿದೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

    ಗ್ರಾಮಗಳನ್ನು ಸಂಪರ್ಕಿಸಿ ಸಮೃದ್ಧಿಯನ್ನು ಖಾತರಿಪಡಿಸುವಲ್ಲಿ 2014ರ ಮೊದಲು ಪ್ರತಿವರ್ಷ 158 ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಈಗ ಅಂದರೆ 2014ರ ಬಳಿಕ ಪ್ರತಿ ವರ್ಷಕ್ಕೆ 8,068 ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸ್ವಾತಂತ್ರದ ನಂತರ ಒಟ್ಟು 24,000 ಮನೆಗಳ ನಿರ್ಮಾಣ ಮಾಡಿದ್ದು, ಪ್ರಸ್ತುತ 5 ವರ್ಷಗಳಲ್ಲಿ 1.45 ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

    ಹರ್ ಘರ್ ನಲ್ ಸೆ ಜಲ್‌ನ ಯೋಜನೆಯಡಿ 2014ರ ಮೊದಲು 7.82 ಲಕ್ಷ ಮನೆಗಳಿಗೆ ಟ್ಯಾಪ್ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 2014ರ ನಂತರ ಒಟ್ಟು 13 ಲಕ್ಷ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪಿಂಚಣಿ ಫಲಾನುಭವಿಗಳಲ್ಲಿ ಒಟ್ಟು 66% ಹೆಚ್ಚಳವಾಗಿದ್ದು 2014ರ ಮೊದಲು 6 ಲಕ್ಷ ಜನರಿಗೆ ಪಿಂಚಣಿ ನೀಡಲಾಗುತ್ತಿತ್ತು. ಈಗ 10 ಲಕ್ಷ ಜನರಿಗೆ ಪಿಂಚಣಿ ನೀಡಲಾಗುತ್ತಿದೆ. ಇದನ್ನೂ ಓದಿ: 3,500 ಕಿ.ಮೀ ದೂರದ ಥೈಲ್ಯಾಂಡ್‌ನಿಂದ ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ವಿಶೇಷ ಮಣ್ಣು

    21ನೇ ಶತಮಾನದ ಈ ದಶಕವು ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಶಕವಾಗಿದೆ. ಈಗ ಹಳೆಯ ಸವಾಲುಗಳನ್ನು ಬಿಟ್ಟು ಹೊಸ ಸಾಧ್ಯತೆಗಳ ಸಂಪೂರ್ಣ ಲಾಭ ಪಡೆಯುವ ಸಮಯ. ಜಮ್ಮು ಮತ್ತು ಕಾಶ್ಮೀರದ ಯುವಕರು ತಮ್ಮ ಪ್ರದೇಶದ ಅಭಿವೃದ್ಧಿಗಾಗಿ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಅಭಿವೃದ್ಧಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಸಾಹಸಗಾಥೆಯನ್ನು ಬರೆಯುವವರು ನಮ್ಮ ಯುವಕರು ಎಂದು 2022ರ ಅಕ್ಟೋಬರ್ 30ರಂದು ಜಮ್ಮು ಕಾಶ್ಮೀರ ರೋಜ್‌ಗಾರ್ ಮೇಳದಲ್ಲಿ ಪ್ರಧಾನಿ ಮೋದಿ (Narendra Modi) ಸಂದೇಶ ನೀಡಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ

  • Article 370 Verdict: J&K, ಲಡಾಖ್‌ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ – ಅಮಿತ್‌ ಶಾ ಸಂತಸ

    Article 370 Verdict: J&K, ಲಡಾಖ್‌ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ – ಅಮಿತ್‌ ಶಾ ಸಂತಸ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu And Kashmir) ಸಂವಿಧಾನದ 370ನೇ ವಿಧಿಯ (Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ತೀರ್ಪನ್ನು ಕೇಂದ್ರ ಸಚಿವ ಅಮಿತ್‌ ಶಾ ಶ್ಲಾಘಿಸಿದ್ದಾರೆ.

    ಜಮ್ಮು‍ & ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ (Amit Shah) ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆರ್ಟಿಕಲ್‌ 370 ರದ್ದತಿ ನಿರ್ಧಾರವನ್ನು ಎತ್ತಿಹಿಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

    2019ರ ಆಗಸ್ಟ್‌ 5 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಟಿಕಲ್‌ 370 ಅನ್ನು ರದ್ದುಗೊಳಿಸುವ ದೂರದೃಷ್ಟಿಯ ನಿರ್ಧಾರವನ್ನು ತೆಗೆದುಕೊಂಡಿತು. ಅಲ್ಲಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜತೆ ನೆಲೆಸಿತು. ಹಿಂಸಾಚಾರದಿಂದಲೇ ನಲುಗಿದ್ದ ಕಣಿವೆ ಪ್ರದೇಶದಲ್ಲಿ ಆದ ಬೆಳವಣಿಗೆ ಮತ್ತು ಅಭಿವೃದ್ಧಿಯು ಮಾನವ ಜೀವನಕ್ಕೆ ಹೊಸ ಅರ್ಥ ತಂದಿತು. ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ಸಮೃದ್ಧಿಯು ಜಮ್ಮು ಮತ್ತು ಕಾಶ್ಮೀರ, ಲಡಾಖ್ ನಿವಾಸಿಗಳ ಆದಾಯ ಮಟ್ಟ ಹೆಚ್ಚಿಸಿತು. ಇಂದು ಸುಪ್ರೀಂ ಕೋರ್ಟ್‌ 370ನೇ ವಿಧಿಯನ್ನು ರದ್ದುಗೊಳಿಸುವ ತೀರ್ಪು ಪ್ರಕಟಿಸಿದ್ದು ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರ ಸಾಂವಿಧಾನಿಕವಾಗಿದೆ ಎಂದು ಸಾಬೀತುಪಡಿಸಿದೆ ಎಂದು #NayaJammuKashmir (ಹೊಸ ಜಮ್ಮುಕಾಶ್ಮೀರ) ಹ್ಯಾಶ್‌ಟ್ಯಾಗ್‌ನೊಂದಿಗೆ ಬರೆದುಕೊಂಡಿದ್ದಾರೆ.

    ಆರ್ಟಿಕಲ್‌ 370 ರದ್ದಾದ ನಂತರ ಬಡವರು ಹಾಗೂ ವಂಚಿತರ ಹಕ್ಕುಗಳನ್ನು ಪುನರ್‌ಸ್ಥಾಪಿಸಲಾಗಿದೆ. ಇಡೀ ಪ್ರದೇಶವೂ ಸಂಗೀತ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದಿಂದ ಪ್ರತಿಧ್ವನಿಸುತ್ತಿದೆ. ಭಾರತದೊಂದಿಗೆ ಇಲ್ಲಿನ ಏಕತೆ, ಸಮಗ್ರತೆಯನ್ನು ಬಲಪಡಿಸಲಾಗಿದೆ. ಈ ತೀರ್ಪು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಯಾವಾಗಲೂ ನಮ್ಮ ರಾಷ್ಟ್ರಕ್ಕೆ ಸೇರಿದ್ದು ಎಂಬುದನ್ನು ಸೂಚಿಸಿದ್ದು, ಹೀಗೆ ಮುಂದುವರಿಯಲಿದೆ. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರವು J&K ಮತ್ತು ಲಡಾಖ್‌ನಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪಿಸಲು ಮತ್ತು ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಹೊಸ ಪ್ರೋತ್ಸಾಹಗಳೊಂದಿಗೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಅತ್ಯಾಧುನಿಕ ಶೈಕ್ಷಣಿಕ ಮೂಲಸೌಕರ್ಯ ನಿರ್ಮಿಸಲಾಗುತ್ತದೆ. ಜೊತೆಗೆ ಬಡವರ ಸಬಲೀಕರಣಕ್ಕಾಗಿ ಎಲ್ಲಾ ರೀತಿಯ ಶಕ್ತಿಯನ್ನು ಬಳಸುತ್ತೇವೆ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಯುವ ಆಟಗಾರ್ತಿ 1.3 ಕೋಟಿಗೆ ಸೇಲ್‌ – ಇತಿಹಾಸ ನಿರ್ಮಿಸಿದ ವೃಂದಾ ದಿನೇಶ್‌

  • Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

    Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu And Kashmir) ಸಂವಿಧಾನದ 370ನೇ ವಿಧಿಯ (Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಪೋಸ್ಟ್ ಮಾಡಿದ್ದು, ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಪ್ರಧಾನಿ ಮೋದಿ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡು ಸಂತಸ ಹಂಚಿಕೊಂಡಿದ್ದಾರೆ. ಆರ್ಟಿಕಲ್ 370 ರದ್ದತಿಗೆ ಸಂಬಂಧಿಸಿದಂತೆ ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿದೆ ಮತ್ತು 5 ಆಗಸ್ಟ್ 2019 ರಂದು ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಸಾಂವಿಧಾನಿಕವಾಗಿ ಎತ್ತಿಹಿಡಿಯುತ್ತದೆ. ಇದು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿರುವ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಭರವಸೆ, ಪ್ರಗತಿ ಮತ್ತು ಏಕತೆಯನ್ನು ಪ್ರತಿಧ್ವನಿಸುವ ಘೋಷಣೆಯಾಗಿದೆ. ನ್ಯಾಯಾಲಯವು ತನ್ನ ಆಳವಾದ ಬುದ್ಧಿವಂತಿಕೆಯಲ್ಲಿ, ಭಾರತೀಯರಾದ ನಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮತ್ತು ಏಕತೆಯ ಸಾರವನ್ನು ಬಲಪಡಿಸಿದೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?

    ಅಲ್ಲದೇ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಚೇತರಿಸಿಕೊಳ್ಳುವ ಜನರಿಗೆ ನಿಮ್ಮ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆ ಅಚಲವಾಗಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ಪ್ರಗತಿಯ ಫಲಗಳು ನಿಮಗೆ ಮಾತ್ರ ತಲುಪುವುದಿಲ್ಲ. ಆದರೆ 370ನೇ ವಿಧಿಯ ಕಾರಣದಿಂದಾಗಿ ನಮ್ಮ ಸಮಾಜದ ಅತ್ಯಂತ ದುರ್ಬಲ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಅದರ ಪ್ರಯೋಜನಗಳನ್ನು ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ. ಇಂದಿನ ತೀರ್ಪು ಉಜ್ವಲ ಭವಿಷ್ಯದ ಭರವಸೆ ಮತ್ತು ಬಲಿಷ್ಠ, ಹೆಚ್ಚು ಅಖಂಡ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ