Tag: Art of Living

  • ಆರ್ಟ್ ಆಫ್ ಲಿವಿಂಗ್‌ನಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿ ಕಾರ್ತಿಕ ದೀಪೋತ್ಸವ

    ಆರ್ಟ್ ಆಫ್ ಲಿವಿಂಗ್‌ನಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿ ಕಾರ್ತಿಕ ದೀಪೋತ್ಸವ

    ಬೆಂಗಳೂರು: ಆರ್ಟ್ ಆಫ್ ಲಿವಿಂಗ್ (The Art of Living) ಆಶ್ರಮದಲ್ಲಿ ದೀಪೋತ್ಸವದೊಡನೆ (Deepotsava) ಕೂಡಿದ ಭಕ್ತಿಯ ಮೆರಗಿನಿಂದ ವೈಭವಯುತವಾಗಿ ಕಾರ್ತಿಕ ದೀಪೋತ್ಸವವನ್ನು (kartika deepotsav) ಆಚರಿಸಲಾಯಿತು.

    ಕಾರ್ತಿಕ ದೀಪವು ತಮಿಳುನಾಡಿನ (Tamil Nadu) ಅತೀ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದ್ದು, ಕತ್ತಲಿನ ಮೇಲೆ ದೀಪದ ವಿಜಯವನ್ನು ಮತ್ತು ದೈವೀಶಕ್ತಿಯ ಅನಂತ ಅಸ್ತಿತ್ವವನ್ನು ಸಂಭ್ರಮಿಸುವ ಹಬ್ಬವಾಗಿದೆ.

    ಭಗವಾನ್ ಶಿವ ಮತ್ತು ಭಗವಾನ್ ಮುರುಗನ ಪೌರಾಣಿಕ ಕಥಗಳ ಆಧಾರವನ್ನು ಹೊಂದಿರುವ ಈ ಹಬ್ಬವನ್ನು, ಆಂತರ್ಯದ ಜಾಗೃತಿಯ ಸೂಚಕವಾದ ದೀಪಗಳನ್ನು ಬೆಳಗಿಸಿ ಆಚರಿಸಲಾಗುತ್ತದೆ. ಜಗನ್ಮಾತೆ ಪಾರ್ವತಿಯ ಪುತ್ರನಾದ ಕಾರ್ತಿಕೆಯನ ದೈವೀ ಬೆಳಕನ್ನು, ಬೆಳಗಿಸಲಾಗುವ ದೀಪಗಳು ಸೂಚಿಸುತ್ತವೆ. ಈ ದೈವೀ ಬೆಳಕು ಭಕ್ತರನ್ನು ಜ್ಞಾನ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜಾಗೃತಿಯತ್ತ ಕರೆದೊಯ್ಯುತ್ತದೆ ಎಂಬ ನಂಬಿಕೆಯಿದೆ. ಈ ಶುಭ ಸಂದರ್ಭದಲ್ಲಿ ತಮಿಳುನಾಡಿನ ಭಕ್ತರು ಎಲ್ಲಾ ಮುರುಗನ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ.  ಇದನ್ನೂ ಓದಿ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶ್ರೀ ರವಿಶಂಕರ್ ಗುರೂಜಿ ಮುರುಗನನ್ನು ವರ್ಣಿಸುತ್ತಾ, “ಉರುವೈ ಅರುವಾಯ್ ಉಳಧಯೈ ಇಳಧಾಯ್–ಓ ಮುರುಗ, ನೀನು ರೂಪವನ್ನುಳ್ಳವನು ಮತ್ತು ಅರೂಪನೂ ಹೌದು. ಎಲ್ಲವನ್ನೂ ನಿನ್ನಲ್ಲಿ ಹೊಂದಿರುವವನು, ಅದೇ ಸಮಯದಲ್ಲಿ ನೀನು ಪೂರ್ಣವಾಗಿ ಖಾಲಿಯಾಗಿರುವವನು. ಅತೀ ಸಣ್ಣದ್ದರಲ್ಲೂ ಇರುವವನು ನೀನು. ಮರುವೈ ಮಲರಾಯ್ ಮಣಿಯೈ ಒಲಿಯಾಯ್— ಹೂವಿನಲ್ಲಿ, ಗಂಟೆಯ ನಾದದಲ್ಲಿ, ಬೆಳಕಾಗಿ ಇರುವೆ. ಕರುವೈ ಉಯಿರಾಯ್ ಗತಿಯಾಯ್ ವಿಧಿಯಾಯ್– ಗರ್ಭದಲ್ಲಿರುವವನೂ ನೀನೇ, ಜೀವವೂ ನೀನೇ. ಜೀವನದ ಗತಿಯೂ ನೀನೇ, ಅದಕ್ಕೆ ವಿಧಿಯನ್ನು ಕೊಡುವವನೂ ನೀನೇ. ಗುರುವಾಯ್ ವರುವಾಯ್ ಅರಳ್ ವಾಯ್ ಗುಹನೆ–ಗುರುವಾಗಿ ಬಂದು ನಿನ್ನ ಆಶೀರ್ವಾದವನ್ನು ನಮಗೆಲ್ಲರಿಗೂ ನೀಡು” ಎಂದು ಒಂದು ಪ್ರಾಚೀನ ತಮಿಳಿನ ಬರಹವನ್ನು ವಿವರಿಸಿದರು.

    ಭಗವಾನ್ ಕಾರ್ತಿಕೇಯನು ಅಂತಿಮ ಸೌಂದರ್ಯ. ಅವನಲ್ಲಿ ಎಷ್ಟು ಸೌಂದರ್ಯವಿದೆಯೆಂದರೆ, ಅದನ್ನು ಯಾರಿಂದಲೂ ತಳ್ಳಿ ಹಾಕಲು ಸಾಧ್ಯವಿಲ್ಲ. ಅವನು ಶೂರನೂ ಹೌದು, ಅಪ್ರತಿಮನಾದ ಜ್ಞಾನವೂ ಅವನು. ಆದ್ದರಿಂದಲೇ ತನ್ನ ತಂದೆಯಾದ ಭಗವಾನ್ ಶಿವನಿಗ ಗುರುವಾದ ಮತ್ತು ಅವನು ತುಂಟನೂ ಹೌದು ಎಂದರು.

     

  • ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

    ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

    ಬೆಂಗಳೂರು: ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್‌ ಗುರೂಜಿ (Ravishankar Guruji) ಅವರಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ (ಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ಫೀಜಿ) (Fiji Civilian Award) ನೀಡಿ ಗೌರವಿಸಲಾಯಿತು.

    ಮಾನವ ಸ್ಫೂರ್ತಿ ಹಾಗೂ ಶಾಂತಿ ಮತ್ತು ಸಾಮರಸ್ಯದ ಮೂಲಕ ವಿವಿಧ ಸಮುದಾಯಗಳನ್ನು ಒಂದುಗೂಡಿಸುವ ಅವರ ಕಾರ್ಯವನ್ನು ಶ್ಲಾಘಿಸಿ ಫಿಜಿ ರವಿಶಂಕರ್‌ ಗುರೂಜಿ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಫಿಜಿ ರೀಪಬ್ಲಿಕ್‌ನ ಅಧ್ಯಕ್ಷ ಹೆಚ್.ಇ ರಟು ವಿಲ್ಲಿಯಮೆ ಎಂ. ಕಟೋನಿವೆರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ರವಿಶಂಕರ್‌ ಗುರೂಜಿ ಅವರಿಗೆ ವಿವಿಧ ದೇಶಗಳ 6ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದೆ.

    ರವಿಶಂಕರ್‌ ಗುರೂಜಿ ಅವರು ತಮ್ಮ ಆರ್ಟ್‌ ಆಫ್‌ ಲಿವಿಂಗ್‌ (Art Of living) ಮೂಲಕ ಕಳೆದ 43 ವರ್ಷಗಳಿಂದ ಜನ ಸಮೂಹಕ್ಕೆ ಸಂತೋಷ, ಸಾಮರಸ್ಯ ಹರಡುತ್ತಿದ್ದಾರೆ. ಇದರೊಂದಿಗೆ ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ ಜಾಗೃತಿ, ಮಹಿಳಾ ಹಾಗೂ ಯುವ ಸಬಲೀಕರಣಕ್ಕೆ ಒತ್ತು, ಒತ್ತಡ ನಿವಾರಣೆ, ಧ್ಯಾನದ ಕಾರ್ಯಮಗಳು ಹೀಗೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಡುತ್ತಿದ್ದಾರೆ. ಗುರೂಜಿ ಅವರ ಸಮಾಜದೇವಾ ಕಾರ್ಯಕ್ಕೆ ಮೆಚ್ಚಿ ಫಿಜಿ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

    ರವಿಶಂಕರ್‌ ಗುರೂಜಿ ಅವರು ಫಿಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಫಿಜಿಯ ಉಪಪ್ರಧಾನಿ ವಿಲಿಯಮೆ ಗಾವೋಕ, ಫಿಜಿಯ ಸಂಯುಕ್ತ ರಾಷ್ಟ್ರಗಳ ವಸತಿ ಸಂಯೋಜಕರಾದ ಡಿರ್ಕ್ ವಾಗೆನರ್ ಅವರೊಂದಿಗೆ ಸಂವಾದ ನಡೆಸಿದರು. ಈ ದ್ವೀಪ ರಾಷ್ಟ್ರದಲ್ಲಿ ಯುವಕ ಸಬಲೀಕರಣ, ಸ್ಥಳೀಯ ಸಮುದಾಯಗಳ ಮಾನಸಿಕ ಆರೋಗ್ಯದ ಸುಧಾರಣೆ, ಕಾಲಾತೀತ ಜ್ಞಾನವಾದ ಆಯುರ್ವೇದದ ಜ್ಞಾನದ ಪರಿಚಯದ ಮೂಲಕ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಫಿಜಿಯ ಸಮಗ್ರ ಬೆಳವಣಿಗೆಗೆ ಹೇಗೆ ಕೊಡುಗೆ ನೀಡಬಹುದು ಎನ್ನುವ ಬಗ್ಗೆ ಗಣ್ಯರೊಂದಿಗೆ ಚರ್ಚಿಸಿದರು.

  • ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು: ಶ್ರೀ ಶ್ರೀ ರವಿಶಂಕರ್‌ ಗುರೂಜಿ

    ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು: ಶ್ರೀ ಶ್ರೀ ರವಿಶಂಕರ್‌ ಗುರೂಜಿ

    – ‘ವಿಶ್ವ ಸಾಂಸ್ಕೃತಿಕ ಉತ್ಸವ’ದ ಮೊದಲ ದಿನದ ಕಾರ್ಯಕ್ರಮದಲ್ಲಿ 10 ಲಕ್ಷ ಮಂದಿ ಭಾಗಿ

    ಬೆಂಗಳೂರು: ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿ ಆರ್ಟ್‌ ಆಫ್‌ ಲಿವಿಂಗ್‌ (The Art Of Living) ಸಂಸ್ಥೆ ಆಯೋಜಿಸಿರುವ 4ನೇ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ (World Culture Festival 2023) 10 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. 180 ದೇಶಗಳ ಲಕ್ಷಾಂತರ ಜನರು ಜಗತ್ತಿನ ಮಾನವೀಯತೆ, ಶಾಂತಿ ಮತ್ತು ಸಂಸ್ಕೃತಿಗಳ ಸಂಗಮದ ಹಬ್ಬವಾದ ‘ವಿಶ್ವ ಸಾಂಸ್ಕೃತಿ ಉತ್ಸವ’ದಲ್ಲಿ ಭಾಗಿಯಾಗಿ ಅದ್ಭುತಕ್ಕೆ ಸಾಕ್ಷಿಯಾದರು.

    ಈ ಸಮಾರಂಭದಲ್ಲಿ ಜಾಗತಿಕ ಗಣ್ಯರಾದ ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಬಾನ್ ಕಿ-ಮೂನ್, ವಾಷಿಂಗ್ಟನ್‌ ಡಿ.ಸಿಯ ಮೇಯರ್ ಮುರಿಯಲ್ ಬೌಸರ್, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಬಿಷಪ್ ಎಮೆರಿಟ್ಸ್‌ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋ, ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನ ಚಾನ್ಸೆಲರ್ ಎಮೆರಿಟಸ್ ಪಾಲ್ಗೊಂಡಿದ್ದರು. ವಸುದೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಎಂಬ ಧ್ಯೇಯವಾಕ್ಯದೊಂದಿಗೆ ಆರ್ಟ್ ಆಫ್ ಲಿವಿಂಗ್‌ನ ‘ವಿಶ್ವ ಸಾಂಸ್ಕೃತಿಕ ಉತ್ಸವವು ಸಂಗೀತ, ನೃತ್ಯಗಳ ಮೂಲಕ ಏಕತೆ, ಸಾಮರಸ್ಯದ ಜಾಗತಿಕ ಸಂದೇಶ ಸಾರಿತು.

    ಜಾಗತಿಕ ಗಣ್ಯರು, ರೋಮಾಂಚನಗೊಳಿಸುವ ಸಂಗೀತ ಮತ್ತು ವರ್ಣರಂಜಿತ ನೃತ್ಯ ಪ್ರದರ್ಶನ ಕಲಾವಿದರು, ಗ್ರ್ಯಾಮಿ ಪ್ರಶಸ್ತಿ ವಿಜೇತರು, ಇತರೆ ಹೆಸರಾಂತ ಕಲಾವಿದರು ಬೃಹತ್‌ ಕಾರ್ಯಕ್ರಮದಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು.

    ಜಾಗತಿಕ ಮಾನವತಾವಾದಿ ಮತ್ತು ಶಾಂತಿದೂತರಾದ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ (Ravishankar Guruji) ಅವರು ಮಾತನಾಡಿ, ನಮ್ಮ ವೈವಿಧ್ಯತೆಯನ್ನು ಆಚರಿಸಲು ಇದು ಒಂದು ಸುಂದರ ಸಂದರ್ಭವಾಗಿದೆ. ನಮ್ಮ ಜಗತ್ತು ತುಂಬಾ ವೈವಿಧ್ಯಮಯವಾಗಿದೆ. ಆದರೂ ನಮ್ಮ ಮಾನವೀಯ ಮೌಲ್ಯಗಳಲ್ಲಿ ಏಕತೆ ಇದೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ಹೆಚ್ಚಿನ ಸಂತೋಷವನ್ನು ತರಲು ನಾವು ಬದ್ಧರಾಗೋಣ. ಎಲ್ಲರ ಮುಖದಲ್ಲೂ ನಗು ಮೂಡಿಸೋಣ. ಅದೇ ಮಾನವೀಯತೆ. ಅದರಿಂದಲೇ ನಾವೆಲ್ಲರೂ ಮಾಡಲ್ಪಟ್ಟಿರುವುದು. ಜ್ಞಾನದ ಬೆಂಬಲವಿಲ್ಲದಿದ್ದರೆ ಯಾವುದೇ ಆಚರಣೆಯು ಸತ್ವವನ್ನು ಹೊಂದಿರುವುದಿಲ್ಲ. ಆ ಜ್ಞಾನವು ನಮ್ಮೆಲ್ಲರೊಳಗಿದೆ. ನಾವು ವಿಭಿನ್ನವಾಗಿದ್ದರೂ, ನಾವೆಲ್ಲರೂ ಒಂದೇ ಎಂದು ಗುರುತಿಸುವುದು ಜಾಣ್ಮೆಯಾಗಿದೆ. ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಸೇರಿದವರು. ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು. ನಮ್ಮ ಜೀವನವನ್ನು ಸಂಭ್ರಮಿಸೋಣ. ಸವಾಲುಗಳನ್ನು ದಿಟ್ಟತನದಂದ ಸ್ವೀಕರಿಸಿ ಎದುರಿಸೋಣ. ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಕನಸನ್ನು ಕಾಣೋಣ ಎಂದು ಸಂದೇಶ ನೀಡಿದರು.

    ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಮಾತನಾಡಿ, ನಾವೆಲ್ಲರೂ ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ನಮ್ಮ ಭೂಮಿಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸವಾಲುಗಳನ್ನು ಎದುರಿಸುವುದು ಸಹಜ. ನೈಸರ್ಗಿಕ ವಿಕೋಪಗಳಾಗಲಿ, ಮಾನವ ನಿರ್ಮಿತವಾದವುಗಳಾಗಲಿ, ಘರ್ಷಣೆಗಳಾಗಲಿ ಅಥವಾ ಅಡೆತಡೆಗಳಾಗಲಿ ಪರಸ್ಪರ ಅವಲಂಬಿತ ಜಗತ್ತಿನಲ್ಲಿ ನಾವು ಯಾವಾಗಲೂ ಒಬ್ಬರಿಗೊಬ್ಬರು ಇರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಸ್ಪೂರ್ತಿದಾಯಕ ಉದಾಹರಣೆಯಾಗಿದೆ. ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಅವರು ಇತ್ತೀಚೆಗೆ ಬೀರಿದ ಪ್ರಭಾವವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇಂದು ಅವರ ಸಂದೇಶ, ನಿಮ್ಮ ಸಂದೇಶ, ನಮ್ಮ ಸಂದೇಶವು ಕಾಳಜಿ, ಹಂಚಿಕೊಳ್ಳುವಿಕೆ, ಔದಾರ್ಯ, ತಿಳುವಳಿಕೆಯ ಸದ್ಭಾವನೆ ಮತ್ತು ಸಹಕಾರವಾಗಿರಬೇಕು. ಇದುವೇ ನಮ್ಮೆಲ್ಲರನ್ನೂ ಇಲ್ಲಿ ಒಟ್ಟುಗೂಡಿಸಿರುವುದು ಎಂದು ಹೇಳಿದರು.

    ವಿಶ್ವ ಸಾಂಸ್ಕೃತಿಕ ಉತ್ಸವದ ಮೊದಲ ದಿನದಂದು ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಬಾನ್ ಕಿ-ಮೂನ್, ವಾಷಿಂಗ್ಟನ್‌ ಡಿ.ಸಿಯ ಮೇಯರ್ ಮುರಿಯಲ್ ಬೌಸರ್, ಮಿಚಿಗನ್ ಕಾಂಗ್ರೆಸಿಗ ಥಾನೆದರ್, ಜಪಾನಿನ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಜಿ ಸಚಿವ, ಸಂಸದ ಹಕುಬುನ್ ಶಿಮೊಮುರಾ, ಯುಎನ್‌ಇಪಿಯ ಮಾಜಿ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಯುಎನ್‌ಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್‌ಹೈಮ್, ಮಾಜಿ ಅಂತಾರಾಷ್ಟ್ರೀಯ ಅಭಿವೃದ್ಧಿ ನಾರ್ವೆ ಸಚಿವರು ಮತ್ತು ಇತರ ಜಾಗತಿಕ ಗಣ್ಯರು, ಅನೇಕ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ಸಂಘರ್ಷದ ಜಗತ್ತಿನಲ್ಲಿ ಏಕತೆ, ಶಾಂತಿ ಮತ್ತು ಸಾಮರಸ್ಯದ ಸಹಬಾಳ್ವೆ ಕುರಿತು ಮಾತನಾಡಿದರು.

    ದಿ ರೆವರೆಂಡ್ ಬಿಷಪ್ ಎಮೆರಿಟ್ಸ್‌ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋ ಅವರು, ವಿಶ್ವ ಶಾಂತಿ ಸಾಧಿಸಲು ನಮ್ಮಲ್ಲಿ ಆಂತರಿಕ ಶಾಂತಿಯಿರಬೇಕು. ಶಾಂತಿಯನ್ನು ಸಂವಹನ ಮಾಡಲು, ನಾವು ಶಾಂತಿಯಿಂದ ಬದುಕಬೇಕು. ಶಾಂತಿಯಿಂದ ಬದುಕಲು ನಮಗೆ ಆರ್ಟ್ ಆಫ್ ಲಿವಿಂಗ್ ಅಗತ್ಯವಿದೆ. ಶಾಂತಿಯಿಂದ ಬದುಕುವ ಕಲೆಯನ್ನು ಹೊಂದಲು ನಾವು ದೇವರೊಂದಿಗೆ ಸಂವಹನ ಸಾಧಿಸಬೇಕು. ದೇವರು ಮಾನವನಿಗೆ ಶತ್ರುವಲ್ಲ. ದೇವರು ಒಬ್ಬ ಸ್ನೇಹಿತ. ದೇವರು ಅಂದರೆ ಪ್ರೀತಿ. ದೇವರನ್ನು ಹೊಂದಲು ನಾವು ಧ್ಯಾನಕ್ಕೆ, ಪ್ರಾರ್ಥನೆಗೆ ಹಿಂತಿರುಗಬೇಕಾಗಿದೆ. ನಾವು ನಮ್ಮ ಮೂಲಕ್ಕೆ ಹಿಂತಿರುಗಬೇಕಾಗಿದೆ. ಆದ್ದರಿಂದ ಈ ಸೂಕ್ಷ್ಮ ಕ್ಷಣದಲ್ಲಿ ನಾವು ದೇವರನ್ನು ಪ್ರಾರ್ಥಿಸಬೇಕಾಗಿದೆ. ಪೋಪ್ ಫ್ರಾನ್ಸಿಸ್ ಅವರ ಹೆಸರಿನಲ್ಲಿ ನಾವು ಎಲ್ಲಾ ಮಾನವರ ಭ್ರಾತೃತ್ವದಲ್ಲಿ ನಾನು ನಿಮ್ಮನ್ನು ಆಶೀರ್ವದಿಸುತ್ತೇನೆ. ನಾನು ಈ ದೊಡ್ಡ ಸಭೆಯನ್ನು ಆಶೀರ್ವದಿಸುತ್ತೇನೆ. ಈ ಜೀವನ ಕ್ರಮವು ನಿಜವಾಗಿಯೂ ನಮ್ಮ ಮಾನವೀಯತೆಯ ಭವಿಷ್ಯವಾಗಿರಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

    ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರಿಂದ ಪ್ರೇರಿತರಾಗಿ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಆಯೋಜಿಸಿದ ವಿಶ್ವ ಸಾಂಸ್ಕೃತಿಕ ಉತ್ಸವವು ಗಡಿಗಳನ್ನು ಮೀರಿದ್ದು, ಮಾನವೀಯತೆ ಮತ್ತು ಸಹೋದರತ್ವದ ಎಳೆಯಲ್ಲಿ ಒಟ್ಟಿಗೆ ಕಟ್ಟಿದ ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಆಚರಿಸಿತು. ಸಂಗೀತ ಮತ್ತು ನೃತ್ಯದ ಮೂಲಕ ಸ್ಥಳೀಯ ಸಂಪ್ರದಾಯಗಳ ಸಂರಕ್ಷಣೆಗಾಗಿ ವಿಶ್ವ ಸಾಂಸ್ಕೃತಿಕ ಉತ್ಸವವು ವೇದಿಕೆ ಒದಗಿಸುತ್ತದೆ. ಹಾಗೆಯೇ ಪ್ರತಿಯೊಬ್ಬರೂ ಆನಂದಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಪ್ರೀತಿ, ಸಹಾನುಭೂತಿ ಮತ್ತು ಸೌಹಾರ್ದತೆಯಂತಹ ಸಾರ್ವತ್ರಿಕ ಮಾನವೀಯ ಮೌಲ್ಯಗಳ ಪುನರುಜ್ಜೀವನದ ಆಂದೋಲನವಾಗಿದೆ ಎಂದು ಹೇಳಿಲಾಯಿತು.

    ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಮಹಾಮಹಿಮರಾದ ಬಾನ್ ಕಿ-ಮೂನ್, ಸಂಸ್ಕೃತಿ ಸೇತುವೆಗಳನ್ನು ನಿರ್ಮಿಸುತ್ತದೆ, ಗೋಡೆಗಳನ್ನು ಒಡೆಯುತ್ತದೆ. ಮಾತುಕತೆ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಜಗತ್ತನ್ನು ಒಟ್ಟುಗೂಡಿಸುತ್ತದೆ. ಜನರು ಮತ್ತು ರಾಷ್ಟ್ರಗಳ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಂಸ್ಕೃತಿಯು ಎಲ್ಲಾ ಜಾಗತಿಕ ನಾಗರಿಕರ ನಡುವೆ ಪ್ರಬಲ ವಿನಿಮಯವನ್ನು ರಚಿಸಬಹುದು. ಇಂದು ಪ್ರಪಂಚದ ಎಲ್ಲಾ ಸಾಂಸ್ಕೃತಿಕ ಶ್ರೀಮಂತಿಕೆಯು ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಮಾಲ್‌ನಲ್ಲಿ ಒಟ್ಟುಗೂಡಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಏಕತೆ ಮತ್ತು ವೈವಿಧ್ಯತೆಯ ಸ್ಪೂರ್ತಿದಾಯಕ ದೃಷ್ಟಿಕೋನವನ್ನು ನಾನು ಪ್ರಶಂಸಿಸುತ್ತೇನೆ. ನಮಗೆ ಇಂತಹ ಹೆಚ್ಚು ಹೆಚ್ಚು ಆಚರಣೆಗಳು, ಹೆಚ್ಚು ಒಗ್ಗೂಡುವಿಕೆ, ಹೆಚ್ಚು ಶಾಂತಿ ಮತ್ತು ಹೆಚ್ಚಿನ ಸಹಕಾರ, ಐಕ್ಯಭಾವ ಮತ್ತು ಪಾಲುದಾರಿಕೆಯ ಅಗತ್ಯವಿದೆ. ನಾವು ಈಗ ಎದುರಿಸುತ್ತಿರುವ ದೊಡ್ಡ ಸವಾಲುಗಳ ಮೇಲೆ ನಾವು ಹೀಗೆಯೇ ಮುನ್ನುಗ್ಗಿ ಮುಂದುವರಿಯುತ್ತೇವೆ. ಇದೇ ರೀತಿ ನಾವು ಶಾಂತಿಯನ್ನು ನಿರ್ಮಿಸುತ್ತೇವೆ. ಸಂಘರ್ಷಗಳನ್ನು ಪರಿಹರಿಸುತ್ತೇವೆ. ಹಸಿವನ್ನು ಕೊನೆಗೊಳಿಸುತ್ತೇವೆ. ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳುತ್ತೇವೆ. ಗುಣಮಟ್ಟದ ಶಿಕ್ಷಣವನ್ನು ಮುನ್ನಡೆಸುತ್ತೇವೆ. ಮಹಿಳೆಯರು ಮತ್ತು ಬಾಲಕಿಯರನ್ನು ಸಬಲೀಕರಣಗೊಳಿಸುತ್ತೇವೆ. ಹೀಗೆಯೇ ನಾವು ಯಾರೂ ಹಿಂದುಳಿಯದಂತೆ ಮುನ್ನಡೆಯಲಿರುವುದು ಎಂದು ತಿಳಿಸಿದರು.

    ಸಾವಿರಾರು ರಾಷ್ಟ್ರಧ್ವಜಗಳು ಏಕತೆಯ ಉತ್ಸಾಹದಲ್ಲಿ ಗಾಳಿಯಲ್ಲಿ ಹಾರಾಡಿದವು. ಉತ್ಸವದಲ್ಲಿ ನೆರೆದಿದ್ದ ಜನರ ಉತ್ಸಾಹ ಮತ್ತು ಸಂತೋಷ ಇಮ್ಮಡಿಗೊಂಡಿತ್ತು. ಕಲಾವಿದರಲ್ಲಿ ಶಕ್ತಿಯ ಸಂಚಲನ ಮೂಡಿದಂತಿತ್ತು.

    ಉತ್ಸವದ ಮಹತ್ವ ಕುರಿತು ಮಾತನಾಡಿದ ಮೋಹಿನಿಯಾಟ್ಟಂ ಪ್ರದರ್ಶನದ ನೃತ್ಯ ಸಂಯೋಜಕಿ ಬೀನಾ ಮೋಹನ್, ಈ ಪ್ರದರ್ಶನದ ಭಾಗವಾಗುವುದು ಒಂದು ಕನಸು. ಈ ಕಾರ್ಯವನ್ನು ಸಂಯೋಜಿಸುವುದು ನನಗೆ ಮತ್ತು ನನ್ನ ವಿದ್ಯಾರ್ಥಿಗಳಿಗೆ ನಂಬಲಾಗದ ಒಂದು ಅನುಭವವಾಗಿತ್ತು. ಪ್ರದರ್ಶನದ ನಂತರ ಇದು ನಮಗೆ ತರುವ ಆತ್ಮವಿಶ್ವಾಸ, ಸಂತೋಷ ಎಲ್ಲವೂ ಒಂದು ವಿಭಿನ್ನ ಭಾವನೆಯಾಗಿರಲಿದೆ ಎಂದು ಅವರು ಹೇಳಿದರು.

    ವಿಶ್ವ ಸಾಂಸ್ಕೃತಿಕ ಉತ್ಸವದ ತಮ್ಮ ಭಾಷಣದಲ್ಲಿ ಮಿಚಿಗನ್ ಕಾಂಗ್ರೆಸಿಗರಾದ ಥಾನೇದಾರ್ ಮಾತನಾಡಿ, ಕರ್ನಾಟಕ ರಾಜ್ಯದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಅನಿಸಿಕೆ ಹಂಚಿಕೊಂಡರು. ಎಂತಹ ಸುಂದರವಾದ ಸಂಜೆ. ಎಂತಹ ಸುಂದರ ಪ್ರದರ್ಶನಗಳು. ನಾವು ಸ್ವಲ್ಪ ಮಳೆಯನ್ನು ನೋಡಿದ್ದೇವೆ. ಅದು ವಿಶ್ವ ಶಾಂತಿ ಮತ್ತು ಹೊಸ ಆರಂಭವನ್ನು ತರುತ್ತದೆ. ಕರ್ನಾಟಕದ ಬೆಳಗಾವಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮನೆಯಲ್ಲಿ ಬೆಳೆದು, ಆ ರಾಜ್ಯವನ್ನು ಗುರುದೇವರೊಂದಿಗೆ ಹಂಚಿಕೊಂಡಿದ್ದ ನನಗೆ ಇತ್ತೀಚೆಗೆ ಗುರುದೇವರೊಂದಿಗೆ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಾಯಿತು ಎಂದರು.

    ಗ್ರ್ಯಾಮಿ ಪ್ರಶಸ್ತಿ ವಿಜೇತೆ ಚಂದ್ರಿಕಾ ಟಂಡನ್ ಮತ್ತು 200 ಕಲಾವಿದರು ‘ಅಮೆರಿಕಾ ದಿ ಬ್ಯೂಟಿಫುಲ್ ಮತ್ತು ವಂದೇ ಮಾತರಂ’ ಗಾಯನ ಮಾಡಿದರು. 1,000 ಕಲಾವಿದರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಕಛೇರಿಯು ಪಂಚಭೂತಂ ಎಂಬ ಪ್ರದರ್ಶನ ನಡೆಸಿತು. ಗ್ರ್ಯಾಮಿ ಪ್ರಶಸ್ತಿ ವಿಜೇತ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1,000 ಗಿಟಾರ್‌ಗಳ ವಾದನವೂ ನಡೆಯಿತು. ಆಫ್ರಿಕಾ, ಜಪಾನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಅನೇಕ ಪ್ರದರ್ಶನಗಳು ನಡೆದವು. ಅಂತಿಮವಾಗಿ ‘ಒನ್ ಲವ್’ ಆಚರಣೆಯೊಂದಿಗೆ ಸ್ಕಿಪ್ ಮಾರ್ಲೆಯವರ ರೆಗ್ಗೀ ರಿದಮ್ಸ್ ಪ್ರದರ್ಶನದೊಂದಿಗೆ ಮೊದಲ ದಿನದ ಕಾರ್ಯಕ್ರಮವು ಮುಕ್ತಾಯಗೊಂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ

    ಬೆಂಗಳೂರು: ಇಲ್ಲಿನ ಆರ್ಟ್‌ ಆಫ್‌ ಲಿವಿಂಗ್‌ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ದುರ್ಗಾಷಮಿ ಪೂಜಾ ಮಹೋತ್ಸವದ (Dasara Celebration) ಅದ್ಧೂರಿ ಆಚರಣೆ ನಡೆಯಿತು. 82 ದೇಶಗಳಿಂದ ಒಂದೂವರೆ ಲಕ್ಷ ಜನರು ವಿಶೇಷ ಹೋಮ, ಮಂತ್ರೋಚ್ಚಾರಣೆ, ಭಜನೆ, ಧ್ಯಾನದ ಮೂಲಕ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.

    ವಿಶ್ವದ ಶಾಂತಿಗಾಗಿ ಹಾಗೂ ಯೋಗಕ್ಷೇಮಕ್ಕಾಗಿ ಶಕ್ತಿಶಾಲಿ ಚಂಡಿ ಹೋಮ ನೆರವೇರಿಸಲಾಯಿತು. ಮಂತ್ರೋಪಚಾರಣೆಯೊಂದಿಗೆ 108 ಗಿಡಮೂಲಿಕೆಗಳು, ಹಣ್ಣುಗಳು ಹಾಗೂ ವಿಶೇಷ ಪದಾರ್ಥಗಳನ್ನು ಹೋಮಕ್ಕೆ ಅರ್ಪಣೆ ಮಾಡಲಾಯಿತು. 700 ಶ್ಲೋಕಗಳನ್ನೊಳಗೊಂಡ ದುರ್ಗಾ ಸಪ್ತಶತಿ ಪಾರಾಯಣ ಮಾಡಿದ ನಂತರ ಗೋಪೂಜೆ, ಗಜಪೂಜೆ, ಕನ್ಯಾಪೂಜೆ, ವಟುಪೂಜೆ ಹಾಗೂ ದಂಪತಿ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ: ಸ್ವಚ್ಛನಗರಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕುಸಿದ ಬೆಂಗಳೂರು- ಬಿಗ್‌ಶೇಮ್‌ ಎಂದು ಕುಟುಕಿದ ಪೈ

    ಈ ಕುರಿತು ಮಾತನಾಡಿದ ಶ್ರೀ ಶ್ರೀ ರವಿಶಂಕರ್‌ ಗುರೂಜಿ (Sri Sri Ravi Shankar Guruj) ಅವರು, ಚಂಡಿ ಎಂದರೆ ಬಹಳ ಶಕ್ತಿಶಾಲಿ ಎಂದರ್ಥ. ಚಂಡಿಹೋಮದ ಪ್ರತಿಯೊಂದು ಮಂತ್ರದೊಡನೆ ಒಂದು ಗಿಡಮೂಲಿಕೆ ಸಂಬಂಧ ಪಟ್ಟಿದೆ. ಪ್ರತೀ ಮಂತ್ರವೂ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಇದು ವಾತಾವರಣದಲ್ಲಿ ಸಕಾರಾತ್ಮಕ ಕಂಪನಗಳನ್ನುಂಟುಮಾಡುತ್ತದೆ. ಈ ನವರಾತ್ರಿ ಉತ್ಸವವು ಸಂಕುಚಿತ ಮನಸ್ಸಿನಿಂದ ವಿಶಾಲ ಮನಸ್ಸಿನ ಚಲನೆಯ ಸಂಭ್ರಮಾಚರಣೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಾಂಡಿಯಾ ಪೆಂಡಾಲ್‌ನಲ್ಲಿ ಮುಸ್ಲಿಮ್ ಯುವಕರಿಗೆ ಏನು ಕೆಲಸ – ಮುತಾಲಿಕ್ ಪ್ರಶ್ನೆ

    ನವರಾತ್ರಿಯ ಮತ್ತೊಂದು ವಿಶೇಷವೆಂದರೆ ಆಶ್ರಮದ ಅಡುಗೆ ಮನೆಯಲ್ಲಿ ಪ್ರತಿನಿತ್ಯವೂ ಸಾವಿರಾರು ಭಕ್ತರಿಗಾಗಿ ಪ್ರಸಾದ ವಿತರಣೆ ಮಾಡಲಾಯಿತು. ಅದಕ್ಕಾಗಿ 60 ಟನ್ ಅಕ್ಕಿ, 40 ಟನ್ ಗೋಧಿಹಿಟ್ಟು, 20 ಟನ್ ಬೇಳೆ, 40,000 ಲೀಟರ್ ಎಣ್ಣೆ, 45,000 ಲೀಟರ್ ಹಾಲು, 250 ಟನ್ ತರಕಾರಿ, 10,000 ಲೀಟರ್ ಮೊಸರನ್ನು ಬಳಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಸಂಸ್ಕೃತಿಯಿಂದ ಮಾತ್ರ ಪ್ರಪಂಚಕ್ಕೆ ಸಂತೋಷ ಕೊಡಲು ಸಾಧ್ಯ: ರವಿಶಂಕರ್ ಗುರೂಜಿ

    ಭಾರತೀಯ ಸಂಸ್ಕೃತಿಯಿಂದ ಮಾತ್ರ ಪ್ರಪಂಚಕ್ಕೆ ಸಂತೋಷ ಕೊಡಲು ಸಾಧ್ಯ: ರವಿಶಂಕರ್ ಗುರೂಜಿ

    ಶಿವಮೊಗ್ಗ: ಇಂದು ವಿಶ್ವ ಸಂತೋಷದ ದಿನ. ಪ್ರಪಂಚಕ್ಕೆ ಸಂತೋಷ ಕೊಡಬೇಕಿದ್ರೆ ಅದು ಭಾರತೀಯ ಸಂಸ್ಕೃತಿಯಿಂದ ಮಾತ್ರ ಸಾಧ್ಯ. ಭಾರತೀಯ ವಿಧಾನವೇ ಎಲ್ಲರನ್ನು ಜೋಡಿಸುವುದು, ಎಲ್ಲರನ್ನು ಒಂದುಗೂಡಿಸುವುದು ಆಗಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ತಿಳಿಸಿದರು.

    ಶಿವಮೊಗ್ಗದಲ್ಲಿ ಆರ್ಟ್ ಆಫ್ ಲಿವಿಂಗ್‍ನ 40ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಜ್ಞಾನಕ್ಷೇತ್ರ ಕಟ್ಟಡ ಉದ್ಘಾಟನೆ ಹಾಗೂ ವಿಶ್ವಶಾಂತಿ, ಆರೋಗ್ಯ ಮತ್ತು ಲೋಕ ಕಲ್ಯಾಣಾರ್ಥವಾಗಿ ರುದ್ರಪೂಜೆ ಮತ್ತು ಸತ್ಸಂಗ ಕಾರ್ಯಕ್ರಮ ನಡೆಯಿತು. ನಗರದ ನವುಲೆಯ ನವನಗರ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಜ್ಞಾನಕ್ಷೇತ್ರ ಕಟ್ಟಡವನ್ನು ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಡಾ.ಕೆ.ಸಿ.ನಾರಾಯಣಗೌಡ ಉದ್ಘಾಟಿಸಿದರು. ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ರುದ್ರಪೂಜೆ ಹಾಗೂ ಸತ್ಸಂಗ ನಡೆಯಿತು. ಇದನ್ನೂ ಓದಿ: ಸೋಮವಾರ ನಸುಕಿನ ಜಾವ ಬೆಂಗಳೂರಿಗೆ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

    ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್ ಗುರೂಜಿ, ಮನುಷ್ಯ ಜೀವನ ಸಿಕ್ಕಿರುವುದು ಸುಮ್ಮನೆ ಉಂಡು, ತಿಂದು, ಮಲಗಿ, ಸಾಯೋದಕ್ಕಲ್ಲ. ನಗು ನಗುತಾ ಬಾಳುವುದು ಮನುಷ್ಯನ ಧರ್ಮ. ಕರ್ನಾಟಕದ ಜನರು ಸೌಮ್ಯ ಸ್ವಭಾವದವರು. ಇಂದು ಈ ಸೌಮ್ಯತನ ಇಡಿ ಪ್ರಪಂಚಕ್ಕೆ ಬೇಕಾಗಿದೆ. ನಮ್ಮಲ್ಲಿ ಸ್ವೀಕಾರ ಮನೋಭಾವ, ಸಹೃದಯತೆ ಇದೆಯಲ್ಲಾ ಅದು ಸಭ್ಯ ಸಂಸ್ಕೃತಿಗೆ, ಸಭ್ಯ ಸಮಾಜಕ್ಕೆ ಅವಶ್ಯಕತೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಫ್ರೀ ಲಿಂಕ್ ಬಗ್ಗೆ ಇರಲಿ ಎಚ್ಚರ – ಮಂಗಳೂರಿನಲ್ಲೂ ಸೈಬರ್ ವಂಚನೆ ಬೆಳಕಿಗೆ

    ಕಾರ್ಯಕ್ರಮದಲ್ಲಿ ಮಾಜಿ ಸಚಿವ ಯು.ಟಿ.ಖಾದರ್, ಶಾಸಕ ಬಿ.ಕೆ.ಸಂಗಮೇಶ್, ಎಂಎಲ್‍ಸಿ ಡಿ.ಎಸ್.ಅರುಣ್, ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

  • ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ: ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ದಿನದಂದೇ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ.

    ಆರ್‍ಎಸ್‍ಎಸ್ ಮತ್ತು ವಿಶ್ವಹಿಂದೂ ಪರಿಷದ್ ನ ರಾಮ ಮಂದಿರ ನಿರ್ಮಾಣ ಕುರಿತಾದ ಏಕಪಕ್ಷೀಯ ನಿರ್ಣಯದಿಂದ ರವಿಶಂಕರ್ ಗುರೂಜಿಗೆ ಮುಖಭಂಗವಾಗಿತ್ತು. ಧರ್ಮ ಸಂಸದ್ ಮುಗಿದ ನಂತರ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ರವಿಶಂಕರ ಗುರೂಜಿ ಶ್ರೀಕೃಷ್ಣನ ದರ್ಶನ ಮಾಡಿ ಚಂದ್ರಶಾಲೆಯಲ್ಲಿ ಕುಳಿತಿದ್ದರು.

    ಬೆಳಗ್ಗೆಯ ಪೂಜೆಯಲ್ಲಿದ್ದ ಪೇಜಾವರ ಶ್ರೀಗಳು ರವಿಶಂಕರ್ ಗುರೂಜಿಯನ್ನು ಕಂಡು ಪೂಜೆ ಮುಗಿಸಿ ಬರುವುದಾಗಿ ಹೇಳಿ ಕೃಷ್ಣಪೂಜೆಯಲ್ಲಿ ತೊಡಗಿದರು. ನಂತರ ಮಠದ ಬಡಗು ಮಾಳಿಗೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಪೇಜಾವರ ಶ್ರೀ ಮತ್ತು ರವಿಶಂಕರ್ ಗುರೂಜಿ ಗೌಪ್ಯ ಮಾತುಕತೆ ಮಾಡಿದರು. ಪೇಜಾವರ ಶ್ರೀಗಳು ಧರ್ಮ ಸಂಸದ್ ನಲ್ಲಿ ನಡೆದ ಗೋಷ್ಟಿಗಳ ಬಗ್ಗೆ ಪೇಜಾವರ ಮಾಹಿತಿ ನೀಡಿದ್ದಾರೆ. ರವಿಶಂಕರ್ ಗುರೂಜಿ ತನ್ನ ಮಧ್ಯಸ್ಥಿಕೆಯ ಬೆಳವಣಿಗೆ ಬಗ್ಗೆ ಮಾತುಕತೆ ಮಾಡಿದ್ದಾರೆ.

    ಗೌಪ್ಯ ಮಾತುಕತೆ ನಂತರ ಹೊರಬಂದ ಶ್ರೀರವಿಶಂಕರ್ ಗುರೂಜಿ, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇದೆ. ಸೌಹಾರ್ದ ಪ್ರಯತ್ನ ಮುಂದುವರೆಸುತ್ತೇನೆ. ನ್ಯಾಯಾಲಯದ ಹೊರಗೆ ರಾಮಜನ್ಮಭೂಮಿ ವಿವಾದ ಬಗೆಹರಿಸಲು ನಮ್ಮ ಪರ ಯತ್ನ ಮುಂದುವರೆಯುತ್ತದೆ. ನಾನು ಭೇಟಿಯಾದ ಎಲ್ಲರೂ ಮಂದಿರ ನಿರ್ಮಾಣದ ಪರವಾಗಿದ್ದಾರೆ. ಮುಸ್ಲಿಮರೂ ಸಹಮತ ವ್ಯಕ್ತಪಡಿಸಿದ್ದಾರೆ. ಆರ್‍ಎಸ್‍ಎಸ್ ತನ್ನದೇ ಅಭಿಪ್ರಾಯ ಹೊಂದಲು ಸ್ವತಂತ್ರ ಎಂದರು.

    ಪೇಜಾವರಶ್ರೀ ಮಾತನಾಡಿ, ಗೌಪ್ಯ ಮಾತುಕತೆಯ ವಿವರಣೆಗಳನ್ನು ಹೇಳಲ್ಲ. ಧರ್ಮಸಂಸದ್‍ನಲ್ಲಿ ಗುರೂಜಿಗೆ ವಿರೋಧವಿತ್ತು ಎಂದು ಹೇಳಲಾರೆ. ನ್ಯಾಯಾಲಯದ ಹೊರಗೆ ತೀರ್ಮಾನವಾಗಬೇಕು ಎಂಬುದು ನಮ್ಮ ಅಪೇಕ್ಷೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಅನ್ನೋದು ಎಲ್ಲರ ಅಭಿಪ್ರಾಯ ಎಂದರು.

    ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಜೊತೆ ಸಂಧಾನಕ್ಕೆ ಯತ್ನಿಸದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಗೈರು ಹಾಜರಿ ಹಾಕಿದ್ದರು ಎಂದು ಹೇಳಲಾಗುತ್ತಿದೆ.

  • 30 ವರ್ಷಗಳ ಕಾಲ ಆಡಿದ್ರೂ ಬ್ಯಾಡ್ಮಿಂಟನ್ ಬಗ್ಗೆ ನನಗೆ ಜಾಸ್ತಿ ತಿಳಿದಿಲ್ಲ: ಗೋಪಿಚಂದ್

    30 ವರ್ಷಗಳ ಕಾಲ ಆಡಿದ್ರೂ ಬ್ಯಾಡ್ಮಿಂಟನ್ ಬಗ್ಗೆ ನನಗೆ ಜಾಸ್ತಿ ತಿಳಿದಿಲ್ಲ: ಗೋಪಿಚಂದ್

    ಬೆಂಗಳೂರು: 30 ವರ್ಷಗಳ ಕಾಲ ಬ್ಯಾಡ್ಮಿಂಟನ್ ಆಡುತ್ತಿದ್ದರೂ ಅದರ ಬಗ್ಗೆ ನನಗೆ ಜಾಸ್ತಿ ತಿಳಿದಿಲ್ಲ ಎಂದು ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದಾರೆ.

    ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಗ್ಲೋಬಲ್ ಲೀಡರ್‍ಶಿಪ್ ಫೋರಂ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಜೀವನದ ಅನುಭವವನ್ನು ಉದಾಹರಣೆಯಾಗಿ ನೀಡುತ್ತಾ ಯುವ ಜನರಿಗೆ ಯಶಸ್ವಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಲಹೆಗಳನ್ನು ನೀಡಿದರು.

    ಪ್ರತಿ ವಿದ್ಯಾರ್ಥಿಯಲ್ಲೂ ವಿಶೇಷ ಸಾಮರ್ಥ್ಯವಿರುತ್ತದೆ. ಉಸೇನ್ ಬೋಲ್ಟ್ ಅವರ ವಿರುದ್ಧ ಸ್ಪರ್ಧಿಸಿ ಅವರನ್ನು ಸೋಲಿಸುವುದು ದೊಡ್ಡ ವಿಷಯವಲ್ಲ. ನಾನು ನನ್ನ ವಿರುದ್ಧ ಪ್ರತಿ ದಿನವು ಸ್ಪರ್ಧಿಸುತ್ತೇನೆ. ಪ್ರತಿ ಬಾರಿ ಸ್ಪರ್ಧೆ ಮಾಡುವಾಗಲೂ ಕಳೆದ ಅವಧಿಗಿಂತ ಉತ್ತಮ ಫಲಿತಾಂಶವನ್ನು ಪಡೆಯುತ್ತೇನೆ. ಆದು ನಮಗೇ ಹಲವು ಯಶಸ್ಸುಗಳನ್ನು ತಂದು ಕೊಡುತ್ತದೆ ಎಂದು ಸಲಹೆ ನೀಡಿದರು.

    ಬ್ಯಾಡ್ಮಿಂಟನ್ ತರಬೇತುದಾರನಾಗಿ ವೃತ್ತಿಜೀವನ ಆರಂಭಿಸಿದ್ದು ಅಚ್ಚರಿಯ ಆಯ್ಕೆಯಾಗಿದ್ದು, ತಾನು ಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಕ್ರಿಕೆಟ್ ಜನಪ್ರಿಯವಾಗಿತ್ತು. ಯಾರು ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಇಂತಹ ಸಮಯದಲ್ಲಿ ನಾನು ಬ್ಯಾಡ್ಮಿಟನ್ ಆಯ್ಕೆ ಮಾಡಿಕೊಂಡೆ ಎಂದು ಹೇಳಿದರು.

    2004 ರಲ್ಲಿ ನಾನು ಬ್ಯಾಡ್ಮಿಟನ್ ತರಬೇತುದಾರನಾಗಿ ವೃತ್ತಿ ಜೀವನ ಆರಂಭ ಮಾಡಿದೆ. ಆ ಸಮಯದಲ್ಲಿ ತರಬೇತಿಗೆ ಬರುವ ವಿದ್ಯಾರ್ಥಿಗಳಲ್ಲಿ ಉತ್ತಮವಾಗಿರುವವರನ್ನು ಗುರುತಿಸಿ ತರಬೇತಿ ನೀಡಬೇಕಾಗಿತ್ತು. ಆದರೆ ಅದನ್ನು ನಾನು ಅದನ್ನು ತಪ್ಪು ಎಂದು ಸಾಬೀತು ಪಡಿಸಿದ್ದೇನೆ. ಕಾಕ್ ಹಿಡಿಯಲು ಬಾರದ ಹೆಣ್ಣು ಮಕ್ಕಳಿಗೆ ಆಟ ಹೇಳಿಕೊಟ್ಟಿದ್ದೇನೆ. ಇಂದು ಮಕ್ಕಳಿಗೆ ಶಿಕ್ಷಣ ಹಾಗೂ ತಂತ್ರಜ್ಞಾನದ ಮೇಲೆ ಆಸಕ್ತಿ ಹೆಚ್ಚಿಸಲು ಒತ್ತಡ ಹಾಕುತ್ತೇವೆ. ಇದರಿಂದಾಗಿ ಮಕ್ಕಳಲ್ಲಿ ಮಾನವೀಯ ಸಂಬಂಧಗಳು ಕಡಿಮೆಯಾಗುತ್ತದೆ ಎಂದು ಹೇಳಿದರು.

    ಸಮಾವೇಶದ ಕುರಿತು ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಅವರು ಯುವ ಸಮುದಾಯದಲ್ಲಿ ನಾಯಕತ್ವ ಬೆಳವಣಿಗೆ ಮಹತ್ವದ ಕುರಿತು ವಿವರಿಸಿದರು.

    ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಎರಡನೇ ವರ್ಷದ ಸಮ್ಮೇಳನ ನಡೆದಿದ್ದು, ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಈ ವೇಳೆ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.