Tag: Arsikere City Police

  • ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ ಕೇಸ್ – ಓರ್ವ ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ ಕೇಸ್ – ಓರ್ವ ಅಪ್ರಾಪ್ತ ಸೇರಿ ಇಬ್ಬರ ಬಂಧನ

    – ಕೇವಲ 10 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

    ಹಾಸನ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ (Contractor Murder) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.

    ಬಿಹಾರ (Bihar) ಮೂಲದ ಕಾರ್ಮಿಕರಾದ ಬಿಕ್ರಂಕುಮಾರ್ (25), ಅಪ್ರಾಪ್ತ ಸಚಿನ್‌ಕುಮಾರ್ (15) ಬಂಧಿತ ಆರೋಪಿಗಳು. ಇದನ್ನೂ ಓದಿ: ಚಿನ್ನಕ್ಕಾಗಿ ಜೊತೆಗಿದ್ದ ಕಾರ್ಮಿಕರಿಂದಲೇ ಕಂಟ್ರಾಕ್ಟರ್ ಬರ್ಬರ ಹತ್ಯೆ – ಆಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಆರೋಪಿ ಬಿಕ್ರಂಕುಮಾರ್ ಬಿಹಾರದ ಪೂರ್ನಿಯಾ ಜಿಲ್ಲೆಯ ರಾಂಪುರ ಗ್ರಾಮದವನಾಗಿದ್ದು, ಅಪ್ರಾಪ್ತ ಬಾಲಕ ಸಚಿನ್‌ಕುಮಾರ್ ಪೂರ್ನಿಯಾ ಜಿಲ್ಲೆಯ ರೂಪೋಲಿ ಗ್ರಾಮದವನೆಂದು ತಿಳಿದುಬಂದಿದೆ. ಬಿಕ್ರಂಕುಮಾರ್ 2 ತಿಂಗಳ ಹಿಂದೆ ಕುಟುಂಬ ಸಮೇತರಾಗಿ ಕೆಲಸ ಹುಡುಕಿಕೊಂಡು ಅರಸೀಕೆರೆಗೆ ಬಂದಿದ್ದ. ಬಳಿಕ ಒಂದೂವರೆ ತಿಂಗಳು ಕೆಲಸ ಮಾಡಿ, ಹಬ್ಬ ಇದೆ ಎಂದು ಹೇಳಿ ಗ್ರಾಮಕ್ಕೆ ತೆರಳಿದ್ದ. ಬಿಕ್ರಂಕುಮಾರ್ ಪತ್ನಿ ಹಾಗೂ ಮಗುವನ್ನು ಊರಲ್ಲೇ ಬಿಟ್ಟು, ಅಪ್ರಾಪ್ತ ಬಾಲಕನನ್ನು ಕಳೆದ ಹದಿನೈದು ದಿನಗಳ ಹಿಂದೆ ಅರಸೀಕೆರೆಗೆ ಕರೆದುಕೊಂಡು ಬಂದಿದ್ದ. ಇದನ್ನೂ ಓದಿ: ತಪ್ಪಿಲ್ಲದಿದ್ರೂ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ: ಆಟೋ ಚಾಲಕ

    ಕೊಲೆ ಆರೋಪಿಗಳನ್ನು ಅರಸೀಕೆರೆ ನಗರ ಠಾಣೆ ಪೊಲೀಸರು (Arsikere City Police), ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 2 ಚಿನ್ನದ ಸರ, 3 ಚಿನ್ನದ ಉಂಗುರಗಳು ಹಾಗೂ 1 ಬೈಕ್ ವಶಕ್ಕೆ ಪಡೆದಿದ್ದಾರೆ.

    ಏನಿದು ಪ್ರಕರಣ?
    ಅರಸೀಕೆರೆ ಪಟ್ಟಣದ ವಿಜಯಕುಮಾರ್ (46), ಕಟ್ಟಡ ಹಾಗೂ ಲೇಬರ್ ಗುತ್ತಿಗೆದಾರರಾಗಿದ್ದರು. ಕೆಎಸ್‌ಆರ್‌ಟಿಸಿ ಮುಂಭಾಗ ನಿರ್ಮಾಣವಾಗುತ್ತಿರುವ ಹೊಸ ಹೋಟೆಲ್ ಕಟ್ಟಡದ ಗಾರೆ ಕೆಲಸಕ್ಕೆ ಬಿಕ್ರಂಕುಮಾರ್ ಹಾಗೂ ಅಪ್ರಾಪ್ತ ಬಾಲಕನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ಆರೋಪಿಗಳಾದ ಬಿಕ್ರಂಕುಮಾರ್ ಹಾಗೂ ಅಪ್ರಾಪ್ತ ಬಾಲಕ, ವಿಜಯ್‌ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ – ಬೋನ್ ಅಳವಡಿಸಿ ಪತ್ತೆ ಕಾರ್ಯಾಚರಣೆ

    ವಿಜಯಕುಮಾರ್ ಯಾವಾಗಲೂ ಕೊರಳಿನಲ್ಲಿ ದಪ್ಪದಾದ ಚಿನ್ನದ ಸರ, ನಾಲ್ಕೈದು ಚಿನ್ನದ ಉಂಗುರಗಳನ್ನು ಹಾಕಿಕೊಳ್ಳುತ್ತಿದ್ದರು. ವಿಜಯಕುಮಾರ್ ಮೈಮೇಲಿದ್ದ ಚಿನ್ನದ ಒಡವೆಗಳ ಮೇಲೆ ಆರೋಪಿಗಳ ಕಣ್ಣು ಹಾಕಿದ್ದು, ಅದನ್ನು ಪಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದರು.

    ಶುಕ್ರವಾರ ತಡರಾತ್ರಿ ಆರೋಪಿಗಳು, ವಿಜಯಕುಮಾರ್ ಅವರಿಗೆ ಕರೆ ಮಾಡಿ ನಮಗೆ ಆರೋಗ್ಯ ಸರಿಯಿಲ್ಲ, ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಾವು ಹೊರಗಡೆ ಹೋದರೆ ಅನುಮಾನ ಪಡುತ್ತಾರೆ ಎಂದಿದ್ದರು. ತಕ್ಷಣವೇ ವಿಜಯಕುಮಾರ್ ಕಟ್ಟಡದ ಮಾಲೀಕ ಶ್ರೀನಿವಾಸ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಇದನ್ನೂ ಓದಿ: Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

    ಈಗ ನೀನು ಹೋಗುವುದು ಬೇಡ ನಾಳೆ ನೋಡೋಣ ಬಿಡು ಎಂದಿದ್ದರು. ಆದರೆ ವಿಜಯಕುಮಾರ್ ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ನಾನು ಹೊಣೆಗಾರನಾಗಬೇಕಾಗುತ್ತದೆ, ಹೋಗಿ ನೋಡಿಕೊಂಡು ಬರುತ್ತೇನೆ ಎಂದು ತಮ್ಮ ಸ್ಕೂಟಿಯಲ್ಲಿ ಕಟ್ಟಡದ ಬಳಿಗೆ ತೆರಳಿದ್ದರು. ವಿಜಯಕುಮಾರ್ ಬರುವುದನ್ನೇ ಆರೋಪಿಗಳು ಕಾಯುತ್ತ ನಿಂತಿದ್ದರು. ನಿರ್ಮಾಣ ಹಂತದ ಕಟ್ಟಡದ ಮುಂದೆ ಸ್ಕೂಟಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಆರೋಪಿಗಳು, ಕಬ್ಬಿಣದ ರಾಡ್‌ನಿಂದ ಬಲವಾಗಿ ತಲೆಗೆ ಹೊಡೆದಿದ್ದು, ಪರಿಣಾಮ ಆ ಕೂಡಲೇ ವಿಜಯಕುಮಾರ್ ನೆಲಕ್ಕೆ ಬಿದ್ದಿದ್ದರು. ನಂತರ ಸಣ್ಣ ಗ್ಯಾಸ್ ಸಿಲಿಂಡರ್‌ನಿಂದ ತಲೆ, ಮುಖವನ್ನು ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದರು. ಇದನ್ನೂ ಓದಿ: ಮಳೆ ಅಬ್ಬರ; 5 ತಿಂಗಳು ಬೆಂಗಳೂರು, ಮಂಗಳೂರು ರೈಲು ಸಂಚಾರ ಸ್ಥಗಿತ

    ವಿಜಯಕುಮಾರ್ ಮೃತಪಟ್ಟ ನಂತರ ಆರೋಪಿಗಳು ಅವರ ಕೊರಳಿನಲ್ಲಿದ್ದ ಚಿನ್ನದ ಚೈನ್, ಕೈಯಲ್ಲಿದ್ದ ಮೂರು ಉಂಗರುಗಳನ್ನು ಕಸಿದುಕೊಂಡಿದ್ದರು. 1 ಉಂಗುರ ಬೆರಳಿನಿಂದ ಬಾರದಿದ್ದಾಗ ಬೆರಳನ್ನು ತುಂಡರಿಸಿ ಬೆರಳಿನ ಸಮೇತ ಉಂಗುರವನ್ನು ಎತ್ತಿಕೊಂಡು ವಿಜಯಕುಮಾರ್ ಅವರ ಸ್ಕೂಟಿಯಲ್ಲಿಯೇ ಸ್ಥಳದಿಂದ ಹೊರಟಿದ್ದರು. ಬಳಿಕ ಪಟ್ಟಣದ ಹೋಟೆಲ್‌ವೊಂದರ ಮುಂದೆ ಸ್ಕೂಟಿ ನಿಲ್ಲಿಸಿ ಎಸ್ಕೇಪ್ ಆಗಿದ್ದರು. ಆರೋಪಿಗಳು ವಿಜಯಕುಮಾರ್ ಅವರನ್ನು ಕೊಲೆ ಮಾಡಿ ಸ್ಕೂಟಿಯಲ್ಲಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

  • ಚಿನ್ನಕ್ಕಾಗಿ ಜೊತೆಗಿದ್ದ ಕಾರ್ಮಿಕರಿಂದಲೇ ಕಂಟ್ರಾಕ್ಟರ್ ಬರ್ಬರ ಹತ್ಯೆ – ಆಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಚಿನ್ನಕ್ಕಾಗಿ ಜೊತೆಗಿದ್ದ ಕಾರ್ಮಿಕರಿಂದಲೇ ಕಂಟ್ರಾಕ್ಟರ್ ಬರ್ಬರ ಹತ್ಯೆ – ಆಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಹಾಸನ: ಚಿನ್ನಕ್ಕಾಗಿ ಗುತ್ತಿಗೆದಾರನ ಬರ್ಬರ ಹತ್ಯೆ ಮಾಡಿ, ಮೈಮೇಲಿದ್ದ ಚಿನ್ನದ ಒಡವೆಗಳನ್ನು ದೋಚಿ ಆರೋಪಿಗಳು ಪರಾರಿಯಾಗಿರುವ ಘಟನೆ ಅರಸೀಕೆರೆ (Arsikere) ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

    ವಿಜಯಕುಮಾರ್ (46) ಬರ್ಬರವಾಗಿ ಕೊಲೆಯಾದ ಕಂಟ್ರಾಕ್ಟರ್. ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಕೊಲೆ ಆರೋಪಿಗಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೊಳ್ಳೇಗಾಲ| ಕಾಂಪೌಂಡ್‌ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಅರಸೀಕೆರೆ ಪಟ್ಟಣದ ವಿಜಯಕುಮಾರ್, ಕಟ್ಟಡ ಹಾಗೂ ಲೇಬರ್ ಗುತ್ತಿಗೆದಾರರಾಗಿದ್ದರು. ಕೆಎಸ್‌ಆರ್‌ಟಿಸಿ ಮುಂಭಾಗ ನಿರ್ಮಾಣವಾಗುತ್ತಿರುವ ಹೊಸ ಹೋಟೆಲ್ ಕಟ್ಟಡದ ಗಾರೆ ಕೆಲಸಕ್ಕೆ ವಿಕ್ರಂ ಹಾಗೂ ಸಚಿನ್‌ನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ವಿಕ್ರಂ ಹಾಗೂ ಸಚಿನ್, ವಿಜಯ್‌ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸದಿರಲು ಕಾರಣ ಬಿಚ್ಚಿಟ್ಟ ಶಿವಣ್ಣ

    ವಿಜಯಕುಮಾರ್ ಯಾವಾಗಲೂ ಕೊರಳಿನಲ್ಲಿ ದಪ್ಪದಾದ ಚಿನ್ನದ ಸರ, ನಾಲ್ಕೈದು ಚಿನ್ನದ ಉಂಗುರಗಳನ್ನು ಹಾಕಿಕೊಳ್ಳುತ್ತಿದ್ದರು. ವಿಜಯಕುಮಾರ್ ಮೈಮೇಲಿದ್ದ ಚಿನ್ನದ ಒಡವೆಗಳ ಮೇಲೆ ವಿಕ್ರಂ ಹಾಗೂ ಸಚಿನ್ ಕಣ್ಣು ಹಾಕಿದ್ದು ಅದನ್ನು ಪಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ವಿಚಾರದಲ್ಲಿ ಎಂದಿಗೂ ಭಾರತಕ್ಕೆ ತಲೆಬಾಗಲ್ಲ – ಮತ್ತೆ ಬುಸುಗುಟ್ಟಿದ ಅಸಿಮ್ ಮುನೀರ್

    ಶುಕ್ರವಾರ ತಡರಾತ್ರಿ ವಿಕ್ರಂ ಹಾಗೂ ಸಚಿನ್, ವಿಜಯಕುಮಾರ್ ಅವರಿಗೆ ಕರೆ ಮಾಡಿ ನಮಗೆ ಆರೋಗ್ಯ ಸರಿಯಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಾವು ಹೊರಗಡೆ ಹೋದರೆ ಅನುಮಾನ ಪಡುತ್ತಾರೆ ಎಂದಿದ್ದರು. ತಕ್ಷಣವೇ ವಿಜಯಕುಮಾರ್ ಕಟ್ಟಡದ ಮಾಲೀಕ ಶ್ರೀನಿವಾಸ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

    ಈಗ ನೀನು ಹೋಗುವುದು ಬೇಡ ನಾಳೆ ನೋಡೋಣ ಬಿಡು ಎಂದಿದ್ದರು. ಆದರೆ ವಿಜಯಕುಮಾರ್ ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ನಾನು ಹೋಣೆಗಾರನಾಗಬೇಕಾಗುತ್ತದೆ. ಹೋಗಿ ನೋಡಿಕೊಂಡು ಬರುತ್ತೇನೆ ಎಂದು ತಮ್ಮ ಸ್ಕೂಟಿಯಲ್ಲಿ ಕಟ್ಟಡದ ಬಳಿಗೆ ತೆರಳಿದ್ದರು. ವಿಜಯಕುಮಾರ್ ಬರುವುದನ್ನೇ ವಿಕ್ರಂ ಹಾಗೂ ಸಚಿನ್ ಕಾಯುತ್ತ ನಿಂತಿದ್ದರು. ನಿರ್ಮಾಣ ಹಂತದ ಕಟ್ಟಡದ ಮುಂದೆ ಸ್ಕೂಟಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಆರೋಪಿಗಳು, ಕಬ್ಬಿಣದ ರಾಡ್‌ನಿಂದ ಬಲವಾಗಿ ತಲೆಗೆ ಹೊಡೆದಿದ್ದು, ಪರಿಣಾಮ ಆ ಕೂಡಲೇ ವಿಜಯಕುಮಾರ್ ನೆಲಕ್ಕೆ ಬಿದ್ದಿದ್ದರು. ನಂತರ ಸಣ್ಣ ಗ್ಯಾಸ್ ಸಿಲಿಂಡರ್‌ನಿಂದ ತಲೆ, ಮುಖವನ್ನು ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದರು. ಇದನ್ನೂ ಓದಿ: ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

    ವಿಜಯಕುಮಾರ್ ಮೃತಪಟ್ಟ ನಂತರ ಆರೋಪಿಗಳು ಅವರ ಕೊರಳಿನಲ್ಲಿದ್ದ ಚಿನ್ನದ ಚೈನ್, ಕೈಯಲ್ಲಿದ್ದ ಮೂರು ಉಂಗರುಗಳನ್ನು ಕಸಿದುಕೊಂಡಿದ್ದರು. 1 ಉಂಗುರ ಬೆರಳಿನಿಂದ ಬಾರದಿದ್ದಾಗ ಬೆರಳನ್ನು ತುಂಡರಿಸಿ ಬೆರಳಿನ ಸಮೇತ ಉಂಗುರವನ್ನು ಎತ್ತಿಕೊಂಡು ವಿಜಯಕುಮಾರ್ ಅವರ ಸ್ಕೂಟಿಯಲ್ಲಿಯೇ ಸ್ಥಳದಿಂದ ಹೊರಟಿದ್ದರು. ಬಳಿಕ ಪಟ್ಟಣದ ಹೋಟೆಲ್‌ವೊಂದರ ಮುಂದೆ ಸ್ಕೂಟಿ ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರು – ವಿಜಯಪುರ ರೈಲು ಪ್ರಯಾಣ; ಸೋಮಣ್ಣ ಜೊತೆ ಎಂಬಿಪಿ ಮಾತುಕತೆ

    ಆರೋಪಿಗಳು ವಿಜಯಕುಮಾರ್ ಅವರನ್ನು ಕೊಲೆ ಮಾಡಿ ಸ್ಕೂಟಿಯಲ್ಲಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಸೀಕೆರೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಹಾಸನ: ಬುಕ್ ಮಾಡಿದ್ದ ಐಫೋನ್‌ಗೆ (iPhone) ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ ಪಟ್ಟಣದ ಅಂಚೆಕೊಪ್ಪಲಿನಲ್ಲಿ ನಡೆದಿದೆ.

    ಫೆಬ್ರವರಿ 11 ರಂದು ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ‍್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅರಸೀಕೆರೆ ನಗರ ಪೊಲೀಸರು (Arsikere City Police) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿಷಯಕ್ಕೆ ರೈತನ ಮೇಲೆ ಮಾರಣಾಂತಿಕ ಹಲ್ಲೆ – ಸ್ವಾಮೀಜಿ, ಬೆಂಬಲಿಗರ ಮೇಲೆ ಎಫ್‌ಐಆರ್

    ಕೊಲೆ ಆರೋಪಿ ಹೇಮಂತ್ ದತ್ತ (20) ಸಿಕ್ಕಿಬಿದ್ದಿದ್ದು, ಹೇಮಂತ್ ನಾಯ್ಕ (23) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಆರೋಪಿ ಹೇಮಂತ್ ದತ್ತ ಕೊಲೆ ಮಾಡಿ ಮೃತದೇಹವನ್ನು ನಾಲ್ಕು ದಿನ ಮನೆಯಲ್ಲೇ ಇಟ್ಟುಕೊಂಡಿದ್ದ. ಸದ್ಯ ಈ ಘಟನೆ ಅರಸೀಕೆರೆ ಪಟ್ಟಣದ ಜನರನ್ನು ಬೆಚ್ಚಿಬೀಳಿಸಿದೆ.

    ಏನಿದು ಘಟನೆ?
    ಮೃತ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ಪ್ರೆಸ್‌ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇಮಂತ್ ದತ್ತ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 46 ಸಾವಿರ ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದರಿಂದ ಹೇಮಂತ್ ನಾಯ್ಕ ಫೆಬ್ರವರಿ 7ರಂದು ಅರಸೀಕೆರೆ ಪಟ್ಟಣದ, ಲಕ್ಷ್ಮೀಪುರ ಬಡಾವಣೆಯಲ್ಲಿರುವ ಹೇಮಂತ್ ದತ್ತ ಮನೆಗೆ ಐಫೋನ್ ಡೆಲಿವರಿ ಕೊಡಲು ಬಂದಿದ್ದ. ಅಲ್ಲಿಗೆ ಬಂದೊಡನೆ ಹೇಮಂತ್ ದತ್ತ ಐಫೋನ್ ಬಾಕ್ಸ್‌ ಅನ್ನು ಪನ್ ಮಾಡುವಂತೆ ಹೇಳಿದ್ದ. ಅದಕ್ಕೆ ನಾಯ್ಕ ಓಪನ್ ಮಾಡಲು ಆಗಲ್ಲ. ಮಾಡಿದ್ರೆ ಹಿಂದಿರುಗಿಸಿಲು ಸಾಧ್ಯವಿಲ್ಲ, 46 ಸಾವಿರ ಹಣ ಕೊಡಿ ಎಂದು ಕೇಳಿದ್ದ.

    ನಂತರ ಹೇಮಂತ್ ದತ್ತ ಇಲ್ಲೇ ಕುಳಿತುಕೊ ಹಣ ಕೊಡುತ್ತೇನೆ ಎಂದು ಹೇಳಿ ಹೋಗಿದ್ದ. ಬಳಿಕ ಕೊಡಲು ಹಣವಿಲ್ಲದೇ ಮನೆಯೊಳಗೆ ಕುಳಿತು ಮೊಬೈಲ್ ನೋಡುತ್ತಿದ್ದ ಹೇಮಂತ್ ನಾಯ್ಕನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ನಾಲ್ಕು ದಿನಗಳಾದರೂ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಫೆ.11 ರಂದು ಗೋಣಿಚೀಲದಲ್ಲಿ ಹೆಣ ತುಂಬಿಕೊಂಡು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಮೃತದೇಹ ಸುಟ್ಟು ಹಾಕಿದ್ದ. ಈ ಸಂಬಂಧ ಅರಸೀಕೆರೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

    ಇದೇ ವೇಳೆ ಫೆ.7 ರಂದು ಕೆಲಸಕ್ಕೆ ಹೋಗಿದ್ದ ಸಹೋದರ ಮನೆ ಬಾರದ ಹಿನ್ನೆಲೆಯಲ್ಲಿ ಫೆ.8 ರಂದು ಹೇಮಂತ್ ನಾಯ್ಕ ಸಹೋದರ ಮಂಜ ನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣ ಭೇದಿಸಿ, ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    ಆರೋಪಿ ಹೇಮಂತ್ ದತ್ತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ಗೆ ಕೊಡಲು ಹಣವಿಲ್ಲದೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k