Tag: arrest

  • ‘ನಾನು ಇಷ್ಟಪಟ್ಟಿದ್ದೇನೆ, ನಿಂಗೆ ಓಕೆ ನಾ’- ಅಪ್ರಾಪ್ತೆಗೆ 66ರ ತಾತನಿಂದ ಲವ್ ಲೆಟರ್

    ‘ನಾನು ಇಷ್ಟಪಟ್ಟಿದ್ದೇನೆ, ನಿಂಗೆ ಓಕೆ ನಾ’- ಅಪ್ರಾಪ್ತೆಗೆ 66ರ ತಾತನಿಂದ ಲವ್ ಲೆಟರ್

    – ಪೋಷಕರು ವಾರ್ನಿಂಗ್ ಮಾಡಿದ್ರೂ ಬುದ್ಧಿ ಕಲಿಯದ ವೃದ್ಧ

    ಚೆನ್ನೈ: 16 ವರ್ಷದ ಅಪ್ರಾಪ್ತೆಗೆ 66 ವರ್ಷದ ವೃದ್ಧ ಲವ್ ಲೆಟರ್ ಕೊಟ್ಟಿದ್ದು, ಇದೀಗ ಆತನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಆರೋಪಿಯನ್ನು 66 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ನೆರೆಹೊರೆಯ 16 ವರ್ಷದ ಹುಡುಗಿಗೆ ಪ್ರೇಮ ಪತ್ರ ನೀಡಿದ್ದನು. ಆರೋಪಿ ವೃದ್ಧ ನೀಡಿದ ಪತ್ರದಲ್ಲಿ, “ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ. ನಿನಗೆ ಓಕೆ ನಾ” ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಆರೋಪಿ ವೃದ್ಧ ನೀಡಿದ ಪತ್ರವನ್ನು ನೋಡಿ ಹುಡುಗಿ ಗಾಬರಿಯಾಗಿ ತನ್ನ ತಾಯಿಗೆ ನೀಡಿದ್ದಾಳೆ. ನಂತರ ತಾಯಿ ತನ್ನ ಪತಿಯನ್ನು ಕರೆದುಕೊಂಡು ಆರೋಪಿ ಬಾಷಾ ಮನೆಗೆ ಹೋಗಿದ್ದಾರೆ. ಅಲ್ಲಿ ಆರೋಪಿಗೆ ಬೈದು ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆರೋಪಿ ಕುಟುಂಬದದವರು ಹುಡುಗಿಯ ಪೋಷಕರ ಬಳಿ ವೃದ್ಧನ ವರ್ತನೆಗೆ ಕ್ಷಮೆ ಕೇಳಿದ್ದಾರೆ.

    ಆದರೆ ಆರೋಪಿ ಬಾಷಾ ಮಾತ್ರ ಮತ್ತೆ ಹುಡುಗಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿದ್ದಾನೆ. ಅಲ್ಲದೇ ಆಕೆಗೆ ಬೆದರಿಕೆ ಕೂಡ ಹಾಕಿದ್ದಾನೆ. ಇದರಿಂದ ಭಯಗೊಂಡ ಹುಡುಗಿ ಮನೆಯಿಂದ ಹೊರಬರಲು ಹೆದರುತ್ತಿದ್ದಳು. ಆಗ ಆಕೆಯ ಪೋಷಕರು ರಾಮನಾಥಪುರಂ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಬಾಷಾ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

  • ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    – ಸ್ನೇಹಿತನಿಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ಳು
    – ಕುಡಿದ ಮತ್ತಿನಲ್ಲಿ ತಮಾಷೆ ಮಾಡಿದ್ದಾಳೆ ಅಂದ್ಕೊಂಡ

    ಮಾಸ್ಕೋ: ಯುವಕನೊಬ್ಬ ಪ್ರಿಯತಮೆಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ಮಾಜಿ ಗೆಳತಿಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ನೋವೊಸಿಬಿರ್ಸ್ಕ್ ಪ್ರದೇಶದ ಸುಜುನ್ ಗ್ರಾಮದ ಬಳಿ ಈ ಹತ್ಯೆ ನಡೆದಿದೆ. ಅನಸ್ತಾಸಿಯಾ ಪೊಸ್ಪೆಲೋವಾ ಕೊಲೆಯಾದ ಮಾಜಿ ಗೆಳತಿ. ಆರೋಪಿ ಅಲೆಕ್ಸೆ ಪೆಟ್ರೋವ್ (20) ತನ್ನ ಪ್ರೀತಿಯನ್ನು ಪ್ರಿಯತಮೆಯ ಮುಂದೆ ಸಾಬೀತು ಪಡಿಸಲು ಕಾಡಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಪೆಟ್ರೋವ್ ಮತ್ತು ಮೃತ ಅನಸ್ತಾಸಿಯಾ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ಆರೋಪಿ ಕಾರ್ಪೋವಾಳನ್ನು ಪ್ರೀತಿಸುತ್ತಿದ್ದನು. ಜೂನ್ 14 ರಂದು ಈ ಜೋಡಿ ಅನಸ್ತಾಸಿಯಾಳನ್ನು ಪಾರ್ಟಿಗೆ ಬರುವಂತೆ ಕರೆದಿದ್ದಾರೆ. ಅದಕ್ಕೆ ಅನಸ್ತಾಸಿಯಾ ಕೂಡ ಒಪ್ಪಿದ್ದು, ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಲ್ಲರೂ ಮದ್ಯಪಾನ ಮಾಡಲು ಪ್ರಾರಂಭಿಸಿದರು.

    ಇದೇ ವೇಳೆ ಆರೋಪಿ ಪೆಟ್ರೋವ್ ತನ್ನ ಜೇಬಿನಿಂದ ಚಾಕುವನ್ನು ತೆಗೆದು ಅನಸ್ತಾಸಿಯಾಳ ಕುತ್ತಿಗೆಗೆ ಹಲವಾರು ಬಾರಿ ಇರಿದಿದ್ದಾನೆ. ಇದರಿಂದ ಭಯಭೀತಳಾದ ಅನಸ್ತಾಸಿಯಾ ಆರೋಪಿ ಪೆಟ್ರೋವ್‍ನನ್ನು ತಳ್ಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ ಚಾಕುವಿನಿಂದ ಇರಿದಿದ್ದರಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆ ಕಾಡಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಗ ಅನಸ್ತಾಸಿಯಾ ಸಹಾಯಕ್ಕಾಗಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದು, ನನಗೆ ಸಹಾಯ ಮಾಡು, ನಾನು ಕಾಡಿನಲ್ಲಿದ್ದೇನೆ. ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಇವರು ನನ್ನನ್ನು ಕೊಲೆ ಮಾಡುತ್ತಾರೆ. ದಯವಿಟ್ಟು ನನಗೆ ಸಹಾಯ ಮಾಡು ಎಂದು ಅಂಗಲಾಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಡಿದ ಮತ್ತಿನಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಸ್ನೇಹಿತ ನಂಬಲಿಲ್ಲ. ಕೊನೆಗೆ ಅನಸ್ತಾಸಿಯಾ ಕಾಡಿನಲ್ಲಿ ಪೊದೆಯೊಳಗೆ ಅಡಗಿಕೊಂಡಳು. ಆದರೆ ಆರೋಪಿ ಪೆಟ್ರೋವ್ ಆಕೆಯನ್ನ ಪತ್ತೆ ಮಾಡಿ ಅವಳ ಕುತ್ತಿಗೆಯ ಮೇಲೆ ಕಾಲಿಟ್ಟು, ಚಾಕುವಿನಿಂದ ಎದೆಗೆ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಮತ್ತು ಆಕೆಯ ಗೆಳತಿ ಕಾರ್ಪೋವಾ ಶವವನ್ನು ಪೊದೆಗಳಲ್ಲಿ ಅಡಗಿಸಿ ವಾಪಸ್ ಆಗಿದ್ದಾರೆ. ನಂತರ ಅವರೇ ಅನಸ್ತಾಸಿಯಾ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

    ತಮ್ಮ ಮೇಲೆ ಅನುಮಾನ ಬರಬಾರದೆಂದು ಪೊಲೀಸರ ಜೊತೆ ಅನಸ್ತಾಸಿಯಾಗಾಗಿ ಹುಡುಕಾಡಿದ್ದಾರೆ. ಇತ್ತೀಚೆಗೆ ನಂತರ ಗಾಯಗೊಂಡ ಮೃತಪಟ್ಟಿರುವ ಯುವತಿಯ ಶವ ಕಾಡಿನ ಪೊದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇರೆಗೆ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಆಗ ಇಬ್ಬರು ಈ ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಆರೋಪಿ ಕಾರ್ಪೋವಾ, ಅನಸ್ತಾಸಿಯಾ ಮತ್ತು ಪೆಟ್ರೋವ್ ಸಂಬಂಧದ ಬಗ್ಗೆ ಅಸೂಯೆ ಪಟ್ಟಿದ್ದಳು. ಇದೇ ವಿಚಾರಕ್ಕೆ ಪೆಟ್ರೋವ್ ಜೊತೆ ಜಗಳ ಮಾಡುತ್ತಿದ್ದಳು. ಅಲ್ಲದೇ ಪೆಟ್ರೋವ್‍ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಮತ್ತು ಈ ಜಗಳವನ್ನು ನಿಲ್ಲಿಸಲು ಅನಸ್ತಾಸಿಯಾಳನ್ನು ಕೊಲೆ ಮಾಡಬೇಕು ಎಂದು ಹೇಳಿದ್ದಾಳೆ. ಆಗ ಆರೋಪಿ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಪೆಟ್ರೋವ್ ಮತ್ತು ಕಾರ್ಪೋವಾ ವಿರುದ್ಧ ಕ್ರಿಮಿನಲ್ ಕ್ರೇಸ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.

  • ಮದ್ವೆ ನಿಶ್ಚಯವಾಗಿದ್ರೂ ವಿವಾಹವಾಗುವಂತೆ ಒತ್ತಾಯ- ಒಪ್ಪದ್ದಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್

    ಮದ್ವೆ ನಿಶ್ಚಯವಾಗಿದ್ರೂ ವಿವಾಹವಾಗುವಂತೆ ಒತ್ತಾಯ- ಒಪ್ಪದ್ದಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್

    – ತಾಯಿ ಜೊತೆ ಇದ್ದಾಗಲೇ 19 ವರ್ಷದ ಯುವತಿಯ ಕೊಲೆ

    ಲಕ್ನೋ: ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು ದೆಹಲಿಯ ಸುಂದರ್ ನಗರಿ ಪ್ರದೇಶದ ಶೇರ್ ಖಾನ್ ಎಂದು ಗುರುತಿಸಲಾಗಿದೆ. ಮದುವೆಗೆ ನಿರಾಕರಿಸಿದ್ದಕ್ಕೆ 19 ವರ್ಷದ ಯುವತಿಯನ್ನು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದನು. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.

    ಜೂನ್ 17 ರಂದು ಯುವತಿ ತುಳಸಿ ನಿಕೇತನ್ ಕಾಲೋನಿ ಮಾರುಕಟ್ಟೆಯಿಂದ ತನ್ನ ಪೋಷಕರೊಂದಿಗೆ ಹಿಂದಿರುಗುತ್ತಿದ್ದಳು. ಆಕೆ ಮತ್ತು ಅವಳ ತಾಯಿ ಸ್ನ್ಯಾಕ್ಸ್ ತಿನ್ನಲು ಹೋಗಿದ್ದರು. ಆದರೆ ಯುವತಿಯ ತಂದೆ ಮನೆಗೆ ಹಿಂದಿರುಗಿದ್ದರು. ಈ ವೇಳೆ ಆರೋಪಿ ಶೇರ್ ಖಾನ್ ತನ್ನ ಸ್ನೇಹಿತರ ಜೊತೆ ಬಂದು ಯುವತಿಗೆ ಚಾಕುವಿನಿಂದ ಅನೇಕ ಬಾರಿ ಇರಿದು ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ತಕ್ಷಣ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ನನ್ನ ಮಗಳು ಆರೋಪಿಯನ್ನು ಮದುವೆಯಾಗಲು ನಿರಾಕರಿಸಿದ್ದಳು. ಆದರೂ ಆರೋಪಿ ನನ್ನ ಮಗಳಿಗೆ ಪದೇ ಪದೇ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದನು. ನಾವು ಈಗಾಗಲೇ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದೆವು ಎಂದು ಮೃತ ಯುವತಿಯ ತಂದೆ ನೋವಿನಿಂದ ಹೇಳಿದ್ದಾರೆ.

    ಕೊಲೆ ಮಾಡಿದ ನಂತರ ಆರೋಪಿ ಶೇರ್ ಖಾನ್ ಪರಾರಿಯಾಗಿದ್ದನು. ಆದರೆ ಇದೀಗ ಪಂಚಶೀಲ್ ಕಾಲೋನಿಯಲ್ಲಿ ಪೊಲೀಸ್ ತಂಡವು ಆತನನ್ನು ಬಂಧಿಸಿದೆ. ಕೊಲೆ ಮಾಡಲು ಬಳಿಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ನಾಲ್ವರು ಸಹಚರರನ್ನು ಸಹ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥನಿ ತಿಳಿಸಿದ್ದಾರೆ.

  • ಪ್ರಿಯಕರನೊಂದಿಗೆ ಅಪ್ರಾಪ್ತೆ ಸೆಕ್ಸ್- ನೋಡಿದ್ದಕ್ಕೆ ಸಾಕಿದ್ದ ಅಜ್ಜಿಯನ್ನೇ ಕೊಂದ್ಳು

    ಪ್ರಿಯಕರನೊಂದಿಗೆ ಅಪ್ರಾಪ್ತೆ ಸೆಕ್ಸ್- ನೋಡಿದ್ದಕ್ಕೆ ಸಾಕಿದ್ದ ಅಜ್ಜಿಯನ್ನೇ ಕೊಂದ್ಳು

    – ಪ್ರತಿದಿನ ಊಟದಲ್ಲಿ ನಿದ್ದೆ ಮಾತ್ರೆ ಮಿಕ್ಸ್ ಮಾಡ್ತಿದ್ದ ಹುಡುಗಿ
    – ಅಪ್ಪ, ಅಮ್ಮ ಇಲ್ಲದ ಮೊಮ್ಮಗಳನ್ನ ಸಾಕಿದ್ದೆ ತಪ್ಪಾಯ್ತು

    ಲಕ್ನೋ: ಅಪ್ರಾಪ್ತ ಹುಡುಗಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸಾಕಿದ್ದ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಜಾನ್ಸಿ ನಗದಲ್ಲಿ ನಡೆದಿದೆ.

    ನಿವೃತ್ತ ರೈಲ್ವೆ ನೌಕರರ ಪತ್ನಿ ಮುಮ್ತಾಜ್ (63) ಕೊಲೆಯಾಗಿದ್ದ ವೃದ್ಧೆ. ಪ್ರೇಮ್‍ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ಜೂನ್ 11ರಂದು ಈ ಘಟನೆ ನಡೆದಿತ್ತು. ಈ ಕೊಲೆ ಪ್ರಕರಣವನ್ನು ಇದೀಗ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೃತ ವೃದ್ಧೆಯ ಅಪ್ರಾಪ್ತ ಮೊಮ್ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಹುಡುಗಿಯ ತಂದೆ ಮೃತಪಟ್ಟಿದ್ದರು. ಇನ್ನೂ ತಾಯಿ ಬೇರೆಯವರ ಜೊತೆ ಓಡಿ ಹೋಗಿದ್ದಳು. ಹೀಗಾಗಿ ಅಪ್ರಾಪ್ತೆ ಅಜ್ಜ-ಅಜ್ಜಿ ಜೊತೆ ವಾಸಿಸುತ್ತಿದ್ದಳು. ಈಕೆ ತರುಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಪ್ರತಿದಿನ ರಾತ್ರಿ ಮನೆಯಲ್ಲಿಯೇ ಭೇಟಿಯಾಗುತ್ತಿದ್ದರು. ಅಪ್ರಾಪ್ತೆ ಹುಡುಗಿ ತನ್ನ ಅಜ್ಜ-ಅಜ್ಜಿಗೆ ಊಟದಲ್ಲಿ ನಿದ್ದೆ ಮಾತ್ರ ಹಾಕುತ್ತಿದ್ದಳು. ಅದನ್ನು ತಿಂದು ಇಬ್ಬರು ನಿದ್ದೆ ಮಾಡುತ್ತಿದ್ದರು. ಆಗ ತನ್ನ ಪ್ರಿಯಕರ ತರುಣ್‍ಗೆ ಫೋನ್ ಮಾಡಿ ಮನೆಗೆ ಕರೆಸಿಕೊಳ್ಳುತ್ತಿದ್ದಳು.

    ಕೆಲವು ತಿಂಗಳಗಳ ಕಾಲ ಇದೇ ರೀತಿ ಆರೋಪಿಗಳಿಬ್ಬರು ಭೇಟಿ ಮಾಡುತ್ತಿದ್ದರು. ಆರೋಪಿ ತರುಣ್ ನಿದ್ದೆ ಮಾತ್ರೆಗಳನ್ನು ತಂದು ಕೊಟ್ಟಿದ್ದನು ಎಂಬುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

    ಒಂದು ದಿನ ಮುಮ್ತಾಜ್ ಕಡಿಮೆ ಆಹಾರವನ್ನು ಸೇವಿಸಿದ್ದರು. ಹೀಗಾಗಿ ಮುಮ್ತಾಜ್ ಸರಿಯಾಗಿ ನಿದ್ದೆ ಮಾಡಿಲ್ಲ. ಆದರೆ ಎಂದಿನಂತೆ ಮೊಮ್ಮಗಳು ಪ್ರಿಯಕರ ತರುಣ್‍ಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ನಂತರ ಬೆಡ್ ರೂಮಿನಲ್ಲಿ ಇಬ್ಬರು ಸೆಕ್ಸ್ ಮಾಡುತ್ತಿದ್ದರು. ಅಜ್ಜಿಗೆ ಎಚ್ಚರವಾಗಿ ರೂಮಿಗೆ ಹೋಗಿ ನೋಡಿದ್ದಾರೆ. ಆಗ ಇಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಭಯಗೊಂಡು ಇಬ್ಬರು ಅಜ್ಜಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಇದು ದರೋಡೆ ಸಮಯದಲ್ಲಿ ನಡೆದ ಕೊಲೆ ಎಂದು ನಂಬಿಸುವ ಪ್ರಯತ್ನ ಮಾಡಿದ್ದರು. ಅದರಂತೆಯೇ ಮೃತ ಮುಮ್ತಾಜ್ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೂಡ ತೆಗೆದುಕೊಂಡಿದ್ದರು. ಹೀಗಾಗಿ ದರೋಡೆ ಮಾಡಲು ಬಂದವರು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

    ಪೊಲೀಸರು ವಿಚಾರಣೆ ವೇಳೆ ಮೊಮ್ಮಗಳ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಫೋನ್ ಡಿಟೈಲ್ಸ್ ನೋಡಿದಾಗ ಮುಮ್ತಾಜ್ ಕೊಲೆಯಾದ ದಿನನೇ ಆರೋಪಿ ಪ್ರಿಯಕರ ತರುಣ್‍ಗೆ ಪದೇ ಪದೇ ಮಧ್ಯರಾತ್ರಿ ಫೋನ್ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ವಶಪಡಿಸಿಕೊಂಡು ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಇಬ್ಬರು ಸೆಕ್ಸ್ ಮಾಡುತ್ತಿದ್ದಾಗ ಮೃತ ಮುಮ್ತಾಜ್ ನೋಡಿದ್ದಾರೆ. ಹೀಗಾಗಿ ನಮ್ಮಿಬ್ಬರ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯದಿಂದ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಇಬ್ಬರು ಪರಾರಿಯಾಗಲು ನಿರ್ಧಾರ ಮಾಡಿದ್ದರು. ಆದರೆ ಓಡಿ ಹೋದರೆ ನಾವು ಸಿಕ್ಕಿ ಬೀಳುತ್ತೀವಿ ಎಂದು ಎಸ್ಕೇಪ್ ಆಗಿಲ್ಲ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಮುಮ್ತಾಜ್ ಮೊಮ್ಮಗಳು ಮತ್ತು ಪ್ರಿಯಕರ ತರುಣ್ ಇಬ್ಬರನ್ನು ಬಂಧಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

  • ವಾಹನದೊಳಗೆ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್- ಮನನೊಂದು ಸಂತ್ರಸ್ತೆ ಆತ್ಮಹತ್ಯೆ

    ವಾಹನದೊಳಗೆ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್- ಮನನೊಂದು ಸಂತ್ರಸ್ತೆ ಆತ್ಮಹತ್ಯೆ

    – ನೀರು ತರಲು ಹೋದಾಗ ಟ್ರಕ್‍ಗೆ ಎಳೆದ್ಕೊಂಡು ಹೋದ
    – ತನಿಖಾಧಿಕಾರಿಗಳು ಮನೆಗೆ ಬರೋಷ್ಟರಲ್ಲಿ ನೇಣಿಗೆ ಶರಣು

    ಲಕ್ನೋ: 16 ವರ್ಷದ ಅಪ್ರಾಪ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಮನನೊಂದು ಸಂತ್ರಸ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ನಡೆದಿದೆ.

    ಕಾಸಿಮಾಬಾದ್ ಪೊಲೀಸ್ ಠಾಣೆಯ ಪ್ರಾದೇಶಿಕ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಮೇಲೆ ಜೂನ್ 15 ರಂದು ಆಕೆಯ ನೆರೆಹೊರೆಯವನು ಮತ್ತು ಅವನ ಸ್ನೇಹಿತ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಏನಿದು ಪ್ರಕರಣ?
    ಮೃತ ಸಂತ್ರಸ್ತೆ ಆರೋಪಿಯ ಮನೆಯ ಹ್ಯಾಂಡ್‍ಪಂಪ್‍ನಿಂದ ನೀರು ತರಲು ಹೋಗಿದ್ದಳು. ಆಗ ಮುನೀಶ್ ಚೌಹಾನ್ ಎಂಬಾತ ಆಕೆಯನ್ನ ತನ್ನ ಸ್ನೇಹಿತ ಯಾದವ್‍ಗೆ ಸೇರಿದ ಟ್ರಕ್‍ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರೂ ವಾಹನದೊಳಗಿನ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಮನೆಗೆ ಹಿಂತಿರುಗಿ ತನ್ನ ಕುಟುಂಬದವರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಮರುದಿನ ಸಂತ್ರಸ್ತೆ ತಂದೆ ಚೌಹಾನ್ ಮನೆಗೆ ಹೋಗಿದ್ದಾರೆ. ಆದರೆ ಅಲ್ಲಿ ಚೌಹಾನ್ ಕುಟುಂಬ ಸಂತ್ರಸ್ತೆಯ ತಂದೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಅವರು ಕಾಶಿಮಾಬಾದ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದರು.

    ಸಂತ್ರಸ್ತೆ ತಂದೆ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಬ್ಬರಲ್ಲಿ ಆರೋಪಿ ಯಾದವ್‍ನನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಓಂ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

    ತನಿಖಾ ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲು ಹೋಗಿದ್ದರು. ಆದರೆ ಅಷ್ಟರಲ್ಲಿಯೇ ಸಂತ್ರಸ್ತೆ ತನ್ನ ಗುಡಿಸಲಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸಂತ್ರಸ್ತೆಯ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದ ಗ್ರಾಮಸ್ಥರು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಂತರ ಘಾಜಿಪುರ ಎಸ್‍ಪಿ ಓಂ ಪ್ರಕಾಶ್ ಸಿಂಗ್ ಗ್ರಾಮಸ್ಥರನ್ನು ಸಮಾಧಾನ ಮಾಡಿ, ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

  • ಪತ್ನಿಯ ಮೇಲೆ ಸ್ನೇಹಿತ ಅತ್ಯಾಚಾರ- ಲಾಠಿ ಹಿಡಿದು ರೂಮಿನ ಹೊರಗೆ ಪತಿ ಕಾವಲು

    ಪತ್ನಿಯ ಮೇಲೆ ಸ್ನೇಹಿತ ಅತ್ಯಾಚಾರ- ಲಾಠಿ ಹಿಡಿದು ರೂಮಿನ ಹೊರಗೆ ಪತಿ ಕಾವಲು

    – ಗೆಳೆಯನ ಮುಂದೆಯೇ ರೂಮಿಗೆ ಎಳೆದ್ಕೊಂಡು ಹೋದ

    ಜೈಪುರ: ವ್ಯಕ್ತಿಯೊಬ್ಬ ಪತ್ನಿಯ ಮೇಲೆ ತನ್ನ ಸ್ನೇಹಿತ ಅತ್ಯಾಚಾರ ಎಸಗುತ್ತಿದ್ದರೆ ರೂಮಿನ ಹೊರಗೆ ಲಾಠಿ ಹಿಡಿದು ಕಾವಲು ಕಾಯುತ್ತಿದ್ದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್ಪುರ ಪ್ರದೇಶದಲ್ಲಿ ನಡೆದಿದೆ.

    ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ 18 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ಸಂತ್ರಸ್ತೆ ಜೂನ್ 4 ರಂದು ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಮೇ 31 ರಂದು ಮಾರುಕಟ್ಟೆಗೆ ಹೋಗುವ ನೆಪದಲ್ಲಿ ಪತಿ ಸಂತ್ರಸ್ತೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದನು. ದಾರಿಯಲ್ಲಿ ಆರೋಪಿ ತನ್ನ ಸ್ನೇಹಿತ ಮಿಚ್ಚು ಅಲಿಯಾಸ್ ಬಲ್ವಂತ್ ಧಾನಕ್‍ನನ್ನು ಅದೇ ಬೈಕ್‍ನಲ್ಲಿ ತನ್ನೊಂದಿಗೆ ಬರಲು ಕೇಳಿಕೊಂಡಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್ ಸುರೇಂದ್ರ ಸಿಂಗ್ ರಾವತ್ ಹೇಳಿದರು.

    ಪತಿ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದನು. ಬೈಕಿನಿಂದ ಇಳಿದು ಸ್ವಲ್ಪ ಸಮಯ ಅಲ್ಲೆ ಕುಳಿತ್ತಿದ್ದೆವು. ಆಗ ಧಾನಕ್ ಬಂದು ನನ್ನನ್ನು ಹತ್ತಿರದಲ್ಲಿದ್ದ ರೂಮಿಗೆ ಎಳೆದುಕೊಂಡು ಹೋದ. ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದಾಗ ಪತಿ ಲಾಠಿ ಹಿಡಿದು ರೂಮಿನ ಹೊರಗೆ ಕಾವಲು ನಿಂತಿದ್ದನು. ಹೀಗಾಗಿ ತನ್ನ ಸ್ನೇಹಿತ ನನ್ನ ಮೇಲೆ ಅತ್ಯಾಚಾರ ನಡೆಸಲು ಅವಕಾಶ ನೀಡಲು ಪತಿ ಸಂಚು ರೂಪಿಸಿದ್ದನು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ಘಟನೆಯ ನಂತರ ಆರೋಪಿ ಧಾನಕ್ ಮತ್ತು ಸಂತ್ರಸ್ತೆಯ ಪತಿ ಕೂಡ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ನಂತರ ತನ್ನ ಪೋಷಕರ ಮನೆಗೆ ಹೋದಾಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಆಗ ಸಂತ್ರಸ್ತೆಯ ತಂದೆ ಮಗಳ ಜೊತೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿದ್ದಾರೆ.

    ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ತನಿಖೆ ನಡೆಸಿದ್ದಾರೆ. ಇದೀಗ ಈ ಪ್ರಕರಣವನ್ನು ಡಿಎಸ್‍ಪಿ ಲೋಕೇಶ್ ಮೀನಾ ಅವರಿಗೆ ಹಸ್ತಾಂತರಿಸಲಾಗಿದೆ.

  • ಸಾಗರದಲ್ಲಿ 3 ನಕಲಿ ತೆರಿಗೆ ಅಧಿಕಾರಿಗಳ ಬಂಧನ

    ಸಾಗರದಲ್ಲಿ 3 ನಕಲಿ ತೆರಿಗೆ ಅಧಿಕಾರಿಗಳ ಬಂಧನ

    ಶಿವಮೊಗ್ಗ: ಆದಾಯ ತೆರಿಗೆ ಅಧಿಕಾರಿಗಳೆಂದು ವಂಚಿಸಿ ಹಣವನ್ನು ಪಡೆಯುತ್ತಿದ್ದ ಮೂವರು ನಕಲಿ ಅಧಿಕಾರಿಗಳನ್ನು ಸಾಗರದ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಭದ್ರಾವತಿ ಮೂಲದ ಚಂದನ್, ನವೀನ ಮತ್ತು ಲತೇಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 1.50 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಇಟಿಯಸ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಸ್‍ಪಿ ಕೆ.ಎಂ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

    ಜೂನ್ 12ರಂದು ಜನ್ನೆಹಕ್ಲುವಿನ ವಿಶ್ವನಾಥ್ ಎಂಬುವವರ ಮನೆಗೆ ನಾಲ್ವರು ಅಪರಿಚಿತರು ಬಂದು ನಾವು ಆದಾಯ ತೆರಿಗೆ ಇಲಾಖೆಯವರು ಎಂದು ಹೇಳಿದ್ದರು. ನಂತರ ನಿಮ್ಮ ವ್ಯವಹಾರ ಹಾಗೂ ಬ್ಯಾಂಕಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದಾರೆ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೆದರಿಸಿ ಅವರಿಂದ 2.30 ಲಕ್ಷ ಹಾಗೂ ಖಾಲಿ ಚೆಕ್ ಪಡೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.

    ಈ ಸಂಬಂಧ ವಿಶ್ವನಾಥ್ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಮೂವರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆನಂದಪುರ ಸಮೀಪದ ದಾಸಕೊಪ್ಪ ವೃತ್ತದಲ್ಲಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

  • ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    – ಸಿಎಂ, ಪೊಲೀಸರಿಗೆ ವಿಡಿಯೋ ಟ್ಯಾಗ್

    ಜೈಪುರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಸ್ಥಳೀಯ ಗುಂಪೊಂದು ಯುವಕನಿಗೆ ಬಲವಂತವಾಗಿ ಮೂತ್ರ ಕುಡಿಸಿ, ಥಳಿಸಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಯುವಕನನ್ನು ಸಿರೋಹಿ ಜಿಲ್ಲೆಯ ಭೇವ್ ಪಲಾಡಿ ಗ್ರಾಮದ ನಿವಾಸಿ ಕಲುರಾಮ್ (24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಗ್ರಾಮಸ್ಥರು ಶಿಕ್ಷೆಯನ್ನು ವಿಧಿಸಿದ್ದಾರೆ. ಅದರಂತೆಯೇ ಶಿಕ್ಷೆಯ ಭಾಗವಾಗಿ ಜನಸಮೂಹದ ಮುಂದೆ ಮೂತ್ರ ಮತ್ತು ಶೂನಿಂದ ನೀರನ್ನು ಕುಡಿಯುವಂತೆ ಒತ್ತಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಮೇರ್ ಪುರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ತನ್ನ ಗ್ರಾಮದ 8 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನೆ. ಎಫ್‍ಐಆರ್ ಪ್ರಕಾರ, ಜೂನ್ 11ರಂದು ನಾನು ನನ್ನ ಚಿಕ್ಕಪ್ಪನನ್ನು ಭೇವ್‍ನಿಂದ ಭರೋಂಡಾ ಗ್ರಾಮಕ್ಕೆ ಬಿಡಲು ಹೋಗಿದ್ದೆ. ಈ ವೇಳೆ ಪುರುಷರ ಗುಂಪೊಂದು ನನ್ನನ್ನು ಅಪಹರಿಸಿ ಬಲವಂತವಾಗಿ ಮದ್ಯದ ಬಾಟಲಿನಲ್ಲಿದ್ದ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಆರೋಪಿಗಳು ನನಗೆ ಥಳಿಸಿದ್ದು, ಅದನ್ನು ವಿಡಿಯೋ ಕೂಡ ಮಾಡಿದ್ದಾರೆ ಎಂದು ಕಲುರಾಮ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಎಸ್‍ಪಿ ರಾಹುಲ್ ಕೊಟೆಕಿ ಮಾತನಾಡಿ, ಯುವಕ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಈ ವಿಚಾರ ತಿಳಿದ ಗ್ರಾಮದ ಕೆಲ ಜನರು ಕೋಪಗೊಂಡು ಆತನನ್ನು ಅಪಹರಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ನಾವು ಈ ಕುರಿತು ಎಫ್‍ಐಆರ್ ದಾಖಲಿಸಿದ್ದೇವೆ. 8 ಪ್ರಮುಖ ಆರೋಪಿಗಳಲ್ಲಿ 6 ಮಂದಿಯನ್ನು ಬಂಧಿಸಿದ್ದೇವೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಕಲುರಾಮ್‍ಗೆ ಬಲವಂತವಾಗಿ ಮೂತ್ರ ಕುಡಿಯುವ ವಿಡಿಯೊಗಳನ್ನು ಯುವರಾಜ್ ರಾಕೇಶ್ ಎಂಬಾತ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಈ ವಿಡಿಯೋವನ್ನು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸ್ , ಅನೇಕ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿರೋಹಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ತನಿಖೆ ಮಾಡುವಂತೆ ರಾಜಸ್ಥಾನ ಗೃಹ ಇಲಾಖೆ ಆದೇಶಿಸಿದೆ.

  • ಬೇಡಿಕೆ ಈಡೇರಿಸದಿದ್ರೆ ವಿಡಿಯೋ ಅಪ್ಲೋಡ್- ಮೂವರು ಯುವಕರಿಂದ ಬ್ಲ್ಯಾಕ್‍ಮೇಲ್

    ಬೇಡಿಕೆ ಈಡೇರಿಸದಿದ್ರೆ ವಿಡಿಯೋ ಅಪ್ಲೋಡ್- ಮೂವರು ಯುವಕರಿಂದ ಬ್ಲ್ಯಾಕ್‍ಮೇಲ್

    – ಅಪ್ರಾಪ್ತೆಯ ಸ್ನಾನದ ವಿಡಿಯೋ ರೆಕಾರ್ಡ್
    – ಬೆಂಕಿ ಹಚ್ಚಿಕೊಂಡ 15ರ ಹುಡುಗಿ

    ಚೆನ್ನೈ: ಮೂವರು ಯುವಕರು ಬ್ಲ್ಯಾಕ್‍ಮೇಲ್ ಮಾಡಿದ್ದರಿಂದ ಅಪ್ರಾಪ್ತ ಹುಡುಗಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿದ ವೆಲ್ಲೂರಿನಲ್ಲಿ ನಡೆದಿದೆ.

    ಆರೋಪಿಗಳಾದ ಮೂವರು ಸಂತ್ರಸ್ತೆಯ ನೆರೆಹೊರೆಯವರು ಎಂದು ತಿಳಿದುಬಂದಿದೆ. 15 ವರ್ಷದ ಹುಡುಗಿ ಸ್ನಾನ ಮಾಡುವಾಗ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ಸ್ನಾನ ಮಾಡುವಾಗ ಆರೋಪಿಗಳು ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಆರೋಪಿಗಳು ಸಂತ್ರಸ್ತೆಯ ಬಳಿ ತಮ್ಮ ಲೈಂಗಿಕ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಲು ಶುರುಮಾಡಿದ್ದಾರೆ. ಆರೋಪಿಗಳು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಬಹುದೆಂಬ ಭಯದಿಂದ ಸಾಯುವ ನಿರ್ಧಾರ ಮಾಡಿದ್ದಾಳೆ.

    ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಯನ್ನು ನೋಡಿದ ನೆರೆಹೊರೆಯವರು ಸುಮಾರು 30 ನಿಮಿಷಗಳ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ಶೇ.90ರಷ್ಟು ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಈ ಘಟನೆಯ ಬಗ್ಗೆ ಸಂತ್ರಸ್ತೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಆರೋಪಿಗಳನ್ನು ಕೆ.ಆಕಾಶ್, ಆರ್.ಗಣಪತಿ ಮತ್ತು 17 ವರ್ಷದ ಹುಡುಗ ಎಂದು ಹೇಳಿದ್ದಾಳೆ. ತನ್ನ ಹೇಳಿಕೆ ನೀಡಿದ ಕೆಲವೇ ನಿಮಿಷಗಳಲ್ಲಿ ಸಂತ್ರಸ್ತೆ ಪ್ರಜ್ಞಾಹೀನಳಾಗಿದ್ದಾಳೆ. ಸದ್ಯಕ್ಕೆ ಆಕೆಯ ಸ್ಥಿತಿ ಗಂಭೀರವಾಗಿದೆ.

    ಆರೋಪಿಗಳ ಮೇಲೆ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಶುಭಾ ತಿಳಿಸಿದ್ದಾರೆ.

  • ತಾನೇ ಸುಪಾರಿ ಕೊಟ್ಟು ತನ್ನನ್ನೇ ಹತ್ಯೆ ಮಾಡಿಸ್ಕೊಂಡ ಉದ್ಯಮಿ

    ತಾನೇ ಸುಪಾರಿ ಕೊಟ್ಟು ತನ್ನನ್ನೇ ಹತ್ಯೆ ಮಾಡಿಸ್ಕೊಂಡ ಉದ್ಯಮಿ

    – ಆರೋಪಿಗಳಿಗೆ ತನ್ನ ಫೋಟೋ ಕಳುಹಿಸಿದ
    – ಕೈ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ನವದೆಹಲಿ: ಉದ್ಯಮಿಯೊಬ್ಬ ತನ್ನ ಕುಟುಂಬಕ್ಕೆ ವಿಮಾ ಹಣವನ್ನು (ಇನ್ಯೂರೆನ್ಸ್) ತಲುಪಿಸಬೇಕು ಎಂಬ ಉದ್ದೇಶದಿಂದ ತಾನೇ ಅಪ್ರಾಪ್ತ ಹುಡುಗ ಸೇರಿದಂತೆ ನಾಲ್ವರಿಗೆ ಸುಪಾರಿ ಕೊಟ್ಟು, ತನ್ನನ್ನೇ ಹತ್ಯೆ ಮಾಡಿಸಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಗೌರವ್ (37) ಮೃತ ಉದ್ಯಮಿ. ಜೂನ್ 10 ರಂದು ಈ ಕೊಲೆ ನಡೆದಿದ್ದು, ತನಿಖೆ ವೇಳೆ ಮೃತ ಗೌರವ್ ಸುಪಾರಿಕೊಟ್ಟು ತನ್ನನ್ನೇ ಕೊಲೆ ಮಾಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

    ಏನಿದು ಪ್ರಕರಣ?
    ಗೌರವ್ ಪತ್ನಿ ಶಾನು ಬನ್ಸಾಲ್ ಜೂನ್ 10 ರಂದು ನನ್ನ ಪತಿ ಕಾಣಿಸುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಗೌರವ್ ದಿನಸಿ ವ್ಯಾಪಾರಿ­ಯಾಗಿದ್ದು, ವ್ಯಾಪಾರಕ್ಕೆ ತೆರಳಿದವರು ಮನೆಗೆ ಹಿಂದಿರುಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅಂದಿನ ದಿನೇ ದೆಹಲಿಯ ಹೊರಭಾಗದಲ್ಲಿನ ರಾನ್‍ಹೌಲಾ ಪ್ರದೇಶದಲ್ಲಿ ಗೌರವ್ ಶವ ಪೊಲೀಸರಿಗೆ ಸಿಕ್ಕಿತ್ತು. ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೌರವ್ ಮೃತದೇಹ ಪತ್ತೆಯಾಗಿದ್ದು, ಗೌರವ್‍ನ ಎರಡು ಕೈಗಳನ್ನು ಕಟ್ಟಲಾಗಿತ್ತು. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.

    ಗೌರವ್ ಫೆಬ್ರವರಿಯಲ್ಲಿ 6 ಲಕ್ಷ ರೂ.ಗಳನ್ನು ವೈಯಕ್ತಿಕ ಸಾಲವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೇ ಕ್ರೆಡಿಟ್ ಕಾರ್ಡ್ ವಂಚನೆಯಿಂದ 3.5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದರು. ಇದರಿಂದ ಗೌರವ್ ಖಿನ್ನತೆ ಒಳಗಾಗಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಹೀಗಾಗಿ ತಾನು ಮೃತ­ಪಟ್ಟರೆ ವಿಮೆ ಹಣ ಪತ್ನಿಗೆ ಸೇರುತ್ತದೆ. ಆಕೆಯಾದರೂ ನೆಮ್ಮದಿಯಿಂದ ಇರಬಹುದು ಎಂದು ತನ್ನ ಹತ್ಯೆಗೆ ತಾನೇ ಸುಪಾರಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ತನಿಖೆಯ ಸಮಯದಲ್ಲಿ ಪೊಲೀಸರು ಗೌರವ್ ಮೊಬೈಲ್ ಫೋನ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅಪ್ರಾಪ್ತ ಹುಡುಗನ ಜೊತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ಜೂನ್ 9 ರಂದು ಗೌರವ್ ಬಸ್ಸಿನ ಮೂಲಕ ರಾನ್‍ಹೌಲಾ ಪ್ರದೇಶಕ್ಕೆ ಹೋಗಿದ್ದಾರೆ . ಅಲ್ಲಿ ತನ್ನದೇ ಫೋಟೋವನ್ನು ಆರೋಪಿಗಳಿಗೆ ಕಳುಹಿಸಿದ್ದಾನೆ. ಆರೋಪಿಗಳಾದ ಮನೋಜ್ ಕುಮಾರ್ ಯಾದವ್, ಸೂರಜ್, ಮತ್ತು ಸುಮಿತ್ ಕುಮಾರ್ ಸೇರಿದಂತೆ ಅಪ್ರಾಪ್ತ ಹುಡುಗ ಗೌರವ್ ಇದ್ದ ಸ್ಥಳಕ್ಕೆ ಬಂದಿದ್ದಾರೆ. ನಂತರ ಆತನ ಕೈಗಳನ್ನು ಕಟ್ಟಿ ಮರಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಹೇಳಿದರು.

    ಪೊಲೀಸರು ಈ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳಿಗೆ ಕೊಲೆ ಮಾಡಲು ಎಷ್ಟು ಹಣ ನೀಡಿದ್ದಾರೆ ಹಾಗೂ ವಿಮಾ ಹಣ ಎಷ್ಟು ಎಂದು ತನಿಖೆ ನಡೆಸುತ್ತಿದ್ದಾರೆ.