Tag: arrest

  • ಮರ್ಯಾದಾ ಹತ್ಯೆ – ಮರಣೋತ್ತರ ಪರೀಕ್ಷೆಯಲ್ಲಿ ತಂದೆಯ ಕೃತ್ಯ ಬಯಲು

    ಮರ್ಯಾದಾ ಹತ್ಯೆ – ಮರಣೋತ್ತರ ಪರೀಕ್ಷೆಯಲ್ಲಿ ತಂದೆಯ ಕೃತ್ಯ ಬಯಲು

    – ಪ್ರಿಯಕರನೊಂದಿಗೆ ಓಡಿ ಹೋಗುತ್ತಾಳೆಂದು ಕೊಂದೇಬಿಟ್ಟ

    ಚೆನ್ನೈ: ತಂದೆಯೊಬ್ಬ ಮಗಳ ಕತ್ತು ಹಿಸುಕಿ ಮರ್ಯಾದಾ ಹತ್ಯೆ ಮಾಡಿರುವ ಘಟನೆ ತಮಿಳುನಾಡಿದ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.

    ಸೆಂಥರಕೈ ಮೃತ ಯುವತಿ. ಆರೋಪಿ ತಂದೆ ಬಾಲಾಜಿ ತನ್ನ ಮಗಳನ್ನು ಹತ್ಯೆ ಮಾಡಿದ್ದನು. ಆದರೆ ಸ್ನಾನ ಮಾಡುವಾಗ ಜಾರಿಬಿದ್ದು ಮೃತಪಟ್ಟಿದ್ದಾಳೆ ಎಂದು ಎಲ್ಲರನ್ನು ನಂಬಿಸಿದ್ದನು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಗೊತ್ತಾಗಿದೆ.

    ಏನಿದು ಪ್ರಕರಣ?
    ಕಾಂಚೀಪುರಂ ಜಿಲ್ಲೆಯ ಆರೋಪಿ ಬಾಲಾಜಿಯ ಮಗಳು ಸೆಂಥರಕೈ ಮೂರು ದಿನಗಳ ಹಿಂದೆ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆ ಸ್ನಾನ ಮಾಡುವಾಗ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದನು. ಆದರೆ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅನುಮಾನಗೊಂಡು ಯುವತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಕುಟುಂಬವರಿಗೆ ನೀಡಿದ್ದಾರೆ. ಕುಟುಂಬದವರು ತಕ್ಷಣ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಹಿರಂಗವಾಗಿದೆ. ನಂತರ ಪೊಲೀಸರು ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನದ ಮೇರೆಗೆ ಯುವತಿಯ ತಂದೆಯನ್ನು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಮೃತ ಸೆಂಥರಕೈ ಸ್ಥಳೀಯ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಸುತ್ತಾಡುತ್ತಿದ್ದಳು. ಇದನ್ನು ನೋಡಿದ ಆರೋಪಿ ಬಾಲಾಜಿ ಮಗಳಿಗೆ ಬೈದಿದ್ದಾನೆ. ಆಗ ಯುವತಿ ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ.  ಆದರೆ ಆರೋಪಿಗೆ ತನ್ನ ಮಗಳು ಸ್ಥಳೀಯ ಯುವಕನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಆಗ ಯುವತಿಗೆ ವಿವಾಹ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೊನಾ ಭಯ ಮತ್ತು ಕಷ್ಟಗಳ ನಡುವೆಯೂ ಆರೋಪಿ ಬಾಲಾಜಿ ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆದರೆ ಯುವತಿ ಮದುವೆಯಾಗುವುದನ್ನು ನಿರಾಕರಿಸಿದ್ದಾಳೆ.

    ಕೊನೆಗೆ ತಂದೆ ಬಾಲಾಜಿ ಮತ್ತು ಕುಟುಂಬ ಸದಸ್ಯರು ಆಕೆಯನ್ನು ಬಲವಂತವಾಗಿ ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ತನ್ನ ಮಗಳು ಯುವಕನೊಂದಿಗೆ ಓಡಿ ಹೋಗಿ ಮದುವೆ ಮಾಡಿಕೊಂಡರೆ ಕುಟುಂಬದ ಮರ್ಯಾದೆ ಹಾಳಾಗುತ್ತದೆ ಎಂದು ಬಾಲಾಜಿ ಆತಂಕ ಪಟ್ಟಿದ್ದಾನೆ. ಕೊನೆಗೆ ತನ್ನ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಸ್ನಾನಗೃಹದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾಳೆ ಎಂದು ನಂಬಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

  • ಆಕ್ಸಿಡೆಂಟ್ ಪ್ಲಾನ್ ಮಾಡಿ ಬರೋಬ್ಬರಿ 45 ಲಕ್ಷ ದರೋಡೆ – ಆರೋಪಿಗಳು ಅರೆಸ್ಟ್, ಹಣ ವಶ

    ಬೆಂಗಳೂರು: ಅಪಘಾತದ ನೆಪದಲ್ಲಿ ಉದ್ಯಮಿಯ ಬಳಿ ಬರೋಬ್ಬರಿ 45 ಲಕ್ಷ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸರು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉದ್ಯಮಿ ರಾಕೇಶ್ ಎಂಬವರ ಕಾರಿಗೆ ಬೈಕಿನಲ್ಲಿ ಬಂದ ಇಬ್ಬರು ಡಿಕ್ಕಿ ಹೊಡೆದಿದ್ದರು. ಇದೇ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ಈ ವೇಳೆ ಮತ್ತಿಬ್ಬರು ಆರೋಪಿಗಳು ಬಂದು ಉದ್ಯಮಿ ರಾಕೇಶ್ ಕಾರಿನಲ್ಲಿದ್ದ 45 ಲಕ್ಷಣ ಹಣ ದೋಚಿ ಎಸ್ಕೇಪ್ ಆಗಿದ್ದರು.

    ಈ ಕುರಿತು ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಉದ್ಯಮಿಯ ಜೊತೆಗಿದ್ದ ವ್ಯಕ್ತಿಯೇ ದರೋಡೆಯ ಹಿಂದಿನ ಕಿಂಗ್ ಪಿನ್ ಅನ್ನೋದು ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಮಹಮ್ಮದ್ ಇರ್ಷಾದ್ ಕಳೆದ ಎಂಟು ವರ್ಷಗಳಿಂದ ಉದ್ಯಮಿಯ ಬಳಿ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ.

    ಉದ್ಯಮಿ ರಾಕೇಶ್ ಹಣದ ವ್ಯವಹಾರದ ಬಗ್ಗೆ ತಿಳಿದು ಅಪಘಾತದ ಪ್ಲಾನ್ ಮಾಡಿ ಹಣ ದೋಚಿದ್ದರು. ಇದೀಗ ಬಂಧಿತರಿಂದ ದರೋಡೆ ಮಾಡಿದ್ದ ಹಣ ಮತ್ತು ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • 17 ಬಾರಿ ಇರಿದು ಮಗಳ ಪ್ರಿಯಕರನ ಕೊಂದ ತಂದೆ – ಆರೋಪಿ ಮನೆಗೆ ಬೆಂಕಿ ಹಚ್ಚಿ ಧ್ವಂಸ

    17 ಬಾರಿ ಇರಿದು ಮಗಳ ಪ್ರಿಯಕರನ ಕೊಂದ ತಂದೆ – ಆರೋಪಿ ಮನೆಗೆ ಬೆಂಕಿ ಹಚ್ಚಿ ಧ್ವಂಸ

    ಚಿಕ್ಕಬಳ್ಳಾಪುರ: ಮಗಳ ಪ್ರಿಯಕರನನ್ನ 17 ಬಾರಿ ಇರಿದು ಕೊಲೆ ಮಾಡಿದ್ದ ತಂದೆ. ರೊಚ್ಚಿಗೆದ್ದ ಮೃತ ಯುವಕನ ಸಂಬಂಧಿಕರು ಆರೋಪಿಯ ಮನೆಯನ್ನ ಧ್ವಂಸ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವಮದ್ದಲಖಾನೆ ಗ್ರಾಮದಲ್ಲಿ ನಡೆದಿದೆ.

    ಹರೀಶ್ (25) ಕೊಲೆಯಾದ ಯುವಕ. ಈತನ ಪ್ರೇಯಸಿಯ ತಂದೆ ವೆಂಕಟೇಶ್ ಹಾಗೂ ಚಿಕ್ಕಪ್ಪ ಸೇರಿಕೊಂಡು ಶುಕ್ರವಾರ ತಡರಾತ್ರಿ 17 ಬಾರಿ ಇರಿದು ಕೊಲೆ ಮಾಡಿದ್ದರು. ಈಗಾಗಲೇ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಯುವಕ ಹರೀಶ್ ಕೊಲೆಗೆ ಆಕ್ರೋಶಗೊಂಡ ಆತನ ಸಂಬಂಧಿಕರು ವೆಂಕಟೇಶ್ ಮನೆ ಮೇಲೆ ದಾಳಿ ಮಾಡಿದ್ದಾರೆ.

    ಮನೆಗೆ ಬೀಗ ಹಾಕಿದ್ದರು ಮನೆಯ ಬೀಗವನ್ನ ಒಡೆದು ಹಾಕಿ, ಕಿಟಕಿ ಬಾಗಿಲುಗಳನ್ನ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮನೆಯೊಳಗೆ ನುಗ್ಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚುತ್ತಿದ್ದ ವೇಳೆ ಯುವಕನಿಗೆ ಬೆಂಕಿ ತಗುಲಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹರೀಶ್ ಸಂಬಂಧಿಕರಿಂದ ಇಡೀ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಪರಿಸ್ಥಿತಿಯನ್ನು ನಿಯಂತ್ರಿಸಲಾಗಲಿಲ್ಲ. ಹರೀಶ್‍ನನ್ನು ಆರೋಪಿಯ ಮನೆ ಬಳಿಯೇ ಮಣ್ಣು ಮಾಡಬೇಕು ಅಂತ ಪಟ್ಟುಹಿಡಿದ್ದಾರೆ. ಸದ್ಯಕ್ಕೆ ಸ್ಥಳಕ್ಕೆ ಎಸ್‍ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಏನಿದು ಪ್ರಕರಣ?
    ಮೃತ ಹರೀಶ್ ಮತ್ತು ಕೊಲೆ ಮಾಡಿದ ವೆಂಕಟೇಶ್ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ 10 ತಿಂಗಳ ಹಿಂದೆ ಇಬ್ಬರು ವಿವಾಹವಾಗಲು ಮನೆ ಬಿಟ್ಟು ಹೋಗಿದ್ದರು. ಈ ವೇಳೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಜಿ ಪಂಚಾಯತಿ ಮೂಲಕ ಮಗಳನ್ನು ಆರೋಪಿ ತಂದೆ ಮನೆಗೆ ಕರೆದುಕೊಂಡು ಹೋಗಿದ್ದನು. ಆದರೆ ಮನೆಗೆ ಹೋದ ಯುವತಿ ಪ್ರಿಯಕರ ಹರೀಶ್ ಕೊರಗಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.

    ಅಂದಿನಿಂದ ಈ ಸಾವಿಗೆ ಪ್ರಿಯಕರ ಹರೀಶ್ ಕಾರಣ. ಅವನನ್ನ ಪ್ರೀತಿ ಮಾಡಿದ್ದರಿಂದಲೇ ನನ್ನ ಮಗಳ ಸಾವಾಯಿತು ಎಂದು ವೆಂಕಟೇಶ್ ಆಕ್ರೋಶಗೊಂಡಿದ್ದನು. ಕೊನೆಗೆ ಶುಕ್ರವಾರ ತಡರಾತ್ರಿ ಬೈಕಿನಲ್ಲಿ ತೆರಳುತ್ತಿದ್ದ ಹರೀಶ್‍ನನ್ನ ಹಿಂಬಾಲಿಸಿ ಕೊಲೆ ಮಾಡಿದ್ದಾನೆ.

    ಬೈಕಿನಲ್ಲಿ ಹೋಗುತ್ತಿದ್ದಾಗ ಹರೀಶ್‍ಗೆ ಮೊದಲು ದೊಣ್ಣೆಯಲ್ಲಿ ಹೊಡೆದಿದ್ದಾರೆ. ನಂತರ ಚಾಕುವಿನಿಂದ ಎದೆಗೆ 17-18 ಬಾರಿ ಇರಿದು ಕೊಂದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿ ಪೊಲೀಸರು ತಡರಾತ್ರಿಯೇ ಆರೋಪಿಗಳಾದ ವೆಂಕಟೇಶ್ ಹಾಗೂ ಗಣೇಶ್‍ನನ್ನ ಬಂಧಿಸಿದ್ದಾರೆ.

  • ಮಗಳ ಪ್ರಿಯಕರನ ಎದೆಗೆ 17 ಬಾರಿ ಚುಚ್ಚಿ ಚುಚ್ಚಿ ಕೊಂದ ತಂದೆ

    ಮಗಳ ಪ್ರಿಯಕರನ ಎದೆಗೆ 17 ಬಾರಿ ಚುಚ್ಚಿ ಚುಚ್ಚಿ ಕೊಂದ ತಂದೆ

    – ಪುತ್ರಿಯ ಆತ್ಮಹತ್ಯೆಗೆ ಪ್ರಿಯಕರ ಕಾರಣವೆಂದು ಕೊಲೆ

    ಚಿಕ್ಕಬಳ್ಳಾಪುರ: ತಂದೆಯೊಬ್ಬ ಮಗಳ ಪ್ರಿಯಕರನ ಎದೆಗೆ 17 ಬಾರಿ ಇರಿದು ಕೊಂದಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ.

    ಯಗವಮದ್ದಲಖಾನೆ ಗ್ರಾಮದ ನಿವಾಸಿ ಹರೀಶ್ (25) ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್ ಕೊಲೆ ಮಾಡಿದ್ದಾರೆ. ತನ್ನ ಮಗಳ ಆತ್ಮಹತ್ಯೆಗೆ ಪ್ರಿಯಕರನೇ ಕಾರಣ ಎಂದು 10 ತಿಂಗಳಿಂದ ಹೊಂಚು ಹಾಕಿದ್ದ ತಂದೆ ವೆಂಕಟೇಶ್ ತಡರಾತ್ರಿ ಯುವಕನನ್ನು ಕೊಲೆ ಮಾಡಿದ್ದಾನೆ.

    ಮೃತ ಹರೀಶ್ ಮತ್ತು ಕೊಲೆ ಮಾಡಿದ ವೆಂಕಟೇಶ್ ಮಗಳು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕೊನೆಗೆ ಯುವತಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿಕೊಡಲಾಗಿತ್ತು. ಇದಾದ 10 ತಿಂಗಳ ಹಿಂದೆ ತನ್ನ ಮನೆಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಳು.

    ಅಂದಿನಿಂದ ಈ ಸಾವಿಗೆ ಪ್ರಿಯಕರ ಹರೀಶ್ ಕಾರಣ. ಅವನನ್ನ ಪ್ರೀತಿ ಮಾಡಿದ್ದರಿಂದಲೇ ನನ್ನ ಮಗಳ ಸಾವಾಯಿತು ಎಂದು ವೆಂಕಟೇಶ್ ಆಕ್ರೋಶಗೊಂಡಿದ್ದನು. ಕೊನೆಗೆ ಶುಕ್ರವಾರ ತಡರಾತ್ರಿ ಬೈಕಿನಲ್ಲಿ ತೆರಳುತ್ತಿದ್ದ ಹರೀಶ್‍ನನ್ನ ಹಿಂಬಾಲಿಸಿ ಕೊಲೆ ಮಾಡಿದ್ದಾನೆ.

    ಈ ಪ್ರಕರಣ ಸಂಬಂಧ ಆರೋಪಿಗಳಾದ ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್‍ನನ್ನು ಬಾಗೇಪಲ್ಲಿ ಸಿಪಿಐ ನಯಾಜ್ ಹಾಗೂ ಪಿಎಸ್‍ಐ ಸುನಿಲ್ ಕುಮಾರ್ ಬಂಧಿಸಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    ಚಾಟಿಂಗ್ ಮಾಡ್ತಿದ್ದಾಗ ನಿರಂತರವಾಗಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನಿಗೆ ಗುಂಡು ಹಾರಿಸ್ದ

    – ರಾತ್ರಿ ತಡವಾಗಿದ್ರೂ ಸ್ನೇಹಿತರೊಂದಿಗೆ ಚಾಟಿಂಗ್
    – ಕಾಡಿನಲ್ಲಿ ಆರೋಪಿ ಮಗ ಅರೆಸ್ಟ್

    ಪಾಟ್ನಾ: ಯುವಕನೊಬ್ಬ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುತ್ತಿದ್ದಾಗ ಹಲವಾರು ಬಾರಿ ಊಟಕ್ಕೆ ಕರೆದಿದ್ದಕ್ಕೆ ಅಮ್ಮನ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಪಾಟ್ನಾದ ಮರಂಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೊಪಿಯನ್ನು ಅಂಗಾದ್ ಯಾದವ್ (20) ಎಂದು ಗುರುತಿಸಲಾಗಿದೆ. ಇದೀಗ ಆರೋಪಿಯನ್ನು ಗನ್ ಸಮೇತ ಪೊಲೀಸ್ ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಯಾದವ್ ನಿವಾಸದ ಹೊರಗೆ ತನ್ನ ಕೆಲ ಸ್ನೇಹಿತರೊಂದಿಗೆ ನಿರಂತರವಾಗಿ ಮೊಬೈಲಿನಲ್ಲಿ ಚಾಟಿಂಗ್ ಮಾಡುತ್ತಿದ್ದ. ರಾತ್ರಿ ತಡವಾಗಿದ್ದರಿಂದ ಯಾದವ್ ತಾಯಿ ಮಂಜು ದೇವಿ ಒಳಗೆ ಬಂದು ಊಟ ಮಾಡುವಂತೆ ಹಲವಾರು ಬಾರಿ ಕರೆದಿದ್ದಾರೆ. ಆದರೆ ಆರೋಪಿ ಯಾದವ್ ಪ್ರತಿ ಬಾರಿಯೂ ತಾಯಿಯ ಮಾತನ್ನು ನಿರ್ಲಕ್ಷಿಸಿದನು. ಕೊನೆಗೆ ಮಂಜು ದೇವಿ ತನ್ನ ಮಗನ ಬಳಿಗೆ ಹೋಗಿ ಮತ್ತೆ ಊಟಕ್ಕೆ ಬರುವಂತೆ ಕರೆದು ಮನೆಯೊಳಗೆ ಬರುತ್ತಿದ್ದರು.

    ಆಗ ಆರೋಪಿ ಸ್ನೇಹಿತರೊಂದಿಗೆ ಮಾತನಾಡುವಾಗ ಅಡ್ಡಿಪಡಿಸಿದ ಕಾರಣಕ್ಕಾಗಿ ಕೋಪದಿಂದ ತನ್ನ ತಾಯಿಗೆ ಗುಂಡು ಹಾರಿಸಿದ್ದಾನೆ. ತಕ್ಷಣ ಮಂಜು ದೇವಿ ಸ್ಥಳದಲ್ಲೇ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಮಂಜು ದೇವಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅನಿಲ್ ಕುಮಾರ್ ತಿಳಿಸಿದ್ದಾರೆ.

    ಈ ಘಟನೆಗೆ ಮಂಜು ದೇವಿ ಸಹೋದರಿ ಇಂದೂ ದೇವಿ ಸಾಕ್ಷಿಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇಂದೂ ದೇವಿಯ ಹೇಳಿಕೆಯ ಆಧಾರದ ಮೇಲೆ ಅಂಗದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಯಾದವ್‍ನನ್ನು ನಿವಾಸದ ಹಿಂದಿನ ಅರಣ್ಯದಲ್ಲಿ ಬಂಧಿಸಲಾಗಿದೆ. ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೆ ಪೊಲೀಸರು ಆರೋಪಿಯನ್ನು ಪಿಸ್ತೂಲ್ ಸಮೇತ ಬಂಧಿಸಿದ್ದಾರೆ.

    ಆರೋಪಿ ಯಾದವ್ ತಂದೆ ರಂಬಾಬು ಯಾದವ್ ಮತ್ತು ಅವರ ಇಬ್ಬರು ಹಿರಿಯ ಸಹೋದರರು ಪಂಜಾಬ್‍ನಲ್ಲಿ ದೈನಂದಿನ ಕೂಲಿ ಕೆಲಸ ಮಾಡುತ್ತಾರೆ. ಆರು ತಿಂಗಳ ಹಿಂದೆ 7,500 ರೂ. ಕೊಟ್ಟು ಪಿಸ್ತೂಲ್ ಖರೀದಿಸಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಗುರುವಾರ ಕೋವಿಡ್ -19 ಪರೀಕ್ಷೆಯ ನಂತರ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

  • ಮಕ್ಕಳ ಅಶ್ಲೀಲ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದ ರೌಡಿಶೀಟರ್ ಬಂಧನ

    ಮಕ್ಕಳ ಅಶ್ಲೀಲ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದ ರೌಡಿಶೀಟರ್ ಬಂಧನ

    ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ರೌಡಿಶೀಟರ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮಂಜುನಾಥ್ ಅಲಿಯಾಸ್ ಕೋಳಿ ಮಂಜ ಬಂಧಿತ ರೌಡಿಶೀಟರ್. ಆರೋಪಿ ಚಾಮರಾಜಪೇಟೆ ಮೂಲದವನಾಗಿದ್ದು, ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದನು.

    ಬಂಧಿತ ಆರೋಪಿ ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಲೈಂಗಿಕ ಅಪರಾಧ ಮಾಡುತ್ತಿದ್ದನು. ಆರೋಪಿ ವಿರುದ್ಧ ಕ್ರಮ ಜರಗಿಸುವಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದರು.

    ಇದೀಗ ಸಾರ್ವಜನಿಕರು ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿ ಮಂಜುನಾಥ್‍ನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕಳ್ಳತನ, ದರೋಡೆ, ಸೇರಿದಂತೆ ಬೇರೆ ಬೇರೆ ಪ್ರಕರಣಗಳಿವೆ.

  • ಮೊದಲ ಬಾರಿಗೆ ಕೆಪಿಐಟಿ ಕಾಯ್ದೆಯಡಿ ಸಿಸಿಬಿ ಪೊಲೀಸರಿಂದ ಪಿಂಪ್ ಅರೆಸ್ಟ್

    ಮೊದಲ ಬಾರಿಗೆ ಕೆಪಿಐಟಿ ಕಾಯ್ದೆಯಡಿ ಸಿಸಿಬಿ ಪೊಲೀಸರಿಂದ ಪಿಂಪ್ ಅರೆಸ್ಟ್

    ಬೆಂಗಳೂರು: ನಗರದ ಸಿಸಿಬಿ ಪೊಲೀಸರು ಮೊದಲ ಬಾರಿಗೆ ಕರ್ನಾಟಕ ಅಕ್ರಮ ಕಳ್ಳಸಾಗಣೆ ತಡೆಗಟ್ಟುವಿಕೆ ಕಾಯ್ದೆಯಡಿ (ಕೆಪಿಐಟಿ) ಯಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ.

    ಸ್ವಾತಿ ಬಂಧಿತ ಆರೋಪಿತೆ. ಈಕೆ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇದೀಗ ಸಿಸಿಬಿ ಪೊಲೀಸರು Karnataka Prevention Of Illegal Trafficking Act (ಕೆಪಿಐಟಿ) ಕಾಯ್ದೆಯಡಿಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿ ಸ್ವಾತಿ, ನಗರದ ವಿವಿಧೆಡೆ ಮಸಾಜ್ ಸ್ಪಾಗಳನ್ನ ತೆರೆದು ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಹಲವು ಬಾರಿ ಬಂಧಿಸಿದ್ದರು ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ಮತ್ತೆ ವೇಶ್ಯಾವಾಟಿಕೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ವೇಶ್ಯಾವಾಟಿಕೆಗೆ ಯುವತಿಯರನ್ನ ಅಕ್ರಮ ಕಳ್ಳ ಸಾಗಾಣಿಕೆ ಮಾಡಿಕೊಳ್ಳುತ್ತಿದ್ದಳು.

    ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ಬಾರಿ ಆರೋಪಿತೆ ಮೇಲೆ ಕೆಪಿಐಟಿ ಕಾಯ್ದೆ ಹಾಕಿ ಬಂಧಿಸಿದ್ದಾರೆ. ಈ ಕಾಯ್ದೆಯಡಿ ಅನ್ವಯ ಆರೋಪಿಗೆ ಒಂದು ವರ್ಷ ಯಾವುದೇ ರೀತಿಯಲ್ಲೂ ಜಾಮೀನು ಸಿಗಲ್ಲ ಎಂದು ಹೇಳಲಾಗುತ್ತಿದೆ.

  • ಕೆಲಸಕ್ಕಾಗಿ ಮನೆಗೆ ಕರ್ಕೊಂಡು ಹೋಗಿ ಡ್ರಗ್ಸ್ ಕೊಟ್ಳು- 10 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

    ಕೆಲಸಕ್ಕಾಗಿ ಮನೆಗೆ ಕರ್ಕೊಂಡು ಹೋಗಿ ಡ್ರಗ್ಸ್ ಕೊಟ್ಳು- 10 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

    – ಸಂತ್ರಸ್ತೆಯ ಸಂಬಂಧಿಯಿಂದ್ಲೇ ಹೀನ ಕೃತ್ಯ
    – ಅನೇಕ ದಿನಗಳವರೆಗೂ ಸಾಮೂಹಿಕ ಅತ್ಯಾಚಾರ

    ಹೈದರಾಬಾದ್: 16 ವರ್ಷದ ಹುಡುಗಿಗೆ ಡ್ರಗ್ಸ್ ಕೊಟ್ಟು 10 ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಆಂಧ್ರ ಪ್ರದೇಶದ ರಾಜಮಂಡ್ರಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, 10 ಮಂದಿ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ 11ನೇ ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆಯ ದೂರದ ಸಂಬಂಧಿ ಆರೋಪಿ ಅನಿತಾ, ಅಂಗಡಿಯ ಕೆಲಸಕ್ಕಾಗಿ ಕಳುಹಿಸುವಂತೆ ಹುಡುಗಿಯ ತಾಯಿಯ ಬಳಿ ಮನವಿ ಮಾಡಿಕೊಂಡಿದ್ದಳು. ನಂತರ ಜೂನ್ 23 ರಂದು ಅನಿತಾ ಏಳು ಮಂದಿ ಕುಳಿತಿದ್ದ ಆಟೋದಲ್ಲಿ ಅಪ್ರಾಪ್ತೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಸಂತ್ರಸ್ತೆಗೆ ಚಹಾದಲ್ಲಿ ಡ್ರಗ್ಸ್ ಮಿಕ್ಸ್ ಮಾಡಿ ಕುಡಿಸಿದ್ದಾಳೆ. ನಂತರ 10 ಮಂದಿ ಕಾಮುಕರು ಅಪ್ರಾಪ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ಅನಿತಾ ತನ್ನ ಮನೆಯಲ್ಲಿ ಅಪ್ರಾಪ್ತೆಯನ್ನು ಅನೇಕ ದಿನಗಳವರೆಗೂ ಇರಿಸಿಕೊಂಡಿದ್ದಳು. ಅಲ್ಲದೇ ಪ್ರತಿದಿನವೂ ಅಪ್ರಾಪ್ತೆಗೆ ಡ್ರಗ್ಸ್ ಕೊಟ್ಟು ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ. ಇತ್ತ ತಾಯಿ ಮಗಳು ತುಂಬಾ ದಿನಗಳಾದರೂ ಮನೆಗೆ ವಾಪಸ್ ಬಂದಿಲ್ಲ ಎಂದು ನಾಪತ್ತೆಯಾಗಿದ್ದಾಳೆ ಎಂದು ಜುಲೈ 12 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಟಿಎಸ್‍ಎನ್ ರಾವ್ ತಿಳಿಸಿದ್ದಾರೆ.

    ಅದೇ ದಿನ ಅಪ್ರಾಪ್ತೆಯನ್ನು ಬಿಟ್ಟು ಅನಿತಾ ತನ್ನ ಹಳ್ಳಿಗೆ ತೆರಳಿದ್ದಳು. ಜುಲೈ 15 ರಂದು ಸಂತ್ರಸ್ತೆ ತನ್ನ ತಾಯಿಯ ಬಳಿಗೆ ವಾಪಸ್ ಆಗಿದ್ದು, ನಡೆದ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾಳೆ. ಬಳಿಕ ಜುಲೈ 18 ರಂದು ಕುಟುಂಬವು ಈ ಕುರಿತು ದೂರು ದಾಖಲಿಸಿದ್ದರು. ನಾವು ಈ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿದ್ದೇವೆ ಎಂದು ರಾವ್ ಹೇಳಿದರು.

    ಆರೋಪಿ ಅನಿತಾ ಮಾನವ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾಳೆ. ಈಕೆಯ ಕೆಲಸದಲ್ಲಿ ಕೆಲ ಪುರುಷರು ಭಾಗಿಯಾಗಿದ್ದು, ಈ ವಿಚಾರ ಸಂತ್ರಸ್ತೆಯ ಕುಟುಂಬವರಿಗೆ ತಿಳಿದಿರಲಿಲ್ಲ. ಸದ್ಯಕ್ಕೆ ಸಂತ್ರಸ್ತೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  • ಮ್ಯಾಟ್ರಿಮೋನಿಯಲ್ಲಿ ಮದ್ವೆಯಾಗೋದಾಗಿ ಯುವತಿಯನ್ನ ವಂಚಿಸಿದ್ದ ಆರೋಪಿ ಅರೆಸ್ಟ್

    ಮ್ಯಾಟ್ರಿಮೋನಿಯಲ್ಲಿ ಮದ್ವೆಯಾಗೋದಾಗಿ ಯುವತಿಯನ್ನ ವಂಚಿಸಿದ್ದ ಆರೋಪಿ ಅರೆಸ್ಟ್

    ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ಯುವತಿಯನ್ನ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಮೇಶ್ ಅಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ. ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ರಮೇಶ್ ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ಯುವತಿಯರನ್ನ ನಂಬಿಸಿ ಮೋಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

    ಆರೋಪಿ ರಮೇಶ್ ಇತ್ತೀಚೆಗೆ ಮ್ಯಾಟ್ರಿಮೋನಿಯಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ಆಕೆಗೆ ಮದುವೆ ಆಗುವುದಾಗಿ ನಂಬಿಸಿದ್ದನು. ಬಳಿಕ ಸೈಟ್ ಕೊಳ್ಳಲು ಹಣದ ಅವಶ್ಯಕತೆ ಇದೆ ಆರೋಪಿ ರಮೇಶ್ ಯುವತಿಯ ಬಳಿ 7 ಲಕ್ಷ ಹಣ ಕೇಳಿದ್ದನು.

    ಅದರಂತೆಯೇ ಯುವತಿ ಕೂಡ ರಮೇಶ್‍ನನ್ನು ನಂಬಿ 7 ಲಕ್ಷ ಹಣ ಕೊಟ್ಟಿದ್ದರು. ಆದರೆ ಆರೋಪಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದನು.

    ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದೀಗ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆ ಆರೋಪಿಯಿಂದ 6.8 ಲಕ್ಷ ನಗದು, ಒಂದು ಕಾರು ಮತ್ತು ಎರಡು ಮೊಬೈಲ್ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಯ ದಾಖಲಾತಿಗಳು ವಶ ಪಡಿಸಿಕೊಂಡಿದ್ದಾರೆ.

  • ಯುವತಿಯರನ್ನ ಅಕ್ರಮವಾಗಿ ಡ್ಯಾನ್ಸ್ ಬಾರ್‌ಗಳಿಗೆ ಬಿಡ್ತಿದ್ದ ಆರೋಪಿ ಅರೆಸ್ಟ್

    ಯುವತಿಯರನ್ನ ಅಕ್ರಮವಾಗಿ ಡ್ಯಾನ್ಸ್ ಬಾರ್‌ಗಳಿಗೆ ಬಿಡ್ತಿದ್ದ ಆರೋಪಿ ಅರೆಸ್ಟ್

    – ಕೆಲಸ ಕೊಡಿಸೋದಾಗಿ ವಿದೇಶಕ್ಕೆ ಕರ್ಕೊಂಡು ಹೋಗ್ತಿದ್ದ

    ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಸವರಾಜ್ ಕಳಸದ್ ಬಂಧಿತ ಆರೋಪಿ. ಆರೋಪಿ ಬಸವರಾಜ್ ಕಳಸದ್ ಮೂಲತಃ ಕೊಪ್ಪಳ ಜಿಲ್ಲೆಯವನು ಎಂದು ತಿಳಿದು ಬಂದಿದೆ. ಆರೊಪಿ ಬಸವರಾಜ್ ಕಳಸದ್ ಮೊದಲಿಗೆ ಯುವತಿಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದನು. ನಂತರ ಆರೋಪಿ ಯುವತಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಅಕ್ರಮವಾಗಿ ಡ್ಯಾನ್ಸ್ ಬಾರ್‌ಗಳಿಗೆ ಬಿಡುತ್ತಿದ್ದನು.

    ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಯುವತಿಯರನ್ನ ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ. ಇದೀಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.