Tag: arrest

  • ಸೆಕ್ಸ್‌ಗೆ ಒತ್ತಾಯಿಸಿದ ಎಂಜಿನಿಯರ್ ಪತಿಯನ್ನೇ ಕೊಂದ ಪತ್ನಿ

    ಸೆಕ್ಸ್‌ಗೆ ಒತ್ತಾಯಿಸಿದ ಎಂಜಿನಿಯರ್ ಪತಿಯನ್ನೇ ಕೊಂದ ಪತ್ನಿ

    – ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟ ಶಿಕ್ಷಕಿ
    – ಗಂಡನ ತಲೆಯನ್ನ ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿದ್ಲು

    ಚೆನ್ನೈ: ಅಸ್ವಾಭಾವಿಕ ಸೆಕ್ಸ್‌ಗೆ ಒತ್ತಾಯಿಸಿದ ನಂತರ ಮಹಿಳೆಯೊಬ್ಬಳು ತನ್ನ ಸಂಬಂಧಿಕರ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿರುವ ಘಟನೆ ತಮಿಳುನಾಡಿದ ಮದುರೈನಲ್ಲಿ ನಡೆದಿದೆ.

    ಮೃತನನ್ನು ಎಂಜಿನಿಯರ್ ಸುಂದರ್ ಅಲಿಯಾಸ್ ಸುಧೀರ್‌ (34) ಎಂದು ಗುರುತಿಸಲಾಗಿದೆ. ಸುಧೀರ್ ಸಮೀಕ್ಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು. ಕೊಲೆಯಾದ ದಿನ ಈತ ತನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

    ಏನಿದು ಪ್ರಕರಣ?
    ಮೃತ ಸುಧೀರ್ 8 ವರ್ಷಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ಅರಿವುಸೆಲ್ವಂ ಜೊತೆ ಮದುವೆಯಾಗಿದ್ದನು. ಈ ದಂಪತಿಗೆ ಒಬ್ಬ ಮಗಳಿದ್ದಾಳೆ. ಶುಕ್ರವಾರ ಆರೋಪಿ ಅರಿವುಸೆಲ್ವಂ ತನ್ನ ಪತಿ ಸುಧೀರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಹಾಸಿಗೆಯಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ವೈದ್ಯರಿಗೆ ತಿಳಿಸಿದ್ದಳು. ವೈದ್ಯರು ಪರೀಕ್ಷಿಸಿ ಸುಧೀರ್‌ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

    ಪೊಲೀಸರ ತಂಡವು ಈ ಪ್ರಕರಣದ ಬಗ್ಗೆ ತಿಳಿದು ತನಿಖೆಯನ್ನು ಪ್ರಾರಂಭಿಸಿದ್ದರು. ಈ ವೇಳೆ ಮೃತ ಸುಧೀರ್‌ನ ಖಾಸಗಿ ಭಾಗಗಳಿಗೆ ಗಾಯಗಳಾಗಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂನನ್ನು ವಿಚಾರಣೆ ಮಾಡಿದ್ದಾರೆ. ಆಗ ತನ್ನ ಪತಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಪತಿಯನ್ನು ಕೊಂದಿದ್ದೇನೆ ಎಂದು ಆರೋಪಿ ಶಾಲಾ ಶಿಕ್ಷಕಿ ಪೊಲೀಸರಿಗೆ ತಿಳಿಸಿದ್ದಾಳೆ.

    ಪತಿ ಮದ್ಯದ ವ್ಯಸನಿಯಾಗಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನು. ಅಲ್ಲದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ಸುಧೀರ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

    ಆರೋಪಿ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿ ಪತಿಗೆ ಕೊಟ್ಟಿದ್ದಾಳೆ. ನಂತರ ಮಹಿಳೆ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆದಿದ್ದಾಳೆ. ಬಳಿಕ ಮೂವರು ಆರೋಪಿಗಳು ಸುಧೀರ್‌ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ವೇಳೆ ಸುಮಾಯರ್ ಸುಧೀರ್‌ನ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

  • ಪತ್ನಿಯನ್ನ ಕೊಂದು ಸ್ನೇಹಿತನ ಸಹಾಯದಿಂದ ಡ್ರಮ್‍ನಲ್ಲಿ ತುಂಬಿ ಪೊದೆಗೆ ಎಸೆದ

    ಪತ್ನಿಯನ್ನ ಕೊಂದು ಸ್ನೇಹಿತನ ಸಹಾಯದಿಂದ ಡ್ರಮ್‍ನಲ್ಲಿ ತುಂಬಿ ಪೊದೆಗೆ ಎಸೆದ

    – ಮಗ, ಸೊಸೆ ನಾಪತ್ತೆಯಾಗಿರೋ ದೂರು ದಾಖಲಿಸಿದ ತಂದೆ

    ಮುಂಬೈ: ಕೌಟುಂಬಿಕ ಕಲಹದಿಂದ ಸ್ನೇಹಿತನ ಸಹಾಯದಿಂದ ಪತ್ನಿಯನ್ನೇ ಕೊಂದು ಡ್ರಮ್‍ನಲ್ಲಿ ತುಂಬಿ ಮೃತದೇಹವನ್ನು ಎಸೆದಿರುವ ಘಟನೆ ನಗರದಲ್ಲಿ ನಡೆದಿದೆ.

    ಆರೋಪಿಯನ್ನು ಅಂಬುಜ್ ತಿವಾರಿ ಎಂದು ಗುರುತಿಸಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ನೀಲಂ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ಪಟ್ಟು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಜುಲೈ 23 ರಂದು ಆರೋಪಿ ತಿವಾರಿಯ ತಂದೆ ಮಹೇಂದ್ರ ಪೊಲೀಸ್ ಠಾಣೆಗೆ ಬಂದು ತಮ್ಮ ಮಗ ಮತ್ತು ಸೊಸೆ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ನನ್ನ ಮಗ ಸಿಮೆಂಟ್ ಕಾರ್ಖಾನೆಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಸೊಸೆ ಗೃಹಿಣಿಯಾಗಿದ್ದು, ಜುಲೈ 22 ರಂದು ಇಬ್ಬರೂ ನಾಪತ್ತೆಯಾಗಿದ್ದರು ಎಂದು ಮಹೇಂದ್ರ ಪೊಲೀಸರಿಗೆ ತಿಳಿಸಿದ್ದರು.

    ದೂರು ದಾಖಲಿಸಿಕೊಂಡ ನಂತರ ಪೊಲೀಸರು ದಂಪತಿಗಾಗಿ ಹುಡುಕಲು ಪ್ರಾರಂಭಿಸಿದ್ದರು. ಮಂಗಳವಾರ ಘನ್ಸೋಲಿಯಲ್ಲಿ ತಿವಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಪೊಲೀಸರು ಪತ್ನಿಯ ಬಗ್ಗೆ ಪ್ರಶ್ನಿ ಮಾಡಿದ್ದಾರೆ. ಆಗ ಆರೋಪಿ ಪೊಲೀಸರ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿ ಅಂಬುಜ್‍ನನ್ನ ತೀವ್ರವಾಗಿ ವಿಚಾರಣೆ ಮಾಡಿದ್ದಾರೆ.

    ಆಗ ಆರೋಪಿ ಪತ್ನಿಯನ್ನು ತಾನೇ ಕೊಲೆ ಮಾಡಿ ಶವವನ್ನು ಲೋನವಾಲಾದಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಅಂಬುಜ್‍ನನ್ನು ಮೃತದೇಹವನ್ನು ಎಸೆದಿರುವ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಡ್ರಮ್‍ನಲ್ಲಿ ಪತ್ನಿಯ ಮೃತದೇಹ ಪತ್ತೆಯಾಗಿದೆ.

    ಆರೋಪಿ ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಪಟ್ಟಿದ್ದನು. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಜುಲೈ 23 ರಂದು ಅಂಬುಜ್ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪತ್ನಿ ನೀಲಂಗೆ ತನ್ನ ಸ್ನೇಹಿತ ಶ್ರೀಕಾಂತ್ ಚೌಬೆ ಮನೆಗೆ ಹೋಗಬೇಕೆಂದು ಹೇಳಿದ್ದನು. ಆದರೆ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ತಿವಾರಿ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ನೇಹಿತ ಚೌಬೆ ಮನೆಗೆ ಕರೆದು ಪತ್ನಿಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಿದ್ದಾನೆ. ನಂತರ ನೀಲಂ ಮೃತದೇಹವನ್ನು ಎಸೆಯಲು ಆರೋಪಿ ತಿವಾರಿಗೆ ಸ್ನೇಹಿತ ಸಹಾಯ ಮಾಡಿದ್ದಾನೆ. ನಂತರ ಇಬ್ಬರು ಸೇರಿಕೊಂಡು ಮೃತದೇಹವನ್ನು ಡ್ರಮ್‍ನಲ್ಲಿ ತುಂಬಿ ಇಟ್ಟು ಲೋನಾವಾಲಾ ಬಳಿಯ ಪೊದೆಗಳಲ್ಲಿ ಎಸೆದಿದ್ದರು.

  • ಖಾಸಗಿ ಫೋಟೋಗಳ ಮೂಲಕ ನಟನ ಮಗಳಿಗೆ ಬ್ಲ್ಯಾಕ್‍ಮೇಲ್ – ಯುವಕ ಅರೆಸ್ಟ್

    ಖಾಸಗಿ ಫೋಟೋಗಳ ಮೂಲಕ ನಟನ ಮಗಳಿಗೆ ಬ್ಲ್ಯಾಕ್‍ಮೇಲ್ – ಯುವಕ ಅರೆಸ್ಟ್

    – ಆರೋಪಿಗೆ ಹೆದರಿ ಹಣ ನೀಡಿದ್ದ ನಟನ ಪುತ್ರಿ

    ಮುಂಬೈ: ಬಾಲಿವುಡ್ ನಟನ ಮಗಳ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಯುವಕನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಮುಂಬೈನ ಮಲಾಡ್ ನಿವಾಸಿ ಕುಮೇಲ್ ಹನೀಫ್ ಪಟಾನಿ (25) ಎಂದು ಗುರುತಿಸಲಾಗಿದೆ. ಒಂದು ವೇಳೆ ಹಣ ಕೊಡದಿದ್ದರೆ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿಯ ಮಗಳಿಗೆ ಆರೋಪಿ ಇನ್‍ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದನು. ಕಾಲೇಜು ದಿನಗಳಿಂದ ನೀನು ನನಗೆ ಗೊತ್ತು. ನಿನ್ನ ಕೆಲವು ಖಾಸಗಿ ಫೋಟೋಗಳು ನನ್ನ ಬಳಿ ಇವೆ. ಹೀಗಾಗಿ ನಾನು ಕೇಳಿದಷ್ಟು ಹಣ ಕೊಡಬೇಕು. ಒಂದು ವೇಳೆ ಹಣ ಕೊಡದಿದ್ದರೆ ನಿನ್ನ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು.

    ಅಲ್ಲದೇ ಆರೋಪಿ ಮೆಸೇಜ್ ಮಾಡಿದ ನಂತರ ತಾನು ಯಾರೆಂದು ಗೊತ್ತಾಗಬಾರದೆಂದು ತಕ್ಷಣ ಅವುಗಳನ್ನು ಡಿಲೀಟ್ ಮಾಡಿದ್ದಾನೆ. ಸ್ವಲ್ಪ ದಿನದ ನಂತರ ನಟನ ಮಗಳಿಗೆ ಫೋನ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಕೊನೆಗೆ ಆರೋಪಿಯ ಬೆದರಿಕೆಗೆ ಹೆದರಿ ನಟನ ಮಗಳು 15,000 ರಿಂದ 20,000 ರೂಪಾಯಿ ನೀಡಿದ್ದಾರೆ. ಆದರೆ ಆರೋಪಿ ಮತ್ತೆ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆಗ ಆಕೆ ತನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.

    ಪೋಷಕರು ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಆರೋಪಿ ಪಟಾನಿ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯ ಸಹೋದರಿ ಮತ್ತು ಬಾಲಿವುಡ್ ನಟನ ಮಗಳು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಇಬ್ಬರು ಸ್ನೇಹಿತರು ಕೂಡ ಆಗಿದ್ದರು. ಆದರೂ ಆರೋಪಿ ಈ ರೀತಿ ಹಣಕ್ಕಾಗಿ ನಟನ ಮಗಳಿಗೆ ಬ್ಲ್ಯಾಕ್‍ಮೇಲೆ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

  • 17 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ- 10 ಮಂದಿ ಅರೆಸ್ಟ್

    17 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ- 10 ಮಂದಿ ಅರೆಸ್ಟ್

    ನವದೆಹಲಿ: ಕೋವಿಡ್ 19 ಮಹಾಮಾರಿಯ ನರ್ತನದ ಮಧ್ಯೆ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದು, 17 ವರ್ಷದ ಹುಡುಗಿಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ನಡೆದಿದೆ.

    ಈ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ಜುಲೈ 21ರಂದು ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಮೂವರನ್ನು ಬಾಲಕಿಯ ಬಲವಂತ ಮಾಡಿದ್ದು ಹಾಗೂ ಉಳಿದವರನ್ನು ಕೃತ್ಯಕ್ಕೆ ಸಹಕರಿಸಿದ ಹಾಗೂ ಆರೋಪಿಗಳಿಗೆ ಆಶ್ರಯ ನಿಡಿದ್ದಕ್ಕಾಗಿ ಬಂಧಿಸಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಇಬ್ಬರು ಸಹಚರರನ್ನು ಸಿಪಾಹಿಜಲಾ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಅಲ್ಲಿನ ಡಿಐಜಿ ತಿಳಿಸಿದ್ದಾರೆ.  ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವ್ರು ತಿಳಿಸಿದ್ದಾರೆ .

    ಇಂತಹ ಘೋರ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ನಿಡಬೇಕು ಎಂದು ವಿದ್ಯಾರ್ಥಿಗಳ ಗುಂಪೊಂದು ಕರೆ ನೀಡಿದೆ.

  • ಹತ್ತನೇ ಮದುವೆಯಾಗಲು ಮುಂದಾಗಿದ್ದ ಪತ್ನಿಯನ್ನ ಕೊಂದ 9ನೇ ಪತಿ

    ಹತ್ತನೇ ಮದುವೆಯಾಗಲು ಮುಂದಾಗಿದ್ದ ಪತ್ನಿಯನ್ನ ಕೊಂದ 9ನೇ ಪತಿ

    – ಮೊದಲು ಸ್ನೇಹ ನಂತ್ರ ಪ್ರೀತಿಸಿ ವಿವಾಹ
    – 9 ಮದ್ವೆ ಆಗಿದ್ರೂ ಮತ್ತೊಬ್ಬನ ಜೊತೆ ಸಂಬಂಧ

    ಹೈದರಾಬಾದ್: ಹತ್ತನೇ ಮದುವೆಯಾಗಲು ಮುಂದಾಗಿದ್ದ 30 ವರ್ಷದ ಮಹಿಳೆಯನ್ನು ಆಕೆಯ ಒಂಬತ್ತನೇ ಪತಿಯೇ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಪಹಾಡಿ ಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ವರಲಕ್ಷ್ಮಿ (30) ಕೊಲೆಯಾದ ಮಹಿಳೆ. ಆರೋಪಿಯನ್ನು ನಾಗರಾಜು ಎಂದು ಗುರುತಿಸಲಾಗಿದೆ. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ನಾಗರಾಜು ಕರ್ನೂಲ್ ಜಿಲ್ಲೆಯ ಜಲ್‍ಪಲ್ಲಿ ಮೂಲದವನಾಗಿದ್ದು, ಶ್ರೀರಾಮ ಕಾಲೋನಿಯಲ್ಲಿ ವಾಸಿಸುತ್ತಿದ್ದನು. ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇತ್ತ ಮೃತ ವರಲಕ್ಷ್ಮಿ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ಈಗಾಗಲೇ ಎಂಟು ಮದುವೆಯಾಗಿದ್ದು, 8ನೇ ಪತಿ ಮತ್ತು ಮಗನ ಜೊತೆ ವಾಸ ಮಾಡುತ್ತಿದ್ದಳು ಎಂದು ಎಸ್‍ಐ ಕುಮಾರಸ್ವಾಮಿ ತಿಳಿಸಿದ್ದಾರೆ.

    ನಾಗರಾಜು ಮತ್ತು ವರಲಕ್ಷ್ಮಿ ಇಬ್ಬರಿಗೂ ಪರಿಚಯವಾಗಿ ಸ್ನೇಹವಾಗಿದೆ. ಸ್ನೇಹ ಪ್ರೀತಿಯಾಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಬಳಿಕ ವರಲಕ್ಷ್ಮಿ ನಾಗರಾಜುನನ್ನು ಮದುವೆಯಾಗಲು ಪತಿ ಮತ್ತು ಮಗನನ್ನು ಬಿಟ್ಟು ಬಂದಿದ್ದಳು. ಮದುವೆಯಾದ ಕೆಲವು ತಿಂಗಳುಗಳ ನಂತರ ಮತ್ತೆ ವರಲಕ್ಷ್ಮಿ ಇತರ ಪುರುಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ತಿಳಿದ ಪತಿ ನಾಗರಾಜು ಆತನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದನು. ಅಲ್ಲದೇ ಈ ವಿಚಾರದ ಬಗ್ಗೆ ದಂಪತಿಯ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.

    ಮಂಗಳವಾರ ಮತ್ತೆ ದಂಪತಿಯ ಮಧ್ಯೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಕೋಪದಲ್ಲಿ ನಾಗರಾಜು ಚಾಕುವಿನಿಂದ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಪಹಾಡಿ ಶರೀಫ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತನಿಖೆಯ ವೇಳೆ ನಾಗರಾಜು ವರಲಕ್ಷ್ಮಿಯ ಒಂಬತ್ತನೇ ಪತಿ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

    ಮಹಿಳೆ ಮೊದಲಿಗೆ ಪುರುಷನೊಂದಿಗೆ ಸ್ನೇಹ ಬೆಳೆಸುತ್ತಿದ್ದಳು. ನಂತರ ಅವರ ಜೊತೆ ಮದುವೆಯಾಗುತ್ತಿದ್ದಳು. ಬಳಿಕ ವಿವಾಹವಾದ ಸ್ವಲ್ಪ ತಿಂಗಳುಗಳ ನಂತರ ಮತ್ತೆ ಆತನನ್ನು ಬಿಟ್ಟು ಬೇರೆ ವ್ಯಕ್ತಿಯ ಜೊತೆ ಮದುವೆಯಾಗುತ್ತಿದ್ದಳು ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

  • ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ- ಮಹಿಳೆ ಮನೆಯಲ್ಲಿ 74 ಲಕ್ಷ ಪತ್ತೆ

    ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ- ಮಹಿಳೆ ಮನೆಯಲ್ಲಿ 74 ಲಕ್ಷ ಪತ್ತೆ

    – ಅಕ್ರಮವಾಗಿ ಡ್ರಗ್ಸ್ ಸಾಗಣೆ ಮಾಡ್ತಿರೋ ಶಂಕೆ

    ಡಿಸ್ಪುರ್: ಪೊಲೀಸರು ಮಹಿಳೆಯೊಬ್ಬಳ ಮನೆಯಲ್ಲಿ ಬರೋಬ್ಬರಿ 74 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಸೋಲಾಪರಾದಲ್ಲಿ ವಾಸಿಸುತ್ತಿದ್ದ ಸಂಗೀತಾ ಲೈಶನ್‍ಬಾಮ್, ಶಂಕಿತರಾದ ಸ್ಯಾಮ್ ಲೈಥಂಗ್‍ಬಾಮ್ ಮತ್ತು ಥಂಗ್‍ಕೋಸತ್ ಮೂವರನ್ನು ಬಂಧಿಸಲಾಗಿದೆ. ಮಹಿಳೆಯ ಮನೆಯಲ್ಲಿ 74,05,600 ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈಕೆ ಅಕ್ರಮವಾಗಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.

    ಅಕ್ರಮವಾಗಿ ಡ್ರಗ್ಸ್ ಸಾಗಾಣೆ ಮಾಡುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಲಾಚಿನಿ ಅಪಾರ್ಟ್‌ಮೆಂಟ್ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ಅಲ್ಲಿ ನಾಲ್ಕನೇ ಮಹಡಿಯಲ್ಲಿ ಸಂಗೀತಾ ಲೈಶಾಬ್‍ಬಾಮ್ ಮನೆಯ ಆವರಣದಲ್ಲಿ ಹುಡುಕಾಟ ನಡೆಸಲಾಯಿತು. ಆಗ 74 ಲಕ್ಷ ಹಣ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶೋಧದ ವೇಳೆ ಶಂಕಿತರಾದ ಸ್ಯಾಮ್ ಲೈಥಂಗ್‍ಬಾಮ್ ಮತ್ತು ಥಂಗ್‍ಕೋಸತ್‍ರನ್ನು ಸಹ ಬಂಧಿಸಲಾಗಿದೆ. ತನಿಖೆಯ ಸಮಯದಲ್ಲಿ ಸಂಗೀತಾ ಈ ಹಿಂದೆ ಅಕ್ರಮ ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

  • ಒಂದು ಹುಡುಗಿಗಾಗಿ ಇಬ್ಬರು ಕಿತ್ತಾಟ – ಯುವಕನ ಕೊಲೆ, 6 ಮಂದಿ ಬಂಧನ

    ಒಂದು ಹುಡುಗಿಗಾಗಿ ಇಬ್ಬರು ಕಿತ್ತಾಟ – ಯುವಕನ ಕೊಲೆ, 6 ಮಂದಿ ಬಂಧನ

    ಹುಬ್ಬಳ್ಳಿ: ಹುಡುಗಿ ವಿಚಾರವಾಗಿ ಇಬ್ಬರು ಯುವಕರ ನಡುವಿನ ಗಲಾಟೆಯಲ್ಲಿ ಓರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಉಪನಗರ ಪೊಲೀಸರು ಆರು ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಲೋಕೇಶ್ ಕಡೇಮನಿ ಕೊಲೆಯಾಗಿದ್ದ ಯುವಕ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಇದೀಗ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ.

    ಹುಬ್ಬಳ್ಳಿ ವೀರಾಪುರ ಓಣಿಯ ಹುಡುಗಿಯೊಬ್ಬಳ ವಿಚಾರವಾಗಿ ಮೃತ ಲೋಕೇಶ್ ಕಡೇಮನಿ, ಸಾಗರ ದಾಬಡೆ ಹಾಗೂ ಸಹಚರರ ಮಧ್ಯೆ ಗಲಾಟೆ ನಡೆದಿತ್ತು. ಆದರೆ ಮಂಗಳವಾರ ಸಂಜೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದ ಬಳಿ ಸಾಗರ ದಾಬಡೆ ಹಾಗೂ ಸಹಚರರು ಬೈಕಿನಲ್ಲಿ ಆಗಮಿಸಿ ಲೋಕೇಶ್ ಕಡೇಮನಿಗೆ ಚಾಕು ಇರಿದು ಕೊಲೆ ಮಾಡಿದ್ದರು.

    ಚಾಕು ಇರಿದು ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಿದ್ದರು. ಕೂಡಲೇ ಕೊಲೆ ಆರೋಪಿಗಳಿಗೆ ಕಾರ್ಯಾಚರಣೆ ನಡೆಸಿದ ಉಪನಗರ ಪೊಲೀಸರು ಆರು ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಸ್ಯಾನಿಟೈಜರ್ ಮಾರಾಟ ಮಾಡುತ್ತಿದ್ದ ಲೋಕೇಶ್ ಕಡೇಮನಿ ಹಲವು ದಿನಗಳಿಂದ ವೀರಾಪುರ ಓಣಿಯ ಹುಡುಗಿಯನ್ನ ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಕೊಲೆ ಆರೋಪಿ ಹಾಗೂ ಲೋಕೇಶ್ ಮಧ್ಯೆ ಗಲಾಟೆ ನಡೆದಿತ್ತು. ಈ ವಿಚಾರವಾಗಿ ನಿನ್ನೆ ಇಬ್ಬರು ಯುವಕರ ಮಧ್ಯೆ ಗಲಾಟೆ ನಡೆದು, ತ್ರಿಕೋನ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ.

    ಈ ಘಟನೆಯ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ.

  • 4 ಮಂದಿಯನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಯುವತಿ ಅರೆಸ್ಟ್

    4 ಮಂದಿಯನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಯುವತಿ ಅರೆಸ್ಟ್

    – ಮೊದಲು ತನ್ನ ಚಿಕ್ಕಪ್ಪನನ್ನೇ ಮದುವೆಯಾಗಿದ್ದ ಯುವತಿ
    – ತಾನೇ ದೂರು ಕೊಟ್ಟು, ಪೊಲೀಸ್ ಠಾಣೆ ಸೇರಿದ ಸ್ವಪ್ನ

    ಹೈದರಾಬಾದ್: ನಾಲ್ಕು ಜನ ಪುರುಷರನ್ನು ವಿವಾಹವಾಗಿ ಲಕ್ಷಾಂತರ ರೂ. ಹಣ ದೋಚಿದ್ದ ಕಿಲಾಡಿ ಯುವತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಯುವತಿಯನ್ನು ಸ್ವಪ್ನ ಎಂದು ಗುರುತಿಸಲಾಗಿದೆ. ಈಕೆ ಮೊದಲಿಗೆ ಆಕೆಯ ಚಿಕ್ಕಪ್ಪನನ್ನೇ ಮದುವೆಯಾಗಿದ್ದಾಳೆ. ನಂತರ ಆತ ದೈಹಿಕವಾಗಿ ಬಲವಾಗಿಲ್ಲ ಮತ್ತು ಆತನ ಬಳಿ ಹಣವಿಲ್ಲ ಎಂದು ಹೇಳಿ ಮದುವೆಯಾದ ಕೆಲವೇ ದಿನಗಳಲ್ಲಿ ಆತನನ್ನು ಬಿಟ್ಟು ಬಂದಿದ್ದಾಳೆ.

    ನಂತರ ನನಗೆ ಮದುವೆಯೇ ಆಗಿಲ್ಲ ಎಂದು ಹೇಳಿಕೊಂಡು ಮೊದಲ ಮದುವೆಯನ್ನು ಮುಚ್ಚಿಟ್ಟು ಪೃಥ್ವಿರಾಜ್ ಎಂಬವವರ ಜೊತೆ ಎರಡನೇ ಮದುವೆಯಾಗಿದ್ದಾಳೆ. ಆದರೆ ಈ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ ಸ್ವಪ್ನ, ಈತ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಪೃಥ್ವಿರಾಜ್‍ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಜೊತೆಗೆ ಕೇಸ್ ಅನ್ನು ವಾಪಸ್ ಪಡೆಯಲು 25 ಲಕ್ಷ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಟ್ಟ ನಂತರ ಕೇಸ್ ವಾಪಸ್ ತೆಗೆದುಕೊಂಡಿದ್ದಾಳೆ.

    ಪೃಥ್ವಿರಾಜ್‍ನ ನಂತರ ಸ್ವಪ್ನ ಆತ್ಮಕೂರ್ ನಿವಾಸಿ ಸುಧಾಕರ್ ನನ್ನು ಬಲೆಗೆ ಬೀಳಿಸಿಕೊಂಡಿದ್ದಾಳೆ. ಸುಧಾಕರ್ ಜರ್ಮನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಆತನನ್ನು ಮದುವೆ ವೆಬ್‍ಸೈಟ್ ಮೂಲಕ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಆತನ ಜೊತೆ ಚಾಟ್ ಮಾಡಿ ಮಸೇಜ್‍ಗಳನ್ನು ಇಟ್ಟುಕೊಂಡು ಪೊಲೀಸ್‍ಗೆ ದೂರ ಕೊಡುತ್ತೇನೆ ಎಂದು ಬೆದಕರಿಗೆ ಹಾಕಿದ್ದಾಳೆ. ಜೊತೆಗೆ ಆತನ ಬಳಿಯೂ 5 ಲಕ್ಷ ಹಣವನ್ನು ಕಿತ್ತುಕೊಂಡಿದ್ದಾಳೆ.

    ಸುಧಾಕರ್ ನಂತರ ಡೆನ್ಮಾರ್ಕ್‍ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ರಾಮಂಜನೇಯುಲು ಅವರನ್ನು ಪರಿಚಯ ಮಾಡಿಕೊಂಡಿದ್ದಾಳೆ. ಈತನಿಗೂ ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಆದರೆ ಈ ನಡುವೆ ಈಕೆ ನಡುವಳಿಕೆ ನೋಡಿ ಅನುಮಾನ ಪಟ್ಟ ರಾಮಂಜನೇಯುಲು ಆಕೆಗೆ ಗೊತ್ತಾಗದ ರೀತಿಯಲ್ಲಿ ಆಕೆಯನ್ನು ಬಿಟ್ಟು ಡೆನ್ಮಾರ್ಕ್‍ಗೆ ಎಸ್ಕೇಪ್ ಆಗಿದ್ದಾನೆ. ಇದರಿಂದ ಕೋಪಗೊಂಡ ಸ್ವಪ್ನ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗ ತನಿಖೆ ವೇಳೆ ಆಕೆಯ ಬಣ್ಣ ಬಯಲಾಗಿದೆ.

    ತನಿಖೆ ವೇಳೆ ಪೊಲೀಸರಿಗೆ ಸ್ವಪ್ನಗೆ ನಾಲ್ಕು ಜನ ಗಂಡಂದಿರಿರುವುದು ಮತ್ತು ಆಕೆ ಅವರಗೆ ಬ್ಲಾಕ್‍ಮೇಲ್ ಮಾಡಿ ಹಣ ಕಿತ್ತುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸ್ವಪ್ನ ಹೆಸರು ಮತ್ತು ಫೋಟೋಗಳನ್ನು ಚೇಂಚ್ ಮಾಡಿಕೊಂಡು ನಂಬಿಸಿ ಯುವಕರಿಗೆ ಮೋಸ ಮಾಡಿದ್ದಾಳೆ. ಮದುವೆಯಾಗಿ ನಂತರ ಪೊಲೀಸ್ ಠಾಣೆಗೆ ಕಿರುಕುಳದ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿ ಹಣ ಮಾಡಿದ್ದಾಳೆ ಎಂದು ಹೇಳಿದ್ದಾರೆ.

  • ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾರಾಟ ಮಾಡ್ತಿದ್ದವ ಅರೆಸ್ಟ್

    ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾರಾಟ ಮಾಡ್ತಿದ್ದವ ಅರೆಸ್ಟ್

    ಬೆಂಗಳೂರು: ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದವನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ಉಡುಪಿ ಮೂಲದ ಯುವಕ ಸೌರವ್ ಶೆಟ್ಟಿ (21) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಮಾಹಿತಿ ಆಧರಿಸಿ ಸೈಬರ್ ಕ್ರೈಮ್ ನಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸೌರವ್ ಶೆಟ್ಟಿ ಇನ್‍ಸ್ಟಾಗ್ರಾಮ್ ಮೂಲಕ ಅಶ್ಲೀಲ ವಿಡಿಯೋ ಲಿಂಕ್ ರವಾನಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆರೋಪಿ ಆನ್‍ಲೈನ್ ಸ್ಟೋರೆಜ್‍ನಲ್ಲಿಯೂ ಅಶ್ಲೀಲ ವಿಡಿಯೋಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಈಗ ಆರೋಪಿಯೂ ಈ ಕೃತ್ಯಕ್ಕೆ ಬಳಸುತ್ತಿದ್ದ ಡಿಜಿಟಲ್ ಉಪಕರಣಗಳು ಮತ್ತು ಕ್ಲೌಡ್ ಖಾತೆಯನ್ನು ಸೈಬರ್ ಕ್ರೈಂ ಪೊಲೀಸರು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.

    ಈ ಆನ್‍ಲೈನ್ ಅಶ್ಲೀಲ ವಿಡಿಯೋ ಮಾರಾಟ ದಂಧೆಯಲ್ಲಿ ಅನ್ಯ ರಾಜ್ಯಗಳ ವ್ಯಕ್ತಿಗಳು ಭಾಗಿಯಾಗಿರುವುದು ತನಿಖೆ ವೇಳೆ ಬೆಳಿಕಗೆ ಬಂದಿದ್ದು, ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

  • ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

    ಖ್ಯಾತ ನಟ ಶ್ಯಾಮ್ ನುಂಗಂಬಕ್ಕಂ ಪ್ರದೇಶದ ಸಮೀಪವಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದರು. ಅಲ್ಲದೇ ಈ ಜೂಜಾಟದಲ್ಲಿ ತಮಿಳು ನಟರೊಬ್ಬರು ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಟನ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಆಗ ಪೊಲೀಸರು ನಟ ಶ್ಯಾಮ್ ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಲಾಕ್‍ಡೌನ್ ನಡುವೆಯೂ ತಡರಾತ್ರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಫ್ಲ್ಯಾಟ್‍ನಿಂದ ಜೂಜಾಟಕ್ಕೆ ಬಳಸಿದ ಟೋಕನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ನಟ ಶ್ಯಾಮ್ ಮತ್ತು ಇತರ 11 ಮಂದಿಯನ್ನು ಬಂಧಿಸಲಾಗಿದೆ. ಟೋಕನ್‍ಗಳ ಬಳಕೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈ ಜೂಜಾಟದಲ್ಲಿ ಹಣದ ರೂಪದಲ್ಲಿ ಟೋಕನ್ ಗಳನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆನ್‍ಲೈನ್ ಜೂಜಾಟದಲ್ಲಿ ಸುಮಾರು 20 ಸಾವಿರ ಹಣವನ್ನು ಕಳೆದುಕೊಂಡಿದ್ದನು. ಇದೇ ಖಿನ್ನತೆಯಲ್ಲಿ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದನು. ಈ ಘಟನೆ ಬಳಿಕ ತಮಿಳುನಾಡಿನಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ಯುವಕರು ಆನ್‍ಲೈನ್ ಮೂಲಕ ಜೂಜಾಟ ಆಟವಾಡುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಹೀಗಾಗಿ ಅನೇಕ ಆನ್‍ಲೈನ್ ಗೇಮ್‍ಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಪುಗಳೇಂದಿ ಹೇಳಿದ್ದಾರೆ. ಅಲ್ಲದೇ ಕೆಲವು ಆನ್‍ಲೈನ್ ಗೇಮ್‍ಗಳ ಪಟ್ಟಿಯನ್ನು ಕೂಡ ಮಾಡಿದ್ದಾರೆ.