Tag: arrest

  • ಕಿಂಡಿ ಕೊರೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ಗ್ಯಾಂಗ್ ಬಂಧನ

    ಕಿಂಡಿ ಕೊರೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ಗ್ಯಾಂಗ್ ಬಂಧನ

    ಬೆಂಗಳೂರು: ಕಿಂಡಿ ಕೊರೆದು ಚಿನ್ನದಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ಆಭರಣ ದೋಚಿದ್ದ ನೇಪಾಳಿ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಸಿಸಿಬಿ ಪೊಲೀಸರು ನೇಪಾಳಿ ಗ್ಯಾಂಗಿನ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮರ್ ಸಿಂಗ್, ಗಣೇಶ ಬಹದ್ದೂರ್ ಶಾಹಿ, ಕೃಷ್ಣಾ ರಾಜ್, ಚರಣ್ ಸಿಂಗ್, ಸಲೀಂ ಪಾಷ ಮತ್ತು ಶಾಹಿದ್ ಎಂದು ಗುರುತಿಸಲಾಗಿದೆ. ಆರೋಪಿಗಳು ಗ್ಯಾಸ್ ಕಟರ್ ಬಳಸಿ ಚಿನ್ನದಂಗಡಿಗೆ ಕಿಂಡಿ ಕೊರೆದಿದ್ದರು. ನಂತರ ಚಿನ್ನಾಭರಣ ದೋಚಲು ವಿಫಲ ಯತ್ನ ನಡೆಸಿ, ಬೆಳ್ಳಿ ದೋಚಿ ಅದೇ ಕಿಂಡಿಯಿಂದ ಎಸ್ಕೇಪ್ ಆಗಿದ್ದರು.

    ಆಗಸ್ಟ್ 5 ರಂದು ವೈಟ್ ಫೀಲ್ಡ್‌ನ ಮಾತಾಜಿ ಜ್ಯುವೆಲ್ಲರಿ ಶಾಪ್‍ಗೆ ಕನ್ನ ಹಾಕಿದ್ದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆರೋಪಿಗಳು ಬೆಳಗ್ಗೆ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದರು. ಆದರೆ ರಾತ್ರಿ ಎಲ್ಲಿ ಕಳ್ಳತನ ಮಾಡೋದು ಅಂತ ಸ್ಕೆಚ್ ಹಾಕುತ್ತಿದ್ದರು. ಬಂಧಿತ ಆರೋಪಿಗಳು ಸುಮಾರು ಮೂರುರಿಂದ ಆರು ತಿಂಗಳು ಒಂದೊಂದು ರಾಜ್ಯದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ನಂತರ ದೊಡ್ಡಮಟ್ಟದಲ್ಲಿ ಕನ್ನ ಹಾಕಿ ರಾಜ್ಯ ಬಿಟ್ಟು ಎಸ್ಕೇಪ್ ಆಗುತ್ತಿದ್ದರು.

    ಮಾತಾಜಿ ಜ್ಯುವೆಲ್ಲರಿ ಶಾಪ್‍ನಲ್ಲಿ ಖತರ್ನಾಕ್ ಗ್ಯಾಂಗ್ ಬರೋಬ್ಬರಿ 50 ಕೆ.ಜಿ.ಬೆಳ್ಳಿ ದೋಚಿದ್ದರು. ಈ ತಂಡದ ಬಂಧನದಿಂದ ಬೆಂಗಳೂರಿನ ಹಲವು ಕೇಸ್‍ಗಳು ಪತ್ತೆಯಾಗಿವೆ. ಬಂಧಿತರಿಂದ 360 ಗ್ರಾಂ ಚಿನ್ನ, 25 ಕೆ.ಜಿ ಬೆಳ್ಳಿ, ಲ್ಯಾಪ್ ಟಾಪ್, ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟ್ಟರ್ ಮತ್ತು ಆಟೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ವೈಟ್ ಫೀಲ್ಡ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಬಳಿಕ ಈ ಕೇಸನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ನೇಪಾಳಿ ಗ್ಯಾಂಗನ್ನು ಬಂಧಿಸಿದ್ದಾರೆ.

  • ಎರಡನೇ ಪತ್ನಿಗೆ ಮಕ್ಕಳಾಗದ್ದಕ್ಕೆ ಮೊದಲ ಪತ್ನಿಯ ಮಗಳನ್ನೇ ಹತ್ಯೆಗೈದ

    ಎರಡನೇ ಪತ್ನಿಗೆ ಮಕ್ಕಳಾಗದ್ದಕ್ಕೆ ಮೊದಲ ಪತ್ನಿಯ ಮಗಳನ್ನೇ ಹತ್ಯೆಗೈದ

    – ದೇವರ ಕೋಣೆಯಲ್ಲಿತ್ತು ಮಗುವಿನ ಶವ

    ಚಾಮರಾಜನಗರ: ಮದುವೆಯಾದ ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ ಎಂದು ಹೊಟ್ಟೆಕಿಚ್ಚಿಗೆ ಮೊದಲ ಹೆಂಡತಿಯ ಐದು ವರ್ಷದ ಮಗಳನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಹೌದು ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹೇಶ್, ಗೌರಮ್ಮ ದಂಪತಿಗೆ ಕೆಲವು ವರ್ಷಗಳ ಹಿಂದೆ ವಿಚ್ಛೇದನವಾಗಿತ್ತು. ನಂತರ ಮಹೇಶ್ ರತ್ನಮ್ಮನನ್ನು, ಗೌರಮ್ಮ ಮಹದೇವಸ್ವಾಮಿಯನ್ನು ವಿವಾಹವಾಗಿದ್ದರು. ಆದರೆ ಮಹೇಶ್, ರತ್ನಮ್ಮಗೆ ಮಕ್ಕಳಾಗಿರಲಿಲ್ಲ.

    ಮಹದೇವಸ್ವಾಮಿ, ಗೌರಮ್ಮ ದಂಪತಿಗೆ 5 ವರ್ಷದ ಹೆಣ್ಣು ಮಗುವಿದ್ದು, ಮಕ್ಕಳಾಗಲಿಲ್ಲ ಅನ್ನೋ ಹೊಟ್ಟೆ ಕಿಚ್ಚಿಗೆ ಮಹೇಶ್, ರತ್ನಮ್ಮ ದಂಪತಿ ಮಗುವನ್ನು ಅಪಹರಿಸಿ ಕೊಲೆ ಮಾಡಿ ಮಗುವಿನ ದೇಹವನ್ನು ಚೀಲದಲ್ಲಿ ಕಟ್ಟಿ ದೇವರ ಕೋಣೆಯಲ್ಲಿಟ್ಟಿದ್ದಾರೆ. ಮಗು ಕಾಣೆಯಾಗಿರುವ ಬಗ್ಗೆ ಮಹದೇವಸ್ವಾಮಿ, ಗೌರಮ್ಮ ದಂಪತಿ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

    ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗ ಮಹೇಶ್, ರತ್ನಮ್ಮ ದಂಪತಿ ಮೇಲೆ ಅನುಮಾನ ವ್ಯಕ್ತವಾಗಿದೆ. ಪೊಲೀಸರು ದಂಪತಿ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ದೇವರ ಕೋಣೆಯಲ್ಲಿ ಮಗುವಿನ ಶವ ಇರುವ ಚೀಲದಲ್ಲಿ ಪತ್ತೆಯಾಗಿದೆ. ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಗಳ ಜೊತೆ ಪ್ರೀತಿ, ತಾಯಿಯೊಂದಿಗೆ ಸಂಬಂಧ – ರೂಮಿಗೆ ಕರ್ಕೊಂಡು ಹೋಗಿ ಯುವತಿಯ ಕೊಲೆ

    ಮಗಳ ಜೊತೆ ಪ್ರೀತಿ, ತಾಯಿಯೊಂದಿಗೆ ಸಂಬಂಧ – ರೂಮಿಗೆ ಕರ್ಕೊಂಡು ಹೋಗಿ ಯುವತಿಯ ಕೊಲೆ

    – ಮದುವೆ ಮಾಡಿಕೋ ಎಂದಿದ್ದೆ ತಪ್ಪಾಯ್ತು
    – 3 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು

    ಲಕ್ನೋ: 19 ವರ್ಷದ ಯುವತಿಯನ್ನು ತಾಯಿ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಉಸ್ಮಾ ಮೃತ ಯುವತಿ. ಆರೋಪಿ ತಾಯಿ ಮುಕೇಶಾ ಮತ್ತು ಪ್ರಿಯಕರ ಕೌಶರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ತಾಯಿ ಎಲ್ಲರನ್ನು ದಾರಿ ತಪ್ಪಿಸಲು ಒಂದು ಸುಳ್ಳಿನ ಕಥೆಯನ್ನು ಹೇಳಿದ್ದಳು. ಆದರೆ ಪೊಲೀಸರು ಕೇವಲ ಮೂರು ಗಂಟೆಗಳಲ್ಲಿ ಪ್ರಕರಣವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಎನಿದು ಪ್ರಕರಣ?
    ಸುಭಾಷ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಸ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂವರು ಹಲ್ಲೆಕೋರರು ಮನೆಗೆ ನುಗ್ಗಿ ಉಸ್ಮಾ ಮತ್ತು ತಾಯಿ ಮುಕೇಶಾಳ ಮೇಲೆ ಮುಂಜಾನೆ ಹಲ್ಲೆ ಮಾಡಿದ್ದಾರೆ. ದಾಳಿಯಲ್ಲಿ ಉಸ್ಮಾ ಸಾವನ್ನಪ್ಪಿದ್ದರೆ, ಮುಕೇಶಾ ಗಾಯಗೊಂಡಿದ್ದಳು. ಘಟನೆಯ ಸಮಯದಲ್ಲಿ ಉಳಿದವರೆಲ್ಲರೂ ಮಲಗಿದ್ದರು. ಮುಕೇಶಾ ಕೂಗಿಕೊಂಡಾಗ ಎಲ್ಲರಿಗೆ ಎಚ್ಚರಿಯಾಗಿದ್ದು, ಅಷ್ಟರಲ್ಲಿ ಹಲ್ಲೆಕೋರರು ಮನೆ ಬಿಟ್ಟು ಹೋಗಿದ್ದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

    ತನಿಖೆಯ ಸಮಯದಲ್ಲಿ ಮೃತ ಉಷ್ಮಾ ಸ್ಥಳಿಯ ನಿವಾಸಿ ಕೌಶರ್ ನನ್ನು ಪ್ರೀತಿಸುತ್ತಿದ್ದಳು ಎಂದು ಪೊಲೀಸರಿಗೆ ತಿಳಿದಿದೆ. ಆದರೆ ಆರೋಪಿ ಕೌಶರ್ ಮಗಳನ್ನು ಪ್ರೀತಿಸುತ್ತಿದ್ದರೂ ಆಕೆಯ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಇತ್ತೀಚೆಗೆ ಹುಡುಗಿ ಮದುವೆ ಮಾಡಿಕೊಳ್ಳುವಂತೆ ಕೌಶರ್ ಗೆ ಒತ್ತಡ ಹಾಕುತ್ತಿದ್ದಳು. ಇದರಿಂದ ಕೋಪಗೊಂಡ ಕೌಶರ್ ಮುಂಜಾನೆ ಉಸ್ಮಾ ಮನೆಗೆ ಬಂದು ಇತರರು ಮಲಗಿದ್ದಾಗ ತಾಯಿ ಮತ್ತು ಮಗಳು ಇಬ್ಬರನ್ನು ರೋಮಿಗೆ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಶೈಲೇಶ್ ಪಾಂಡೆ ಹೇಳಿದ್ದಾರೆ.

    ಉಸ್ಮಾಳನ್ನು ಮತ್ತೊಂದು ಕೋಣೆಗೆ ಕರೆದುಕೊಂಡು ಹೋದ ನಂತರ ಕೌಶರ್ ಮತ್ತು ಮುಕೇಶಾ ದುಪಟ್ಟಾದಿಂದ ಉಸ್ಮಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆರೋಪಿ ಮುಕೇಶಾ ಚಾಕುವಿನಿಂದ ಗಾಯಗೊಳಿಸುವಂತೆ ಕೌಶರ್ ನನ್ನು ಕೇಳಿಕೊಂಡಿದ್ದಾಳೆ. ಇದರಿಂದ ಎಲ್ಲರಿಗೂ ಸುಳ್ಳು ಕಥೆಯನ್ನು ಹೇಳಿ ದಾರಿ ತಪ್ಪಿಸಬಹುದು ಎಂದು ಆರೋಪಿ ಮುಕೇಶಾ ತಿಳಿದುಕೊಂಡಿದ್ದಳು. ಅದರಂತೆಯೇ ಕೌಶರ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಕೂಗಿ ಕೊಂಡಿದ್ದಾಳೆ. ಆಗ ಮನೆಯವರು ಬಂದು ನೋಡುವಷ್ಟರಲ್ಲಿ ಉಸ್ಮಾ ಮೃತಪಟ್ಟಿದ್ದಳು ಎಂದು ಪಾಂಡೆ ತಿಳಿಸಿದರು.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು. ನಂತರ ತಾಯಿಯ ನಡವಳಿಕೆಯಿಂದ ಅನುಮಾನಗೊಂಡು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಪ್ರಕರಣದ ಸತ್ಯ ಬಯಲಾಗಿದೆ. ಕೌಶರ್ ಕುಟುಂಬದವರಿಗೆ ಮಹಿಳೆ ಮತ್ತು ಆಕೆಯ ಮಗಳ ಜೊತೆ ಹೊಂದಿದ್ದ ಸಂಬಂಧದ ಬಗ್ಗೆ ತಿಳಿದಿತ್ತು. ಇದರಿಂದ ಆಗಾಗ ಅವರ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಮೂರು ಗಂಟೆಗಳಲ್ಲಿ ಪ್ರಕರಣ ಬಗೆಹರಿಸಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅಪರಾಧದಲ್ಲಿ ಬಳಸಿದ ದುಪಟ್ಟಾ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಂಡೆ ಹೇಳಿದರು.

  • ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    – ತನಿಖೆ ವೇಳೆ ಮಹಿಳೆಯ ರಹಸ್ಯ ಬಯಲು

    ಲಕ್ನೋ: 23 ವರ್ಷದ ಯುವಕನೊಬ್ಬ ಮತ್ತು ಬರುವ ಔಷಧಿ ನೀಡಿ ಮನೆ ಮಾಲೀಕನ ಪತ್ನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಜಹಾಂಗೀರ್‌ಪುರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದನು. ಮತ್ತು ಬರುವ ಔಷಧಿ ನೀಡಿ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

    ಈ ಘಟನೆ ನಡೆದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಪತಿ ಕೆಲಸದ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದರು. ಆದರೆ ಏಪ್ರಿಲ್‍ನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದರಿಂದ ಮಹಿಳೆಯ ಪತಿ ಅಲ್ಲಿಯೇ ಇದ್ದರು. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಹಿಳೆ ಈಗ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ.

    “ಆರೋಪಿ ವಿಶಾಲ್ ಬಾಡಿಗೆ ನೀಡುವ ನೆಪದಲ್ಲಿ ನಮ್ಮ ಮನೆಗೆ ಬಂದಿದ್ದ. ನಂತರ ಇಬ್ಬರು ಚಹಾವನ್ನು ಕುಡಿದೆವು. ಚಹಾ ಕುಡಿದ ನಂತರ ನನಗೆ ತಲೆ ಸುತ್ತು ಬಂತು. ಈ ವೇಳೆ ವಿಶಾಲ್ ನನ್ನ ಬಟ್ಟೆಗಳನ್ನು ಬಿಚ್ಚಿದ್ದನು. ನಂತರ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ನಾನು ವಿರೋಧಿಸಿದಾಗ ಆರೋಪಿ ನನ್ನನ್ನು ಥಳಿಸಿ ನನ್ನ ಮತ್ತು ನನ್ನ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಚಹಾದಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದನು” ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮಹಿಳೆ ಜೇವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಮಹಿಳೆಯ ಅನೈತಿಕ ಸಂಬಂಧ ಬಯಲಾಗಿದೆ.

    ಮಹಿಳೆ ಆರೋಪಿ ವಿಶಾಲ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ಸಂಬಂಧದ ಬಗ್ಗೆ ತಿಳಿದು ಪತಿ ಕೆಲವು ದಿನಗಳ ಹಿಂದೆ ಅವಳಿಂದ ದೂರವಾಗಿ ವಾಸಿಸುತ್ತಿದ್ದನು. ಆರೋಪಿಯನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಫಿರೋಜ್ ಖಾನ್ ಹೇಳಿದ್ದಾರೆ.

  • ಸುಪಾರಿಕೊಟ್ಟು ತಾಯಿಯ ಕೊಲೆ – ಮಗನ ಕೃತ್ಯಕ್ಕೆ ತಂದೆ ಸಾಥ್

    ಸುಪಾರಿಕೊಟ್ಟು ತಾಯಿಯ ಕೊಲೆ – ಮಗನ ಕೃತ್ಯಕ್ಕೆ ತಂದೆ ಸಾಥ್

    – ಅಪ್ಪ, ಮಗ ಸೇರಿ ಐವರು ಅರೆಸ್ಟ್

    ಬೆಂಗಳೂರು: ಸುಪಾರಿಕೊಟ್ಟು ತಾಯಿಯನ್ನು ಕೊಲೆ ಮಾಡಿಸಿದ್ದ ಮಗ ಮತ್ತು ಪುತ್ರನ ಕೃತ್ಯಕ್ಕೆ ಸಹಾಯ ಮಾಡಿದ್ದ ತಂದೆಯನ್ನು ಸೇರಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಗೀತಾ ಕೊಲೆಯಾದ ಮಹಿಳೆ. ವರುಣ್, ನವೀನ್ ಕುಮಾರ್, ನಾಗರಾಜು, ಪ್ರದೀಪ್ ಮತ್ತು ಅಂಜನಿ ಬಂಧಿತ ಆರೋಪಿಗಳು. ಆಸ್ತಿಗಾಗಿ ಪತಿ ಅಂಜನಿ ಮತ್ತು ಮಗ ವರುಣ್ ಸೇರಿ ಗೀತಾಳನ್ನು ಕೊಲೆ ಮಾಡಲು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರು.

    ಇದೇ ತಿಂಗಳ 16 ರಂದು ಮುಂಜಾನೆ ಮನೆಗೆ ನುಗ್ಗಿ ಗೀತಾಳನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಈ ಘಟನೆ ಸಂಬಂಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿ ವರುಣ್ ತಾಯಿ ಗೀತಾಳಿಗೆ ಗೊತ್ತಿಲ್ಲದೇ ಆಸ್ತಿ ಮಾರಾಟ ಮಾಡಿಕೊಂಡಿದ್ದನು. ಅಲ್ಲದೇ ಮಾರಾಟ ಮಾಡಿದ ಆಸ್ತಿಯಲ್ಲಿ ಬಂದಂತಹ ಹಣವನ್ನು ಕೂಡ ತಾಯಿಗೆ ಕೊಡದೆ ವರುಣ್ ಬಳಸಿಕೊಂಡಿದ್ದ. ಹೀಗಾಗಿ ತಾಯಿ ಗೀತಾ ಮಗ ವರುಣ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

    ತಾಯಿ ನಡೆಯಿಂದ ಕೋಪಗೊಂಡಿದ್ದ ಮಗ ವರುಣ್ ತಂದೆ ಅಂಜನಿಯ ಸಹಾಯ ಪಡೆದುಕೊಂಡು ಹೆತ್ತ ತಾಯಿ ಹತ್ಯೆಗೆ ನವೀನ್ ಕುಮಾರ್, ನಾಗರಾಜು, ಪ್ರದೀಪ್ ಮೂವರಿಗೆ ಸುಪಾರಿ ಕೊಟ್ಟಿದ್ದನು. ಅದರಂತೆಯೇ ಮೂವರು ಇದೇ ತಿಂಗಳು 16 ರಂದು ಮುಂಜಾನೆ ಮನೆಗೆ ನುಗ್ಗಿ ಗೀತಾಳನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

  • 20 ವರ್ಷ ವಯಸ್ಸಿನ ಅಂತರ, ಮದುವೆಯಿಂದ ಅತೃಪ್ತಿ – ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ

    20 ವರ್ಷ ವಯಸ್ಸಿನ ಅಂತರ, ಮದುವೆಯಿಂದ ಅತೃಪ್ತಿ – ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ

    – ಸೋದರಿ ಮೂಲಕ ಪ್ರಿಯಕರನ ಪರಿಚಯ

    ನವದೆಹಲಿ: ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಆತನ ಸಹೋದರನ ಸಹಾಯದಿಂದ ಪತಿಯನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಪ್ರಿಯಾಂಕಾ (30) ಬಂಧಿತ ಪತ್ನಿ. ಪ್ರಿಯಕರ ವೀರು ಬರ್ಮಾ ತಪ್ಪಿಸಿಕೊಂಡಿದ್ದು, ಆತನ ಸಹೋದರ ಕರಣ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಹುದಿನಗಳ ಅನಾರೋಗ್ಯದಿಂದಾಗಿ ಪತಿ ಸಾವನ್ನಪ್ಪಿದ್ದಾನೆ ಎಂದು ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಆರೋಪಿ ಪ್ರಯತ್ನಿಸಿದ್ದಳು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ.

    ಕೂಡಲೇ ಆರೋಪಿ ಪ್ರಿಯಾಂಕಾಳನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದೆವು. ಆಗ ಆರೋಪಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮಹಿಳೆ ಮತ್ತು ಮೃತ ಪತಿ ನಡುವೆ 20 ವರ್ಷ ವಯಸ್ಸಿನ ಅಂತರವಿತ್ತು. ಈ ದಂಪತಿಗೆ ಮಗು ಕೂಡ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ವಯಸ್ಸಿನ ಅಂತರದಿಂದ ನನ್ನ ಮದುವೆಯಿಂದ ತಾನು ಸಂತೋಷವಾಗಿರಲಿಲ್ಲ. ಆದ್ದರಿಂದ ವೀರು ಬರ್ಮಾ ಮತ್ತು ಕರಣ್ ಇಬ್ಬರ ಸಹಾಯ ಪಡೆದು ಪತಿಯನ್ನು ಕೊಲೆ ಮಾಡುವ ಪ್ಯಾನ್ ರೂಪಿಸಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಿಯಾಂಕಾ ಆರೋಪಿ ಬರ್ಮಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೇ ಆತನನ್ನೇ ಮದುವೆಯಾಗಲು ಬಯಸಿದ್ದಳು.

    ಮುರಾದ್‍ನಗರದಲ್ಲಿ ತನ್ನ ಸಹೋದರಿ ಮೂಲಕ ವೀರು ಬರ್ಮಾನ ಪರಿಚಯವಾಗಿತ್ತು. ಅಂದಿನಿಂದ ಆರೋಪಿ ಆಗಾಗ ಬರ್ಮಾ ಮನೆಗೆ ಹೋಗುತ್ತಿದ್ದಳು. ಈ ವೇಳೆ ಪ್ರಿಯಕರನ ಸಹೋದರ ಕರಣ್‍ನನ್ನು ಭೇಟಿಯಾಗಿದ್ದಳು. ಒಂದು ದಿನ ತನ್ನೊಂದಿಗೆ ಕರಣ್‍ನನ್ನು ತನ್ನ ಮನೆಗೆ ಸಂಬಂಧಿ ಎಂದು ಕರೆದುಕೊಂಡು ಬಂದಿದ್ದಳು. ಅಂದಿನಿಂದ ಕರಣ್ ಮಹಿಳೆ ಮತ್ತು ಆಕೆಯ ಪತಿಯೊಂದಿಗೆ ಅವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಕರಣ್ ಸಹಾಯದಿಂದ ಪತಿಯ ಊಟದಲ್ಲಿ ವಿಷವನ್ನು ಬೆರೆಸಿ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಅದರಂತೆಯೇ ಆಗಸ್ಟ್ 18 ರಂದು ವಿಷ ಆಹಾರ ತಿಂದು ಪ್ರಿಯಾಂಕಾ ಪತಿ ಪ್ರಜ್ಞೆಯನ್ನು ಕಳೆದುಕೊಂಡಿದ್ದಾನೆ. ಆಗ ಪ್ರಿಯಾಂಕಾ ಮತ್ತು ಕರಣ್ ಬಟ್ಟೆಯಿಂದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.

    ವಿಚಾರಣೆಯ ನಂತರ ಪ್ರಿಯಾಂಕಾ ಮತ್ತು ಕರಣ್‍ನನ್ನು ಬಂಧಿಸಲಾಗಿದೆ. ಆದರೆ ವೀರು ಬರ್ಮಾ ಪರಾರಿಯಾಗಿದ್ದಾನೆ. ಪತಿಯ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಮಹಿಳೆ ಬಯಸಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಮಹಿಳೆಯ ಪತಿ ದೆಹಲಿಯ ಮಾಯಾಪುರಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಕಿಡ್ನಾಪ್ ಆಗಿದ್ದ ಮಗುವನ್ನು ರಕ್ಷಿಸಿದ ಪೊಲೀಸ್ರು – ಚೆನ್ನಣ್ಣನವರ್ ಕಾಲಿಗೆ ಬಿದ್ದ ತಂದೆ

    ಕಿಡ್ನಾಪ್ ಆಗಿದ್ದ ಮಗುವನ್ನು ರಕ್ಷಿಸಿದ ಪೊಲೀಸ್ರು – ಚೆನ್ನಣ್ಣನವರ್ ಕಾಲಿಗೆ ಬಿದ್ದ ತಂದೆ

    ನೆಲಮಂಗಲ: 18 ತಿಂಗಳ ಮಗುವನ್ನು ಹಣಕ್ಕಾಗಿ ಅಪಹರಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಎರಡು ದಿನದ ಹಿಂದೆ ಮನೆ ಮುಂದೆ ಇದ್ದ ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿದ್ದರು. ಇಂದು ಪ್ರಕರಣ ಭೇದಿಸಿದ ಪೊಲೀಸರು ಪೋಷಕರಿಗೆ ಮಗುವನ್ನು ಹಸ್ತಾಂತರಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಕಡಬಗೆರೆ ಬಳಿ ಮಗು ಅಪಹರಣವಾಗಿತ್ತು. ಮಾಚೋಹಳ್ಳಿಯ ರವಿ ದಂಪತಿಯ 18 ತಿಂಗಳ ಹೆಣ್ಣು ಮಗುವನ್ನು ಅಪಹರಣ ಮಾಡಿದ್ದರು.

    ಅಪಹರಣವಾದ ಮಗುವನ್ನು 48 ಗಂಟೆಯೊಳಗೆ ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂಧ್ರಹಳ್ಳಿಯ ತಿಪ್ಪೇಶ ಹಾಗೂ ರಾಜೇಶ್ ಬಂಧಿಸಿ, ಮಗುವನ್ನು ಮಾದನಾಯಕನಹಳ್ಳಿ ಪೊಲೀಸರು ರಕ್ಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್.ಪಿ.ರವಿ ಡಿ ಚೆನ್ನಣ್ಣನವರ್ ಸಮ್ಮುಖದಲ್ಲಿ ಮಗು ಹೆತ್ತವರ ಕೈಸೇರಿಸಿದ್ದಾರೆ. ಎಸ್.ಪಿ ಕಾಲಿಗೆ ಬಿದ್ದು ಮಗುವಿನ ತಂದೆ ಧನ್ಯವಾದ ತಿಳಿಸಿದ್ದಾರೆ.

    ಇಡೀ ಕಾರ್ಯಾಚರಣೆಯನ್ನು ಮಾದನಾಯಕನಹಳ್ಳಿ ಇನ್ಸ್‍ಪೆಕ್ಟರ್ ಸತ್ಯನಾರಾಯಣ್ ನೇತೃತ್ವದಲ್ಲಿ ನಡೆಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿರುವುದಕ್ಕೆ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ನೆಲಮಂಗಲ ಉಪವಿಭಾಗ ಡಿವೈಎಸ್‍ಪಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.

  • ಮೊದಲು ಕೋಳಿ ಫಾರ್ಮ್, ನಂತ್ರ ಹೋಟೆಲಿನಲ್ಲಿ 2 ಬಾರಿ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    ಮೊದಲು ಕೋಳಿ ಫಾರ್ಮ್, ನಂತ್ರ ಹೋಟೆಲಿನಲ್ಲಿ 2 ಬಾರಿ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

    – ಡ್ರಾಪ್ ಕೊಡುವುದಾಗಿ ಸಾಮೂಹಿಕ ಅತ್ಯಾಚಾರ

    ಶಿಮ್ಲಾ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಎರಡು ಬಾರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

    ಹಿಮಾಚಲ ಪ್ರದೇಶದ ಕಂಗ್ರಾ ಎಂಬಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಂಗ್ರಾದ ಬನೋಯಿ ಪ್ರದೇಶದಲ್ಲಿರುವ ಬಸ್ ನಿಲ್ದಾಣದಲ್ಲಿ 32 ವರ್ಷದ ಮಹಿಳೆ ಬಸ್ಸಿಗಾಗಿ ಕಾಯುತ್ತಿದ್ದರು. ಆಗ ಆರೋಪಿಗಳು ತಮ್ಮ ಗ್ರಾಮಕ್ಕೆ ಡ್ರಾಪ್ ಮಾಡುವುದಾಗಿ ವಾಹನ ಹತ್ತಿಸಿಕೊಂಡಿದ್ದಾರೆ. ನಂತರ ಆರೋಪಿಗಳು ಸಂತ್ರಸ್ತೆಯನ್ನು ಸಲೋಲ್ ಪ್ರದೇಶದಲ್ಲಿದ್ದ ಕೋಳಿ ಫಾರ್ಮ್‍ಗೆ ಕರೆದುಕೊಂಡು ಹೋಗಿದ್ದು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಅಲ್ಲಿಂದ ಮೆಕ್ಲಿಯೋಡ್ ‌ಗಂಜ್‍ನಲ್ಲಿರುವ ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದು, ಮತ್ತೆ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಗೆ ವಿವಾಹಿವಾಗಿದ್ದು, ಮೂರು ಮಕ್ಕಳ ತಾಯಿ. ಕಳೆದ ಐದು ವರ್ಷಗಳಿಂದ ಆಕೆ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಮೆಕ್ಲಿಯೋಡ್ ‌ಗಂಜ್‍ನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೋಟೆಲ್ ಮಾಲೀಕನನ್ನೂ ಪೊಲೀಸರು ಬಂಧಿಸಿದ್ದಾರೆ.

  • ನಡೆಯೋ ಸ್ಟೈಲ್, ಗಡ್ಡ ನೋಡಿ ಇಬ್ಬರು ಎಟಿಎಂ ಕಳ್ಳರ ಬಂಧನ

    ನಡೆಯೋ ಸ್ಟೈಲ್, ಗಡ್ಡ ನೋಡಿ ಇಬ್ಬರು ಎಟಿಎಂ ಕಳ್ಳರ ಬಂಧನ

    – ಹಣ ಹಾಕಿದ ಅರ್ಧ ಗಂಟೆಯಲ್ಲೇ 32 ಲಕ್ಷ ಎಗರಿಸಿದ್ರು

    ಬೆಂಗಳೂರು: ನಡೆಯೋ ಸ್ಟೈಲ್ ಮತ್ತು ಗಡ್ಡ ನೋಡಿ ಇಬ್ಬರು ಎಟಿಎಂ ಕಳ್ಳರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

    ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ ಕಸ್ಟೋಡಿಯನ್ ಸೇರಿದಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಹಾಗೂ ಅಶ್ವತ್ ಬಂಧಿತ ಆರೋಪಿಗಳು. ಗೌರಿಬಿದನೂರಿನ ಮೂಲದ ಕಿರಣ್ ಸಿಎಂಎಸ್ ಇನ್ ಫೋ ಸಿಸ್ಟಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯಿಂದ ಹಣ ಪಡೆದುಕೊಂಡು ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದನು.

    ಆರೋಪಿ ಕಿರಣ್ ಐಟಿಪಿಎಲ್ ರೋಡ್ ಹಾಗೂ ಹಲಸೂರು ಮಾರ್ಗದ ಎಟಿಎಂಗಳಲ್ಲಿ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದನು. ಇತ್ತೀಚೆಗೆ ಕಂಪನಿ ಕಿರಣ್ ಹೋಗುವ ಮಾರ್ಗಕ್ಕೆ ಬೇರೊಬ್ಬರನ್ನು ನಿಯೋಜನೆ ಮಾಡಿತ್ತು. ಇದೇ ತಿಂಗಳು ಕಸ್ಟೋಡಿಯನ್ ಆಗಿದ್ದ ಸೂರ್ಯ ಹಲಸೂರಿನ ಎರಡು ಬ್ಯಾಂಕ್‍ನ ಎಟಿಎಂಗಳಿಗೆ ಹಣ ತುಂಬಿಸಿದ್ದರು. ಹಣ ಹಾಕಿದ ಅರ್ಧ ಗಂಟೆಯಲ್ಲೇ ಆರೋಪಿ ಕಿರಣ್ ಎಟಿಎಂಗಳಿಗೆ ಹೋಗಿ 32,28,500 ಲಕ್ಷ ಹಣ ಎಗರಿಸಿದ್ದನು.

    ಕಿರಣ್ ಎಟಿಎಂಗಳ ಪಾಸ್ ವರ್ಡ್ ತಿಳಿದುಕೊಂಡಿದ್ದನು. ಹೀಗಾಗಿ ಹಣ ಕಳ್ಳತನ ಮಾಡಿದ್ದನು. ಕೃತ್ಯಕ್ಕೆ ಮತ್ತೊಬ್ಬ ಆರೋಪಿ ಅಶ್ವತ್‍ ಕೈ ಜೋಡಿಸಿದ್ದ. ಹಣ ಕಳವು ಸಂಬಂಧ ಕಂಪನಿಯು ಹಲಸೂರು ಠಾಣೆಗೆ ದೂರು ನೀಡಿತ್ತು. ಸಿಸಿಟಿವಿ ಸೆರೆಯಾದ ದೃಶ್ಯಾವಳಿ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣ ಕದ್ದು ಯಾರಿಗೂ ಅನುಮಾನ ಬಾರದಂತೆ ನಟಿಸಿದ್ದರು. ಅಲ್ಲದೇ ಪೊಲೀಸ್ ವಿಚಾರಣೆಯಲ್ಲಿ ಕೃತ್ಯದ ಬಗ್ಗೆ ಗೊತ್ತಿಲ್ಲ ಎಂದಿದ್ದರು.

    ಕೊನೆಗೆ ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಆರೋಪಿಯ ನಡೆಯುವ ಸ್ಟೈಲ್‍, ಗಡ್ಡ ಹಾಗೂ ಕಿರಣ್ ನಡೆಯುವ ಸ್ಟೈಲ್‍ಗೆ ಹೋಲಿಕೆ ಮಾಡಿದ್ದರು. ಅನುಮಾನದಿಂದ ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಬಂಧಿತರಿಂದ 24.10 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಹಲಸೂರು ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಯುವತಿಯ ಜೊತೆ ರಹಸ್ಯವಾಗಿ ಮದ್ವೆ – ಒಂದು ವರ್ಷ ಸಂಸಾರ ಮಾಡಿ ಕೈ ಕೊಟ್ಟ ಬೆಂಗ್ಳೂರು ಟೆಕ್ಕಿ ಅರೆಸ್ಟ್

    ಯುವತಿಯ ಜೊತೆ ರಹಸ್ಯವಾಗಿ ಮದ್ವೆ – ಒಂದು ವರ್ಷ ಸಂಸಾರ ಮಾಡಿ ಕೈ ಕೊಟ್ಟ ಬೆಂಗ್ಳೂರು ಟೆಕ್ಕಿ ಅರೆಸ್ಟ್

    – 10 ಲಕ್ಷ ಹಣ ಕೊಟ್ಟು ಮತ್ತೊಂದು ಮದುವೆಗೆ ಸಿದ್ಧ

    ಹೈದರಾಬಾದ್: ಮದುವೆಯಾದ ನಂತರ ಪತ್ನಿಗೆ ಮೋಸ ಮಾಡಿದ ಆರೋಪದ ಮೇಲೆ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಹೈದರಾಬಾದ್‍ನ ಸರೋರ್ ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

    ಎಸ್.ಪವನ್ (30) ಬಂಧಿತ ಟೆಕ್ಕಿ. ಹೈದರಾಬಾದ್‍ನ ನಾಗಾರ್ಜುನ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿ ಪವನ್ ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು.

    ಏನಿದು ಪ್ರಕರಣ?
    ಆರೋಪಿ ಪವನ್ 2017ರಲ್ಲಿ ಪ್ರೀತಿಸಿ ಯುವತಿಯನ್ನು ರಹಸ್ಯವಾಗಿ ಮದುವೆಯಾಗಿದ್ದನು. ಪತ್ನಿಯ ಜೊತೆ ಬೆಂಗಳೂರಿನಲ್ಲಿ ಒಂದು ವರ್ಷ ಸಂಸಾರ ನಡೆಸಿದ್ದನು. ಒಂದು ವರ್ಷದ ನಂತರ ಪವನ್, ನೀನು ಹೈದರಾಬಾದ್‍ಗೆ ಹಿಂದಿರುಗಿ ಪೋಷಕರ ಜೊತೆಗಿರು. ನಾನು ನಮ್ಮ ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಅವರ ಒಪ್ಪಿಗೆ ಪಡೆದು ನಿನ್ನನ್ನು ಕರೆಸಿಕೊಳ್ಳುತ್ತೇನೆ ಎಂದು ಪತ್ನಿಯ ಮನವೊಲಿಸಿದ್ದನು. ಇದನ್ನು ನಂಬಿದ ಪತ್ನಿ ಹೈದರಾಬಾದ್‍ಗೆ ವಾಪಸ್ ಹೋಗಿದ್ದಾರೆ.

    ಪತ್ನಿ ಹೈದರಾಬಾದ್‍ಗೆ ಹೋಗುತ್ತಿದ್ದಂತೆ ಪವನ್ ಸೋಶಿಯಲ್ ಮಿಡಿಯಾದಲ್ಲಿ ತನ್ನ ಎಲ್ಲಾ ಖಾತೆಯನ್ನು ಬ್ಲಾಕ್ ಮಾಡಿದ್ದನು. ಅಲ್ಲದೇ ಫೋನ್ ಸಹ ಸ್ವಿಚ್ ಆಫ್ ಮಾಡಿದ್ದನು. ಇತ್ತ ಪತ್ನಿ ಎಷ್ಟು ಬಾರಿ ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿತ್ತು. ಕೊನೆಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    “2017ರಲ್ಲಿ ನನ್ನನ್ನು ಮದುವೆಯಾದ ನಂತರ ಪವನ್ ಮತ್ತು ನಾನು ಹನಿಮೂನ್‍ಗಾಗಿ ಊಟಿಗೆ ಹೋಗಿದ್ದೆವು. ಕೆಲವು ದಿನಗಳ ನಂತರ ನನ್ನನ್ನು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೈದರಾಬಾದ್‍ಗೆ ಕಳುಹಿಸಿದನು. ಪವನ್ ನನ್ನ ಸಂಬಂಧಿಯಾಗಿದ್ದು, ಎರಡು ವರ್ಷಗಳಿಂದ ಆತನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಕಳೆದ ಎರಡು ವರ್ಷಗಳಿಂದ ನಾನು ಅವನಿಗೆ ಇಮೇಲ್‍ಗಳನ್ನು ಕಳುಹಿಸಿದ್ದೇನೆ. ಆದರೆ ಯಾವುದಕ್ಕೂ ಅವನು ಪ್ರತಿಕ್ರಿಯಿಸಲಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪವನ್ ಹೈದರಾಬಾದ್‍ಗೆ ಹಿಂದಿರುಗಿದ್ದಾಗ ಆತನ ಮನೆಗೆ ಹೋಗಿದ್ದೆ. ಆಗ ಅವನು ನನ್ನೊಂದಿಗೆ ಇರಲು ಇಷ್ಟಪಟ್ಟಿಲ್ಲ. ಅಲ್ಲದೇ ನನಗೆ 10 ಲಕ್ಷ ರೂಪಾಯಿ ನೀಡಿ ಅಲ್ಪಾವಧಿಯ ಸಂಬಂಧಗಳು ಇತ್ತೀಚೆಗೆ ಸಾಮಾನ್ಯವೆಂದು ಹೇಳಿದನು. ಅವನ ಕುಟುಂಬವು ಈಗ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಹೀಗಾಗಿ ಎಫ್‍ಐಆರ್ ದಾಖಲಿಸಿದ್ದೇನೆ” ಎಂದು ನೊಂದ ಮಹಿಳೆ ಹೇಳಿದ್ದಾರೆ.

    ಸದ್ಯಕ್ಕೆ ಸರೋರ್ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಪವನ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪವನ್‍ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.