Tag: arrest

  • ಇಟ್ಟಿಗೆಗಳ ಮಧ್ಯೆ ಸಾಗಿಸುತ್ತಿದ್ದ 15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    ಇಟ್ಟಿಗೆಗಳ ಮಧ್ಯೆ ಸಾಗಿಸುತ್ತಿದ್ದ 15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

    – ಮಧ್ಯಪ್ರದೇಶದ ಇಬ್ಬರು ಅರೆಸ್ಟ್

    ಚಿಕ್ಕೋಡಿ: ಲಾರಿಯಲ್ಲಿ ಇಟ್ಟಿಗೆಗಳ ಮಧ್ಯೆ ಅಕ್ರಮವಾಗಿ ಗೋವಾ ರಾಜ್ಯದಿಂದ ಗುಜರಾತ್ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಮೌಲ್ಯದ 600 ಅಕ್ರಮ ಮದ್ಯದ ಬಾಟಲಿಗಳನ್ನು ಚಿಕ್ಕೋಡಿ ಉಪ ವಿಭಾಗದ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಜೊತೆಗೆ ಇಬ್ಬರನ್ನು ಅರೆಸ್ಟ್ ಮಾಡಿದ್ದು, ಮಧ್ಯಪ್ರದೇಶ ರಾಜ್ಯದ ಇಂದೋರಿನ ಧನಪಾಲಸಿಂಗ್ ತೋಮರ್, ರಾಜು ಕಂಠಿ ಬಂಧಿತರು. ಆರೋಪಿಗಳು ಲಾರಿಯಲ್ಲಿ ಇಟ್ಟಿಗೆಗಳ ಮಧ್ಯೆ ಮದ್ಯದ ಬಾಟಲಿಗಳ ಬಾಕ್ಸ್ ಗಳನ್ನು ತುಂಬಿ ಸಾಗಿಸುತ್ತಿದ್ದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ರಾಧಾನಗರ ರಸ್ತೆ ಅಂಡರ್ ಪಾಸ್ ತಿರುವಿನ ಹತ್ತಿರ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೋಲಿಸರು ದಾಳಿ ನಡೆಸಿದ್ದಾರೆ.

    ಜಪ್ತಾದ ಗೋವಾ ರಾಜ್ಯದ 15 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನದ ಮೌಲ್ಯ 20 ಲಕ್ಷ ಹೀಗೆ ಒಟ್ಟು 35 ಲಕ್ಷ್ಯದ ಮೌಲ್ಯ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರು ವಿಜಯಕುಮಾರ ಹೀರೆಮಠ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಬೆಂಗ್ಳೂರಿನಲ್ಲಿ 2 ಕ್ವಿಂಟಾಲ್ ಗಾಂಜಾ ವಶ – ಮೈಸೂರಿನ ಜೆಡಿಎಸ್ ಮುಖಂಡ ಅರೆಸ್ಟ್

    ಬೆಂಗ್ಳೂರಿನಲ್ಲಿ 2 ಕ್ವಿಂಟಾಲ್ ಗಾಂಜಾ ವಶ – ಮೈಸೂರಿನ ಜೆಡಿಎಸ್ ಮುಖಂಡ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯ ಸಿಸಿಬಿ ಪೊಲೀಸರು ಮೊಟ್ಟಮೊದಲ ಬಾರಿಗೆ ಎರಡು ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.

    ಏಕಕಾಲದಲ್ಲಿ 204 ಕೆಜಿ ಗಾಂಜಾ ಸಿಸಿಬಿ ಪೊಲೀಸರು ಬೇಟೆಯಾಡಿದ್ದು, ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗಾಂಜಾ ಬರೋಬ್ಬರಿ ಒಂದು ಕೋಟಿ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.

    ಜೊತೆಗೆ ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಸಮೀರ್, ಕೈಸರ್ ಪಾಷಾ, ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಲಾರಿ, ಒಂದು ಕಾರು, ಮೂರು ಮೊಬೈಲ್ ಸೇರಿದಂತೆ 204 ಕೆಜಿ ಗಾಂಜಾ ವಶ ಪಡೆಯಲಾಗಿದೆ. ಈ ಗ್ಯಾಂಗ್ ಸದಸ್ಯರು ರಾಜಾರೋಷವಾಗಿ ಲಾರಿಯಲ್ಲೇ ಗಾಂಜಾ ಸಾಗಾಟ ಮಾಡುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‍ಪೆಕ್ಟರ್ ಬೊಳೆತ್ತಿನ್ ಹಾಗೂ ವಿರುಪಾಕ್ಷ ನೇತೃತ್ವದ ತಂಡ ದಾಳಿ ಮಾಡಿ ಅರೆಸ್ಟ್ ಮಾಡಿದೆ.

    ಗಾಂಜಾ ಸಾಗಾಟದಲ್ಲಿ ರಾಜಕಾರಣಿಗಳ ಹೆಸರು ತಳುಕು ಹಾಕಿಕೊಂಡಿದ್ದು, ಬಂಧಿಸಿರುವ ಮೂವರಲ್ಲಿ ಕೈಸರ್ ಪಾಷಾ ಮೈಸೂರಿನ ಜೆಡಿಎಸ್ ಪಕ್ಷದ ಮುಖಂಡನಾಗಿದ್ದಾನೆ. ಈತನೇ ಈ ಗಾಂಜಾ ಗ್ಯಾಂಗಿನ ಕಿಂಗ್‍ಪಿನ್ ಎನ್ನಲಾಗಿದ್ದು, ಈತ ಮೈಸೂರಿನ ಶಾಂತಿನಗರ ನಗರಸಭೆ ವಾರ್ಡಿನಿಂದ ಕೌನ್ಸಲರ್ ಚುನಾವಣೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ. ಆದರೆ ಕೇವಲ 150 ಮತಗಳಿಂದ ಪರಾಜಿತ ಹೊಂದಿದ್ದ. ಈತ ಲಾರಿಯಲ್ಲಿ ಗಾಂಜಾವನ್ನು ವಿಶಾಖಪಟ್ಟಣದಿಂದ ದೇವನಹಳ್ಳಿಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.

  • ಬಸವರಾಜ್ ಬೊಮ್ಮಾಯಿಯವರ ನಕಲಿ ಸೋದರ ಜೈಲುಪಾಲು

    ಬಸವರಾಜ್ ಬೊಮ್ಮಾಯಿಯವರ ನಕಲಿ ಸೋದರ ಜೈಲುಪಾಲು

    – ಒನ್ ಮ್ಯಾನ್ ತ್ರಿಬಲ್ ಆ್ಯಕ್ಟಿಂಗ್

    ಚಿಕ್ಕಬಳ್ಳಾಪುರ: ತಾನು ಹೋಂ ಮಿನಿಸ್ಟರ್ ತಮ್ಮ ಮಹೇಶ್ ಬೊಮ್ಮಾಯಿ. ನಮ್ಮ ಸಂಬಂಧಿ ನಿಮ್ಮ ಸ್ಟೇಷನ್‍ಗೆ ಬರುತ್ತಾನೆ ಅವನ ಪರವಾಗಿ ಕೆಲಸ ಮಾಡಿಕೊಡಿ ಎಂದು ಕಾಲ್ ಮಾಡಿದ ನಕಲಿ ಮಿನಿಸ್ಟರ್ ತಮ್ಮ ಈಗ ಜೈಲುಪಾಲಾಗಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಅಂದಹಾಗೆ ಮೂಲತಃ ದೊಡ್ಡಬಳ್ಳಾಪುರ ತಾಲೂಕಿನವನಾದ ಟಿಎನ್ ಬಸವರಾಜು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪಿಎಸ್‍ಐ ಲಕ್ಷ್ಮೀನಾರಾಯಣ ಅವರ ಮೊಬೈಲ್‍ಗೆ ಕರೆ ಮಾಡಿ ತಾನು ಗೃಹಸಚಿವ ಬಸವರಾಜು ಬೊಮ್ಮಾಯಿ ಸೋದರ ಮಹೇಶ್ ಬೊಮ್ಮಾಯಿ ಮಾತಾಡ್ತಿದ್ದೀನಿ. ನಿಮ್ಮ ಸ್ಟೇಷನ್‍ಗೆ ಗೌರಿಬಿದನೂರು ತಾಲೂಕು ತರಿದಾಳು ಗ್ರಾಮದ ನಮ್ಮ ಸಂಬಂಧಿ ಶಿಕ್ಷಕ ರವಿಪ್ರಕಾಶ್ ಬರುತ್ತಾರೆ. ಅವರ ಮನೆಯ ಅಕ್ಕ ಪಕ್ಕದವರ ನಡುವೆ ಗಲಾಟೆ ಆಗಿದೆ ಅವರ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಹೇಳಿದ್ದಾನೆ.

    ಹೋಂ ಮಿನಿಸ್ಟರ್ ತಮ್ಮ ಇರಬಹುದು ಎಂದು ಆಯ್ತು ಸರ್, ಮಾಡ್ತೀವಿ ಅಂತ ಪಿಎಸ್‍ಐ ಹೇಳಿದ್ದಾರೆ. ಮಧ್ಯಾಹ್ನ ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿದ ಇದೇ ವ್ಯಕ್ತಿ ನಾನು ಹೋಂ ಮಿನಿಸ್ಟರ್ ಪಿಎ, ಸಾಹೇಬ್ರ ರಿಲೇಷನ್ ಅವರ ಸಮಸ್ಯೆ ಬಗ್ಗೆ ಮಹೇಶ್ ಬೊಮ್ಮಾಯಿ ಸಾಹೇಬ್ರೆ ಹೇಳಿದ್ರಂತಲ್ಲ ಆ ಕೆಲಸ ಬೇಗ ಮುಗಿಸಿ ಎಂದು ಹೇಳಿದ್ದಾನೆ. ಆಗ ಪೊಲೀಸರು ಶಿಕ್ಷಕ ರವಿಪ್ರಕಾಶ್‍ನನ್ನು ಠಾಣೆಗೆ ಬಂದು ಕಂಪ್ಲೇಂಟ್ ಕೊಡುವಂತೆ ಹೇಳಿದ್ದಾರೆ. ಅದೇ ದಿನ ಸಂಜೆ ವೇಳೆಗೆ ಶಿಕ್ಷಕ ರವಿ ಪ್ರಕಾಶ್ ಜೊತೆ ಕರೆ ಮಾಡಿದ್ದ ನಕಲಿ ವ್ಯಕ್ತಿ ಬಸವರಾಜು ವಕೀಲ ಕೋಟು ಧರಿಸಿ ಠಾಣೆಗೆ ಬಂದಿದ್ದಾನೆ.

    ನಾನು ಬಸವರಾಜು, ಮಹೇಶ್ ಬೊಮ್ಮಾಯಿ ಸರ್ ಲೀಗಲ್ ಅಡ್ವೈಸರ್ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಾನೆ. ಆದರೆ ಪಿಎಸ್‍ಐ ಈತನ ಮಾತು ಹಾಗೂ ವರ್ತನೆ ಬಗ್ಗೆ ಅನುಮಾನಗೊಂಡು ವಕೀಲರ ಕಾರ್ಡ್ ಕೊಡಿ ಎಂದು ಕೇಳಿದಾಗ ನಕಲಿ ವ್ಯಕ್ತಿ ತಡಬಡಿಸಿದ್ದಾನೆ. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ಶಿಕ್ಷಕ ರವಿಪ್ರಕಾಶ್ ಸಮಸ್ಯೆ ಬೇಗ ಬಗೆಹರಿಯಲಿ ದೊಡ್ಡವರ ಹೆಸರು ಹೇಳಿದರೆ ಕೆಲಸ ಆಗುತ್ತೆ ಅಂತ ಈ ರೀತಿ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಬಸವರಾಜು ವಿರುದ್ಧ ಐಪಿಸಿ 419 ಹಾಗೂ 420 ಅಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳು ಈಗ ಜೈಲುಪಾಲಾಗಿದ್ದಾರೆ.

  • ಲವ್ ಮ್ಯಾರೇಜ್ ಆಗಿ ಮಾಂಸ ದಂಧೆ ನಡೆಸ್ತಿದ್ದ ಕಿಲಾಡಿ ಜೋಡಿ ಅರೆಸ್ಟ್

    ಲವ್ ಮ್ಯಾರೇಜ್ ಆಗಿ ಮಾಂಸ ದಂಧೆ ನಡೆಸ್ತಿದ್ದ ಕಿಲಾಡಿ ಜೋಡಿ ಅರೆಸ್ಟ್

    – ಮಗುವಿಗಾಗಿ ಮೈಮಾರಿಕೊಂಡ ಬಡ ತಾಯಿ
    – ಬಡ ಹೆಣ್ಣು ಮಕ್ಕಳೇ ಇವರ ಟಾರ್ಗೆಟ್

    ಬೆಂಗಳೂರು: ಹರ್ಬಲ್ ಲೈಫ್ ಪ್ರೊಡಕ್ಟ್ ಮಾರುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತರನ್ನು ಪ್ರೇಮಾ (38) ಮತ್ತು ರಾಮು (49) ಎಂದು ಗುರುತಿಸಲಾಗಿದೆ. ಲವ್ ಮ್ಯಾರೇಜ್ ಆಗಿದ್ದ ಇವರು ನಂತರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ತಿಳಿಸು ಬಂದಿದೆ. ಬಡ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿ, ಅವರಿಗೆ ಹಣದ ಆಸೆ ತೋರಿಸಿ ಮಾಂಸ ದಂಧೆಗೆ ಇಳಿಸುತ್ತಿದ್ದರು ಎನ್ನಲಾಗಿದೆ.

    ಸಂಜೀವಿನಿ ನಗರದಲ್ಲಿ ಹರ್ಬಲ್ ಲೈಫ್ ಆಯುರ್ವೇದ ಕೇಂದ್ರ ನಡೆಸುತ್ತಿರುವ ಈ ಡೆಡ್ಲಿ ದಂಪತಿ, ಈ ಕೇಂದ್ರವನ್ನೇ ವೇಶ್ಯಾವಾಟಿಕೆಯ ಅಡ್ಡವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ನಾಲ್ಕು ವರ್ಷದ ಮಗುವಿರುವ ಬಡ ತಾಯಿಯನ್ನು ಮಾಂಸ ದಂಧೆಗಾಗಿ ಕರೆದುಕೊಂಡು ಬಂದಿದ್ದಾರೆ. ತನ್ನ ಮಗುವಿನ ಹೊಟ್ಟೆ ತುಂಬಿಸಲು ಆ ತಾಯಿ ಮೈಮಾರಿಕೊಳ್ಳಲು ಸಿದ್ಧವಾಗಿದ್ದಾರೆ. ಜೊತೆಗೆ ಗಿರಾಕಿಯಿಂದ 800 ರೂ. ಪಡೆದು ಆ ತಾಯಿಗೆ 200 ರೂ. ನೀಡುತ್ತಿದ್ದರು ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

    ಹರ್ಬಲ್ ಲೈಫ್ ಆಯುರ್ವೇದ ಕೇಂದ್ರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ತಿಳಿದ ಚಂದ್ರಲೇಔಟ್ ಪೊಲೀಸರು ಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಓರ್ವ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

    ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅದೃಷ್ಟದ ಕಲ್ಲೆಂದು ಮಾರಲು ಯತ್ನಿಸಿದ ಆರೋಪಿಗಳು ಅಂದರ್

    ಅದೃಷ್ಟದ ಕಲ್ಲೆಂದು ಮಾರಲು ಯತ್ನಿಸಿದ ಆರೋಪಿಗಳು ಅಂದರ್

    – ದಂಧೆಯ ಮಾಸ್ಟರ್ ಮೈಂಡ್‍ಗಾಗಿ ಹುಡುಕಾಟ
    – ಬಂಧಿತರು ಆಟೋ ಡ್ರೈವರ್ ಆಗಿ ಕೆಲಸ

    ಬೆಂಗಳೂರು: ಹಸಿರು ಬಣ್ಣದ ಕಲ್ಲನ್ನು ಅದೃಷ್ಟದ ಕಲ್ಲೆಂದು ಮಾರಲು ಯತ್ನಿಸಿದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಶ್ರೀನಿವಾಸ್, ಹರೀಶ್, ತಿರುಪತಪ್ಪ ಬಂಧಿತ ಆರೋಪಿಗಳು. ಮೂಲತಃ ಅವಲಹಳ್ಳಿ, ರಾಮಮೂರ್ತಿನಗರ ಮತ್ತು ಮಾರಗೊಂಡನಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಈ ದಂಧೆಯ ಹಿಂದಿರುವ ಮಾಸ್ಟರ್ ಮೈಂಡ್ ಮನ್ಸೂರ್ ತಲೆಮರೆಸಿಕೊಂಡಿದ್ದಾನೆ. ಬಂಧಿತನ ಆರೋಪಿಗಳಿಂದ 1 ಕೆ.ಜಿ ಕಲ್ಲು ಹಾಗೂ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಸಂಜೆ ಅಂಜನಾನಗರ ಮುಖ್ಯ ರಸ್ತೆಯಲ್ಲಿ ಅದೃಷ್ಟದ ಕಲ್ಲೆಂದು ಆರೋಪಿಗಳು ದಂಧೆಗಿಳಿದಿದ್ದರು. ಅವೆಂಚರ್ಸ್ ಸ್ಟೋನ್‍ನ ಮಾರಾಟ ಮಾಡಲು ಮುಂದಾಗಿದ್ದರು. ಇದನ್ನ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಅದೃಷ್ಟ ಬರುತ್ತೆ. ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ಹೇಳುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಅಧಿಕಾರಿಗಳು ಆರೋಪಿಗಳ ಬೆನ್ನತ್ತಿ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದರು.

    ಆರೋಪಿಗಳು ಪ್ರತಿ ಸಂಜೆ ಈ ರೀತಿ ಕಲ್ಲನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಆದರೆ ಮಾಸ್ಟರ್ ಮೈಂಡ್ ಮನ್ಸೂರ್ ತಲೆಮರೆಸಿಕೊಂಡಿದ್ದಾನೆ. ಮನ್ಸೂರ್ ಆರ್.ಟಿ. ನಗರದ ನಿವಾಸಿಯಾಗಿದ್ದು, ಈತ ಆರೋಪಿಗಳಿಗೆ 1 ಕೆ.ಜಿ ತೂಕದ ಹಸಿರು ಬಣ್ಣದ ಕಲ್ಲನ್ನ ಕೊಟ್ಟಿದ್ದನು. ಅಲ್ಲದೇ ಈ ಕಲ್ಲನ್ನ 1 ಕೋಟಿಗೆ ಮಾರಾಟ ಮಾಡಿ ಎಂದು ಹೇಳಿದ್ದನು.

    ಮಾರಾಟ ಮಾಡಿ ಬಂದ ಹಣದಲ್ಲಿ ಪಾಲು ನೀಡುವುದಾಗಿ ಆರೋಪಿ ಮನ್ಸೂರ್ ಆಸೆ ಹುಟ್ಟಿಸಿದ್ದನು. ದುಡ್ಡಿನ ಆಸೆಗಾಗಿ ಆರೋಪಿಗಳು ಈ ಕೆಲಸಕ್ಕೆ ಕೈ ಹಾಕಿದ್ದರು. ಬಂಧಿತ ಆರೋಪಿಗಳೆಲ್ಲರೂ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಮನ್ಸೂರ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜೂಜಾಡಲು ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ – ಆರೋಪಿ ಬಂಧನ

    ಜೂಜಾಡಲು ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ – ಆರೋಪಿ ಬಂಧನ

    ಬೆಂಗಳೂರು: ಜೂಜಾಡುವ ಗೀಳಿಗೆ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಶಂಕರಪ್ಪ (40) ಎಂದು ಗುರುತಿಸಲಾಗಿದೆ. ಶಂಕರಪ್ಪ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಗಿರಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದನು. ಆದರೆ ಆರೋಪಿ ಜೂಜಾಡುವ ಚಟ ಹೊಂದಿದ್ದನು.

    ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಮಾರು 15 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದನು. ನಂತರ ಬೆಂಗಳೂರಿನಲ್ಲಿ ಮನೆಗಳವು ಮಾಡಿದ ಚಿನ್ನಾಭರಣವನ್ನು ಹೊಸದುರ್ಗದಲ್ಲಿ ಅಡವಿಟ್ಟಿದ್ದನು. ಅಲ್ಲಿ ಅಡವಿಟ್ಟ ಚಿನ್ನಾಭರಣದಿಂದ ಬಂದಂತಹ ಹಣವನ್ನು ಆರೋಪಿ ಜೂಜಾಡಿ ಸೋತಿದ್ದನು.

    ಕಳ್ಳತನ ನಡೆದಿದ್ದ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಗಿರಿನಗರ ಪೊಲೀಸರು ಆರೋಪಿ ಶಂಕರಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ತಾಯಿ, ಪತ್ನಿ ಹತ್ಯೆ – ಅಮೆರಿಕದಲ್ಲಿ ಭಾರತೀಯ ಕ್ರೀಡಾಪಟು ಅರೆಸ್ಟ್

    ತಾಯಿ, ಪತ್ನಿ ಹತ್ಯೆ – ಅಮೆರಿಕದಲ್ಲಿ ಭಾರತೀಯ ಕ್ರೀಡಾಪಟು ಅರೆಸ್ಟ್

    – ಭಾರತಕ್ಕಾಗಿ ಕಂಚಿನ ಪದಕ ಗೆದ್ದಿದ್ದ ಶಾರ್ಟ್ ಪುಟ್ ಆಟಗಾರ

    ವಾಷಿಂಗ್ಟನ್: ಭಾರತದ ಮಾಜಿ ಕ್ರೀಡಾಪಟು ಇಕ್ಬಾಲ್ ಸಿಂಗ್ ಬೋಪಾರೈ ತನ್ನ ತಾಯಿ ಮತ್ತು ಪತ್ನಿಯನ್ನು ಅಮೆರಿಕದಲ್ಲಿರುವ ತನ್ನ ಮನೆಯಲ್ಲಿ ಕೊಲೆ ಮಾಡಿದ್ದಾರೆ.

    ಇಕ್ಬಾಲ್ ಸಿಂಗ್ 1983ರಲ್ಲಿ ಕುವೈತ್‍ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಶಾಟ್ ಪುಟ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದು ತಂದಿದ್ದರು. ಜೊತೆಗೆ 1988ರಲ್ಲಿ ನವದೆಹಲಿಯಲ್ಲಿ ನಡೆದ ಕ್ರೀಡಾಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಭಾರತದ ಸಾರ್ವಕಾಲಿಕ ಟಾಪ್-20 ಶಾಟ್‍ಪುಟ್ ಪಟ್ಟಿಯಲ್ಲಿ ಸಿಂಗ್ ಸ್ಥಾನ ಪಡೆದುಕೊಂಡಿದ್ದರು.

    62 ವರ್ಷದ ಸಿಂಗ್ ಕುಟುಂಬದೊಂದಿದೆ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ ತನ್ನ ತಾಯಿ ಮತ್ತು ಪತ್ನಿಯನ್ನು ಕೊಲೆ ಮಾಡಿರುವ ಅವರು, ತಾನೇ ತನ್ನ ಮಗನಿಗೆ ಕರೆ ಮಾಡಿ ನಿನ್ನ ತಾಯಿ ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದೇನೆ. ಪೊಲೀಸರಿಗೆ ತಿಳಿಸು ಎಂದು ಹೇಳಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೆನ್ಸಿಲ್ವೇನಿಯಾದ ನ್ಯೂಟನ್ ಸ್ಕ್ವೇರ್ ಪೊಲೀಸರು ಇಕ್ಬಾಲ್ ಸಿಂಗ್ ಅವರನ್ನು ಬಂಧಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.

    ಸಿಂಗ್ ಅವರು ಕರೆ ಮಾಡುತ್ತಿದಂತೆ ಪೊಲೀಸರು, ಪೆನ್ಸಿಲ್ವೇನಿಯಾದ ನ್ಯೂಟೌನ್ ಟೌನ್‍ಶಿಪ್‍ನಲ್ಲಿರುವ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಇಕ್ಬಾಲ್ ಸಿಂಗ್ ಚೂರಿ ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಕುಳಿತಿದ್ದರು. ಒಳಗೆ ಹೋಗಿ ನೋಡಿದಾಗ ಇಬ್ಬರು ಮಹಿಳೆಯರ ಶವಗಳು ಕಂಡು ಬಂದವು. ಆಗ ನಾವು ಸಿಂಗ್ ಅವರನ್ನು ಬಂಧಿಸಿ ಕರೆದುಕೊಂಡು ಬಂದೆವು ಎಂದು ಪೆನ್ಸಿಲ್ವೇನಿಯಾದ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಿಂಗ್ ಅವರು ಆತ್ಮೀಯ ಗೆಳೆಯ, ವಿಷಯ ತಿಳಿದು ನನಗೆ ಶಾಕ್ ಆಗಿದೆ. ಇಕ್ಬಾಲ್ ಸಿಂಗ್ ಬಹಳ ಒಳ್ಳೆಯ ಮನುಷ್ಯ. ಆತ ಕೊಲೆ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಆತನ ಮಡದಿ ಕೂಡ ಬಹಳ ಒಳ್ಳೆಯವರು. ಆದರೆ ಏನು ತಪ್ಪು ನಡೆದಿದೆ ಎಂಬುದು ನನಗೂ ಗೊತ್ತಿಲ್ಲ. ನಾನು ಕೂಡ ವಿಷಯ ತಿಳಿದು ಶಾಕ್‍ಗೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ.

  • ವಿದ್ಯಾರ್ಥಿನಿ ಮೇಲೆ ಕಾನ್‍ಸ್ಟೇಬಲ್ ಅತ್ಯಾಚಾರ – ನಿಶ್ವಿತಾರ್ಥವಾಗಿದ್ದ ಹುಡುಗನಿಗೆ ವಿಡಿಯೋ ಸೆಂಡ್

    ವಿದ್ಯಾರ್ಥಿನಿ ಮೇಲೆ ಕಾನ್‍ಸ್ಟೇಬಲ್ ಅತ್ಯಾಚಾರ – ನಿಶ್ವಿತಾರ್ಥವಾಗಿದ್ದ ಹುಡುಗನಿಗೆ ವಿಡಿಯೋ ಸೆಂಡ್

    – ಮದುವೆ ಆಗೋದಾಗಿ ನಂಬಿಸಿ ಅನೇಕ ಬಾರಿ ರೇಪ್
    – ಮೊದಲ ಬಾರಿ ಅತ್ಯಾಚಾರ ಮಾಡಿದಾಗ ವಿಡಿಯೋ ರೆಕಾರ್ಡ್

    ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಕಾನ್‍ಸ್ಟೇಬಲ್ ಅನೇಕ ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಕಾನ್‍ಸ್ಟೇಬಲ್‍ನನ್ನು ರವೀಂದ್ರ ದಾಭಡೆ (32) ಎಂದು ಗುರುತಿಸಲಾಗಿದೆ. ಆರೋಪಿ ಕಾನ್‍ಸ್ಟೇಬಲ್ ಮದುವೆ ಆಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಈಗ ಕಾನ್‍ಸ್ಟೇಬಲ್‍ನನ್ನು ಬಂಧಿಸಿದ್ದಾರೆ. ಆಗಸ್ಟ್ 1 ರಂದು ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಳು. ಆದರೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಕಾರಣ ಕಾನ್‍ಸ್ಟೇಬಲ್ ಕ್ವಾರಂಟೈನ್‍ನಲ್ಲಿದ್ದನು. ಹೀಗಾಗಿ ಆರೋಪಿಯನ್ನು ಈಗ ಬಂಧಿಸಲಾಗಿದೆ.

    ಸಂತ್ರಸ್ತೆ ಜೂನಿಯರ್ ಕಾಲೇಜಿನಲ್ಲಿದ್ದಾಗ ಕಾನ್‍ಸ್ಟೇಬಲ್ ರವೀಂದ್ರ ದಾಭಡೆ ಪರಿಚಯವಾಗಿದೆ. ನಂತರ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅತ್ಯಾಚಾರದ ವಿಡಿಯೋವನ್ನು ಸಂತ್ರಸ್ತೆಗೆ ಗೊತ್ತಿಲ್ಲದೇ ರೆಕಾರ್ಡ್ ಮಾಡಿಕೊಂಡಿದ್ದಾನೆ.

    ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನನಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ಆಗಿತ್ತು. ಆದರೆ ಆರೋಪಿ ಕಾನ್‍ಸ್ಟೇಬಲ್ ಅತ್ಯಾಚಾರದ ವಿಡಿಯೋವನ್ನು ಆತನಿಗೆ ಸೆಂಡ್ ಮಾಡಿದ್ದಾನೆ. ಇದರಿಂದ ನನ್ನ ಮದುವೆ ಕೂಡ ಕ್ಯಾನ್ಸೆಲ್ ಆಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಸದ್ಯಕ್ಕೆ ಕಾನ್‍ಸ್ಟೇಬಲ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿಯಲ್ಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರಿಯಕರನೊಂದಿಗಿದ್ದ 16ರ ಅಪ್ರಾಪ್ತೆ – ನಿದ್ದೆಯಿಂದ ಎದ್ದು ನೋಡಿದ್ದಕ್ಕೆ 11ರ ಸೋದರಿಯ ಕೊಲೆ

    ಪ್ರಿಯಕರನೊಂದಿಗಿದ್ದ 16ರ ಅಪ್ರಾಪ್ತೆ – ನಿದ್ದೆಯಿಂದ ಎದ್ದು ನೋಡಿದ್ದಕ್ಕೆ 11ರ ಸೋದರಿಯ ಕೊಲೆ

    – ಮೊಬೈಲ್ ವಿಚಾರಕ್ಕೆ ಕೊಂದೆ ಎಂದು ತಪ್ಪೊಪ್ಪಿಗೆ
    – ವಿಚಾರಣೆ ವೇಳೆ ಬಾಯಿ ಬಿಟ್ಟ ಗೆಳೆಯ

    ರಾಯ್ಪುರ್: ತನ್ನ ಗೆಳೆಯನೊಂದಿಗೆ ಇದ್ದುದ್ದನ್ನು ನೋಡಿದ 11 ವರ್ಷದ ಬಾಲಕಿಯನ್ನು ಆಕೆಯ ಸಹೋದರಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‍ಗಢದ ಕೊರ್ಬಾದಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 16 ವರ್ಷದ ಅಪ್ರಾಪ್ತೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಮೊದಲಿಗೆ ದಿಂಬಿನಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ. ಮೊದಲಿಗೆ ಮೊಬೈಲ್ ವಿಚಾರಕ್ಕೆ ಕೊಲೆ ಮಾಡಿದೆ ಎಂದು ಅಪ್ರಾಪ್ತೆ ಹೇಳಿದ್ದಳು. ಆದರೆ ತನಿಖೆ ವೇಳೆ ಸತ್ಯ ಬಯಲಾಗಿದೆ.

    ಏನಿದು ಪ್ರಕರಣ?
    ಹುಡುಗಿಯ ಪೋಷಕರು ಹಬ್ಬಕ್ಕಾಗಿ ಪಕ್ಕದ ಹಳ್ಳಿಗೆ ಹೋಗಿದ್ದರು. ಮನೆಯಲ್ಲಿ 11 ವರ್ಷದ ಮತ್ತು 16 ವರ್ಷದ ಸಹೋದರಿಯ ಇದ್ದರು. ರಾತ್ರಿ ಬಾಲಕಿ ನಿದ್ದೆಯಿಂದ ಎಚ್ಚರಗೊಂಡಿದ್ದಾಳೆ. ಆಗ ತನ್ನ ಸಹೋದರಿ ಆಕೆಯ ಪ್ರಿಯಕರನೊಂದಿಗೆ ಇದ್ದುದ್ದನ್ನು ನೋಡಿದ್ದಾಳೆ. ಇದರಿಂದ ಭಯಗೊಂಡ ಸಹೋದರಿಗೆ ಎಲ್ಲರಿಗೂ ಈ ವಿಚಾರ ಹೇಳುತ್ತಾಳೆ ಎಂದು ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಪೋಷಕರು ಶನಿವಾರ ಬೆಳಗ್ಗೆ ಮನೆಗೆ ಹಿಂದಿರುಗಿದಾಗ ಮಗಳು ಮೃತಪಟ್ಟಿರುವುದು ತಿಳಿದಿದೆ. ನಂತರ ಈ ಬಗ್ಗೆ ಮಾಹಿತಿ ಸ್ಥಳಕ್ಕೆ ಬಂದು ಪೊಲೀಸರು ಸಹೋದರಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ನನ್ನ ಮೊಬೈಲ್ ಫೋನ್‍ನಲ್ಲಿ ಆಟವಾಡುತ್ತಿದ್ದಳು. ನಾನು ವಾಪಸ್ ಕೇಳಿದರೂ ಕೊಡಲಿಲ್ಲ. ಹೀಗಾಗಿ ಕೊಲೆ ಮಾಡಿದೆ ಎಂದು ಅಪ್ರಾಪ್ತೆ ಹೇಳಿದ್ದಾಳೆ.

    ಮತ್ತೆ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು ಮನೆಯೊಳಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ಬಾಲಕಿಯ ಮನೆಯ ಹೊರಗೆ ಬೈಕಿನ ಟಯರ್ ಗುರುತುಗಳನ್ನು ಪೊಲೀಸರು ಗಮನಿಸಿದ್ದಾರೆ. ಆಗ ಪೊಲೀಸರು ಮೃತಳ ಸಹೋದರಿಯ ಫೋನ್ ಪರಿಶೀಲಿಸಿದ್ದಾರೆ. ಆಕೆ ಕರೆ ವಿವರಗಳನ್ನು ಡಿಲೀಟ್ ಮಾಡಿದ್ದಳು.

    ಸೈಬರ್ ಪೊಲೀಸರು ಒಂದು ನಂಬರಿಗೆ ಫೋನ್ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ತಪಾಸಣೆ ನಡೆಸಿದಾಗ ಘಟನೆಯ ಸಮಯದಲ್ಲಿ ಫೋನ್ ಬಾಲಕಿಯ ಮನೆಯ ವ್ಯಾಪ್ತಿಯಲ್ಲಿ ಇರುವುದನ್ನು ಗೊತ್ತಾಗಿದೆ. ವಿನಯ್ ಜಗತ್ ಹೆಸರಿನಲ್ಲಿ ಫೋನ್ ನಂಬರ್ ನೋಂದಾಯಿಸಲಾಗಿತ್ತು. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಆಗ ತಾವೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಪೋಕ್ಸೋ, ಬಾಲಾಪರಾಧಿ ನ್ಯಾಯ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಕಾಯ್ಡೆಯಲ್ಲಿ ಬಂಧಿಸಲಾಗಿದೆ.

  • ಪತ್ರಕರ್ತನನ್ನ ಬೆನ್ನಟ್ಟಿ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು

    ಪತ್ರಕರ್ತನನ್ನ ಬೆನ್ನಟ್ಟಿ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು

    –  ಹಳ್ಳಿಗೆ ಹೋದಾಗಲೇ ಮರ್ಡರ್
    – ಮೂವರು ಆರೋಪಿಗಳು ಅರೆಸ್ಟ್

    ಲಕ್ನೋ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳು ಪತ್ರಕರ್ತರೊಬ್ಬರನ್ನು ಬೆನ್ನಟ್ಟಿ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.

    ರತನ್ ಸಿಂಗ್ (42) ಮೃತ ಪತ್ರಕರ್ತ. ಖಾಸಗಿ ಸುದ್ದಿ ವಾಹಿನಿಯಲ್ಲಿ ಸ್ಥಳೀಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಲಕ್ನೋದಿಂದ 260 ಕಿ.ಮೀ ದೂರದಲ್ಲಿರುವ ಪೂರ್ವ ಉತ್ತರ ಪ್ರದೇಶದ ಬಲಿಯಾದಲ್ಲಿರುವ ಅವರ ಮನೆಯ ಬಳಿ ಗುಂಡು ಹಾರಿಸಿದ್ದಾರೆ. ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಂಗ್ ಜಿಲ್ಲೆಯ ನಗರ ಭಾಗದಲ್ಲಿ ವಾಸಿಸುತ್ತಿದ್ದರು. ಅವರ ಕುಟುಂಬವು ಹಳ್ಳಿಯಲ್ಲಿ ವಾಸಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಆರೋಪಿಗಳೊಂದಿಗೆ ಆಸ್ತಿ ವಿವಾದ ನಡೆಯುತ್ತಿತ್ತು. ಸೋಮವಾರ ರಾತ್ರಿ ಸಿಂಗ್ ತನ್ನ ಹಳ್ಳಿಗೆ ಹೋಗಿದ್ದಾಗ ಅವರನ್ನ ಬೆನ್ನಟ್ಟಿ ಮೂವರು ಆರೋಪಿಗಳು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿ ಮಾಡುವಾಗ ಸಿಂಗ್ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ಏನು ಪ್ರಯೋಜವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    “ಆರೋಪಿಗಳು ಜಮೀನನ ಸುತ್ತಲೂ ಗೋಡೆ ನಿರ್ಮಿಸಿದ್ದರು. ಇದನ್ನು ತಿಳಿದ ಪತ್ರಕರ್ತ ಗೋಡೆಯನ್ನು ತೆರವು ಗೊಳಿಸಿದ್ದನು. ಈ ವೇಳೆ ಆರೋಪಿಗಳು ಮತ್ತು ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಸ್ಥಳದಲ್ಲೇ ಪತ್ರಕರ್ತ ಮೃತಪಟ್ಟಿದ್ದು, ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಸ್ತಿ ವಿವಾದ ಮತ್ತು ಹಳೆಯ ದ್ವೇಷವೇ ದಾಳಿಯ ಹಿಂದಿನ ಕಾರಣ” ಎಂದು ಇನ್ಸ್‌ಪೆಕ್ಟರ್ ಸುಭಾಷ್ ದುಬೆ ತಿಳಿಸಿದರು.

    ಮಾಹಿತಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪತ್ರಕರ್ತನ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.