Tag: arrest

  • ಡ್ರಗ್ಸ್ ಪ್ರಕರಣ: ನಟ ರಾಜ್ ಪ್ರೇಯಸಿ ಬಂಧನ

    ಡ್ರಗ್ಸ್ ಪ್ರಕರಣ: ನಟ ರಾಜ್ ಪ್ರೇಯಸಿ ಬಂಧನ

    ಸಿನಿಮಾ ರಂಗದಲ್ಲಿ ಡ್ರಗ್ಸ್ (Drugs) ಹಾವಳಿ ಹೆಚ್ಚಾಗಿದೆ ಎಂದು ಪದೇ ಪದೇ ಪೊಲೀಸ್ ಇಲಾಖೆ ಹೇಳುತ್ತಲೇ ಇದೆ. ಭಾರತೀಯ ಸಿನಿಮಾ ರಂಗವು ಡ್ರಗ್ಸ್ ಹಾವಳಿಯಿಂದ ಮುಕ್ತವಾಗಿಸಲು ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾರೆ ಪೊಲೀಸರು. ಹಾಗಾಗಿ ಕನ್ನಡವೂ ಸೇರಿದಂತೆ ಹಲವು ಚಿತ್ರರಂಗದ ನಟ ನಟಿಯರನ್ನು ಬಂಧಿಸಿಯೂ (Arrest) ಆಗಿದೆ. ಈಗ ತೆಲುಗಿನಲ್ಲಿ ನಟನೊಬ್ಬನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಸಿನಿಮಾ ಚೂಪಿಸ್ತ ಮಾವ, ಕುಮಾರಿ 21 ಎಫ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಯುವ ನಟ ರಾಜ್ ತರುಣ್ (Raj Tarun) ಅವರ ಪ್ರೇಯಸಿಯನ್ನು ಈ ಬಾರಿ ತೆಲಂಗಾಣ (Telangana) ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಹೆಸರೂ ಕೂಡ ಬಹಿರಂಗ ಪಡಿಸಿಲ್ಲ.

     

    ಗೋವಾದಿಂದ ಇವರಿಗೆಲ್ಲ ಡ್ರಗ್ಸ್ ಸರಬರಾಜು ಆಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಯುವತಿಯನ್ನು ಬಂಧಿಸಿದ ನಂತರ, ಯಾರಿಗೆಲ್ಲ ಡ್ರಗ್ಸ್ ಸರಬರಾಜು ಆಗುತ್ತಿತ್ತು, ಯಾರು ತಂದು ಕೊಡುತ್ತಿದ್ದರು. ಹೀಗೆ ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

  • ಹಿಂದೂ ದೇವರನ್ನು ನಂಬಬೇಡಿ, ಬೌದ್ಧ ಧರ್ಮ ಅಳವಡಿಸಿಕೊಳ್ಳಿ ಎಂದಿದ್ದ ಮುಖ್ಯಶಿಕ್ಷಕ ಅರೆಸ್ಟ್

    ಹಿಂದೂ ದೇವರನ್ನು ನಂಬಬೇಡಿ, ಬೌದ್ಧ ಧರ್ಮ ಅಳವಡಿಸಿಕೊಳ್ಳಿ ಎಂದಿದ್ದ ಮುಖ್ಯಶಿಕ್ಷಕ ಅರೆಸ್ಟ್

    ರಾಯ್ಪುರ್:‌ ಹಿಂದೂ ದೇವರನ್ನು (Hindu God) ನಂಬಬೇಡಿ, ಬೌದ್ಧ ಧರ್ಮ ಅಳವಡಿಸಿಕೊಳ್ಳಿ ಅಂತ ಶಿಕ್ಷಕರೊಬ್ಬರು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದ ಘಟನೆ ಛತ್ತೀಸ್‍ಘಡದ ಬಿಲಾಸ್‍ಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

    ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಶಿಕ್ಷಕ ರತನ್‍ಲಾಲ್ ಸರೋವರ್ ರನ್ನು ಬಂಧಿಸಲಾಗಿದೆ. ಮುಖ್ಯ ಶಿಕ್ಷಕನ ಸ್ಥಾನದಿಂದಲೂ ಅಮಾನತುಗೊಳಿಸಲಾಗಿದೆ.

    ನಡೆದಿದ್ದೇನು..?: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಆರೋಪಿ ಮುಖ್ಯಸ್ಥರು ಮೊಹ್ತರಾಯ್ ಗ್ರಾಮದಲ್ಲಿ ಮಕ್ಕಳು ಮತ್ತು ಜನರ ಗುಂಪನ್ನು ಒಟ್ಟುಗೂಡಿಸಿದ್ದಾರೆ. ಬಳಿಕ ಅವರಿಗೆ ಹಿಂದೂ ದೇವರುಗಳನ್ನು ನಾವು ಪೂಜಿಸುವುದಿಲ್ಲ. ಬೌದ್ಧ ಧರ್ಮವನ್ನು ಅನುಸರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.

    ಈ ಸಂಬಂಧ ಹಿಂದೂ ಸಂಘಟನೆಯೊಂದರ ಪದಾಧಿಕಾರಿ ರೂಪೇಶ್ ಶುಕ್ಲಾ ಎಂಬವರು ಹೆಡ್ ಮಾಸ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಶಿವ, ರಾಮ, ಕೃಷ್ಣ ಸೇರಿದಂತೆ ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಮತ್ತು ಬೌದ್ಧ ಧರ್ಮವನ್ನು ಅನುಸರಿಸುವುದಾಗಿ ಪ್ರಮಾಣ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವರ ಈ ಕ್ರಮ ಸನಾತನ ಧರ್ಮದಲ್ಲಿ ನಂಬಿಕೆ ಇರುವ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗತೊಡಗಿತು. ಸದ್ಯ ದೂರಿನ ಆಧಾರದ ಮೇಲೆ ಹೆಡ್‌ಮಾಸ್ಟರ್ ವಿರುದ್ಧ ಐಪಿಸಿ ಸೆಕ್ಷನ್ 153A (ಧರ್ಮ, ಜಾತಿ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌

  • ದರ್ಶನ್ ನಟನೆಯ ‘ಕಾಟೇರ’ ಪೈರಸಿ- ಓರ್ವನ ಬಂಧನ

    ದರ್ಶನ್ ನಟನೆಯ ‘ಕಾಟೇರ’ ಪೈರಸಿ- ಓರ್ವನ ಬಂಧನ

    ನ್ನಡದ ಕಾಟೇರ (Katera) ಸಿನಿಮಾ ಕಳೆದ ವಾರದಿಂದ ಎಲ್ಲ ಕಡೆ ತುಂಬಿದ ಪ್ರದರ್ಶನ ಕಾಣುತ್ತಿತ್ತು. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ಚಿತ್ರದ ಪೈರಸಿ ಹೊರ ಬಂದಿತ್ತು. ಪೈರಸಿ ಲಿಂಕ್ ಗಳನ್ನು ಸಾಕಷ್ಟು ಜನರು ಹಂಚಿಕೊಂಡಿದ್ದರು. ಈ ಕುರಿತಂತೆ ಚಿತ್ರತಂಡವು ಪೈರಸಿ (Piracy)  ಮಾಡುವವರು ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಪೈರಸಿ ಮಾಡುವವರ ವಿರುದ್ಧ ಸ್ವತಃ ದರ್ಶನ್ (Darshan) ಗುಡುಗಿದ್ದರು.

    ಪೈರಸಿ ಲಿಂಕ್ ಗಳು ಹೆಚ್ಚೆಚ್ಚು ಶೇರ್ ಆಗುತ್ತಿದ್ದಂತೆಯೇ ಅದನ್ನು ಮಾಡುವವರ ಹುಡುಕಾಟಕ್ಕೆ ಚಿತ್ರತಂಡ ಮುಂದಾಗಿತ್ತು. ಕೊನೆಗೂ  ಪೈರಸಿ ಮಾಡಿ, ಆ ಲಿಂಕ್ ಅನ್ನು ನಲವತ್ತು ರೂಪಾಯಿಗೆ ಮಾರುತ್ತಿದ್ದ ರಾಯಚೂರಿ ಜಿಲ್ಲೆಯ, ದೇವದುರ್ಗ ತಾಲೂಕಿನ ಗಂಗನಾಯಕ್ ತಾಂಡದ ಮೌನೇಶ್ ಎನ್ನುವನನ್ನು ಪೊಲೀಸರು ಬಂಧಿಸಿದ್ದಾರೆ.

    ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಕುರಿತಂತೆ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿದ್ದು, ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು  ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

    ರಾಜ್ಯದಲ್ಲಿ ಕಾಟೇರ ಹವಾ ಜೋರಾಗಿದೆ. ಕರ್ನಾಟಕದಲ್ಲೇ ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ರೂಪಾಯಿ ಹಣ ಹರಿದು ಬರುತ್ತಿದೆ. ಜೊತೆಗೆ ನೆರೆಯ ರಾಜ್ಯದಲ್ಲೂ ಕಾಟೇರ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಕಾಟೇರ ಬಿಡುಗಡೆ ಆಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ. ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಬಂದಿರುವ ಹಿನ್ನೆಲೆಯಲ್ಲಿ ವಿದೇಶದಲ್ಲೂ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

     

    ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿತ್ತು. ಕಾಟೇರ ಸಿನಿಮಾದ ಮೊದಲ ದಿನದ ಗಳಿಕೆ ಅಂದಾಜು 19.79 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

  • ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅರೆಸ್ಟ್

    ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅರೆಸ್ಟ್

    ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣ ಆಗಿದ್ದಾರೆ ಎನ್ನುವ ಕಾರಣಕ್ಕಾಗಿ ತೆಲುಗಿನ ಬಿಗ್ ಬಾಸ್ ಸೀಸನ್ 7 ರ ವಿಜೇತ ಪಲ್ಲವಿ ಪ್ರಶಾಂತ್ ಅವರನ್ನು ಹೈದರಾಬಾದ್ ನ ಜುಬಿಲಿ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ (Arrest). ಪಲ್ಲವಿ ಪ್ರಶಾಂತ್ ಅವರ ಜೊತೆಗೆ ಸಹೋದರ ಮನೋಹರ್ ಅವರನ್ನು ಕೂಡ ಬಂಧಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

    ಏನಿದು ಪ್ರಕರಣ?
    ಬಿಗ್ ಬಾಸ್ (Bigg Boss) ಕಂಟೆಸ್ಟೆಂಟ್ ಅಭಿಮಾನಿಗಳು ಕಿತ್ತಾಡಿಕೊಂಡ ಪ್ರಕರಣ ಹೈದರಾಬಾದ್ ನಲ್ಲಿ ಮೊನ್ನೆ ನಡೆದಿತ್ತು. ಫಿನಾಲೆ ವೇಳೆ ಸ್ಟುಡಿಯೋದಲ್ಲಿ ಗಲಾಟೆ ನಡೆದಿದ್ದು, ಕಾರು ಮತ್ತು ಬಸ್ ಗಳು ಜಖಂ ಆಗಿದ್ದವು. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿತ್ತು. ಈ ವೇಳೆ ಕಂಟೆಸ್ಟೆಂಟ್ ಆಗಿದ್ದ ಅಮರ್ ದೀಪ್  (Amar Deep) ಮತ್ತು ಪಲ್ಲವಿ ಪ್ರಶಾಂತ್ (Pallavi Prashant) ಅವರ ಅಭಿಮಾನಿಗಳು ಆಗಮಿಸಿ ದಾಂಧಲೆ ಮಾಡಿದ್ದರು.

    ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ನೆಚ್ಚಿನ ಕಂಟೆಸ್ಟೆಂಟ್ ವಿನ್ನರ್ ಆಗುತ್ತಾರೆ ಎನ್ನುವುದು ಅವರವರ ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಆದರೆ, ಆಗಿದ್ದು ಉಲ್ಟಾ ಎನ್ನುವ ಕಾರಣಕ್ಕಾಗಿ ಗಲಾಟೆ ಶುರುವಾಗಿತ್ತು. ಪಲ್ಲವಿ ಪ್ರಶಾಂತ್ ವಿನ್ ಆಗಿ, ಅಮರ್ ದೀಪ್ ರನ್ನರ್ ಅಪ್ ಆಗಿ ಘೋಷಣೆ ಆಗುತ್ತಿದ್ದಂತೆಯೇ ಗಲಾಟೆ ಶುರುವಾಗಿತ್ತು. ಇಬ್ಬರ ಫ್ಯಾನ್ಸ್ ಮಾತು ವಿಕೋಪಕ್ಕೆ ಹೋದ ಕಾರಣದಿಂದಾಗಿ ಆರ್.ಟಿ.ಸಿ ಬಸ್ ಮತ್ತು ಕಾರಿನ ಗಾಜು ಪುಡಿ ಪುಡಿ ಆಗಿದೆ.

     

    ಪಲ್ಲವಿ ಪ್ರಶಾಂತ್ ಅಭಿಮಾನಿಗಳು ರನ್ನರ್ ಅಪ್ ಆಗಿದ್ದ ಅಮರ್ ಅವರ ಕಾರಿನ ಮೇಲೂ ದಾಳಿ ಮಾಡಿದ್ದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಅನಾಹುತ ಆಗಿರುವುದನ್ನು ತಡೆದಿದ್ದರು. ಜೊತೆ ಇನ್ನೋರ್ವ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಶ್ರೀ ಅವರು ಕಾರಿನ ಗಾಜು ಪುಡಿ ಪುಡಿ ಆಗಿತ್ತು.  ಈ ಕುರಿತಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಲವಿ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ.

  • ದುನಿಯಾ ವಿಜಯ್ ಅರೆಸ್ಟ್: ಬೀದಿಯಲ್ಲಿ ‘ಭೀಮ’ನ ಬಂಧನ

    ದುನಿಯಾ ವಿಜಯ್ ಅರೆಸ್ಟ್: ಬೀದಿಯಲ್ಲಿ ‘ಭೀಮ’ನ ಬಂಧನ

    ನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಅರೆಸ್ಟ್ (Arrest) ಆಗಿದ್ದಾರೆ. ಬೆಂಗಳೂರಿನ ವಿನೋವಾ ನಗರದಲ್ಲಿ ನಡುರಸ್ತೆಯಲ್ಲೇ ಪೊಲೀಸರು ದುನಿಯಾ ವಿಜಯ್ ಕೈಗೆ ಬೇಡಿ ತೋಡಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ವಿನೋವಾ ರಸ್ತೆಯಲ್ಲಿ ವಿಜಯ್ ಕಂಡು ಬಹುತೇಕರು ಗಾಬರಿಗೊಂಡಿದ್ದರು. ವಿಜಯ್ ಮೈ ತುಂಬಾ ರಕ್ತ ಬೇರೆ ಹರಿದಿದ್ದರಿಂದ ಏನಾಯಿತು ಎಂದೆಲ್ಲ ವಿಚಾರಿಸಿದ್ದರು. ಆಮೇಲೆ ಅದು ಶೂಟಿಂಗ್ ಸನ್ನಿವೇಶ ಎಂದು ಗೊತ್ತಾಗಿ ನಿಟ್ಟುಸಿರಿಟ್ಟರು.

    ಹೌದು, ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ (Bhima) ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಜಯ್ ಶೂಟ್ ಮಾಡುತ್ತಿದ್ದಾರೆ. ನಡು ರಸ್ತೆಯಲ್ಲಿ ವಿಜಯ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುವ ದೃಶ್ಯ ಅದಾಗಿದೆ. ಈ ಮೂಲಕ ಭೀಮ ಸಿನಿಮಾದ ಕ್ಲೈಮ್ಯಾಕ್ಸ್ ಏನಾಗಿರಲಿದೆ ಎನ್ನುವ ಸಣ್ಣದೊಂದು ಸುಳಿವೂ ಸಿಕ್ಕಿದೆ.

    ವಿಜಯ್ ಮಗಳ ಎಂಟ್ರಿ

    ದುನಿಯಾ ವಿಜಯ್ (Duniya Vijay) ಈಗಾಗಲೇ ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಭೀಮನಾಗಿ ಅಬ್ಬರಿಸಲು ಸಜ್ಜಾಗಿರುವ ಬೆನ್ನಲ್ಲೇ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಸಿನಿ ದುನಿಯಾಗೆ ಇಬ್ಬರು ಪುತ್ರಿಯರನ್ನು ವಿಜಯ್ ಪರಿಚಯಿಸುತ್ತಿದ್ದಾರೆ.

    ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಅನೌನ್ಸ್ ಮಾಡಿದ್ದಾರೆ. ಆದರೆ ನೀವು ಗೆಸ್ ಮಾಡಿದಂತೆ ಕಿರಿ ಮಗಳು ಮೋನಿಷಾ (Monisha) ಅಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ (Monica) ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಮೋನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ (Anupam Kher) ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೋನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ.

    ಹಾಗಾಗಿ ಹಿರಿ ಮಗಳು ಮೋನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೋನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರಂತೆ. ಜೊತೆಗೆ ಮೋನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೋನಿಷಾ ಬಣ್ಣದ ಜಗತ್ತಿಗೆ ಬರಲಿದ್ದಾರೆ.

     

    ವಿಜಯ್ ಅವರ ಇಬ್ಬರು ಮಕ್ಕಳಿಗೂ ಈಗಾಗಲೇ ತುಂಬಾ ಆಫರ್ಸ್ ಬಂದಿದೆ. ಆದರೆ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ನಟನೆಗೆ ಬರೋದನ್ನ ಮುಂದೂಡಲಾಗಿತ್ತು. ಆದ್ರೀಗ ಹಿರಿ ಮಗಳು ಸಿನಿಮಾ ಮಾಡೋ ಉದ್ದೇಶದಿಂದಲೇ ಸಕಲ ತಯಾರಿ ಮುಗಿಸಿದ್ದಾಳೆ. ಹೀಗಾಗಿ ಮೋನಿಕಾ ಲಾಂಚ್ ಮಾಡೋಕೆ ಇದು ಸೂಕ್ತ ಸಮಯ ಎಂದು ವಿಜಯ್ ನಿರ್ಧರಿಸಿದ್ದಾರಂತೆ. ಸದ್ಯ ಮೋನಿಕಾ ಚೊಚ್ಚಲ ಸಿನಿಮಾಗೆ ಅದ್ಭುತ ಸ್ಕ್ರಿಪ್ಟ್ ಕೂಡ ರೆಡಿಯಿದ್ದು, ಒಂದೊಳ್ಳೆ ಸಮಯ ನೋಡ್ಕೊಂಡು ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಇನ್ನು ಹಿರಿಯ ಮಗಳ ಮೊದಲ ಸಿನಿಮಾಗೆ ಸ್ವತಃ ದುನಿಯಾ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.

  • ಪತ್ನಿಗೆ ಕಿರುಕುಳ ಆರೋಪ: ಕಿರುತೆರೆ ಖ್ಯಾತ ನಟ ರಾಹುಲ್ ವಿರುದ್ಧ ಅರೆಸ್ಟ್ ವಾರಂಟ್

    ಪತ್ನಿಗೆ ಕಿರುಕುಳ ಆರೋಪ: ಕಿರುತೆರೆ ಖ್ಯಾತ ನಟ ರಾಹುಲ್ ವಿರುದ್ಧ ಅರೆಸ್ಟ್ ವಾರಂಟ್

    ನಪ್ರಿಯ ತಮಿಳಿನ ನಂದಿನಿ ಧಾರಾವಾಹಿಯ ನಾಯಕ ನಟ ರಾಹುಲ್ ರವಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಪತ್ನಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಅವರ ಮೇಲಿತ್ತು. ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದ ನಟನ ಪತ್ನಿ ದೂರು ದಾಖಲಿಸಿದ್ದರು. ಅರೆಸ್ಟ್ ವಾರೆಂಟ್ ಜಾರಿ ಆಗುತ್ತಿದ್ದಂತೆಯೇ ರವಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೂರು ವರ್ಷಗಳ ಹಿಂದೆಯಷ್ಟೇ ರಾಹುಲ್ ರವಿ ಮದುವೆಯಾಗಿದ್ದರು. ಡಿಸೆಂಬರ್ 2020ರಲ್ಲಿ ಲಕ್ಷ್ಮೀ ಎನ್ನುವವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದ ರಾಹುಲ್ ಗೆ ವಿವಾಹೇತರ ಸಂಬಂಧವಿದೆ ಎನ್ನುವ ಆರೋಪವೂ ಇದೆ. ಈ ಕಾರಣಕ್ಕಾಗಿಯೇ ಪತಿ ಪತ್ನಿ ದಿನವೂ ಗಲಾಟೆ ಮಾಡುತ್ತಿದ್ದರು ಎನ್ನುವ ಮಾಹಿತಿ ಹರಿದಾಡುತ್ತಿದೆ.

    ತನ್ನ ಪತಿಗೆ ಮತ್ತೋರ್ವ ಹುಡುಗಿಯ ಜೊತೆ ಒಡನಾಟ ಇರುವ ವಿಷಯ ತಿಳಿಯುತ್ತಿದ್ದಂತೆಯೇ ಆ ಹುಡುಗಿಯೊಂದಿಗೆ ಲಕ್ಷ್ಮಿ ಜಗಳ ಕೂಡ ಆಡಿದ್ದರು. ನಂತರ ಲಕ್ಷ್ಮಿಯೊಂದಿಗೆ ರಾಹುಲ್ ಕೂಡ ಸಾಕಷ್ಟು ಬಾರಿ ಜಗಳ ಮಾಡಿದ್ದಾರಂತೆ. ಜೊತೆಗೆ ಹಲ್ಲೆ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ನಿ ಮಾನಸಿಕವಾಗಿ ಸರಿ ಇಲ್ಲವೆಂದು ಹೇಳಿಕೊಂಡಿದ್ದರಂತೆ. ಈ ಎಲ್ಲ ಕಾರಣದಿಂದಾಗಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

    ದೂರು ದಾಖಲಾಗುತ್ತಿದ್ದಂತೆಯೇ ನಟ ನಾಪತ್ತೆ ಆಗಿದ್ದಾರೆ ಎನ್ನುವುದು ಸದ್ಯಕ್ಕಿರೋ ಮಾಹಿತಿ. ಬಂಧನದ ಭೀತಿಯ ಕಾರಣದಿಂದಾಗಿ ಅವರು ಊರು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ನಟನಿಗಾಗಿ ಹುಡುಕಾಟ ನಡೆಸಿದ್ದಾರೆ.

  • 55 ವರ್ಷದ ವ್ಯಕ್ತಿಯಿಂದ 3ರ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ!

    55 ವರ್ಷದ ವ್ಯಕ್ತಿಯಿಂದ 3ರ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಮಂಡ್ಯ: 55 ವರ್ಷದ ವ್ಯಕ್ತಿಯೊಬ್ಬ 3 ವರ್ಷದ ಕಂದಮ್ಮನ (Child) ಮೇಲೆ ಅತ್ಯಾಚಾರಕ್ಕೆ (Rape) ಯತ್ನಿಸಿರುವ ಹೇಯ ಘಟನೆ ಮಂಡ್ಯ (Mandya) ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ಶಿವಣ್ಣ (55) ಅತ್ಯಾಚಾರಕ್ಕೆ ಯತ್ನಿಸಿದಾತ. ಆಟವಾಡುತ್ತಿದ್ದ ಪಕ್ಕದ ಮನೆಯ ಮಗುವನ್ನು ಶಿವಣ್ಣ ತನ್ನ ಮನೆಗೆ ಕರೆದೊಯ್ದು ವಿವಸ್ತçಗೊಳಿಸಿದ್ದ. ಈ ವೇಳೆ ಮಗು ಅಳುವ ಶಬ್ದ ಕೇಳಿ ಅಕ್ಕ-ಪಕ್ಕದ ನಿವಾಸಿಗಳು ಶಿವಣ್ಣ ಮನೆಯ ಬಾಗಿಲನ್ನು ಒಡೆದಿದ್ದಾರೆ. ಇದನ್ನೂ ಓದಿ: ಸಮಾಜ ಸೇವೆಗೆ ಹೆಸರಾಗಿದ್ದ ಕಾಪುವಿನ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

    ಜನರು ಮನೆಯೊಳಗೆ ಬರುತ್ತಿದ್ದಂತೆ ಆರೋಪಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ವೈಫ್ ಸ್ವಾಪ್ ಸದ್ದು – ಪತಿ ವಿರುದ್ಧ ಪೊಲೀಸರ ಮೊರೆ ಹೋದ ಪತ್ನಿ

  • ರಾಜಭವನಕ್ಕೆ ಬಾಂಬ್‌ ಬೆದರಿಕೆ ಹಾಕಿದವ ಅರೆಸ್ಟ್‌

    ರಾಜಭವನಕ್ಕೆ ಬಾಂಬ್‌ ಬೆದರಿಕೆ ಹಾಕಿದವ ಅರೆಸ್ಟ್‌

    ಬೆಂಗಳೂರು: ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ (Bomb Threat Call to Rajbhavan) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಭಾಸ್ಕರ್ ಎಂದು ಗುರುತಿಸಿದ್ದು, ಈತ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ವಡ್ಡಹಳ್ಳಿಯ ನಿವಾಸಿ. ಇತ್ತೀಚೆಗೆ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದ ಸುದ್ದಿಯನ್ನು ಭಾಸ್ಕರ್ ತಿಳಿದುಕೊಂಡಿದ್ದ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದ ಬಗ್ಗೆಯೂ ತಿಳಿದುಕೊಂಡಿದ್ದ. ಇದನ್ನೂ ಓದಿ: ನಿರುದ್ಯೋಗ ಯುವಕ-ಯುವತಿಯರಿಗೆ ಗುಡ್‌ನ್ಯೂಸ್ – ಡಿ.21ರಿಂದ `ಯುವ ನಿಧಿ’ಗೆ ನೋಂದಣಿ

    ಸೋಮವಾರ ಊರಿನಿಂದ ಬೆಂಗಳೂರಿಗೆ ಬಂದಿದ್ದ ಈತ ಬೆಂಗಳೂರು ಪೊಲೀಸರನ್ನು ಮತ್ತೆ ಆಟವಾಡಿಸಬೇಕು ಎಂದು ನಿರ್ಧರಿಸಿದ್ದ. ಇದಕ್ಕಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿ ಎನ್ಐಎ ನಂಬರ್ ಪಡೆದುಕೊಂಡಿದ್ದ. ನಂತರ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ. ಕರೆ ಕಟ್ ಮಾಡಿ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದ.

    ಇತ್ತ ಬೆದರಿಕೆ ಕರೆಯಿಂದ ಗಾಬರಿಯಾದ ಎನ್ಐಎ (NIA) ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ ಪೊಲೀಸರು ಬಾಂಬ್ ಬೆದರಿಕೆ ಕರೆ ನಂತರ ಕರೆ ಬಂದ ನೆಟ್ವರ್ಕ್ ಟ್ರ್ಯಾಕ್ ಮಾಡುತ್ತಿದ್ದರು. ಆದರೆ ಆರೋಪಿ ಬೆಂಗಳೂರಿನಿಂದ ನೇರವಾಗಿ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ತೆರಳಿದ್ದ. ಅಂತೆಯೇ ಚಿತ್ತೂರಿನಿಂದ ತನ್ನೂರಿಗೆ ವಾಪಸ್ ಆಗುವಾಗ ಭಾಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ವಿಧಾನಸೌಧ ಠಾಣೆ ಪೊಲೀಸರು ಭಾಸ್ಕರ್ ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

  • 142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಂಶುಪಾಲ ಅರೆಸ್ಟ್

    142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಂಶುಪಾಲ ಅರೆಸ್ಟ್

    ಚಂಡೀಗಢ: ಬರೋಬ್ಬರಿ 142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

    ಈ ಘಟನೆ ಹರಿಯಾಣದ (Hariyana) ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಿನ್ಸಿಪಲ್ ಮೇಲೆ ಈ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಆರಂಭದಲ್ಲಿ 60 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ (Sexual Harassment) ಆರೋಪ ಹೊರಿಸಿದ್ದರು. ಆದರೆ ಇದೀಗ ಅದರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

    ಆರೋಪವೇನು..?: 55 ವರ್ಷದ ಪ್ರಾಂಶುಪಾಲರು ಮೊದಲು ನಮ್ಮನ್ನು ಆಫೀಸಿಗೆ ಕರೆಯುತ್ತಾರೆ. ಬಳಿಕ ತಮ್ಮ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಾರೆ ಎಂದು ಸಂತ್ರಸ್ತೆಯರು ದೂರಿರುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ: ಅನುರಾಗ್‌ ಠಾಕೂರ್‌

    ಹರಿಯಾಣ ಪೊಲೀಸರು ನವೆಂಬರ್ 6 ರಂದು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಹರಿಯಾಣ ರಾಜ್ಯ ಮಹಿಳಾ ಆಯೋಗವು ಪೊಲೀಸರಿಗೆ ಅಲ್ಟಿಮೇಟಮ್ ನಂತರ ಬಂಧನ ನಡೆದಿದೆ. ಜಿಂದ್ ಜಿಲ್ಲಾಧಿಕಾರಿ ಪ್ರಕರಣವನ್ನು ಖಚಿತಪಡಿಸಿದ್ದಾರೆ. ಈ ಕುರಿತು ವಿವಿಧ ಇಲಾಖೆಗಳಿಂದ ತನಿಖೆ ನಡೆಯುತ್ತಿದೆ.

    ಶಾಲೆಯ ಕೆಲವು ವಿದ್ಯಾರ್ಥಿನಿಯರಿಂದ ಪ್ರಾಥಮಿಕ ದೂರನ್ನು ಹರಿಯಾಣ ರಾಜ್ಯ ಮಹಿಳಾ ಆಯೋಗವು ಸೆಪ್ಟೆಂಬರ್ 14 ರಂದು ಪೊಲೀಸರಿಗೆ ರವಾನಿಸಿತು ಆದರೆ ಅಕ್ಟೋಬರ್ 30 ರಂದು ಮಾತ್ರ ಕ್ರಮ ತೆಗೆದುಕೊಳ್ಳಲಾಯಿತು. ನಂತರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಲಾಗಿತ್ತು. ಶಿಕ್ಷಣ ಇಲಾಖೆ ಆರೋಪಿಯನ್ನು ಅಕ್ಟೋಬರ್ 27 ರಂದು ಅಮಾನತುಗೊಳಿಸಿದೆ.

  • ಕನಕಪುರ ಪೊಲೀಸರ ಕಾರ್ಯಾಚರಣೆ – ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

    ಕನಕಪುರ ಪೊಲೀಸರ ಕಾರ್ಯಾಚರಣೆ – ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ

    ರಾಮನಗರ: ಕನಕಪುರ (Kanakapura)  ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಮನೆಗಳ್ಳರನ್ನು (Thief) ಬಂಧಿಸಿ 17 ಲಕ್ಷ ಮೌಲ್ಯದ 290 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ, ಕನಕಪುರ ತಾಲೂಕಿನ ಬಸವೇಶ್ವರ ನಗರದ ನಿವಾಸಿ ವನಿತಾ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕನಕಪುರ ಪೊಲೀಸ್ ಠಾಣೆಯಲ್ಲಿ ಮನೆ ಒಡತಿ ವನಿತಾ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಕನಕಪುರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಐಎನ್‌ಎಸ್ ಗರುಡ ರನ್‌ವೇಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಪತನ – ಓರ್ವ ಸಿಬ್ಬಂದಿ ಸಾವು

    ಶಿವಮೊಗ್ಗ ಮೂಲದ ಜಾವೀದ್ ಅಲಿ ಹಾಗೂ ಬೆಂಗಳೂರು ಮೂಲದ ಮೀರ್ ಹುಸೇನ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 290 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮುಕೇಶ್ ಅಂಬಾನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್