Tag: arrest

  • ಮುಂಜಾನೆ ಪತ್ನಿಯ ಕೊಂದು ಮಕ್ಕಳನ್ನ ಕರ್ಕೊಂಡು ಪತಿ ಎಸ್ಕೇಪ್

    ಮುಂಜಾನೆ ಪತ್ನಿಯ ಕೊಂದು ಮಕ್ಕಳನ್ನ ಕರ್ಕೊಂಡು ಪತಿ ಎಸ್ಕೇಪ್

    – ತನ್ನ ಮನೆಯಲ್ಲಿ ಮಕ್ಕಳನ್ನ ಬಿಟ್ಟು ಪರಾರಿ
    – ಸ್ನೇಹಿತನ ಮನೆಯಲ್ಲಿ ಸಿಕ್ಕಿಬಿದ್ದ

    ತಿರುವನಂತಪುರಂ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿ ಪತಿಯನ್ನು ಕೇರಳದ ತ್ರಿಶೂರ್ ಜಿಲ್ಲೆಯ ಪುಥಾಂಚಿರಾದಲ್ಲಿ ಬಂಧಿಸಲಾಗಿದೆ.

    ರಹಮತ್ (30) ಮೃತ ಪತ್ನಿ. ಆರೋಪಿಯನ್ನು ಶಮ್ಜಾದ್ ಎಂದು ಗುರುತಿಸಲಾಗಿದೆ. ಎರ್ನಾಕುಲಂ ಜಿಲ್ಲೆಯ ವಡಕ್ಕೇಕರ ಮೂಲದ ಆರೋಪಿ ಶಮ್ಜಾದ್ ತನ್ನ ಮನೆಯಲ್ಲಿ ಪತ್ನಿಯನ್ನು ಕೊಂದಿದ್ದನು. ಕೆಲವು ಕುಟುಂಬ ಸಮಸ್ಯೆಗಳೇ ಕೊಲೆಗೆ ಕಾರಣವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

    ಕೊಲೆಯ ನಂತರ ಆರೋಪಿ ಶಮ್ಜಾದ್ ತನ್ನ 9 ಮತ್ತು 3 ವರ್ಷದ ಇಬ್ಬರು ಮಕ್ಕಳೊಂದಿಗೆ ವಡಕ್ಕೇಕರದಲ್ಲಿರುವ ತನ್ನ ಮನೆಗೆ ಹೋಗಿದ್ದನು. ಅಲ್ಲಿ ತನ್ನ ಮಕ್ಕಳನ್ನು ಮನೆಯಲ್ಲಿರಿಸಿ ತಕ್ಷಣ ಅಲ್ಲಿಂದ ಪರಾರಿಯಾಗಿದ್ದನು. ಇತ್ತ ಅವನ ನಡವಳಿಕೆಯಿಂದ ನೆರೆಹೊರೆಯವರಿಗೆ ಅನುಮಾನ ಬಂದಿದೆ. ತಕ್ಷಣ ಅವರು ರಹಮತ್ ಮನೆಯವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಅವರು ಮನೆಯೊಳಗೆ ಹೋಗಿ ನೋಡುವಷ್ಟರಲ್ಲಿ ರಹಮತ್ ಮೃತಪಟ್ಟಿದ್ದಳು.

    ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಎರ್ನಾಕುಲಂನ ಸ್ನೇಹಿತನ ಮನೆಯಲ್ಲಿ ಆರೋಪಿ ಶಮ್ಜಾದ್‍ನನ್ನು ಪೊಲೀಸ್ ಬಂಧಿಸಿದ್ದಾರೆ. ಶಮ್ಜಾದ್ 10 ವರ್ಷಗಳಿಂದ ವಿದೇಶದಲ್ಲಿದ್ದನು. ಆದರೆ ಇತ್ತೀಚೆಗೆ ಭಾರತಕ್ಕೆ ವಾಪಸ್ ಬಂದು ಮೀನು ಮಾರಾಟ ವ್ಯವಹಾರವನ್ನು ಪ್ರಾರಂಭಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದೇವೆ. ಮರಣೋತ್ತರ ವರದಿಯ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ. ಆದರೆ ಪ್ರಾಥಮಿಕ ತನಿಖೆಯ ಪ್ರಕಾರ, ರಹಮತ್‍ನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಮರ್ಯಾದಾ ಹತ್ಯೆ – ಕಿಡ್ನಾಪ್ ಮಾಡಿ 4 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವಕನ ಹತ್ಯೆ

    ಮರ್ಯಾದಾ ಹತ್ಯೆ – ಕಿಡ್ನಾಪ್ ಮಾಡಿ 4 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವಕನ ಹತ್ಯೆ

    – ಹುಡುಗನ ಮನೆಯಿಂದ್ಲೇ ದಂಪತಿಯ ಅಪಹರಣ

    ಹೈದರಾಬಾದ್: ನಗರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ನವವಿವಾಹಿತನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಕೊಲೆ ಮಾಡಲಾಗಿದೆ.

    ಮೃತನನ್ನು ಹೇಮಂತ್ ಕುಮಾರ್ ಎಂದು ಗುರುತಿಸಲಾಗಿದೆ. ಚಂದನಗರದಲ್ಲಿರುವ ತನ್ನ ಮನೆಯಿಂದ ಹೇಮಂತ್ ಕುಮಾರ್‌ನನ್ನು ಅಪಹರಿಸಲಾಗಿತ್ತು. ಆದರೆ ಗುರುವಾರ ತಡರಾತ್ರಿ ಸಂಗರೆಡ್ಡಿ ಜಿಲ್ಲೆಯಲ್ಲಿ ಆತನ ಶವವನ್ನು ಪತ್ತೆ ಮಾಡಲಾಗಿದೆ. ಹೇಮಂತ್ ಮತ್ತು ಅವಂತಿ ಇಬ್ಬರು ಪರಸ್ಪರ ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಹೀಗಾಗಿ ಹತ್ಯೆಯ ಹಿಂದೆ ಅವಂತಿಯ ಕುಟುಂಬವಿದೆ ಅಂತ ತಿಳಿದುಬಂದಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.

    ಅವಂತಿಯ ಸೋದರ ಮಾವ ಯುಗಂದರ್ ರೆಡ್ಡಿ ಮತ್ತು ಇತರ ಇಬ್ಬರು ಹೇಮಂತ್‍ನನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಕೊಲೆಯ ಹಿಂದೆ ಆಕೆಯ ಮಾವ ಯುಗಂದರ್ ರೆಡ್ಡಿ ಪ್ರಮುಖ ಆರೋಪಿಯಾಗಿದ್ದು, ಈ ಹತ್ಯೆಯಲ್ಲಿ ಪೋಷಕರು ಭಾಗಿಯಾಗಿದ್ದಾರೆ ಅಂತ ಅವಂತಿ ಆರೋಪಿಸಿದ್ದಾಳೆ ಎಂದು ಡಿಸಿಪಿ ಎಂ.ವೆಂಕಟೇಶ್ವರಲು ಹೇಳಿದರು.

    ಏನಿದು ಪ್ರಕರಣ?
    ಹೇಮಂತ್ ಮತ್ತು ಅವಂತಿ ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಜೋಡಿ 2020ರ ಜೂನ್‍ನಲ್ಲಿ ಕುತ್ಬುಲ್ಲಾಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಹೇಮಂತ್ ಪದವಿ ಮುಗಿಸಿದ್ದರೆ, ಅವಂತಿ ಎಂಜಿನಿಯರಿಂಗ್ ಮುಗಿಸಿದ್ದಳು. ಮದುವೆಯಾದ ನಂತರ ಹೇಮಂತ್ ಮತ್ತು ಅವಂತಿ ನಗರದ ಚಂದನಗರದಲ್ಲಿ ವಾಸವಾಗಿದ್ದರು. ಗುರುವಾರ ಮಧ್ಯಾಹ್ನ ಹೇಮಂತ್ ತನ್ನ ತಂದೆ ಮುರಳಿ ಕೃಷ್ಣಗೆ ಫೋನ್ ಮಾಡಿ ಅವಂತಿಯ ಕುಟುಂಬದವರು ನಮ್ಮ ಮನೆಗೆ ಬಂದಿದ್ದಾರೆ ಎಂದು ತಿಳಿಸಿದ್ದನು.

    ರಾಜಿ ಮಾಡಿಕೊಳ್ಳಲು ಬಂದಿರಬಹುದೆಂದು ಭಾವಿಸಿ ಎಂದು ಮನೆಯ ಬಳಿ ಹೋದೆ. ಆದರೆ ನಾನು ಮನೆಗೆ ತಲುಪಿದಾಗ ಕುಟುಂಬದವರು ಹೇಮಂತ್ ಮತ್ತು ಅವಂತಿಯನ್ನು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗುವುದನ್ನು ನೋಡಿದೆ. ಸಹಾಯಕ್ಕಾಗಿ ಹೇಮಂತ್ ಕೂಗುತ್ತಿರುವುದನ್ನು ಕೇಳಿ ತಕ್ಷಣ ತನ್ನ ಸ್ಕೂಟರ್‌ನಲ್ಲಿ ಕಾರನ್ನು ಹಿಂಬಾಲಿಸಿದೆ ಎಂದು ಹೇಮಂತ್ ತಂದೆ ಮುರಳಿ ಕೃಷ್ಣ ಹೇಳಿದ್ದಾರೆ.

    ಕಾರು ಗೋಪನ್ಪಲ್ಲಿ ತಾಂಡಾ ತಲುಪಿದಾಗ ಇಬ್ಬರು ವಾಹನದಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವಂತಿ ತಪ್ಪಿಸಿಕೊಂಡಿದ್ದಾಳೆ. ಆದರೆ ಹೇಮಂತ್‍ನನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಮುರಳಿ ಕೃಷ್ಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಡಿದ್ದಾರೆ. ಆದರೆ ಅವಂತಿ ಪೊಲೀಸರು ಸ್ಪಂದಿಸುವಲ್ಲಿ ವಿಳಂಬವಾಗಿದೆ ಎಂದಿದ್ದಾಳೆ. ನಾವು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ತಕ್ಷಣ ಪ್ರತಿಕ್ರಿಯಿಸಿದ್ದರೆ ಇಂದು ನಾನು ನನ್ನ ಪತಿಯನ್ನು ಕಳೆದುಕೊಳ್ಳುತ್ತಿರಲಿಲ್ಲ” ಎಂದು ಕಣ್ಣೀರು ಹಾಕಿದ್ದಾಳೆ.

    ನನ್ನ ತಂದೆ ಲಕ್ಷ್ಮ ರೆಡ್ಡಿ ನಮ್ಮ ಕುಟುಂಬದವರ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಕುಟುಂಬದ ದಾಖಲೆಗಳಿಗೆ ಸಹಿ ಕೂಡ ಮಾಡಿಸಿಕೊಂಡಿದ್ದರು. ನೀನು ನಮ್ಮ ಕುಟುಂಬದ ಯಾವುದೇ ಆಸ್ತಿಯ ಮೇಲೆ ಹಕ್ಕನ್ನು ಹೊಂದಿಲ್ಲ ಎಂದು ಹೇಳಿರುವುದಾಗಿ ಅವಂತಿ ತಿಳಿಸಿದ್ದಾಳೆ.

    ಆಸ್ತಿಗಳಿಗಾಗಿ ನಾವು ಕೂನೂನಿನ ಮೂಲಕ ಹೋರಾಡುತ್ತೇವೆ ಎಂದು ಅವರು ಭಾವಿಸಿರಬೇಕು. ಯಾಕೆಂದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಪೋಷಕರ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಹಕ್ಕಿದೆ ಎಂದು ಆದೇಶ ಹೊರಡಿಸಿದೆ. ಆದರೆ ಅವರು ನನ್ನ ಮಗನನ್ನು ಕೊಂದಿದ್ದಾರೆ. ಅದು ಆಸ್ತಿಗೆ ಸಮವಾಗುವುದಿಲ್ಲ ಎಂದು ಹೇಮಂತ್ ತಂದೆ ಕಣ್ಣೀರು ಹಾಕಿದರು.

    ನಾವು ಅವರ ಸ್ಪಂದನೆಗೆ ಪ್ರತಿಕ್ರಿಯೆ ನೀಡಲು ಯಾವುದೇ ವಿಳಂಬ ಮಾಡಿಲ್ಲ. ಶಂಕಿತರನ್ನು ತಕ್ಷಣವೇ ಬಂಧಿಸಲಾಯಿತು. ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ಹೇಮಂತ್ ಶವವನ್ನು ಸಂಗರೆಡ್ಡಿ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಇನ್ಸ್‌ಪೆಕ್ಟರ್ ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಪತ್ನಿ, ನಾದಿನಿಯನ್ನ ಕೊಂದು ಮೃತದೇಹಗಳ ಜೊತೆ ಸೆಕ್ಸ್

    ಪತ್ನಿ, ನಾದಿನಿಯನ್ನ ಕೊಂದು ಮೃತದೇಹಗಳ ಜೊತೆ ಸೆಕ್ಸ್

    – ಅತ್ತೆಯನ್ನೂ ಬಿಡದ 27ರ ಕಾಮುಕ
    – 3 ದಿನ ವಿಭಿನ್ನ ಸ್ಥಳದಲ್ಲಿ ಮೂವರ ಶವ ಪತ್ತೆ

    ಚಂಡೀಗಢ: 27 ವರ್ಷದ ಕಾಮುಕನೊಬ್ಬ ತನ್ನ ಹೆಂಡತಿ, ನಾದಿನಿ ಮತ್ತು ಅತ್ತೆ ಮೂವರನ್ನು ಕೊಲೆ ಮಾಡಿದ್ದಾನೆ. ನಂತರ ಅವರ ಮೃತದೇಹಗಳ ಜೊತೆ ಸೆಕ್ಸ್ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ.

    ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ತ್ರಿವಳಿ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಸೆಪ್ಟೆಂಬರ್ 6 ರಂದು ಜಿಲ್ಲೆಯ ಸಮಲ್ಖ ಪಟ್ಟಣದಲ್ಲಿ ಈ ಕೊಲೆ ನಡೆದಿದೆ. ಆರೋಪಿಯನ್ನು ನೂರ್ ಹಸನ್ (27) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಆರೋಪಿ ಶವಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

    ಮೂವರು ಮೃತದೇಹಗಳು ಸೆಪ್ಟೆಂಬರ್ 6, 7 ಮತ್ತು 8 ರಂದು ಮೂರು ವಿಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿದ್ದವು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ಸೆಪ್ಟೆಂಬರ್ 11 ರಂದು ಪಾಣಿಪತ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅಡಿಯಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.

    ಆರೋಪಿ ಸೆಪ್ಟೆಂಬರ್ 5 ರಂದು ಮೊದಲು ತನ್ನ ಹೆಂಡತಿ ಮತ್ತು ನಾದಿನಿಯನ್ನು ಕೊಲೆ ಮಾಡಿದ್ದಾನೆ. ನಂತರ ಅವರ ದೇಹಗಳನ್ನು ಬೇರೆ ಬೇರೆ ಸ್ಥಳಗಳಿಗೆ ಎಸೆದಿದ್ದಾನೆ. ಸೆಪ್ಟೆಂಬರ್ 8 ರಂದು ಬರ್ಷಮ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಗುರುತನ್ನು ಪತ್ತೆ ಮಾಡಬಾರದೆಂದು ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

    ಆರೋಪಿ ನೂರ್ ಹಸನ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಮಲ್ಖ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟಿದ್ದ. ಅಲ್ಲದೇ ತನ್ನ ಸಂಬಂಧಕ್ಕೆ ಅತ್ತೆಯ ಮನೆಯವರ ಬೆಂಬಲ ಪಡೆಯುತ್ತಿದ್ದಾಳೆ ಎಂದು ಶಂಕಿಸಿ ಈ ಕೊಲೆಗಳನ್ನು ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ವಿಚಾರಣೆ ವೇಳೆ ಮೂವರು ಮಹಿಳೆಯರನ್ನು ಕೊಂದು ಅವರ ಶವಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗೋದಾಮಿನಲ್ಲಿ ಬಳಸಿದ್ದ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾಂಡೋಮ್ ವಶ

    ಗೋದಾಮಿನಲ್ಲಿ ಬಳಸಿದ್ದ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾಂಡೋಮ್ ವಶ

    – ಮರು ತಯಾರಿಕೆಗಾಗಿ ದಿನಗೂಲಿ ಕಾರ್ಮಿಕರ ನೇಮಕ
    – ಮಾಹಿತಿ ಮೇರೆಗೆ ದಾಳಿ, ಮಾಲಕಿ ಅರೆಸ್ಟ್

    ಹನೋಯಿ: ಉಪಯೋಗಿಸಿ ಬಿಸಾಡಿದ್ದ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಕಾಂಡೋಮ್‍ಗಳನ್ನು ಮರುಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ವಿಯೆಟ್ನಾ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೇ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಮರುಬಳಕೆ ಮಾಡಲಾಗುತ್ತಿದ್ದ 3,24,000 ಉಪಯೋಗಿಸಿದ ಕಾಂಡೋಮ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲಿಗೆ ಉಪಯೋಗಿಸಿದ್ದ ಕಾಂಡೋಮ್‍ಗಳನ್ನು ಸಂಗ್ರಹಿಸಿ ರಾಸಾಯನಿಕಯುಕ್ತ ನೀರಿನಿಂದ ಶುಚಿಗೊಳಿಸಲಾಗುತ್ತಿತ್ತು. ನಂತರ ಅದನ್ನು ಮರದ ಕೋಲಿನಿಂದ ಮರು ರೂಪಿಸಲಾಗುತ್ತಿತ್ತು. ಈ ಕೆಲಸವನ್ನು ಮಾಡಲು ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.

    ಇದು ದಕ್ಷಿಣ ವಿಯೆಟ್ನಾಂನ ಭಾಗದಲ್ಲಿರುವ ಬಿನ್ಹ್ ಡುವಾಂಗ್ ಪ್ರಾಂತ್ಯದ ಗೋದಾಮಿನಲ್ಲಿ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಆಗ ಬಳಸಿದ ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮರು ಪ್ಯಾಕೇಜ್ ಮಾಡಿ ಸುರಕ್ಷಿತವಲ್ಲದ ಕಾಂಡೋಮ್‍ಗಳನ್ನು ಮತ್ತೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು. ಈಗಾಗಲೇ ಸಾವಿರಾರು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಗೋದಾಮಿನ ಮಾಲಕಿ ಫಾಮ್ ಥಿ ಥನ್ ನ್ಗೋಕ್ (33)ಳನ್ನು ಪೊಲೀಸರು ಬಂಧಿಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಒಂದು ತಿಂಗಳ ಹಿಂದೆ ಕಾಂಡೋಮ್ ಸ್ವೀಕರಿಸಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಕಾಂಡೋಮ್‍ಗಳನ್ನು ಸಾಕ್ಷಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಆದರೆ ಅವುಗಳನ್ನು ಅಪಾಯಕಾರಿ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಲಾಗಿರುವುದರಿಂದ ತಕ್ಷಣ ವಿಲೇವಾರಿ ಮಾಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈಗಾಗಲೇ ಎಷ್ಟು ಕಾಂಡೋಮ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದಿಲ್ಲ. ಆದರೆ ಪೊಲೀಸರು 360 ಕೆ.ಜಿ. ಕಾಂಡೋಮ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಗೋದಾಮಿನ ಸಮೀಪವಿರುವ ಹೋಟೆಲ್‍ಗಳು ಮತ್ತು ಮಾರುಕಟ್ಟೆ ಮಳಿಗೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯ ವರದಿಗಳು ಹೇಳಿವೆ.

  • ರಿಮ್ಸ್ ಆಸ್ಪತ್ರೆ ಮುಂದೆ ಬೈಕ್ ಕದಿಯುತ್ತಿದ್ದ ಇಬ್ಬರು ಅರೆಸ್ಟ್

    ರಿಮ್ಸ್ ಆಸ್ಪತ್ರೆ ಮುಂದೆ ಬೈಕ್ ಕದಿಯುತ್ತಿದ್ದ ಇಬ್ಬರು ಅರೆಸ್ಟ್

    – 5 ಲಕ್ಷ ಮೌಲ್ಯದ 17 ಬೈಕ್ ಜಪ್ತಿ

    ರಾಯಚೂರು: ಜಿಲ್ಲಾ ಪೊಲೀಸರಿಗೆ ತಲೆನೋವಾಗಿದ್ದ ರಿಮ್ಸ್ ಆಸ್ಪತ್ರೆ ಮುಂದೆ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 17 ಬೈಕ್ ಜಪ್ತಿಯಾಗಿದ್ದು, ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

    ರಾಮು, ಬಸವರಾಜ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 5,02,000 ಮೌಲ್ಯದ ಒಟ್ಟು 17 ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಿಮ್ಸ್ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಬೈಕುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಅದರಲ್ಲೂ ಹೀರೋ ಹೊಂಡಾ ಕಂಪನಿಯ ಬೈಕ್‍ಗಳನ್ನೇ ಈ ಖದೀಮರು ಹೊಂಚು ಹಾಕಿ ಕದ್ದಿದ್ದಾರೆ. ಆರೋಪಿಗಳಿಬ್ಬರು ಆರ್.ಟಿ.ಪಿ.ಎಸ್ ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

    ರಾಯಚೂರಿನಲ್ಲಿ ಕಳ್ಳತನ ಮಾಡಿದ ಬೈಕ್‍ಗಳನ್ನು ಲಿಂಗಸುಗೂರು, ಸಿಂಧನೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಳ್ಳರು ಬೇರೆಲ್ಲೂ ಕೈಚಳಕ ತೋರಿಲ್ಲ. ಕೇವಲ ರಿಮ್ಸ್ ಆಸ್ಪತ್ರೆ ಪಾರ್ಕಿಂಗ್ ಸ್ಥಳವನ್ನೇ ಟಾರ್ಗೆಟ್ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

  • ಜೋಡಿಗಳೇ ಟಾರ್ಗೆಟ್ – 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ

    ಜೋಡಿಗಳೇ ಟಾರ್ಗೆಟ್ – 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ

    – ಪೊಲೀಸ್ ರೀತಿ ಪೋಸ್ ಕೊಡುತ್ತಿದ್ದ ಲಾರಿ ಮಾಲೀಕ
    – ಮೊಬೈಲಿನಲ್ಲಿ ಅನೇಕ ಮಹಿಳೆಯರ ಫೋಟೋ, ವಿಡಿಯೋ

    ಚೆನ್ನೈ: 35 ವರ್ಷದ ಲಾರಿ ಮಾಲೀಕನೊಬ್ಬ ಪೊಲೀಸ್ ಅಧಿಕಾರಿ ರೀತಿ ಪೋಸ್ ನೀಡುತ್ತಾ ಸುಮಾರು 40ಕ್ಕೂ ಹೆಚ್ಚು ಮಹಿಳೆಯರನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಇತ್ತೀಚೆಗೆ ಮಹಿಳೆಯೊಬ್ಬರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಪಿಚೈಮಾನಿ ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಪಿಚೈಮಾನಿ ಬ್ಲ್ಯಾಕ್‍ಮೇಲ್ ಮೂಲಕವೇ 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದರಲ್ಲೂ ಪುಜ್ಹಲ್ ಮತ್ತು ರೆಡ್ ಹಿಲ್ಸ್ ಪ್ರದೇಶ ಮಹಿಳೆಯರನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಬಂಧಿತ ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಹಲವಾರು ವಿಡಿಯೋಗಳು ಮತ್ತು ಮಹಿಳೆಯರ ಫೋಟೋಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ.

    ಇತ್ತೀಚೆಗೆ ಮಹಿಳೆಯೊಬ್ಬರು ಪುಜ್ಹಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನನ್ನ ಗೆಳೆಯನೊಂದಿಗೆ ಇರುವಾಗ ನನ್ನ ಮೊಬೈಲ್ ಫೋನ್ ಮತ್ತು 15 ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಈ ಕುರಿತು ದೂರು ದಾಖಲಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

    ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆಯ ಗೆಳೆಯನನ್ನು ಗುರುತಿಸಲಾಗಿದ್ದು, ಆತ ಮಹಿಳೆಯನ್ನು ಸ್ಥಳದಲ್ಲೇ ಬಿಟ್ಟು ವೇಗವಾಗಿ ಹೋಗುವುದು ಸೆರೆಯಾಗಿದೆ. ಆಗ ಪೊಲೀಸರು ಅನುಮಾನದ ಮೇರೆಗೆ ಮಹಿಳೆಯನ್ನು ವಿಚಾರಿಸಿದ್ದಾರೆ. ಆಗ ಮಹಿಳೆ ನಡೆದ ವಿಚಾರವನ್ನು ಪೊಲೀಸರ ಮುಂದೆ ಹೇಳಿದ್ದಾರೆ. ಆರೋಪಿ ಗೆಳೆಯನೊಂದಿಗಿರುವ ಖಾಸಗಿ ಫೋಟೋಗಳನ್ನು ತೋರಿಸಿ ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದನು. ಅಲ್ಲಿ ಆರೋಪಿ ನನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಅದಕ್ಕೂ ಮೊದಲು ಆರೋಪಿ ನನ್ನ ಫೋನ್ ಮತ್ತು ವಸ್ತುಗಳನ್ನು ಕಸಿದುಕೊಂಡಿದ್ದಾನೆ ಎಂದು ಮಹಿಳೆ ಪೊಲೀಸರು ಮುಂದೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.

    ಎರಡು ದಿನಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅನೇಕ ಮಹಿಳೆಯರ ಫೋಟೋವನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ನಾನು ಖಾಕಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

    ಆರೋಪಿ ರೆಡ್ ಹಿಲ್ಸ್ ಪ್ರದೇಶಗಳಲ್ಲಿ ವಾಕಿಂಗ್ ಬರುವ ಜೋಡಿಗಳನ್ನೇ ಗುರಿಸಿಯಾಗಿಸಿಕೊಂಡಿದ್ದನು. ಜೋಡಿ ಒಟ್ಟಿಗಿರುವ ಫೋಟೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ನಂತರ ಅವರನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

  • 7 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವತಿ ಸಾವು – ಪೊಲೀಸ್ ಮಗ ಅರೆಸ್ಟ್

    7 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವತಿ ಸಾವು – ಪೊಲೀಸ್ ಮಗ ಅರೆಸ್ಟ್

    – ಭರವಸೆಯೊಂದಿಗೆ ಗಂಡನ ಮನೆಗೆ ಕಳುಹಿಸಿದ್ದ ಪೋಷಕರು
    – ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಭುವನೇಶ್ವರ: ವರದಕ್ಷಿಣೆಗಾಗಿ ಪತ್ನಿಯನ್ನು ಕೊಂದ ಆರೋಪದ ಮೇಲೆ ಪೇದೆಯ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ವಂದನಾ ಮೃತ ಮಹಿಳೆ. ಒಡಿಶಾದ ತಮಂಡೋ ಪೊಲೀಸ್ ಠಾಣೆಯ ಪೇದೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಜಮಿನಿಕಾಂತ್ ಗೋಚಾಯತ್ ಎಂದು ಗುರುತಿಸಲಾಗಿದೆ. ಮೃತ ವಂದನಾಳ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ವರದಕ್ಷಿಣೆಗಾಗಿ ಜಮಿನಿಕಾಂತ್ ಮತ್ತು ಆತನ ತಂದೆ ಬಿಜಯ್ ಕುಮಾರ್ ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ವರ್ಷ ಫೆಬ್ರವರಿ 16 ರಂದು ಮೃತ ವಂದನಾ ಮತ್ತು ಜಮಿನಿಕಾಂತ್ ಮದುವೆಯಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ಜಮಿನಿಕಾಂತ್, ಆತನ ತಂದೆ-ತಾಯಿ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ಮತ್ತು ಹಿಂಸೆ ನೀಡುತ್ತಿದ್ದರು ಎಂದು ವಂದನಾ ಪೋಷಕರು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 19 ಶನಿವಾರ ವಂದನಾ ಪೇದೆಯ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವಂದನಾಳ ಆರೋಗ್ಯ ಸರಿಯಿಲ್ಲ. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಜಮಿನಿಕಾಂತ್ ನಮಗೆ ಫೋನ್ ಮಾಡಿ ಹೇಳಿದ್ದನು. ಆದರೆ ಆಸ್ಪತ್ರೆಗೆ ಹೋದ ನಂತರ ನಮ್ಮ ಮಗಳು ಸಾವನ್ನಪ್ಪಿದ್ದಾಳೆ ಅಂತ ಹೇಳಿರುವುದಾಗಿ ಮೃತಳ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಅಷ್ಟೇ ಅಲ್ಲದೇ, “ನಮ್ಮ ಮಗಳ ಕುತ್ತಿಗೆಯಲ್ಲಿ ಹಗ್ಗದ ಗುರುತು ನೋಡಿದ್ದೇವೆ ಮತ್ತು ಅವಳ ದೇಹವು ನೀಲಿ ಬಣ್ಣಕ್ಕೆ ತಿರುಗಿತ್ತು. ಅವರು ನಮ್ಮ ಮಗಳನ್ನು ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ. ನಂತರ ಅನುಮಾನಬರದಂತೆ ನೇಣು ಬಿಗಿದಿದ್ದಾರೆ. ನಮ್ಮ ಮಗಳು ಈ ಹಿಂದೆಯೂ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿದ್ದಳು. ಆದರೆ ನಾವು ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆಯೊಂದಿಗೆ ಅವಳನ್ನು ಮತ್ತೆ ಪತಿಯ ಮನೆಗೆ ಕಳುಹಿಸಿದ್ದೆವು. ಆದರೆ ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.

    ಸದ್ಯಕ್ಕೆ ಪೋಷಕರು ನೀಡಿದ ದೂರಿನ ಆಧಾರದ ಮೇರೆಗೆ ಈ ಕುರಿತು ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪದ ಮೇರೆಗೆ ಪೊಲೀಸರು ಜಮಿನಿಕಾಂತ್‍ನನ್ನು ಬಂಧಿಸಿದ್ದಾರೆ.

  • ಐಪಿಎಲ್ ಬೆಟ್ಟಿಂಗ್ ದಂಧೆ – 6 ಮಂದಿ ಬಂಧನ, ಆರು ಲಕ್ಷ ವಶಕ್ಕೆ

    ಐಪಿಎಲ್ ಬೆಟ್ಟಿಂಗ್ ದಂಧೆ – 6 ಮಂದಿ ಬಂಧನ, ಆರು ಲಕ್ಷ ವಶಕ್ಕೆ

    ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಬೆಂಗಳೂರು ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.

    ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿವೆ. ಇದರ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆಗಳು ಕೂಡ ಆರಂಭವಾಗಿವೇ. ತಡರಾತ್ರಿ ಐಪಿಎಲ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ತಡರಾತ್ರಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ನಾವು ಬಂಧಿಸಿದ್ದೇವೆ. ಈ ವೇಳೆ ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಆರು ಲಕ್ಷವನ್ನು ನಾವು ವಶಕ್ಕೆ ಪಡೆದಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಬಾನಸವಾಡಿ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    ಐಪಿಎಲ್ ಕಾವು ಈಗಾಗಲೇ ಹೆಚ್ಚಾಗಿದೆ. ಕೊರೊನಾ ಕಾರಣದಿಂದ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಯುಇಗೆ ಶಿಫ್ಟ್ ಆಗಿದೆ. ಯುಎಇಯ ಮೂರು ಮೈದಾನದಲ್ಲಿ ಐಪಿಎಲ್ ನಡೆಯುತ್ತಿದೆ. ನಿನ್ನೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಿದ್ದವು, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಾಯಲ್ಸ್ ತಂಡ 16 ರನ್‍ಗಳ ಅಂತರದಲ್ಲಿ ಗೆಲುವನ್ನು ದಾಖಲಿಸಿದೆ. ಇಂದು ಕೋಲ್ಕತ್ತಾ ಮತ್ತು ಮುಂಬೈ ತಂಡ ಐಪಿಎಲ್ 5ನೇ ಪಂದ್ಯವನ್ನು ಆಡಲಿವೆ.

  • ಮಾಜಿ ಪ್ರಿಯಕರನ ಕೊಲೆಗೆ ಯುವತಿ ಯತ್ನ – ಸಾವು, ಬದುಕಿನ ಮಧ್ಯೆ ಯುವಕ ಹೋರಾಟ

    ಮಾಜಿ ಪ್ರಿಯಕರನ ಕೊಲೆಗೆ ಯುವತಿ ಯತ್ನ – ಸಾವು, ಬದುಕಿನ ಮಧ್ಯೆ ಯುವಕ ಹೋರಾಟ

    – ಪ್ರೇಮಿ, ಆತನ ಪತ್ನಿಯನ್ನ ಮನೆಗೆ ಕರೆದು ಹಲ್ಲೆ ಮಾಡಿದ್ಳು

    ಮೈಸೂರು: ತನಗೆ ಕೈ ಕೊಟ್ಟು ಬೇರೆ ಯುವತಿಯನ್ನು ಮದುವೆಯಾದ ಪ್ರಿಯಕರನ ಮೇಲೆ ಮಾಜಿ ಪ್ರಿಯತಮೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಇದೀಗ ಯುವಕ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾನೆ.

    ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಮೇಶ್ ಹಲ್ಲೆಗೊಳಗಾದ ಯುವಕ. ಉಮೇಶ್‍ನ ಮಾಜಿ ಪ್ರಿಯತಮೆ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಇದೀಗ ಐವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಏನಿದು ಪ್ರಕರಣ?
    ಮೈಸೂರು ಮೂಲದ ಉಮೇಶ್ ನಾಲ್ಕೈದು ವರ್ಷಗಳಿಂದ ಬೆಂಗಳೂರು ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಇವರ ಸಂಬಂಧ ಮುರಿದು ಹೋಗಿ ಇಬ್ಬರು ಪ್ರತ್ಯೇಕವಾಗಿದ್ದರು. ಆಗಸ್ಟ್ 31ರಂದು ಉಮೇಶ್ ಬೆಂಗಳೂರು ಮೂಲದ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದನು. ಇದರಿಂದ ರೊಚ್ಚಿಗೆದ್ದ ಪ್ರಿಯತಮೆ ಬೆಂಗಳೂರಿನಲ್ಲಿ ತನ್ನ ಮನೆಗೆ ಮಾಜಿ ಪ್ರೇಮಿ ಉಮೇಶ್ ಮತ್ತು ಆತನ ಪತ್ನಿಯನ್ನು ಕರೆದಿದ್ದಳು.

    ಇತ್ತ ಉಮೇಶ್ ಮಾಜಿ ಪ್ರಿಯತಮೆ ಮನೆಗೆ ಕರೆದಳು ಅಂತ ಪತ್ನಿಯನ್ನು ಕರೆದುಕೊಂಡು ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲಿ ಪ್ರಿಯತಮೆ ತನ್ನ ಮಾಜಿ ಪ್ರಿಯಕರ ಉಮೇಶ್ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ದೊಡ್ಡ ಜಗಳವೇ ನಡೆದಿತ್ತು. ಈಕೆ ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದೇ ವಿಚಾರದಲ್ಲಿ ಉಮೇಶ್ ಮತ್ತು ಯುವತಿಯ ನಡುವೆ ಹಲವು ಬಾರಿ ಜಗಳವಾಗಿದೆ.

    ಇತ್ತೀಚೆಗೆ ಇದೇ ವಿಚಾರ ಮಾತಾಡಲು ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿಗೆ ಉಮೇಶ್‍ನನ್ನು ಕರೆಸಿದ ಯುವತಿ ತನ್ನ ಸ್ನೇಹಿತರ ಜೊತೆಗೂಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನೆ ಸಂಬಂಧ ಯುವತಿ ಹಾಗೂ ಆಕೆಯ ಜೊತೆಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಉಮೇಶ್ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ.

  • ಹಲ್ಲೆ ಮಾಡಿ, ಕಿರುಕುಳ ನೀಡುತ್ತಿದ್ದಾನೆ – ಗಂಡನ ವಿರುದ್ಧ ಪೂನಂ ಪಾಂಡೆ ದೂರು

    ಹಲ್ಲೆ ಮಾಡಿ, ಕಿರುಕುಳ ನೀಡುತ್ತಿದ್ದಾನೆ – ಗಂಡನ ವಿರುದ್ಧ ಪೂನಂ ಪಾಂಡೆ ದೂರು

    – 2 ವಾರದ ಹಿಂದೆ ಮದ್ವೆಯಾಗಿ ಪತಿಯನ್ನು ಜೈಲಿಗೆ ಅಟ್ಟಿದ ನಟಿ

    ಪಣಜಿ: ಎರಡು ವಾರದ ಹಿಂದೆ ಮದುವೆಯಾಗಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ, ಈಗ ತನ್ನ ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಕಳೆದ ಸೆಪ್ಟೆಂಬರ್ 11ರಂದು ಪೂನಂ ಪಾಂಡೆ ತನ್ನ ಗೆಳಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದರು. ಆದರೆ ಇಂದು ಅದೇ ಸ್ಯಾಮ್ ಬಾಂಬೆ ನನಗೆ ಕಿರುಕುಳ ನೀಡುತ್ತಿದ್ದಾನೆ, ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಗೋವಾದಲ್ಲಿ ಸೋಮವಾರ ರಾತ್ರಿ ದೂರು ನೀಡಿದ್ದಾರೆ.

    ಸದ್ಯ ಗೋವಾದ ಕೆನಕೋನಾದಲ್ಲಿ ಪೂನಂ ಪಾಂಡೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಇಂದು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಕೆನಕೋನಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತುಕಾರಂ ಚವಾನ್, ಪೂನಂ ಪಾಂಡೆಯವರು ಸೋಮವಾರ ರಾತ್ರಿ ಠಾಣೆಗೆ ಬಂದು ತಮ್ಮ ಪತಿ ಸ್ಯಾಮ್ ಬಾಂಬೆ ವಿರುದ್ಧ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದಾರೆ. ಜೊತೆಗೆ ಹಲ್ಲೆ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಆತನನ್ನು ನಾವು ಬಂಧಿಸಿದ್ದೇವೆ. ಆಕೆಗೆ ನಾವು ವೈದ್ಯಕೀಯ ಪರೀಕ್ಷೆ ಮಾಡಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

    https://www.instagram.com/p/CE-9I8vppaL/

    ಸೆಪ್ಟೆಂಬರ್ 11ರಂದು ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಪೂನಂ ಪಾಂಡೆ ತನ್ನ ಗೆಳಯ ಸ್ಯಾಮ್ ಬಾಂಬೆಯನ್ನು ಮದುವೆಯಾಗಿದ್ದರು. ಈ ವಿಚಾರವನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದರು. ಆದರೆ ಈಗ ಮದುವೆಯಾದ ಎರಡೇ ವಾರದಲ್ಲಿ ಪತಿಯನ್ನು ಅರೆಸ್ಟ್ ಮಾಡಿಸಿದ್ದಾರೆ.