Tag: arrest

  • ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣ – ನಾಲ್ವರ ಬಂಧನ

    ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣ – ನಾಲ್ವರ ಬಂಧನ

    ಯಾದಗಿರಿ: ಜನಾರ್ಶೀವಾದ ಯಾತ್ರೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೊಂದಿಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಯರಗೋಳ ಗ್ರಾಮದ ಮೊನಪ್ಪ, ಶರಣಪ್ಪ, ನಿಂಗಪ್ಪ ಹಾಗೂ ದೇವಿಂದ್ರಪ್ಪ ಎಂಬುದಾಗಿ ಗುರುತಿಸಲಾಗಿದೆ. ಇವರನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಬಂಧನಕ್ಕೊಳಗಾದ ಎಲ್ಲರೂ ಸಹ ಅಮಾಯಕ ರೈತರು, ಬೆಳೆನಾಶ ಮಾಡುವ ಪ್ರಾಣಿಗಳನ್ನು ಓಡಿಸಲು ನಾಡಬಂದೂಕು ಲೈಸೆನ್ಸ್ ಪಡೆದ್ದು, ಇಂದು ಕೇಂದ್ರ ಸಚಿವ ಖೂಬಾ ಬರುವ ಹಿನ್ನೆಲೆ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮತ್ತು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಬಂದೂಕಿನಿಂದ ಸ್ವಾಗತಕೋರಲು ತಿಳಿಸಿದ್ದರಂತೆ. ಇದನ್ನೂ ಓದಿ: ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

    ಅವರ ಮಾತು ಕೇಳಿಕೊಂಡು ಈ ನಾಲ್ವರು ಗಾಳಿಯಲ್ಲಿ ಗಂಡು ಹಾರಿಸಿದ್ದಾರೆ. ಸದ್ಯ ಈ ನಾಲ್ವರು ಬಲಿ ಬಾ ಬಕ್ರ ಆಗಿದ್ದು, ಈ ಅಮಾಯಕರನ್ನು ಬಳಸಿಕೊಂಡು ಸ್ಕೆಚ್ ಹಾಕಿದ ಜನಪ್ರತಿನಿಧಿಗಳು ಮಾತ್ರ, ಆರಾಮವಾಗಿ ಓಡಾಡುತ್ತಿದ್ದಾರೆ. ಇವರ ಮಾತು ನಂಬಿ ಕೆಟ್ಟೆವು ಅಂತ ಆರೋಪಿಗಳು ಪಶ್ಚಾತ್ತಾಪ ಪಡುತ್ತಿದ್ದಾರೆ. ಇತ್ತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕೈಯಲ್ಲಿ ಬಂದೂಕು ಹಿಡಿದ ಸಾಕ್ಷಿಯಿದ್ದರೂ ಪೊಲೀಸರು ಮಾತ್ರ ಜಾಣ ನಡೆ ತೋರುತ್ತಿದ್ದಾರೆ.

  • ಮಂಡ್ಯದಲ್ಲಿ ಬೈಕ್, ಮನೆಗಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್

    ಮಂಡ್ಯದಲ್ಲಿ ಬೈಕ್, ಮನೆಗಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್

    ಮಂಡ್ಯ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್‍ಗಳು ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ನಾಲ್ವರು ಖದೀಮರವನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಹಾಗೂ ಜಯಪುರ ಗ್ರಾಮದ ಯತೀನ್ (25), ವಿಜಯ್ ಕುಮಾರ್(30) , ಕಾರ್ತಿಕ್ (24) ಹಾಗೂ ಶಿವಕುಮಾರ್ (29) ಆಗಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ್ದ 18 ಹೀರೋ ಸ್ಪ್ಲೇಂಡರ್, 6 ಫ್ಯಾಷನ್ ಪ್ರೋ, 1 ಪಲ್ಸರ್ ಹಾಗೂ 1 ಪ್ಲಾಟಿನಂ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇಲ್ಲದೇ ಆರೋಪಿಗಳು ಮನೆಗಳ್ಳತನದ ವೇಳೆ ಕದ್ದಿದ್ದ 18 ಗ್ರಾಂ ಚಿನ್ನದ ಚೈನ್, 2 ಉಂಗುರ, 1ಬ್ರಾಸ್‍ಲೈಟ್, 12 ಗ್ರಾಂ ಚಿನ್ನದ ಒಡವೆಗಳು ಸೇರಿದಂತೆ ಒಟ್ಟು 42 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಬಂಧಿತ ನಾಲ್ವರು ಆರೋಪಿಗಳನ್ನು ಡಿವೈಎಸ್‍ಪಿ ಧನಂಜಯ ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಹಿಡಿಯಲಾಗಿದೆ. ಈ ತಂಡದಲ್ಲಿ ಸಿಪಿಐ ಕೆ.ಸಂತೋಷ್, ಪಶ್ಚಿಮ ಠಾಣೆ ಪಿಎಸ್‍ಐ ಶರತ್‍ಕುಮಾರ್, ಎಸ್.ಪ್ರಭಾ ಅವರು ಇದ್ದರು. ಕಾರ್ಯಾಚರಣೆ ಮಾಡಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಅರೆಸ್ಟ್ ವೇಳೆ ಸೈನೈಡ್ ತಿಂದು ಸರಗಳ್ಳ ಸಾವು

    ಅರೆಸ್ಟ್ ವೇಳೆ ಸೈನೈಡ್ ತಿಂದು ಸರಗಳ್ಳ ಸಾವು

    ಬೆಂಗಳೂರು: ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಸರಗಳ್ಳತನ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡುವುದಕ್ಕೆಂದು ಪೊಲೀಸರು ಮುಂದಾದಾಗ ಸೈನೈಡ್ ತಿಂದು ಆರೋಪಿ ಸಾವನ್ನಪ್ಪಿದ್ದಾನೆ.

    ಆಂಧ್ರದ ಮದನಪಲ್ಲಿ ಮೂಲದ ಶಂಕರ್ ಮೃತ ಆರೋಪಿ. ಶಂಕರ್ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಆಂಧ್ರದಿಂದ ಬೆಂಗಳೂರಿಗೆ ಬರುತ್ತಿದ್ದ ಶಂಕರ್ ಮತ್ತು ಚಂದ್ರಶೇಖರ್ ಎಂಬವರ ಜೊತೆ ಸರಗಳ್ಳತನ ಮಾಡುತ್ತಿದ್ದನು.

    ಈ ಆರೋಪಿಗಳ ಬೆನ್ನು ಹತ್ತಿದ್ದ ಕೆ.ಆರ್ ಪುರಂ ಪೊಲೀಸರಿಗೆ ಆರೋಪಿಗಳು ಹೊಸಕೋಟೆ ಬಳಿಯ ಪಿಲ್ಲಗುಂಪಾದ ದೇವಾಲಯಕ್ಕೆ ಬರುತ್ತಿರುವ ಮಾಹಿತಿ ಸಿಕ್ಕಿದೆ. ಕಳ್ಳತನಕ್ಕೂ ಮೊದಲು ದೇವಾಲಯಕ್ಕೆ ಆರೋಪಿಗಳು ತೆರಳಿ ಕೈ ಮುಗಿದು ಬರುತ್ತಿದ್ದರು. ಹೀಗಾಗಿ ದೇವಾಲಯದ ಬಳಿ ಪೊಲೀಸರು ಕಾದು ಆರೋಪಿಗಳನ್ನು ಅರೆಸ್ಟ್ ಮಾಡಲು ಮುಂದಾಗಿದ್ದಾರೆ.ಇದನ್ನೂ ಓದಿ:ಹೆಡ್‍ಲೈಟ್ ಡಿಮ್ ಅಂಡ್ ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

    ಈ ವೇಳೆ ಆರೋಪಿ ಶಂಕರ್ ಜೇಬಿನಲ್ಲಿದ್ದ ಸೈನೈಡ್ ಸೇವಿಸಿ ರಕ್ತಕಾರಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಆರೋಪಿ ಚಂದ್ರಶೇಖರನನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ:ಠಾಣೆಗೆ ದೂರು ಕೊಡಲು ಬಂದ ಬಾಲಕಿಗೆ ಕಿರುಕುಳ – ಮಂಗಳೂರಿನ ಹೆಡ್ ಕಾನ್ಸ್‌ಟೇಬಲ್ ಅಂದರ್

  • ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ – ಇಂದು ಬಾಂಬ್ ಸಿಡಿಸ್ತಾರಾ ಬಸವರಾಜ್ ಮುತ್ತಗಿ..?

    ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ – ಇಂದು ಬಾಂಬ್ ಸಿಡಿಸ್ತಾರಾ ಬಸವರಾಜ್ ಮುತ್ತಗಿ..?

    – ವಿನಯ್ ಕುಲಕರ್ಣಿ ಆಪ್ತ ಅಧಿಕಾರಿ ಅರೆಸ್ಟ್

    ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧಿ ಆಗಿರುವ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಕೇಸ್‍ಗೆ ಇವತ್ತು ಸ್ಫೋಟಕ ತಿರುವು ಸಿಗುವ ಸಾಧ್ಯತೆ ಇದೆ.

    ಕೊಲೆ ಕೇಸ್‍ನಲ್ಲಿ ಪ್ರಮುಖ ಆರೋಪಿ ಆಗಿರುವ ಬಸವರಾಜ ಮುತ್ತಗಿ ಇವತ್ತು ಸುದ್ದಿಗೋಷ್ಠಿ ನಡೆಸಿ ಸ್ಫೋಟಕ ಮಾಹಿತಿಗಳನ್ನು ಹೊರಹಾಕುವ ಸಾಧ್ಯತೆ ಇದೆ. ನಿನ್ನೆ ಸಿಬಿಐ ಬುಲಾವ್ ಮೇಲೆ ವಿಚಾರಣೆಗೆ ಹಾಜರಾದ ಬಳಿಕ ಮಾತಾಡಿದ್ದ ಮುತ್ತಗಿ `ಒಂದು ದಿನ ಕಾಯಿರಿ. ಮಾಧ್ಯಮಗಳ ಎದುರು ಬಹಳಷ್ಟು ಚರ್ಚೆ ಮಾಡುವುದು ಇದೆ. ನಾನೂ ಕೂಡಾ ಓರ್ವ ವಕೀಲ. ಈಗಾಗಲೇ ಕೇಸ್ ವಿಚಾರಣೆ ಹಂತದಲ್ಲಿದ್ದು ಮಾಧ್ಯಮಗಳ ಮುಂದೆ ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡ್ತೇನೆ’ ಎಂದಿದ್ದಾರೆ. ಇದನ್ನೂ ಓದಿ: ಅಶೋಕ್ ಪಿಎ ವಿರುದ್ಧ ದೂರು ನೀಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಸೇವೆಯಿಂದ ವಜಾ

    ನಿನ್ನೆ ಸಿಬಿಐ ದಿಢೀರ್ ದಾಳಿ ಬಳಿಕ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಬಂಧಿಸಿದೆ. ಅಲ್ಲದೇ ಯೋಗೇಶ್ ಗೌಡ ಪತ್ನಿ, ಸದ್ಯ ಕಾಂಗ್ರೆಸ್‍ನಲ್ಲಿರುವ ಮಲ್ಲಮ್ಮ, ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ್ ಅವರನ್ನು ವಿಚಾರಣೆ ನಡೆಸಿತ್ತು.

    2017 ಜೂನ್ 15ರಂದು ಯೋಗೇಶ್ ಗೌಡನ ಕೊಲೆಯಾಗಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು.

  • ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..!

    ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಸಹೋದರಿಯ ಮೇಲೆಯೇ ಹಲ್ಲೆಗೈದ ಅಣ್ಣ-ತಮ್ಮ..!

    ಇಸ್ಲಾಮಾಬಾದ್: ತಂದೆಯ ಆಸ್ತಿಯಲ್ಲಿ ಪಾಲು ಕೇಳಿದಳೆಂದು ಸಹೋದರಿಯ ಮೇಲೆ ಆಕೆಯ ಸಹೋದರರೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಹಲ್ಲೆಗೈದವರನ್ನು ಅಫ್ತಾಬ್ ಹಾಗೂ ಹರ್ಷದ್ ಹನ್ನನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ತಮ್ಮ ಸಹೊದರಿಯ ಮೇಲೆ ಸುತ್ತಿಗೆ ಹಾಗೂ ಹೆಲ್ಮೆಟ್ ನಿಂದ ಹಲ್ಲೆ ಮಾಡಿದ್ದಾರೆ.

    ಸಹೋದರಿಯ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಪೇಶಾವರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಆರೋಪಿಗಳು ಪೊಲೀಸರ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಇತ್ತ ಸಹೋದರರಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿರುವ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಹಿಳೆಯ ವೈದ್ಯಕೀಯ ವರದಿ ಬಂದ ಬಳಿಕ ಇಬ್ಬರು ಸಹೋದರರ ಮೇಲೆ ಭಾನ ಮಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವೀಡಿಯೋದಲ್ಲೇನಿದೆ..?
    ಮಹಿಳೆಯನ್ನು ನೆಲಕ್ಕುರುಳಿಸಿ ಇಬ್ಬರು ಸಹೋದರರು ಸುತ್ತಿಗೆ ಹಾಗೂ ಹೆಲ್ಮೆಟ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಇಬ್ಬರಲ್ಲಿ ಓರ್ವ ಹೆಲ್ಮೆಟ್ ಅನ್ನು ಮಹಿಳೆಯ ಮೇಲೆ ಎಸೆಯುತ್ತಾನೆ. ಈ ವೇಳೆ ಮಹಿಳೆ ನೋವಿನಿಂದ ಜೋರಾಗಿ ಕಿರುಚುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಬೈಕ್ ಅಡ್ಡ ಬಂದಿದ್ದಕ್ಕೆ ಕಾರ್ ಡಿಕ್ಕಿ ಆಯ್ತು: ಚಿದಾನಂದ್ ಸವದಿ

    ಸಹೋದರರು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆಯೊಬ್ಬರು ಜಗಳ ಬಿಡಿಸಲೆಮದು ಬರುತ್ತಾರೆ. ಈ ವೇಳೆ ಆರೋಪಿಗಳು ಆ ಮಹಿಲೆಯ ಕತ್ತು ಹಿಡಿದು ತಳ್ಳುವುದು ವೀಡಿಯೋದಲ್ಲಿ ಸೆರೆಯಾಗಿದೆ.

    ತಂದೆಯ ಆಸ್ತಿಯಲ್ಲಿ ತನಗೂ ಪಾಲಿದೆ. ಆ ಪಾಲನ್ನು ನೀಡುವಂತೆ ಕೇಳಿದ್ದಕ್ಕಾಗಿ ಈ ಹಲ್ಲೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

  • ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪ – ಮುಖ್ಯ ಶಿಕ್ಷಕ ಬಂಧನ

    ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪ – ಮುಖ್ಯ ಶಿಕ್ಷಕ ಬಂಧನ

    ನೆಲಮಂಗಲ: ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿಕೃತಿ ಮೆರೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

    ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಟ್ಟೆ ಬಿಚ್ಚಿಸುತ್ತಿದ್ದ ಮುಖ್ಯ ಶಿಕ್ಷಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪದಡಿ ಮುಖ್ಯ ಶಿಕ್ಷಕ ಎಸ್.ರಂಗನಾಥ್ ನನ್ನ ಡಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಈ ಬಗ್ಗೆ ವಸತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶಿಕ್ಷಕ ರಂಗನಾಥ್, ಒತ್ತಾಯದ ಸಲಿಂಗಕಾಮ ಐಪಿಸಿ 377 ಹಾಗೂ ಜೀವ ಬೆದರಿಕೆ ಅಡಿ 506 ಆರೋಪದಡಿ ಪ್ರಕರಣ ಎಫ್ ಐಆರ್ ದಾಖಲಾಗಿದ್ದು, ಕೋವಿಡ್ ನಿಂದಾಗಿ 7 ವಿಶೇಷ ಮಕ್ಕಳನ್ನು ಮಾತ್ರ ಶಾಲೆಯಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ಉಳಿದವರನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಕಾರ್ಯದರ್ಶಿ ದೂರಿನಲ್ಲಿ ತಿಳಿಸಿದ್ದಾರೆ. ಮಾಗಡಿ ತಾಲೂಕಿನ ರಂಗನಾಥ್ 2009 ರಿಂದ 2010 ಶಾಲೆ ಮುಖ್ಯ ಶಿಕ್ಷಕನಾಗಿದ್ದ.

    ಇತ್ತಿಚ್ಚೆಗಷ್ಟೆ ಊರಿಗೆ ಹೋದಾಗ ಘಟನೆ ಬಗ್ಗೆ ತಾಯಿಗೆ ಆ ಬಾಲಕ ತಿಳಿಸಿದ್ದ. ಬಳಿಕ ತಾಯಿ ಶಾಲಾ ಆಡಳಿತ ಮಂಡಳಿಗೆ ಹೇಳಿದ್ದರು ಎನ್ನಲಾಗಿ ವಿಚಾರಣೆ ಬಳಿಕ ಆಂತರಕ ತನಿಖೆ ನಡೆಸಿದ್ದ ಶಾಲಾ ಆಡಳಿತ ಮಂಡಳಿ ರಂಗನಾಥ್ ಸಲಿಂಗ ಕಾಮದ ಕೃತ್ಯ ಆರೋಪ ಸಾಬೀತಾಗಿತ್ತು. ಕೂಡಲೇ ಡಾಬಸ್ ಪೇಟೆ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿ ಆರೋಪಿ ರಂಗನಾಥ್ ನನ್ನ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.

  • ಮುಂಗಾರುಮಳೆ-2 ಚಿತ್ರದ ನಟಿಯ ತಂದೆ ಅರೆಸ್ಟ್..!

    ಮುಂಗಾರುಮಳೆ-2 ಚಿತ್ರದ ನಟಿಯ ತಂದೆ ಅರೆಸ್ಟ್..!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬೆಂಗಳೂರು ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಕಾನೂನು ಬಾಹಿರ ಕೃತ್ಯ ಆರೋಪದಡಿಯಲ್ಲಿ ಬಂಧನವಾಗಿದೆ.

    ಬೆಂಗಳೂರಿನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಹತ್ತಾರು ಕಡೆ ನಡೆಸ್ತಿದ್ದ, ಗೇಮ್ ಗಳು ಬ್ಯಾನ್ ಇರುವ ಸ್ಕಿಲ್ ಗೇಮ್, ವೀಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಆರೋಪ ಇದೆ. ಅನೇಕ ಬಾರಿ ಸಿಸಿಬಿ ರೇಡ್ ಮಾಡಿದ್ರೂ ಕ್ಯಾರೇ ಅನ್ನದೇ ಕೃತ್ಯ, ನಗರದ ಪ್ರಮುಖ ಜೂಜುಕೋರ ಅಂತಾ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ. ಹರಿರಾಜ ಶೆಟ್ಟಿ ವಿರುದ್ಧ ಇಲ್ಲಿತನಕ 13 ಕೇಸ್‍ಗಳು ಪತ್ತೆಯಾಗಿದೆ. ಪದೇ ಪದೇ ಕೃತ್ಯವೆಸಗುವ ಹವ್ಯಾಸ ಹೊಂದಿದ ಆರೋಪ ಎದುರಿಸ್ತಾ ಇದ್ದಾರೆ.

    ಕಬ್ಬನ್ ಪಾರ್ಕ್, ಹೈಗ್ರೌಂಡ್ಸ್, ವೈಯಾಲಿ ಕಾವಲ್, ಕೋರಮಂಗಲ, ಅಶೋಕನಗರಣ ಬಸವೇಶ್ವರ ನಗರ, ಕೆ.ಪಿ ಅಗ್ರಹಾರ, ಇಂದಿರಾನಗರ ಠಾಣೆಗೆ ಬೇಕಾದ ಆರೋಪ ಹೊಂದಿರೋ ಹರಿರಾಜ್ ಶೆಟ್ಟಿ ಕಳೆದ 2014 ರಿಂದಲೂ ಈ ಅಕ್ರಮ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ಇದೆ.

    ಪೊಲೀಸರಿಗೆ ಟಾರ್ಚರ್ ಕೊಡ್ತಿದ್ದ ಆರೋಪಿ:
    ತನ್ನ ಅಕ್ರಮ ಕ್ಲಬ್ ಮೇಲೆ ದಾಳಿ ಮಾಡಿದ ಪೊಲೀಸರ ಟಾರ್ಗೆಟ್ ಮಾಡ್ತಿದ್ದ, ಅಧಿಕಾರಿಯ ವಿರುದ್ಧ ಎಸಿಬಿ ದೂರು ನೀಡ್ತಿದ್ದ. ಹಣ ಪಡೆದ ಗಂಭೀರ ಆರೋಪ ಮಾಡಿ ತೇಜೋವಧೆ ಮಾಡ್ತಿದ್ದ ಎಂದು ತನ್ನ ಸೋಷಿಯಲ್ ಮೀಡಿಯಾ ಮೂಲಕ ಅಪಪ್ರಚಾರ ಮಾಡ್ತಿದ್ದ ಆರೋಪ ಕೂಡ ಈತನ ಮೇಲೆ ಇದೆ.

    ಬಳಿಕ ವಿವಿಧ ಠಾಣೆ ಪೊಲೀಸರಿಂದ ಸಿಸಿಬಿ ಆಯುಕ್ತರಿಗೆ ದೂರು ನೀಡಿದ್ರು. ಬಳಿಕ ಆರೋಪಿಯ ವಿರುದ್ಧ ಗೂಂಡಾ ಆಕ್ಟ್ ಅಡಿ ಕೇಸ್ ದಾಖಲಾಗಿದೆ. ಹೈಕೋರ್ಟ್ ರಜಾ ದಿನದ ಪೀಠದಲ್ಲಿ ಚಾಲೆಂಜ್ ಮಾಡಿ ಸ್ಟೇ ಪಡೆದಿದ್ದ ಹರಿರಾಜ್, ತನ್ನನ್ನ ಪೊಲೀಸ್ರು ಹಣಕ್ಕಾಗಿ ಟಾರ್ಗೆಟ್ ಮಾಡ್ತಿದ್ದರು ಎಂದು ಆರೋಪಿಸಿದ್ದ. ಅದರಂತೆ ಹೈಕೋರ್ಟ್ ನಲ್ಲಿ ಸ್ಟೇ ಪಡೆದು ಹೊರಗೆ ಓಡಾಡಿಕೊಂಡಿದ್ದ. ಇದನ್ನ ಪ್ರಶ್ನಿಸಿ ಹೈಕೋರ್ಟ್‍ಗೆ ಸಿಸಿಬಿಯಿಂದ ಮಧ್ಯಂತರ ಅರ್ಜಿ ಹಾಕಾಲಗಿತ್ತು. ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ. ಆರೋಪಿಯ ಪೂರ್ವಾಪರ ತಿಳಿದು ಸ್ಟೇ ತೀರ್ಪುನ್ನ ಅಸಿಂಧುಗೊಳಿಸಿದೆ.

  • ರೆಮಿಡಿಸಿವರ್ ಅಕ್ರಮವಾಗಿ ಮಾರಾಟ – ಬೀದರ್‌ನಲ್ಲಿ ಇಬ್ಬರ ಬಂಧನ

    ರೆಮಿಡಿಸಿವರ್ ಅಕ್ರಮವಾಗಿ ಮಾರಾಟ – ಬೀದರ್‌ನಲ್ಲಿ ಇಬ್ಬರ ಬಂಧನ

    ಬೀದರ್: ಕಾಳಸಂತೆಯಲ್ಲಿ ರೆಮಿಡಿಸಿವರ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.

    ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಸುತ್ತಿದ್ದ ಶೇಖ್ ಅಬ್ದುಲ್ಲಾ ಹಾಗೂ ಆರೋಗ್ಯ ಇಲಾಖೆಯ ಜೊತೆ ಸಂಪರ್ಕದಲ್ಲಿರುವ ಮಹಮ್ಮದ್ ವಾಸಿಂ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ನಗರ ಠಾಣೆಯ ಪೊಲೀಸರು ಬೀದರ್ ನ ಓಲ್ಡ್ ಸಿಟಿಯ ಗವಾನ್ ಚೌಕ್ ಬಳಿ ದಾಳಿ ಮಾಡಿ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ.

    ಕಾಳಸಂತೆಯಲ್ಲಿ ರೆಮಿಡಿಸಿವರ್ ಅಕ್ರಮವಾಗಿ ಮಾರಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ಪೀಡಿತರಿಗೆ 20 ರಿಂದ 25 ಸಾವಿರಕ್ಕೆ ರೆಮಿಡಿಸಿವರ್ ಮಾರಾಟ ಮಾಡುತ್ತಿದ್ದ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    ಈ ಕುರಿತು ಬೀದರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

  • ಮಾಲೀಕನ ಮನೆಯಲ್ಲೆ ಕೆಲಸಗಾರನಿಂದ ಕಳ್ಳತನ- 24 ಗಂಟೆಯಲ್ಲೆ ಆರೋಪಿ ಅಂದರ್

    ಮಾಲೀಕನ ಮನೆಯಲ್ಲೆ ಕೆಲಸಗಾರನಿಂದ ಕಳ್ಳತನ- 24 ಗಂಟೆಯಲ್ಲೆ ಆರೋಪಿ ಅಂದರ್

    ಹುಬ್ಬಳ್ಳಿ: ಕೆಲಸ ಮಾಡುವ ಮನೆಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು 24 ಗಂಟೆಯಲ್ಲೆ ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ದೇಶಪಾಂಡೆ ನಗರದ ಅಪಾರ್ಟ್‍ಮೆಂಟ್‍ನಲ್ಲಿ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದ ಕಳ್ಳನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಧರ್ಮರಾಮ್ ಧರ್ಮೆಂದ್ರ ಗೋವರ್ಧನ ರಾಮ್ ಚೌಧರಿ ಎಂಬವನು ಬಂಧಿತ ಆರೋಪಿಯಾಗಿದ್ದಾನೆ.

    ಹುಬ್ಬಳ್ಳಿ ದೇಶಪಾಂಡೆನಗರದ ಗುರು ಅಪಾರ್ಟ್‍ಮೆಂಟ್‍ನ ಮಹೇಶ ಎಂಬವರ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿ, 4,75,000 ಹಣವನ್ನು ದೋಚಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು 24 ಗಂಟೆಯಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯಿಂದ 4 ಲಕ್ಷ 73 ಸಾವಿರ ನಗದು ವಶಕ್ಕೆ ಪಡೆದಿದ್ದು, ಹಣ ಬಚ್ಚಿಟ್ಟಿದ್ದ ಬಿಳಿ ಬಣ್ಣದ ಬ್ಯಾಗ್ ಸಮೇತ ಪತ್ತೆ ಮಾಡಿದ್ದಾರೆ.

  • ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ- ಐವರ ಬಂಧನ

    ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ- ಐವರ ಬಂಧನ

    ಚಿಕ್ಕಬಳ್ಳಾಪುರ: ಹಾಡಹಗಲೇ ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಭಂದಿತರನ್ನು ಕಲಂದರ್, ಅಮಿತ್, ರಾಘವೇಂದ್ರ, ಶ್ರೀನಾಥ್ ಹಾಗೂ ಅಕ್ಷಯ್ ಎಂದು ಗುರುತಿಸಲಾಗಿದೆ. ಇವರನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ.

    ಶಿಡ್ಲಘಟ್ಟ ಪಟ್ಟಣದ ಪೊಲೀಸ್ ಠಾಣೆ ಬಳಿ ನಿನ್ನೆ ಅಮ್ಜದ್ (43)ನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಆರೋಪಿಗಳು ಓಮ್ನಿ ಕಾರಿನಲ್ಲಿ ಅಮ್ಜದ್ ಬೈಕಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.