ಇತ್ತೀಚಿಗೆ ಅವಲಹಳ್ಳಿಯಲ್ಲಿ ನಡೆದಿದ್ದ ಕುಳ್ಳ ವೆಂಕಟೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಪಿ ಹಾಗೂ ಡಿವೈಎಸ್‍ಪಿಯನ್ನು ನಿಂದಿಸಿ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಕುಳ್ಳ ವೆಂಕಟೇಶ್ ಮೇಲೆ ಮೊದಲು ಹಲ್ಲೆ ನಡೆಸಿದ್ದು ನಾನು, ಆದರೆ ಪೊಲೀಸರು ಅನಿಲ್‍ನ್ನು ಬಂಧಿಸಿದ್ದಾರೆ ಎಂದು ಮೆಂಟಲ್ ಮಂಜ ಬಿಲ್ಡಪ್ ತೆಗೆದುಕೊಂಡಿದ್ದನು.
ಅಂದಹಾಗೇ ಪ್ರಕರಣದಲ್ಲಿ ನಾನು ಎ1 ಆರೋಪಿ ಎಂದು ಧೈರ್ಯದಿಂದ ಹೇಳಿದ್ದಲ್ಲದೇ ಜೊತೆಗೆ ಎಸ್‍ಪಿ ಹಾಗೂ ಡಿವೈಎಸ್‍ಪಿಯನ್ನು ನಿಂದಿಸಿ, ಖಾಕಿ ಧರಿಸಿದರೆ ಸಾಲದು ನನ್ನನ್ನು ಬಂಧಿಸಿ ಎಂದು ಆವಾಜ್ ಹಾಕಿದ್ದನು. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ
ಕಾರವಾರ : ಮಾಂಸಕ್ಕಾಗಿ ಅಕ್ರಮವಾಗಿ ಎಮ್ಮೆಯನ್ನು ಕಡಿದ 6 ಆರೋಪಿಗಳನ್ನು 90 ಕೆಜಿ ಮಾಂಸ ಸಮೇತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಇಟಗುಳಿ ಗ್ರಾಮದ ಕಲ್ಕೊಪ್ಪ ಮಜಿರೆಯಲ್ಲಿ ನಡೆದಿದೆ.
ಕಲ್ಕೊಪ್ಪ ಮಜಿರೆಯ ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್, ಅಬ್ದುಲ್ ಮಜಿದ್ ಅಬ್ದುಲ್ ಜಲೀಲ್ ಸಾಬ್, ರಿಯಾಜ್ ಅಹ್ಮದ್ ನಜೀರ್ ಮಹಮ್ಮದ್ ಸಾಬ್ , ಹಭೀಬ ರೆಹಮಾನ್ ಮಹಮ್ಮದ್ ಸಾಬ್, ಅನ್ಸಾರ್ ನಜೀರ್ ಮಹಮ್ಮದ್ ಸಾಬ್ ಹಾಗೂ ಅಬ್ದುಲ್ ಶುಕೂರ್ ಇಸ್ಮಾಯಿಲ್ ಸಾಬ್ ಬಂಧಿತ ಆರೋಪಿಗಳು. ಇವರಲ್ಲಿ ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್ ಎಂಬುವವರ ಮನೆಯ ಹಿಂಬದಿಯ ಕೊಠಡಿಯಲ್ಲಿ ಮಾಂಸವನ್ನು ಕಡಿದು ಮಾರಾಟದ ತಯಾರಿ ನಡೆಸಿದ್ದರು. ಇದನ್ನೂ ಓದಿ: ಪೋಷಕರೇ ಎಚ್ಚರ: ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು
ಇಂದು ಕಚಿತ ಮಾಹಿತಿ ಮೇಲೆ ದಾಳಿ ಮಾಡಿ ಬಂಧಿಸಿದ ಪೊಲೀಸರು ಆರೋಪಿತ ರಿಂದ ಒಟ್ಟು 90 ಕೆಜಿ 64 ಗ್ರಾಂ ಎಮ್ಮೆಯ ಮಾಂಸವನ್ನು, ನೆಲಕ್ಕೆ ಹಾಸಿದ ತಾಡಪತ್ರೆ, ಕಟ್ಟಿಗೆಯ ಕೊಡ್ಡ, ಚೂರಿ 1, ಡ್ರ್ಯಾಗರ್ 1, ತೂಕಮಾಡುವ ತೂಕದ ಯಂತ್ರ-1, ಪ್ಲಾಸ್ಟಿಕ್ ಬುಟ್ಟಿ 1 ಇತ್ಯಾದಿ ಸೇರಿದಂತೆ ಸುಮಾರು 20,410 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ರೋಹಿಣಿ ಜಿಲ್ಲಾ ನ್ಯಾಯಾಲಯದ ಒಳಗೆ ಗುಂಡಿನ ದಾಳಿಯಿಂದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಮಂಗ್ ಹಾಗೂ ವಿನಯ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯ ಬಳಿಕ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಏನಿದು ಘಟನೆ..?
ಶುಕ್ರವಾರದಂದು ನ್ಯಾಯಾಲಯದ ಒಳಗೆ ಗುಂಡಿನ ದಾಳಿ ಮಾಡಿ ಕುಖ್ಯಾತ ರೌಡಿ ಜಿತೇಂದ್ರ ಗೋಗಿಯನ್ನು ಹತ್ಯೆ ಮಾಡಲಾಗಿತ್ತು. ಟಿಲ್ಲು ಗ್ಯಾಂಗ್ ಸದಸ್ಯರಿಂದ ಈ ದಾಳಿ ನಡೆದಿದ್ದು, ಹಳೆ ದ್ವೇಷದ ಹಿನ್ನಲೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು. ಟಿಲ್ಲು ಗ್ಯಾಂಗ್ ಇಬ್ಬರು ಸದಸ್ಯರಾದ ರಾಹುಲ್ ಮತ್ತು ಮೋರೀಸ್ ಘಟನೆಯಲ್ಲಿ ಸಾವನ್ನಪ್ಪಿದ್ದರು. ಗ್ಯಾಂಗ್ ಸ್ಟರ್ ಜೀತೇಂದ್ರ ಗೋಗಿ ಹತ್ಯೆಯಾಗಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿತ್ತು.
ಸಂಘಟಿತ ಅಪರಾಧ ಕಾಯ್ದೆ (MCOCA) ಅಡಿಯಲ್ಲಿ ಜಿತೇಂದ್ರ ಗೋಗಿಯನ್ನು ಬಂಧಿಸಿದ್ದ ದೆಹಲಿ ಪೊಲೀಸ್, ವಿಚಾರಣೆಗಾಗಿ ರೋಹಿಣಿ ಜಿಲ್ಲಾ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ವಕೀಲರ ವೇಷದಲ್ಲಿ ಕೋರ್ಟ್ ಹಾಲ್ ಗೆ ಬಂದಿದ್ದ ಇಬ್ಬರು ಟಿಲ್ಲು ಗ್ಯಾಂಗ್ ಸದಸ್ಯರು ದಾಳಿ ನಡೆಸಿದ್ದರು. ಘಟನೆಯಲ್ಲಿ ಜಿತೇಂದ್ರ ಗೋಗಿ ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದರು. ಇದರಲ್ಲಿ ದಾಳಿ ಮಾಡಿದ್ದ ಇಬ್ಬರು ರೌಡಿಗಳು ಒಳಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಕೋರ್ಟ್ ನಲ್ಲಿ ಗುಂಡಿನ ದಾಳಿ ನಡೆಸಿದ ಹಿನ್ನಲೆ ಪ್ರತಿ ದಾಳಿ ನಡೆಸಿ ಅವರನ್ನು ಹೊಡೆದು ಹಾಕಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ- ಆಂಧ್ರ, ಒಡಿಶಾ ಕರಾವಳಿ ಜಿಲ್ಲೆಗಳಲ್ಲಿ ಗುಲಾಬ್ ಚಂಡಮಾರುತ ಭೀತಿ
ಹತ್ಯೆಯಾಗಿರುವ ಜಿತೇಂದ್ರ ಗೋಗಿ ದೆಹಲಿ ಭೂಗತ ಪಾತಕಿಯಾಗಿದ್ದು ಏಪ್ರಿಲ್‍ನಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ (MCOCA) ಅಡಿಯಲ್ಲಿ ದೆಹಲಿ ಪೊಲೀಸ್‍ನ ವಿಶೇಷ ಸೆಲ್ ಬಂಧಿಸಿತು. MCOCA ಪ್ರಸ್ತಾವನೆಯು 19 ಸುಲಿಗೆಗಳು, ದರೋಡೆಗಳು, ಕಾರುಗಳ್ಳತನ ಮತ್ತು ದರೋಡೆಗಳ ಜೊತೆಗೆ ಕೊಲೆ ಮತ್ತು ಕೊಲೆ ಯತ್ನದ 19 ಪ್ರಕರಣಗಳನ್ನು ಒಳಗೊಂಡಿವೆ. 2010 ರಲ್ಲಿ ತನ್ನ ತಂದೆಯ ಮರಣದ ನಂತರ ಶಾಲೆಯನ್ನು ಬಿಟ್ಟ ಗೋಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಲು ಆರಂಭಿಸಿದ, ಸದ್ಯ 30 ವರ್ಷದ ಈ ಗೋಗಿ ರಿಯಲ್ ಎಸ್ಟೇಟ್, ಆಸ್ತಿಯಲ್ಲಿ ವ್ಯಾಪಾರ ವ್ಯವಹರಿಸಲು ಆರಂಭಿಸಿದ್ದನು.
ಸೆಪ್ಟೆಂಬರ್ 2010 ರಲ್ಲಿ ಪ್ರವೀಣ್ ಎಂಬ ವ್ಯಕ್ತಿಯ ಮೇಲೆ ಗೋಗಿ ಗುಂಡು ಹಾರಿಸಿದ್ದ, ದೆಹಲಿ ವಿಶ್ವವಿದ್ಯಾನಿಲಯದ ಶ್ರದ್ಧಾನಂದ ಕಾಲೇಜಿನಲ್ಲಿ ನಡೆದ ಚುನಾವಣೆಗಳಲ್ಲಿ, ಗೋಗಿ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿ ಸಂದೀಪ್ ಮತ್ತು ರವೀಂದರ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿದರು. ಇದಾದ ಬಳಿಮ ಬಳಿಕ ಗೋಗಿ ಒಂದು ಟೀಂ ಕಟ್ಟಿಕೊಂಡು ಗ್ಯಾಂಗಸ್ಟಾರ್ ಆಗಿ ಬದಲಾಗಿದ್ದನು.
ಧಾರವಾಡ: ಎಗ್‍ರೈಸ್ ತಿನ್ನಿಸುವ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನ ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದಲ್ಲಿ ಭಿಕ್ಷೆ ಬೇಡುತ್ತಿದ್ದ 13 ವರ್ಷದ ಬಾಲಕಿಗೆ ಎಗ್‍ರೈಸ್ ತಿನ್ನುಸುವ ನೆಪದಲ್ಲಿ ಆರೋಪಿ ಬಾಲಕಿಗೆ ಅತ್ಯಾಚಾರ ನಡೆಸಿದ್ದ. ಭಿಕ್ಷೆ ಬೇಡುತಿದ್ದ ಬಾಲಕಿಗೆ ಮಕ್ಕಳ ರಕ್ಷಣಾ ಘಟಕದ ಸಿಂಬ್ಬಂದಿ ತಂದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದವಳು ನೆರೆ ಮನೆಯವನೊಂದಿಗೆ ಎಸ್ಕೇಪ್- ವೀಡಿಯೋ ಮಾಡಿ ಪತಿ ಆತ್ಮಹತ್ಯೆ
ವಿಚಾರಣೆ ವೇಳೆ ಅತ್ಯಾಚಾರ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದ ಬಾಲಕಿ, ಆರೋಪಿಯನ್ನು ತೊರಿಸಿದರೆ ಗುರುತು ಹಿಡಿಯುವುದಾಗಿ ತಿಳಿಸಿದ್ದಳು. ಅದೇ ರೀತಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಮಲಾ ಉಪನಗರ ಠಾಣೆಯಲ್ಲಿ ದೂರನ್ನ ನೀಡಿದ್ದರು. ದೂರು ಆಧಾರದ ಮೇಲೆ ಆರೋಪಿ ಹುಡುಕಾಟ ನಡೆಸಿದ್ದ ಉಪನಗರ ಠಾಣೆ ಪೊಲೀಸರು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಎಂಬಾತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಕೊಲೆಗೆ ಸ್ಕೆಚ್- ವಿಫಲವಾದ ನಂತ್ರ ಚಾಕುವಿಂದ ಇರಿದು ಕೊಂದ!
ಮುಂಬೈ: ಡೊಂಬಿವಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಥಾಣೆ ಪೊಲೀಸರು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದು, ಇಲ್ಲಿಯವರೆಗೂ 26 ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಮೂವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
15 ವರ್ಷದ ಬಾಲಕಿ ಮೇಲೆ ಕಳೆದ 8 ತಿಂಗಳಿನಿಂದ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಕಾಮುಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಬಾಲಕಿ ದೂರಿನ ಅನ್ವಯ ಪೊಲೀಸರು ಕಲ್ಯಾಣದ ಡೊಂಬಿವಲಿಯಲ್ಲಿರುವ ಮನ್ಪದ ಪೊಲೀಸರು ಬುಧವಾರ ರಾತ್ರಿ 33 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 376(ಎನ್)(ಪುನರಾವರ್ತಿತ ಅತ್ಯಾಚಾರ), 376(ಡಿ)(ಸಾಮೂಹಿಕ ಅತ್ಯಾಚಾರ) 376(3)(ಹದಿನಾರು ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ(ಪೊಕ್ಸೊ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್
ಈ ಕುರಿತಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ದತ್ತಾತ್ರಯ್ ಕರಾಳೆ ಅವರು, ಈ ವರ್ಷದ ಜನವರಿ 29 ರಿಂದ ಸೆಪ್ಟೆಂಬರ್ 22ರ ನಡುವೆ ಈ ಘಟನೆ ನಡೆದಿದೆ. ಬಾಲಕಿಯ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ಎಸಗಿದ ವೀಡಿಯೋವನ್ನು ರೆಕಾರ್ಡ್ ಮಾಡಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ. ನಂತರ ಆತನ ಸ್ನೇಹಿತರು ಮತ್ತು ಪರಿಚಯಸ್ಥರು ಜಿಲ್ಲೆಯ ಡೊಂಬಿವಿಲಿ, ಬದ್ಲಾಪುರ, ಮುರ್ಬಾದ್ ಮತ್ತು ರಬಾನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕನಿಷ್ಟ ನಾಲ್ಕರಿಂದ ಐದು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸಿಪಿ ಸೋನಾಲಿ ಧೋಲೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು(ಎಸ್‍ಐಟಿ) ರಚಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!
ಬಾಲಕಿ 33 ವ್ಯಕ್ತಿಗಳ ಹೆಸರನ್ನು ತಿಳಿಸಿದ್ದಾಳೆ. ಈ ಪೈಕಿ 26 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ. ಬಾಲಕಿಯ ಸ್ಥಿತಿ ಸ್ಥಿರವಾಗಿದೆ. ಸದ್ಯ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 7ನೇ ಆರೋಪಿಯನ್ನು ಬಂಧಿಸಲಾಗಿದ್ದು, ಈತ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾನೆ.
ಪ್ರಕರಣದಲ್ಲಿ ಬಂಧಿತನಾಗಿರೋ ಅಪ್ರಾಪ್ತನ ಜೊತೆ ಈ ಆರೋಪಿ ಕೂಲಿ ಕೆಲಸ ಮಾಡಿಕೊಂಡಿದ್ದ. ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಂಜೆ ಎಣ್ಣೆ ಪಾರ್ಟಿ ಮಾಡುತ್ತಿದ್ದೆವು. ನಂತರ ನಿರ್ಜನ ಪ್ರದೇಶದಲ್ಲಿದ್ದವರನ್ನು ದೋಚುತ್ತಿದ್ದೆವು. ಈ ಘಟನೆಯಲ್ಲೂ ಯುವಕ ಯುವತಿ ಬಳಿ ಹಣ ದೋಚಲು ಹೋದೆವು. ಆದರೆ ಅವರ ಬಳಿ ಹಣ ಇರಲಿಲ್ಲ. ಆದ್ದರಿಂದ ಹಲ್ಲೆ ನಡೆಸಿ ನಂತರ ಅತ್ಯಾಚಾರವೆಸಗಿ ಪರಾರಿಯಾದೆವೂ ಎಂದು ವಿವರ ನೀಡಿದ್ದಾನೆ. ಇದನ್ನೂ ಓದಿ: ಜೇಬಿನಲ್ಲೇ ಸದಾ ಕಾಂಡೋಮ್ ಇಟ್ಕೊಂಡು ತಿರುಗಾಡುತ್ತಿದ್ದ ಕಾಮುಕ
ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಬಂಧಿಸಿದ್ದು, ಇಂತವರನ್ನು ಎನ್ ಕೌಂಟರ್ ಮಾಡಬೇಕು ಎಂದು ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಚಾರ ಇಡೀ ಮೈಸೂರು ತಲೆತಗ್ಗಿಸುವ ವಿಚಾರವಾಗಿದೆ. ಬೆಳಗ್ಗೆ ಐದು ಜನರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ಬಂದಿದೆ. ಇವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಬೇಕು. ಸರ್ಕಾರ ಎನ್‍ಕೌಂಟರ್ ಮಾಡಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಇದೇ ವೇಳೆ ಸಾ.ರಾ ಮಹೇಶ್ ಸಲಹೆಯಿತ್ತರು. ಇತ್ತ ಆರೋಪಿಗಳ ಬಂಧನವಾದ ವಿಚಾರ ತಯಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಕೂಡ ಆರೋಪಿಗಳನ್ನು ಗಲ್ಲಿಗೇರಿಸಬೇಕು, ಎನ್ ಕೌಂಟರ್ ಮಾಡಬೇಕು ಎಂಬುದಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!
ಆಗಸ್ಟ್ 24ರಂದು ನಡೆದಿದ್ದ ಗ್ಯಾಂಗ್ ರೇಪ್ ಸಂಬಂಧ 80 ಮಂದಿಯಿದ್ದ ಪೊಲೀಸರ 5 ತಂಡ ವಿವಿಧೆಡೆಗಳಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿತ್ತು. ಇಂದು ಬೆಳಗ್ಗೆ ಆರೋಪಿಗಳು ತಮಿಳುನಾಡಿನ ಸತ್ಯಮಂಗಲದಲ್ಲಿ ಲಾಕ್ ಆದರು. ಸದ್ಯ ಐವರು ಆರೋಪಿಗಳನ್ನ ಮೈಸೂರಿಗೆ ಕರೆತಂದಿರುವ ಪೊಲೀಸರು, ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ನಂತರ ನ್ಯಾಯಾಧೀಶರ ಎದುರು ಹಾಜರು ಪಡಿಸಲಿದ್ದಾರೆ. ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದವರಾಗಿದ್ದು, ಓರ್ವನನ್ನು ಚಾಮರಾಜನಗರದವನು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕ್ಯಾನ್ಸರ್ ರೋಗ 4ನೇ ಹಂತ ತಲುಪಿದಾಗ ಏನಾಗುತ್ತೋ ಹಾಗೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗ್ಬೇಕು: ವಿನಯ್ ಗುರೂಜಿ
ಪ್ರಕರಣ ನಡೆದ ಸಂದರ್ಭದಲ್ಲಿ ಈ ಸ್ಥಳಕ್ಕೆ ಅಪರಿಚಿತರು ಬರಲು ಸಾಧ್ಯವಿಲ್ಲ ಯಾರು ಪರಿಚಿತರು ಮಾತ್ರ ಬರಲು ಸಾಧ್ಯ ಎಂಬ ಮಾಹಿತಿ ಮೇರೆಗೆ ತನಿಖೆಗೆ ಪೊಲೀಸರು ಮುಂದಾಗಿದ್ದರು. ಇತ್ತ ಯುವಕ ಹಾಗೂ ಯುವತಿ ಮೂರು ದಿನ ಅದೇ ಸ್ಥಳದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ಗಮನಿಸಿ, ನಾಲ್ಕನೇ ದಿನ ಕಾಮುಕರು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ
ಮೈಸೂರು: ಅರಮನೆ ನಗರಿಯಲ್ಲಿ ನಡೆದ ದರೋಡೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ರಾಜಸ್ಥಾನ ಮೂದವರು ಎಂದು ಗುರುತಿಸಲಾಗಿದೆ. ಆಗಸ್ಟ್ 23 ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‍ನಲ್ಲಿ ದರೋಡೆ ಶೂಟ್‍ಔಟ್ ನಡೆದಿತ್ತು. ಇದನ್ನೂ ಓದಿ: ಚಾಮುಂಡಿ ತಾಯಿ ದರ್ಶನ ಪಡೆದ ಗೃಹ ಸಚಿವ ಅರಗ ಜ್ಞಾನೇಂದ್ರ
ಮಾಲೀಕನಿಗೆ ಥಳಿಸಿ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಅಲ್ಲದೆ ಚಿನ್ನದ ಅಂಗಡಿಗೆ ಬಂದಿದ್ದ ಚಂದ್ರುಗೆ ಗುಂಡೇಟು ನೀಡಲಾಗಿತ್ತು. ಪರಿಣಾಮ ದಡದಹಳ್ಳಿ ಗ್ರಾಮದ ಚಂದ್ರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ದರೋಡೆಕೋರರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರ ಹಾಗೂ ತನ್ನ ಸಹೋದರನ ಜೊತೆ ಸೇರಿ ಸುಪಾರಿ ಕೊಟ್ಟು ಗಂಡನಿಗೆ ಗುಂಡು ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಐನಾತಿ ಹೆಂಡತಿ, ಈಕೆಯ ಪ್ರಿಯಕರ ಹಾಗೂ ಆಕೆಯ ಸಹೋದರ ಸೇರಿ 6 ಮಂದಿಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸರು ಬಂಧಿಸಿದ್ದಾರೆ.
ಸುಪಾರಿ ಕೊಟ್ಟ ಹೆಂಡತಿಯ ಹೆಸರು ಸುಮಿತ್ರಾ. ಗುಂಡಿನ ದಾಳಿಗೆ ಒಳಗಾದವರು ಮೂಲತಃ ಆನೆಮಡುಗು ಗ್ರಾಮದ ಗಾರೆ ಕೆಲಸಗಾರ ಗೋವಿಂದಪ್ಪ.
ಘಟನೆಯ ವಿವರ:
ಆಗಸ್ಟ್ 18 ರಂದು ಶಿಡ್ಲಘಟ್ಟ ನಗರದ ಇದ್ಲೂಡು ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಗೋವಿಂದಪ್ಪ ಮೇಲೆ ಪಲ್ಸರ್ ಬೈಕಿನಲ್ಲಿ ಬಂದ ಅಪರಿಚಿತರು ಮಸಲ್ ಗನ್ ಬಳಸಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ರು. ಘಟನೆಯಲ್ಲಿ ಮಸಲ್ ಗನ್ ಗೆ ಸೈಕಲ್ ಬಾಲ್ಸ್ ಬಳಸಿ ಗುಂಡಿನ ದಾಳಿ ನಡೆಸಲಾಗಿದ್ದು, ಪರಿಣಾಮ ಗೋವಿಂದಪ್ಪ ಬೆನ್ನಿನ ಭಾಗ ಸೇರಿ ತಲೆಯ ಭಾಗದಲ್ಲಿ ಗಾಯಗಳಾಗಿದ್ದವು. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ
ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗೋವಿಂದಪ್ಪ ಗುಣಮುಖರಾಗಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಿರುವ ಪೊಲೀಸರಿಗೆ ಇದೆಲ್ಲಾ ಗೋವಿಂದಪ್ಪನ ಪತ್ನಿ ಸುಮಿತ್ರಾಳದ್ದೇ ಕೃತ್ಯ ಅನ್ನೋ ಸತ್ಯ ಗೊತ್ತಾಗಿದೆ. ಗೋವಿಂದಪ್ಪ ಪತ್ನಿ ಸುಮಿತ್ರ, ಮುನಿಕೃಷ್ಣ ಎಂಬವನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಗಂಡ ಗೋವಿಂದಪ್ಪ ಜಗಳ ಮಾಡಿ ಬುದ್ಧಿವಾದ ಹೇಳಿದ್ದಾರೆ.
ಇದೇ ವಿಚಾರವಾಗಿ ಗಂಡ ಪದೇ ಪದೇ ಟಾರ್ಚರ್ ಕಿರುಕುಳ ಕೊಡ್ತಾನೆ ಅಂತ ಪತ್ನಿ ಸುಮತ್ರಾ ಪ್ರಿಯಕರ ಮುನಿಕೃಷ್ಣ ಹಾಗೂ ಸಹೋದರ ರಾಮಕೃಷ್ಣ ಜೊತೆ ಪ್ಲಾನ್ ಮಾಡಿ, ಹರೀಶ್, ಮುರುಳಿ, ಪ್ರವೀಣ್ ಎಂಬವರಿಗೆ 2 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ರು. ಹೀಗಾಗಿ ಸುಪಾರಿ ಪಡೆದವರು ಸೇರಿ ಪತ್ನಿ, ಪ್ರಿಯಕರ ಹಾಗೂ ಸಹೋದರನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹಾಸನ: ಅಕ್ರಮ ಸಾಗಾಟದ ವೇಳೆ ಅಪಘಾತವಾಗಿ 20 ಎಳೆ ಕರುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರಸೀಕೆರೆ ತಾಲೂಕಿನ ಗಂಡಸಿ ಹಾಗೂ ಹೊಸೂರು ಮೂಲದ ನೂರುಲ್ಲಾ, ರಹೀಂ, ಸುಲ್ತಾನ್, ಆರೀಫ್, ಇರ್ಫಾನ್, ಸಬೀರ್ ಅಹಮದ್, ಅಬ್ದುಲ್ ಮುಬಾರಕ್, ಜೀವನ್, ಪುರುಷೋತ್ತಮ್ ಬಂಧಿತರ ಆರೋಪಿಗಳು.
ಬೇಲೂರು ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಆಗಸ್ಟ್ 19 ರಂದು ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ರಾತ್ರಿ ಗೂಡ್ಸ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿತ್ತು. ಅದರೊಳಗೆ ಅಕ್ರಮವಾಗಿ ಸಾಗಿಸುತ್ತಿದ್ದ 60ಕ್ಕೂ ಹೆಚ್ಚು ಕರುಗಳಲ್ಲಿ, ಸುಮಾರು 20 ಕರುಗಳು ಮೃತಪಟ್ಟಿದ್ದವು. ಇದನ್ನೂ ಓದಿ: ಪಾಕ್‍ಗೆ ಹಣದ ನೆರವು ನೀಡುವುದನ್ನು ಅಮೆರಿಕ ನಿಲ್ಲಿಸಲಿ: ಅಫ್ಘಾನ್ ಪಾಪ್ ತಾರೆ
ಅಕ್ರಮ ಸಾಗಾಟದ ವೇಳೆ ಕರುಗಳ ಕಾಲಿಗೆ, ಬಾಯಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡಲಾಗಿತ್ತು. ಈ ಘಟನೆ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಲಿಂಗೇಶ್, ಡಿಸಿ ಆರ್.ಗಿರೀಶ್, ಎಸ್‍ಪಿ ಆರ್. ಶ್ರೀನಿವಾಸ್ ಗೌಡ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಇದೀಗ ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅಪಘಾತದಲ್ಲಿ ಬದುಕುಳಿದಿದ್ದ 20ಕ್ಕೂ ಹೆಚ್ಚು ಕರುಗಳನ್ನು ಪಶು ಇಲಾಖೆ ಅಧಿಕಾರಿಗಳು ಗೋಶಾಲೆಗೆ ಬಿಟ್ಟಿದ್ದಾರೆ.