Tag: arrest

  • ಸುಳ್ಳು ದಾಳಿ ಸೃಷ್ಟಿಸಿದ ಶಿವಸೇನಾ ನಾಯಕನ ಬಂಧನ

    ಸುಳ್ಳು ದಾಳಿ ಸೃಷ್ಟಿಸಿದ ಶಿವಸೇನಾ ನಾಯಕನ ಬಂಧನ

    ಮುಂಬೈ: ರಿವಾಲ್ವರ್ ಪಡೆಯಲು ಐದು ತಿಂಗಳ ಹಿಂದೆ ಸುಳ್ಳು ದಾಳಿಯನ್ನು ಸೃಷ್ಟಿಸಿದ ಆರೋಪದ ಮೇಲೆ ಶಿವಸೇನಾ ನಾಯಕನನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಶಿವಸೇನಾ ನಾಯಕ ಬಾಲಾ ಅಲಿಯಾಸ್ ರಾಜೇಶ್ ಗುಡೆ ಆರೋಪಿ. ಇವರು ಶಿವ ಸೇನೆಯ ಪಾಲ್ಘರ್ ಜಿಲ್ಲಾ ಘಟಕದ ಸದಸ್ಯರಾಗಿದ್ದಾರೆ. ರಾಜೇಶ್ ಗುಡೆ ರಿವಾಲ್ವರ್‌ಗೆ ಪರವಾನಗಿ ಪಡೆಯಲು ಈ ರೀತಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನಡೆದಿದ್ದೇನು?: ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಕಾರಿಗೆ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ. ತಮಗೆ ಭದ್ರತೆ ಬೇಕು. ಇದರಿಂದಾಗಿ ರಿವಾಲ್ವರ್ ಇಟ್ಟುಕೊಳ್ಳಲು ಪರವಾನಗಿ ನೀಡಿ ಎಂದು ರಾಜೇಶ್ ಗುಡೆ ಅವರು ಜೂನ್ 28 ರಂದು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಟೆಸ್ಟಿಂಗ್ ಹೆಚ್ಚಳ

    ಪೊಲೀಸರು ಈ ಪ್ರಕರಣವನ್ನು ಕೈಗೆತ್ತುಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ರಿವಾಲ್ವರ್ ಇಟ್ಟುಕೊಳ್ಳಲು ಪರವಾನಗಿ ಪಡೆಯಲು ಕಾರಿಗೆ ಗುಂಡು ಹಾರಿಸಿದ ಘಟನೆಯನ್ನು ಸೃಷ್ಟಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ಗುಡೆ ಜೊತೆಗೆ ಅಪರಾಧದಲ್ಲಿ ಭಾಗಿಯಾಗಿದ್ದ ಇಬ್ಬರು ಸಹಚರರನ್ನು ಬಂಧಿಸಲಾಗಿದ್ದು, ರಿವಾಲ್ವರ್‌ನ್ನು ಹಿಂಪಡೆಯಲಾಗಿದೆ. ಇದನ್ನೂ ಓದಿ: 3ನೇ ಅಲೆ ತೀವ್ರತೆ ಹೆಚ್ಚಾಗಬಹುದು – ಐಎಂಎ ವಾರ್ನಿಂಗ್

  • ರ್‍ಯಾಲಿಯಲ್ಲಿ ಪ್ರಚೋದನಾಕಾರಿ ಘೋಷಣೆ – ನಾಲ್ವರು ಬಿಜೆಪಿ ನಾಯಕರು ಅರೆಸ್ಟ್

    ರ್‍ಯಾಲಿಯಲ್ಲಿ ಪ್ರಚೋದನಾಕಾರಿ ಘೋಷಣೆ – ನಾಲ್ವರು ಬಿಜೆಪಿ ನಾಯಕರು ಅರೆಸ್ಟ್

    ತಿರುವನಂತಪುರಂ: ಇತ್ತೀಚೆಗೆ ತಲಸ್ಸೆಯಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದಕ್ಕೆ ನಾಲ್ವರು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ.

    ಕೇರಳದ ತಲಸ್ಸೆಯಲ್ಲಿ ಯುವಮೋರ್ಚಾ ಮುಖಂಡ ಕೆಟಿ ಜಯಕೃಷ್ಣನ್ ಹತ್ಯೆಯ 22ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು.

    ಘಟನೆ ಕುರಿತು ಸಿಪಿಐ(ಎಂ) ಯುವ ಘಟಕ, ಡಿವೈಎಫ್‍ಐ ಸೇರಿದಂತೆ ವಿವಿಧ ಸಂಘಟನೆಗಳು ದೂರು ನೀಡಿದ್ದ ಹಿನ್ನೆಲೆಯಲ್ಲಿ 20 ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಿಜೆಪಿ ಕಾರ್ಯಕರ್ತರನ್ನು ತಲಶೈರಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

    ಪಕ್ಷದ ಕಾರ್ಯಕರ್ತರು ರ್‍ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿರುವ ಸುಳ್ಳು ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಆಯೋಗವು ಆರೋಪಿಸಿದೆ. ಇದನ್ನೂ ಓದಿ: 3ನೇ ಅಲೆ ತೀವ್ರತೆ ಹೆಚ್ಚಾಗಬಹುದು – ಐಎಂಎ ವಾರ್ನಿಂಗ್

    ಘಟನೆಯ ಕುರಿತು ಮತ್ತೊಂದು ಸಂಘಟನೆಯೂ 250 ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯೂ ಅಲ್ಪಸಂಖ್ಯಾತ ಸಮೂದಾಯವನ್ನು ಗುರಿಯಾಗಿಸಿಕೊಂಡು ಇಂತಹ ಘೋಷಣೆಗಳನ್ನು ಕೂಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.

  • ಸೇನೆ ಕೆಲಸಕ್ಕಾಗಿ ನಕಲಿ ದಾಖಲೆ- 9 ಜನರ ಬಂಧನ

    ಸೇನೆ ಕೆಲಸಕ್ಕಾಗಿ ನಕಲಿ ದಾಖಲೆ- 9 ಜನರ ಬಂಧನ

    ವಿಜಯನಗರ: ಸೇನೆಯಲ್ಲಿ ಕೆಲಸ ಕೊಡಿಸಲು ದಾಖಲಾತಿಗಳ ತಿದ್ದುಪಡಿ ಮಾಡಿ, ನಕಲಿ ದಾಖಲೆ ಕೊಟ್ಟ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.

    ಪ್ರಕರಣದಲ್ಲಿ ಭಾಗಿ ಆಗಿರುವ ಆರೋಪಿಗಳಾದ ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್, ಮನೋಜ್ ಅವರನ್ನು ಬಂಧಿಸಲಾಗಿದೆ. ಜೊತೆಗೆ ಬಳ್ಳಾರಿ ಮೂಲದ ಇಬ್ಬರು ಪೊಲೀಸ್ ಸಿಬ್ಬಂದಿ ಅಂಕಲೇಶ್ ಹಾಗೂ ರಾಮಾಂಜನಿ ಅವರನ್ನು ಬಂಧಿಸಲಾಗಿದೆ.

    ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಾರಾಷ್ಟ್ರ ಸೇರಿದಂತೆ ಬೇರೆ ಊರಿನವರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಿದ್ದರು. ಈ ನಕಲಿ ದಾಖಲಾತಿಗಾಗಿ ಐದಾರು ಲಕ್ಷ ಹಣದ ವ್ಯವಹಾರ ನಡೆದಿರುವ ಕುರಿತು ಮೂಲಗಳು ಮಾಹಿತಿ ನೀಡಿದೆ. ಇದನ್ನೂ ಓದಿ: ಡಿ.4 ರಂದು ಆಂಧ್ರಪ್ರದೇಶ, ಒಡಿಶಾಗೆ ಅಪ್ಪಳಿಸಲಿರುವ ಜವಾದ್ ಚಂಡಮಾರುತ

    ಈ ಕುರಿತು ಸೇನೆಯಿಂದ ದಾಖಲಾತಿ ಪರಿಶೀಲಿಸುವಂತೆ ಮಾಹಿತಿ ಬಂದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ. ಸೇನೆಯಲ್ಲಿರುವ ಇನ್ನೂ ಹಲವಾರು ಜನ ಇದೇ ರೀತಿ ಕೆಲಸಕ್ಕೆ ಸೇರಿರುವ ಅನುಮಾನವಿದೆ ಎಂದು ವಿಜಯನಗರ ಜಿಲ್ಲೆ ಎಸ್ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.

    ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲಾ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

  • ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಣ್ಣ ಅರೆಸ್ಟ್

    ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಣ್ಣ ಅರೆಸ್ಟ್

    ಮೈಸೂರು: ಅಣ್ಣನೇ ತಂಗಿಯನ್ನು ಅತ್ಯಾಚಾರ ಮಾಡಿದ ಹೇಯ ಕೃತ್ಯವೊಂದು ಮೈಸೂರಿನಲ್ಲಿ ನಡೆದಿದ್ದು, ಇದೀಗದ ಪ್ರಕರಣ ಸಂಬಂಧ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

    ಹೌದು. ಅರಮನೆ ನಗರಿಯ ಗಿರಿದರ್ಶಿನಿ ನಗರದಲ್ಲಿ ಸ್ವಂತ ಅಣ್ಣನೇ ಅಪ್ರಾಪ್ತ ಸಹೋದರಿಯ ಮೇಲೆ ತನ್ನ ಕಾಮತೃಷೆ ನೀಗಿಸಿಕೊಂಡಿದ್ದಾನೆ. ಆರೋಪಿಯನ್ನು ವಿನಯ್ ಕುಮಾರ್ ಎಂದು ಗುರುತಿಸಲಾಗಿದೆ. ಈತನ ಕಾಮದಾಟಕ್ಕೆ ಇದೀಗ ತಂಗಿ ಗರ್ಭಿಣಿಯಾಗಿದ್ದಾಳೆ.

    ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನ ಕಳೆದುಕೊಂಡಿದ್ದ 16 ವರ್ಷದ ಅಪ್ರಾಪ್ತೆ, ಅಣ್ಣನ ಜೊತೆ ವಾಸವಾಗಿದ್ದಳು. ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರೊಂದಿಗೆ ಜೀವನ ಸಾಗಿಸುತ್ತಿದ್ದಳು. ಅಕ್ಕಂದಿರಿಗೆ ವಿವಾಹವಾದ ಕಾರಣ ಇಬ್ಬರು ಅಣ್ಣಂದಿರ ಜೊತೆ ಆಶ್ರಯ ಪಡೆದಿದ್ದಳು.

    ಕುಡಿತದ ಚಟಕ್ಕೆ ಬಲಿಯಾಗಿದ್ದ ಓರ್ವ ಅಣ್ಣ ಪಾನಮತ್ತನಾದ ಸಮಯದಲ್ಲಿ ಸ್ವಂತ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮೂರು ತಿಂಗಳಿಂದ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‌ ರೇಪ್: ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

    POLICE JEEP

    ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 30% ಆಫರ್, ಮೇಲೆ 100 ರೂ.ನೋಟ್, ಒಳಗೆ ವೈಟ್ ಪೇಪರ್ – ಐವರು ವಂಚಕರ ಬಂಧನ

    30% ಆಫರ್, ಮೇಲೆ 100 ರೂ.ನೋಟ್, ಒಳಗೆ ವೈಟ್ ಪೇಪರ್ – ಐವರು ವಂಚಕರ ಬಂಧನ

    ಚಿಕ್ಕಮಗಳೂರು: ದೇವಸ್ಥಾನದ ಹುಂಡಿಯ 100 ಮುಖ ಬೆಲೆಯ ಲಕ್ಷಗಟ್ಟಲೆ ನೋಟುಗಳ ಬದಲಾಗಿ 500 ಹಾಗೂ 2000 ಮುಖ ಬೆಲೆಯ ನೋಟುಗಳನ್ನು ಕೊಟ್ಟು ಒಂದು ಲಕ್ಷಕ್ಕೆ 30% ಹೆಚ್ಚು ಕೊಡುವುದಾಗಿ ನಂಬಿಸಿ ವಂಚಿಸಿದ ಗ್ಯಾಂಗ್ ನನ್ನು ಜಿಲ್ಲೆಯ ಕಡೂರು ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಗಳೂರು ಮೂಲದ ಕೃಪಾ 30% ಆಸೆಗೆ ಬಿದ್ದು ಮೋಸ ಹೋದವರು. 100 ರೂ. ಮುಖಬೆಲೆ ದೇವಸ್ಥಾನದ ಹುಂಡಿಯಲ್ಲಿ ಲಕ್ಷಗಟ್ಟಲೆ ಇದೆ. 500-2000 ಮುಖಬೆಲೆಯ ನೋಟು ಕೊಟ್ಟರೆ ಒಂದು ಲಕ್ಷಕ್ಕೆ 1,30,000 ರೂ. ಹಣ ಕೊಡುತ್ತಾರೆ ಎಂದು ಕೃಪಾ ಎಂಬವರಿಗೆ ಸ್ನೇಹಿತ ನಾರಾಯಣ ರೈ ಎಂಬುವರು ಹೇಳಿದ್ದರು. ಅದಕ್ಕೆ ಕೃಪಾ ಅಡ್ರೆಸ್ ಹಾಗೂ ಫೋನ್ ನಂಬರ್ ಪಡೆದು ಒಮ್ಮೆ ಜಿಲ್ಲೆಯ ಕಡೂರಿಗೆ ಬಂದು ಮಾತನಾಡಿಕೊಂಡು ಹೋಗಿದ್ದರು.

    ಬಳಿಕ 500-2000 ಮುಖಬೆಲೆಯ 10 ಲಕ್ಷ ಹಣದೊಂದಿಗೆ ಕಡೂರು ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬಂದಿದ್ದರು. ಆಗ ಅಲ್ಲಿಗೆ ಬಂದ ಖಾವಿ ತೊಟ್ಟಿದ್ದ ಕಪಟ ಸನ್ಯಾಸಿ ಮಹೇಶ್ ಎಂಬುವರು 10 ಲಕ್ಷ ಹಣ ಪಡೆದುಕೊಂಡು, 13 ಲಕ್ಷ ಇದೆ ಎಂದು ಹೇಳಿ ಕೃಪಾ ಅವರಿಗೆ ಹಣದ ಬ್ಯಾಗ್ ನೀಡಿದ್ದರು. ಕಡೂರು ಪಟ್ಟಣವಾದ್ದರಿಂದ ಇಲ್ಲಿ ಎಣಿಸಬೇಡಿ. ಪಬ್ಲಿಕ್ ಪ್ಲೇಸ್, ಜನ ಓಡಾಡುತ್ತಿರುತ್ತಾರೆ. ಕಾರಿನಲ್ಲಿ ಹೋಗುತ್ತ ಎಣಿಸಿಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ:  ಇನ್ನು ಮುಂದೆ ಪತಿ ಪತ್ನಿಯ ಹುಟ್ಟುಹಬ್ಬ ಮರೆತರೆ ಜೈಲೇ ಗತಿ!

    ಕೃಪಾ ಕಾರಿನಲ್ಲಿ ಕೂತು ಹಣದ ಬ್ಯಾಗ್ ಓಪನ್ ಮಾಡಿದ್ದಾರೆ. ಅದರಲ್ಲಿ ಪ್ರತಿಯೊಂದು ಕಂತೆಯ ಮೇಲೆ ಮಾತ್ರ 100 ರೂಪಾಯಿ ನೋಟು ಇದ್ದು, ಉಳಿದದ್ದೆಲ್ಲಾ ವೈಟ್ ಪೇಪರ್ ಇತ್ತು. ಕೃಪಾ ಅವರು ಫೋನ್ ಮಾಡಿದರೆ ಸ್ವಾಮೀಜಿ ನಂಬರ್ ಸ್ವಿಚ್ ಆಫ್. ಇಡೀ ಕಡೂರು ಪಟ್ಟಣ ಹುಡುಕಿದರು ಸ್ವಾಮೀಜಿಯ ಸುಳಿವು ಸಿಗಲಿಲ್ಲ. ಮನನೊಂದು ಊರಿಗೆ ವಾಪಸ್ಸ್ ಹೋಗಿದ್ದರು. ಬಳಿಕ ಕಡೂರಿಗೆ ಬಂದು ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡು ಕಡೂರು ಪೊಲೀಸರು 48 ಗಂಟೆಯೊಳಗೆ ಕಳ್ಳ ಖಾವಿ ಸ್ವಾಮೀಜಿ ಮಹೇಶ್ ಸೇರಿದಂತೆ ಆರು ಜನರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.10 ಲಕ್ಷ ನಗದು, ಒಂದು ಓಮಿನಿ ಕಾರು, 1 ಸ್ಕೂಟಿ ಹಾಗೂ 4 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:  ಜನವರಿಯಿಂದ ಮಕ್ಕಳಿಗೂ ಸಿಗಲಿದೆ ಲಸಿಕೆ?

    ಈ ನಕಲಿ ಸ್ವಾಮೀಜಿಯ ಗುಂಪನ್ನು ಪತ್ತೆ ಹಚ್ಚುವಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್, ಪಿಎಸೈ ಎನ್.ಕೆ.ರಮ್ಯ, ಪ್ರೊಬೇಷನ್ ಪಿಎಸೈ ಆದರ್ಶ್, ನವೀನ್, ಎ.ಎಸ್.ಐ. ವೇದಮೂರ್ತಿ ಸೇರಿದಂತೆ ಪೇದೆಗಳಾದ ಕೃಷ್ಣಮೂರ್ತಿ, ಉಮೇಶ್, ರಾಜಪ್ಪ, ಮಧುಕುಮಾರ್, ಓಂಕಾರ, ಶಿವರಾಜ್ ಅವರನ್ನು ಎಸ್‍ ಪಿ ಅಕ್ಷಯ್ ಶ್ಲಾಘಿಸಿದ್ದಾರೆ. ಇನ್ನೂ ಹಣ ಕಳೆದುಕೊಂಡಿದ್ದ ಕೃಪಾ ಹಣ ಸಿಗುವ ನಿರೀಕ್ಷೆಯಲ್ಲಿದ್ದಾರೆ.

  • ಚೀನಾ: ಕೋವಿಡ್‌ ಬಗ್ಗೆ ವರದಿ ಮಾಡಿ ಅರೆಸ್ಟ್‌ ಆಗಿದ್ದ ಪತ್ರಕರ್ತೆ ಜೈಲಿನಲ್ಲಿ ಸಾವು-ಬದುಕಿನ ನಡುವೆ ಹೋರಾಟ!

    ಚೀನಾ: ಕೋವಿಡ್‌ ಬಗ್ಗೆ ವರದಿ ಮಾಡಿ ಅರೆಸ್ಟ್‌ ಆಗಿದ್ದ ಪತ್ರಕರ್ತೆ ಜೈಲಿನಲ್ಲಿ ಸಾವು-ಬದುಕಿನ ನಡುವೆ ಹೋರಾಟ!

    ಬೀಜಿಂಗ್: ಚೀನಾದ ವುಹಾನ್‌ನಲ್ಲಿ ಕೋವಿಡ್‌-19 ಕುರಿತು ವರದಿ ಮಾಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತೆ ಜೈಲಿನಲ್ಲೇ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆಂದು ಕುಟುಂಬದ ಮೂಲಗಳು ಹೇಳಿವೆ. ಆಕೆ ಬದುಕುಳಿಯುವ ಸ್ಥಿತಿಯಲ್ಲಿಲ್ಲ. ಕೂಡಲೇ ಬಿಡುಗಡೆ ಮಾಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

    JAIL

    ಝಾಂಗ್‌ ಜಾನ್‌ (38) ಅವರು ಫೆಬ್ರವರಿ 2020ರಲ್ಲಿ ವುಹಾನ್‌ಗೆ ಭೇಟಿ ನೀಡಿ ಕೋವಿಡ್‌ ಸಾಂಕ್ರಾಮಿಕ ಕುರಿತು ವರದಿ ಮಾಡಿದ್ದರು. ಈ ವೇಳೆ ಅಧಿಕಾರಿಗಳಿಗೆ ಪ್ರಶ್ನೆಗಳನ್ನು ಕೇಳಿ ವಿಡಿಯೊ ಮಾಡಿಕೊಂಡಿದ್ದರು. ನಂತರ ಆಕೆಯನ್ನು ಮೇ 2020ರಲ್ಲಿ ಬಂಧಿಸಲಾಗಿತ್ತು. ಡಿಸೆಂಬರ್‌ನಲ್ಲಿ ಪತ್ರಕರ್ತೆಗೆ ನಾಲ್ಕು ವರ್ಷಗಳ ಜೈಲು ಶಿಕ್ಷ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಇದನ್ನೂ ಓದಿ: ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಬಂಧನಕ್ಕೊಳಗಾಗಿರುವ ನನ್ನ ಸಹೋದರಿ ಹೆಚ್ಚು ದಿನ ಬದುಕುವಂತೆ ಕಾಣುತ್ತಿಲ್ಲ ಎಂದು ಪತ್ರಕರ್ತೆಯ ಸಹೋದರ ಝಾಂಗ್‌ ಜು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ

    ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಪತ್ರಕರ್ತೆ ಝಾಂಗ್‌ಗೆ ಬಲವಂತವಾಗಿ ಮೂಗಿನಲ್ಲಿ ಪೈಪ್‌ ಹಾಕಿ ದ್ರವರೂಪದ ಆಹಾರ ನೀಡಲಾಗುತ್ತಿದೆ. ಆಕೆಯ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕೆಯ ಆಪ್ತ ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿವೆ.

    COVID

    ನನ್ನ ಸಹೋದರಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ಹಾಗೂ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಚೀನಾ ಸರ್ಕಾರ ಕೂಡಲೇ ಆಕೆಯನ್ನು ಬಿಡುಗಡೆ ಮಾಡಲು ಕ್ರಮವಹಿಸಬೇಕು ಎಂದು ಸಹೋದರ ಝಾಂಗ್‌ ಜು ಮನವಿ ಮಾಡಿದ್ದಾರೆ.

  • ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅರೆಸ್ಟ್‌

    ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅರೆಸ್ಟ್‌

    ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಮಾಜಿ ಗೃಹ ಸಚಿವ 71 ವರ್ಷದ ಅನಿಲ್‌ ದೇಶ್‌ಮುಖ್‌ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ತಡರಾತ್ರಿ ಬಂಧಿಸಿದೆ.

    ಸೋಮವಾರ ಅನಿಲ್‌ ದೇಶ್‌ಮುಖ್‌ ದಕ್ಷಿಣ ಮುಂಬೈನ ಬಲ್ಲಾರ್ಡ್‌ ಎಸ್ಟೇಟ್‌ ಪ್ರದೇಶದಲ್ಲಿರುವ ಇಡಿ ಕಚೇರಿಗೆ ಬೆಳಿಗ್ಗೆ 11:40ರ ವೇಳೆಗೆ ವಿಚಾರಣೆಗೆ ಹಾಜರಾಗಿದ್ದರು. 12 ಗಂಟೆಗಳ ಸತತ ವಿಚಾರಣೆಯ ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಬಂಧನ ಮಾಡಲಾಗಿದೆ. ಇದನ್ನೂ ಓದಿ: ಅಶ್ಲೀಲ ಸಿನಿಮಾಗಳ ವಿವಾದದ ಬಳಿಕ ಟ್ವಿಟ್ಟರ್, ಇನ್‍ಸ್ಟಾ ಡಿಲೀಟ್ ಮಾಡಿದ ರಾಜ್ ಕುಂದ್ರಾ

    ವಿಚಾರಣೆಯ ವೇಳೆ ಅನಿಲ್‌ ದೇಶ್‌ಮುಖ್‌ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿಲ್ಲ. ಈ ಹಿಂದೆ ಐದು ಬಾರಿ ಸಮನ್ಸ್‌ ಜಾರಿಯಾಗಿದ್ದರೂ ಅವರು ವಿಚಾರಣೆಗೆ ಗೈರು ಹಾಜರಾಗಿದ್ದರು. ಸಮನ್ಸ್‌ ರದ್ದುಪಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಕಳೆದ ವಾರ ತಿರಸ್ಕರಿಸಿತ್ತು.

    MONEY

    ಆರೋಪ ಏನು?
    ಮುಂಬೈ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಅವರು ದೇಶ್‌ಮುಖ್ ಅವರ ಮೇಲೆ ಆರೋಪ ಮಾಡಿದ್ದರು. ಪೊಲೀಸ್‌ ಇಲಾಖೆಯಲ್ಲಿ 100 ಕೋಟಿ ರೂ. ಲಂಚ ವಸೂಲಿ, ಸುಲಿಗೆ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಗಂಭೀರ ಆರೋಪ ಹೊರಿಸಿದ್ದರು. ಈ ಸಂಬಂಧ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಇಡಿ ದೇಶ್‌ಮುಖ್ ಮೇಲೆ ಪ್ರಕರಣ ದಾಖಲಿಸಿತ್ತು. ಇದನ್ನೂ ಓದಿ: ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟ

    ಸಹಕಾರ ನೀಡಿದ್ದೇನೆ:
    ವಿಚಾರಣೆಗೆ ತೆರಳುವ ಮುನ್ನ ದೇಶ್‌ಮುಖ್‌ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದರು. ನಾನು ತನಿಖೆಗೆ ಸಹಕರಿಸುತ್ತಿದ್ದೇನೆ. ಈ ಹಿಂದೆಯೂ ಸಿಬಿಐ ಮುಂದೆ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದೇನೆ. ತನಿಖೆಗೆ ಸಹಕರಿಸುತ್ತಿಲ್ಲ ಎಂಬ ವರದಿಗಳಿಗೆ ಆಧಾರವಿಲ್ಲ. ನನ್ನ ಅರ್ಜಿ ಸುಪ್ರೀಂನಲ್ಲಿ ವಿಚಾರಣೆಯಲ್ಲಿದೆ. ಈ ಅರ್ಜಿ ವಿಚಾರಣೆಗೆ ಕೆಲ ಸಮಯ ಇರುವ ಕಾರಣ ಇಂದು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ತಿಳಿಸಿದ್ದರು.

  • ISIS ಉಗ್ರ ಸಂಘಟನೆಯೊಂದಿಗೆ ನಂಟು – ಬೆಂಗಳೂರಿನ ಯುವಕನ ಬಂಧನ

    ISIS ಉಗ್ರ ಸಂಘಟನೆಯೊಂದಿಗೆ ನಂಟು – ಬೆಂಗಳೂರಿನ ಯುವಕನ ಬಂಧನ

    ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾದ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತ ಆರೋಪಿ ಬೆಂಗಳೂರಿನ ಮುಹಮ್ಮದ್ ತಾಖಿರ್ ಮೊಹಮ್ಮದ್ (33) ಎಂದು ಗುರುತಿಸಲಾಗಿದೆ. ಈತನನ್ನು ಶನಿವಾರ ಬಂಧಿಸಲಾಯಿತು. ಸೆಕ್ಷನ್ 120ಬಿ, ಐಪಿಸಿ 125 ಮತ್ತು ಸೆಕ್ಷನ್ 17,18 ಹಾಗೂ ಯುಎ (ಪಿ) 18ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‍ಐಎಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

    ಮುಸ್ಲಿಂ ಸಮುದಾಯದ ಯುವಕರಲ್ಲಿ ಮೂಲಭೂತವಾದವನ್ನು ಪಸರಿಸಿ, ಅವರನ್ನು ಐಎಸ್ ಉಗ್ರ ಸಂಘಟನೆಗೆ ಸೇರಲು ಸಿರಿಯಾಕ್ಕೆ ಕಳುಹಿಸುತ್ತಿದ್ದ ಎಂಬ ಆರೋಪದ ಮೇಲೆ ಮುಹಮ್ಮದ್‍ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಯುಪಿ ಜನತೆಗೆ 10 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ – ಪ್ರಿಯಾಂಕಾ ಗಾಂಧಿ ಭರವಸೆ

    ನಿಷೇಧಿತ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ಮುಹಮ್ಮೊದ್ ಜೊತೆಗೆ ಜುಹಾಬ್ ಹಮೀದ್ ಅಲಿಯಾಸ್ ಶಕೀಲ್ ಮನ್ನಾ, ಇರ್ಫಾನ್ ನಾಸಿರ್, ಮೊಹದ್ ಶಿಹಾಬ್ ಎಂಬವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

    ಎನ್‍ಐಎ ಈ ಹಿಂದೆ ಅಹಮ್ಮದ್ ಅಬ್ದುಲ್ ಕ್ಯಾಡರ್ ಮತ್ತು ಇರ್ಫಾನ್ ನಾಸಿರ್ ಅವರನ್ನು ಬಂಧಿಸಿ ಏ.1ರಂದು ಚಾರ್ಜ್‍ಶೀಟ್ ಸಲ್ಲಿಸಿತ್ತು.

  • ಬೇಗೂರಲ್ಲಿ ನಡೆದಿದ್ದ ತಾಯಿ-ಮಗಳ ಕೊಲೆ ಆರೋಪಿ ಬಳ್ಳಾರಿಯಲ್ಲಿ ಅರೆಸ್ಟ್!

    ಬೇಗೂರಲ್ಲಿ ನಡೆದಿದ್ದ ತಾಯಿ-ಮಗಳ ಕೊಲೆ ಆರೋಪಿ ಬಳ್ಳಾರಿಯಲ್ಲಿ ಅರೆಸ್ಟ್!

    ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯ ಬೇಗೂರಲ್ಲಿ ನಡೆದಿದ್ದ ತಾಯಿ-ಮಗಳ ಕೊಲೆ ಕೇಸ್‍ನ ಆರೋಪಿ ಪ್ರಶಾಂತ್‍ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

    ಫೇಸ್‍ಬುಕ್‍ನಲ್ಲಿ ಪರಿಚಯ ಆಗಿದ್ದ ಚಂದ್ರಕಲಾ ವೀಡಿಯೋವೊಂದನ್ನು ಬ್ಲ್ಯಾಕ್‍ಮೇಲ್ ಮಾಡಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಫೇಸ್‍ಬುಕ್‍ನಲ್ಲಿ ಪ್ರಶಾಂತ್‍ಗೂ ಚಂದ್ರಕಲಾಗೂ ಪರಿಚಯ ಆಗಿತ್ತು. ಮನೆಗೆ ಬರುವಂತೆ ಪ್ರಶಾಂತ್‍ಗೆ ಚಂದ್ರಕಲಾ ಒತ್ತಾಯಿಸ್ತಿದ್ಳು. ಹೀಗಾಗಿ ಚಂದ್ರಕಲಾ ನೋಡಲು ಬಳ್ಳಾರಿಯಿಂದ ಬಂದಿದ್ದ. ಇದನ್ನೂ ಓದಿ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಇನ್ನೆರಡು ದಿನ ಜೈಲೇ ಗತಿ

    ಆ ದಿನ ಚಂದ್ರಕಲಾ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ವೇಳೆ ಅಂಗಿ ಹಾಕದೇ ಪಂಚೆಯಲ್ಲೇ ಮಲಗಿದ್ದ. ಇದರ ವೀಡಿಯೋವನ್ನು ಚಂದ್ರಕಲಾ ರೆಕಾರ್ಡ್ ಮಾಡಿ ಹಣ ಕೊಡುವಂತೆ ಇಲ್ಲವಾದ್ರೆ ಫೇಸ್‍ಬುಕ್‍ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಳು. ಆಗ ಇಬ್ಬರ ನಡುವೆಯೂ ಗಲಾಟೆ ಆಗಿದೆ. ಈ ವೇಳೆ ಆಕೆಯ ನಾಲ್ಕು ವರ್ಷದ ಮಗಳು ಅಡ್ಡಬಂದಿದ್ಳು. ಮಗಳನ್ನು ತಳ್ಳಿದ್ದರಿಂದ ಕೋಪಗೊಂಡ ಚಂದ್ರಕಲಾ ಚಾಕು ತಂದ್ಳು. ಅದೇ ಚಾಕುವಿನಿಂದ ಪ್ರಶಾಂತ್ ಚಂದ್ರಕಲಾ ಮತ್ತು ಆಕೆಯ ಮಗುವನ್ನು ಕೊಲೆ ಮಾಡಿ ಪರಾರಿ ಆಗಿದ್ದನು.

    ಸದ್ಯ ಪ್ರಶಾಂತ್‍ನನ್ನು ಬೇಗೂರು ಪೊಲೀಸರು ಬಳ್ಳಾರಿಯಲ್ಲಿ ಅರೆಸ್ಟ್ ಮಾಡಿ ಕರೆತಂದಿದ್ದಾರೆ.

  • ಲಾಂಗ್ ಡ್ರೈವ್ ಹೋಗಲು ಹಣಕ್ಕಾಗಿ ಕಳ್ಳತನಕ್ಕಿಳಿದಿದ್ದ ಲವ್ವರ್ಸ್ ಅರೆಸ್ಟ್

    ಲಾಂಗ್ ಡ್ರೈವ್ ಹೋಗಲು ಹಣಕ್ಕಾಗಿ ಕಳ್ಳತನಕ್ಕಿಳಿದಿದ್ದ ಲವ್ವರ್ಸ್ ಅರೆಸ್ಟ್

    – ಬಾಡಿಗೆ ನೆಪದಲ್ಲಿ ಮನೆಗೆ ಹೋಗಿ ಸಿಕ್ಕಿದ್ದು ಕಳವು

    ಬೆಂಗಳೂರು: ಲಾಂಗ್ ಡ್ರೈವ್ ಹೋಗಲು ಹಣವಿಲ್ಲ ಎಂದು ಕಳ್ಳತನಕ್ಕೆ ಇಳಿದ ಜೋಡಿಯೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ವಿನಯ್ ಹಾಗೂ ಕೀರ್ತನಾ ಎಂದು ಗುರುತಿಸಲಾಗಿದ್ದು, ಇವರನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಲಾಕ್ ಮಾಡಿದ್ದಾರೆ.

    ವಿನಯ್ ರಾಜಾಜಿನಗರದ ರೌಡಿಶೀಟರ್ ಆಗಿದ್ದು, ಈತ ಕೀರ್ತನಾಳನ್ನು ಲವ್ ಮಾಡುತ್ತಿದ್ದ. ಅಂತೆಯೇ ಕೀರ್ತನಾ ತನ್ನ ಪ್ರಿಯಕರನ ಬಳಿ ಲಾಂಗ್ ಡ್ರೈವ್ ಹಾಗೂ ಗೋಲ್ಡ್ ಗಿಫ್ಟ್ ಬೇಡಿಕೆಯಿಟ್ಟಿದ್ದಾಳೆ. ಆಗ ವಿನಯ್, ನಾನೇ ಕಳ್ಳ. ನಿನಗೇನೆ ಗಿಫ್ಟ್ ಕೊಡಿಸ್ಲಿ. ನಾನೊಬ್ಬ ರೌಡಿಶೀಟರ್ ಅಂತ ಕೀರ್ತನಾಳನ್ನ ಕಿಚಾಯಿಸುತ್ತಿದ್ದ. ಇತ್ತ ನೀನ್ ರೌಡಿ ಆದರೂ ನಿನ್ನನ್ನು ಲವ್ ಮಾಡಿದ್ದೀನಿ. ನಿನ್ನ ಜೊತೆ ಜೈಲಿಗೆ ಬರೋದಕ್ಕೂ ನಾನು ರೆಡಿ ಇದ್ದೀನಿ ಅಂತ ಕೀರ್ತನಾ, ವಿನಯ್ ಬಳಿ ಹೇಳಿದ್ದಳು. ಅದರಂತೆ ಲವ್ವರ್ ರೌಡಿಶೀಟರ್ ವಿನಯ್ ಜೊತೆ ಕಳ್ಳತನಕ್ಕೆ ಕೀರ್ತನಾ ಕೂಡ ಕೈ ಜೋಡಿಸಿದ್ದಾಳೆ. ಗಂಡ-ಹೆಂಡತಿಯಂತೆ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಈ ಖರ್ತನಾಕ್ ಲವ್ವರ್ಸ್ ಮನೆಗಳವು ಮಾಡ್ತಿದ್ದರು.

    ಮಾರುತಿ ನಗರದ ಕುಲಶೇಖರ್ ಎಂಬವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ಹೋಗಿ ಕಳ್ಳತನ ಮಾಡಿದ್ದಾರೆ. ಮನೆ ಮಾಲೀಕನ ಮನೆಯಲ್ಲಿ ಬಾಡಿಗೆ ಮಾತಾಡುವ ನೆಪದಲ್ಲಿ ವಿನಯ್ ಮಾತಿಗಿಳಿತಿದ್ದ. ಈ ವೇಳೆ ಮಾಲೀಕರ ಮನೆ ತುಂಬಾ ಚೆನ್ನಾಗಿದೆ ಅಂತ ಮನೆ ನೋಡಲು ಕೀರ್ತನಾ ಮುಂದಾಗುತ್ತಿದ್ದಳು. ವಿನಯ್ ಮಾತಾಡಿಸುತ್ತಾ ಮೈಂಡ್ ಡೈವರ್ಟ್ ಮಾಡ್ತಿದ್ರೆ, ಇತ್ತ ಕೈಗೆ ಸಿಕ್ಕ ವಸ್ತುಗಳನ್ನ ಕೀರ್ತನಾ ಎಗರಿಸ್ತಿದ್ದಳು. ಇದನ್ನೂ ಓದಿ: ಕೆರೆ ನೋಡಲು ಬಂದವರಿಗೆ ಕೊರೊನಾ ವ್ಯಾಕ್ಸಿನ್

    ಕಳೆದ ಅಕ್ಟೋಬರ್ 4 ರಂದು ಕುಲಶೇಖರ್ ಮನೆಯಲ್ಲಿ 1 ಮೊಬೈಲ್ 1 ಲ್ಯಾಪ್ ಟಾಪ್ ಹಾಗೂ 15 ಸಾವಿರ ಹಣ ಎಗರಿಸಿದ್ರು. ಸದ್ಯ ಮನೆ ಮಾಲೀಕ ಕುಲಶೇಖರ್ ಕೊಟ್ಟ ದೂರಿನನ್ವಯ ಕಳ್ಳ ಲವ್ವರ್ಸ್ ಅರೆಸ್ಟ್ ಆಗಿದ್ದಾರೆ. ಸದ್ಯ ರೌಡಿ ಲವ್ವರ್ ಜೊತೆ ಕಳ್ಳತನಕ್ಕೆ ಹೋಗಿ ಪ್ರಿಯತಮೆ ಕೀರ್ತನಾ ಕೂಡ ಜೈಲು ಪಾಲಾಗಿದ್ದಾಳೆ.