Tag: arrest

  • ಓರ್ವನ ಕೊಲೆ – 18 ಮಂದಿ ಅರೆಸ್ಟ್!

    ಓರ್ವನ ಕೊಲೆ – 18 ಮಂದಿ ಅರೆಸ್ಟ್!

    ಹೈದರಾಬಾದ್: ಅಂಗಡಿ ಮಾಲೀಕನೊಬ್ಬನ ಹತ್ಯೆಗೈದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು 18 ಜನರನ್ನು ಬಂಧಿಸಿದ್ದಾರೆ.

    ಹೈದರಾಬಾದ್‌ನ ಎಲ್‌ಬಿ ನಗರದ ನಿವಾಸಿ ನರಸಿಂಹ ರೆಡ್ಡಿ(33) 2021ರ ಡಿಸೆಂಬರ್ 31ರಂದು ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 21 ಮಂದಿಯ ಮೇಲೆ ಕೇಸ್ ದಾಖಲಿಸಿದ್ದಾರೆ. ಈಗಾಗಲೇ ಪೊಲೀಸರು 18 ಆರೋಪಿಗಳನ್ನು ಬಂಧಿಸಿದ್ದು, ಮೂವರು ಆರೋಪಿಗಳನ್ನು ಹುಡುಕುತ್ತಿದ್ದಾರೆ.

    ನರಸಿಂಹ ರೆಡ್ಡಿ 2021ರ ಡಿಸೆಂಬರ್ 31ರಂದು ತನ್ನ ಹುಟ್ಟು ಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದ ಇನ್ನೊಂದು ಗುಂಪಿನೊಂದಿಗೆ ಜಗಳ ನಡೆದಿದೆ. ಪರಿಣಾಮ ನರಸಿಂಹ ರೆಡ್ಡಿ ಹತ್ಯೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಅಂತಾ ಸುಳ್ಳಿ ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

    POLICE JEEP

    ಮಲಿಕ್, ಮಿಟ್ಟು, ರಾಘವ ಎಂಬ ಮೂವರು ಆರೋಪಿಗಳು ಆರಂಭದಲ್ಲಿ ಜಗಳ ಪ್ರಾರಂಭಿಸಿ, ನಂತರ ತಮ್ಮ ಸಹಪಾಠಿಗಳನ್ನು ಕರೆಸಿಕೊಂಡಿದ್ದಾರೆ. ಕಾರು ಹಾಗೂ ಬೈಕ್‌ಗಳಲ್ಲಿ ಬಂದಿದ್ದ ಒಟ್ಟು 21 ಆರೋಪಿಗಳು ನರಸಿಂಹ ರೆಡ್ಡಿ ಗುಂಪಿನ ಮೇಲೆ ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಿರುಕುಳದಿಂದ ಬೇಸತ್ತು ಮಕ್ಕಳಿಂದ ಮರಳಿ ಆಸ್ತಿ ಪಡೆದುಕೊಳ್ಳುವಲ್ಲಿ ವೃದ್ಧ ತಾಯಿ ಯಶಸ್ವಿ!

    ಎಲ್‌ಬಿ ನಗರ ಪೊಲೀಸರು 18 ಆರೋಪಿಗಳನ್ನು ಬಂಧಿಸಿ, ಮೂರು ಕಾರ್, ಬೈಕ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

  • ಅಪ್ರಾಪ್ತೆಗೆ ಮಾದಕ ವಸ್ತು ನೀಡಿ ಗ್ಯಾಂಗ್ ರೇಪ್ ಮಾಡಿದ ಕಾಮುಕರು

    ಅಪ್ರಾಪ್ತೆಗೆ ಮಾದಕ ವಸ್ತು ನೀಡಿ ಗ್ಯಾಂಗ್ ರೇಪ್ ಮಾಡಿದ ಕಾಮುಕರು

    ಲಕ್ನೋ: ಬಾಲಕಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    10ನೇ ತರಗತಿಯ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ. ಅಪ್ರಾಪ್ತ ಬಾಲಕಿ ಟ್ಯೂಷನ್ ತರಗತಿಗೆ ಹೋಗಿದ್ದಳು. ಆ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಬಂದು ಆಕೆಗೆ ಮಾದಕ ದ್ರವ್ಯ ನೀಡಿದ್ದಾರೆ. ನಂತರ ಅವಳನ್ನು ಇಬ್ಬರು ವ್ಯಕ್ತಿಗಳು ಸದ್ಪುರ ಗ್ರಾಮದ ಬಳಿ ಇರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅರಣ್ಯದಲ್ಲಿದ್ದ ಮತ್ತಿಬ್ಬರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

    RAPE

    ಬಾಲಕಿಯು ಸಂಜೆ ಕಳೆದರೂ ಮನೆಗೆ ಬಾರದಿರುವುದರಿಂದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯ ಪತ್ತೆಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಈ ವೇಳೆ ಬಾಲಕಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಬಾಲಕಿಗೆ ಚಿಕಿತ್ಸೆ ನೀಡಿದ್ದಾರೆ. ಪ್ರಜ್ಞೆ ಬಂದ ನಂತರ ಬಾಲಕಿಯು ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದಾಳೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ – ಪೋಕ್ಸೊ ಕಾಯ್ದೆಯಡಿ ಶಿಕ್ಷಕನ ಬಂಧನ

    JAIL

    ಪ್ರಕರಣ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸ್ಥಳೀಯ ಜನಸತ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಸರಣಿ ಸರಕಳ್ಳತನ – ತಾಯಿ, ಮಗಳು ಬಂಧನ

  • ಆನ್‌ಲೈನ್‌ನಲ್ಲಿ ವಂಚಿಸಿದ್ದ ನೇಪಾಳಿ ಪ್ರಜೆಗಳ ಬಂಧನ

    ಆನ್‌ಲೈನ್‌ನಲ್ಲಿ ವಂಚಿಸಿದ್ದ ನೇಪಾಳಿ ಪ್ರಜೆಗಳ ಬಂಧನ

    ಹೈದರಾಬಾದ್: ಆನ್‌ಲೈನ್ ಹೂಡಿಕೆಯಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬನಿಗೆ 86 ಲಕ್ಷ ರೂಪಾಯಿ ವಂಚಿಸಿದ ಮೂವರು ನೇಪಾಳಿ ಪ್ರಜೆಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಗೋಪಾಲ್ ಶೆರ್ಪಾ (24), ಸುಶೀಲ್ ಗುರುಂಗ್ (29), ಮತ್ತು ನಿಮಾ ತಮಾಂಗ್ ಅಲಿಯಾಸ್ ಅಮೃತ್ ತಮಾಂಗ್ (24) ಬಂಧಿತ ಆರೋಪಿಗಳು. ಪ್ರಕರಣ ಸಂಬAಧಿಸಿ ರಾಚಕೊಂಡ ಸೈಬರ್ ಕ್ರೈಂ ಪೊಲೀಸರಿಗೆ ಘಟಕೇಸರ ನಿವಾಸಿ ಭಾನೋತು ಕಿರಣ್ ಕುಮಾರ್ ದೂರು ನೀಡಿದ್ದರು.

    ಈ ಬಗ್ಗೆ ತನಿಖೆ ಕೈಗೊಂಡ ಸೈಬರ್ ಕ್ರೈಂ ತಂಡವು, ಶಂಕಿತರ ಬ್ಯಾಂಕ್ ಖಾತೆಗಳು ಮತ್ತು ಕಾಲ್ ಡಾಟಾದ ದಾಖಲೆಗಳನ್ನು ಕಲೆ ಹಾಕಿತ್ತು. ನಂತರ ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಕಾರ್ಯಾಚರಣೆ ನಡೆಸುತ್ತಿರುವ ಗ್ಯಾಂಗ್‌ನ ಪತ್ತೆ ಮಾಡಿದೆ. ನ.3ರಂದು ಕಿಂಗ್‌ಪಿನ್ ದೀಪು ಮಂಡಲ್ ಸಹಚರರಾದ ಸಿಲಿಗುರಿಯ ನೂರ್ ಆಲಂ, ಎಕ್ರಾಮ್ ಹುಸೇನ್ ಮತ್ತು ಎಂಡಿ ಇಜಾರುಲ್ ಅವರನ್ನು ಬಂಧಿಸಿತ್ತು. ಅವರಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ನೇಪಾಳದ ವಂಚಕರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಕೇಳಬಹುದು

    ಆರೋಪಿಗಳ ಹತ್ತಿರವಿದ್ದ 1 ಲಕ್ಷ ನಗದು ಹಾಗೂ 53 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಅವರ ಬ್ಯಾಂಕ್ ಖಾತೆಯಲ್ಲಿದ್ದ 10 ಲಕ್ಷ ರೂ.ಗಳನ್ನು ಸ್ಥಗಿತಗೊಳಿಸಿದ್ದಾರೆ. ಇವರೆಲ್ಲರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ದೀಪು ಮಂಡಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಭಾಗವತ್ ತಿಳಿಸಿದ್ದಾರೆ. ಇದನ್ನೂ ಓದಿ: ಐಟಿ ಕಂಪೆನಿಗಳಿಗೆ ಟೆಕ್ಕಿಗಳಿಂದಲೇ ವಂಚನೆ!

  • ಕೋಟೆನಾಡಲ್ಲಿ ಖೋಟಾ ನೋಟು ನೋಟ್ ಕಿಂಗ್ ಪಿನ್ ಅರೆಸ್ಟ್

    ಕೋಟೆನಾಡಲ್ಲಿ ಖೋಟಾ ನೋಟು ನೋಟ್ ಕಿಂಗ್ ಪಿನ್ ಅರೆಸ್ಟ್

    ಚಿತ್ರದುರ್ಗ: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಖೋಟಾ ನೋಟು ನೀಡುವ ಮೂಲಕ ವಂಚಿಸಿ ನಾಪತ್ತೆಯಾಗಿದ್ದ ಚಿತ್ರದುರ್ಗ ನಗರಸಭೆ ಸದಸ್ಯ ಚಂದ್ರಶೇಖರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ

    ಚಂದ್ರಶೇಖರನ  ಪತ್ನಿ ದೇವಿಕಾ, ಬಾಬು ಹಾಗೂ ಅರುಣ್ ಬಂಧಿತರು. ಈತ ಹಲವು ವರ್ಷಗಳಿಂದ ಖೋಟಾ ನೋಟು ದಂಧೆ ನಡೆಸುತ್ತಾ ಹಲವರನ್ನು ವಂಚಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಬಿಂದಾಸ್ ಆಗಿದ್ದನು. ವಾರ್ಡ್ ನಂ.4ರ JDS ನಗರಸಭೆ ಸದಸ್ಯ ಚಂದ್ರಶೇಖರ್ ಅಲಿಯಾಸ್ ಟೋಲಿ ಚಂದ್ರನನ್ನು ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ ನೇತೃತ್ವದಲ್ಲಿ ಬಂಧಿಸಲಾಗಿದೆ.

    ಡಿಸೆಂಬರ್ 6 ರಂದು 6ಲಕ್ಷ ನಗದು ಪಡೆದು 18 ಲಕ್ಷ ನೀಡುವುದಾಗಿ ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಚಿತ್ರದುರ್ಗ ಪೊಲೀಸರು ಆಂದ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.ದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ದೊಡ್ಡಬಳ್ಳಾಪುರದ ನಾಗರಾಜ್ ಅವರಿಂದ 6ಲಕ್ಷ ಅಸಲಿ ಹಣ ಪಡೆದು 18ಲಕ್ಷ ಹಣವಿದೆ ಎಂದು ಬ್ಯಾಗ್ ನೀಡಿ ಮೋಸ ಮಾಡಲಾಗಿತ್ತು. ಹೀಗಾಗಿ ಪ್ರಕರಣ ಧಾಖಲಿಸಿಕೊಂಡ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು, ಚಂದ್ರಶೇಖರ್ ಮತ್ತಿತರರ ವಿರುದ್ಧ ಕೇಸ್ ದಾಖಲಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸಿಪಿಐ ಶಂಖರಪ್ಪ ಸೇರಿದಂತೆ ಪ್ರಕರಣ ಭೇದಿಸಿದ ಎಲ್ಲಾ ಸಿಬ್ಬಂದಿ ಎಸ್‍ಪಿ ರಾಧಿಕಾ ಅಭಿನಂದಿಸಿದ್ದಾರೆ. ದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ

  • ಜೂಜಾಡುತ್ತಿದ್ದ ಎಎಸ್‌ಐ, ಕಾನ್‌ಸ್ಟೇಬಲ್, ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿ ಅರೆಸ್ಟ್

    ಜೂಜಾಡುತ್ತಿದ್ದ ಎಎಸ್‌ಐ, ಕಾನ್‌ಸ್ಟೇಬಲ್, ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿ ಅರೆಸ್ಟ್

    ಚಾಮರಾಜನಗರ: ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ, ಕ್ಲಬ್ ನಡೆಸುತ್ತಿದ್ದ ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿಯನ್ನು ಬಂಧಿಸಿರುವ ಘಟನೆ ನಗರಸ ಕರಿನಂಜನಪುರ ಬಳಿ ನಡೆದಿದೆ.

    ಮೀಸಲು ಪಡೆಯ ಎಎಸ್‌ಐ ಪ್ರದೀಪ್, ಹೆಡ್ ಕಾನ್‌ಸ್ಟೇಬಲ್ ಮರಿಸ್ವಾಮಿ, ಚಾಮರಾಜನಗರ ತಹಸೀಲ್ದಾರ್ ಚಾಲಕ ಕಮಲೇಶ್ ಸೇರಿದಂತೆ 20 ಮಂದಿಯನ್ನು ಜಿಲ್ಲಾ ಪೊಲೀಸ್ ವಿಶೇಷ ತಂಡ ಬಂಧಿಸಿ, 29 ಸಾವಿರ ರೂ.ವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    MONEY

    7 ಮಂದಿ ಭಕ್ತರ ಬಂಧನ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜೂಜಾಡುತ್ತಿದ್ದ 7 ಮಂದಿ ಭಕ್ತರನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ತಲಕಾಡು ಗ್ರಾಮದ ಶಿವಾನಂದಸ್ವಾಮಿ, ನಾಗೇಂದ್ರ ಕುಮಾರ್, ವಿಜಯ್, ಮಹದೇವಪ್ಪ, ಬಸವರಾಜು ಕೃಷ್ಣ, ಸಂತೋಷ್ ಕುಮಾರ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಪೊಲೀಸರು ಲಂಚ ಪಡೆದರೆ ಕೆಲ್ಸ ಆಗುತ್ತೆ, ಬೇರೆಯವರು ಹಣ ಪಡೆದ್ರೂ ಏನೂ ಮಾಡಲ್ಲ: ಪೊಲೀಸ್

    POLICE JEEP

    ಮಲೆ ಮಹದೇಶ್ವರ ಬೆಟ್ಟದ ಸಾಲೂರು ಸ್ಮಾರಕ ಭವನದ ಹಿಂಭಾಗ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಪೊಲೀಸರು ದಾಳಿ ನಡೆಸಿ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿ ಪಣಕ್ಕಿಟ್ಟಿದ್ದ 26,750 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್

  • ಆರೋಪಿಯನ್ನು ಅರೆಬೆತ್ತಲೆಯಾಗಿ ಠಾಣೆಗೆ ಕರೆತಂದ ಪೊಲೀಸರು

    ಆರೋಪಿಯನ್ನು ಅರೆಬೆತ್ತಲೆಯಾಗಿ ಠಾಣೆಗೆ ಕರೆತಂದ ಪೊಲೀಸರು

    ಚಿತ್ರದುರ್ಗ: ಆರೋಪಿಯನ್ನು ಅರೆಬೆತ್ತಲೆಯಾಗಿ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಈ ಘಟನೆ ನಡೆದಿದೆ. ನಾಯಕನಹಟ್ಟಿ ಗ್ರಾಮದ ವಿಗ್ರಹ ವ್ಯಾಪಾರಿ ವೇಣುಗೋಪಾಲ್ ಬಂಧಿತ ಆರೋಪಿ. ಈತ ಪಕ್ಕದ ಮನೆಯವರ ಜೊತೆ ಗಲಾಟೆ ಮಾಡಿದ್ದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿತ್ತು.

    ಈ ಹಿನ್ನೆಲೆಯಲ್ಲಿ ವೇಣುಗೋಪಾಲ್ ಮನೆಗೆ ಹೋದ ಕಾನ್‌ಸ್ಟೇಬಲ್ ಚಂದ್ರನಾಯಕ್ ಅರೆಸ್ಟ್ ವಾರೆಂಟ್ ಹಿಡಿದು ಬಂದಿದ್ದರು. ಆ ಸಮಯದಲ್ಲಿ ವೇಣುಗೋಪಾಲ್ ಸ್ನಾನಕ್ಕೆ ಹೋಗಿದ್ದರು.

    ಆದರೆ ನಾಯಕನಹಟ್ಟಿ ಪಿಎಸ್‌ಐ ಮಹೇಶ್ ಕೂಡಲೇ ಅವರನ್ನು ಕರೆತರುವಂತೆ ಕಾನ್‌ಸ್ಟೇಬಲ್ ಸೂಚನೆ ನೀಡಿದ್ದರಿಂದ ವೇಣುಗೋಪಾಲ್ ಎಷ್ಟೇ ಮನವಿ ಮಾಡಿಕೊಂಡರು, ಆರೋಪಿಯನ್ನು ಅರೆಬೆತ್ತಲೆ ಮೆರವಣಿಗೆ ಮೂಲಕ ನಾಯಕನಟ್ಟಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಈ ಬಗ್ಗೆ ಆರೋಪಿ ವೇಣುಗೋಪಾಲ್ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ

    ಆರೋಪಿಯನ್ನು ಪೊಲೀಸರು ಅರೆ ಬೆತ್ತಲೆಯಲ್ಲಿ ಠಾಣೆಗೆ ಕರೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲೆಯಾದ್ಯಂತ ಪ್ರಜ್ಞಾವಂತರಿAದ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಎಚ್ಚೆತ್ತಿರುವ ಚಿತ್ರದುರ್ಗ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಆರೋಪಿ ಬೇಕಂತಲೇ ಈ ರೀತಿ ಮಾಡಿದ್ದಾರೆ. ಪೊಲೀಸರು ಬಟ್ಟೆ ಹಾಕಿಕೊಳ್ಳಿ ಎಂದರೂ ಸಹ, ಯಾರ ಮಾತನ್ನು ಕೇಳದೆ ಏಕಾಏಕಿ ರಸ್ತೆಗೆ ಬಂದಿದ್ದಾರೆ. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ ಎಂದು ಚಿತ್ರದುರ್ಗ ಎಸ್.ಪಿ ಜಿ. ರಾಧಿಕಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

    ಅರೆಬೆತ್ತಲೆ ಸ್ಥಿತಿಯಲ್ಲಿ ಕರೆತಂದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಕನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ವ್ಯಾಪಾರಿಯ ಬಂಧನ

    ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ವ್ಯಾಪಾರಿಯ ಬಂಧನ

    ಬೀದರ್: ಬಂಗಾರ ಕರಗಿಸಿ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ ಚಿನ್ನಾಭರಣ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ ಘಟನೆ ಇಂದು ಬೀದರ್‌ನಲ್ಲಿ ನಡೆದಿದೆ.

    ಬೀದರ್ ನಗರದ ಉಸ್ಮಾನ್ ಗಂಜ್‌ನಲ್ಲಿರುವ ಅಂಬಾಭವಾನಿ ಗೋಲ್ಡ್ ರಿಫೈನರಿ ಚಿನ್ನಾಭರಣ ಮಾಲೀಕನಿಂದ ವಂಚನೆಯಾಗಿದ್ದು, ನ. 21ರಂದು ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಬಿ ಗ್ರಾಮದ ಗಣೇಶ್ ನರಸಿಂಹ ಎಂಬುವರು ದೂರು ನೀಡಿದ್ದರು.

    Man in prison hands of behind hold Steel cage jail bars. offender criminal locked in jail.

    ದೂರು ದಾಖಲಾದ ಬಳಿಕ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಿ 41 ಲಕ್ಷ 30 ಸಾವಿರ ರೂ. ಮೌಲ್ಯದ 826 ಗ್ರಾಮ ತೂಕದ ಬಂಗಾರದ ಬಿಸ್ಕಿಟ್ ಹಾಗೂ 16 ಲಕ್ಷ ರೂ. ಮೌಲ್ಯದ ಬಂಗಾರ ಪರೀಕ್ಷಿಸುವ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

    ಒಟ್ಟು 57 ಲಕ್ಷ 30 ಸಾವಿರ ರೂ. ಬೆಲೆ ಬಾಳುವ ಸ್ವತ್ತನ್ನು ಬೀದರ್ ಪೊಲೀಸರಿಂದ ಜಪ್ತಿ ಮಾಡಿದ್ದು, ಈ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್‌

  • ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಬೆಂಗಳೂರು: ವಾಟ್ಸಪ್ ಲೊಕೇಷನ್ ಹಾಗೂ ಫೋಟೋದಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೇರಳ ಮೂಲದ ಮೊಹಮ್ಮದ್ ಸಕಾರಿಯ, ಶಾಮಿಲ್, ಪ್ರಣವ್, ಅನುಭವ್ ರವೀಂದ್ರನ್, ಶ್ಯಾಮ್ ದಾಸ್ ಬಂಧಿತ ಆರೋಪಿಗಳು. ನಿಗದಿತ ಸ್ಥಳದಲ್ಲಿ ಡ್ರಗ್ಸ್ ಇಟ್ಟು, ಖರೀದಿ ಮಾಡುವವರಿಗೆ ಆ ಸ್ಥಳದ ಫೋಟೋ ಮತ್ತು ಲೊಕೇಷನ್‌ನನ್ನು ವಾಟ್ಸಪ್ ಮಾಡುತ್ತಿದ್ದರು.

    ನೇರವಾಗಿ ಡ್ರಗ್ಸ್ ಪೆಡ್ಲಿಂಗ್ ಮಾಡುವವರ ಮೇಲೆ ಪೊಲೀಸರು ನಿಗಾವಹಿಸುತ್ತಿರುವ ಹಿನ್ನೆಲೆಯಲ್ಲಿ ಮರದ ಬುಡ, ಸಾರ್ವಜನಿಕರು ಓಡಾಡುವ ಜಾಗ, ವಾಕಿಂಗ್, ಜಾಗಿಂಗ್ ಮಾಡುವ ಜಾಗಗಳಲ್ಲಿ ಪೆಡ್ಲರ್‌ಗಳು ಡ್ರಗ್ಸ್ ಇಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಡಿವಾಳ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್ ನಡೆಯುತ್ತಿರುವ ಮಾಹಿತಿ ದೊರಕಿದ್ದು, ಐವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೊದಲನೇ ಬಾರಿಗೆ ನನ್ನ ಅಣ್ಣನಿಗೆ ವೋಟು ಹಾಕುತ್ತಿರೊದ್ರಿಂದ ಒಳ್ಳೆಯ ನಂಬರ್‌ನಲ್ಲಿ ವೋಟು ಹಾಕ್ದೆ ಅಷ್ಟೇ: ಪ್ರಜ್ವಲ್ ರೇವಣ್ಣ

  • ಚಿರತೆಯ ಉಗುರು, ಕೊರೆಹಲ್ಲುಗಳ ಮಾರಾಟ ಮಾಡುತ್ತಿದ್ದವರ ಬಂಧನ

    ಚಿರತೆಯ ಉಗುರು, ಕೊರೆಹಲ್ಲುಗಳ ಮಾರಾಟ ಮಾಡುತ್ತಿದ್ದವರ ಬಂಧನ

    ಹೈದರಾಬಾದ್: ಚಿರತೆಯ ಉಗುರು ಮತ್ತು ಕೊರೆಹಲ್ಲುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಅಮ್ರಾಬಾದ್ ಹುಲಿ ಸಂರಕ್ಷಿತ ಪ್ರದೇಶದ ಕುಡಿಚಿಂತಲಬೈಲು ಗ್ರಾಮದ ಮಂಡ್ಲಿ ಲಾಲು, ಕುಕ್ಕಲ ಕೃಷ್ಣಯ್ಯ, ಬಿಯಣ್ಣಿ ವೆಂಕಟೇಶ್ ಬಂಧಿತ ಆರೋಪಿಗಳು. ಕಾಡಾನೆ ದಾಳಿಯಿಂದ ತಾವು ಬೆಳೆದ ಬೆಳೆ ರಕ್ಷಿಸಲು ಕೃಷ್ಣಯ್ಯ ಅವರು ಬಲೆಯನ್ನು ಹಾಕಿದ್ದರು. ಇದರಲ್ಲಿ ಚಿರತೆಯೊಂದು ಸೆರೆಯಾಗಿ ಸತ್ತು ಹೋಗಿತ್ತು. ಆ ಮೃತ ಚಿರತೆಯ ಉಗುರು ಮತ್ತು ಕೋರೆ ಹಲ್ಲನ್ನು ತೆಗೆದು ಮಾರಾಟ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.

    ಅಮರಾಬಾದ್ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಕೃಷ್ಣಯ್ಯ ಅವರು ತಮ್ಮ ಜಮೀನಿನಲ್ಲಿ ಬಲೆಗಳನ್ನು ಹಾಕಿದ್ದರು. ಆ ಬಲೆಗೆ ಸಿಲುಕಿ ಚಿರತೆ ಸತ್ತಿರುವುದನ್ನು ಕಂಡು ಹೆದರಿದ್ದರು. ಅಷ್ಟೇ ಅಲ್ಲದೇ ಜಮೀನಿನಲ್ಲಿ ಹಾಕಿದ್ದ ಬಲೆಯನ್ನು ತೆಗೆದು, ತಮ್ಮ ಹೊಲದಲ್ಲಿ ಚಿರತೆ ಸತ್ತಿರುವುದರ ಬಗ್ಗೆ ಅರಣ್ಯ ಬೀಟ್ ಸಿಬ್ಬಂದಿಗೆ ಮಾಹಿತಿ ನೀಡಲು ಮುಂದಾದರು.

    ಆದರೆ, ಲಾಲು ಮತ್ತು ವೆಂಕಟೇಶ್ ಅವರು ಉಗುರುಗಳು ಮತ್ತು ಕೋರೆಹಲ್ಲುಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು ಎಂದು ಕೃಷ್ಣಯ್ಯ ಅವರ ಮನವೊಲಿಸಿದರು. ನಂತರ ಅವರು ಚಿರತೆಯ ಉಗುರು ಮತ್ತು ಕೋರೆಹಲ್ಲುಗಳನ್ನು ತೆಗೆದು ಮೃತದೇಹವನ್ನು ಕಾಡಿನೊಳಗೆ ಸುಟ್ಟು ಹಾಕಿದರು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?

    ಕಾಡಿನಲ್ಲಿದ್ದ ಸುಟ್ಟ ಮೃತದೇಹವನ್ನು ನೋಡಿದ ಅರಣ್ಯ ಇಲಾಖೆ ಸಿಬ್ಬಂದಿ, ತನಿಖೆಗೆ ವಿಶೇಷ ತಂಡವನ್ನು ರಚಿಸಿದರು. ಈ ಸಂಬಂಧ ಮೂವರಲ್ಲಿ ಇಬ್ಬರನ್ನು ಅವರ ಗ್ರಾಮದಲ್ಲಿ ಬಂಧಿಸಿದ್ದರೆ, ಮೂರನೆಯವನನ್ನು ಅಚಂಪೇಟ್ ಗ್ರಾಮದಲ್ಲಿ ಹಿಡಿಯಲಾಯಿತು. ಇದನ್ನೂ ಓದಿ: ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ

  • ಪೂಜೆ ನೆಪದಲ್ಲಿ ಮಹಿಳೆಯರು, ಯುವತಿಯರನ್ನ ವಂಚಿಸುತ್ತಿದ್ದ ವಂಚಕರ ಬಂಧನ

    ಪೂಜೆ ನೆಪದಲ್ಲಿ ಮಹಿಳೆಯರು, ಯುವತಿಯರನ್ನ ವಂಚಿಸುತ್ತಿದ್ದ ವಂಚಕರ ಬಂಧನ

    ಚಿತ್ರದುರ್ಗ: ಪೂಜೆ ನೆಪದಲ್ಲಿ ಚಿನ್ನ ಪಡೆದು ಮಹಿಳೆಯರು ಹಾಗೂ ಯುವತಿಯರನ್ನು ವಂಚಿಸುತಿದ್ದ ಮೂವರು ಆರೋಪಿಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಯುವತಿ ಸೇರಿದಂತೆ ಹಲವರಿಗೆ ವಂಚನೆ ಆರೋಪ ಹೊತ್ತಿರುವ ಹುಬ್ಬಳ್ಳಿಯ ಬಂಡೆಪ್ಪ, ಭೀಮರಾವ್, ಬಾಗಲಕೋಟೆಯ ಗಣೇಶ ಶಾಸ್ತ್ರಿ ಎಂಬ ಖತರ್ನಾಕ್ ಆಸಾಮಿಗಳು ಬಂಧನವಾಗಿದ್ದಾರೆ. ಚಳ್ಳಕೆರೆ ಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಿರೋ ಪೊಲೀಸರು, 6.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    MONEY

    ದೇವಿ ಪೂಜೆ ನೆಪದಲ್ಲಿ ಮಹಿಳೆಯರು, ಯುವತಿಯರಿಂದ ಚಿನ್ನಾಭರಣ ಪಡೆಯುತ್ತಿದ್ದ ವಂಚಕರು, ಪೂಜಾ ನೆಪದಲ್ಲು ನಂಬಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪ ಕೇಳಿಬಂದಿದ್ದು ಸಂಕಷ್ಟದಲ್ಲಿರುವವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಉದ್ಯೋಗ, ಶುಭ ಯೋಗ, ಕಂಕಣ ಭಾಗ್ಯದ ಬಗ್ಗೆ ನಂಬಿಕೆ ಹುಟ್ಟಿಸಿ ವಂಚಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ, ಜನರ ಗಮನ ಸೆಳೆಯುತ್ತಿದ್ದ ಆರೋಪಿಗಳು ಅಮಾಯಕರನ್ನು ವಂಚನೆಯ ಬಲೆಗೆ ಸಿಲುಕಿಸಿ ಹಣ, ಬಂಗಾರ ದೋಚಿ ಪರಾರಿಯಾಗುತ್ತಿದ್ದರು.

    ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಹಿಂದೆ ಇನ್ನು ದೊಡ್ಡ ಜಾಲವೊಂದು ಕೆಲಸ ಮಾಡ್ತಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಈ ಜಾಲವನ್ನು ಭೇದಿಸಿ ಮೂಲಕ ಆತಂಕದಲ್ಲಿ ಸಿಲುಕಿರುವ ಮಹಿಳೆಯರ ನೆಮ್ಮದಿ ಕಾಪಾಡಬೇಕೆಂಬ ಆಗ್ರಹ ಸಾರ್ವಜನಿಜವಾಗಿ ಕೇಳಿಬಂದಿದೆ.