Tag: arrest

  • ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

    ಕೋಡ್ದಬ್ಬು ದೇಗುಲದ ಆಯದಕಲ್ಲಿಗೆ, ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಟ- ವ್ಯಕ್ತಿ ಅರೆಸ್ಟ್

    ಮಂಗಳೂರು: ದೈವಸ್ಥಾನದಲ್ಲಿ ವಿಕೃತಿ ಮೆರೆದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಸಾಹುಲ್ ಹಮೀದ್(27) ಎಂದು ಗುರುತಿಸಲಾಗಿದೆ. ಮಂಗಳೂರು ನಗರ ಹೊರವಲಯದ ಕೈಕಂಬದ ಕಂದಾವರ ಎಂಬಲ್ಲಿನ ಕಂದಾವರ ಪದವು ಶ್ರೀ ಕೋಡ್ದಬ್ಬು ದೇವಸ್ಥಾನಕ್ಕೆ ಆರೋಪಿ ಅಕ್ರಮವಾಗಿ ಪ್ರವೇಶಿಸಿ ಕೃತ್ಯ ಎಸಗಿದ್ದಾನೆ.

    ರಾತ್ರಿ ಹೊತ್ತು ಅಕ್ರಮವಾಗಿ ಪ್ರವೇಶಿಸಿದ್ದ ಆರೋಪಿ ಆಯದಕಲ್ಲಿಗೆ ಹಾಗೂ ಅಂಗಣದ ಸುತ್ತಲೂ ರಕ್ತ ಸುರಿಸಿ ಓಡಾಡಿದ್ದಾನೆ. ಇತ್ತ ಘಟನೆ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಬಬ್ಬುಸ್ವಾಮಿಯ ದರ್ಶನ ನಡೆಸಿದ್ದರು. ದುಷ್ಕರ್ಮಿ ಪತ್ತೆಯಾಗಬೇಕೆಂದು ಪ್ರಾರ್ಥಿಸಿದರು. ಅಲ್ಲದೆ ಪೊಲೀಸ್ ಠಾಣೆಗೂ ದೂರು ನೀಡಿದರು. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ದೇಶದ್ರೋಹಿ ಕಲ್ಲಡ್ಕ ಪ್ರಭಾಕರ ಭಟ್ ಬಂಧನ ಯಾವಾಗ?: ಕಾಂಗ್ರೆಸ್ ಪ್ರಶ್ನೆ

    ದೂರು ದಾಖಲಾದ ಕೆಲವೇ ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಸಾಹುಲ್ ಹಮೀದ್ ಬಳಲುತ್ತಿರುವುದಾಗಿ ಮಾಹಿತಿ ದೊರಕಿದೆ. ಕೈ ಗಾಯಮಾಡಿಕೊಂಡು ದೈವಸ್ಥಾನಕ್ಕೆ ಪ್ರವೇಶಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ರು

    ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, ಆರೋಪಿ ಸಾಹುಲ್ ನನ್ನು ಈಗಾಗಲೇ ಬಂಧನ ಮಾಡಿದ್ದೇವೆ. ಘಟನೆಯ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಯುವಕನ ಕೃತ್ಯದ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೆಡಿಕಲ್ ಟೆಸ್ಟ್ ವೇಳೆ ಆರೋಪಿ ಮಾನಸಿಕ ಅಸ್ವಸ್ಥ ಅಂತಾ ಕಂಡುಬಂದಿಲ್ಲ. ಆರೋಪಿ ಮಾಡಿರುವ ಕೃತ್ಯದ ಉದ್ದೇಶ ಗೊತ್ತಾಗಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುವುದರ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.

  • ಜಿಲ್ಲಾಧಿಕಾರಿ ಮನೆಯ ಆವರಣದಲ್ಲಿ ಗಂಧದ ಕಳ್ಳತನಗೈದ ಕಳ್ಳ ಅರೆಸ್ಟ್

    ಜಿಲ್ಲಾಧಿಕಾರಿ ಮನೆಯ ಆವರಣದಲ್ಲಿ ಗಂಧದ ಕಳ್ಳತನಗೈದ ಕಳ್ಳ ಅರೆಸ್ಟ್

    ಧಾರವಾಡ: ಇತ್ತೀಚೆಗೆ ಧಾರವಾಡ ಜಿಲ್ಲಾಧಿಕಾರಿ ಮನೆ ಆವರಣದಲ್ಲಿ ಶ್ರೀಗಂಧ ಮರದ ಕಳ್ಳತನ ನಡೆದಿತ್ತು. ಕಳ್ಳತನ ನಡೆಸಿದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ

    ಆರೋಪಿ ಯಮನಪ್ಪ ಕಟ್ಟಿಮನಿ(31) ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದವನು. ಆರೋಪಿಯನ್ನು ಗುರುವಾರ ಗಂಧದ ಕಟ್ಟಿಗೆ ಸಮೇತ ಧಾರವಾಡ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

    ಆರೋಪಿ ಧಾರವಾಡ ನಗರದಲ್ಲಿರುವ ಜಿಲ್ಲಾಧಿಕಾರಿ ವಸತಿಗೃಹ ಆವರಣದಲ್ಲಿನ ಒಂದು ಶ್ರೀಗಂಧದ ಮರ ಹಾಗೂ ಗುಂಗರಗಟ್ಟಿ ಶ್ರೀಗಂಧದ ನೇಡುತೋಪಿನಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದಿದ್ದ. ಸುಮಾರು 1 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: ಯುದ್ಧ ಬೇಡ: ಲೈವ್‌ನಲ್ಲೇ ರಷ್ಯಾ ಟಿವಿ ಚಾನೆಲ್‌ ಸಿಬ್ಬಂದಿ ಸಾಮೂಹಿಕ ರಾಜೀನಾಮೆ

    ಕಳ್ಳತನದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

  • ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

    ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

    ಶಿವಮೊಗ್ಗ: ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲಾನಿ ಎಂಬಾತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಹರ್ಷನ ಕೊಲೆ ಬಳಿಕ ಜಿಲಾನಿ ಕಾರು ಚಾಲನೆ ಮಾಡಿದ್ದ. ಆರೋಪಿಗಳನ್ನು ಸ್ವಿಫ್ಟ್‌ ಕಾರಿನಲ್ಲಿ ಕರೆದೊಯ್ದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ – ಸರ್ಕಾರಕ್ಕೆ ಸೂಲಿಬೆಲೆ ಪ್ರಶ್ನೆ

    ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು, ಜಿಲಾನಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಶಿವಮೊಗ್ಗದ ಕ್ಲಾರ್ಕ್‌ ಪೇಟೆ ನಿವಾಸಿಗಳಾಗಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೇಸ್ ಸಂಬಂಧ ಎ1 ಆರೋಪಿ ಖಾಸಿಫ್‌ ನೀಡಿದ ಮಾಹಿತಿ ಮೇರೆಗೆ 6ನೇ ಆರೋಪಿ ಮುಜಾಹಿದ್ ಮುಜ್ಜುನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್‍ಡಿಪಿಐ

  • ಯುವಕನ ಕೊಲೆ ಪ್ರಕರಣ- ಓರ್ವ ಆರೋಪಿ ವಶಕ್ಕೆ, ನಾಲ್ವರಿಗಾಗಿ ಹುಡುಕಾಟ

    ಯುವಕನ ಕೊಲೆ ಪ್ರಕರಣ- ಓರ್ವ ಆರೋಪಿ ವಶಕ್ಕೆ, ನಾಲ್ವರಿಗಾಗಿ ಹುಡುಕಾಟ

    ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣವಾಗಿ ಐದು ಮಂದಿ ಕೃತ್ಯ ಎಸಗಿರುವುದು ಸಾಬೀತಾಗಿದ್ದು, ಅವರಲ್ಲಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆರೋಪಿಯು ಶಿವಮೊಗ್ಗದ ಕ್ಲಾರ್ಕ್ ಪೇಟೆ ಮೂಲದ ಆರೋಪಿಯಾಗಿದ್ದಾನೆ. ದೊಡ್ಡಪೇಟೆ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಆರೋಪಿಯು ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದ್ದು, ಐದು ಮಂದಿ ಮಚ್ಚು ಲಾಂಗುಗಳಿಂದ ಹರ್ಷನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಘಟನೆಯೇನು?: ಹರ್ಷ ಎಂಬಾತ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಇದನ್ನೂ ಓದಿ: ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ

    ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಎರಡು ಕೋಮಿನ ಯುವಕರ ಗುಂಪು ಮೆಗ್ಗಾನ್ ಆಸ್ಪತ್ರೆ ಬಳಿ ಜಮಾಯಿಸಿತು. ಹೀಗಾಗಿ ಮೆಗ್ಗಾನ್ ಆಸ್ಪತ್ರೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

    ಪರಿಸ್ಥಿತಿ ನಿಯಂತ್ರಿಸಲು ಗುಂಪುಗೂಡಿದ್ದ ಯುವಕರನ್ನು ಪೊಲೀಸರು ಮನೆಯತ್ತ ವಾಪಸ್ ಕಳುಹಿಸಿದ್ದಾರೆ ಮತ್ತು ಮುಂಜಾಗ್ರತಾ ಕ್ರಮವಾಗಿ ತಕ್ಷಣದಿಂದಲೇ ಶಿವಮೊಗ್ಗ ಜಿಲ್ಲೆಯಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧನ: ಆರಗ ಜ್ಞಾನೇಂದ್ರ

  • ಕುಡಿದು ವಾಹನ ಚಾಲನೆ, ಮಹಿಳಾ ಪೊಲೀಸ್‌ ಮೇಲೆ ಹಲ್ಲೆ – ನಟಿ ಕಾವ್ಯ ಥಾಪರ್ ಅರೆಸ್ಟ್‌

    ಕುಡಿದು ವಾಹನ ಚಾಲನೆ, ಮಹಿಳಾ ಪೊಲೀಸ್‌ ಮೇಲೆ ಹಲ್ಲೆ – ನಟಿ ಕಾವ್ಯ ಥಾಪರ್ ಅರೆಸ್ಟ್‌

    ಮುಂಬೈ: ಕುಡಿದು ವಾಹನ ಚಲಾಯಿಸಿದ್ದಲ್ಲದೇ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಟಿ ಕಾವ್ಯ ಥಾಪರ್‌ರನ್ನು ಪೊಲೀಸರು ಬಂಧಿಸಿದ್ದಾರೆ.

    ಜೆಡಬ್ಲ್ಯೂ ಮ್ಯಾರಿಯಟ್‌ ಹೋಟೆಲ್‌ ಬಳಿ ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿ ಈ ಘಟನೆ ನಡೆದಿದ್ದು, ಜುಹು ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ನಟಿ ಅಲ್ಲಿಗೆ ಪಾರ್ಟಿಗಾಗಿ ಬಂದಿದ್ದರು. ತಮ್ಮ ಕಾರಿನಲ್ಲಿ ಸ್ನೇಹಿತನೊಂದಿಗೆ ಪೂರ್ವ ಉಪನಗರದಲ್ಲಿರುವ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಇದನ್ನೂ ಓದಿ: ಅರ್ಧಂಬರ್ಧ ಬಟ್ಟೆ ತೊಡೋದೇ ಉರ್ಫಿ ಸ್ಟೈಲ್- ನೆಟ್ಟಿಗರು ಸಖತ್ ಖುಷ್

    ಥಾಪರ್‌ ಮದ್ಯದ ಅಮಲಿನಲ್ಲಿದ್ದ ಕಾರಣ ಆಕೆ ತನ್ನ ಕಾರನ್ನು, ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾಳೆ. ಅಪಘಾತದ ಬಗ್ಗೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ಲಭಿಸಿದೆ. ಜುಹು ಪೊಲೀಸ್‌ ಠಾಣೆಯಿಂದ ನಿರ್ಭಯಾ ಸ್ಕ್ವಾಡ್‌ ಸ್ಥಳಕ್ಕೆ ಧಾವಿಸಿದೆ. ನಟಿ ಥಾಪರ್‌, ಮಹಿಳಾ ಪೇದೆಯೊಬ್ಬರ ಕಾಲರ್‌ ಹಿಡಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಹಿಳಾ ಪೇದೆ ನೆಲದ ಮೇಲೆ ಬಿದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ನಟಿ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನಗಳ ಕಾಯ್ದೆಯಡಿ ಮದ್ಯಪಾನ ಮಾಡಿ ವಾಹನ ಚಾಲನೆ, ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ. ನಟಿಯನ್ನು ಅಂಧೇರಿಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಬಿರಿಯಾನಿ ಊಟ, ಹೆಲಿಕಾಪ್ಟರ್ ನಿಂದ ಹೂಮಳೆ : ಇನ್ನೇನಿದೆ ವಿಶೇಷ?

  • ಬಿಜೆಪಿ ಕಚೇರಿಗೆ ಮುತ್ತಿಗೆ – ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

    ಬಿಜೆಪಿ ಕಚೇರಿಗೆ ಮುತ್ತಿಗೆ – ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

    ಕಲಬುರಗಿ: ನಗರದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಮೂವತ್ತಕ್ಕೂ ಅಧಿಕ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಕರೆದೊಯ್ದಿರುವ ಘಟನೆ ನಗರದ ಎಸ್.ಟಿ.ಬಿ.ಟಿ.ಕ್ರಾಸ್ ಬಳಿ ನಡೆದಿದೆ.

    ಕಾಂಗ್ರೆಸ್ ಭವನದಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು.

    ದೇಶದಲ್ಲಿ ರಾಷ್ಟ್ರ ಧ್ವಜದ ಬದಲಾಗಿ, ಕೇಸರಿ ಭಗವಾನ್ ಧ್ವಜವನ್ನು ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬಿಜೆಪಿ ಕಚೇರಿ ಎದುರಿಗೆ ಪ್ರತಿಭಟನೆಯ ನಿರ್ಣಯವನ್ನು ಹಾಕಿಕೊಂಡಿದ್ದರು. ಇದನ್ನೂ ಓದಿ: ಮಲೆಮಹದೇಶ್ವರ ಜಾತ್ರಾಮಹೋತ್ಸವದ ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ

    ಈ ವೇಳೆ ಎಚ್ಚೆತ್ತುಕೊಂಡ ಪೊಲೀಸರು ಪ್ರತಿಭಟನೆಯ ಮುನ್ನವೆ ಸುಮಾರು ಮೂವತ್ತಕ್ಕೂ ಅಧಿಕ ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಶಿವಾನಂದ ಹೊನಗುಂಟಿ ಇತರರಿದ್ದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನನ್ನು ತುಂಡು, ತುಂಡು ಮಾಡಲಿ ನೋಡೋಣ: ಆಂದೋಲಾ ಶ್ರೀ ಕಿಡಿ

  • ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್

    ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್

    ತುಮಕೂರು: ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರಣ್ಯಾಧಿಕಾರಿಗಳನ್ನು ಕಂಡು ಪರಾರಿಯಾಗುವಾಗ ಬಂಧನಕ್ಕೊಳಗಾದ ಘಟನೆ ಮಧುಗಿರಿ ತಾಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.

    ಬ್ರಹ್ಮದೇವರಹಳ್ಳಿಯ ಶಿವಕುಮಾರ್, ಚಿನ್ನೇನಹಳ್ಳಿಯ ಆದರ್ಶ ಬಂಧಿತ ಆರೋಪಿಗಳು. ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ ಜಿಂಕೆ ಮಾಂಸ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖದೀಮರು ತಿಪ್ಪಾಪುರ ಗ್ರಾಮದ ಬಳಿ ಗಂಡು ಜಿಂಕೆಯೊಂದನ್ನು ಬೇಟೆಯಾಡಿದ್ದರು. ಈ ವೇಳೆ 5 ಕೆ.ಜಿ. ಜಿಂಕೆ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಆರೋಪಿಗಳು ಬೇಟೆಯಾಡಲು ಬಳಸುತ್ತಿದ್ದ ವಸ್ತುಗಳು ಸೇರಿ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

  • ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ನಿಧಿಗಳ್ಳರ ಅರೆಸ್ಟ್

    ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ನಿಧಿಗಳ್ಳರ ಅರೆಸ್ಟ್

    ಚಿಕ್ಕಬಳ್ಳಾಪುರ: ನಿಧಿಗಳ್ಳರು ಸರ್ಕಾರಿ ಜಮೀನೊಂದರಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದು, ಬಟ್ಲಹಳ್ಳಿ ಪೊಲೀಸರು 8 ಮಂದಿ ನಿಧಿ ಶೋಧಕರನ್ನ ಬಂಧಿಸಿದ ಘಟನೆ ಜಿಲ್ಲೆ ಚಿಂತಾಮಣಿ ತಾಲೂಕು ಯರಕೋಟೆ ಬಳಿ ನಡೆದಿದೆ.

    ಆಂಧ್ರಪ್ರದೇಶದ ಆಯುರ್ವೇದ ವೈದ್ಯ ಶ್ರೀನಿವಾಸ್, ರಮಣಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೂದಿಗೆರೆಯ ಅನಿಲ್ ಕುಮಾರ್, ಕೃಷ್ಣ, ಚಿಂತಾಮಣಿಯ ಕೆಂಚಾರ್ಲಹಳ್ಳಿ ಗ್ರಾಮದ ಚಾಂದ್ ಪಾಷ, ಜಬೀವುಲ್ಲಾ, ನಂದಿಗಾನಹಳ್ಳಿಯ ಜನಾರ್ಧನ್, ಕೃಷ್ಣಾರೆಡ್ಡಿ ಬಂಧಿತ ನಿಧಿ ಶೋಧಕರು. ಪೊಲೀಸರಿಂದ ಈಗಾಗಲೇ ಬಂಧಿತರು ಕೃತ್ಯಕ್ಕೆ ಬಳಸಿದ ಅತ್ಯಾಧುನಿಕ ರಾಡರ್ ಯಂತ್ರ, 5 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.  ಇದನ್ನೂ ಓದಿ: ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

    ಅಬುಧಾಬಿ: 1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಪಟ್ಟ ಆರೋಪಿ ಅಬು ಬಕರ್‌ನನ್ನು ಭಾರತೀಯ ಏಜೆನ್ಸಿಗಳು ಸಂಯುಕ್ತ ಅರಬ್ ಸಂಸ್ಥಾನದಲ್ಲಿ(ಯುಎಇ) ಬಂಧಿಸಿದ್ದಾರೆ.

    1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬು ಬಕರ್‌ನನ್ನು 29 ವರ್ಷಗಳ ಬಳಿಕ ಬಂಧಿಸುವಲ್ಲಿ ಭಾರತೀಯ ಏಜೆನ್ಸಿಗಳು ಯಶಸ್ವಿಯಾಗಿದ್ದಾರೆ. ಮುಂಬೈನ 12 ಸ್ಥಳಗಳಲ್ಲಿ ನಡೆದ ಸ್ಫೋಟದಲ್ಲಿ ಅಬು ಬಕರ್ ಭಾಗಿಯಾಗಿದ್ದ. ಈ ಸ್ಫೋಟಗಳಿಂದಾಗಿ 257 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

    ಅಬು ಬಕರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ತರಬೇತಿ, ಸ್ಫೋಟಕ್ಕೆ ಬಳಸುವ ಆರ್‌ಡಿಎಕ್ಸ್ ಲ್ಯಾಂಡಿಂಗ್ ಹಾಗೂ ದುಬೈನಲ್ಲಿರುವ ದಾವೂದ್ ಇಬ್ರಾಹಿಂ ನಿವಾಸದಲ್ಲಿ ಪಿತೂರಿಗಳಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಯುಎಇ ಹಾಗೂ ಪಾಕಿಸ್ತಾನದಲ್ಲಿ ನೆಲೆಸಿದ್ದ ಅಬು ಬಕರ್‌ನನ್ನು ಭಾರತೀಯ ಏಜೆನ್ಸಿಗಳು ಬಂಧಿಸಿದ್ದಾರೆ. 2019ರಲ್ಲಿ ಒಮ್ಮೆ ಬಕರ್‌ನನ್ನು ಬಂಧಿಸಲಾಗಿತ್ತು. ಆದರೆ ಕೆಲವು ದಾಖಲಾತಿ ಸಮಸ್ಯೆಗಳಿಂದ ಅವನನ್ನು ಬಂಧನದಿಂದ ಮುಕ್ತಗೊಳಿಸಬೇಕಾಯಿತು.

  • ಕೊರಗಜ್ಜನಿಗೆ ಅವಮಾನ ಮಾಡಿದ್ದ ಉಮರುಲ್ಲಾ ಬಾಷಿತ್ ಅರೆಸ್ಟ್

    ಕೊರಗಜ್ಜನಿಗೆ ಅವಮಾನ ಮಾಡಿದ್ದ ಉಮರುಲ್ಲಾ ಬಾಷಿತ್ ಅರೆಸ್ಟ್

    ಮಂಗಳೂರು: ಕಳೆದ ಕೆಲ ದಿನಗಳ ಹಿಂದೆ ವರನೊಬ್ಬ ಕೊರಗಜ್ಜನ ವೇಷ ಧರಿಸಿ ಕುಣಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಉಮರುಲ್ಲಾ ಬಾಷಿತ್ ಎಂದು ಗುರುತಿಸಲಾಗಿದೆ. ಈತ ಮಂಗಳೂರು ಕೊರಗಜ್ಜನ ಹೋಲುವ ವೇಷ ಧರಿಸಿ ಅವಮಾನ ಮಾಡಿ, ಸುದ್ದಿಯಾಗುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದ. ಪ್ರಕರಣ ಸಂಬಂಧ ಈ ಹಿಂದೆಯೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಾಷಿತ್ ನನ್ನು ವಿಟ್ಲ ಠಾಣೆಯ ಪೊಲೀಸರು ಕೇರಳದ ಕೊಚ್ಚಿಯ ನೆಡುಂಬನ್ ಶೇರಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಅಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ. 
    ಇದನ್ನೂ ಓದಿ: ಮದುವೆ ಮನೆಯಲ್ಲಿ ಕೊರಗಜ್ಜನಿಗೆ ಅವಮಾನ – ಇಬ್ಬರು ಅರೆಸ್ಟ್, ಮದುಮಗ ನಾಪತ್ತೆ

    ಏನಿದು ಘಟನೆ..?
    ಉಪ್ಪಳದ ಯುವಕ ಉಮರುಲ್ಲಾ ಬಾಷಿತ್ ಜೊತೆ ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ನಿಶ್ಚಯವಾಗಿತ್ತು. ವಧುವಿನ ಮನೆಗೆ ರಾತ್ರಿ ವರನ ಸ್ನೇಹಿತರ ಬಳಗ ಆಗಮಿಸಿತ್ತು. ಈ ವೇಳೆ ವರ ಕೊರಗಜ್ಜನ ವೇಷ-ಭೂಷಣ ಧರಿಸಿ ಬಂದಿದ್ದ. ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ಬಂದಿದ್ದ. ವರ ಹಾಗೂ ತಂಡ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿತ್ತು. ಈ ಕೃತ್ಯದಿಂದ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದವರಿಂದಲೂ ಆಕ್ರೋಶ ಹೊರಬಿದ್ದಿತ್ತು. ಅಲ್ಲದೆ ಕೃತ್ಯವನ್ನು ಖಂಡಿಸಿರುವ ಆಡಿಯೋ ಸಹ ವೈರಲ್ ಆಗಿತ್ತು.

    ಇತ್ತ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ವರ ಎಸ್ಕೇಪ್ ಆಗಿದ್ದನು. ಅಲ್ಲದೆ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದನು. ಘಟನೆ ಸಂಬಂಧ ವರ ಹಾಗೂ ಆತನ ಸ್ನೇಹಿತರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ವರನಿಂದ ಅವಮಾನ!