Tag: arrest

  • ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆಯ ಬಂಧನ

    ಗಡಿ ದಾಟಿ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆಯ ಬಂಧನ

    ಶ್ರೀನಗರ: ಗಡಿ ನಿಯಂತ್ರಣ ರೇಖೆ ದಾಟಿದ ಪಾಕಿಸ್ತಾನಿ ಮಹಿಳೆಯನ್ನು ಭಾರತೀಯ ಸೇನೆ ಬಂಧಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ನಡೆದಿದೆ.

    ಪಾಕಿಸ್ತಾನದ ಇಸ್ಲಾಮಾಬಾದ್‍ನ ಫಿರೋಜ್‍ಬಂಡಾ ಪ್ರದೇಶದ ನಿವಾಸಿ ರೋಜಿನಾ (49) ಬಂಧಿತ ಮಹಿಳೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸರಣಿ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ಈ ನಡುವೆ ಕೇಂದ್ರಾಡಳಿತ ಪ್ರದೇಶದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಮಹಿಳೆ ರೋಜಿನಾ ಗಡಿ ದಾಟಿ ಭಾರತಕ್ಕೆ ಬಂದಿದ್ದಾಳೆ. ಈ ವಿವಾದಿತ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ದಾಟಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಮಹಿಳೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೆಟ್ಟು

    ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಪಾಕಿಸ್ತಾನಿ ಮಹಿಳೆ ಪೂಂಚ್‍ನ ಚಕ್ರ ದಾ ಬಾಗ್‍ನಲ್ಲಿ ಎಲ್‍ಒಸಿ ದಾಟಿದ್ದನ್ನು ಭಾರತೀಯ ಸೇನೆ ನೋಡಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಿದ್ದಾರೆ. ಆದರೆ ಅವಳು ಆಕಸ್ಮಿಕವಾಗಿ ಸರಂಧ್ರ ಗಡಿಯನ್ನು ದಾಟಿದ್ದಾಳೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: 3 ಸಾವಿರ ಕೆಜಿ ಪ್ಲಾಸ್ಟಿಕ್‌ನಿಂದ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಯ್ತು ರಸ್ತೆ – ಏನಿದರ ವಿಶೇಷ?

    Live Tv
    [brid partner=56869869 player=32851 video=960834 autoplay=true]

  • ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಮುನ್ನ ಎಚ್ಚರ- ಸುಲಿಗೆಗೆ ಲವರ್ಸ್‍ಗಳೇ ಟಾರ್ಗೆಟ್

    ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಮುನ್ನ ಎಚ್ಚರ- ಸುಲಿಗೆಗೆ ಲವರ್ಸ್‍ಗಳೇ ಟಾರ್ಗೆಟ್

    ಬೆಂಗಳೂರು: ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಯುವಕ ಯುವತಿಯರೇ ಎಚ್ಚರವಾಗಿರಿ. ಯಾಕಂದ್ರೆ ನಡುರಸ್ತೆಯಲ್ಲಿ ಬೈಕ್ ಅಡ್ಡ ಹಾಕುತ್ತಾರೆ. ಅಲ್ಲದೆ ಬೆದರಿಸಿ ಸುಲಿಗೆ ಮಾಡುತ್ತಾರೆ. ಅಂತೆಯೇ ಲವರ್ಸ್ ಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

    ಬೆಂಗಳೂರಿನ ಹೊರವಲಯದ ದೇವನಹಳ್ಳಿ ಪೊಲೀಸರು ಕಾರು ಚಾಲಕ ಸುಬ್ರಮಣಿ ಸೇರಿ ಅನಿಲ್ ಕುಮಾರ್ ಹಾಗೂ ಪವನ್ ಕುಮಾರ್‍ನನ್ನು ಬಂಧಿಸಿದ್ದಾರೆ. ಇವರು ಸಿಟಿ ಹೊರವಲಯದಲ್ಲಿ ಲೈಟ್ ನೈಟ್ ಲಾಂಗ್ ಬರುವ ಪ್ರೇಮಿಗಳನ್ನು ಸುಲಿಗೆ ಮಾಡುತ್ತಿದ್ದರು. ಇದನ್ನೂ ಓದಿ: ಕುಡಿದ ಮತ್ತಲ್ಲಿ ವಕೀಲನ ಹಲ್ಲು ಮುರಿಯುವಂತೆ ಹಲ್ಲೆ – ದೊಡ್ಡವರ ಮಕ್ಕಳಿಂದ ಗೂಂಡಾವರ್ತನೆ

    ಜುಲೈ 8ರಂದು ಬೈಕ್ ನಲ್ಲಿ ಬರುತ್ತಿದ್ದ ಯುವಕ- ಯುವತಿಯರನ್ನು ಅಡ್ಡಗಟ್ಟಿದ್ರು. ಅಲ್ಲದೆ ಯುವಕನಿಗೆ ರಾಡ್ ನಿಂದ ಹಲ್ಲೆ ಮಾಡಿ ಕತ್ತಿನಲ್ಲಿ ಚಿನ್ನದ ಚೈನ್ ಕಸಿದು, ಯುವತಿ ಮುಂದೆಯೇ ಹಲ್ಲೆ ಮಾಡಿದ್ರು. ನಂತರ ಹತ್ತಿರದ ಎಟಿಎಂ ಗೆ ಕರೆದುಕೊಂಡು ಹೋಗಿ 15,000 ಹಣ ಡ್ರಾ ಮಾಡಿಸಿಕೊಂಡು ಹೋಗಿದ್ದರು.

    ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ವೇಳೆ ನಗರದ ಹೊರವಲಯಕ್ಕೆ ಬರುವ ಲವರ್ಸ್ ಗಳನ್ನೇ ಟಾರ್ಗೆಟ್ ಸುಲಿಗೆ ಮಾಡ್ತಿರೋದು ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ್ದ ಕಾರು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಡಿ ಬಂಧನದಲ್ಲಿ NSE ಮಾಜಿ ಸಿಇಒ ಚಿತ್ರಾ

    ಇಡಿ ಬಂಧನದಲ್ಲಿ NSE ಮಾಜಿ ಸಿಇಒ ಚಿತ್ರಾ

    ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯದ(ಎನ್‌ಎಸ್‌ಇ) ವಂಚನೆ ಪ್ರಕರಣದಲ್ಲಿ ಎನ್‌ಎಸ್‌ಇ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಬಂಧಿಸಿದೆ.

    ಇಂದು ಮುಂಜಾನೆ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ದೆಹಲಿ ನ್ಯಾಯಾಲಯ ಇದೀಗ ಚಿತ್ರಾ ರಾಮಕೃಷ್ಣ ಅವರನ್ನು 4 ದಿನಗಳ ಇಡಿ ಕಸ್ಟಡಿಗೆ ಕಳುಹಿಸಿದೆ. ಇದನ್ನೂ ಓದಿ: “ದಿವ್ಯ ಕಾಶಿ – ಭವ್ಯ ಕಾಶಿ”ಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ: ಬೊಮ್ಮಾಯಿ

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ, ನಾರಾಯಣ್ ಹಾಗೂ ಚಿತ್ರಾ ರಾಮಕೃಷ್ಣ ವಿರುದ್ಧ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ: ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಹಂದಿಗೆ ಎರಡು ವರ್ಷ ಜೈಲು ಶಿಕ್ಷೆ

    ಚಿತ್ರಾ ಅವರು ಸಂಸ್ಥೆಯ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಸ್ಥೆಯ ರಚನೆ, ಲಾಭಾಂಶ ಮಾಹಿತಿ, ಆರ್ಥಿಕ ಫಲಿತಾಂಶ, ಮಾನವ ಸಂಪನ್ಮೂಲ ನೀತಿ, ಸಮಸ್ಯೆ ಹೀಗೆ ಎಲ್ಲಾ ಗೌಪ್ಯ ವಿಚಾರಗಳನ್ನು ಅಪರಿಚಿತ ವ್ಯಕ್ತಿಯೊಡನೆ ಇ-ಮೇಲ್ ಮುಖಾಂತರ ಹಂಚಿಕೊಂಡಿದ್ದಾರೆ ಎಂಬ ಆರೋಪ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪತಿ ಕುಡಿದು ಗಲಾಟೆ ಮಾಡುತ್ತಾನೆ ಅಂತಾ ಪ್ರಿಯಕರನಿಂದ ಕೊಲೆ ಮಾಡಿಸಿದ ಪತ್ನಿ

    ಪತಿ ಕುಡಿದು ಗಲಾಟೆ ಮಾಡುತ್ತಾನೆ ಅಂತಾ ಪ್ರಿಯಕರನಿಂದ ಕೊಲೆ ಮಾಡಿಸಿದ ಪತ್ನಿ

    ಮಂಡ್ಯ: ಪ್ರಿಯಕರನ ಜೊತೆ ಸೇರಿ ಪತಿಯನ್ನು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿಸಿ, ಅಮಾಯಕಿ ಎನ್ನುವ ರೀತಿಯಲ್ಲಿ ಡ್ರಾಮಾ ಮಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಗೌರಿ ಕೊಲೆ ಮಾಡಿದ ಆರೋಪಿ. ಈಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ತಲಕಾಡು ಫೈಲ್‍ನ ನಿವಾಸಿ. ಈಕೆ ತನ್ನ ಪತಿ ಸುಂದರ್‌ ರಾಜ್‍ನನ್ನು ಇದೇ ತಿಂಗಳ 2ರಂದು ಕೆಆರ್‌ಎಸ್ ಹೊರವಲಯದಲ್ಲಿರುವ ಹುಲಿಕೆರೆಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಳು. ಆದರೆ ಪೊಲೀಸರು ಸುಂದರ್‌ ರಾಜ್ ಕೊಲೆಯ ವಿಷಯವನ್ನು ತಿಳಿಸಿದಾಗ ಹೈಡ್ರಾಮಾವನ್ನೇ ಮಾಡಿದ್ದಳು.

    ಅಷ್ಟೇ ಅಲ್ಲದೇ ಮಾಧ್ಯಮಗಳ ಮುಂದೆ ಆಕೆ, ನನ್ನ ಗಂಡ ನಿನ್ನೆ ಮನೆಗೆ ಬಂದಿದ್ದ. ಅದಾದ ನಂತರ ಮನೆಗೆ ಬಂದಿಲ್ಲ. ಇದೀಗ ನನ್ನ ಗಂಡನನ್ನು ಯಾರೋ ಕೊಲೆ ಮಾಡಿದ್ದಾರೆ. ಆತನನ್ನು ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ನನ್ನ ಗಂಡನಿಗೆ ಯಾರು ಶತ್ರುಗಳು ಇರಲಿಲ್ಲ ಎಂದು ಕಣ್ಣೀರು ಹಾಕಿದ್ದಳು. ಇದನ್ನೂ ಓದಿ: ಶ್ವಾನದ ಜೊತೆ ಬೈಕ್‍ನಲ್ಲಿ ಲಡಾಕ್ ಟ್ರಿಪ್‍ಗೆ ಹೊರಟ ಯುವಕ

    ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆ ವೇಳೆ ಗೌರಿಯ ಪ್ರಿಯಕರ ಪರಮೇಶ್‍ಚಾರಿಯನ್ನು ವಿಚಾರಣೆ ನಡೆಸುತ್ತಾರೆ. ಆ ಬಳಿಕ ಇವರಿಗೆ ಸುಂದರ್ ರಾಜ್‍ನನ್ನು ಕೊಲೆ ಮಾಡಿರುವುದು ಅಮಾಯಕಿಯಂತೆ ನಟಿಸುತ್ತಿರುವ ಪತ್ನಿ ಗೌರಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಅಷ್ಟೇ ಅಲ್ಲದೇ ಸುಂದರ್‌ ರಾಜ್ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ನನಗೆ ನೆಮ್ಮದಿಯೇ ಇಲ್ಲ ಎಂದು ಗೌರಿ ಪ್ರಿಯಕರನ ಬಳಿ  ಹೇಳಿಕೊಂಡಿದ್ದಳು. ಇದಾದ ನಂತರ ಆತನನ್ನು ಕೊಲೆ ಮಾಡಬೇಕೆಂದು ಸಹ ಆಕೆ ಹೇಳಿದ್ದಳು. ನಂತರ ನನ್ನ ಸ್ನೇಹಿತರಾದ ಚೇತನ್, ತೇಜಸ್, ಶ್ರೀನಿವಾಸ ಎಂಬುವರ ಜೊತೆ ಸುಂದರ್‌ ರಾಜ್‍ನನ್ನು ಪಾರ್ಟಿ ಮಾಡೋಕೆ ಹುಲಿಕೆರೆಯ ಬಳಿ ಕರೆದುಕೊಂಡು ಹೋಗಿ, ಅಲ್ಲಿ ಆತನಿಗೆ ಚೆನ್ನಾಗಿ ಕುಡಿಸಿ ಆತನಿಗೆ ಮನಬಂದ ಹಾಗೆ ಹೊಡೆದು ಕೊಲೆ ಮಾಡಿರುವುದಾಗಿ ಪರಮೇಶ್‍ ಚಾರಿ ತಪ್ಪು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಗೌರಿಯನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೌಕಾಪಡೆ ಆಫೀಸರ್ ಎಂದು ಕಾರವಾರ ನೆಲೆಗೆ ನುಗ್ಗಲು ಯತ್ನಿಸಿದವ ಅರೆಸ್ಟ್‌

    ನೌಕಾಪಡೆ ಆಫೀಸರ್ ಎಂದು ಕಾರವಾರ ನೆಲೆಗೆ ನುಗ್ಗಲು ಯತ್ನಿಸಿದವ ಅರೆಸ್ಟ್‌

    ಕಾರವಾರ: ನಕಲಿ ದಾಖಲೆ ನೀಡಿ ನೌಕಾನೆಲೆಗೆ ನುಗ್ಗಲು ಯತ್ನಿಸಿದ ಯುವಕನನ್ನು ನೌಕಾದಳದ ಪೊಲೀಸರು ಬಂಧಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾದ ಕದಂಬ ನೌಕಾನೆಲೆಯಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಕಿರಣ್ ಎಸ್.ಆರ್.ನನ್ನು ನೌಕಾದಳ ಪೊಲೀಸರು ಬಂಧಿಸಿದ್ದಾರೆ. ನೌಕಾಪಡೆಯ ಪ್ರೊಬೆಷನರಿ ಸಬ್ ಲೆಫ್ಟಿನೆಂಟ್ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದ ಈತ, ಮಾನವ ಸಂಪನ್ಮೂಲ ಮತ್ತು ಯೋಜನಾ ನಿರ್ದೇಶನಾಲಯದಿಂದ 2021ರ ಡಿ.14ರಂದು ತನ್ನ ನೇಮಕಾತಿಯಾಗಿದೆ ಎಂದು ಹೇಳಿಕೊಂಡಿದ್ದನು. ತನ್ನ ಗುರುತಿನ ಚೀಟಿ ಮತ್ತು ಅದಕ್ಕೊಂದು ಸಂಖ್ಯೆಯನ್ನೂ ಸಿದ್ಧಪಡಿಸಿಕೊಂಡಿದ್ದ ಈತ ನೌಕಾ ನೆಲೆಯ ಮುಖ್ಯ ಗೇಟ್ ಬಳಿ ತೆರಳುವಾಗ ತಪಾಸಣೆ ವೇಳೆ ನೀಡಿದ್ದನು. ಇದನ್ನೂ ಓದಿ: ಒಟ್ಟಿಗೆ ಫೈಟರ್ ಜೆಟ್ ಹಾರಿಸಿ ಇತಿಹಾಸ ಸೃಷ್ಟಿದ ತಂದೆ- ಮಗಳು

    ಆತ ನೀಡಿದ ದಾಖಲೆಗಳು ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎಂಬುದು ದೃಢವಾಗಿದ್ದು, ಬಳಿಕ ನೌಕಾನೆಲೆಯ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಭಾರತದ ಸುಬ್ರಮಣಿಯನ್ ಈಗ ವಿಶ್ವಸಂಸ್ಥೆಯ ಸುಡಾನ್ ಮಿಷನ್ ಕಮಾಂಡರ್

    Live Tv
    [brid partner=56869869 player=32851 video=960834 autoplay=true]

  • ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

    ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

    ಬೆಳಗಾವಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರನ್ನು ಸಿನಿಮೀಯ ಸ್ಟೈಲ್‍ನಲ್ಲಿ ಬಂಧಿಸಲಾಗಿದೆ.

    ಘಟನೆ ನಡೆದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹಂತಕರಾದ ಧಾರವಾಡದ ಮಹಂತೇಶ್ ಶಿರೂರ ಮತ್ತು ಕಲಘಟಗಿಯ ಮಂಜುನಾಥ್‍ನನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಮೊಬೈಲ್ ಲೋಕೇಷನ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಎಸ್ಕೇಪ್ ಆಗದಂತೆ ಸುತ್ತುವರಿದಿದ್ದಾರೆ. ರಸ್ತೆಗೆ ಅಡ್ಡಲಾಗಿ ಜೆಸಿಬಿಗಳು ನಿಂತಿದ್ದರಿಂದ ಆರೋಪಿಗಳು ಎಸ್ಕೇಪ್ ಆಗಲು ಸಾಧ್ಯವಾಗದೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಓಡಲು ಪ್ರಶ್ನಿಸಿದಾಗ ರಾಮದುರ್ಗ ಡಿವೈಎಸ್ಪಿ ಶೂಟೌಟ್ ಮಾಡೋ ಎಚ್ಚರಿಕೆ ನೀಡಿ ಅರೆಸ್ಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಮಹಂತೇಶ್ ಶಿರೂರ ಪತ್ನಿ ವನಜಾಕ್ಷಿಯನ್ನು ಪೊಲೀಸ್ರು ಬಂಧಿಸಿದ್ರು. ಮುಂಬೈನಿಂದ ಕುಟುಂಬಸ್ಥರು ಹುಬ್ಬಳ್ಳಿಗೆ ಧಾವಿಸಿದ್ದು, ನಾಳೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯ ಫಾರಂಹೌಸ್‍ನಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಸರಳವಾಸ್ತು ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ನಡೆದಿದ್ದೇನು..?: 
    ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ಭೀಕರವಾಗಿ ಕೊಲ್ಲಲಾಗಿದೆ. 58 ವರ್ಷದ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಬಂದ ಅವರ ಮಾಜಿ ಆಪ್ತ ಸಹಾಯಕರು ಈ ಕೃತ್ಯ ಎಸಗಿದ್ದಾರೆ. ಇಂದು ಮಧ್ಯಾಹ್ನ 12.23ರ ಸಮಯಲ್ಲಿ ಹೋಟೆಲ್ ರೂಂನಿಂದ ರಿಸೆಪ್ಶನ್‍ಗೆ ಬಂದ ಚಂದ್ರಶೇಖರ ಗುರೂಜಿ ಪಾದಕ್ಕೆ ಒಬ್ಬ ನಮಸ್ಕರಿಸುವ ಹೊತ್ತಲ್ಲೇ ಅಲ್ಲೇ ನಿಂತಿದ್ದ ಇನ್ನೊಬ್ಬ ಗುರೂಜಿ ಎದೆಗೆ ಚಾಕು ಹಾಕಿದ್ದ. ಇದನ್ನೂ ಓದಿ: ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್‌

    ನಂತರ ಇಬ್ಬರೂ ಸೇರಿಕೊಂಡು ಕೇವಲ 40 ಸೆಕೆಂಡ್‍ಗಳ ಅಂತರದಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ, ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬೆನ್ನಲ್ಲೇ ಇಬ್ಬರು ಹಂತಕರು ಅಲ್ಲಿಂದ ಹೊರಗೆ ಓಡಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    Live Tv
    [brid partner=56869869 player=32851 video=960834 autoplay=true]

  • 5 ಲಕ್ಷ ರೂ. ಲಂಚ ಪಡೆದ ಪ್ರಕರಣ- ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್

    5 ಲಕ್ಷ ರೂ. ಲಂಚ ಪಡೆದ ಪ್ರಕರಣ- ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಇದೀಗ ಅರೆಸ್ಟ್ ಆಗಿದ್ದಾರೆ. ಜಮೀನು ವ್ಯಾಜ್ಯ ಇತ್ಯರ್ಥಪಡಿಸಲು 5 ಲಕ್ಷ ಪಡೆದ ಪ್ರಕರಣದಲ್ಲಿ ಸದ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಎಂಡಿ ಆಗಿರುವ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.

    ಎಸಿಬಿ ಅಧಿಕಾರಿಗಳು ಮಂಜುನಾಥ್‍ರನ್ನು ಇಂದು ವಿಚಾರಣೆಗೆ ಕರೆದು ಸಾಕ್ಷ್ಯಾಧಾರ ಪಕ್ಕಾ ಆದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಮೂಲತಃ ರಾಜ್ಯ ಲೆಕ್ಕ ಪತ್ರ ಇಲಾಖೆ ಹಿರಿಯ ಅಧಿಕಾರಿಯಾಗಿದ್ದ ಮಂಜುನಾಥ್ ಅವರು ನಾನ್ ಕೆಎಎಸ್ ವಿಭಾಗದಲ್ಲಿ ಐಎಎಸ್ ಪದೋನ್ನತಿ ಪಡೆದವರಾಗಿದ್ದಾರೆ. ಚಿಕ್ಕಬಳ್ಳಾಪುರ ಸಿಇಒ ಆಗಿದ್ದರು ನಂತರ ಕೋಲಾರ ಡಿಸಿ ಆಗಿದ್ದರು. ಬಳಿಕ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದರು. ಕಳೆದ 1 ವರ್ಷದಿಂದ ಬೆಂಗಳೂರು ಡಿಸಿಯಾಗಿದ್ದರು.

    ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಡಿಸಿಯಿಂದ ಕಳೆದ ವಾರವಷ್ಟೇ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಎಂಡಿಯಾಗಿ ಮಂಜುನಾಥ್‍ನನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ವಿಚಾರಣೆಗೆ ಕರೆದು ಮಂಜುನಾಥ್ ರನ್ನ ಕರೆದು ಎಸಿಬಿ ಅರೆಸ್ಟ್ ಮಾಡಿದೆ. ಇದನ್ನೂ ಓದಿ: ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ: ಸಿಎಂ

    ಏನಿದು ಪ್ರಕರಣ..?: ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆ ನಡೆದಿತ್ತು. ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದ ಕೇಸ್ ಡಿಸಿ ಕೋರ್ಟಿಗೆ ಬಂದಿತ್ತು. ದೂರುದಾರದ ಪರವಾಗಿ ಆದೇಶ ನೀಡಲು ಬೇಡಿಕೆ ವ್ಯಕ್ತವಾಗಿತ್ತು. ಬೇಗೂರು ನಿವಾಸಿ ಅಜಂ ಪಾಷಾ ಎಂಬವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಜಿಲ್ಲಾಧಿಕಾರಿ ಮಂಜುನಾಥ್ 5 ಲಕ್ಷ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ತನ್ನ ಅಧೀನ ಕೆಲಸಗಾರನ ಮೂಲಕ ಡಿಸಿ ಹಣ ಪಡೆದಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಲ್ಲದೆ ಹಣದ ಸಮೇತ ಡಿಸಿ ಅಧೀನ ಕೆಲಸಗಾರನ ಬಂಧಿಸಲಾಗಿತ್ತು.

    ಆತ ಡಿಸಿ ಹೇಳಿದ್ದಕ್ಕೆ ಹಣ ಪಡೆದಿದ್ದಾಗಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾನೆ. ಅನಂತರ ಡಿಸಿ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ. ತನ್ನ ವಿರುದ್ಧದ ಎಫ್‍ಐಆರ್ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್‌ ಪೌಲ್ ಅರೆಸ್ಟ್‌

    ಮಂಜುನಾಥ್‌ ಸಸ್ಪೆಂಡ್:‌ ಬಂಧಿತ ಐಎಎಸ್ ಅಧಿಕಾರಿ  ಮಂಜುನಾಥ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಆಲ್ ಇಂಡಿಯ ಸರ್ವಿಸ್ ರೂಲ್ಸ್ ಅಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನೆರೆ ಮನೆಯವನಿಂದ 4ರ ಬಾಲಕಿಯ ಮೇಲೆ ಅತ್ಯಾಚಾರ

    ನೆರೆ ಮನೆಯವನಿಂದ 4ರ ಬಾಲಕಿಯ ಮೇಲೆ ಅತ್ಯಾಚಾರ

    ನವದೆಹಲಿ: ಪಕ್ಕದ ಮನೆಯ ವ್ಯಕ್ತಿಯೊಬ್ಬ ಯಾರು ಇಲ್ಲದ ಸಂದರ್ಭದಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಈಶಾನ್ಯ ದೆಹಲಿಯಲ್ಲಿ ನಡೆದಿದೆ.

    ಸಂತ್ರಸ್ತೆ ಹಾಗೂ ಆರೋಪಿಯ 2 ಕುಟುಂಬಗಳು ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಜೊತೆಗೆ 2 ಕುಟುಂಬಗಳು ಕೂಲಿ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆರೋಪಿಯು ಬಾಲಕಿಯು ಒಬ್ಬಂಟಿಯಾಗಿ ನೋಡಿದ ನಂತರ ಅವಳೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ – CM ನೇತೃತ್ವದಲ್ಲೇ ಕೇಂದ್ರಕ್ಕೆ ಸಂಸದ ಎ.ರಾಜಾ ಒತ್ತಾಯ

    ಈ ಕುರಿತು ಸಂತ್ರಸ್ತೆಯ ತಾಯಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ನೆರ ಮನೆಯ ವ್ಯಕ್ತಿಯೊಬ್ಬ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಬಾಲಕಿಯನ್ನು ಕೌನ್ಸಿಲ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರೀ ಮಳೆ – ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಭಾಗಶಃ ಮುಳುಗಡೆ

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಶಾಲಾ ಶಿಕ್ಷಕನ ಕಾಮಚೇಷ್ಟೆ ಪ್ರಕರಣ – ಗೋವಾದಲ್ಲಿ ಕಾಮುಕ ಅರೆಸ್ಟ್

    ಸರ್ಕಾರಿ ಶಾಲಾ ಶಿಕ್ಷಕನ ಕಾಮಚೇಷ್ಟೆ ಪ್ರಕರಣ – ಗೋವಾದಲ್ಲಿ ಕಾಮುಕ ಅರೆಸ್ಟ್

    ಕೊಪ್ಪಳ: ನೆರೆಮನೆಯ ಮಹಿಳೆಯರೊಂದಿಗೆ ಸರಸವಾಡಿ, ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಾಮುಕ ಶಿಕ್ಷಕ ಅಜರುದ್ದೀನ್ ಅನ್ನು ಪೊಲೀಸರು ಬಂಧಿಸಿದ್ದಾರೆ.

    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪೂರ ಗ್ರಾಮದ ಶಿಕ್ಷಕ ಅಜರುದ್ದೀನ್ ಮಹಿಳೆಯರು ಮತ್ತು ಮಕ್ಕಳನ್ನು ಕಾಮದಾಟಕ್ಕೆ ಬಳಸಿಕೊಂಡಿದ್ದ ವೀಡಿಯೋ ವೈರಲ್ ಆಗಿದ್ದವು. ನಂತರ ಈ ವೀಡಿಯೋದಲ್ಲಿದ್ದ ಮಹಿಳೆ ಅಜರುದ್ದೀನ್ ವಿರುದ್ಧ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಆರೋಪಿ ಅಜರುದ್ದೀನ್ ಅನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತಿ – 40 ಮಹಿಳೆಯರೊಂದಿಗೆ ಶಿಕ್ಷಕ ರಾಸಲೀಲೆ

    ಅಜರುದ್ದೀನ್ ವಿರುದ್ಧ ಕೊಪ್ಪಳ ಜಿಲ್ಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಅಜರುದ್ದೀನ್ ಲೈಂಗಿಕವಾಗಿ ಬಳಸಿ ಕೊಂಡಿದ್ದಾನೆ. ನಂತರ ನೀನು ಸಹಕರಿಸದಿದ್ದರೆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡದೇ ಹೋದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಕೂಡ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಳು. ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕನ ಕಾಮಚೇಷ್ಟೆ‌ ಪ್ರಕರಣ – ಕಾಮುಕನ ವಿರುದ್ಧ FIR ದಾಖಲು

    ಪ್ರಕರಣದ ನಂತರ ಆರೋಪಿಯನ್ನು ಬಂಧಿಸಲು ಕೊಪ್ಪಳ ಎಸ್.ಪಿ. ಅರುಣಾಂಗ್ಷು ಗಿರಿ ಅವರು ವಿಶೇಷ ತನಿಖಾ ತಂಡ ರಚಸಿದ್ದರು. ತನಿಖೆ ವೇಳೆ ಗೋವಾದಲ್ಲಿ ಮಜಾ ಮಾಡುತ್ತಿದ್ದ ಅಜರುದ್ದೀನ್ ಇದೀಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

    Live Tv

  • ಲಾರಿ ಚಾಲಕರನ್ನು ಬೆದರಿಸಿ ದರೋಡೆ ನಡೆಸುತ್ತಿದ್ದ ಮೂವರ ಬಂಧನ

    ಲಾರಿ ಚಾಲಕರನ್ನು ಬೆದರಿಸಿ ದರೋಡೆ ನಡೆಸುತ್ತಿದ್ದ ಮೂವರ ಬಂಧನ

    ಚಿತ್ರದುರ್ಗ: ರಸ್ತೆ ಮಧ್ಯೆ ವಾಹನ ತಡೆದು ದರೋಡೆ ನಡೆಸುತ್ತಿದ್ದ ಮೂವರು ದರೋಡೆಕೋರರನ್ನು ಚಿತ್ರದುರ್ಗದ ಭರಮಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಜೂನ್ 25ರಂದು ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಬಳಿ ದರೋಡೆ ನಡೆದಿತ್ತು. ಪಾನ್ ಮಸಾಲಾ ಸಾಗಿಸುತ್ತಿದ್ದ ಲಾರಿ ತಡೆದು ಚಾಲಕ ಮಲ್ಲಪ್ಪಗೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ ಹಾಕಿ, ವಾಹನದಲ್ಲಿದ್ದ ಪಾನ್ ಮಸಾಲಾ ಬೇರೆ ವಾಹನಕ್ಕೆ ಶಿಫ್ಟ್ ಮಾಡಿಕೊಂಡು ಪರಾರಿ ಆಗಿದ್ದರು. ಇದನ್ನೂ ಓದಿ: ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಠಾಕ್ರೆ

    ಈ ಪ್ರಕರಣದ ಬೆನ್ನತ್ತಿದ ಭರಮಸಾಗರ ಪೊಲೀಸರು ಕೊಪ್ಪಳ ಮೂಲದ ದೊಡ್ಡ ಬಸವ, ಮರ್ದಾನ್ ಸಾಬ್, ಹನುಮಪ್ಪ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವರಿಂದ 16 ಲಕ್ಷ ಮೌಲ್ಯದ ಪಾನ್ ಮಸಾಲಾ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಲಂಚ ಪಡೆದ ಆರೋಪ- ಬೆಂಗಳೂರು ಡಿಸಿ ಎತ್ತಂಗಡಿ

    Live Tv