Tag: arrest

  • ಹಪ್ಪಳದ ಪ್ಯಾಕೆಟ್‍ನಲ್ಲಿ 15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್‌ – ವ್ಯಕ್ತಿ ಬಂಧನ

    ಹಪ್ಪಳದ ಪ್ಯಾಕೆಟ್‍ನಲ್ಲಿ 15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್‌ – ವ್ಯಕ್ತಿ ಬಂಧನ

    ನವದೆಹಲಿ: ಬ್ಯಾಂಕಾಕ್‍ಗೆ ತೆರಳುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬ 15 ಲಕ್ಷ ರೂ ಮೌಲ್ಯದ ಅಮೆರಿಕನ್ ಡಾಲರ್‌ಗಳನ್ನು ಹಪ್ಪಳದ ಪ್ಯಾಕೆಟ್‍ನಲ್ಲಿ ಬಚ್ಚಿಟ್ಟಿದ್ದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಇಂದಿರಾಗಾಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳು ತಪಾಸಣೆ ನಡೆಸುವ ಸಮಯದಲ್ಲಿ ಹಪ್ಪಳ ಇರುವ ಪ್ಯಾಕೆಟ್‍ನಲ್ಲಿ ಭಾರಿ ಮೊತ್ತದ ಅಮೆರಿಕನ್ ಡಾಲರ್‌ಗಳು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಬ್ಯಾಂಕಾಕ್‍ಗೆ ಪ್ರಯಾಣಿಸುವ ವೇಳೆ ತನ್ನ ಲಗೇಜ್ ಬ್ಯಾಗ್‍ನಲ್ಲಿರುವ ಹಪ್ಪಳ ತುಂಬಿದ ಪ್ಯಾಕೆಟ್‍ನಲ್ಲಿ 19,900 ಡಾಲರ್(14.5 ಲಕ್ಷ ರೂ.) ವನ್ನು ಇಟ್ಟುಕೊಂಡಿದ್ದ. ಇದು ತಪಾಸಣೆ ವೇಳೆ ಸಿಬ್ಬಂದಿಗೆ ದೊರಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್

    ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಿಂದ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ದೇಶದಲ್ಲಿ ʻಪ.ಬಂಗಾಳ ಪಡಿತರ ಮಾದರಿʼ ಜಾರಿಗೊಳಿಸಿ – ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ಮೋದಿ ಸಹೋದರ ಪ್ರತಿಭಟನೆ

    Live Tv
    [brid partner=56869869 player=32851 video=960834 autoplay=true]

  • ಚಿಕ್ಕಬಳ್ಳಾಪುರದಲ್ಲಿ ಸಿಕ್ಕ-ಸಿಕ್ಕವರ ಮೇಲೆ ಚಾಕು ಇರಿದು ಪರಾರಿಯಾಗಿದ್ದವ ಅರೆಸ್ಟ್

    ಚಿಕ್ಕಬಳ್ಳಾಪುರದಲ್ಲಿ ಸಿಕ್ಕ-ಸಿಕ್ಕವರ ಮೇಲೆ ಚಾಕು ಇರಿದು ಪರಾರಿಯಾಗಿದ್ದವ ಅರೆಸ್ಟ್

    ಚಿಕ್ಕಬಳ್ಳಾಪುರ: ನಗರದ ಬಲಮುರಿ ವೃತ್ತ ಬಜಾರ್ ರಸ್ತೆಯಲ್ಲಿ ಸಿಕ್ಕ ಸಿಕ್ಕ ಸಾರ್ವಜನಿಕರಿಗೆ ಚಾಕು ಇರಿದು ಪರಾರಿಯಾಗಿದ್ದ ಸೈಕೋಪಾತ್ ಆರೋಪಿಯನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ನಿವಾಸಿ ಅರ್ಜುನ್ ಬಂಧಿತ ಆರೋಪಿ. ಅಸಲಿಗೆ ಮನೆಗೆ ಹೋಗದೆ ಹಾದಿ ಬೀದಿಯಲ್ಲೇ ಮಲಗೋ ಅಭ್ಯಾಸವಿದ್ದ ಅರ್ಜುನ್, ಈ ಕೃತ್ಯ ನಡೆಸಿರೋದು ಅಂತ ತಿಳಿದುಬಂದಿದೆ.

    ಅರ್ಜುನ್ ಕಂದವಾರದ ಬಳಿಯ ದೇವಸ್ಥಾನವೊಂದರಲ್ಲಿ ಮಲಗುತ್ತಿದ್ದು, ಕಳೆದ 3 ದಿನಗಳ ಹಿಂದೆ ಪಕ್ಕದಲ್ಲಿ ಮಲಗಿದ್ದ ಒಬ್ಬನ ಬಳಿ ಮೊಬೈಲ್ ಕಳವು ಮಾಡಿದ್ದ ಎನ್ನಲಾಗಿದೆ. ಮೊಬೈಲ್ ವಾಪಸ್ ಕೇಳಿದ್ದಕ್ಕೆ ಮೊಬೈಲ್ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿದ್ದು, ತದನಂತರ ಮೊಬೈಲ್ ಮಾಲೀಕ ನಾಲ್ವರ ಸ್ನೇಹಿತರ ಜೊತೆ ಹೋಗಿ ಅರ್ಜುನ್ ಗೆ ಹಲ್ಲೆ ಮಾಡಿ ಬೆದರಿಸಿ ಮೊಬೈಲ್ ವಾಪಸ್ ಪಡೆದುಕೊಂಡಿದ್ರಂತೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಶಾಕ್‌ – ಇಂದಿನಿಂದ ಮದ್ಯ ಕೊರತೆ ಸಾಧ್ಯತೆ

    ಇದೇ ವಿಚಾರದಲ್ಲಿ ಸಹ ನಿನ್ನೆಯೂ ಜೂನಿಯರ್ ಕಾಲೇಜು ಬಳಿ ಗಲಾಟೆ ನಡೆದಿದ್ದು, ಅರ್ಜುನ್ ಗಲಾಟೆ ನಂತರ ಜೂನಿಯರ್ ಕಾಲೇಜು ಕಡೆಯಿಂದ ಬಲಮುರಿ ವೃತ್ತದ ಮೂಲಕ ಬಜಾರ್ ರಸ್ತೆಗೆ ಬೈಕ್ ಮೂಲಕ ಬಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ. ಘಟನೆಯಲ್ಲಿ ಓರ್ವ ಮಹಿಳೆ ಸೇರಿ 06 ಮಂದಿ ಆಸ್ಪತ್ರೆ ಪಾಲಾಗಿದ್ದು, ಘಟನೆಯಿಂದ ಚಿಕ್ಕಬಳ್ಳಾಪುರ ನಗರದ ಜನತೆ ಬೆಚ್ಚಿಬಿದ್ದಿದ್ದರು.

    ಸದ್ಯ ಘಟನೆ ನಡೆದ 4 ಗಂಟೆಗಳಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿ ಅರ್ಜುನ್ ನನ್ನ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯಾರದ್ದೋ ಮೇಲಿನ ಕೋಪವನ್ನ ಮತ್ಯಾರೋ ಮೇಲೋ ಅರ್ಜುನ್ ತೀರಿಸಿಕೊಂಡಿದ್ದಾನೆ. ಸದ್ಯ ಆರೋಪಿಯಿಂದ ವಿವಿಧ ಮಾದರಿಯ ಚಾಕುಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ

    ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ

    ಮಂಗಳೂರು: ನನ್ನ ಮಗ ಕಷ್ಟಪಟ್ಟು ಸ್ಕೀಮ್ ಬ್ಯುಸಿನೆಸ್ ಅನ್ನು ಶುರುಮಾಡಿದ್ದ. ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ? ಎಂದು ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಸಂಬಂಧ ಬಂಧಿತನಾಗಿರುವ ಝಾಕೀರ್ ತಾಯಿ ಮೈಮುನಾ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೈಮುನಾ, ನನ್ನ ಮಗ ನಿರಪರಾಧಿಯಾದಿ ಕೊಲೆ ಮಾಡಿಲ್ಲ. ನಮ್ಮ ಮನೆಗೆ ಅಂದು ನೆಂಟರು ಬಂದಿದ್ದರು. ಕೋಳಿ ತೆಗೆದುಕೊಂಡು ಬರಲು ಝಾಕೀರ್ ಅಂಗಡಿಗೆ ಹೋಗಿದ್ದ. ನಮ್ಮ ಪರಿಚಯದ ಪೊಲೀಸರೇ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಓರ್ವ ಆರೋಪಿ ವಶಕ್ಕೆ

    ಪೊಲೀಸ್ ಠಾಣೆ ಯಿಂದಲೂ ಒಂದು ಬಾರಿ ಫೋನ್ ಮಾಡಿದ್ದಾನೆ. ನಾನು ತಪ್ಪು ಮಾಡಿಲ್ಲ ಎಂದು ನಮಗೆ ಧೈರ್ಯ ಹೇಳಿ ಹೋಗಿದ್ದಾನೆ. ಅವನೇ ಆರೋಪಿ ಎಂದು ಹೇಳುವುದು ನಮಗೆ ಬೇಸರವಾಗಿದೆ ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದರು.

    ಈ ಹಿಂದೆ ಮಾತನಾಡಿದ್ದ ಝಾಕೀರ್ ಪತ್ನಿ, ನನ್ನ ಪತಿಯನ್ನು ಬಿಟ್ಟು ಬಿಡಿ. ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ನನ್ನ ಗಂಡ ಝಾಕೀರ್ ನಿರಪರಾಧಿ. ನನ್ನ ಗಂಡನನ್ನು ನನಗೆ ಬಿಟ್ಟುಕೊಡಿ. ನನ್ನ ಗಂಡನನ್ನು ಯಾಕೆ ಜೈಲಿನಲ್ಲಿ ಇಟ್ಟಿದ್ದೀರಿ. ನನ್ನ ಗಂಡ ಏನು ತಪ್ಪು ಮಾಡಿದ್ದಾರೆ ಎಂದು ಪ್ರೂಫ್ ಕೊಡಿ. ಪ್ರೂಫ್ ಕೊಟ್ಟು ನನ್ನ ಗಂಡನನ್ನು ಅರೆಸ್ಟ್ ಮಾಡಿ ಎಂದು ಕಿಡಿಕಾರಿದ್ದರು.

    ಏನಿದು ಘಟನೆ:
    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.

    ಪ್ರವೀಣ್ ಹತ್ಯೆಯ ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕತ್ರಿನಾ ಕೈಫ್-ವಿಕ್ಕಿ ಕೊಲೆ ಬೆದರಿಕೆ ಕೇಸ್: ವ್ಯಕ್ತಿಯೊಬ್ಬ ಅರೆಸ್ಟ್

    ಕತ್ರಿನಾ ಕೈಫ್-ವಿಕ್ಕಿ ಕೊಲೆ ಬೆದರಿಕೆ ಕೇಸ್: ವ್ಯಕ್ತಿಯೊಬ್ಬ ಅರೆಸ್ಟ್

    ಸೋಷಿಯಲ್ ಮೀಡಿಯಾ ಮೂಲಕ ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಪತಿ, ನಟ ವಿಕ್ಕಿ ಕೌಶಲ್ ದಂಪತಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಮದುವೆಯಾಗಿ ಸುಖಿ ಸಂಸಾರದಲ್ಲಿ ದಂಪತಿಗೆ ಈ ಬೆದರಿಕೆ ಕರೆ ಆತಂಕ ಮೂಡಿಸಿತ್ತು. ಹಾಗಾಗಿಯೇ ನಿನ್ನೆ ಅವರು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಟಾರ್ ದಂಪತಿ ದೂರು ಕೊಡುತ್ತಿದ್ದಂತೆಯೇ ಕಾರ್ಯಚರಣೆಗೆ ಇಳಿದಿದ್ದ ಮುಂಬೈ ಪೊಲೀಸ್ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

    ತಮಗೆ ಬೆದರಿಕೆ ಹಾಕಿದ್ದು ಯಾರು, ಎಲ್ಲಿಂದ  ಆ ಸಂದೇಶ ಬಂದಿದ್ದು ಸೇರಿದಂತೆ ಹಲವು ವಿಷಯಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದರಂತೆ ಕತ್ರಿನಾ ಕೈಫ್. ಅಲ್ಲದೇ, ಅಗತ್ಯ ಸಹಕಾರವನ್ನೂ ಅವರು ನೀಡಿದ್ದರಂತೆ. ಹಾಗಾಗಿ ದೂರುಕೊಟ್ಟ ಕೆಲವೇ ಗಂಟೆಗಳಲ್ಲಿ ಮಿಂಚಿನ ಕಾರ್ಯಚರಣೆ ಮಾಡಿದ್ದ ಪೊಲೀಸರು ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಗಾಯಕ ಸಿಧು ಮೂಸೆವಾಲಾ ಸಾವಿನ ನಂತರ ಬಾಲಿವುಡ್ ನ ಅನೇಕ ಕಲಾವಿದರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನಾ ಕಾರಣಗಳಿಂದಾಗಿ ಅನೇಕರು ಈ ರೀತಿಯ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ರಕ್ಷಣೆಗಾಗಿ ಪೊಲೀಸರ ಮೊರೆ ಕೂಡ ಹೋಗಿದ್ದಾರೆ. ಸಲ್ಮಾನ್ ಖಾನ್, ವಿವೇಕ ಅಗ್ನಿಹೋತ್ರಿ, ಕಂಗನಾ ರಣಾವತ್ ಸೇರಿದಂತೆ ಹಲವು ಕಲಾವಿದರಿಗೆ ಈಗಾಗಲೇ ಜೀವ ಬೆದರಿಕೆ ಹಾಕಲಾಗಿದೆ. ಅವರು ಕೂಡ ದೂರು ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಂದಿಗೆ ಅಸಭ್ಯ ವರ್ತನೆ- ಪ್ರಯಾಣಿಕನ ಬಂಧನ

    ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಂದಿಗೆ ಅಸಭ್ಯ ವರ್ತನೆ- ಪ್ರಯಾಣಿಕನ ಬಂಧನ

    ಚಂಡೀಗಢ: ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ.

    ಮೊಹಮ್ಮದ್ ಡ್ಯಾನಿಶ್ ಬಂಧಿತ ವ್ಯಕ್ತಿ. ಶ್ರೀನಗರದಿಂದ ಲಕ್ನೋಕ್ಕೆ ಅಮೃತಸರ ಮಾರ್ಗವಾಗಿ ಹೋಗುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ನಿವಾಸಿಯಾದ ಮೊಹಮ್ಮದ್ ಎಂಬಾತ ಗಗನಸಖಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಅಷ್ಟೇ ಅಲ್ಲದೇ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ಕುಡಿತ ಅಮಲಿನಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಯುವತಿಯರು – ವೀಡಿಯೋ ವೈರಲ್

    ಘಟನೆಗೆ ಸಂಬಂಧಿಸಿದಂತೆ ಗಗನಸಖಿಯು ಕ್ಯಾಪ್ಟನ್‍ಗೆ ತಿಳಿಸಿದ್ದಾರೆ. ಅವರು ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನವು ಅಮೃತಸರದಲ್ಲಿ ಭೂಸ್ಪರ್ಶ ಮಾಡಿದ ತಕ್ಷಣ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಈತನನ್ನು ಜಾಮೀನನ ಮೇರೆಗೆ ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ಮೂರಂತಸ್ತಿನ ಕಟ್ಟಡದಲ್ಲಿ ನೇತಾಡುತ್ತಿದ್ದ ಮಕ್ಕಳ ಮುದ್ದಿನ ಬೆಕ್ಕು – ಯಶಸ್ವಿ ಕಾರ್ಯಾಚರಣೆ

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಶಾಲೆಯ ಟಾಯ್ಲೆಟ್‍ನಲ್ಲಿ 8ರ ಬಾಲಕಿಯ ಮೇಲೆ ಅತ್ಯಾಚಾರ

    ಭೋಪಾಲ್: ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಎಂಟೂವರೆ ವರ್ಷದ ಬಾಲಕಿಯ ಮೇಲೆ ಅಲ್ಲಿನ ಕಾವಲುಗಾರನೊಬ್ಬ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನ ಖೋಫಿಜಾ ಪ್ರದೇಶದಲ್ಲಿ ನಡೆದಿದೆ.

    ಲಕ್ಷ್ಮೀನಾರಾಯಣ ಧನಕ್ ಬಂಧಿತ ಆರೋಪಿ. ಈತ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಈತನನ್ನು 4ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.

    4ನೇ ತರಗತಿಯನ್ನು ಓದುತ್ತಿದ್ದ ವಿದ್ಯಾರ್ಥಿನಿಯು 6 ದಿನಗಳ ಹಿಂದೆ ಶಾಲೆಗೆ ಪ್ರವೇಶ ಪಡೆದಿದ್ದಳು. ಮಧ್ಯಾಹ್ನ ಊಟದ ಸಮಯದಲ್ಲಿ ಈಕೆ ಶೌಚಾಲಯಕ್ಕೆ ಹೋಗಿದ್ದಳು. ಆ ಸಮಯದಲ್ಲಿ ಅಲ್ಲೇ ಇದ್ದ ಆರೋಪಿ ಲಕ್ಷ್ಮೀನಾರಾಯಣ ಆಕೆಯನ್ನು ಶೌಚಾಲಯದೊಳಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಆರೋಪ – ಮೇಘಾಲಯ ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ಪೊಲೀಸ್ ದಾಳಿ

    ಘಟನೆ ಬಳಿಕ ಲಕ್ಷ್ಮೀನಾರಾಯಣ ಪರಾರಿಯಾಗಿದ್ದಾನೆ. ಬಾಲಕಿ ಅಳುತ್ತಿರುವುದನ್ನು ಕಂಡು ಇತರ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ಹೇಳಿಕೆಯ ಮೇರೆಗೆ ಪೊಲೀಸರು ಲಕ್ಷ್ಮೀನಾರಾಯಣನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಟ್ರಿಪ್‍ಗೆ ಕೈಕೊಟ್ಟ ಪತ್ನಿ- ಪಿಲ್ಲೊ ಜೊತೆ ಹೊರಟ ಪತಿ

    Live Tv
    [brid partner=56869869 player=32851 video=960834 autoplay=true]

  • ರಾಮೇಶ್ವರದ 6 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    ರಾಮೇಶ್ವರದ 6 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    ಕೊಲೊಂಬೋ: ರಾಮೇಶ್ವರಂನಿಂದ ಹೊರಟಿದ್ದ 6 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದೆ.

    ಅಗತ್ಯ ಅನುಮತಿ ಪಡೆದು ರಾಮೇಶ್ವರಂನಿಂದ ಒಟ್ಟು 400 ದೋಣಿಗಳು ಹೋರಟಿತ್ತು. ಅದರಲ್ಲಿ ತಲೈಮನ್ನಾರ್ ಮತ್ತು ನಾಚಿಕುಡವು ಬಳಿ ಮೀನುಗಾರಿಕೆ ನಡೆಸುತ್ತಿದ್ದ 6 ಮಂದಿಯ ದೋಣಿ ಸುತ್ತ ನೌಕಾಪಡೆಯ ಗಸ್ತು ಸುತ್ತುವರೆದಿದ್ದು, ಅಕ್ರಮವಾಗಿ ಮೀನುಗಾರಿಕೆ ಆರೋಪದ ಮೇರೆಗೆ ಅವರನ್ನು ಬಂಧಿಸಿದ್ದಾರೆ.

    ಆರಂಭದಲ್ಲಿ 11 ಮೀನುಗಾರರನ್ನು ಬಂಧಿಸಲಾಯಿತು. ಅವರಲ್ಲಿ ಐವರು ದೋಣಿ ಎಂಜಿನ್ ಸ್ಥಗಿತಗೊಂಡಿದ್ದರಿಂದ ಶ್ರೀಲಂಕಾದ ಸಮುದ್ರಕ್ಕೆ ತೇಲಿಹೋಗಿದೆ ಎಂದು ಖಚಿತ ಪಡೆಸಿಕೊಂಡ ಶ್ರೀಲಂಕಾ ನೌಕಾಪಡೆ ನಂತರ ಆ ಐವರನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

    ಬಂಧಿತರನ್ನು ಬಾಲಮುರುಗನ್, ಅಂತೋನಿ, ತಂಗಪಾಂಡಿ, ಅಜಿತ್, ಕೃಷ್ಣನ್ ಮತ್ತು ಮುದುಗು ಪಿಚೈ ಎಂದು ಗುರುತಿಸಲಾಗಿದೆ. ಮೀನುಗಾರರನ್ನು ತಲೈಮನ್ನಾರ್ ನೇವಿ ಕ್ಯಾಂಪ್‍ಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್

    Live Tv
    [brid partner=56869869 player=32851 video=960834 autoplay=true]

  • ನೂಪುರ್ ಶರ್ಮಾಗೆ ಬೆಂಬಲ, ವ್ಯಕ್ತಿ ಮೇಲೆ ಹಲ್ಲೆ- ಇಬ್ಬರ ಬಂಧನ

    ನೂಪುರ್ ಶರ್ಮಾಗೆ ಬೆಂಬಲ, ವ್ಯಕ್ತಿ ಮೇಲೆ ಹಲ್ಲೆ- ಇಬ್ಬರ ಬಂಧನ

    ಭೂಪಾಲ್: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದ ಘಟನೆಗೆ ಸಂಬಂಧಿಸಿ ಮಧ್ಯಪ್ರದೇಶದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

    ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಬುಧವಾರ ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಆರೋಪದ ಮೇಲೆ ಆಯುಷ್ ಜಾದಮ್ (25) ಎಂಬವರ ಮೇಲೆ ಜನರ ಗುಂಪೊಂದು ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗಂಭೀರ ಗಾಯಗೊಂಡಿದ್ದ ಆಯುಷ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ 13 ಜನರ ವಿರುದ್ಧ ದೂರು ದಾಖಲಿಸಿದ್ದರು. ಘಟನೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.

    ಪ್ರಕರಣದಲ್ಲಿ ನೂಪುರ್ ಶರ್ಮಾ ಅವರನ್ನು ಆಯುಷ್ ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೈಕ್‍ನಲ್ಲಿ ಬರುತ್ತಿದ್ದ ಆಯುಷ್‍ನನ್ನು 13 ದುಷ್ಕರ್ಮಿಗಳ ತಂಡ ಸ್ಥಳೀಯ ಟೋಲ್ ಬೂತ್ ಬಳಿ ದಾಳಿ ನಡೆಸಿತ್ತು. ದಾಳಿಯ ವೇಳೆ ಆಯುಷ್ ಅವರ ತಲೆಗೆ ಗಾಯವಾಗಿತ್ತು. ಇದನ್ನೂ ಓದಿ: ಸೇತುವೆ ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ವಿದ್ಯಾರ್ಥಿನಿ

    ಮೇ ತಿಂಗಳಲ್ಲಿ ನೂಪುರ್ ಶರ್ಮಾ ಅವರು ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ನ್ಯಾಷನಲ್‌ ಹೆರಾಲ್ಡ್‌ ಕೇಸ್‌- ಇಂದು ಇಡಿ ಮುಂದೆ ಹಾಜರಾಗಲಿದ್ದಾರೆ ಸೋನಿಯಾ

    Live Tv
    [brid partner=56869869 player=32851 video=960834 autoplay=true]

  • ವಿಚ್ಚೇದಿತ ಪತಿಯಿಂದಲೇ ಪತ್ನಿಯ ಕೊಲೆ

    ವಿಚ್ಚೇದಿತ ಪತಿಯಿಂದಲೇ ಪತ್ನಿಯ ಕೊಲೆ

    ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಯನ್ನು ಕೊಲೆ ಮಾಡಿ ಕಳ್ಳತನದ ಕಥೆ ಕಟ್ಟಿದ್ದ ಪತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜುಲೈ 12ರಂದು ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಅಂಗನವಾಡಿ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ(51) ಕೊಲೆ ಪ್ರಕರಣಣದಲ್ಲಿ ಆಕೆಯ ವಿಚ್ಚೇದಿತ ಗಂಡ ಅಂಜಪ್ಪನನ್ನ ಬಂಧಿಸಲಾಗಿದೆ.

    ಜುಲೈ 12ರಂದು ಅಂಜಪ್ಪ ಅಳಿಯನ ಜೊತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ಮನೆಯಲ್ಲಿ ಒಂಟಿಯಾಗಿದ್ದ ನನ್ನ ವಿಚ್ಚೇದಿತ ಪತ್ನಿ ವೆಂಕಟಲಕ್ಷ್ಮಮ್ಮಳನ್ನು ಕೊಲೆ ಮಾಡಿ, ಕತ್ತಲ್ಲಿದ್ದ ಸರ, ಮನೆಯ ಬಿರುವನಲ್ಲಿದ್ದ ಒಡವೆ, ಹಣವನ್ನು ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಇದನ್ನೂ ಓದಿ: ಲುಲು ಮಾಲ್ ವಿವಾದ – ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟುನ ಕ್ರಮ: ಆದಿತ್ಯನಾಥ್

    ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೃತ ವೆಂಕಟಲಕ್ಷ್ಮಮ್ಮಳನ್ನು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ, ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ. ತನಿಖೆಯಲ್ಲಿ ಅಸಲಿ ಕೊಲೆಗಾರ ಅಂಜಪ್ಪ ಎನ್ನುವುದು ಗೊತ್ತಾಗಿದೆ. ಈ ಅಂಜಪ್ಪ ಚಿಂತಾಮಣಿ ತಾಲೂಕು ಕತ್ರಿಗುಪ್ಪೆ ಗ್ರಾಮದವನಾಗಿದ್ದು, ಈತ ನಾಯನಹಳ್ಳಿ ಗ್ರಾಮದ ಕೊಲೆಯಾದ ವೆಂಕಟಲಕ್ಷ್ಮಮ್ಮಳನ್ನ ಮದುವೆಯಾಗಿದ್ದ, ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಈಕೆಗೆ ವಿಚ್ಚೇದನ ನೀಡಿದ್ದ ಅಂಜಪ್ಪ ಬೇರೊಂದು ಮದುವೆಯಾಗಿದ್ದ.

    POLICE JEEP

    ಇದರಿಂದ ತವರುಮನೆ ಸೇರಿದ್ದ ವೆಂಕಟಲಕ್ಷ್ಮಮ್ಮ ತನ್ನ ನಾಯನಹಳ್ಳಿ ಗ್ರಾಮದಲ್ಲಿ ತನ್ನ ಹೆಸರಿನಲ್ಲಿದ್ದ 26 ಗುಂಟೆಯ ಜಮೀನನ್ನು ಗಂಡ ಅಂಜಪ್ಪ ಮಧ್ಯಸ್ಥಿಕೆಯಲ್ಲೇ ಒಬ್ಬರಿಗೆ 40 ಲಕ್ಷಕ್ಕೆ ಆಗ್ರಿಮೆಂಟ್ ಕೊಟ್ಟಿದ್ದಳು. ಆದರೆ ಅಗ್ರಿಮೆಂಟ್ ಮಾಡಿಕೊಂಡು ಸುಮ್ಮನಾಗಿದ್ದ ಅವರು ವರ್ಷಗಳೇ ಕಳೆದರೂ ರಿಜಿಸ್ಟರ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಇತ್ತೀಚೆಗೆ ಅದೇ ಜಮೀನನ್ನು ವೆಂಕಟಲಕ್ಷ್ಮಮ್ಮ ಬೇರೊಬ್ಬರಿಗೆ 60ಲಕ್ಷಕ್ಕೆ ಮಾರಾಟ ಮಾಡಲು ಮುಂದಾಗಿದ್ದಳು. ಇದೇ ವಿಚಾರದಲ್ಲಿ ವಿಚ್ಚೇದಿತ ಗಂಡ ಹೆಂಡತಿ ಮಧ್ಯೆ ಮನಸ್ತಾಪ ಉಂಟಾಗಿ ಅಂಜಪ್ಪ ವೆಂಕಟಲಕ್ಷ್ಮಮ್ಮಳನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ನಮ್ಮ ಮುದ್ದಿನ ಗಿಳಿ ಕಾಣೆಯಾಗಿದೆ – ಬ್ಯಾನರ್, ಕರಪತ್ರ ಹಂಚಿದ ದಂಪತಿ

    Live Tv
    [brid partner=56869869 player=32851 video=960834 autoplay=true]

  • ಅಮಿತ್ ಶಾ ಫೋಟೋ ದುರ್ಬಳಕೆ ಮಾಡಿದ್ದ ಬಾಲಿವುಡ್ ನಿರ್ದೇಶಕ ಅವಿನಾಶ್ ಅರೆಸ್ಟ್

    ಅಮಿತ್ ಶಾ ಫೋಟೋ ದುರ್ಬಳಕೆ ಮಾಡಿದ್ದ ಬಾಲಿವುಡ್ ನಿರ್ದೇಶಕ ಅವಿನಾಶ್ ಅರೆಸ್ಟ್

    ಬಾಲಿವುಡ್ ನಿರ್ದೇಶಕ ಅವಿನಾಶ್ ದಾಸ್ ಅವರನ್ನು ಅಹಮ್ಮದಾಬಾದ್ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು ಮುಂಬೈನಲ್ಲಿ ಬಂಧಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಎಡಿಟ್ ಮಾಡಲಾದ ಫೋಟೋ ಹಂಚಿಕೊಂಡ ಆರೋಪದಡಿ ಇವರನ್ನು ಅರೆಸ್ಟ್ ಮಾಡಲಾಗಿದೆ.

    ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪೂಜಾ ಸಿಂಘಾಲ್ ಅವರನ್ನು ಈ ಹಿಂದೆ ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ದಾಳಿ ವೇಳೆ ಅವರ ಮನೆಯಲ್ಲಿ ಹಣದ ಕಂತೆಗಳು ದೊರೆತಿದ್ದವು. ಕಂತೆ ಕಂತೆ ಹಣ ಮತ್ತು ಚಿನ್ನಾಭರಣಗಳು ಪತ್ತೆಯಾದ ವಿಡಿಯೋ ಭಾರೀ ವೈರಲ್ ಕೂಡ ಆಗಿದ್ದವು. ಈ ವಿಡಿಯೋವನ್ನಿಟ್ಟುಕೊಂಡು ಅದಕ್ಕೆ ಅಮಿತ್ ಶಾ ಫೋಟೋ ಬಳಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ನಿರ್ದೇಶಕ ಅವಿನಾಶ್. ಅಲ್ಲದೇ ಅಮಿತ್ ಶಾ ಮತ್ತು ಪೂಜಾ ಅವರ ಫೋಟೋವನ್ನು ಎಡಿಟ್ ಮಾಡಿ ಹಾಕಿದ್ದರಂತೆ. ಹೀಗಾಗಿ ಅವರ ಮೇಲೆ ದೂರು ದಾಖಲಾಗಿತ್ತು. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

    ಈ ಕುರಿತು ಬಂಧನದ ಸಾಧ್ಯತೆಯನ್ನು ಅರಿತಿದ್ದ ಅವಿನಾಶ್, ನಿರೀಕ್ಷಣಾ ಜಾಮೀನುಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡು ಇವರನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತ್ ಶಾ ಅವರ ಫೋಟೋವನ್ನು ದುರುಪಯೋಗ ಪಡಿಸಿದ ದೂರನ್ನು ಕೈ ಬಿಟ್ಟು, ಪೂಜಾ ಸಿಂಘಾಲ್ ಅವರಿಗೆ ಉಡುಪಾಗಿ ರಾಷ್ಟ್ರ ಧ್ವಜವನ್ನು ಬಳಸಿದಂತೆ ಅವಿನಾಶ್ ಎಡಿಟ್ ಮಾಡಿದ್ದರಂತೆ. ಅಲ್ಲದೇ ಮಹಿಳೆಯ ಪಾರ್ಪಡ್ ಚಿತ್ರ ಬಳಕೆ ಮಾಡಿದ್ದನ್ನೂ ಸೇರಿಸಿ, ಬಂಧನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ನಿವಾಸದಿಂದ ಕಚೇರಿಗೆ ತೆರಳುತ್ತಿದ್ದಾರೆ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]