ಪಾಟ್ನಾ: ರಕ್ಷಾ ಬಂಧನ ಆಚರಿಸಲು ಅಣ್ಣನ ಮನೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಸಿವಾನ್‍ನಲ್ಲಿ ನಡೆದಿದೆ.
ಬಾಲಕಿಯು ತನ್ನ ಸಹೋದರನಿಗೆ ರಾಖಿ ಕಟ್ಟಲು ಆತನ ಮನೆಗೆ ತೆರಳುತ್ತಿದ್ದಳು. ಈ ವೇಳೆ ನಾಲ್ವರು ಬಂದು ಆಕೆಯನ್ನು ಅಪಹರಿಸಿದ್ದಾರೆ. ನಂತರ ರಸ್ತೆಯ ಬದಿಯಲ್ಲಿರುವ ಪೊದೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಬಾಲಕಿಯ ಕಿರುಚಾಟ ಕೇಳಿ ದಾರಿಹೋಕನೊಬ್ಬ ಸ್ಥಳಕ್ಕೆ ಆಗಮಿಸಿದ್ದಾನೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಜೊತೆಗೆ ಆಕೆಗೆ ಗಂಭೀರ ಗಾಯಗಳು ಆಗಿವೆ.
ಭೋಪಾಲ್: ಮಹಿಳೆಯ ಬಟ್ಟೆ ಬಿಚ್ಚಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಎಲ್ಲರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ. ಸಂತ್ರಸ್ತೆ ರೂಪರೇಲ್ ಗ್ರಾಮದ ನಿವಾಸಿಯಾಗಿದ್ದು, ಕೆಲವು ತಿಂಗಳ ಹಿಂದೆ ಪತಿಯನ್ನು ತೊರೆದು ಬೇರೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ಇದನ್ನೂ ಓದಿ: ಬೈಕ್, ರಿಕ್ಷಾಗೆ ಗುದ್ದಿದ ಕಾರ್ – 6 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಶಾಸಕನ ಅಳಿಯ
ಬುಧವಾರ ಮತ್ತೆ ಮಹಿಳೆ ತನ್ನ ಗಂಡನ ಮನೆಗೆ ಹೋದಳು. ಇದರಿಂದ ಕೋಪಗೊಂಡ ಆಕೆಯೊಂದಿಗೆ ವಾಸವಿದ್ದ ಮುಖೇಶ್ ತನ್ನೊಂದಿಗೆ ಇತರರನ್ನು ಕರೆದುಕೊಂಡು ಗ್ರಾಮಕ್ಕೆ ಹೋಗಿ ಮಹಿಳೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ
ಘಟನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಡಿಯೊದಲ್ಲಿ ಹಾಡಹಗಲೇ ವ್ಯಕ್ತಿಗಳು ಗ್ಯಾಂಗ್ ಮಹಿಳೆಯ ಬಟ್ಟೆ ಬಿಚ್ಚಿ ರಸ್ತೆಯಲ್ಲಿಯೇ ರಾಡ್‍ನಿಂದ ಹೊಡೆಯುತ್ತಿದ್ದರೆ, ಮತ್ತೆ ಕೆಲವರು ಮಧ್ಯಪ್ರವೇಶಿಸಿ ಮಹಿಳೆಯನ್ನು ರಕ್ಷಿಸಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ನಂತರ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಚಿಕಿತ್ಸೆಗಾಗಿ ಪೆಟ್ಲವಾಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ತಿವಾರಿ ಅವರು, ಮುಖೇಶ್ ತನೆಗೆ ಕಿರುಕುಳ ನೀಡುತ್ತಿದ್ದರಿಂದ ಗಂಡನ ಮನೆಗೆ ಮರಳಿದ್ದಾಗಿ ಮಹಿಳೆ ಹೇಳಿದ್ದಾಳೆ. ಮಹಿಳೆಯನ್ನು ಆಕೆಯ ಪತಿ ಕೂಡ ಒಪ್ಪಿಕೊಂಡಿದ್ದರಿಂದ ಮುಖೇಶ್ ಗಲಾಟೆ ಮಾಡಲು ಆರಂಭಿಸಿದ್ದಾನೆ. ನಂತರ ಮಹಿಳೆಯ ಬಟ್ಟೆಯನ್ನು ಬಿಚ್ಚಿ ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿದ್ದಾನೆ. ಇದೀಗ ಈ ಸಂಬಂಧ ಐವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ನಂತರ ಪರಾರಿಯಾಗಿದ್ದ ನೊಯ್ಡಾದ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಇಂದು ಮೀರತ್‌ನಲ್ಲಿ ಬಂಧಿಸಿದ್ದಾರೆ.
ತ್ಯಾಗಿ ಅವರ ವಕೀಲರು ಗ್ರೇಟರ್ ನೋಯ್ಡಾ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದರು. ತ್ಯಾಗಿ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಇದಾದ ಬಳಿಕ ತ್ಯಾಗಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ – ಬಿಜೆಪಿ ನಾಯಕನ ಅಕ್ರಮ ಕಟ್ಟಡ ನೆಲಸಮ
ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆ ಮೇಲೆ ತ್ಯಾಗಿ ಹಲ್ಲೆ ನಡೆಸಿದ್ದರು. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಘಟನೆ ಬಳಿಕ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದರು.
ನಿನ್ನೆ ಪೊಲೀಸ್ ಸಿಬ್ಬಂದಿಯೊಂದಿಗೆ ನೊಯ್ಡಾದ ಸೆಕ್ಟರ್ -93ಬಿನಲ್ಲಿರುವ ಗ್ರಾಂಡ್ ಓಮ್ಯಾಕ್ಸ್ ಸೊಸೈಟಿಗೆ ತಲುಪಿದ ಅಧಿಕಾರಿಗಳು, ನಂತರ ಬಿಜೆಪಿಯ ಕಿಸಾನ್ ಮೋರ್ಚಾದ ಆಪಾದಿತ ಸದಸ್ಯ ಶ್ರೀಕಾಂತ್ ತ್ಯಾಗಿ ಅವರಿಗೆ ಸೇರಿದ್ದ ಅಕ್ರಮ ಕಟ್ಟಡವನ್ನು ಕೆಡವಿದ್ದರು. ಇದನ್ನೂ ಓದಿ: ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ
Live Tv
[brid partner=56869869 player=32851 video=960834 autoplay=true]
ನವದೆಹಲಿ: 17 ವರ್ಷದ ಹುಡುಗಿಯ ಮೇಲೆ ಇಬ್ಬರು ವ್ಯಾಪಾರಿಗಳು ಅತ್ಯಾಚಾರ ಎಸಗಿದ ಘಟನೆ ರಾಷ್ಟ್ರ ರಾಜಧಾನಿಯ ತಿಲಕ್ ಸೇತುವೆ ಬಳಿ ನಡೆದಿದೆ.
ತಿಲಕ್ ಸೇತುವೆ ಬಳಿ ರೈಲ್ವೆ ಹಳಿಗಳ ಬಳಿ ಈ ಘಟನೆ ನಡೆದಿದೆ. ಹುಡುಗಿಯು ಗುಜರಾತ್ ಮೂಲದವರಾಗಿದ್ದು, ಸ್ನೇಹಿತನ ಜೊತೆ ರೈಲ್ವೆ ಸ್ಟೇಷನ್‍ಗೆ ಬಂದಿದ್ದಳು. ಆದರೆ ಹುಡುಗಿಗೂ ಸ್ನೇಹಿತನಿಗೂ ಜಗಳವಾಗಿದೆ. ಇದಾದ ನಂತರ ಸ್ನೇಹಿತನು ಅವಳನ್ನು ಅಲ್ಲೇ ಬಿಟ್ಟು ಹೋಗಿದ್ದನು. ಆ ಸಂದರ್ಭದಲ್ಲಿ ವ್ಯಾಪಾರಿಗಳು 17 ವರ್ಷದ ಹುಡುಗಿಯನ್ನು ರೈಲಿಗೆ ಹತ್ತಿಸುವ ನೆಪದಲ್ಲಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಹುಡುಗಿಯು ವ್ಯಾಪಾರಿಗಳ ಬಳಿ ತನ್ನ ಮನೆಗೆ ಕರೆ ಮಾಡಲು ಮೊಬೈಲ್‍ನ್ನು ನೀಡುವಂತೆ ಕೇಳಿದ್ದಾಳೆ. ಇದಾದ ಬಳಿಕ ರೈಲನ್ನು ಹತ್ತಲು ಸಹಾಯ ಮಾಡುವಂತೆ ಯುವತಿ ವ್ಯಾಪಾರಿಗಳನ್ನು ಕೇಳಿದ್ದಾರೆ. ಆ ಸಂದರ್ಭದಲ್ಲಿ ವ್ಯಾಪಾರಿಗಳು ಈ ನಿಲ್ದಾಣದಲ್ಲಿ ರೈಲಿಲ್ಲ. ಬದಲಿಗೆ ಬೇರೆ ನಿಲ್ದಾಣದಲ್ಲಿ ರೈಲು ಲಭ್ಯವಿರುತ್ತೆ ಎಂದು ಹೇಳಿ ಬೇರೆ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ – ವ್ಯಕ್ತಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ
ಡಿಸ್ಪೂರ್: ಬಾಂಗ್ಲಾ ಮೂಲದ ಉಗ್ರ ಸಂಘಟನೆ ‘ಅನ್ಸಾರುಲ್ ಇಸ್ಲಾಂ’ ಜೊತೆ ಸಂಪರ್ಕ ಹೊಂದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜಹೂರಾ ಖಾತುನ್ ಅವರ ಪತಿ ಅಬು ತಲ್ಲಾಹ್ ನನ್ನು ಕೂಡ ನೇರಲಾಗ ಭಾಗ ಗ್ರಾಮದಿಂದ ಬಂಧಿಸಿಲಾಗಿದೆ. ಆರೋಪಿಗಳು ಅನ್ಸಾರುಲ್ ಇಸ್ಲಾಂನೊಂದಿಗೆ ಸಂಬಂಧ ಹೊಂದಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಲಾಸಿಪಾರಾ ಉಪವಿಭಾಗದ ಪೊಲೀಸ್ ಅಧಿಕಾರಿ ಬಿರಿಂಚಿ ಬೋರಾ ತಿಳಿಸಿದ್ದಾರೆ. ಇದನ್ನೂ ಓದಿ: ಜೆಡಿಯು, ಬಿಜೆಪಿಯಲ್ಲಿ ಭಿನ್ನಮತ – ಮೈತ್ರಿ ಸರ್ಕಾರ ಉರುಳುವ ಸಾಧ್ಯತೆ
ಮಹಿಳೆ ಬಳಿಯಿದ್ದ ಎರಡು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಒಂದನ್ನು ಸುಟ್ಟುಹಾಕಲಾಗಿದೆ. ನಾವು ಸುಟ್ಟ ಫೋನ್‍ನಿಂದ ಡೇಟಾವನ್ನು ಹಿಂಪಡೆಯಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ನಾವು ಆಕೆಯ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಆಕೆ ಫೋನ್ ಮೂಲಕ ಉಗ್ರ ಸಂಘಟನೆ ‘ಅನ್ಸಾರುಲ್ ಇಸ್ಲಾಂ’ ಜೊತೆ ಸಂಪರ್ಕ ಹೊಂದಿದ್ದಳು ಎಂಬುವುದಕ್ಕೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದೇವೆ ಎಂದಿದ್ದಾರೆ.
ಕಳೆದ ಐದು ತಿಂಗಳಲ್ಲಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಐದು ಘಟಕಗಳನ್ನು ಭೇದಿಸಿದ ನಂತರ ಅಸ್ಸಾಂ ಜಿಹಾದಿ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಲಷ್ಕರ್ ಎ ತೊಯ್ಬಾದ ಹೈಬ್ರಿಡ್ ಉಗ್ರನನ್ನು ಭದ್ರತಾ ಪಡೆಗಳು ಬಂಧಿವೆ.
ಖಚಿತ ಮಾಹಿತಿಯ ಮೇರೆಗೆ ಶ್ರೀನಗರ ಪೊಲೀಸರು ಹಾಗೂ ಭದ್ರತಾ ಪಡೆಗಳು ಭಯೋತ್ಪಾದಕರ ಅಡಗು ತಾಣದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಎಲ್‍ಇಟಿಯ ಹೈಬ್ರಿಡ್ ಉಗ್ರ ಅರ್ಷಿದ್ ಅಹ್ಮದ್ ಭಟ್‍ನನ್ನು ಬಂಧಿಸಲಾಗಿದೆ. ಈ ಬಗ್ಗೆ ಶ್ರೀನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಬೆಲೆ ಏರಿಕೆ ಬಿಕ್ಕಟ್ಟು – ಚೀನಾ ವಿರುದ್ಧ ಕಿಡಿ
On a specific information, one Hybrid terrorist of LeT namely Arshid Ahmad Bhat s/o Abdul Kareem Bhat R/o Sangam Budgam arrested by a joint team of Srinagar Police & 2RR at Lawaypura. 5 Pistols, 5 Magazines, 50 Rounds & 2 Hand grenades recovered. Case registered at Shalteng PS. pic.twitter.com/TYvE7MtmGe
ಲಕ್ನೋ: ಮಹಿಳೆಯ ಮೇಲೆ ನಾಲ್ವರು ಅತ್ಯಾಚಾರ ಮಾಡಿ, ಅದನ್ನು ವೀಡಿಯೋ ಮಾಡಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.
ಮಹಿಳೆಯೊಬ್ಬಳು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ತುಂಬಲು ಸಾರ್ವಜನಿಕ ಸೇವಾ ಕೇಂದ್ರಕ್ಕೆ ಹೋಗುತ್ತಿದ್ದಾಗ ಕೇಂದ್ರದ ನಿರ್ವಾಹಕರು, ಕಂಪ್ಯೂಟರ್ ಆಪರೇಟರ್, ಅಂಗಡಿ ಮಾಲೀಕರು ಹಾಗೂ ಮತ್ತೊಬ್ಬರು ಸೇರಿ ಆಕೆಯ ಮೇಲೆ ಅತ್ಯಾಚಾರ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಲ್ವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳೆಲ್ಲರೂ ಮಹಿಳೆಯ ಪೋಷಕರು ವಾಸಿಸುತ್ತಿದ್ದ ಅಲಿಗಢ ಜಿಲ್ಲೆಗೆ ಸೇರಿದ ಹಳ್ಳಿಯವರಾಗಿದ್ದಾರೆ. ಮಹಿಳೆ ಹಾಗೂ ಆರೋಪಿಗಳು ಒಟ್ಟಿಗೆ ಓದಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ:ಗುಂಡನನ್ನು ಹುಡುಕಿಕೊಟ್ಟವರಿಗೆ 30 ಸಾವಿರ ರೂ. ಬಹುಮಾನ – ಮಗನಂತೆ ಸಾಕಿದ್ದ ಶ್ವಾನಕ್ಕಾಗಿ ಮಹಿಳೆ ಕಣ್ಣೀರು
Live Tv
[brid partner=56869869 player=32851 video=960834 autoplay=true]
ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಅಕ್ರಮವಾಗಿ ಪಾಸಾದ 8 ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.
ರವಿರಾಜ್, ಪೀರಪ್ಪ, ಶ್ರೀಶೈಲ್, ಭಗವಂತ, ಸಿದ್ದು ಪಾಟೀಲ್, ಸೋಮನಾಥ, ಕಲ್ಲಪ್ಪ, ವಿಜಯಕುಮಾರ್ ಎನ್ನುವವರೇ ಅಕ್ರಮದ ಮೂಲಕ ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮವಾಗಿ ಪಾಸಾದ ಬಂಧಿತ ಅಭ್ಯರ್ಥಿಗಳು.
ಬಂಧಿತರಲ್ಲಿ ಹಲವರು ಸರ್ಕಾರಿ ನೌಕರರು: ಬಂಧಿತರ ಪೈಕಿ ಹಲವರು ಈಗಾಗಲೇ ಸರ್ಕಾರಿ ಹುದ್ದೆಯಲ್ಲಿ ಇದ್ದಾರೆ. ಅದಾಗಿಯೂ ಪಿಎಸ್‍ಐ ಆಗುವ ಹವಣಿಕೆಯಿಂದ ಅಕ್ರಮದ ಹಾದಿ ತುಳಿದಿದ್ದಕ್ಕಾಗಿ ಇದೀಗ ಜೈಲು ಪಾಲಾಗಿದ್ದಾರೆ. ಬಂಧಿತ ಆರೋಪಿ ಸಿದ್ದು ಪಾಟೀಲ್, ಈಗಾಗಲೇ ಎಫ್‍ಡಿಎ ಆಗಿ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇನ್ನೂ ಬಂಧಿತ ಕಲ್ಲಪ್ಪ ಪೊಲೀಸ್ ಪೇದೆಯಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಪೀರಪ್ಪ ಎನ್ನುವ ಇನ್ನೊಬ್ಬ ಬಂಧಿತ ಆರೋಪಿ ಹಾಸ್ಟೆಲ್‍ನಲ್ಲಿ ಕುಕ್ ಆಗಿ ಕೆಲಸ ಮಾಡುವವನು.
ಇವರೆಲ್ಲಾ ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್‍ಐ ಪರೀಕ್ಷೆ ಬರೆದವರು. ಈ 8 ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 8 ಅಭ್ಯರ್ಥಿಗಳ ಹೆಸರು ಇತ್ತು.
ಎಸ್.ಬಿ.ಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ: ಕಲಬುರಗಿ ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್‍ಬಿಆರ್ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿರುವುದು ಈ ಮೂಲಕ ಬಯಲಾಗಿದೆ. ಬಂಧಿತ 8 ಜನರು ಕಲಬುರಗಿಯ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ.
ಪಿಎಸ್‍ಐ ಪರೀಕ್ಷೆ ಅಕ್ರಮ ಮಾಡಿ ಸಿಕ್ಕಿ ಬಿದ್ದಿರುವ 8 ಜನ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಮತ್ತು ಅಫಜಲಪೂರ ತಾಲೂಕಿನ ನಿವಾಸಿಗಳಾಗಿದ್ದಾರೆ. ಅಫಜಲಪೂರ ತಾಲೂಕಿನ ಮಲ್ಲಾಬಾದ್ ಗ್ರಾಮದ ರವಿರಾಜ್ ಅಖಂಡೆ, ಶಿದ್ನಾಳ್ ಗ್ರಾಮದ ಬೀರಪ್ಪ, ಜೇವರ್ಗಿ ತಾಲೂಕಿನ ಕೋಣಸಿರಸಗಿ ಗ್ರಾಮದ ಶ್ರೀಶೈಲ್, ಜೇರಟಗಿ ಗ್ರಾಮದ ಭಗವಂತರಾಯ ಯಾತನೂರ್, ಜೇವರ್ಗಿ ತಾಲೂಕಿನ ಬದನಿಹಾಳ ಗ್ರಾಮದ ಸೋಮನಾಥ್, ಅಫ್ಜಲ್ ಪುರ ತಾಲೂಕಿನ ಕರ್ಜಗಿ ರೋಡ್ ರಾಮನಗರದ ಕಲ್ಲಪ್ಪ ಅಲ್ಲಾಪುರ್, ಜೇವರ್ಗಿ ತಾಲೂಕಿನ ಗುಡೂರ್ ಎಸ್ ಗ್ರಾಮದ ವಿಜಯಕುಮಾರ್ ಎನ್ನುವವರೇ ಬಂಧಿತ ಆರೋಪಿಗಳು.
ಆರ್.ಡಿ ಪಾಟೀಲ್ ಕ್ಯಾಂಡಿಡೇಟ್ಸ್: ಈ ಎಲ್ಲಾ 8 ಜನರನ್ನು ಅಕ್ರಮವಾಗಿ ಪಿಎಸ್‍ಐ ಮಾಡಲು ಆಸೆ ತೋರಿಸಿದ್ದೆ ಕಿಂಗ್ ಪಿನ್ ಆರ್ ಡಿ ಪಾಟೀಲ್. ಈ ಎಲ್ಲಾ ಎಂಟು ಜನ ಅಭ್ಯರ್ಥಿಗಳು ಆರ್ ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡವರು ಎನ್ನುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್ ಡಿ ಪಾಟೀಲ್, ಈ ಎಲ್ಲಾ ಅಭ್ಯರ್ಥಿಗಳ ಜೊತೆ ಹಣಕಾಸಿನ ಡೀಲ್ ಮಾಡಿಕೊಂಡಿದ್ದಲ್ಲದೇ ಎಲ್ಲರಿಗೂ ಬ್ಲ್ಯೂಟೂತ್ ಡಿವೈಸ್ ಸಪ್ಲೈ ಮಾಡಿದ್ದ. ಇದನ್ನೂ ಓದಿ:ಇಡಿ, ಸಿಬಿಐಯವರು ಬರ್ತಾರೆ ಅಂತ ನಿದ್ದೆ ಬರ್ತಿಲ್ಲ, ಟೆನ್ಶನ್ ಹೆಚ್ಚಾಗಿದೆ: ಕೆಜಿಎಫ್ ಬಾಬು
ಬಂಧಿತರ ಸಂಖ್ಯೆ 52 ಕ್ಕೆ ಏರಿಕೆ: ಪಿಎಸ್‍ಐ ನೇಮಕಾತಿಯ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಬಗೆದಷ್ಟು ಬಯಲಾಗುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಿಐಡಿ 44 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈಗ ಒಮ್ಮೆಲೆ 8 ಜನ ಅಭ್ಯರ್ಥಿಗಳ ಬಂಧನದ ಮೂಲಕ ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 52ಕ್ಕೆ ಏರಿಕೆಯಾದಂತಾಗಿದೆ.
ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರ, ಎಂಎಸ್ ಇರಾನಿ ಪರೀಕ್ಷಾ ಕೇಂದ್ರಕ್ಕೆ ಸೀಮಿತವಾಗಿದ್ದ ಪಿಎಸ್‍ಐ ನೇಮಕಾತಿ ಅಕ್ರಮ, ಇದೀಗ ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜುಗೂ ವ್ಯಾಪಿಸಿದ್ದು, ಇದು ಇನ್ನಷ್ಟು ಪರೀಕ್ಷಾ ಕೇಂದ್ರಗಳಿಗೆ ವಿಸ್ತರಿಸುವ ಸಾಧ್ಯತೆ ಹೆಚ್ಚಳವಾಗಿದೆ. ಇದನ್ನೂ ಓದಿ: ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ
ಎಸ್‍ಬಿಆರ್ ಮತ್ತು ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಈ ಅಕ್ರಮಕ್ಕೆ ಸಾಥ್ ನೀಡಿರುವ ಇನ್ನಷ್ಟು ಜನ ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕರು ಹಾಗೂ ಬೇರೆ ಬೇರೆ ರೀತಿಯಲ್ಲಿ ಸಹಕಾರ ನೀಡಿರುವವರೂ ಬಂಧನಕ್ಕೊಳಗಾಗುವ ಆತಂತ ಎದುರಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪಶು ಸಂಗೋಪನೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ ಶಿಕ್ಷಕನನ್ನು ಪೊಲಿಸರು ಬಂಧಿಸಿದ್ದಾರೆ.
ಬಂಧತನನ್ನು ಜ್ಞಾನದೇವ್ ಜಾಧವ್ ಎಂದು ಗುರುತಿಸಲಾಗಿದ್ದು, ಈತನನ್ನು ಸಂಜಯ್ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಶು ಸಂಗೋಪನೆ ಸಚಿವರು ನನಗೆ ಆಪ್ತರು ಅಂತಾ ಹೇಳಿ ಅಭ್ಯರ್ಥಿಗಳಿಗೆ ವಂಚಿಸಿದ್ದಾನೆ.
ಜ್ಞಾನದೇವ್ ಜಾಧವ್ ಇಲಾಖೆಯ ಎಫ್‍ಡಿಎ, ಎಸ್‍ಡಿಎ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಿದ್ದ. ಅಲ್ಲದೆ ಪಶುಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಆದೇಶ ಮತ್ತು ಹೆಸರನ್ನ ನಕಲಿ ಮಾಡಿ ದಾಖಲೆ ಸೃಷ್ಟಿಸಿದ್ದ. ನೇಮಕಾತಿ ಪ್ರಕ್ರಿಯೆ ಯನ್ನ ಥೇಟ್ ಸರ್ಕಾರಿ ನೇಮಕಾತಿ ಯಂತೆ ನಡೆಸಿದ್ದ.
ಜುಲೈ 30ರ ಒಳಗೆ ಅಕ್ಷೇಪಗಳಿದ್ದರೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೆಸರಿನಲ್ಲಿ ಆದೇಶ ಹೊರಡಿಸಿದ್ದ. ಹೀಗೆ ಹುದ್ದೆಗೆ ಅರ್ಜಿ ಸಲ್ಲಿಸಿದ 63 ಅಭ್ಯರ್ಥಿಗಳಿಂದ ತಲಾ 2 ಲಕ್ಷ ಹಣ ಪಡೆದಿದ್ದ. ಕೆಲ ಅಭ್ಯರ್ಥಿಗಳು ಇಲಾಖೆಯನ್ನ ಸಂಪರ್ಕಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಜಾಧವ್ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚೆನ್ನೈ: ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ತಂದೆಯೊಬ್ಬ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿ ಅವಳನ್ನು ಗರ್ಭಿಣಿಯಾಗಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
40 ವರ್ಷದ ವ್ಯಕ್ತಿ ಹಾಗೂ ಆತನ ಪತ್ನಿ 8 ವರ್ಷಗಳ ಹಿಂದೆ ಬೇರ್ಪಟ್ಟಿದ್ದರು. ಈ ಸಂದರ್ಭದಲ್ಲಿ ಆ ದಂಪತಿಗೆ ಓರ್ವ ಮಗ ಹಾಗೂ ಮಗಳಿದ್ದಳು. ಅವರಿಬ್ಬರು ಆತನ ಪೋಷಕರ ಜೊತೆಯಲ್ಲೇ ವೆಲ್ಲೂರಿನ ಅಡುಕ್ಕಂಬರೈನಲ್ಲಿ ವಾಸಿಸುತ್ತಿದ್ದರು. ಈ ವೇಳೆ 9ನೇ ತರಗತಿಯ ಮಗಳ ಮೇಲೆ ತಂದೆಯೇ 2021ನೇ ಇಸವಿಯಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದಾನೆ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅಧಿಕಾರಿಗಳು ಬಾಲಕಿಯನ್ನು ಪ್ರಶ್ನಿಸಿದಾಗ 2021ರ ನವೆಂಬರ್‌ರಿಂದ ತಂದೆಯಿಂದ ಅತ್ಯಾಚಾರಕ್ಕೆ ಒಳಗಾಗಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಸ್ಪತ್ರೆಯ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಹಬ್ಬಕ್ಕೆ ಕೆಆರ್ ಮಾರ್ಕೆಟ್‍ನಲ್ಲಿ ಖರೀದಿ ಭರಾಟೆ – ಹೂ, ಹಣ್ಣು, ಕಾಯಿ ರೇಟ್ ದುಬಾರಿ
Live Tv
[brid partner=56869869 player=32851 video=960834 autoplay=true]