Tag: arrest

  • ಸಿಜೆಐ ಸೋಗಿನಲ್ಲಿ ವೃದ್ಧನಿಗೆ 1.26 ಕೋಟಿ ವಂಚನೆ – ನಾಲ್ವರು ಆರೋಪಿಗಳ ಬಂಧನ

    ಸಿಜೆಐ ಸೋಗಿನಲ್ಲಿ ವೃದ್ಧನಿಗೆ 1.26 ಕೋಟಿ ವಂಚನೆ – ನಾಲ್ವರು ಆರೋಪಿಗಳ ಬಂಧನ

    ಗಾಂಧೀನಗರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ (Chief Justice Of India), ಹಿರಿಯ ಪೊಲೀಸ್ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಯೋವೃದ್ಧರೊಬ್ಬರಿಗೆ 1.26 ಕೋಟಿ ರೂ. ವಂಚನೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಅಹ್ಮದಾಬಾದ್ ಸೈಬರ್ ಕ್ರೈಂ ಪೊಲೀಸರು (Ahmedabad Crime Branch Police)  ಬಂಧಿಸಿದ್ದಾರೆ.

    ಬಂಧಿತರನ್ನು ಮೊಹಮ್ಮದ್ ಹುಸೇನ್ ಜಾವೇದ್ ಅಲಿ, ತರುಣ್ ಸಿಂಗ್ ವಘೇಲಾ, ಬ್ರಿಜೇಶ್ ಪರೇಖ್ ಮತ್ತು ಶುಭಂ ಠಾಕರ್ ಎಂದು ಗುರುತಿಸಲಾಗಿದೆ.

    ಸೈಬರ್ ಕ್ರೈಂ ಪ್ರಕರಣದಲ್ಲಿ ಶುಭಂ ಠಾಕರ್‌ನನ್ನು ಈ ಹಿಂದೆ ಹರಿಯಾಣ ಪೊಲೀಸರು (Hariyana Police) ಬಂಧಿಸಿದ್ದರು. ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಇದನ್ನೂ ಓದಿ: ಪರಿಷತ್‌ ಉಪ ಚುನಾವಣೆ| ಬಿಜೆಪಿಯ ಕಿಶೋರ್ ಕುಮಾರ್‌ಗೆ ಭರ್ಜರಿ ಜಯ

    ಸಂತ್ರಸ್ತ ವೃದ್ಧ ವಿಡಿಯೋ ಕಾಲ್ ಸ್ವೀಕರಿಸಿದ ಕರೆಗಳು ಕಾಂಬೋಡಿಯಾದಲ್ಲಿ ಎಂದು ಪತ್ತೆಹಚ್ಚಲಾಗಿದೆ. ವರ್ಗಾವಣೆಯಾಗಿರುವ ಹಣದ ಹಲವು ಖಾತೆಗಳು ಗುಜರಾತ್‌ನಲ್ಲಿರುವುದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಅ.10 ರಂದು ವೃದ್ಧನಿಗೆ ಕರೆ ಮಾಡಿದ್ದ ವಂಚಕರು, ತಾನು ಹಿರಿಯ ಪೊಲೀಸ್ ಅಧಿಕಾರಿ, ಸಿಬಿಐ ಅಧಿಕಾರಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎಂದು ಹೇಳಿಕೊಂಡಿದ್ದರು. ವೃದ್ಧನಿಗೆ ಕರೆ ಮಾಡಿ ಅವರ ಖಾತೆಯಿಂದ 2 ಕೋಟಿ ರೂ. ಹಣದ ವಹಿವಾಟು ನಡೆದಿದೆ. ಬ್ಯಾಂಕ್ ಖಾತೆಯು ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದೆ ಮತ್ತು ನೀವು ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.

    ತನಿಖೆಯ ನೆಪದಲ್ಲಿ ಸಂತ್ರಸ್ತನ ಸ್ಥಿರ ಠೇವಣಿಗಳನ್ನು ಕ್ಲೋಸ್ ಮಾಡಿ, ಹಣವನ್ನು ಪರಿಶೀಲನೆಗೆ ವರ್ಗಾಯಿಸುವಂತೆ ಒತ್ತಡ ಹಾಕಿದ್ದಾರೆ. ಹಣವನ್ನು 48 ಗಂಟೆಯೊಳಗೆ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾರೆ. ವೃದ್ಧಮನ್ನು ನಂಬಿಸಲು ನಕಲಿ ಸುಪ್ರೀಂಕೋರ್ಟ್ ಪ್ರಮಾಣಪತ್ರವನ್ನು ತೋರಿಸಿದ್ದಾರೆ. ತಮ್ಮ ಠೇವಣಿಗಳನ್ನು ತೆಗೆದು ಹಣ ವರ್ಗಾವಣೆ ಮಾಡಿದ ಬಳಿಕ ವೃದ್ಧನಿಂದ ಆರೋಪಿಗಳು ಸಂಪರ್ಕ ಕಟ್ ಮಾಡಿಕೊಂಡಿದ್ದರು.ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ : 5 ಕೋಟಿ ಬೇಡಿಕೆಯಿಟ್ಟಿದ್ದ ತರಕಾರಿ ಮಾರಾಟಗಾರ ಅರೆಸ್ಟ್‌

  • ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಪ್ರಹ್ಲಾದ್ ಜೋಶಿ ಆಗ್ರಹ

    ಹುಬ್ಬಳ್ಳಿಯಲ್ಲಿ ದತ್ತಾತ್ರೇಯ ಮೂರ್ತಿ ಭಗ್ನ: ಕಿಡಿಗೇಡಿಗಳ ಬಂಧನಕ್ಕೆ ಪ್ರಹ್ಲಾದ್ ಜೋಶಿ ಆಗ್ರಹ

    – ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದೇ ಇಂಥ ಘಟನೆಗಳಿಗೆ ಕಾರಣ

    ಹುಬ್ಬಳ್ಳಿ: ದತ್ತಾತ್ರೇಯ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಜಿಲ್ಲೆಯ ದೇಶಪಾಂಡೆ ನಗರದಲ್ಲಿ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ನಗರ ಪೊಲೀಸ್ ಕಮಿಷನರ್‌ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸೂಚಿಸಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಪಾಂಡೆ ನಗರದ (Deshapande Nagar) ದತ್ತಾತ್ರೇಯ ದೇವಸ್ಥಾನದಲ್ಲಿನ ವಿಗ್ರಹವನ್ನು ಭಗ್ನಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಘಟನೆ ಖಂಡಿಸಿದರು. ಇತ್ತೀಚೆಗೆ ಹಲವೆಡೆ ಹಿಂದೂಗಳ ನಂಬಿಕೆಗೆ ಧಕ್ಕೆ ತರುವಂತಹ ದುಷ್ಕೃತ್ಯಗಳು ಘಟಿಸುತ್ತಲಿವೆ. ಸರ್ಕಾರದ ಬಿಗಿ ಆಡಳಿತ ಇಲ್ಲದಿರುವುದು ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿರ್ತಾರೋ ಗೊತ್ತಿಲ್ಲ – ಸಂಚಲನ ಮೂಡಿಸಿದ ಸತೀಶ್ ಜಾರಕಿಹೊಳಿ

    ಸಮಾಜಘಾತಕರನ್ನು ತಕ್ಷಣ ಬಂಧಿಸಿ:
    ದತ್ತಾತ್ರೇಯ ಮೂರ್ತಿಯ ಕೈಗಳನ್ನು ಕತ್ತರಿಸಿ ದುಷ್ಕೃತ್ಯ ಎಸಗಿರುವ ಸಮಾಜಘಾತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

    ನಾಡಿನೆಲ್ಲೆಡೆ ದಸರಾ ಮಹೋತ್ಸವ ಆಚರಿಸುತ್ತಿದ್ದು, ಜನತೆ ವಿಶೇಷ ಪೂಜೆ-ಪುನಸ್ಕಾರ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ. ಆದರೆ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ ಹಬ್ಬಗಳಲ್ಲಿ ಧಾರ್ಮಿಕ ಆಚರಣೆಗೆ ಭಂಗ ತಂದು ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.ಇದನ್ನೂ ಓದಿ: 70th National Film Awards: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಮಿಥುನ್ ಚಿಕ್ರವರ್ತಿ

  • ಸಿಲಿಕಾನ್ ಸಿಟಿಯಲ್ಲಿ ಇಂಟ್ರೆಸ್ಟಿಂಗ್ ಕಳ್ಳತನ ಪ್ರಕರಣಗಳು – ಒಟ್ಟು 7 ಖದೀಮರ ಅರೆಸ್ಟ್!

    ಸಿಲಿಕಾನ್ ಸಿಟಿಯಲ್ಲಿ ಇಂಟ್ರೆಸ್ಟಿಂಗ್ ಕಳ್ಳತನ ಪ್ರಕರಣಗಳು – ಒಟ್ಟು 7 ಖದೀಮರ ಅರೆಸ್ಟ್!

    ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಪೊಲೀಸರು ವಿವಿಧ ರೀತಿಯ ಕಳ್ಳತನದಲ್ಲಿ ತೊಡಗಿರುವ ಖದೀಮರನ್ನು ಅರೆಸ್ಟ್ ಮಾಡಿದ್ದಾರೆ. ಕೆಲವು ಆಶ್ಚರ್ಯಕರ ಎನಿಸುವ ಪ್ರಕರಣಗಳ ಸಂಬಂಧ ತನಿಖೆ ನಡೆಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.

    ಪ್ರಕರಣ-1
    ಪಿಜಿಯಲ್ಲಿ ಯಾರು ಇಲ್ಲದೇ ಇರುವಾಗ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಕುಮಾರಸ್ವಾಮಿ ಪೊಲೀಸ್ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಮೂವರು ಆರೋಪಿಗಳನ್ನು ಬಂಧಿಸಿದ್ದು, ಚನ್ನರಾಯಪಟ್ಟಣ ಮೂಲದ ಚೇತನ್, ಆದರ್ಶ್, ಪವನ್ ಎಂದು ಗುರುತಿಸಲಾಗಿದೆ. ಪಿಜಿಯಲ್ಲಿ ಯಾರು ಇಲ್ಲದೇ ಇರುವಾಗ ಲ್ಯಾಪ್‌ಟಾಪ್ ಕಳ್ಳತನ ಮಡುತ್ತಿದ್ದರು. ಪಿಜಿಗಳಲ್ಲಿ ಕದಿಯಲು ಸಾಧ್ಯವಾಗದೆ ಇದ್ದರೆ ಬ್ಯಾಚುಲರ್ ರೂಂಗಳನ್ನ ಹುಡುಕಿ ಪಾಟ್ ಕೆಳಗೆ, ಮ್ಯಾಟ್ ಕೆಳಗೆ ಇಡುತ್ತಿದ್ದ ಕೀಗಳನ್ನು ಗಮನಿಸಿ ಆ ರೂಂಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಲ್ಯಾಪ್‌ಟಾಪ್, ಮೊಬೈಲ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.

    ಸದ್ಯ ಬಂಧಿತ ಮೂವರಿಂದ ಒಟ್ಟು 23 ಲಕ್ಷ ರೂ. ಮೌಲ್ಯದ 28 ಮೊಬೈಲ್, 34 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.ಇದನ್ನೂ ಓದಿ: ಒಮರ್‌ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಂದಿನ ಸಿಎಂ

    ಪ್ರಕರಣ-2
    ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಲ್ಯಾಪ್‌ಟಾಪ್ ಕಳ್ಳತನ ಮಾಡಿ, ಮತ್ತೆ ತಮಿಳುನಾಡಿಗೆ ತೆರಳಿ ಮಾರಾಟ ಮಾಡುತ್ತಿದ್ದರು. ಓರ್ವನನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಇಬ್ಬರು ಆರೋಪಿಗಳ ಪೈಕಿ ಸದಾನಾಯ್ಡು ಎಂಬವನನ್ನು ಬಂಧಿಸಲಾಗಿದ್ದು, ಗಂಗಯ್ಯ ಎಂಬವವನಿಗಾಗಿ ಹುಡುಕಾಟ ನಡೆಸಿದ್ದು, ಇಬ್ಬರು ಸಹೋದರರು ಎಂದು ಗುರುತಿಸಲಾಗಿದೆ.

    ಸ್ಕೂಟಿಯಲ್ಲಿ ತಮಿಳುನಾಡಿನ ಸೇಲಂನಿಂದ ಬಂದು ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದರು. ನಂತರ ಸ್ಕೂಟಿಯಲ್ಲಿ ಎಸ್ಕೇಪ್ ಆಗಿ ತಮಿಳುನಾಡಿನಲ್ಲಿ ಅರ್ಧ ಬೆಲೆಗೆ ಲ್ಯಾಪ್‌ಟಾಪ್ ಮಾರಾಟ ಮಾಡುತ್ತಿದ್ದರು. ಈ ಹಿಂದೆ ಈ ಸಹೋದರರು ಗ್ಯಾಂಗ್ ಕಟ್ಟಿಕೊಂಡು ಲ್ಯಾಪ್‌ಟಾಪ್ ಕದಿಯುತ್ತಿದ್ದರು. ಆದರೆ ಒಂದು ಬಾರಿ ಬಂಧನವಾದ ಬಳಿಕ ಗ್ಯಾಂಗ್ ಸಹವಾಸ ಬಿಟ್ಟು ಇಬ್ಬರೇ ಕಳ್ಳತನಕ್ಕೆ ಇಳಿದಿದ್ದರು. ಸದ್ಯ ಸದಾನಾಯ್ಡುನನ್ನು ತಮಿಳುನಾಡಿನಲ್ಲಿ ಬಂಧನ ಮಾಡಿದ್ದು, ಗಂಗಯ್ಯನಿಗಾಗಿ ಜಯನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪ್ರಕರಣ-3
    ಚಿನ್ನದ ಅಂಗಡಿಗೆ ಹೋಗಿ ಚಿನ್ನವನ್ನು ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಚಿನ್ನದ ಗಟ್ಟಿ ಪಡೆದು ಎಸ್ಕೇಪ್ ಆಗುತ್ತಿದ್ದ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ಅಂಕುರ್ ಕುಮಾರ್ ಡುಂಗರ್ ವಾಲ ಎಂದು ಗುರುತಿಸಲಾಗಿದೆ. ಹಲಸೂರು ಗೇಟ್ ಬಳಿ ವಾಸಿಸುತ್ತಿದ್ದ. ಚಿನ್ನದ ಪಾಲಿಶ್ ಕೆಲಸ ಮಾಡುತ್ತಿದ್ದ. ಹಣದಾಸೆಗೆ ಬಿದ್ದು, ಚಿನ್ನದ ಗಟ್ಟಿಯನ್ನು ಕಳ್ಳತನ ಮಾಡಲು ಮುಂದಾಗಿದ್ದ. ಈ ಹಿನ್ನೆಲೆ ಚಿನ್ನದ ಅಂಗಡಿಗಳಿಗೆ ತೆರಳಿ ಚಿನ್ನವನ್ನು ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಚಿನ್ನದ ಗಟ್ಟಿಯನ್ನು ಪಡೆದು ಎಸ್ಕೇಪ್ ಆಗುತ್ತಿದ್ದ.

    ನಗರ್ತ ಪೇಟೆಯ ಚಿನ್ನದ ವ್ಯಾಪಾರಿಯೊಬ್ಬರು ಈತನ ಮೇಲೆ ದೂರು ದಾಖಲಿಸಿದ್ದರು. ವಿಷಯ ತಿಳಿದ ಆರೋಪಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ದೂರಿನ ಅನ್ವಯ ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನ ಬಂಧಿಸಿದ್ದಾರೆ. 10 ಲಕ್ಷ ರೂ. ಮೌಲ್ಯದ 387 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

    ಪ್ರಕರಣ-4
    ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಸ್ನೇಹಿತರಿಬ್ಬರನ್ನು ಹೆಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ದಿನೇಶ್ ಹಾಗೂ ಕುಪ್ಪನ್ ಎಂದು ಗುರುತಿಸಲಾಗಿದೆ.

    ದಿನೇಶ್ ಬಿಸಿಎ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಕುಪ್ಪನ್ ಗಾರೆ ಕೆಲಸ ಮಾಡುತ್ತಿದ್ದ. ಇಬ್ಬರು ಒಂದೇ ಊರಿನವರಾಗಿದ್ದು, ಚಿಕ್ಕಂದಿನಿಂದಲೂ ಫ್ರೆಂಡ್ಸ್ ಆಗಿದ್ದರು. ಸಿಲಿಕಾನ್ ಸಿಟಿಯಲ್ಲಿ ಜೀವನ ಸಾಗಿಸಲು ದುಡ್ಡು ಸಾಕಾಗದೇ ಗಾಂಜಾ ಮಾರಾಟಕ್ಕೆ ಇಳಿದಿದ್ದರು. ಕಾಲೇಜು ಒಂದರ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುವಾಗ ಹೆಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಬಂಧಿಸಿದ್ದು, ಇಬ್ಬರಿಂದ 13 ಲಕ್ಷ ರೂ. ಮೌಲ್ಯದ 23 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

    ಸದ್ಯ ಎಲ್ಲಾ ಪ್ರಕರಣದ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಇದನ್ನೂ ಓದಿ: ಮೈಸೂರು ದಸರಾದಂತೆ ಮಡಿಕೇರಿ ದಸರಾ ರೂಢಿಗೆ ಬಂದದ್ದು ಹೇಗೆ?

  • ಸನ್ಮಾನಕ್ಕಾಗಿ ತಾವೇ ರೈಲು ಹಳಿಯಿಂದ ಕ್ಲಿಪ್, ಫಿಶ್ ಪ್ಲೇಟ್ ಕಿತ್ತಿದ್ದ ಮೂವರು ರೈಲ್ವೇ ಸಿಬ್ಬಂದಿ ಬಂಧನ

    ಸನ್ಮಾನಕ್ಕಾಗಿ ತಾವೇ ರೈಲು ಹಳಿಯಿಂದ ಕ್ಲಿಪ್, ಫಿಶ್ ಪ್ಲೇಟ್ ಕಿತ್ತಿದ್ದ ಮೂವರು ರೈಲ್ವೇ ಸಿಬ್ಬಂದಿ ಬಂಧನ

    ಗಾಂಧಿನಗರ: ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶಕ್ಕಾಗಿ ರೈಲು ಹಳಿತಪ್ಪಿಸುವ ಸಂಚು ರೂಪಿಸಿದ್ದಕ್ಕಾಗಿ ಮೂವರು ರೈಲ್ವೇ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಸೂರತ್ (Surat) ಜಿಲ್ಲೆಯ ಕಿಮ್ ಬಳಿ ನಡೆದಿದೆ.

    ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶದಿಂದ ಫಿಶ್ ಪ್ಲೇಟ್‌ಗಳು (Fish Plates) ಮತ್ತು ಇತರ ಭಾಗಗಳನ್ನು ತೆಗೆದು ಮತ್ತೆ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ರೈಲ್ವೆ ಸಿಬ್ಬಂದಿಗಳಾದ ಸುಭಾಷ್ ಪೊದಾರ್, ಮನೀಶ್ ಮಿಸ್ತ್ರಿ, ಶುಭಂ ಜಯಸ್ವಾಲ್ ಎಂಬುವವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್, ಬೆಡ್‍ರೂಮ್‍ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ ಕಾಮುಕ ಅರೆಸ್ಟ್

    ಮೂವರ ಸಿಬ್ಬಂದಿಗಳನ್ನು ತನಿಖೆ ನಡೆಸಿದಾಗ ಬೆಳಗಿನ ಜಾವ 5:15ರ ಸುಮಾರಿಗೆ ಕಿಮ್ ಮತ್ತು ಕೊಸಾಂಬಾ ಗ್ರಾಮಗಳ ನಡುವಿನ ಹಳಿಯ ಬಳಿ ಮೂವರು ಓಡಿ ಹೋಗುವುದನ್ನು ಗಮನಿಸಿದ್ದೇವೆ. ಜೊತೆಗೆ ರೈಲು ಹಳಿಯಲ್ಲಿ 71 ಎಲಾಸ್ಟಿಕ್ ರೈಲ್ ಕ್ಲಿಪ್ ಕೀಗಳು (Elastic Rail Clip Keys) ಮತ್ತು ಎರಡು ಫಿಶ್ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿರುವುದು ಕಂಡುಬಂದಿದೆ ಹಾಗೂ ಅದಾದ 25 ನಿಮಿಷಗಳಲ್ಲಿ ಅವುಗಳು ಮತ್ತೆ ಅಳವಡಿಸಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

    ಸೂರತ್ ಎಸ್ಪಿ ಹಿತೇಶ್ ಜೋಯ್ಸರ್ ಮಾತನಾಡಿ, ಇಷ್ಟು ಕಡಿಮೆ ಅವಧಿಯಲ್ಲಿ ಅಳವಡಿಸಿರುವುದು ಅನುಮಾನ ಉಂಟು ಮಾಡಿತ್ತು. ಬಳಿಕ ಮೂವರ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ನ ಬಿನ್‌ನಲ್ಲಿ ತೆಗೆದ ಭಾಗಗಳ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಲಭ್ಯವಾಗಿದೆ. ಫೋಟೋಗಳು ರಾತ್ರಿ 2 ರಿಂದ 3 ನಡುವೆ ತೆಗೆದಿರುವುದು ಗೊತ್ತಾಗಿದೆ. ಇದನ್ನು ಪ್ರಶ್ನಿಸಿದಾಗ ವಿವರಣೆ ಅಸಾಧ್ಯವಾದಾಗ ಅವರು ಭಾಗಿಯಾಗಿರುವುದು ಅನುಮಾನ ಉಂಟು ಮಾಡಿತ್ತು. ಮತ್ತಷ್ಟು ಪ್ರಶ್ನೆ ಮಾಡಿದಾಗ ನಿಜವಾದ ವಿವರ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಹಳಿತಪ್ಪಿಸುವ ಯತ್ನದಂತೆ ತೋರಲು ಹಳಿಗಳ ಭಾಗಗಳನ್ನು ತೆಗೆದಿದ್ದಾರೆ. ಜೊತೆಗೆ ಅವುಗಳ ವೀಡಿಯೊ ಮತ್ತು ಫೋಟೋವನ್ನು ತೆಗೆದುಕೊಂಡಿದ್ದಾರೆ. ಅಪಘಾತವನ್ನು ತಪ್ಪಿಸಲು ಪ್ರಶಂಸೆ ಪಡೆಯುವ ಪ್ರಯತ್ನದಲ್ಲಿ ತೆಗೆದಿದ್ದ ಹಳಿ ಭಾಗಗಳನ್ನು ಮತ್ತೆ ಅಳವಡಿಸಿದ್ದು, ತನಿಖೆಯ ವೇಳೆ ಕಂಡು ಬಂದಿದೆ ಎಂದು ತಿಳಿಸಿದರು.

    ಸದ್ಯ ಪೊಲೀಸರು ಪ್ರಕರಣವನ್ನು ವಿಶೇಷ ಕಾರ್ಯಾಚರಣೆ ತಂಡಕ್ಕೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ. ಪೊಲೀಸರು ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ‘ಲಾಪತಾ ಲೇಡಿಸ್’ ಬೆನ್ನಲ್ಲೇ ಆಸ್ಕರ್‌ಗೆ ಪ್ರವೇಶ ಪಡೆದ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಚಿತ್ರ

  • ಲೈಂಗಿಕ ಕಿರುಕುಳ ಆರೋಪ: ನಟ, ರಾಜಕಾರಣಿ ಮುಕೇಶ್ ಬಂಧನ

    ಲೈಂಗಿಕ ಕಿರುಕುಳ ಆರೋಪ: ನಟ, ರಾಜಕಾರಣಿ ಮುಕೇಶ್ ಬಂಧನ

    ಲಯಾಳಂ (Malayalam) ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರೋ ಜಸ್ಟಿಸ್ ಹೇಮಾ ವರದಿ ಒಬ್ಬೊಬ್ಬರ ತಲೆದಂಡಕ್ಕೆ  ಕಾರಣವಾಗಿತ್ತು. ಈಗ ಮತ್ತೊಂದು ಹಂತ ತಲುಪಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದೆ (Arrest). ಖ್ಯಾತ ನಟ ಹಾಗೂ ರಾಜಕಾರಣಿ ಮುಕೇಶ್ (Mukesh) ಅವರನ್ನು ಬಂಧಿಸಲಾಗಿದೆ.

    ಕೊಚ್ಚಿಯ ಕೋಸ್ಟಲ್ ಪೊಲೀಸ್ ಆಫೀಸಿನಲ್ಲಿ ಮುಕೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಬಂಧನವಾಗಿದೆ.

    ಲೈಂಗಿಕ ದೌರ್ಜನ್ಯ (Sexual Harassment) ಪ್ರಕರಣದಲ್ಲಿ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿರೋ ಮುಕೇಶ್ ಅವರ ಬಂಧನ ಹಲವು ಚರ್ಚೆಗೆ ಕಾರಣವಾಗಿದೆ. ಬಂಧಿಸಿ ನಂತರ ಬಿಡುಗಡೆ ಮಾಡುವ ಮಾಹಿತಿಯೂ ಇದೆ.  ಒಟ್ಟಿನಲ್ಲಿ ಮುಕೇಶ್ ಬಂಧನ ಇತರರಲ್ಲಿ ಆತಂಕ ಸೃಷ್ಟಿ ಮಾಡಿದೆ.

  • ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಸತ್‌ ಪ್ರವೇಶಿಸಲು ಯತ್ನಿಸಿದ ಮೂವರ ಬಂಧನ

    ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಸತ್‌ ಪ್ರವೇಶಿಸಲು ಯತ್ನಿಸಿದ ಮೂವರ ಬಂಧನ

    ನವದೆಹಲಿ: ನಕಲಿ ಆಧಾರ್‌ ಕಾರ್ಡ್‌ಗಳನ್ನು (Fake Adhar Card) ಬಳಸಿ ಸಂಸತ್‌ ಪ್ರವೇಶಿಸಲು ಯತ್ನಿಸಿದ ಮೂವರನ್ನು ಭದ್ರತಾ ಸಿಬ್ಬಂದಿ ಇಂದು ಬಂಧಿಸಿದ್ದಾರೆ.

    ದೆಹಲಿ ಪೊಲೀಸರು ಫೋರ್ಜರಿ ಮತ್ತು ವಂಚನೆ ಆರೋಪದ ಮೇಲೆ ಮೂವರು ಆರೋಪಿಗಳಾದ ಕಾಸಿಂ, ಮೋನಿಸ್ ಮತ್ತು ಸೋಯೆಬ್‌ನನ್ನು ಬಂಧಿಸಿದ್ದಾರೆ.

    ಈ ಮೂವರು ಕ್ಯಾಶುಯಲ್ ಪ್ರವೇಶ ಪಾಸ್ ಬಳಸಿ ಭದ್ರತೆ ಮತ್ತು ಗುರುತಿನ ಚೀಟಿ ತಪಾಸಣೆಗಾಗಿ ಸಾಲಿನಲ್ಲಿ ನಿಂತಿದ್ದಾಗ CISF ಅವರನ್ನು ತಡೆದು ವಶಕ್ಕೆ ತೆಗೆದುಕೊಂಡಿತು. ಈ ವೇಳೆ ಮೂವರಲ್ಲಿ ಇಬ್ಬರು ಒಂದೇ ರೀತಿಯ ಸಂಖ್ಯೆಗಳನ್ನು ಹೊಂದಿರುವ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದರು. ಆದರೆ ಅವರ ಸ್ವಂತ ಫೋಟೋಗಳನ್ನು ಹೊಂದಿರುವುದು ಬಯಲಾಗಿದೆ. ಇನ್ನೋರ್ವ ಸೋಯಾಬ್‌ನ ಗುರುತು ಪತ್ತೆ ಮಾಡಲಾಗುತ್ತಿದೆ.

    ಬಂಧಿತ ಈ ಮೂವರನ್ನು ಡಿ ವೀ ಪ್ರಾಜೆಕ್ಟ್ ಲಿಮಿಟೆಡ್‌ನಿಂದ ನೇಮಕ ಮಾಡಲಾಗಿತ್ತು. ಅಲ್ಲದೇ ಇವರು ಕಳೆದ ಮೂರು ತಿಂಗಳಿಂದ ಸಂಸತ್ತಿನ ಸಂಕೀರ್ಣದ ಒಳಗೆ ಸಂಸದರ (Parliament) ವಿಶ್ರಾಂತಿ ಗೃಹ ನಿರ್ಮಾಣದಲ್ಲಿ ತೊಡಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

    ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 465 (ನಕಲಿ), 419 (ವ್ಯಕ್ತಿಯಿಂದ ವಂಚನೆ), 120 ಬಿ (ಕ್ರಿಮಿನಲ್ ಪಿತೂರಿ), 471 (ನಕಲಿ ದಾಖಲೆ ಬಳಕೆ) ಮತ್ತು 468 (ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    CRPF ಮತ್ತು ದೆಹಲಿ ಪೊಲೀಸ್ ತುಕಡಿಗಳನ್ನು ಬದಲಿಸಿ ಸಂಸತ್ತಿನ ಸಂಕೀರ್ಣದ ಸಂಪೂರ್ಣ ಭದ್ರತೆಯನ್ನು CISF ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. 2023 ರ ಡಿಸೆಂಬರ್‌ನಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂಬ ಇಬ್ಬರು ಲೋಕಸಭಾ (Lok Sabha) ಕಲಾಪ ನಡೆಯುವ ವೇಳೆ ಗ್ಯಾಲರಿಯಿಂದ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಇತ್ತ ನೀಲಂ ಮತ್ತು ಅಮೋಲ್ ಎಂಬ ಇಬ್ಬರು ಪ್ರತಿಭಟನಾಕಾರರು ಸಂಸತ್ತಿನ ಹೊರಗೆ ಇದೇ ರೀತಿ ಪ್ರತಿಭಟನೆ ನಡೆಸಿದ್ದರು.

  • ಕಳ್ಳತನದ ಕೆಲಸಕ್ಕೆ 20 ಸಾವಿರ ಸಂಬಳ- ಆರೋಪಿಗಳ ಬಂಧನ

    ಕಳ್ಳತನದ ಕೆಲಸಕ್ಕೆ 20 ಸಾವಿರ ಸಂಬಳ- ಆರೋಪಿಗಳ ಬಂಧನ

    – ಕಳ್ಳತನಕ್ಕೆಂದೇ ನೇಮಕ ಮಾಡಿಕೊಂಡಿದ್ದ ಮಾಲೀಕ

    ತುಮಕೂರು: ನಾವು ಸಂಬಳಕ್ಕೆ ಕೆಲಸ ಮಾಡುವ ಶಿಕ್ಷಕ, ವೈದ್ಯ, ಎಂಜಿನಿಯರ್ ಈ ರೀತಿಯ ವೃತ್ತಿಗಳನ್ನ ಕೇಳಿರ್ತೀವಿ, ಕಂಪನಿಗಳು ಸಂಬಳಕ್ಕೆ ಸಿಬ್ಬಂದಿ ಅನ್ನು ನೇಮಕ ಮಾಡುತ್ತವೆ ಎಂದು ನೋಡ್ತೀರ್ತಿವಿ. ಆದರೆ ತುಮಕೂರಿನಲ್ಲಿ (Tumakuru) ಕಳ್ಳತನಕ್ಕೆಂದೇ ಸಂಬಳಕ್ಕೆ ನೇಮಕ ಮಾಡಿಕೊಂಡ ಅಪರೂಪದ ಕೆಲಸವೊಂದನ್ನು ಪತ್ತೆ ಹಚ್ಚಿದ್ದಾರೆ.

    ಇಂತಹ ಅಪರೂಪದ ಪ್ರಕರಣ ನೋಡಿ ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಬೆಂಗಳೂರು ಮೂಲದ ರಾಘವೇಂದ್ರ ಎಂಬಾತ ವೆಂಕಟೇಶ್ ಎಂಬಾತನನ್ನ ಕಳ್ಳತನಕ್ಕಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದಾನೆ. ವೆಂಕಟೇಶನಿಗೆ 20 ಸಾವಿರ ರೂ. ಸಂಬಳ ಕೂಡ ಫಿಕ್ಸ್ ಮಾಡಿದ್ದಾನೆ. 20 ಸಾವಿರ ಸಂಬಳ ಪಡೆದ ಮೇಲೆ ಸುಮ್ನೆ ಕುಳಿತ್ತುಕೊಳ್ಳೊಕ್ಕೆ ಆಗುತ್ತಾ?. ಅದಕ್ಕೆ ಕಳ್ಳ ವೆಂಕಟೇಶ್ ಕೊರಟಗೆರೆ ಸುತ್ತಮುತ್ತ ರಾತ್ರಿ ಹೊತ್ತು ಕೊಳವೆ ಬಾವಿಯಲ್ಲಿದ್ದ ವೈರ್ ಗಳನ್ನ ಕದ್ದು ರಾಘವೇಂದ್ರನಿಗೆ ಕೊಡ್ತಿದ್ನಂತೆ. ಈ ಕದ್ದ ಕೇಬಲ್ ವೈರ್ ಗಳನ್ನ ರಾಘವೇಂದ್ರನು ವಿನೇಶ್ ಪಟೇಲ್ ಎಂಬಾತನಿಗೆ ಮಾರಾಟ ಮಾಡ್ತಿದ್ನಂತೆ. ಸರಣಿ ಕಳ್ಳತನದ ಮೇಲೆ ಕಣ್ಣಿಟ್ಟು ಕಾದು ಕುಳಿತಿದ್ದ ಪೊಲೀಸರಿಗೆ ವಡ್ಡಗೆರೆಯಲ್ಲಿ ಈ ಐನಾತಿ ಖದೀಮರು ತೋರಿದ ಕಳ್ಳತನದ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಇದನ್ನೇ ಆಧಾರವಾಗಿ ಇಟ್ಟುಕೊಂಡು ತನಿಖೆ ನಡೆಸಿದ ಪೊಲೀಸರು ವೆಂಕಟೇಶ್, ರಾಘವೇಂದ್ರ, ವಿನೇಶ್ ಪಟೇಲ್‍ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯಲ್ಲಿ ಸಂಬಳ ಪಡೆದು ಕಳ್ಳತನ ಮಾಡುತ್ತಿರುವ ವಿಚಾರವನ್ನ ವೆಂಕಟೇಶ್ ಬಾಯ್ಬಿಟ್ಟಿದ್ದಾನೆ. ಕೊರಟಗೆರೆ ಪೊಲೀಸರು ಈ ಮೂವರನ್ನ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಸಾಲ ಮರುಪಾವತಿಸುವಂತೆ ಪತ್ನಿ, ಪುತ್ರನಿಗೆ 2 ದಿನ ಗೃಹ ಬಂಧನ- ಮನನೊಂದು ರೈತ ಆತ್ಮಹತ್ಯೆ

    ಒಟ್ಟಾರೆ ವಿಚಿತ್ರ ಮತ್ತು ಅಪರೂಪದ ಪ್ರಕರಣಕ್ಕೆ ಕೊರಟಗೆರೆ ಠಾಣೆ ಸಾಕ್ಷಿಯಾಗಿದೆ. ಗೃಹ ಸಚಿವರ ತವರು ಕ್ಷೇತ್ರದಲ್ಲೇ ಈ ಪ್ರಕರಣ ಬಯಲಿಗೆ ಬಂದಿರೋದು ಇನ್ನಷ್ಟು ಕುತೂಹಲ ಕೆರಳಿಸಿದೆ.

  • ಸಲ್ಮಾನ್ ಮನೆ ಮುಂದೆ ಫೈರಿಂಗ್: 6ನೇ ಆರೋಪಿ ಬಂಧನ

    ಸಲ್ಮಾನ್ ಮನೆ ಮುಂದೆ ಫೈರಿಂಗ್: 6ನೇ ಆರೋಪಿ ಬಂಧನ

    ಬಾಲಿವುಡ್ ನಟ ಸಲ್ಮಾನ್ ಖಾನ್  ಮನೆ ಮುಂದೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾದ 6ನೇ ಆರೋಪಿ ಇವನಾಗಿದ್ದಾನೆ. ಬಂಧಿತ ಆರೋಪಿಯನ್ನ ಹರ್ಪಾಲ್ ಎಂದು ಗುರುತಿಸಲಾಗಿದೆ. ಮೊನ್ನೆಯಷ್ಟೇ  ಮೊಹಮ್ಮದ್ ರಫೀಕ್ ಚೌಧರಿ (Mohammed Rafique Chaudhary) ಹೆಸರಿನ 5ನೇ ಆರೋಪಿಯನ್ನು ರಾಜಸ್ಥಾನದ ನಾಗೌರ್ ನಲ್ಲಿ ಬಂಧಿಸಿದ್ದರು ಪೊಲೀಸರು.

    ಈ ಇಬ್ಬರೂ ಕೂಡ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯನೆಂದು ಹೇಳಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತನಾದ ಐದನೇ ವ್ಯಕ್ತಿ ಇವನಾಗಿದ್ದಾರೆ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಈ ನಾಲ್ವರಲ್ಲಿ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಲ್ಮಾನ್ ಖಾನ್  (Salman Khan) ಅವರ ಮನೆಮುಂದೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡು ಅವರನ್ನು ವಿಚಾರಣೆ ಮಾಡಲಾಗುತ್ತಿತ್ತು. ಈ ವೇಳೆ ಅನುಜ್ ಥಾಪಸ್ (Anuj Thapas) ಎಂಬ ವ್ಯಕ್ತಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಕುಟುಂಬ ಮುಂಬೈ ಹೈಕೋರ್ಟ್ (Court)  ಮೆಟ್ಟಿಲು ಏರಿದ್ದರು. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

     

    ತಮ್ಮ ಮಗನು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಅವರು ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಠಾಣೆಯಲ್ಲಿನ ಸಿಸಿಟಿವಿ ವಿಡಿಯೋವನ್ನು ಒಪ್ಪಿಸುವಂತೆ ಮತ್ತು ಹೊಸದಾಗಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಥಾಪನ್ ಠಾಣೆಯ ಪೊಲೀಸರ ಹಿಂಸೆಯಿಂದಾಗಿ ತಾವು ಮಗನನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ ಪೋಷಕರು.

  • ಯುವತಿಯರ ಅಶ್ಲೀಲ ಫೋಟೋ ಶೇರ್ ಮಾಡಿದ ಯುವಕ ಅರೆಸ್ಟ್

    ಯುವತಿಯರ ಅಶ್ಲೀಲ ಫೋಟೋ ಶೇರ್ ಮಾಡಿದ ಯುವಕ ಅರೆಸ್ಟ್

    ಚಿಕ್ಕಮಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಪೆನ್ ಡ್ರೈವ್ ಪುರಾಣ ಹಚ್ಚಹಸಿರಿರುವಾಗಲೇ ಮತ್ತೋರ್ವ ಯುವಕ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋ ಶೇರ್ ಮಾಡಿದ ಪ್ರಕರಣ ಸಂಬಂಧ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಯುವಕನೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ.

    ಕಳಸ ತಾಲೂಕು ಸಂಸೆ ಸಮೀಪದ ಬಸ್ರಿಕಲ್ ಗ್ರಾಮದ ಪ್ರಜ್ವಲ್ ಎಂಬ ಯುವಕನ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್ 67 ಹಾಗೂ 67ಎ ಅಡಿ ಪ್ರಕರಣ ದಾಖಲಾಗಿದೆ. ಯುವಕ ಪ್ರಜ್ವಲ್ ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ ಸ್ಟಾಗ್ರಾಂನಲ್ಲಿ ಯುವತಿಯರ ಅಶ್ಲೀಲ ಫೋಟೋ ಹಾಗೂ ವೀಡಿಯೋಗಳನ್ನ ಶೇರ್ ಮಾಡಿದ್ದನು. ಇದನ್ನೂ ಓದಿ: ಅಪರಾಧ ನಡೆದಿಲ್ಲ ಎಂದರೆ ನಿರೀಕ್ಷಣಾ ಜಾಮೀನು ಅರ್ಜಿ ಏಕೆ ತಿರಸ್ಕಾರವಾಯ್ತು: ಸಿಎಂ ಪ್ರಶ್ನೆ

    ಮಹಿಳೆಯರ ಖಾಸಗೀತನ ಹಾಗೂ ಗೌರವಕ್ಕೆ ಧಕ್ಕೆಯಾಗುವಂತಹ ಸಂದೇಶಗಳನ್ನೂ ಹಾಕಿದ್ದ. ಹಾಗಾಗಿ ಕುದುರೆಮುಖ ಪೊಲೀಸರು ಆತನನ್ನ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಪ್ರಜ್ವಲ್ ಅನ್ಯ ಹುಡುಗಿಯರು ಹಾಗೂ ಮಹಿಳೆಯರ ಫೋಟೋ ಹಾಗೂ ವೀಡಿಯೋ ಜೊತೆ ಇತ್ತೀಚೆಗೆ ರಾಜ್ಯ-ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಕಥೆಯಲ್ಲಿನ ಕೆಲ ಫೋಟೋಗಳನ್ನ ಬಳಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಬಗ್ಗೆ ಅಪಪ್ರಚಾರ ಹಾಗೂ ಅಗೌರವ ತರುವಂತಹ ಸಂದೇಶ ಹಾಗೂ ಫೋಟೋ ಹಾಗೂ ವೀಡಿಯೋಗಳನ್ನ ವೈರಲ್ ಮಾಡಿದ್ದರಿಂದ ಕುದುರೆಮುಖ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಜ್ವಲ್‍ನನ್ನ ಬಂಧಿಸಿ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

  • ಬಂಧನ ತಪ್ಪಿಸಿಕೊಳ್ಳಲು ವೇಷ ಬದಲಿಸಿಕೊಂಡಿದ್ದ ನಟ ಸಾಹಿಲ್

    ಬಂಧನ ತಪ್ಪಿಸಿಕೊಳ್ಳಲು ವೇಷ ಬದಲಿಸಿಕೊಂಡಿದ್ದ ನಟ ಸಾಹಿಲ್

    ಬೆಟ್ಟಿಂಗ್ ಹಗರಣಕ್ಕೆ (Scam) ಸಂಬಂಧಿಸಿದಂತೆ ನಿನ್ನೆ ಅರೆಸ್ಟ್ ಆಗಿರುವ ಬಾಲಿವುಡ್ ನಟ ಕಂ ಮಾಡೆಲ್ ಸಾಹಿಲ್ ಖಾನ್, ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವೇಷ ಬದಲಿಸಿಕೊಂಡು ನಾಲ್ಕು ದಿನಗಳ ಕಾಲ ಪ್ರಯಾಣ ಮಾಡಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. ನಿರೀಕ್ಷಣಾ ಜಾಮೀನು ವಜಾ ಆಗುತ್ತಿದ್ದಂತೆಯೇ ಗುರುತು ಸಿಗದಂತೆ ವೇಷ ಬದಲಿಸಿಕೊಂಡು 1800 ಕಿಲೋ ಮೀಟರ್ ಪ್ರಯಾಣ ಮಾಡಿದ್ದರಂತೆ.

    ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾನಾ ಕಡೆ ಪ್ರಯಾಣವನ್ನೂ ಅವರು ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಇದ್ದಾರೆ ಎಂದು ಪೊಲೀಸರು ಪತ್ತೆ ಮಾಡುತ್ತಿದ್ದಂತೆಯೇ ಛತ್ತೀಸ್ ಗಢಕ್ಕೆ ಹಾರಿದ್ದರು. ಕೊನೆಗೂ ಛತ್ತೀಸ್ ಗಢದ ಜಗದಲ್ ಪುರದ ಹೋಟೆಲ್ ವೊಂದರಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

    ನಿನ್ನೆಯಷ್ಟೇ ಸಾಹಿಲ್ ಖಾನ್ (Sahil Khan) ಬಂಧನವಾಗಿದೆ. ಮಹಾದೇವ್ ಬೆಟ್ಟಿಂಗ್ ಆಪ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ನಟನನ್ನು ಬಂಧಿಸಿರುವುದಾಗಿ (Arrest) ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿಸಿ, ತೀವ್ರ ವಿಚಾರಣೆಗೂ ಒಳಪಡಿಸಿದ್ದಾರೆ. ಈ ಹಿಂದೆ ಮಹಾದೇವ್ ಬೆಟ್ಟಿಂಗ್ (Mahadev Betting) ಆಪ್ ಅ ವ್ಯವಹಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮನ್ಸ್ (Summons) ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿದ್ದರು.

    ಬೆಟ್ಟಿಂಗ್ ಆಪ್ ನಲ್ಲಿ 15 ಸಾವಿರ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು, ಆಪ್ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಭೋಪಾಲ್, ಮುಂಬೈ, ಕೋಲ್ಕತ್ತಾ ನಗರಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ಸಮಯದಲ್ಲಿ ಹವಾಲಾ ನಡೆದಿರುವುದು ಪತ್ತೆ ಆಗಿದೆ ಎನ್ನಲಾಗಿತ್ತು.

     

    ರವಿ ಉಪ್ಪಾಲ್ ಮತ್ತು ಸೌರಭ್ ಚಂದ್ರಕಾರ್ ಎನ್ನುವವರು ಈ ಆಪ್ ಅನ್ನು ದುಬೈನಿಂದ ನಡೆಸುತ್ತಿದ್ದರು. ಬೇನಾಮಿ ಖಾತೆಗಳಿಂದ ಅಕ್ರ ಹಣ ವರ್ಗಾವಣೆ ಆಗುತ್ತಿದೆ ಎಂದು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಇನ್ನೂ ಅನೇಕ ಸಿಲೆಬ್ರಿಟಿಗಳು ನೋಟಿಸ್ ಜಾರಿ ಆಗಿದೆ.