Tag: arrest

  • ಸಿದ್ದರಾಮಯ್ಯ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ ಆರೋಪ – 11 ಜನರ ಬಂಧನ

    ಸಿದ್ದರಾಮಯ್ಯ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ ಆರೋಪ – 11 ಜನರ ಬಂಧನ

    ತುಮಕೂರು/ವಿಜಯಪುರ: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ ಆಗಿರುವ ಆರೋಪದಲ್ಲಿ ಇದೀಗ ಸಿಐಡಿ ಅಧಿಕಾರಿಗಳು 11 ಜನರನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ 10 ಜನ ಹಾಗೂ ವಿಜಯಪುರದ ಒಬ್ಬ ಶಿಕ್ಷಕನನ್ನು ಬಂಧಿಸಲಾಗಿದ್ದು, ಅವರನ್ನು ಬುಧವಾರ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

    Siddaramaiah (2)

    ಆರೋಪಿಗಳಲ್ಲಿ ತುಮಕೂರಿನ 10 ಜನ ಹಾಗೂ ವಿಜಯಪುರದ ಓರ್ವ ಶಿಕ್ಷಕ ಸಿಐಡಿ ಅಧಿಕಾರಿಗಳ ಕೈಯಲ್ಲಿ ಸೆರೆಯಾಗಿದ್ದಾರೆ. ಶಮೀನಾಜ್, ರಾಜೇಶ್ವರಿ ಜಗ್ಲಿ, ಕಮಲಾ, ನಾಗರತ್ನ, ದಿನೇಶ್, ನವೀನ್ ಹನುಮಗೌಡ, ನವೀನ್ ಕುಮಾರ್, ದೇವೇಂದ್ರ ನಾಯ್ಕ್, ಹರೀಶ್ ಆರ್, ಪ್ರಸನ್ನ ಬಿ.ಎಂ ಹಾಗೂ ಮಹೇಶ ಶ್ರೀಮಂತ ಸೂಸಲಾಡಿ ಬಂಧಿತ ಆರೋಪಿಗಳು. ಇದನ್ನೂ ಓದಿ: ಸಚಿವ ಉಮೇಶ್‌ ಕತ್ತಿಗೆ ಹೃದಯಾಘಾತ

    ಸಿಐಡಿ ತಂಡ ಮತ್ತೋರ್ವ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಈ ಬಾರಿ  ಲೈಂಗಿಕ ದೌರ್ಜನ್ಯ ಆರೋಪಕ್ಕಾಗಿ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಬಂಧನ

    ಈ ಬಾರಿ ಲೈಂಗಿಕ ದೌರ್ಜನ್ಯ ಆರೋಪಕ್ಕಾಗಿ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಬಂಧನ

    ವಹೇಳನಕಾರಿ ಟ್ವಿಟ್ ಗೆ ಸಂಬಂಧಿಸಿದಂತೆ ಬಂಧನವಾಗಿದ್ದ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಅನ್ನುವ ಕಾರಣಕ್ಕಾಗಿ ಇವತ್ತು ಮತ್ತೆ ಬಂಧನವಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಬಾಂದ್ರಾ ನ್ಯಾಯಾಲಯ ಆದೇಶ ನೀಡಿದೆ.

    ಶಿವಸೇನೆ ನಾಯಕರೊಬ್ಬರ ಮೇಲೆ ವಿವಾದ್ಮಾತಕ ಕಾಮೆಂಟ್ ಆರೋಪಗಳ ಮೇಲೆ ಕೆ.ಆರ್.ಕೆ ಆಗಸ್ಟ್ 30 ವರೆಗೂ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ಇದೀಗ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕಾಗಿ ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಘಟನೆಯು 2017ರಲ್ಲೇ ನಡೆದಿದ್ದು, ತಾವು ನಿರ್ಮಾಣ ಮಾಡುವ ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಆ ನಟಿಗೆ ನಂಬಿಸಿ ಮೋಸ ಮಾಡಿದ್ದಾರೆಂದು ಆ ನಟಿ ದೂರಿದ್ದಾರೆ. ಇದನ್ನೂ ಓದಿ:ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್

    ಕಮಲ್ ತಾವೊಬ್ಬ ನಿರ್ಮಾಪಕರು ಎಂದು ಪರಿಚಯ ಮಾಡಿಕೊಂಡು, ಆ ನಂತರ ನಟಿಯ ನಂಬರ್ ಪಡೆದಿದ್ದರಂತೆ. ಮೊದ ಮೊದಲು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರಂತೆ. ತನ್ನ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಲು ನಟಿಗೆ ಕಮಲ್ ಆಹ್ವಾನ ಮಾಡಿದ್ದರಂತೆ. ಈ ಸಂದರ್ಭದಲ್ಲಿ ಜ್ಯೂಸ್ ಕುಡಿಸಿ, ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರಂತೆ. ಆ ನಟಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವ್ಹೀಲಿಂಗ್- ಎರಡು ಕೋಮುಗಳ ನಡುವೆ ಗಲಾಟೆ: 6 ಮಂದಿ ವಶ

    ವ್ಹೀಲಿಂಗ್- ಎರಡು ಕೋಮುಗಳ ನಡುವೆ ಗಲಾಟೆ: 6 ಮಂದಿ ವಶ

    ಚಾಮರಾಜನಗರ: ವ್ಹೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ತಲಾ ಮೂವರು ಯುವಕರ ಮೇಲೆ ಪ್ರಕರಣ ದಾಖಲಿಸಿ ಒಟ್ಟು 6 ಮಂದಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದರು.

    ಈ ಬಗ್ಗೆ ಸುದ್ದಿಗರರೊಂದಿಗೆ ಮಾತನಾಡಿ ಅವರು, ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವ್ಹೀಲಿಂಗ್ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ವ್ಹೀಲಿಂಗ್ ನಿಗ್ರಹಕ್ಕೆ ವಿಶೇಷ ತಂಡ ರಚನೆ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಲು ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ನಡೆಸಲಾಯಿತು ಎಂದು ಹೇಳಿದರು.

    ಕೆ.ಎಸ್.ಆರ್.ಪಿ, ಡಿ.ಎ.ಆರ್ ಮತ್ತು ಸಿವಿಲ್ ಪೊಲೀಸ್ ಅಧಿಕಾರಿಗಳಿಂದ ಪಥಸಂಚಲನ ನಡೆಸಿ ಕೋಮುಗಲಭೆಗೆ ಪ್ರಚೋದನೆ ಹಾಗೂ ಕಾನೂನುಬಾಹಿರ ಚಟುವಟಿಕೆ ನಡೆಸುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಯಿತು. ಇದನ್ನೂ ಓದಿ: ಎಲ್ಲಾ ನಾಶ ಮಾಡಿದ್ದಾರೆ, ಶ್ರೀಗಳು ಯಾವುದೇ ಸಾಕ್ಷ್ಯ ಉಳಿಸಿಲ್ಲ: ಹೆಚ್. ವಿಶ್ವನಾಥ್

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಅಡಿಷನಲ್ ಎಸ್ಪಿ ಸುಂದರ್‌ರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿ ಪಥಸಂಚಲನದಲ್ಲಿ ಭಾಗಿಯಾಗಿದ್ದರು. ವ್ಹೀಲಿಂಗ್ ವಿಚಾರವಾಗಿ ನಿನ್ನೆ ರಾತ್ರಿ ಎರಡು ಕೋಮುಗಳ ನಡುವೆ ಗಲಾಟೆ ಯಾಗಿತ್ತು ಸಂತೇಮರಹಳ್ಳಿ ವೃತ್ತದ ಸುತ್ತಮುತ್ತ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ. ಇದನ್ನೂ ಓದಿ: ಓದುವುದರಲ್ಲಿ ಕಾಂಪಿಟೇಷನ್ ನೀಡ್ತಿದ್ದಕ್ಕೆ ಮಗನ ಸಹಪಾಠಿಗೆ ವಿಷ ಕೊಟ್ಟು ಸಾಯಿಸಿದ್ಲು

    Live Tv
    [brid partner=56869869 player=32851 video=960834 autoplay=true]

  • ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಬೆಂಗಳೂರು: ತಾಳಿ ಕಟ್ಟಿದ ಪತಿಯನ್ನೇ ಹತ್ಯೆಗೈದು ಮೂರ್ಛೆರೋಗದ ಕಥೆ ಕಟ್ಟಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಹೆಂಡತಿ ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಆರೋಪಿಗಳಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಅನ್ನು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮಂಡ್ಯಕ್ಕೆ ಮಹೇಶ್ ಶವವನ್ನು ತೆಗೆದುಕೊಂಡು ಹೋಗಿ ಮೂರ್ಛೆರೋಗ ಬಂದು ಸಾವನ್ನಪ್ಪಿದ್ದಾರೆ ಎಂದು ಪತ್ನಿ ಶಿಲ್ಪಾ ಕಥೆ ಕಟ್ಟಿದ್ದಳು. ಈ ಬಗ್ಗೆ ಅನುಮಾನಗೊಂಡು ಪೋಷಕರು ಮಹೇಶ್ ಮೃತ ದೇಹವನ್ನು ಪರಿಶೀಲನೆ ನಡೆಸಿದಾಗ ದೇಹದಲ್ಲಿ ಗಾಯಗಳು ಗುರುತು ಪತ್ತೆಯಾಗಿದೆ. ಈ ಕುರಿತಂತೆ ಕೂಡಲೇ ಮಂಡ್ಯ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಅನ್ಯಧರ್ಮದ ಹುಡುಗಿಯೊಂದಿಗೆ ಪ್ರೇಮ – ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ನಂತರ ಮಂಡ್ಯ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹೇಶ್ ಕೊಲೆಯಾಗಿರುವುದು ದೃಢಪಟ್ಟಿದೆ. ನಂತರ ಈ ಸಂಬಂಧ ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣಗುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸದ್ಯ ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ನಿಂದ ಸಿಇಟಿ ರ‍್ಯಾಂಕ್‌ ರದ್ದು- ಮೇಲ್ಮನವಿ ಸಲ್ಲಿಸುತ್ತಾ ಸರ್ಕಾರ?

    ಬೆಂಗಳೂರಿನ ಶಿಲ್ಪಾಳನ್ನು ಮಹೇಶ್ ಅವರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಮಹೇಶ್ ದಂಪತಿ ವಾಸವಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮುರುಘಾ ಶರಣರ ಬಂಧನ- ಬಿಕೋ ಎನ್ನುತ್ತಿದೆ ಮಠದ ಆವರಣ

    ಮುರುಘಾ ಶರಣರ ಬಂಧನ- ಬಿಕೋ ಎನ್ನುತ್ತಿದೆ ಮಠದ ಆವರಣ

    ಚಿತ್ರದುರ್ಗ: ಪೋಕ್ಸೊ ಪ್ರಕರಣ ಸಂಬಂಧ ಮುರುಘಾ ಶರಣರ ಬಂಧನವಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಮಠದ ಆವರಣ ಬಿಕೋ ಎನ್ನುತ್ತಿದೆ.

    ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಬರದಂತೆ ಮಠದ ಸುತ್ತಮುತ್ತ ಪೊಲೀಸರು ಬಿಗಿ ಬಂದೊಬಸ್ತ್ ಮಾಡಿದ್ದಾರೆ. ಬ್ಯಾಕ್ ಗೇಟ್, ಫ್ರಂಟ್ ಗೇಟ್ ಕೂಡ ಬಂದ್ ಮಾಡಲಾಗಿದೆ. ಕೇವಲ ಮಠದ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸದ್ಯ ಭಕ್ತಾದಿಗಳು ಇಲ್ಲದೇ ಮಠದ ಆವರಣ ಖಾಲಿ ಖಾಲಿಯಾಗಿದೆ. ಇದನ್ನೂ ಓದಿ: ಪೋಕ್ಸೊ ಪ್ರಕರಣ – ಮುರುಘಾ ಶ್ರೀಗೆ 14 ದಿನ ನ್ಯಾಯಾಂಗ ಬಂಧನ

    ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಸಂಬಂಧ ಮುರುಘಾ ಶ್ರೀಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದರು. ನಂತರ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಕೊಡಿಸಲಾಯಿತು. ನಸುಕಿನ ಜಾವ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು.

    ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ಮಠದಲ್ಲೇ ಮುರುಘಾಶ್ರೀ ಬಂಧನ

    Live Tv
    [brid partner=56869869 player=32851 video=960834 autoplay=true]

  • ನಿನ್ನೆಯಷ್ಟೇ ಬಂಧನವಾಗಿದ್ದ ನಟ ಕಮಾಲ್ ಖಾನ್ ಆಸ್ಪತ್ರೆಗೆ ದಾಖಲು

    ನಿನ್ನೆಯಷ್ಟೇ ಬಂಧನವಾಗಿದ್ದ ನಟ ಕಮಾಲ್ ಖಾನ್ ಆಸ್ಪತ್ರೆಗೆ ದಾಖಲು

    ಶಿವಸೇನ ಮುಖಂಡ ರಾಹುಲ್ ಕನ್ವಾಲ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡಿದ್ದರು ಎನ್ನುವ ಕಾರಣಕ್ಕಾಗಿ ನಟ, ಸ್ವಯಂ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಅವರನ್ನು ನಿನ್ನೆ ಪೊಲೀಸರು ಬಂಧಿಸಿ, ಕೋರ್ಟಿಗೆ ಹಾಜರು ಪಡಿಸಿದ್ದರು. ನ್ಯಾಯಾಲಯವು 14 ದಿನಗಳ ಕಾಲ ಖಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜೈಲಿಗೆ ಹೋದ ಕೆಲವೇ ಗಂಟೆಗಳಲ್ಲಿ ಎದೆನೋವಿನ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತ್ತಿದೆ. ಸದ್ಯ ಅವರು ಮುಂಬೈನ ಶತಾಬ್ದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರಂತೆ.

    ವಿವಾದಗಳ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟ, ಸ್ವಯಂ ವಿಮರ್ಶಕ ಕಮಾಲ್ ಆರ್ ಖಾನ್ ಅವರನ್ನು ನಿನ್ನೆ ಮುಂಬೈ ಪೊಲೀಸರು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು. ಬೊರಿವಲಿ ನ್ಯಾಯಾಲಯವು ಕಮಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 2020ರಲ್ಲಿ ರಾಹುಲ್ ಕನ್ವಾಲ್ ಎನ್ನುವವರ ವಿರುದ್ಧ ದ್ವೆಷಪೂರ್ಣ ಟ್ವಿಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಕಮಾಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ:ಬಿಗ್ ಬಾಸ್: ಹೋಟೆಲ್ ಊಟದತ್ತ ವಾಲಿದ ಜಶ್ವಂತ್- ನಂದು ಕಣ್ಣೀರು

    ಶಿವಸೇನಾ ಪಕ್ಷದ ಸದಸ್ಯರಾಗಿರುವ ರಾಹುಲ್ ಕನ್ವಾಲ್ ವಿರುದ್ಧ 2020ರಲ್ಲಿ ಕಮಾಲ್, ಮಾನಹಾನಿ ಆಗುವಂತಹ ಬರಹವನ್ನು ಟ್ವಿಟ್ ಮಾಡಿದ್ದರಂತೆ. ಆಗ ರಾಹುಲ್, ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಆಗ ಕಮಾಲ್ ದೇಶದಲ್ಲಿ ಇರದೇ ಇರುವ ಕಾರಣಕ್ಕಾಗಿ ಬಂಧನ ಸಾಧ್ಯವಾಗಿರಲಿಲ್ಲ. ಇದೀಗ ಕಮಾಲ್, ಮುಂಬೈ ಏರ್ ಪೋರ್ಟಿಗೆ ಬರುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದರು.

    ಕನ್ನಡದ ಕೆಜಿಎಫ್ 2, ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾವನ್ನು ಜಗತ್ತೇ ಹೊಗಳುತ್ತಿದ್ದಾಗ ಇವು ಕಳಪೆ ಸಿನಿಮಾಗಳು, ಇಂತಹ ಸಿನಿಮಾಗಳನ್ನು ಹೊಗಳುತ್ತಿರುವವರಿಗೆ ತಲೆ ಸರಿ ಇಲ್ಲ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಕಮಾಲ್. ಅಲ್ಲದೇ, ತಮ್ಮ ಜೀವನದ ಅನೇಕ ಖಾಸಗಿ ಸಂಗತಿಗಳನ್ನು ಕಮಾಲ್ ಬರೆದುಕೊಂಡು ಸುದ್ದಿ ಆಗುತ್ತಿದ್ದರು. ಇದೀಗ ಬಂಧನವಾಗಿ ಸುದ್ದಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿಯ ಖಾಸಗಿ ವಿಡಿಯೋ ಲೀಕ್ ಬೆದರಿಕೆ, ಬಾಯ್ ಫ್ರೆಂಡ್ ವಿರುದ್ಧವೇ ದೂರು

    ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿಯ ಖಾಸಗಿ ವಿಡಿಯೋ ಲೀಕ್ ಬೆದರಿಕೆ, ಬಾಯ್ ಫ್ರೆಂಡ್ ವಿರುದ್ಧವೇ ದೂರು

    ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದ ನಾಯಕಿ ಅಮಲಾ ಪೌಲ್ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡುವುದಾಗಿ ಆಕೆಯ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಅಮಲಾ ದೂರು ನೀಡಿದ್ದರು. ಅಲ್ಲದೇ, ತನ್ನ ಮಾಜಿ ಬಾಯ್ ಫ್ರೆಂಡ್ ನಿಂದ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಈ ದೂರನ್ನು ಆಧರಿಸಿದ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಅಮಲಾ ಪೌಲ್ ತಮಿಳಿನ ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ಅವರನ್ನು ಮದುವೆಯಾಗಿದ್ದಾರು. ಹೊಂದಾಣಿಕೆ ಕಾರಣದಿಂದಾಗಿ ಅವರಿಂದ ಡಿವೋರ್ಸ್ ಪಡೆದಿದ್ದರು. ಆನಂತರ ಭವಿಂದರ್ ಸಿಂಗ್ ಸಾಂಗತ್ಯ ಬಯಸಿದ್ದರು. ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಬಂಡವಾಳ ಕೂಡ ಹೂಡಿದ್ದರು. ಆನಂತರ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಒಬ್ಬರಿಗೊಬ್ಬರು ದೂರವಾಗಿದ್ದರು. ಆ ವೇಳೆಯಲ್ಲಿಯ ವಿಡಿಯೋ ಅದು ಎನ್ನಲಾಗುತ್ತಿದ್ದು, ವಿಡಿಯೋಗಾಗಿ ಪೊಲೀಸರು ತಲಾಷೆ ನಡೆಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ವಿಡಿಯೋ ಇದೆ ಎಂದು ಹಣದ ಬೇಡಿಕೆ ಇಟ್ಟಿದ್ದಾನೆ ಎಂದು ಅಮಲಾ ದೂರಿನಲ್ಲಿ ಬರೆದಿದ್ದು, ತಾನು ಹೇಳಿದಂತೆ ಕೇಳಬೇಕು ಎಂದು ಹಿಂಸೆ ನೀಡುತ್ತಿರುವುದಾಗಿ ತಮಿಳುನಾಡಿನ ವಿಲ್ಲುಪುರಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಮಲಾ ದಾಖಲಿಸಿದ್ದಾರೆ. ಅಲ್ಲದೇ, ಬಾಯ್ ಫ್ರೆಂಡ್ ನ ಹನ್ನೆರಡು ಜನ ಗೆಳೆಯರ ಮೇಲೂ ಅವರು ದೂರಿದ್ದಾರೆ. ಅವರಿಂದಲೂ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದಿದ್ದಾರೆ.

    ಮತ್ತೊಂದು ಮೂಲಗಳ ಪ್ರಕಾರ ಅಮಲಾ ಪೌಲ್ ಮತ್ತು ಭವಿಂದರ್ ಸಿಂಗ್ ಕೇವಲ ಡೇಟಿಂಗ್ ಮಾಡುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆಯೇ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಮದುವೆಯ ಫೋಟೋಗಳು ಕೂಡ ಲೀಕ್ ಆಗಿದ್ದವು. ತಾವು ಎರಡನೇ ಮದುವೆ ಆಗಿಲ್ಲ ಎಂದು ಅಮಲಾ ಹೇಳಿಕೊಂಡಿದ್ದರೂ, ಫೋಟೋಗಳು ಮಾತ್ರ ಅನುಮಾನ ಮೂಡಿಸಿದ್ದವು.

    Live Tv
    [brid partner=56869869 player=32851 video=960834 autoplay=true]

  • ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿ, ಅಮಾನತುಗೊಂಡ ಬಿಜೆಪಿ ನಾಯಕಿ ಬಂಧನ

    ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿ, ಅಮಾನತುಗೊಂಡ ಬಿಜೆಪಿ ನಾಯಕಿ ಬಂಧನ

    ರಾಂಚಿ: ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರನ್ನು ಬಂಧಿಸಲಾಗಿದೆ. ಸೀಮಾ ಪತ್ರಾ ತನ್ನ ಮನೆಯ ಕೆಲಸದಾಕೆಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಚಿತ್ರಹಿಂಸೆ ನೀಡಿದ ಪ್ರಕರಣ ಬಯಲಿಗೆ ಬಂದ ಬಳಿಕ ಜಾರ್ಖಂಡ್ ಬಿಜೆಪಿ ಅವರನ್ನು ಅಮಾನತುಗೊಳಿಸಿದೆ.

    ಸೀಮಾ ಪತ್ರಾ ತನ್ನ ಮನೆಯಲ್ಲಿ ಕೆಲಸಕ್ಕಿದ್ದ ಬುಡಕಟ್ಟು ಮಹಿಳೆಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಪತ್ರಾ ಅವರು ಮಾಜಿ ಐಎಎಸ್ ಅಧಿಕಾರಿ ಮಹೇಶ್ವರ್ ಪಾತ್ರಾ ಅವರ ಪತ್ನಿ. ಸುನೀತಾ ಎಂದು ಗುರುತಿಸಲಾದ ಕೆಲಸದಾಳುವಿಗೆ ಸೀಮಾ ಟಾಯ್ಲೆಟ್ ಅನ್ನು ನಾಲಿಗೆಯಿಂದ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮನೆಕೆಲಸದಾಕೆಗೆ ಮೂತ್ರ ಕುಡಿಸಿ ಚಿತ್ರಹಿಂಸೆ ನೀಡಿದ ನಾಯಕಿ – ಬಿಜೆಪಿಯಿಂದ ಅಮಾನತು

    ಸೀಮಾ ಪಾತ್ರಾ ತನ್ನ ಮನೆ ಕೆಲಸದಾಕೆಗೆ ಕಿರುಕುಳ ನೀಡಿದ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ ತನ್ನ ಗಮನಕ್ಕೆ ತೆಗೆದುಕೊಂಡಿದೆ. ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ, ಸಮಿತಿ ಜಾರ್ಖಂಡ್‌ನ ಡಿಜಿಪಿಗೆ ಪತ್ರ ಬರೆದಿದ್ದು, ಈ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಆರೋಪಿಯನ್ನು ಬಂಧಿಸುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ದತ್ತು ಪುತ್ರನ ಶವದೊಂದಿಗೆ 4 ದಿನ ಕಳೆದ 82ರ ವೃದ್ಧ

    Live Tv
    [brid partner=56869869 player=32851 video=960834 autoplay=true]

  • ನಟ ಕಮಾಲ್ ಖಾನ್ ಗೆ 14 ದಿನಗಳ ನ್ಯಾಯಾಂಗ ಬಂಧನ: ಕಣ್ಣೀರಿಟ್ಟ ಖಾನ್

    ನಟ ಕಮಾಲ್ ಖಾನ್ ಗೆ 14 ದಿನಗಳ ನ್ಯಾಯಾಂಗ ಬಂಧನ: ಕಣ್ಣೀರಿಟ್ಟ ಖಾನ್

    ವಿವಾದಗಳ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟ, ಸ್ವಯಂ ವಿಮರ್ಶಕ ಕಮಾಲ್ ಆರ್ ಖಾನ್ ಅವರನ್ನು ಇಂದು ಮುಂಬೈ ಪೊಲೀಸರು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು. ಬೊರಿವಲಿ ನ್ಯಾಯಾಲಯವು ಕಮಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 2020ರಲ್ಲಿ ರಾಹುಲ್ ಕನ್ವಾಲ್ ಎನ್ನುವವರ ವಿರುದ್ಧ ದ್ವೆಷಪೂರ್ಣ ಟ್ವಿಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಕಮಾಲ್ ಅವರನ್ನು ಮುಂಬೈ ಪೊಲೀಸರು ಇಂದು ಬಂಧಿಸಿದ್ದರು.

    ಶಿವಸೇನಾ ಪಕ್ಷದ ಸದಸ್ಯರಾಗಿರುವ ರಾಹುಲ್ ಕನ್ವಾಲ್ ವಿರುದ್ಧ 2020ರಲ್ಲಿ ಕಮಾಲ್, ಮಾನಹಾನಿ ಆಗುವಂತಹ ಬರಹವನ್ನು ಟ್ವಿಟ್ ಮಾಡಿದ್ದರಂತೆ. ಆಗ ರಾಹುಲ್, ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಆಗ ಕಮಾಲ್ ದೇಶದಲ್ಲಿ ಇರದೇ ಇರುವ ಕಾರಣಕ್ಕಾಗಿ ಬಂಧನ ಸಾಧ್ಯವಾಗಿರಲಿಲ್ಲ. ಇದೀಗ ಕಮಾಲ್, ಮುಂಬೈ ಏರ್ ಪೋರ್ಟಿಗೆ ಬರುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

    ಕನ್ನಡದ ಕೆಜಿಎಫ್ 2, ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾವನ್ನು ಜಗತ್ತೇ ಹೊಗಳುತ್ತಿದ್ದಾಗ ಇವು ಕಳಪೆ ಸಿನಿಮಾಗಳು, ಇಂತಹ ಸಿನಿಮಾಗಳನ್ನು ಹೊಗಳುತ್ತಿರುವವರಿಗೆ ತಲೆ ಸರಿ ಇಲ್ಲ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಕಮಾಲ್. ಅಲ್ಲದೇ, ತಮ್ಮ ಜೀವನದ ಅನೇಕ ಖಾಸಗಿ ಸಂಗತಿಗಳನ್ನು ಕಮಾಲ್ ಬರೆದುಕೊಂಡು ಸುದ್ದಿ ಆಗುತ್ತಿದ್ದರು. ಇದೀಗ ಬಂಧನವಾಗಿ ಸುದ್ದಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಆಪರೇಟರ್‌ಗೆ ಕಪಾಳಕ್ಕೆ ಬಾರಿಸಿದ ಉದ್ಯಮಿ

    ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಆಪರೇಟರ್‌ಗೆ ಕಪಾಳಕ್ಕೆ ಬಾರಿಸಿದ ಉದ್ಯಮಿ

    ಲಕ್ನೋ: ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೇಟರ್‌ಗೆ ಉದ್ಯಮಿಯೊಬ್ಬ ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ನಡೆಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ಸಿ ಕ್ಲೋಸ್ ನಾರ್ತ್ ಸೊಸೈಟಿಯ ನಿವಾಸಿ ವರುಣ್‍ನಾಥ್(39)ನನ್ನು ಬಂಧಿಸಲಾಗಿದೆ. ಕೆಲ ನಿಮಿಷಗಳ ಕಾಲ ವರುಣ್ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ವರುಣ್ ತನ್ನ ಸೊಸೈಟಿಯ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೇಟರ್ ಬಳಿ ಅನುಚಿತವಾಗಿ ವರ್ತಿಸಿ, ಅವರಿಬ್ಬರನ್ನು ಥಳಿಸಿದ್ದಾನೆ.

    ಘಟನೆಗೆ ಸಂಬಂಧ ವರುಣ್ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೆಟರ್‌ನನ್ನು ಥಳಿಸುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವೀಡಿಯೋದಲ್ಲಿ ವರುಣ್ ಕೆಟ್ಟ ಭಾಷೆಯಲ್ಲಿ ಬೈಯುತ್ತಾ ಅನೇಕ ಬಾರಿ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೇಟರ್‍ಗೆ ಕಪಾಳ ಮೋಕ್ಷ ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕಿರುಚಾಡುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.

    ಘಟನೆ ಸಂಬಂಧಿಸಿ ಭದ್ರತಾ ಸಿಬ್ಬಂದಿ ಜಮಾಯಿಸಿ ಸೊಸೈಟಿಯ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

    ಸೆಕ್ಯೂರಿಟಿ ಗಾರ್ಡ್ ಅಶೋಕ್ ನೀಡಿರುವ ದೂರಿನ ಪ್ರಕಾರ, 12ನೇ ಮಹಡಿಯಿಂದ ಬರುತ್ತಿದ್ದ ಲಿಫ್ಟ್ ನೆಲಮಹಡಿಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಲಿಫ್ಟ್‌ನಲ್ಲಿ ವರುಣ್ ಇದ್ದ. ಲಿಫ್ಟ್‍ನಲ್ಲಿ ಬಂಧಿ ಆಗಿರುವ ಬಗ್ಗೆ ಇಂಟರ್‌ಕಾಮ್ ಮೂಲಕ ಮಾಹಿತಿ ನೀಡಿದ್ದಾನೆ. ಇದಾದ ನಂತರ ಲಿಫ್ಟ್ ನಿರ್ವಾಹಕರನ್ನು ಕರೆಸಲಾಯಿತು. ಲಿಫ್ಟ್‌ನ್ನು ತೆಗೆದುಕೊಳ್ಳಲು ಸುಮಾರು 5 ನಿಮಿಷ ಸಮಯ ತೆಗೆದುಕೊಂಡಿದೆ. ಇದಾದ ಬಳಿಕ ಹೊರೆಗೆ ಬಂದ ವರುಣ್ ಕಪಾಳಕ್ಕೆ ಹೊಡೆದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ವರುಣ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

    Live Tv
    [brid partner=56869869 player=32851 video=960834 autoplay=true]