Tag: arrest

  • ನಾಗರಿಕರ ಮೇಲೆ ದಾಳಿಗೆ ಯೋಜಿಸಿದ್ದ ಇಬ್ಬರು ಉಗ್ರರ ಬಂಧನ

    ನಾಗರಿಕರ ಮೇಲೆ ದಾಳಿಗೆ ಯೋಜಿಸಿದ್ದ ಇಬ್ಬರು ಉಗ್ರರ ಬಂಧನ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು (Terrorist) ಬುಧವಾರ ಬಂಧಿಸಿದ್ದಾರೆ.

    ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಭದ್ರಾತಾ ಪಡೆಗಳು ನಡೆಸಿದ ಎನ್‍ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತಿಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು (Arrest) ಇಮ್ತಿಯಾಜ್ ಅಹ್ಮದ್ ಗನೈ ಮತ್ತು ವಸೀಮ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಯೊಂದಿಗೆ ಸಂಬಂಧ ಹೊಂದಿರುವ ವಿಷಯ ಬೆಳಕಿಗೆ ಬಂದಿದೆ.

    ಈ ಇಬ್ಬರು ಉಗ್ರರು ಸೋಪೋರ್ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದರು ಎಂಬ ವಿಷಯ ಬಯಲಾಗಿದೆ. ಬಂಧಿತ ಇಬ್ಬರು ಉಗ್ರರಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ

    ಬೆಳಗಾವಿ: ಪ್ರಿಯಕರನ ಜೊತೆ ಸೇರಿಕೊಂಡ ತನ್ನ ಗಂಡನನ್ನು (Husband) ಪತ್ನಿಯೇ(Wife) ಕೊಲೆ ಮಾಡಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಪಾಂಡಪ್ಪ ಜಟಕನ್ನವರ(35) ಮೃತ ವ್ಯಕ್ತಿ. ಈತನ ಪತ್ನಿ ಲಕ್ಷ್ಮಿ ಜಟಕನ್ನವರ ಹೊಸೂರ ಗ್ರಾಮದ ರಮೇಶ್ ಬಡಿಗೇರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಆಗಾಗ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ರಾತ್ರಿ ಪಾಂಡಪ್ಪ ಹಾಗೂ ಲಕ್ಷ್ಮೀ ನಡುವೆ ಇದೇ ವಿಷಯಕ್ಕೆ ಜಗಳವಾಡಿದ್ದು, ಈ ವಿಷಯ ರಮೇಶ್(36)ಗೆ ಲಕ್ಷ್ಮಿ ತಿಳಿಸಿ, ಬಳಿಕ ಗಂಡನನ್ನು ಕೊಲೆ ಮಾಡಲು ತಂತ್ರ ರೂಪಿಸಿದ್ದಾಳೆ.

    ಈ ಪ್ರಕಾರವಾಗಿಯೇ ರಮೇಶ್ ಬಡಿಗೇರ ಲಕ್ಷ್ಮಿ ಮನೆಗೆ ಬಂದಿದ್ದ. ಈ ವೇಳೆ ರಮೇಶ್ ಹಾಗೂ ಪಾಂಡಪ್ಪ ಮಧ್ಯೆ ನಡೆದಿದ್ದ ಜಗಳ ವಿಕೋಪಕ್ಕೆ ತಿರುಗಿತ್ತು. ಆಗ ಪಾಂಡಪ್ಪನ ತಲೆಗೆ ಲಕ್ಷ್ಮಿ ಕೃಷಿ ಉಪಕರಣದಿಂದ ಹೊಡೆದಿದ್ದಾಳೆ. ಇದರಿಂದಾಗಿ ಪಾಂಡಪ್ಪನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಾದ ಬಳಿಕ ಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪಾಂಡಪ್ಪ ಜಕ್ಕನವರ ಶವವನ್ನು ಬೈಕ್ ಮೇಲೆ ಹೊತ್ತೊಯ್ದು, ರಾಮದುರ್ಗ ತಾಲೂಕಿನ ಹೊಸೂರು ಹೊರವಲಯದ ಕಿರುಸೇತುವೆ ಬಳಿ ಎಸೆಯಲಾಗಿತ್ತು. ಇದನ್ನೂ ಓದಿ: ಹನೂರಿನಲ್ಲಿ 20 ಅಡಿ ಆಳದ ಹಳ್ಳಕ್ಕೆ ಬಿದ್ದ ಬೆಂಗಳೂರಿನ ಕಾರು

    POLICE JEEP

    ಈ ಹಿನ್ನೆಲೆಯಲ್ಲಿ ಪಾಂಡಪ್ಪ ಅಪಘಾತದಿಂದ ಮೃತ ಪಟ್ಟಿದ್ದಾನೆ ಎಂದು ಬಿಂಬಿಸಬೇಕು ಎಂಬ ಕಾರಣಕ್ಕೆ ಲಕ್ಷ್ಮಿ ತನಗೆ ಏನೂ ಗೊತ್ತೆ ಇಲ್ಲದ ರೀತಿಯಲ್ಲಿ ಮನೆಗೆ ಹೋಗಿ ಮರುದಿನ ತನ್ನ ಗಂಡ ಮನೆಗೆ ಮರಳಿ ಬಂದಿಲ್ಲ ಎಂದು ನಾಟಕವಾಡಿದ್ದಾಳೆ. ಇದನ್ನೂ ಓದಿ: ಪಟಾಕಿ ಬ್ಲಾಸ್ಟ್‌ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್‌ ಬ್ಲ್ಯಾಸ್ಟ್‌ ಕಥೆ

    ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಕಟಕೋಳ ಪೊಲೀಸರು 24 ಗಂಟೆಯೊಳಗಾಗಿಯೇ ಪ್ರಕರಣವನ್ನು ಭೇದಿಸಿದ್ದಾರೆ. ಲಕ್ಷ್ಮಿ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಘಟನೆ ಕುರಿತು ಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ರಮೇಶ್ ಬಡಿಗೇರನನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ- ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳ ಮಹಜರು

    ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ- ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳ ಮಹಜರು

    ಶಿವಮೊಗ್ಗ: ಜಿಲ್ಲೆಯಲ್ಲಿ ಐಸಿಸ್ ಜೊತೆ ನಂಟು ಹೊಂದಿದ್ದ ಇಬ್ಬರು ಶಂಕಿತ ಉಗ್ರರನ್ನು (Terrorist) ಪೊಲೀಸರು (Police) ಬಂಧಿಸಿ, (Arrest) ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳಕ್ಕೆ ಶಂಕಿತ ಉಗ್ರರನ್ನು ಕರೆತಂದು ಮಹಜರು ನಡೆಸಿದ್ದಾರೆ.

    ಮಂಗಳೂರು ಮೂಲದ ಮಾಜ್ ಮುನೀರ್ ಅಹಮ್ಮದ್, ಶಿವಮೊಗ್ಗ ಸಿದ್ದೇಶ್ವರ ನಗರದ ನಿವಾಸಿ ಸೈಯದ್ ಯಾಸಿನ್‌ನ್ನು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಮೂಲದ ಶಾರೀಕ್‌ಗೆ ಬಲೆ ಬೀಸಲಾಗಿದೆ. ಈ ಮೂವರೂ ಶಿವಮೊಗ್ಗದಲ್ಲಿ ಪಿಯುಸಿ ಒಟ್ಟಿಗೆ ಮುಗಿಸಿದ್ದರು. ಬಳಿಕ ಎಂಜಿನಿಯರಿಂಗ್‌ಗೆ ಸೇರಿಕೊಳ್ಳುತ್ತಾರೆ. ಆದರೆ, ವ್ಯಾಸಂಗದ ಜೊತೆ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರು ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.

    ಯಾಸಿನ್ ಕಳೆದ 2 ತಿಂಗಳ ಹಿಂದಷ್ಟೇ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ. ಪೋಷಕರ ಬಳಿ ಒಳ್ಳೆಯ ಕೆಲಸಕ್ಕಾಗಿ ಹುಡುಕುತ್ತಿದ್ದೇನೆ ಎಂದಿದ್ದ. ಆದರೆ ಈ ಎಂಜಿನಿಯರಿಂಗ್ ಪದವಿ ವ್ಯಾಸಂಗದ ಜೊತೆಗೆ ಬಾಂಬ್ ತಯಾರಿಕೆಯನ್ನು ಕಲಿಯುತ್ತಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ PSI ಹಗರಣದ ಗದ್ದಲ- ರಾಜಕಾರಣಿಗಳ ಬಂಧನಕ್ಕೆ ಒತ್ತಾಯಿಸಿದ ಸಿದ್ದರಾಮಯ್ಯ

    ಇನ್ನು ಯಾಸಿನ್‌ನನ್ನು ರಾತ್ರಿಯೇ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಸಿದ್ದೇಶ್ವರ ನಗರದ ಆತನ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು. ಜೊತೆಗೆ ಶಿವಮೊಗ್ಗದ (Shivamogga) ಪುರಲೆ ಸಮೀಪದ ತುಂಗಾನದಿ ದಡದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಎಂಬ ಮಾಹಿತಿ ತಿಳಿದು, ಆ ಸ್ಥಳಕ್ಕೂ ಬಂಧಿತ ಯಾಸಿನ್‌ನನ್ನ ಕರೆದೊಯ್ದು ಪಂಚನಾಮೆ ನಡೆಸಿದ್ದಾರೆ. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾಗಿ ಕಾಲು ಮುಟ್ಟಿ ನಮಸ್ಕರಿಸಿದ ಬಿಎಸ್‌ವೈ

    Live Tv
    [brid partner=56869869 player=32851 video=960834 autoplay=true]

  • ವಂಚನೆ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಶರಣಾದ ಬಿಗ್ ಬಾಸ್ ಸ್ಪರ್ಧಿ

    ವಂಚನೆ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಶರಣಾದ ಬಿಗ್ ಬಾಸ್ ಸ್ಪರ್ಧಿ

    ಮಾಜಿ ಬಿಗ್ ಬಾಸ್ ಸ್ಪರ್ಧಿ, ಗಾಯಕಿ ಹಾಗೂ ನಟಿಯೂ ಆಗಿರುವ ಸಪ್ನಾ ಚೌಧರಿ (Sapna Chaudhary) ಕೊನೆಗೂ ಲಖನೌ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ (Surrender). ವಂಚನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸಪ್ನಾಗೆ ನ್ಯಾಯಾಲಯವು ಬಂಧನ ವಾರೆಂಟ್ (Warrant) ಜಾರಿ ಮಾಡಿತ್ತು. ಹಾಗಾಗಿ ಸಪ್ನಾಗಾಗಿ ಪೊಲೀಸರು ಬಲೆ ಬೀಸಿದ್ದರು. ಹುಡುಕಾಟ ಕೂಡ ನಡೆದಿತ್ತು.

    2018ರಲ್ಲಿ ಇವೆಂಟ್ ಮಾಡಿಕೊಡಲು ಒಪ್ಪಿಕೊಂಡಿದ್ದ ಸಪ್ನಾ, ಗಾಯನ ಮತ್ತು ನೃತ್ಯಕ್ಕಾಗಿ ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಆದರೆ, ಆ ಕಾರ್ಯಕ್ರಮವನ್ನು ಅವರಿಂದ ಮಾಡಿಕೊಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಪಡೆದಿದ್ದ ಸಂಭಾವನೆಯನ್ನೂ ಅವರು ಹಿಂದಿರುಗಿಸಲಿಲ್ಲ. ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನು ಮಾಡದೇ ಇರುವ ಕಾರಣಕ್ಕಾಗಿ ಆಯೋಜಕರಿಗೆ ಸಾಕಷ್ಟು ನಷ್ಟವಾಗಿತ್ತು. ಹಾಗಾಗಿ ತಮಗೆ ವಂಚನೆ (Cheating) ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದನ್ನೂ  ಓದಿ:ಅನುಷ್ಕಾಗೆ ಕೈಕೊಟ್ಟು ಬಾಲಿವುಡ್ ಬೆಡಗಿಗೆ ಮನಸ್ಸು ಕೊಟ್ಟ ಪ್ರಭಾಸ್

    ಈ ಹಿಂದಿನ ವಿಚಾರಣೆಗಳಿಗೆ ಸಪ್ನ ಹಾಜರಾಗದೇ ಇರುವ ಕಾರಣಕ್ಕಾಗಿ ಲಖನೌನ (Lucknow) ಮ್ಯಾಜಿಸ್ಟ್ರೇಟ್ ಕೋರ್ಟ್ (Court) ಬಂಧನ (Arrest) ವಾರೆಂಟ್ ಜಾರಿ ಮಾಡಿತ್ತು. ನಿನ್ನೆ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿ, ತಮ್ಮಿಂದ ಯಾವುದೇ ತಪ್ಪು ಆಗಿಲ್ಲ, ತಾವು ವಂಚನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಜಾರಿ ಆಗಿರುವ ಬಂಧನ ವಾರೆಂಟ್ ಅನ್ನು ರದ್ದು ಮಾಡುವಂತೆ ಅವರು ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಸಪ್ನಾ ಹೇಳಿಕೆಯನ್ನು ಆಲಿಸಿದ ಕೋರ್ಟ್ ಸದ್ಯ ಅರೆಸ್ಟ್ ವಾರೆಂಟ್ ರದ್ದು ಮಾಡಿದ್ದು ಮತ್ತೆ ಸೆಪ್ಟೆಂಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 14 ಅಕ್ಟೋಬರ್ 2018ರಂದು ಸಪ್ನಾ ವಿರುದ್ಧ ದೂರು ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸಪ್ನಾ ಕೋರ್ಟಿಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್

    ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್

    ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಲ್ಲಿ ಎಟಿಎಂ (ATM) ಗೆ ತುಂಬುವ ವಾಹನ ಸಮೇತ ಹಣ ಕಳವುಗೈದ ಚಾಲಕನನ್ನು ಕರ್ನಾಟಕದಲ್ಲಿ ಅರೆಸ್ಟ್ ಮಾಡಲಾಗಿದೆ.

    ಬಂಧಿತನನ್ನು ಫಾರೂಕ್ ಎಂದು ಗುರುತಿಸಲಾಗಿದ್ದು, ಈತ ಸಿಎಂಎಸ್ (CMS) ಕಂಪನಿಯ ಎಟಿಎಂಗೆ ಹಣ ತುಂಬುವ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ಆಂಧ್ರಪ್ರದೇಶ (Andhrapradesh) ದ ಕಡಪ ನಗರದ ಎಸ್‍ಬಿಎಂ (SBM) ಬ್ಯಾಂಕ್‍ನಿಂದ 53.5ಲಕ್ಷ ಹಣ ಎಟಿಎಂ (ATM) ಗೆ ತುಂಬಲು ತಂದಿದ್ದ. ಆದರೆ ತದನಂತರ ಸಿಎಂಎಸ್ ಕಂಪನಿ ವಾಹನದಿಂದ ಇಟಿಯೋಸ್ ಕಾರಿಗೆ ಹಣ ಶಿಫ್ಟ್ ಮಾಡಿದ್ದಾನೆ.

    ಇಟಿಯೋಸ್ ಕಾರಿಗೆ ಹಣ ಶಿಫ್ಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಪಿ 39 ಎಚ್ ಜಿ 3109 ಟಾಟಾ ಇಟಿಯೋಸ್ ಕಾರಿನಲ್ಲಿ ಹಣ ಇಟ್ಟುಕೊಂಡು ಪರಾರಿಗೆ ಯತ್ನಿಸಿದ್ದಾನೆ. ಆಂಧ್ರ ಗಡಿಭಾಗದ ಬಾಗೇಪಲ್ಲಿ ಚೆಕ್ ಪೋಸ್ಟ್ ಬಳಿ ಇಟಿಯೋಸ್ ಕಾರಿಗೆ ಪೊಲೀಸರು ತಡೆಕೋರಿದ್ದಾರೆ. ಪೊಲೀಸರನ್ನ ಕಂಡ ಕೂಡಲೇ ಫಾರೂಕ್ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಇಟಿಯೋಸ್ ಕಾರು ಸಮೇತ 53.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಊಟ ನೀಡಲು ತಡವಾಗಿದ್ದಕ್ಕೆ ತವಾದಿಂದ ಹೊಡೆದು ಪತ್ನಿಯ ಕೊಲೆ

    ಊಟ ನೀಡಲು ತಡವಾಗಿದ್ದಕ್ಕೆ ತವಾದಿಂದ ಹೊಡೆದು ಪತ್ನಿಯ ಕೊಲೆ

    ಲಕ್ನೋ: ರಾತ್ರಿ ಊಟ ನೀಡಲು ತಡ ಮಾಡಿದ್ದಕ್ಕೆ ಪತಿಯೊಬ್ಬ ತವಾದಿಂದ(Tawa) ಪತ್ನಿಯ(Wife) ತಲೆಗೆ ಹೊಡೆದು ಹತ್ಯೆ ಮಾಡಿದ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಬಿಹಾರ್ ಮೂಲದ ಅನುಜ್ ಕುಮಾರ್ (37) ಪತ್ನಿ ಖುಷ್ಬುಳನ್ನು ಹತ್ಯೆ ಮಾಡಿದ್ದಾನೆ. ಈತ ನೋಯ್ಡಾದಲ್ಲಿ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅನುಜ್ ರಾತ್ರಿ ಊಟಕ್ಕೆಂದು ಮನೆಗೆ ತೆರಳಿದ್ದ.

    crime

    ಆದರೆ ಆತನ ಪತ್ನಿ ಖುಷ್ಬು ಊಟ ತಯಾರು ಮಾಡಲು ವಿಳಂಬ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಅನುಜ್ ಪತ್ನಿ ಖುಷ್ಬು ಬಳಿ ವಾಗ್ವಾದ ನಡೆಸಿದ್ದಾನೆ. ಇದಾದ ಬಳಿಕ ಖುಷ್ಬುವಿನ ತಲೆಗೆ ಅಲ್ಲೇ ಇದ್ದ ತವಾದಿಂದ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಲ್ಲಿ ಪ್ರವಾಹ ಆಗಿಲ್ಲ, ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ: ಹ್ಯಾರಿಸ್

    ಪತಿ, ಪತ್ನಿ ಇಬ್ಬರೂ ಬಿಹಾರ ಮೂಲದವರಾಗಿದ್ದು, ಇವರಿಗೆ ಓರ್ವ ಪುತ್ರನಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನೋಯ್ಡಾ ಪೊಲೀಸರು ಅನುಜ್‍ನನ್ನು ಬಂಧಿಸಿದ್ದಾರೆ.(Arrest) ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಅತ್ಯಾಚಾರ

    ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಅತ್ಯಾಚಾರ

    ಕೊಪ್ಪಳ: ಅಪ್ರಾಪ್ತ ಬಾಲಕಿಯನ್ನು ವಿವಾಹಿತನೋರ್ವ ಕಿಡ್ನ್ಯಾಪ್(Kidnap) ಮಾಡಿ, ಅತ್ಯಾಚಾರವನ್ನು ಮಾಡಿರುವ ಘಟನೆ ಕೊಪ್ಪಳದ(Koppala) ಗಂಗಾವತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳದ ಗಂಗಾವತಿಯ ಎಚ್‍ಆರ್‌ಎಸ್ ಕಾಲೋನಿಯ ನಿವಾಸಿ ಹುಲ್ಲೇಶ್ ಕಜ್ಜಿ ಎಂದು ಗುರುತಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯು ನಗರದ ಖಾಸಗಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಹುಲ್ಲೇಶ್ ಕಜ್ಜಿ ಪ್ರತಿನಿತ್ಯ ಬಾಲಕಿಯನ್ನು ಚುಡಾಯಿಸುವುದು, ರಸ್ತೆಗೆ ಅಡ್ಡ ನಿಂತು ಮಾತನಾಡಿಸುವುದು ಮಾಡುತ್ತಿದ್ದನು.

    ಸೆ.7ರಂದು ಬಾಲಕಿಯು ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ಮಾವನ ಸಹಾಯದಿಂದ ಹುಲ್ಲೇಶ್ ಬೈಕ್‍ನಲ್ಲಿ ಕಿಡ್ನ್ಯಾಪ್ ಮಾಡಿದ್ದಾನೆ. ಗಂಗಾವತಿ ಹೊರವಲಯದ ಸಿದ್ದಿಕೇರಿ ಸಮೀಪದ ವಾಣಿಭದ್ರೇಶ್ವರ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಕರೆದುಕೊಂಡು ಹೋಗಿ, ಅಲ್ಲಿ ಹುಲ್ಲೇಶ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಎರಡು ದಿನಗಳ ಕಾಲ ಅಲ್ಲಿಯೇ ಇದ್ದಿದ್ದು ಸೆ. 9ರಂದು ಬಾಲಕಿಯನ್ನು ಗಂಗಾವತಿ ನಗರದ ಬಸ್ ನಿಲ್ದಾಣ ಬಳಿ ಬಿಟ್ಟು ಹೋಗಲಾಗಿದೆ. ಇದನ್ನೂ ಓದಿ: ಉಗ್ರನ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ

    ನಂತರ ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಮನೆಗೆ ಹೋಗಿ ಮಾಹಿತಿ ನೀಡಿದ್ದಾಳೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಗಂಗಾವತಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹುಲ್ಲೇಶ್ ಕಜ್ಜಿಯನ್ನು ಬಂಧಿಸಲಾಗಿದೆ.(Arrest) ಇದನ್ನೂ ಓದಿ: ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

    Live Tv
    [brid partner=56869869 player=32851 video=960834 autoplay=true]

  • 2ನೇ ಕ್ಲಾಸ್ ಬಾಲಕಿಯ ಮೇಲೆ 25ರ ಯುವಕನಿಂದ ರೇಪ್

    2ನೇ ಕ್ಲಾಸ್ ಬಾಲಕಿಯ ಮೇಲೆ 25ರ ಯುವಕನಿಂದ ರೇಪ್

    ಲಕ್ನೋ: 2ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಆಕೆಯ ಗ್ರಾಮದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ.

    ರೋಹಿತ್ ಚೌಹಾಣ್ (25) 7 ವರ್ಷದ ಬಾಲಕಿಯ(Girl) ಮೇಲೆ ಅತ್ಯಾಚಾರವೆಸಗಿದ ಆರೋಪಿ. ಆತ ಬಾಲಕಿಯನ್ನು ತನ್ನ ಬೈಕ್‍ನಲ್ಲಿ(Bike) ಕಿಡ್ನ್ಯಾಪ್‌ ಮಾಡಿ ಮನೆಗೆ ಕರೆದೊಯ್ದಿದ್ದಾನೆ. ನಂತರ ತನ್ನ ಮನೆಯಲ್ಲಿ ಆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ರಾಯಚೂರಲ್ಲಿ ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ಮೋಸ

    ಘಟನೆಗೆ ಸಂಬಂಧಿಸಿ ಬಾಲಕಿಯ ಕುಟುಂಬಸ್ಥರು ನಾಗ್ರಾ ಪೊಲೀಸ್ ಠಾಣೆಗೆ(Nagra Police Station) ದೂರು ನೀಡಿದ್ದಾರೆ. ಈ ಸಂಬಂಧ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೋಹಿತ್ ಚೌಹಾಣ್‍ನನ್ನು ಬಂಧಿಸಿದ್ದಾರೆ.(Arrest) ಇದನ್ನೂ ಓದಿ: ಕೆಲಸದಲ್ಲಿ ಅಸಡ್ಡೆ – ಜ್ಯೂನಿಯರ್ಸ್‍ನ ಲಾಕಪ್‍ಗೆ ಹಾಕಿದ ಪೊಲೀಸ್ ಅಧಿಕಾರಿ

    Live Tv
    [brid partner=56869869 player=32851 video=960834 autoplay=true]

  • ಅಮಿತ್ ಶಾ ಭದ್ರತೆಯಲ್ಲಿ ಲೋಪ- ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ ಬಂಧನ

    ಅಮಿತ್ ಶಾ ಭದ್ರತೆಯಲ್ಲಿ ಲೋಪ- ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ ಬಂಧನ

    ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ, ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಮಲಬಾರ್ ಹಿಲ್‍ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಧೂಲೆ ನಿವಾಸಿ ಹೇಮಂತ್ ಪವಾರ್ (32) ವ್ಯಕ್ತಿಯನ್ನು ಬಂಧಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಈ ವಾರದ ಆರಂಭದಲ್ಲಿ ಮುಂಬೈಗೆ(Mumbai) ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಭದ್ರತೆಯಲ್ಲಿ ಲೋಪವಾಗಿದೆ(Security Lapse) ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    POLICE JEEP

    ಹೇಮಂತ್ ಪವಾರ್ ಆಂಧ್ರಪ್ರದೇಶ ಸಂಸದರೊಬ್ಬರ ಸಹಾಯಕನಂತೆ ನಟಿಸುತ್ತಿದ್ದ ಎನ್ನಲಾಗಿದೆ. ಈತ ಗೃಹ ಸಚಿವಾಲಯದ ಐ-ಕಾರ್ಡ್ ಹಾಕಿಕೊಂಡು ಗಂಟೆಗಟ್ಟಲೆ ಅಮಿತ್ ಶಾ ಅವರ ಸುತ್ತ ತಿರುಗಾಡಿದ್ದ. ಅನುಮಾನಗೊಂಡ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಪವಾರ್ ಅವರನ್ನು ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಆತ ನಕಲಿ ಅಧಿಕಾರಿ ಎಂಬ ವಿಷಯ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪವಾರ್‌ನನ್ನು ಬಂಧಿಸಿ,(Arrest) ಆತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ

    Live Tv
    [brid partner=56869869 player=32851 video=960834 autoplay=true]

  • ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದ್ವೆಯಾಗದಿದ್ರೆ ಆ್ಯಸಿಡ್ ಹಾಕ್ತಿನಿ- ವಿದ್ಯಾರ್ಥಿನಿಗೆ ಯುವಕನಿಂದ ಬೆದರಿಕೆ

    ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದ್ವೆಯಾಗದಿದ್ರೆ ಆ್ಯಸಿಡ್ ಹಾಕ್ತಿನಿ- ವಿದ್ಯಾರ್ಥಿನಿಗೆ ಯುವಕನಿಂದ ಬೆದರಿಕೆ

    ಭೋಪಾಲ್: ಮುಸ್ಲಿಂ(Muslim) ವ್ಯಕ್ತಿಯೊಬ್ಬ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು(Nursing Student) ಹಿಂಬಾಲಿಸಿ ಆಕೆಗೆ ಇಸ್ಲಾಂಗೆ ಮತಾಂತರಗೊಂಡು(convert) ಮದುವೆಯಾಗದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದಲ್ಲಿ(madhya pradesh) ನಡೆದಿದೆ.

    ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 22 ವರ್ಷದ ಮೋನು ಮನ್ಸೂರಿ 19 ವರ್ಷದ ವಿದ್ಯಾರ್ಥಿನಿಗೆ ಈ ರೀತಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಗ್ರಾಮದವರಾಗಿದ್ದಾರೆ. ಮನ್ಸೂರಿ ಆಕೆಯ ನಂಬರ್‍ನ್ನು ಹೇಗೋ ಪಡೆದುಕೊಂಡಿದ್ದ. ಅದಾದ ಬಳಿಕ ವಾಟ್ಸಪ್‍ನಲ್ಲಿ ಮೆಸೇಜ್ ಮಾಡಿ, ಮದುವೆ ಪ್ರಸ್ತಾಪವನ್ನು ಇಟ್ಟಿದ್ದ. ಅಷ್ಟೇ ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು. ಅದನ್ನು ನಿರಾಕರಿಸಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ಹಿಂದೂ ಸಂಘಟನೆಗಳ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದಾಳೆ.

    ದೂರಿನಲ್ಲಿ ಆಕೆ, ಮೋನು ಮನ್ಸೂರಿ ಮುಸ್ಲಿಂ ವ್ಯಕ್ತಿ. ಆತ ನಾನು ಕಾಲೇಜಿಗೆ ಹೋಗುವಾಗ ಪ್ರತಿನಿತ್ಯ ನಮ್ಮ ಊರಿನಿಂದ ನನ್ನನ್ನು ಹಿಂಬಾಲಿಸುತ್ತಿದ್ದನು. ಒಂದು ದಿನ ನನ್ನನ್ನ ಕೈಹಿಡಿದು ನನ್ನ ಮೇಲೆ ಹೂ ಎಸೆದಿದ್ದ. ಇದರಿಂದ ಭಯಗೊಂಡು ನಾನು ಕೂಗಿದ್ದೆ. ಆದರೆ ಆತ ಕೋಪಗೊಂಡು ಮದುವೆಗೆ(Marriage) ನಿರಾಕರಿಸಿದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ಮನ್ಸೂರ್ ಸಾಮಾಜಿಕ ಜಾಲತಾಣದಲ್ಲಿ ಬಂದೂಕು ಹಿಡಿದಿರುವ ಅವನ ಫೋಟೋವನ್ನು ನನಗೆ ಕಳುಹಿಸಿದ್ದನು ಎಂದು ತಿಳಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡು ಮೋನು ಮನ್ಸೂರಿಯನ್ನು ಬಂಧಿಸಿದ್ದಾರೆ(Arrest). ಇದನ್ನೂ ಓದಿ: ಉಗ್ರರಿಗೆ ಆಶ್ರಯ ನೀಡಿದ್ದ ಮದರಸಾವನ್ನು ಧ್ವಂಸಗೊಳಿಸಿದ ಮುಸ್ಲಿಮರು

    ಮನ್ಸೂರಿ ಈ ರೀತಿ ಈ ಹಿಂದೆ ಜನವರಿ ತಿಂಗಳಲ್ಲಿ ಮತ್ತೊಬ್ಬ ಮಹಿಳೆಗೆ ಬೆದರಿಕೆ ಹಾಕಿದ್ದ. ಇದಾದ ಬಳಿಕ ಮನ್ಸೂರಿಯನ್ನು ಬಂಧಿಸಲಾಗಿತ್ತು. ಆನಂತರ ಆತ ಜಾಮೀನಿಂದ ಹೊರಬಂದಿದ್ದ. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

    Live Tv
    [brid partner=56869869 player=32851 video=960834 autoplay=true]