Tag: arrest

  • ಚಲಿಸುತ್ತಿದ್ದ ರೈಲಿನಲ್ಲಿ ಮಚ್ಚು ಹಿಡಿದುಕೊಂಡು ಸಾಹಸ ಪ್ರದರ್ಶನ-  ಮೂವರು ವಿದ್ಯಾರ್ಥಿಗಳ ಬಂಧನ

    ಚಲಿಸುತ್ತಿದ್ದ ರೈಲಿನಲ್ಲಿ ಮಚ್ಚು ಹಿಡಿದುಕೊಂಡು ಸಾಹಸ ಪ್ರದರ್ಶನ- ಮೂವರು ವಿದ್ಯಾರ್ಥಿಗಳ ಬಂಧನ

    ಚೆನ್ನೈ: ಚಲಿಸುತ್ತಿದ್ದ ರೈಲಿನಲ್ಲಿ (Train) ಮೂವರು ಕಾಲೇಜು ವಿದ್ಯಾರ್ಥಿಗಳು (Student) ಮಚ್ಚಿನಂತಹ ಆಯುಧಗಳನ್ನು ಹಿಡಿದುಕೊಂಡು ಸಾಹಸ ಪ್ರದರ್ಶನ ಮಾಡಿ ವೀಡಿಯೋ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

    ಈ ಬಗ್ಗೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸರಣಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಚೆನ್ನೈನಲ್ಲಿ (Chennai) ಮೂವರು ವಿದ್ಯಾರ್ಥಿಗಳು ಚಲಿಸುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಮಚ್ಚನ್ನು ಹಿಡಿದ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಗುಮ್ಮಿಡಿಪೂಂಡಿಯ ಅನ್ಬರಸು ಮತ್ತು ರವಿಚಂದ್ರನ್ ಮತ್ತು ಪೊನ್ನೇರಿಯ ಅರುಳ್ ಎಂಬ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ (Artrst).

    ವೀಡಿಯೋದಲ್ಲಿ ಈ ಮೂವರು ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿದ್ದು, ಅವರೆಲ್ಲರೂ ಪ್ಲಾಟ್ ಫಾರ್ಮ್‌ನ ಮೇಲೆ ಲಾಂಗ್‌, ಮಚ್ಚನ್ನು ಎಳೆದುಕೊಂಡು ಕೆಲವು ಘೋಷಣೆಗಳನ್ನು ಕೂಗುತ್ತಾ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಭಯ ಹುಟ್ಟಿಸುತ್ತಿತ್ತು. ಇದನ್ನೂ ಓದಿ: 2025ರೊಳಗೆ ದೇಶದ ಎಲ್ಲ ರೈಲುಗಳಿಗೂ ಎಲೆಕ್ಟ್ರಿಕ್‌ ಇಂಜಿನ್ – ರೈಲ್ವೆ ಇಲಾಖೆ

    ಈ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಅಥವಾ ರೈಲ್ವೆ ಆವರಣದಲ್ಲಿ ಇಂತಹ ದುರ್ವರ್ತನೆ ಹಾಗೂ ಅಪಾಯಾಕಾರಿ ಸಾಹಸಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಪ್ರಯಾಣಿಕರ ಸುರಕ್ಷತೆಗಾಗಿ ನಾವು ಯಾವಾಗಲೂ ಬದ್ಧರಾಗಿದ್ದೇವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದರು. ಇದನ್ನೂ ಓದಿ: ಕನಸಲ್ಲಿ ಬರುತ್ತಿದ್ದ ವಿಗ್ರಹಗಳು ಕಣ್ಣೆದುರೇ ಪ್ರತ್ಯಕ್ಷ

    Live Tv
    [brid partner=56869869 player=32851 video=960834 autoplay=true]

  • ತಾಯಿಯ ಎದುರೇ ಬಾಲಕಿ ಮೇಲೆ ಗ್ಯಾಂಗ್ ರೇಪ್

    ತಾಯಿಯ ಎದುರೇ ಬಾಲಕಿ ಮೇಲೆ ಗ್ಯಾಂಗ್ ರೇಪ್

    ರಾಂಚಿ: ಅಪ್ರಾಪ್ತ ಬಾಲಕಿಯ ತಾಯಿಯ (Mother) ಎದುರೇ ಆಕೆಯನ್ನು ಐದು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‌ನ (Jharkhand) ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ.

    ದಮ್ಕಾ ಜಿಲ್ಲೆಯ ನಿವಾಸಿಗಳಾದ ಬಾಲಕಿ ಹಾಗೂ ಆಕೆಯ ತಾಯಿ ದಿಯೋಘರ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಮರಳಿ ಮನೆಗೆ ಬರುತ್ತಿದ್ದಾಗ ಅವರಿದ್ದಲ್ಲಿಗೆ 2 ಬೈಕ್‍ನಲ್ಲಿ (Bike) ಐವರು ಬಂದಿದ್ದಾರೆ. ಅಷ್ಟೇ ಅಲ್ಲದೇ ತಾಯಿ ಹಾಗೂ ಬಾಲಕಿಯು ಹೋಗುತ್ತಿದ್ದ ದಾರಿಯನ್ನು ತಪ್ಪಿಸಿದ್ದಾರೆ.

    jail

    ನಂತರ ಮಧುಪುರ ಪ್ರದೇಶದಲ್ಲಿ ಬಾಲಕಿಯನ್ನು ಬಲವಂತವಾಗಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಐವರು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ತಾಯಿ ಇದನ್ನು ತಡೆಯಲು ಹೋದಾಗ ಆಕೆಯನ್ನು ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಚಲಾಯಿಸಿದ ಚಾಲಕ – ಅಪಘಾತಕ್ಕೆ ನಿವೃತ್ತ ಯೋಧ ಬಲಿ

    ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ (Arrest). ಈ ಬಗ್ಗೆ ತನಿಖೆ ನಡೆಸಲು ದಿಯೋಘರ್ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಇದನ್ನೂ ಓದಿ: ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಿ- ಉಕ್ರೇನ್‌ನಲ್ಲಿನ ನಾಗರಿಕರಿಗೆ ಭಾರತ ಸಲಹೆ

    Live Tv
    [brid partner=56869869 player=32851 video=960834 autoplay=true]

  • ಕೋಲ್ಕತ್ತಾದಲ್ಲಿ ಹಿಂಸಾಚಾರ – ಬಿಜೆಪಿ ರಾಜ್ಯಾಧ್ಯಕ್ಷನ ಬಂಧನ

    ಕೋಲ್ಕತ್ತಾದಲ್ಲಿ ಹಿಂಸಾಚಾರ – ಬಿಜೆಪಿ ರಾಜ್ಯಾಧ್ಯಕ್ಷನ ಬಂಧನ

    ಕೋಲ್ಕತ್ತಾ: ನಗರದ ಮೊಮಿನ್‌ಪೋರ್ (Mominpore) ಪ್ರದೇಶದಲ್ಲಿ ಧ್ವಜ ಹಾಕುವ ವಿಚಾರವಾಗಿ ಶನಿವಾರ 2 ಸಮುದಾಯಗಳ ನಡುವೆ ಘರ್ಷಣೆ (Violence) ನಡೆದಿತ್ತು. ಕಲ್ಲು ತೂರಾಟ ನಡೆದಿದ್ದು, ಕೆಲ ಮನೆಗಳಿಗೆ ಹಾನಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು 38 ಜನರನ್ನು ಬಂಧಿಸಿದ್ದು, ಹೆಚ್ಚುವರಿಯಾಗಿ ಬಿಜೆಪಿ (BJP) ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್ (Sukanta Majumdar) ಅವರನ್ನೂ ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.

    ವರದಿಗಳ ಪ್ರಕಾರ ಪ್ರಕ್ಷುಬ್ಧ ಪ್ರದೇಶಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಮಜುಂದಾರ್ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಲು ತೆರಳಿದ್ದ ಸಂದರ್ಭ ಅವರನ್ನು ಪೊಲೀಸರು ತಡೆದು ಬಂಧಿಸಿದ್ದಾರೆ. ಇದನ್ನೂ ಓದಿ:  ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    ಬಂಧನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಜುಂದಾರ್, ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮನೆಗಳ ಮೇಲೆ ದಾಳಿ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರ ಪಾತ್ರ ಶೋಚನೀಯವಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಸ್ ಹತ್ತುವಾಗ ಬಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ- ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ

    ಬಂಗಾಳ (West Bengal) ಪೊಲೀಸರಿಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗದಿದ್ದರೆ, ರಾಜ್ಯ ಆಡಳಿತ ಕೇಂದ್ರದ ಪಡೆಗಳಿಂದ ಸಹಾಯ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಇದೀಗ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿನಿ ಪಾಕಿಸ್ತಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನ ಬಂಧನ

    ಮಿನಿ ಪಾಕಿಸ್ತಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನ ಬಂಧನ

    ಹಾಸನ: ತನ್ನ ಫೇಸ್‌ಬುಕ್‌ನ (FaceBook) ಖಾತೆಯಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಹಿ‌ನ್ನೆಲೆಯಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಈ ಘಟನೆ ನಡೆದಿದೆ. ನೇಮನ್ (20) ಬಂಧಿತ (Arrest) ಯುವಕ. ಈದ್‌ಮಿಲಾದ್ ಹಬ್ಬ ಹಿನ್ನೆಲೆಯಲ್ಲಿ ಮುಸ್ಲಿಮರು ಹೆಚ್ಚಿರುವ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ರಸ್ತೆಯುದ್ದಕ್ಕೂ ಬಣ್ಣದ ತೋರಣಗಳನ್ನು ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಪರ ಘೋಷಣೆ

    jail

    ವೆಲ್ಡಿಂಗ್ ಕೆಲಸ ಮಾಡುವ ನೇಮನ್ ಬಾಗೂರು ರಸ್ತೆ ಮಿನಿ ಪಾಕಿಸ್ತಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಾಕಿದ್ದ. ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನೇಮನ್‌ನನ್ನು ಚನ್ನರಾಯಪಟ್ಟಣ ನಗರಠಾಣೆ ಪೊಲೀಸರು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೈಜೀರಿಯಾದಲ್ಲಿ ಹಡಗು ಮುಳುಗಿ 10 ಸಾವು, 60 ಜನ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಬ್ಯಾಂಕ್ ಸಿಬ್ಬಂದಿಯಿಂದಲೇ 12 ಕೋಟಿ ದರೋಡೆ – ಗುರುತು ಮುಚ್ಚಿಡಲು ಬುರ್ಕಾ ಧರಿಸಿದ

    ಬ್ಯಾಂಕ್ ಸಿಬ್ಬಂದಿಯಿಂದಲೇ 12 ಕೋಟಿ ದರೋಡೆ – ಗುರುತು ಮುಚ್ಚಿಡಲು ಬುರ್ಕಾ ಧರಿಸಿದ

    ಮುಂಬೈ: ಥಾಣೆಯ ಮಾನ್ಪಾಡಾದ ಐಸಿಐಸಿಐ ಬ್ಯಾಂಕ್‍ನಿಂದ (ICICI Bank) 12 ಕೋಟಿ ರೂ. ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಎರಡುವರೆ ತಿಂಗಳ ನಂತರ ಪೊಲೀಸರು (Police) ಬಂಧಿಸಿದ್ದಾರೆ.

    ಮುಂಬ್ರಾದ ನಿವಾಸಿ ಅಲ್ತಾಫ್ ಶೇಖ್ (43) ಬಂಧಿತ (Arrest) ಆರೋಪಿ. ಈತ ಬ್ಯಾಂಕ್‍ನಲ್ಲಿ (Bank) ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಕಸ್ಟೋಡಿಯನ್ ಆಗಿ, ಈತ ಬ್ಯಾಂಕಿನ ಲಾಕರ್ ಕೀಗಳ ಕೇರ್‍ಟೇಕರ್ ಆಗಿದ್ದ.

    ಇದರ ಲಾಭವನ್ನು ಪಡೆದುಕೊಂಡಿದ್ದ ಅಲ್ತಾಫ್ ಶೇಖ್ ತನ್ನ ಸಹೋದರಿ ನೀಲೋಫರ್ ಸೇರಿ ಐವರೊಂದಿಗೆ ಬ್ಯಾಂಕ್‍ನಲ್ಲಿ ದರೋಡೆ ಮಾಡಲು ಒಂದು ವರ್ಷದಿಂದ ಪ್ಲ್ಯಾನ್ ಮಾಡಿಕೊಂಡಿದ್ದ. ಇದರ ಪ್ರಕಾರವಾಗಿಯೇ ಬ್ಯಾಂಕ್‍ನಲ್ಲಿದ್ದ ಲೋಪದೋಷಗಳನ್ನು ಹಾಗೂ ಎಲ್ಲಾ ವ್ಯವಸ್ಥೆಯನ್ನು ಗಮನಿಸಿದ್ದ. ಆ ಬಳಿಕ ಅಲ್ತಾಫ್ ಹಾಗೂ ಆತನ ಸಹಚರರು ಸೇರಿ ಜು.12 ರಂದು ಕಳ್ಳತನ ಮಾಡಿದ್ದರು.

    ತನ್ನ ಪ್ಲ್ಯಾನ್ ಪ್ರಕಾರದಂತೆ ಎಸಿ ಡಕ್ಟ್‍ನೊಳಗೆ ಒಳ ಹೋಗಿ ಹಾಗೂ ಸಿಸಿಟಿವಿ ಫೂಟೇಜ್ ಅನ್ನು ಧ್ವಂಸಗೊಳಿಸಿ ಹಣವನ್ನು ಕದ್ದಿದ್ದಾನೆ. ಈ ವೇಳೆ ಅಲರಾಮ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾನೆ. ಘಟನೆಗೆ ಸಂಬಂಧಿಸಿ ಮಾರನೇ ದಿನ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಘಟನೆ ಬಳಿಕ ಅಲ್ತಾಫ್ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲದೇ ತನ್ನ ಗುರುತನ್ನು ಬದಲಾಯಿಸಿಕೊಂಡು ಬುರ್ಕಾ ಹಾಕಿ ಓಡಾಡುತ್ತಿದ್ದ.

    ಅಲ್ತಾಫ್ ಸಹೋದರಿ ನೀಲೋಫರ್ ತನ್ನ ಮನೆಯಲ್ಲಿ ಸ್ವಲ್ಪ ಹಣವನ್ನು ಬಚ್ಚಿಟ್ಟಿದ್ದಳು. ಪ್ರಕರಣದಲ್ಲಿ ಆಕೆಯನ್ನು ಸಹ ಆರೋಪಿ ಎಂದು ದಾಖಲಿಸಿ ಬಂಧಿಸಲಾಗಿತ್ತು. ಈ ವೇಳೆ ದರೋಡೆಯ ಎಲ್ಲಾ ಸತ್ಯವನ್ನು ಹಾಗೂ ಅಲ್ತಾಫ್ ಎಲ್ಲಿದ್ದಾನೆ ಎನ್ನುವುದರ ಕುರಿತು ಬಾಯ್ಬಿಟ್ಟಿದ್ದಾಳೆ. ಅದಾದ ಬಳಿಕ ಆಕೆಯ ಮಾಹಿತಿಯನ್ನು ಆಧರಿಸಿ ಪುಣೆಯಲ್ಲಿ (Pune) ಅಲ್ತಾಫ್ ಶೇಖ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಬ್ಯಾಂಕ್‍ನಿಂದ ಕದ್ದ 12.20 ಕೋಟಿಯಲ್ಲಿ ಸುಮಾರು 9 ಕೋಟಿ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಂಗಿಯನ್ನು ಪ್ರೀತಿಸ್ತಿದ್ದ ಯುವಕನನ್ನು ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಕೊಲೆ ಮಾಡಿದ ಅಣ್ಣ

    ತಂಗಿಯನ್ನು ಪ್ರೀತಿಸ್ತಿದ್ದ ಯುವಕನನ್ನು ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಕೊಲೆ ಮಾಡಿದ ಅಣ್ಣ

    ಚಿಕ್ಕಬಳ್ಳಾಪುರ: ತಂಗಿಯನ್ನು (Sister) ಪ್ರೀತಿಸುತ್ತಿದ್ದ ಯುವಕನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಮಾರಕಾಸ್ತ್ರಗಳಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಹಾರೋಬಂಡೆ ಗ್ರಾಮದಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರ ಮೂಲದ ನಂದನ್ ಕೊಲೆಯಾದ ಯುವಕ. ಚಿಕ್ಕಬಳ್ಳಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 44 ಹಾರೋಬಂಡೆ ಬಳಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ನಂದನ್ ಚಿಕ್ಕಬಳ್ಳಾಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತ ದರ್ಶನ್ ತಂಗಿಯನ್ನು ಪ್ರೀತಿಸುತ್ತಿದ್ದ. ಆದರೆ ದರ್ಶನ್ ತಂಗಿಯ ತಂಟೆಗೆ ಬರದಂತೆ ಹಲವು ಸಲ ನಂದನ್‌ಗೆ ವಾರ್ನಿಂಗ್ ಮಾಡಿದ್ದ. ಇದರ ಮಧ್ಯೆ ಇನ್ಸ್‌ಸ್ಟಾಗ್ರಾಂನಲ್ಲಿ ದರ್ಶನ್‌ನ ತಂಗಿಯ ಜೊತೆಯಲ್ಲಿರುವ ಫೋಟೋ ಹಂಚಿಕೊಂಡಿದ್ದಾನೆ. ನಂದನ್ ಈ ವರ್ತನೆಗೆ ದರ್ಶನ್ ಕೆರಳಿ ಕೆಂಡವಾಗಿದ್ದ. ಇದನ್ನೂ ಓದಿ: ಕೇಜ್ರಿವಾಲ್ ಮೇಲೆ ಬಾಟಲಿ ಎಸೆದ ಕಿಡಿಗೇಡಿಗಳು

    ಪದೇ ಪದೇ ಹೇಳಿದರೂ ಬುದ್ಧಿ ಕಲಿಯದ ನಂದನ್ ಕೊಲೆಗೆ ದರ್ಶನ್ ಹಾಗೂ ಸ್ನೇಹಿತ ಆಶ್ರಯ್ ಸೇರಿ ಸ್ಕೆಚ್ ಹಾಕಿದ್ದಾರೆ. ಮದ್ಯ ಸೇವನೆ ನೆಪದಲ್ಲಿ ನಂದನ್ ಅನ್ನು ನಂಬಿಸಿದ ದರ್ಶನ್ ಹಾರೋಬಂಡೆಗೆ ಕರೆದುಕೊಂಡಿದ್ದಾನೆ. ನಂತರ ನಂದನ್‌ಗೆ ಕಂಠಪೂರ್ತಿ ಕುಡಿಸಿ ಬಳಿಕ ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ದರ್ಶನ ಹಾಗೂ ಆಶ್ರಯ್‌ನನ್ನು ಬಂಧಿಸಿದ್ದಾರೆ (Arrest). ಇದನ್ನೂ ಓದಿ: ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಸಾವು

    Live Tv
    [brid partner=56869869 player=32851 video=960834 autoplay=true]

  • XXX- ಎಕ್ಸ್ ಎಕ್ಸ್ ಎಕ್ಸ್ ವೆಬ್ ಸೀರಿಸ್ ಯೋಧರಿಗೆ ಅಪಮಾನ : ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಗೆ ಕೋರ್ಟ್ ವಾರೆಂಟ್

    XXX- ಎಕ್ಸ್ ಎಕ್ಸ್ ಎಕ್ಸ್ ವೆಬ್ ಸೀರಿಸ್ ಯೋಧರಿಗೆ ಅಪಮಾನ : ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಗೆ ಕೋರ್ಟ್ ವಾರೆಂಟ್

    ಬಾಲಿವುಡ್ ಖ್ಯಾತ ನಿರ್ಮಾಪಕಿ ಹಾಗೂ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಬಂಧನಕ್ಕೆ ಬಿಹಾರ ಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಸಮನ್ಸ್ ಜಾರಿಯಾದರೂ ಏಕ್ತಾ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾ.ವಿಕಾಸ್ ಕುಮಾರ್ ಅವರು ಬಂಧನದ ವಾರೆಂಟ್ ಜಾರಿ ಮಾಡಿದ್ದಾರೆ. ಕೇವಲ ಏಕ್ತಾ ಕಪೂರ್ ಮಾತ್ರವಲ್ಲ, ಅವರ ತಾಯಿ ಶೋಭಾ ಕಪೂರ್ (Shobha Kapoor) ಮೇಲೂ ಬಂಧನದ (Arrest) ವಾರೆಂಟ್ ಜಾರಿಯಾಗಿದೆ.

    ಏಕ್ತಾ ಕಪೂರ್ ಅವರ ಬಾಲಾಜೀ ಬ್ಯಾನರ್ ಅಡಿ ‘ಎಕ್ಸ್.ಎಕ್ಸ್.ಎಕ್ಸ್’ ವೆಬ್ ಸೀರಿಸ್ ತಯಾರಾಗಿದ್ದು, ಈ ಸರಣಿಯಲ್ಲಿ ಯೋಧರಿಗೆ ಅವಮಾನ ಮಾಡಲಾಗಿದೆ ಎಂದು ಮತ್ತು ಯೋಧರ ಕುಟುಂಬದ ಭಾವನೆಗಳಿಗೆ ಘಾಸಿ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ನಿವೃತ್ತ ಸೈನಿಕ ಶಂಭು ಕುಮಾರ್ ಅವರು ಏಕ್ತಾ ಕುಟುಂಬದ ಮೇಲೆ ದೂರು ದಾಖಲಿಸಿದ್ದರು. 2020ರಲ್ಲಿ ಬಿಹಾರದಲ್ಲಿ (Bihar) ದೂರು ದಾಖಲಾಗಿತ್ತು. ಏಕ್ತಾ ಮತ್ತು ಅವರ ತಾಯಿಗೆ ಸಮನ್ಸ್ ಕೂಡ ಜಾರಿ ಮಾಡಿದ್ದರು. ಇದನ್ನೂ ಓದಿ:ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ

    ದೂರಿನ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದರೂ, ಏಕ್ತಾ ಕೋರ್ಟಿಗೆ ಹಾಜರಾಗಿರಲಿಲ್ಲ. ಅಲ್ಲದೇ, ಸೀರಿಸ್ ಬಗ್ಗೆ ಆಕ್ಷೇಪನೆ ಮತ್ತು ವಿರೋಧದ ಹಿನ್ನೆಲೆಯಲ್ಲಿ ಕೆಲವು ದೃಶ್ಯಗಳನ್ನು ಡಿಲಿಟ್ ಕೂಡ ಮಾಡಲಾಗಿತ್ತು. ಇಷ್ಟೆಲ್ಲ ಮಾಡಿದ ನಂತರ ಸ್ಪಷ್ಟನೆ ಅಗತ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಅವರು ಬಂದಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಕೋರ್ಟ್ ಗೆ ಹಾಜರಾಗದ ಹಿನ್ನೆಯಲ್ಲಿ ವಾರೆಂಟ್ (Warrant) ಜಾರಿ ಮಾಡಲಾಗಿದೆ ಎಂದು ವಕೀಲರು ಸ್ಪಷ್ಟನೆ ನೀಡಿದ್ದಾರೆ.

    ಕಿರುತೆರೆಯ ಹೆಸರಾಂತ ನಿರ್ಮಾಪಕಿ ಹಾಗೂ ನಿರ್ದೇಶಕಿಯೂ ಆಗಿರುವ  ಏಕ್ತಾ ಕಪೂರ್, ತಮ್ಮ ಬಾಲಾಜಿ ಟೆಲಿಫಿಲ್ಮ್ಸ್ (Balaji Tele Films) ಮೂಲಕ ಸಾಕಷ್ಟು ಧಾರಾವಾಹಿಗಳನ್ನು ಮತ್ತು ವೆಬ್ ಸೀರಿಸ್ ನೀಡಿದ್ದಾರೆ. ಸಾಕಷ್ಟು ಯುವ ನಟರನ್ನು ಕಿರುತೆರೆ ಲೋಕಕ್ಕೆ ಪರಿಚಯಿಸಿದ್ದಾರೆ. ಅಲ್ಲದೇ, ಅನೇಕ ದೂರುಗಳನ್ನೂ ಅವರು ಈಗಾಗಲೇ ಎದುರಿಸಿದ್ದಾರೆ. ಈಗ ವಾರೆಂಟ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿಷ್ಠಾಪನೆಯಾಗಿದ್ದ ದುರ್ಗಾ ದೇವಿಯ ವಿಗ್ರಹ ವಿರೂಪ – ಇಬ್ಬರು ಮಹಿಳೆಯರು ಅರೆಸ್ಟ್

    ಪ್ರತಿಷ್ಠಾಪನೆಯಾಗಿದ್ದ ದುರ್ಗಾ ದೇವಿಯ ವಿಗ್ರಹ ವಿರೂಪ – ಇಬ್ಬರು ಮಹಿಳೆಯರು ಅರೆಸ್ಟ್

    ಹೈದರಾಬಾದ್: ದುರ್ಗಾ ದೇವಿಯ ವಿಗ್ರಹವನ್ನು (Goddess Durga Idol) ವಿರೂಪಗೊಳಿಸಿದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.

    ಇಬ್ಬರು ಮಹಿಳೆಯರು (Women) ನಗರದ ಖೈರತಾಬಾದ್ ಪ್ರದೇಶದ ದುರ್ಗಾ ಮಂಟಪಕ್ಕೆ ನುಗ್ಗಿದ್ದಾರೆ. ಆ ಮಹಿಳೆಯರಲ್ಲಿ ಒಬ್ಬಾಕೆ ಸ್ಪ್ಯಾನರ್‌ನಿಂದ ವಿಗ್ರಹದ ಮೇಲೆ ದಾಳಿ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆಕೆಯನ್ನು ತಡೆಯಲು ಮುಂದಾದ ಸ್ಥಳೀಯರ ಮೇಲೂ ಇಬ್ಬರು ಮಹಿಳೆಯರು ಸೇರಿ ಹಲ್ಲೆ ನಡೆಸಿದ್ದಾರೆ.

    ಘಟನೆ ವೇಳೆ ದುರ್ಗಾ ದೇವಿಯ ಪಕ್ಕದಲ್ಲಿರುವ ಸಿಂಹವನ್ನು ವಿರೂಪಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗಳಿಬ್ಬರನ್ನೂ ಸೈದನಾಬಾದ್ ಪೊಲೀಸರು ಬಂಧಿಸಲಾಗಿದೆ (Arrest). ಇದನ್ನೂ ಓದಿ: ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಘಟನೆಗೆ ಸಂಬಂಧಿಸಿ ಕೇಂದ್ರ ವಲಯದ ಡಿಸಿಪಿ ರಾಜೇಶ್ ಚಂದ್ರ ಮಾತನಾಡಿ, ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರು ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದುರ್ಗಾ ದೇವಿಯ ಮಂಟಪಕ್ಕೆ ನುಗ್ಗಿ ವಿಗ್ರಹವನ್ನು ವಿರೂಪಗೊಳಿಸಿದ್ದಾರೆ. ಈ ಕುರಿತು ಸ್ಥಳೀಯರಿಂದ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.

    ವಿಚಾರಣೆಯ ನಂತರ ಇಬ್ಬರು ಮಹಿಳೆಯರು ಮಾನಸಿಕ ಅಸ್ವಸ್ಥರಾಗಿದ್ದು, ಅವರಿಬ್ಬರಿಗೆ ನಮ್ಮ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾವು ವೈದ್ಯರ ಸಹಾಯ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರಗಿತು ಭಾರೀ ಸಂಪತ್ತು – ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಅದಾನಿ

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಗಗನಸಖಿ ಮೇಲೆ ಒಂದು ತಿಂಗಳಿಂದ ಅತ್ಯಾಚಾರ

    ಕುಡಿದ ಮತ್ತಿನಲ್ಲಿ ಗಗನಸಖಿ ಮೇಲೆ ಒಂದು ತಿಂಗಳಿಂದ ಅತ್ಯಾಚಾರ

    ನವದೆಹಲಿ: ಪರಿಚಿತನೊಬ್ಬ ಪ್ರತಿನಿತ್ಯ ಕುಡಿದು ಬಂದು ಗಗನಸಖಿ (AirHostess) ಮೇಲೆ ಆಕೆಯ ಮನೆಯಲ್ಲಿ ಅತ್ಯಾಚಾರವೆಸಗಿದ ಘಟನೆ ದಕ್ಷಿಣ ದೆಹಲಿಯ (South Delhi) ಮೆಹ್ರೌಲಿ ಪ್ರದೇಶದಲ್ಲಿ ನಡೆದಿದೆ.

    ದೆಹಲಿಯಲ್ಲಿ 30 ವರ್ಷದ ಮಹಿಳೆಯ ಮೇಲೆ ಹರ್ಜಿತ್ ಯಾದವ್ ಖಾನ್‍ಪುರ್ ಎಂಬಾತ ಕಳೆದ ಒಂದೂವರೆ ತಿಂಗಳಿಂದ ಕುಡಿದ ಸ್ಥಿತಿಯಲ್ಲಿ ಆಕೆಯ ಮನೆಗೆ ಬಂದು ಅತ್ಯಾಚಾರ ಎಸಗುತ್ತಿದ್ದನು. ಈತ ರಾಜಕೀಯ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿದ್ದಾನೆ. ಇದನ್ನೂ ಓದಿ: ರಾಜ್ಯಾದ್ಯಂತ PFI, SDPI ಕಾರ್ಯಕರ್ತರಿಗೆ ಪೊಲೀಸ್ ಶಾಕ್‌ – 40ಕ್ಕೂ ಹೆಚ್ಚು ಮಂದಿ ವಶಕ್ಕೆ

    ಘಟನೆಗೆ ಸಂಬಂಧಿಸಿ ಗಗನ ಸಖಿಯು ಹರ್ಜೀತ್ ಯಾದವ್‍ನನ್ನು ಕೊಣೆಯಲ್ಲಿ ಕೂಡಿ ಹಾಕಿ, ನಂತರ ಪೊಲೀಸರಿಗೆ ಕರೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮೆಹ್ರೌಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಗನ ಸಖಿಯನ್ನು ರಕ್ಷಿಸಿ, ಹರ್ಜೀತ್‍ನನ್ನು ಬಂಧಿಸಿದ್ದಾರೆ (Arrest). ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು

    Live Tv
    [brid partner=56869869 player=32851 video=960834 autoplay=true]

  • ಐಸಿಸ್ ಜೊತೆ ಸಂಪರ್ಕದ ಶಂಕೆ, ಮತ್ತೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು – ಗಂಗಾವತಿಯಲ್ಲಿ ಖಾಕಿ ಕಣ್ಗಾವಲು

    ಐಸಿಸ್ ಜೊತೆ ಸಂಪರ್ಕದ ಶಂಕೆ, ಮತ್ತೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು – ಗಂಗಾವತಿಯಲ್ಲಿ ಖಾಕಿ ಕಣ್ಗಾವಲು

    ಕೊಪ್ಪಳ: ಐಸಿಸ್ (ISIS) ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ಕೊಪ್ಪಳದ ಪೊಲೀಸರು (Koppal Police) ಶಂಕಿತ ಶಬ್ಬೀರ್‌ನನ್ನು (Shabbir) ವಶಕ್ಕೆ ಪಡೆದುಕೊಂಡಿದ್ದಾರೆ.

    ಶಂಕಿತ ಉಗ್ರ ಶಬ್ಬೀರ್ ಮಂಡಲಗಿರಿಯಲ್ಲಿ ಹೋಲ್‌ಸೇಲ್ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಆತನಿಗೆ ಶಿವಮೊಗ್ಗದಲ್ಲಿ (Shivamogga) ಬಂಧಿತರಾಗಿದ್ದ ಯಾಸಿನ್ ಹಾಗೂ ಮಾಝ್ ಜೊತೆಗೆ ಸಂಪರ್ಕವಿತ್ತು ಎನ್ನಲಾಗಿದೆ. ಮೊಬೈಲ್ ಕಾಲ್ ಹಾಗೂ ಡೇಟಾಗಳ ಆಧಾರದ ಮೇಲೆ ಪೊಲೀಸರು ಶಬ್ಬೀರ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ

    ಇದೀಗ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗಂಗಾವತಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರ ವಾಹನಗಳು ಸಂಚಾರ ಮಾಡುತ್ತಿದ್ದು, ಕಳೆದ ರಾತ್ರಿಯಿಂದಲೇ ಬೈಕ್ ಸವಾರರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಟೂರಿಸ್ಟ್ ಟೆಂಪೋ ಕಂದಕಕ್ಕೆ ಬಿದ್ದು 7 ವಿದ್ಯಾರ್ಥಿಗಳ ದುರ್ಮರಣ, 10 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]