ಚಿತ್ರದುರ್ಗ: ಮುರುಘಾಶ್ರೀ (Murugha shree) ವಿರುದ್ಧ ಪಿತೂರಿ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. 2ನೇ ಪೋಕ್ಸೋ ಕೇಸ್ ದೂರು ನೀಡಿದ್ದ ಮಹಿಳೆಯನ್ನೇ ಇದೀಗ ಬಂಧಿಸಲಾಗಿದೆ.
ಮುರುಘಾಶ್ರೀ ವಿರುದ್ಧ ದೂರು ನೀಡಿದ್ದ ಮಠದ ಅಡುಗೆ ಸಹಾಯಕಿಯನ್ನ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು (Police) ಬಂಧಿಸಿದ್ದಾರೆ. ಮುರುಘಾಶ್ರೀ ವಿರುದ್ಧ ಮೊದಲ ಕೇಸ್‍ನ ತನಿಖೆ ಮುಗಿಸಿರುವ ಪೊಲೀಸರು ಕೋರ್ಟ್‍ಗೆ ಚಾರ್ಜ್‍ಶೀಟ್ (Charge sheet) ಸಲ್ಲಿಸಿದ್ರು. ಇದರ ಬೆನ್ನಲ್ಲೇ ಜೈಲಲ್ಲಿರುವ ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು.
ಇತ್ತೀಚೆಗೆ ವೈರಲ್ ಆಗಿದ್ದ ಮಠದ ಶಿಕ್ಷಕ ಬಸವರಾಜೆಂದ್ರ (Basavarajendra) ಹಾಗೂ ಬಾಲಕಿಯೊಬ್ಬಳು ಮುರುಘಾ ಶ್ರೀ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಪ್ರಚೋದಿಸಿದ್ದ ಆಡಿಯೋ ಎಲ್ಲೆಡೆ ಭಾರೀ ಕೋಲಾಹಲ ಸೃಷ್ಟಿಸಿತ್ತು. ಹೀಗಾಗಿ ಆ ಆಡಿಯೋ (Audio) ಕೇಳಿದ್ದ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದರು.
ಈ ಆಡಿಯೋದಲ್ಲಿ ಮುರುಘಾ ಶ್ರೀಯನ್ನು ಖೆಡ್ಡಾಗೆ ಬೀಳಿಸಲು ಷಡ್ಯಂತ್ರ ನಡೆದಿದೆ. ಹೀಗಾಗಿ ಆಡಿಯೋ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದಿದ್ರು. ಇದೀಗ ಎರಡನೇ ಕೇಸ್ ವಿಚಾರಣೆಗೆಂದು ಮೈಸೂರಿನ ಒಡನಾಡಿ ಸಂಸ್ಥೆಯಿಂದ ಕರೆತಂದಿದ್ದ ಮಠದ ಅಡುಗೆ ಸಹಾಯಕಿಯನ್ನು ವಿಚಾರಣೆ ಬಳಿಕ ಮುರುಘಾಶ್ರೀ ವಿರುದ್ಧದ ಪಿತೂರಿ ಕೇಸ್‍ನಲ್ಲಿ ದಿಢೀರ್ ಅಂತ ಬಂಧಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕೋಲಾರ: ಕೊಟ್ಟಿದ್ದ ಪಾರಿವಾಳ (Pigeon) ವಾಪಸ್ ಕೇಳಿದ್ದಕ್ಕೆ ಚಾಕುವಿನಿಂದ ಮನಬಂದಂತೆ 7 ಜನರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು (Maluru) ಪಟ್ಟಣದ ಗಾಂಧಿ ಸರ್ಕಲ್‍ನಲ್ಲಿ ಈ ಘಟನೆ ನಡೆದಿದ್ದು, ಗಾಂಜಾ ಮತ್ತಿನಲ್ಲಿದ್ದ ಇಮ್ರಾನ್ ಖಾನ್ ಎಂಬಾತ 7 ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ರಾಮು ಮತ್ತು ಅವರ ಕುಟುಂಬಸ್ಥರ ಹಲ್ಲೆಗೊಳಗಾದವರಾಗಿದ್ದಾರೆ.
ಪಾರಿವಾಳ ವ್ಯಾಪಾರ ಮಾಡುತ್ತಿದ್ದ ರಾಮು ಬಳಿ ಇಮ್ರಾನ್ ಖಾನ್ ಪಾರಿವಾಳ ತೆಗೆದುಕೊಂಡಿದ್ದ. ಪಾರಿವಾಳ ವಾಪಸ್ ನೀಡುವಂತೆ ರಾಮು ಕೇಳಿದ್ದಾನೆ. ಇದರಿಂದಾಗಿ ರೊಚ್ಚಿಗೆದ್ದ ಇಮ್ರಾನ್ ಗಾಂಜಾ ಮತ್ತಿನಲ್ಲಿ ಕಳೆದ ರಾತ್ರಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಹೋದ ರಾಮು ಸಹೋದರ ನಾಗರಾಜ್, 3 ಜನ ಮಹಿಳೆಯರಿಗೆ ಚಾಕು ಹಾಕಲಾಗಿದೆ. ಸದ್ಯ ಇಮ್ರಾನ್ ಪೊಲೀಸರು ಬಂಧಿಸಿದ್ದು, ಗಾಯಾಳುಗಳು ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ರಾಮು ಸಹೋದರ ನಾಗರಾಜ್‍ಗೆ ಗಂಭೀರ ಗಾಯಗಳಾಗಿದ್ದು, ಮುಖ, ಕೈ-ಕಾಲು ಹಾಗೂ ಎದೆ ಭಾಗಕ್ಕೆ ಚಾಕು ಇರಿತವಾಗಿದೆ. ಘಟನೆಯಲ್ಲಿ ರಾಮು ಅಣ್ಣ ನಾಗರಾಜ್ ಸೇರಿದಂತೆ ಮೂವರು ಮಹಿಳೆಯರಾದ ರಾಜೇಶ್ವರಿ, ನಾಗವೇಣಿ ಹಾಗೂ ಚಂದ್ರಕಲಾ ಎಂಬುವವರಿಗೆ ಗಾಯಗಳಾಗಿವೆ. ಇದನ್ನೂ ಓದಿ: ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುತ್ತಲೇ ಮಗ ಹೃದಯಾಘಾತದಿಂದ ಸಾವು
ಸರ್ಕಾರಿ ಆಸ್ಪತ್ರೆಗೆ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಭೇಟಿ ನೀಡಿ ಹಲ್ಲೆಗೊಳಗಾದ ಕುಟುಂಬದ ಆರೋಗ ವಿಚಾರಿಸಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಒತ್ತಾಯ ಮಾಡಿದ್ದಾರೆ. ಇನ್ನೂ ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ:ಜಿ20 ಲೋಗೋದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ: ಕಾಂಗ್ರೆಸ್ ಕಿಡಿ
Live Tv
[brid partner=56869869 player=32851 video=960834 autoplay=true]
ಬಾಗಲಕೋಟೆ: ಕುಡಿಯುವ ವೇಳೆ ತಾಯಿಯನ್ನು (Mother) ನಿಂದಿಸಿದ್ದಕ್ಕೆ ಜೈಲಿನಿಂದಲೇ ಬಿಡುಗಡೆಯಾಗಿ ಬಂದಿದ್ದ ಸ್ನೇಹಿತರಿಂದಲೇ (Friends) ವ್ಯಕ್ತಿಯ ಕೊಲೆಯಾದ ಘಟನೆ ಬಾಗಲಕೋಟೆ (Bagalakote) ಜಿಲ್ಲೆಯ ಇಳಕಲ್‍ನಲ್ಲಿ ನಡೆದಿದೆ.
ವೀರೇಶ್ ಕರ್ನೂಲ್ (29) ಮೃತ ಯುವಕ (Young Man). ಅ. 27ರಂದು ಇಳಕಲ್ ಸಮೀಪದ ಇಂಗಳಗಿ ಗ್ರಾಮದ ಪೂಜಾರಿ ಎಂಬುವರ ಹೊಲದಲ್ಲಿ ವೀರೇಶ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಈ ವೇಳೆ ವೀರೇಶ್ ಜೈಲಿನಿಂದ (Jail) ಬಂದಿದ್ದ ತನ್ನ ಸ್ನೇಹಿತರಾದ ಅವಿನಾಶ್ ಸಜ್ಜನ್, ಸಂಜು ಹುಲ್ಲೂರು ಕುಳಿತು ಪಾರ್ಟಿ ಮಾಡಿರುವ ವಿಷಯ ತಿಳಿದಿದೆ. ಈ ವೇಳೆ ಅವಿನಾಶ್ ತಾಯಿಗೆ ವೀರೇಶ್ ನಿಂದಿಸಿದ್ದ. ಇದರಿಂದ ಕೋಪಗೊಂಡ ಅವಿನಾಶ್ ವಾಗ್ವಾದ ನಡೆಸಿದ್ದಾನೆ. ನಂತರ ಇದು ಅತಿರೇಕಕ್ಕೆ ಹೋಗಿ ಕುಡಿದ ಮತ್ತಲ್ಲಿ ವೀರೇಶ್‍ನನ್ನು ಅವಿನಾಶ್ ಹಾಗೂ ಸಂಜು ಸೇರಿ ಕೊಲೆ ಮಾಡಿದ್ದಾರೆ. ಅದಾದ ಬಳಿಕ ಮೂವರು ನಾಪತ್ತೆ ಆಗಿ, ಊರನ್ನೇ ಬಿಟ್ಟು ಹೋಗಿದ್ದರು. ಇದನ್ನೂ ಓದಿ: ಕುಡಿತ ಬಿಡು ಎಂದಿದ್ದಕ್ಕೆ ಮನೆಯನ್ನೇ ತೊರೆದಿದ್ದ – ಆಧಾರ್‌ಗಾಗಿ 24 ವರ್ಷಗಳ ಬಳಿಕ ವಾಪಸ್ ಬಂದ
ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ (arrest). ಜೊತೆಗೆ ಕೊಲೆಗೆ ಸಹಕರಿಸಿದ ಹಿನ್ನೆಲೆಯಲ್ಲಿ ಬಸವರಾಜ ಚಿಮ್ಮಲಗಿಯನ್ನು ಬಂಧಿಸಲಾಗಿದೆ. ಅವಿನಾಶ್ ಹಾಗೂ ಸಂಜು ಹಲ್ಲೂರು ಈ ಹಿಂದೆ ಕೊಲೆ ಕೇಸಲ್ಲಿ ವಿಜಯಪುರ ಜೈಲು ಸೇರಿದ್ದರು. ಜೈಲಲ್ಲಿದ್ದಾಗ ಸ್ನೇಹಿತರಾಗಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದರು. ಈಗ ಪುನಃ ಕೊಲೆ ಮಾಡಿ ದುಷ್ಕರ್ಮಿಗಳು ಜೈಲು ಸೇರಿದ್ದಾರೆ. ಇದನ್ನೂ ಓದಿ: ವಾಮಾಚಾರದ ಆರೋಪ – ನೆರೆಹೊರೆಯವರಿಂದಲೇ ಮಹಿಳೆ ಸಜೀವ ದಹನ
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ಹಾಡಹಗಲೇ ಒಂಟಿ ಮಹಿಳೆ (Woman) ಮೇಲೆ ಯುವಕರು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.
ಹಳೇ ಹುಬ್ಬಳ್ಳಿಯ ಉದ್ಯಮ ನಗರದ ಬಳಿ ಈ ಘಟನೆ ನಡೆದಿದ್ದು, ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಉಲ್ಪಥ್ ಅಲಿಯಾಸ್ ನಾಮ್, ಮಲಿಕ್ ಹಾಗೂ ಮುಬಾರಕ್ ಅಲಿಯಾಸ್ ಟುಬೋ ಎಂಬ ಮೂವರನ್ನು ಕಸಬಾಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಕ್ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಒಬ್ಬರು ಮಧ್ಯಾಹ್ನ ಊಟಕ್ಕೆ ಬಂದು ವಾಪಸ್ ಹೋಗುತ್ತಿದ್ದರು. ಈ ವೇಳೆ ಮಹಿಳೆಯನ್ನು ಬಾಯಿ ಮುಚ್ಚಿ ಎಳೆದೊಯ್ದು ಯುವಕರ ತಂಡ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದನ್ನೂ ಓದಿ: ಗೋಮಾಂಸ ಮಾರಾಟ ಮಾಡ್ತಿದ್ದ ಇಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ – ವೀಡಿಯೋ ವೈರಲ್
ಈ ವೇಳೆ ಮಹಿಳೆ ಚಿರಾಟ ನಡೆಸಿದ್ದಾಳೆ. ಈ ಸದ್ದು ಕೇಳಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಸ್ಥಳಕ್ಕೆ ಓಡಿ ಬರುತ್ತಲೇ ಮೂವರು ಯುವಕರು ಪರಾರಿಯಾಗಿದ್ದಾರೆ. ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಸಂಬಂಧಿಕರು ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಕೇವಲ ಮೂರು ಗಂಟೆಯಲ್ಲಿ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ. ಸದ್ಯ ಮಹಿಳೆಗೆ ಕಿಮ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ – ಪತಿ ಸಾವಿನ ಸುದ್ದಿ ಕೇಳಿ ಪತ್ನಿಗೆ ಹೃದಯಾಘಾತ
Live Tv
[brid partner=56869869 player=32851 video=960834 autoplay=true]
ಮುಂಬೈ: ಎಮ್ಮೆ ಕರುವಿನ (Buffalo Calf) ಮೇಲೆ ಅತ್ಯಾಚಾರ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು (Man) ಬಂಧಿಸಿದ (Arrest) ಘಟನೆ ಮಹಾರಾಷ್ಟ್ರದ (Maharashtra) ಪುಣೆಯ ಡೆಕ್ಕನ್ ಪ್ರದೇಶದಲ್ಲಿ ನಡೆದಿದೆ.
ನೇಪಾಳ ಮೂಲದ ಆರೋಪಿಯನ್ನು ಸಾಸೂನ್ (38) ಬಂಧಿತ ವ್ಯಕ್ತಿ. ಕೊಟ್ಟಿಗೆಯೊಳಗೆ ಎಮ್ಮೆ ಕರುವಿನ ಮೇಲೆ ಸಾಸೂನ್ ಅತ್ಯಾಚಾರವೆಸಗುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನಿಗೆ ಪ್ರಜ್ಞೆ ತಪ್ಪುವವರೆಗೂ ಥಳಿಸಿದ್ದಾರೆ. ಅದಾದ ಬಳಿಕ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಬ್ಬರು ಮಕ್ಕಳೊಂದಿಗೆ ಚೆಕ್‍ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಹಾಲಿನ ಪ್ಯಾಕೆಟ್‌ಗೆ ಹಣ ನೀಡದ ವಿಚಾರದಲ್ಲಿ ಗ್ರಾಹಕ (Customer) ಹಾಗೂ ಹಾಲಿನ ಅಂಗಡಿ ಮಾಲೀಕನ ನಡುವೆ ಗಲಾಟೆ ನಡೆದು, ಗ್ರಾಹಕನ ಮೇಲೆ ಹಾಲಿನ ಅಂಗಡಿ ಮಾಲೀಕ ಹಾಗೂ ಆತನ ಸಂಬಂಧಿಕರು ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯಲ್ಲಿ (Bagepalli) ನಡೆದಿದೆ.
ಬಾಗೇಪಲ್ಲಿ ನಗರದ ಎರಡನೇ ವಾರ್ಡ್ ನಿವಾಸಿ ನರಸಿಂಹಮೂರ್ತಿ ಎಂಬಾತ ಹಲ್ಲೆಗೊಳಗಾದ ಗ್ರಾಹಕ. ನರಸಿಂಹ ಮೂರ್ತಿ , ಶಿವರಾಜ್ ಎಂಬಾತನ ಅಂಗಡಿಗೆ ಬಂದಿದ್ದ. ಈ ವೇಳೆ ಹಾಲಿನ ಪ್ಯಾಕೆಟ್ ಖರೀದಿ ಮಾಡುವಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಂಗಡಿ ಮಾಲೀಕ (Shop Owner) ಶಿವರಾಜ್ ತಕ್ಷಣ ತನ್ನ ಸಂಬಂಧಿಕರನ್ನು ಕರೆಸಿದ್ದಾನೆ. ಅದಾದ ಬಳಿಕ ಅವರೆಲ್ಲರೂ ಸೇರಿ ಗ್ರಾಹಕ ನರಸಿಂಹಮೂರ್ತಿ ಮೇಲೆ ಮನಸ್ಸೋ ಇಚ್ಚೆ ಬಾಸುಂಡೆಗಳು ಬರುವ ಹಾಗೆ ಬಾರಿಸಿದ್ದಾರೆ. ಇದನ್ನೂ ಓದಿ: ಕೊಯಮತ್ತೂರು ಸಿಲಿಂಡರ್ ಸ್ಫೋಟ ಕೇಸ್ – ತನಿಖೆ ವಹಿಸಿಕೊಂಡ NIA
ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ನರಸಿಂಹಮೂರ್ತಿ ಪತ್ನಿ ನಂದಿನಿ ದೂರು ದಾಖಲಿಸಿದ್ದಾರೆ. ಅಲ್ಲಿನ ಪೊಲೀಸರು ಹಾಲಿನ ಅಂಗಡಿ ಮಾಲೀಕ ಶಿವರಾಜ್ ಹಾಗೂ ಸಂಬಂಧಿಕರಾದ ಆನಂದ್, ಕಮಲಕಾರರೆಡ್ಡಿ, ಗೋಪಾಲರೆಡ್ಡಿ, ಸುನೀಲ್, ಲೋಕೇಶ್ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ:ಶಿಕ್ಷಣ ಇಲಾಖೆ ಎಡವಟ್ಟು – ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಆಹ್ವಾನಿತರಾಗಿ ದಿ.ಆನಂದ್ ಮಾಮನಿ ಹೆಸರು
Live Tv
[brid partner=56869869 player=32851 video=960834 autoplay=true]
ಚಿಕ್ಕೋಡಿ: ಕಳೆದ ನಾಲ್ಕು ದಿನಗಳ ಹಿಂದೆ ವೃದ್ಧೆಯನ್ನು (OldWoman) ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಪ್ರತಿಭಟನೆ (Protest) ನಡೆಸಿದರು.
ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದಲ್ಲಿ ಬೇವನೂರು ಗ್ರಾಮದ ಫುಲಾಭಾಯಿ ಲಕ್ಷ್ಮಣ ಯಮಗಾರ(65)ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಬಾಯಿಗೆ ಬಟ್ಟೆ ಹಾಕಿ ಕಿರುಚದಂತೆ ಮಾಡಿ ಕೊಲೆ ಮಾಡಿ ಮೈಮೇಲಿದ್ದ ಆಭರಣಗಳನ್ನು ದೋಚಿ ಗುಂಪೊಂದು ಪರಾರಿಯಾಗಿತ್ತು.
ಸದ್ಯ ಅಥಣಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಸಂಘರ್ಷ ಕಾಂಬಳೆ ಎಂಬಾತನನ್ನು ಬಂಧಿಸಿದ್ದಾರೆ. ಸಂಘರ್ಷ ಕಾಂಬಳೆ ಬಂಧನವಾಗುತ್ತಿದ್ದಂತೆ ಬೇವನೂರು ಗ್ರಾಮದ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಇದನ್ನೂ ಓದಿ: ಆಕಸ್ಮಿಕ ಅಗ್ನಿ ಅವಘಡ – 700 ಮಳಿಗೆಗಳು ಭಸ್ಮ
ವೃದ್ಧೆಯನ್ನು ಕೇವಲ ಬಂಗಾರ ದೋಚುವ ಸಲುವಾಗಿ ಕೊಲೆ ಮಾಡಿಲ್ಲ. ಬದಲಾಗಿ ಅದೊಂದು ಅತ್ಯಾಚಾರ ಅಂತ ಗ್ರಾಮದ ಮಹಿಳೆಯರು ಆರೋಪ ಮಾಡುತ್ತಿದ್ದಾರೆ. ಇನ್ನು ವೃದ್ಧೆಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಅತ್ಯಾಚಾರ ಆಗಿದೆಯೋ ಇಲ್ಲವೋ ಎಂದು ಗೊತ್ತಾಗಲಿದೆ.
ತಿರುವನಂತಪುರಂ: ಕೆಲಸ (Job) ಬಿಡಲು ನಿರಾಕರಿಸಿದ ಪತ್ನಿಯನ್ನು(Wife) ಪತಿಯೇ ಕ್ರೂರವಾಗಿ ಥಳಿಸಿದ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ ನಡೆದಿದೆ.
ತಿರುವನಂತಪುರಂ ಮೂಲದ ದಿಲೀಪ್ (27) ಬಂಧಿತ (Arrest) ವ್ಯಕ್ತಿ. ಈತನ ಪತ್ನಿ ಸೂಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ದಿಲೀಪ್‍ಗೆ ಆಕೆ ಅಲ್ಲಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಇದರಿಂದಾಗಿ ಆತ ಪತ್ನಿಗೆ ಕೆಲಸವನ್ನು ಬಿಡಲು ತಿಳಿಸಿದ್ದಾನೆ. ಆದರೆ ಆಕೆ ಒಪ್ಪದಿದ್ದಾಗ ಕ್ರೂರವಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ದಿಲೀಪ್ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ವೀಡಿಯೋದಲ್ಲಿ ದಿಲೀಪ್ ಪತ್ನಿ ಸಾಲ ತೀರಿಸಲು ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಾಳೆ. ಆದರೆ ದಿಲೀಪ್ ಅದನ್ನು ಅರ್ಥ ಮಾಡಿಕೊಳ್ಳದೆ ಪತ್ನಿಯನ್ನು ಕ್ರೂರವಾಗಿ ಥಳಿಸಿದ್ದಾನೆ. ಇದರಿಂದಾಗಿ ಪತ್ನಿಯ ಮುಖವೆಲ್ಲವೂ ರಕ್ತ ಸಿಕ್ತವಾಗಿದೆ. ಇದನ್ನೂ ಓದಿ:ಇಎಂಐಯಲ್ಲಿ ಸ್ಮಾರ್ಟ್ ಫೋನ್ ಕೊಡಿಸಿದ ಪತಿ- ವಿಷಯ ತಿಳಿದ ಪತ್ನಿ ಆತ್ಮಹತ್ಯೆ
ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟಿ ದಿವ್ಯಾ ಶ್ರೀಧರ್ (Divya Sridhar) ಅವರ ಪತಿ ಅಮ್ಜಾದ್ ಖಾನ್ (Amjad Khan) ಅವರನ್ನು ತಮಿಳು ನಾಡು ಪೊಲೀಸರು ಬಂಧಿಸಿದ್ದಾರೆ (Arrest). ತನಗೆ ಸುಳ್ಳು ಹೇಳಿ ಮದುವೆ ಆಗಿದ್ದಾನೆ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಲವ್ ಜಿಹಾದ್ ಆರೋಪವನ್ನೂ ಪತಿಯ ಮೇಲೆ ಹೊರೆಸಿ, ದಿವ್ಯಾ ದೂರು ನೀಡಿದ್ದರು. ಈ ದೂರಿನಲ್ಲಿ ಪತಿಯು ತಮ್ಮ ಮೇಲೆ ಮಾಡಿದ ಹಲ್ಲೆಯಿಂದಾಗಿ ಗರ್ಭಪಾತದ ಭಯವೂ ಕಾಡುತ್ತಿದೆ ಎಂದು ಉಲ್ಲೇಖಿಸಿದ್ದರು. ಈ ದೂರಿನ ಅನ್ವಯ ಅಮ್ಜಾದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮೊನ್ನೆಯಷ್ಟೇ ಆಸ್ಪತ್ರೆಯಿಂದ ಸೀದಾ ಪತಿ ಅಮ್ಜಾದ್ ಖಾನ್ ಮನೆಗೆ ಹೋಗಿರುವ ದಿವ್ಯಾ ಶ್ರೀಧರ್, ತನಗೆ ಈ ರೀತಿ ಯಾಕೆ ಮೋಸ ಮಾಡಿದೆ ಎಂದು ಪ್ರಶ್ನಿಸಿದ್ದರು. ಪತಿ ಜೊತೆ ಜೋರು ಮಾತಿಗೆ ನಿಂತಿದ್ದರು. ದಿವ್ಯಾ ಶ್ರೀಧರ್ ಕೂಗಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಅಮ್ಜಾದ್ ಖಾನ್ ಅದನ್ನು ಮಾಧ್ಯಮಗಳಿಗೆ ನೀಡಿದ್ದರು ಇದನ್ನೂ ಓದಿ:`ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ
ಮಾಧ್ಯಮಗಳ ಜೊತೆ ಹಂಚಿಕೊಂಡಿರುವ ವಿಡಿಯೋದಲ್ಲಿ ‘ನೀನು ಯಾಕೆ ನನಗೆ ಮೋಸ ಮಾಡಿ ಮದುವೆಯಾದೆ. ಸುಳ್ಳು ಯಾಕೆ ಹೇಳಬೇಕಿತ್ತು’ ಎಂದು ದಿವ್ಯಾ ಕೇಳುತ್ತಾರೆ. ‘ಮೋಸ ಮಾಡಿದ್ದು ನಾನಲ್ಲ, ನೀನು. ನೀನೇ ನನ್ನನ್ನು ಪ್ರೀತಿಸಿ ಮದುವೆ ಆಗಿದ್ದು. ನಾನು ಮೋಸ ಮಾಡಿಲ್ಲ. ನೀನೇ ನನಗೆ ಮೋಸ ಮಾಡುತ್ತಿರುವದು’ ಎಂದು ಅಮ್ಜಾದ್ ಖಾನ್ ಹೇಳುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರು ಮೋಸದ ಆರೋಪ ಮಾಡುತ್ತಾರೆ. ಈ ವಿಡಿಯೋ ವೈರಲ್ ಆಗಿತ್ತು.
ದಿವ್ಯಾ ಶ್ರೀಧರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಹಿಳಾ ಆಯೋಗ ಕೂಡ ಪ್ರವೇಶ ಮಾಡಿತ್ತು. ಕರ್ನಾಟಕದ ನಟಿ ದಿವ್ಯಾ ಶ್ರೀಧರ್ ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿ, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದರು.
ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿಯಲ್ಲಿ ಮಾತನಾಡುವುದರ ಜೊತೆಗೆ ಲಿಖಿತ ರೂಪದಲ್ಲೂ ಆಯೋಗಕ್ಕೆ ಪತ್ರ ಬರೆದು, ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರಂತೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿಯು ಹೊಟ್ಟೆಗೆ ಒದ್ದಿರುವ ಕುರಿತು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಸ್ಯಾಂಡಲ್ ವುಡ್ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ದಿವ್ಯಾ ಶ್ರೀಧರ್, ಆನಂತರ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಸಿನಿಮಾ ರಂಗದಲ್ಲಿ ಅಷ್ಟೇನೂ ಮಿಂಚದೇ ಇದ್ದರೂ, ಆಕಾಶ ದೀಪ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು. ಈ ಧಾರಾವಾಹಿಯ ಯಶಸ್ಸು ಅವರನ್ನು ತಮಿಳು ಕಿರುತೆರೆ ಜಗತ್ತಿಗೂ ಕಾಲಿಡುವಂತೆ ಮಾಡಿತು. ತಮಿಳು ಧಾರಾವಾಹಿಯಲ್ಲೂ ದಿವ್ಯಾ ಸಾಕಷ್ಟು ಹೆಸರು ಮಾಡಿದರು.
ತಮಿಳು ಧಾರಾವಾಹಿಯ ಸಂದರ್ಭದಲ್ಲೇ ನಟ ಅನರ್ವ್ ಅಲಿಯಾಸ್ ಅಮ್ಜದ್ ಖಾನ್ ಜೊತೆ ಸ್ನೇಹ ಬೆಳೆದು, ಅದು ಪ್ರೀತಿಗೂ ತಿರುಗಿ ನಂತರ ಮದುವೆಯಾಗಿದ್ದಾರೆ. ದಿವ್ಯಾ ಪ್ರಗ್ನೆಂಟ್ ಎಂದು ತಿಳಿಯುತ್ತಿದ್ದಂತೆಯೇ ಪತಿ ಅವರಿಂದ ದೂರವಾಗುವುದಕ್ಕೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ ದಿವ್ಯಾ. ಅಲ್ಲದೇ, ತಮಗೆ ಪತಿಯಿಂದ ದೈಹಿಕ ಹಿಂಸೆ ಸೇರಿದಂತೆ ಹಲವು ಆರೋಪಗಳನ್ನು ದಿವ್ಯಾ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೈಸೂರು: ಅರಣ್ಯ ಇಲಾಖೆ (Forest Department) ವಶದಲ್ಲಿದ್ದ ಜಿಂಕೆ (Deer) ಮಾಂಸ ಮಾರಾಟ ಆರೋಪಿ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಎಚ್.ಡಿ. ಕೋಟೆಯಲ್ಲಿ ನಡೆದಿದೆ.
ತಾಲೂಕಿನ ಹೊಸಹಳ್ಳಿ ಹಾಡಿಯ ಕರಿಯಪ್ಪ ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಜಿಂಕೆ ಮಾಂಸ ಮಾರಾಟ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು. ಬಸಪುರದ ಪ್ರಸಾದ್, ಮುನಿಯಪ್ಪನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಮಹಾಕುಂಭ ಮೇಳ
ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಕರಿಯಪ್ಪನನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ಮಾಡುವ ವೇಳೆ ಕರಿಯಪ್ಪ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಇದು ಕೊಲೆ ಎಂದು ಆರೋಪಿ ಕರಿಯಪ್ಪ ಪೋಷಕರು ಆರೋಪಿದ್ದಾರೆ. ವಿಚಾರಣೆ ನೆಪದಲ್ಲಿ ಗುಂಡ್ರೆ ಅರಣ್ಯ ವಲಯದ ಅರಣ್ಯ ಸಿಬ್ಬಂದಿ ಕರಿಯಪ್ಪನನ್ನು ಹೊಡೆದು ಸಾಯಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: 2 ಗಂಟೆ ಆತ್ಮಹತ್ಯೆ ಹೈಡ್ರಾಮಾ – ಸಿನಿಮಾ ರೀತಿಯಲ್ಲಿ ದಂಪತಿಯ ರಕ್ಷಣೆ
Live Tv
[brid partner=56869869 player=32851 video=960834 autoplay=true]