Tag: arrest

  • ಗೋರಕ್ಷಕರ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

    ಗೋರಕ್ಷಕರ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಫೇಸ್‍ಬುಕ್‍ನಲ್ಲಿ ಕೋಮು ಸಾಮರಸ್ಯ ಕದಡುವಂತ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದ ಶಿಕಾರಿಪುರ ತಾಲೂಕಿನ ಮತ್ತಿಕೋಟೆಯ ರಹೀಮ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

     

    ಕಳೆದ ವಾರ ಶಿರಾಳಕೊಪ್ಪದಲ್ಲಿ ಗೋವುಗಳ ಸಾಗಾಣಿಕೆ ತಡೆದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆಯಾಗಿತ್ತು. ಇದರಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಇಂಥ ಸಂದರ್ಭದಲ್ಲಿ ರಹೀಮ್ ತನ್ನ ಎಫ್‍ಬಿಯಲ್ಲಿ `ಕರ್ನಾಟಕದ ಶಿರಾಳಕೊಪ್ಪದಲ್ಲಿ ಗೋರಕ್ಷಕರನ್ನು ರುಬ್ಬಿದ ಜನ. ಯಾವತ್ತೋ ಆಗಬೇಕಿತ್ತು ಈ ಕೆಲ್ಸ’ ಎಂದು ಪೋಸ್ಟ್ ಹಾಕಿದ್ದ. ಇದಕ್ಕೆ ಫೇಸ್ ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

    ಇದನ್ನು ಖಂಡಿಸಿ ಹಾಗೂ ಕ್ರಮಕ್ಕೆ ಆಗ್ರಹಿಸಿ ಶಿರಾಳಕೊಪ್ಪದಲ್ಲಿ ಸಂಘ ಪರಿವಾರದಿಂದ ಬೈಕ್ ಜಾಥಾವನ್ನೂ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ರಹೀಮ್‍ನನ್ನು ಬಂಧಿಸಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಫೇಸ್‍ಬುಕ್‍ನಲ್ಲಿ ಪರಿಚಯ, ಸೆಕ್ಸ್, ನಂತ್ರ ವಧುದಕ್ಷಿಣೆ ಹಣದೊಂದಿಗೆ ಎಸ್ಕೇಪ್- 11 ಜನರನ್ನ ಮದ್ವೆಯಾಗಿದ್ದವಳು ಅರೆಸ್ಟ್

    ಥೈಲ್ಯಾಂಡ್: 11 ಜನರನ್ನು ಮದುವೆಯಾಗಿ ಯಾಮಾರಿಸಿ ಅವರ ಹಣದೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು, 32 ವರ್ಷದ ಜರಿಯಪೋರ್ನ್ ನುಯಾಯ್ ಬಂಧಿತ ಮಹಿಳೆಯಾಗಿದ್ದಾಳೆ. ಈಕೆಯನ್ನು ಸೆ.7ರಂದು ಥಾಯ್ಲೆಂಡ್ ಪೊಲೀಸರು ನಖೋನ್ ಪಾಥೊಮ್ ಪ್ರಾಂತ್ಯದ ಸ್ಯಾಮ್ ಫ್ರಾನ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಥೈಲ್ಯಾಂಡ್ ಸಂಪ್ರದಾಯದ ಪ್ರಕಾರ ವಿವಾಹವಾಗುವ ಪ್ರತಿ ಪುರುಷ ಭಾವಿ ಪತ್ನಿಗೆ ವಧುದಕ್ಷಿಣೆ ನೀಡುವ ಸಂಪ್ರದಾಯವಿದೆ. ಈಕೆ ಪ್ರತಿ ಪುರುಷನಿಂದ ಸುಮಾರು 6,000ದಿಂದ 30,000 ಡಾಲರ್ (38 ಸಾವಿರದಿಂದ- 1.9 ಲಕ್ಷ ರೂ.) ವಧುದಕ್ಷಿಣೆ ಪಡೆದು ಪರಾರಿಯಾಗಿದ್ದಳು.

    ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಆ ಪುರುಷನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಾಳೆ. ಆ ನಂತ್ರ ಆತನನ್ನು ಮದುವೆಯಾಗುತ್ತಾಳೆ. ಆ ಬಳಿಕ ವಧು ದಕ್ಷಿಣೆಯೊಂದಿಗೆ ಅಲ್ಲಿಂದ ಕಾಲ್ಕೀಳುತ್ತಾಳೆ.

    ಈಕೆಯ ಚಾಣಾಕ್ಷತನ ಎಷ್ಟಿದೆ ಅಂದ್ರೆ ಅಗಸ್ಟ್ ಒಂದೇ ತಿಂಗಳಿನಲ್ಲಿ ಈಕೆ ನಾಲ್ವರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ಈಕೆ 11 ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರು ಇಲ್ಲಿನ ಸ್ಥಳೀಯ ಪತ್ರಿಕೆ ತಿಳಿಸಿದ್ದಾರೆ. ಇದೇ ರೀತಿ ಮೋಸ ಹೋದ ವ್ಯಕ್ತಿಯೊಬ್ಬರು ಈಕೆಯ ಬಗ್ಗೆ ಎಚ್ಚರವಾಗಿರಿ ಎಂದು ಫೇಸ್‍ಬುಕ್ ಪೋಸ್ಟ್ ಹಾಕುವವರೆಗೆ ಮೋಸ ಹೋದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಪೋಸ್ಟ್ ನೋಡಿದ ನಂತರ ಪೊಲೀಸರ ಬಳಿ ಹೋಗಿ ಹೇಗೆ ಮೋಸ ಹೋದ್ರು ಅನ್ನೋದನ್ನ ಹೇಳಿಕೊಂಡಿದ್ದಾರೆ.

    ಕಳೆದ ಎರಡು ವರ್ಷದಿಂದ ಈಕೆಯ ವಿರುದ್ಧ 4 ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು.

    ಸದ್ಯ ಮೋಸಗಾರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿ ಕಿಮಿನಲ್ ಕೋಡ್‍ನ ಸೆಕ್ಷನ್ 342 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣು

    ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣು

    ಬೆಂಗಳೂರು: ಶಿವಾಜಿನಗರ ರೌಡಿ ಶೀಟರ್ ನಾಸಿರ್ ಅಲಿಯಾಸ್ ಚೋಟನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಡಿ.ಕೆ ಹಳ್ಳಿ ಪೊಲೀಸರಿಗೆ ಶರಣಾಗಿದ್ದಾರೆ.

    ಶಾಕಿರ್, ಅಮ್ಜದ್, ಸೇರಿ ನಾಲ್ವರು ಪೊಲೀರ ಮುಂದೆ ಶರಣಾಗಿದ್ದು, ಇದೀಗ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಶ್ಯಾಂಪುರ ಬಳಿ ಸೆಪ್ಟೆಂಬರ್ 7 ರಂದು ಚೋಟನ್ ಮೇಲೆ ಹಲ್ಲೆ ನಡೆದಿತ್ತು. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡ ಚೋಟನ್ ನನ್ನು ನಿಮಾನ್ಸ್ ಗೆ ದಾಖಲಿಸಲಾಗಿತ್ತು.

    ಈ ಕುರಿತು ಡಿ.ಜೆ ಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದು, ಇದೀಗ ಆರೋಪಿಗಳೇ ಶರಣಾಗುವ ಮೂಲಕ ಬಂಧನವಾಗಿದ್ದಾರೆ, ಸದ್ಯ ಪೊಲೀಸರು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.

  • ಗಲಾಟೆ ವೇಳೆ ಗರ್ಭಿಣಿಯ ಹೊಟ್ಟೆಗೆ ಕಲ್ಲುಬಿದ್ದು ಗರ್ಭಪಾತ!

    ಗಲಾಟೆ ವೇಳೆ ಗರ್ಭಿಣಿಯ ಹೊಟ್ಟೆಗೆ ಕಲ್ಲುಬಿದ್ದು ಗರ್ಭಪಾತ!

    ಚಿತ್ರದುರ್ಗ: ಹಳೆ ದ್ವೇಷ ವೈಷಮ್ಯ ಹಿನ್ನಲೆಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹೊರವಲಯದ ಬಬ್ಬೂರು ಬೋವಿ ಕಾಲೋನಿಯಲ್ಲಿ ನಡೆದಿದೆ.

    ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಎರಡು ಕಾರುಗಳ ಗಾಜು ಜಖಂ ಆಗಿದೆ. ಗಲಾಟೆಯನ್ನು ನೋಡಲು ಬಂದ ಮಹಿಳೆಯ ಮೇಲೆ ಅಕಸ್ಮಾತ್ ಆಗಿ ಕಲ್ಲು ಬಂದು ಬಿದಿದ್ದು, ಘಟನೆಯಲ್ಲಿ ಹೊಟ್ಟೆಯಲ್ಲಿದ್ದ ಎರಡು ತಿಂಗಳ ಭ್ರೂಣ ಹತ್ಯೆಯಾಗಿ ಗರ್ಭಪಾತವಾಗಿದೆ.

    ಗುಂಪು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಮಣಿ, ಮಂಜುನಾಥ್, ಹರೀಶ್ ನನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

     

  • 9 ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿ ಹೊರ ಹಾಕಿದ ಮನೆ ಮಾಲೀಕನ ಮಗ!

    9 ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿ ಹೊರ ಹಾಕಿದ ಮನೆ ಮಾಲೀಕನ ಮಗ!

    ಬೆಂಗಳೂರು: ಲೀಸ್ ಗಿದ್ದವರ ಮನೆಗೆ ನುಗ್ಗಿ ಮನೆ ಮಾಲೀಕನ ಮಗ ಗರ್ಭಿಣಿ ಮೇಲೆ ಹಲ್ಲೆ ಮಾಡಿ ನಂತ್ರ ಮನೆ ಸಾಮಾನುಗಳನ್ನು ಹೊರಹಾಕಿದ ಘಟನೆಯೊಂದು ನಗರದಲ್ಲಿ ನಡೆದಿದೆ.

    ಈ ಘಟನೆ ಹೊಸಕೆರೆಹಳ್ಳಿಯ ಬಿಡಿಎ ಲೇಔಟ್ ನಲ್ಲಿ ಭಾನುವಾರ ನಡೆದಿದೆ. ಘಟನೆ ಸಂಬಂಧ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ, ಕೆಂಚಯ್ಯ, ಭವಾನಿ, ಚಲುವಯ್ಯ ಹಾಗೂ ಅನ್ನ ಪೂರ್ಣ ಇವರುಗಳನ್ನು ಬಂಧಿಸಿದ್ದಾರೆ.

    ಏನಿದು ಘಟನೆ?: ರವೀಶ್ ತನ್ನ ಪತ್ನಿ ಹಾಗೂ ಅಜ್ಜಿಯೊಂದಿಗೆ ಬಿಡಿಎ ಲೇ ಔಟ್ ನಲ್ಲಿ 10 ಲಕ್ಷ ರೂ. ಲೀಸ್ ಗೆ ಮನೆ ಪಡೆದಿದ್ದರು. ನಿನ್ನೆ 9 ತಿಂಗಳ ಗರ್ಭಿಣಿ ಲಕ್ಷ್ಮೀ ಹಾಗೂ ಆಕೆಯ ಅಜ್ಜಿ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ್ ತನ್ನ ಗ್ಯಾಂಗ್ ನೊಂದಿಗೆ ಮನೆಗೆ ನುಗ್ಗಿ ಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ ಮನೆಯ ಸಾಮಾನುಗಳನ್ನೆಲ್ಲಾ ಹೊರ ಹಾಕುವ ಮೂಲಕ ಗೂಂಡಾಗಿರಿ ಮೆರೆದಿದ್ದಾನೆ.

    ಹಲ್ಲೆಯಿಂದಾಗಿ ಲಕ್ಷ್ಮೀ ಮಾನಸಿಕವಾಗಿ ಕುಗ್ಗಿದ್ದು, ಗರ್ಭದಲ್ಲಿರೋ ಮಗುವಿನ ಹಾರ್ಟ್ ಬೀಟ್ ಕಡಿಮೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ಯಾನಿಂಗ್ ಮಾಡೋ ತನಕ ಏನನ್ನೂ ಹೇಳೋಕೆ ಆಗಲ್ಲ ಅಂತ ವೈದ್ಯರು ತಿಳಿಸಿದ್ದಾರೆ.

    ಘಟನೆ ಸಂಬಂಧ ರವೀಶ್ ಹಾಗೂ ಅವರ ಪತ್ನಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಐವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರೋ ಮನೆ ಮಾಲೀಕ ಬಸವೇಗೌಡನ ಪತ್ತೆಗೆ ಬಲೆ ಬೀಸಿದ್ದಾರೆ.

     

  • ಅಮ್ಮ, ಅಣ್ಣನ ಎದುರೇ 11ರ ಬಾಲಕಿಯ ಮೇಲೆ ಗ್ಯಾಂಗ್ ರೇಪ್!

    ಅಮ್ಮ, ಅಣ್ಣನ ಎದುರೇ 11ರ ಬಾಲಕಿಯ ಮೇಲೆ ಗ್ಯಾಂಗ್ ರೇಪ್!

    ಭೋಪಾಲ್: ತನ್ನ ಅಮ್ಮ ಹಾಗೂ ಅಪ್ರಾಪ್ತ ಸಹೋದರನ ಎದುರೇ 11 ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರವೆಸಗಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳಾದ ಜನ್ವರ್ ಸಿಂಗ್ ಕುಶ್ವಾಹ(36), ರಾಜು ಕುಶ್ವಾಹ(25) ಹಾಗೂ ರಾಮ್ನಿವಾಸ್ ಕುಶ್ವಾಹ(24)ನನ್ನು ಬಂಧಿಸಿದ್ದಾರೆ.

    ಕಳೆದ ಬುಧವಾರ ಬಾಲಕಿ ತನ್ನ ಅಮ್ಮ ಹಾಗೂ ಸಹೋದರನೊಂದಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೂವರು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ತಾಯಿ ಹಾಗೂ 14 ವರ್ಷದ ಮಗನನ್ನು ಶೂಟ್ ಮಾಡುವುದಾಗಿ ಬೆದರಿಸಿದ್ದಾರೆ. ಮತ್ತೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಅಂತ ಗ್ವಾಲಿಯರ್ ಬಿಜೋಳಿ ಠಾಣೆಯ ಉಸ್ತುವಾರಿ ರಘುವೇರ್ ಮೀನಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರೋ ಪೊಲೀಸರು ತನಿಖೆ ನಡೆಸಿದ್ದಾರೆ. ಐಪಿಸಿ ಸೆಕ್ಷನ್ 376 ಡಿ, 450, 506, 34 ಹಾಗೂ ಪೋಕ್ಸೋ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನೇಪಾಳದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಆರೋಪಿ ಅರೆಸ್ಟ್

    ನೇಪಾಳದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಆರೋಪಿ ಅರೆಸ್ಟ್

    ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿ ಮಾಡಿದ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದೇರಳಕಟ್ಟೆಯ ನಿವಾಸಿಯಾದ ನೇಪಾಳ ಮೂಲದ 22 ವರ್ಷದ ಕುಮ್ಮ ಬಹದುರ್ ಸಿಂಗ್ ತೊಕ್ಕೊಟ್ಟಿನಲ್ಲಿ ಫಾಸ್ಟ್‍ಫುಡ್ ಮಾಡುತ್ತಿದ್ದ. ಕುಮ್ಮ ಆರು ತಿಂಗಳಿನಿಂದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗಿದೆ.

    ದೇರಳಕಟ್ಟೆಯ ಬಾಡಿಗೆ ಮನೆಯಲ್ಲಿ ನೇಪಾಳ ಮೂಲದ ಮೂರು ಕುಟುಂಬಗಳು ವಾಸವಾಗಿದ್ದರು. ಸಂತ್ರಸ್ತ ಬಾಲಕಿ ತನ್ನ ತಂದೆ-ತಾಯಿ ಜೊತೆ ವಾಸಿಸುತ್ತಿದ್ದಳು. ಆರೋಪಿ ಕುಮ್ಮಸಿಂಗ್ ಮತ್ತು ಅತನ ಸಹೋದರ ಕೂಡ ಅದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಆರೋಪಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ. ಇದರಿಂದ ಬಾಲಕಿ ಗರ್ಭವತಿಯಾಗಿದ್ದಾಳೆ. ಆಕೆ ಗರ್ಭಿಣಿ ಅಂತ ತಿಳಿದ ತಕ್ಷಣ ಆರೋಪಿ ಪರಾರಿಯಾಗಿದ್ದ.

    ಬಾಲಕಿಯ ಪೋಷಕರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಕೊಣಾಜೆ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.

     

  • ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿ

    ಮಡಿಕೇರಿ: ಮೂರು ತಿಂಗಳ ಹಿಂದೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಂಡಂಗೇರಿ ಗ್ರಾಮಕ್ಕೆ ಆಗಮಿಸಿದ ಡೋಂಗಿ ಬಾಬಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಡೋಂಗಿ ಬಾಬಾ ಇಕ್ಬಾಲ್ ಬಾಬಾ ಎಂದು ತನ್ನನ್ನು ಪರಿಚಯ ಮಾಡಿಕೊಂಡು ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದ್ದ. ಕತ್ತಲು ಕವಿದ ಅಮಾಯಕರ ಬಾಳಿನಲ್ಲಿ ಬೆಳಕು ಚೆಲ್ಲುತ್ತೇನೆಂದು ಬೊಗಳೆ ಬಿಡುತ್ತಾ ಕತ್ತಲ ಕೋಣೆಯೊಂದರಲ್ಲಿ ಕುಳಿತು ಮಂತ್ರ ಮತ್ತು ಮೈ ಸವರುವ ತಂತ್ರ ಶುರುವಚ್ಚಿಕೊಂಡಿದ್ದ. ಮಹಿಳಾ ಗಿರಾಕಿಗಳೇ ಹೆಚ್ಚಾಗಿರುವ ಬಾಬಾ ತನ್ನ ಕತ್ತಲ ಕೋಣೆಯಲ್ಲಿ ಬೆತ್ತಲಾಗುತ್ತಿದ್ದಾನೆ ಎಂಬುವುದನ್ನರಿತ ಕೊಂಡಂಗೇರಿ ನಿವಾಸಿಗಳು, ಆತನ ಅರಮನೆ ಒಳಹೊಕ್ಕಾಗ ಬಾಬಾನ ಬೆತ್ತಲೆ ರಹಸ್ಯ ಬಯಲಾಗಿದೆ. ಬಳಿಕ ಬಾಬಾನನ್ನು ಹಿಡಿದು ಹಿಗ್ಗಾ-ಮುಗ್ಗಾ ಥಳಿಸಿದ ಗ್ರಾಮಸ್ಥರು ಆತನನ್ನು ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಮ್ಮ ದೇಶದಲ್ಲಿ ಮೂಢ ನಂಬಿಕೆಗಳ ಬೇರು ಗಟ್ಟಿ ಇರುವವರೆಗೂ ಬಾಬಾ ರಾಮ-ರಹೀಮರಂತಹ ಕಾಮುಕ ಮರಗಳು ಬೃಹದಾಕಾರವಾಗಿ ಬೆಳೆಯುತ್ತಿರುತ್ತವೆ. ಆದ್ದರಿಂದ ಇಂತಹ ಬಾಬಾರನ್ನು ಮೊಳಕೆಯಲ್ಲಿಯೇ ಚಿವುಟಬೇಕಾದ ಅನಿವಾರ್ಯತೆ ಇದೆ. ಅದನ್ನು ಮಾಡಿಸಬೇಕು ಅಂತ ಕೊಂಡಂಗೇರಿ ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಸ್ಯಾಮ್‍ ಸಂಗ್ ಗ್ರೂಪ್ ಮುಖ್ಯಸ್ಥನಿಗೆ 5 ವರ್ಷ ಜೈಲು ಶಿಕ್ಷೆ!

    ಸ್ಯಾಮ್‍ ಸಂಗ್ ಗ್ರೂಪ್ ಮುಖ್ಯಸ್ಥನಿಗೆ 5 ವರ್ಷ ಜೈಲು ಶಿಕ್ಷೆ!

    ಸಿಯೋಲ್: ಲಂಚ ಪ್ರಕರಣದಲ್ಲಿ ಸಿಲುಕಿದ್ದ ಜನಪ್ರಿಯ ಮೊಬೈಲ್ ಕಂಪನಿ ಸ್ಯಾಮ್‍ಸಂಗ್ ಗ್ರೂಪ್‍ನ ಮುಖ್ಯಸ್ಥ ಜೇ ವೈಲಿ ಅವರಿಗೆ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

    ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೈಗೆ 40 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಡಿ ಫೆಬ್ರವರಿ ತಿಂಗಳಲ್ಲಿ ಲೀ ಬಂಧಿತರಾಗಿದ್ದರು. ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಜೇ ವೈಲೀ ಅವರು ತಪ್ಪಿತಸ್ಥರು ಎಂದು ಹೇಳಿರುವ ನ್ಯಾಯಾಲಯ ಹೇಳಿದೆ.

    49 ವರ್ಷದ ಜೈ ವೈ ಲೀಯನ್ನು ಕೈಕೋಳದೊಂದಿಗೆ ಜಸ್ಟೀಸ್ ಮಿನಿಸ್ಟ್ರಿ ಬಸ್ ನಲ್ಲಿ ಸಿಯೋಲ್ ಸೆಂಟ್ರಲ್ ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ಜೇ ವೈ ಲೀ ಅವರು ತಾವು ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ವಾದಿಸಿದ್ದರು. ಇನ್ನು ಕೆಲ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಲೀ ಪರ ವಕೀಲ ಸಾಂಗ್ ವು ಚೆಯೇಲ್ ಹೇಳಿದ್ದಾರೆ.

     

  • ಮೈಸೂರಿನಲ್ಲಿ ಯುವತಿಯನ್ನು ಮುಂದೆಬಿಟ್ಟು ಹನಿಟ್ರ್ಯಾಪ್ ನಡೆಸುತ್ತಿದ್ದ ಐವರ ಬಂಧನ

    ಮೈಸೂರಿನಲ್ಲಿ ಯುವತಿಯನ್ನು ಮುಂದೆಬಿಟ್ಟು ಹನಿಟ್ರ್ಯಾಪ್ ನಡೆಸುತ್ತಿದ್ದ ಐವರ ಬಂಧನ

    ಮೈಸೂರು: ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾದ ಮೈಸೂರಿನಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಈ ಸಂಬಂಧ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ರಸ್ತೆಯಲ್ಲಿ ಯುವತಿಯನ್ನ ಮುಂದೆಬಿಟ್ಟು ದರೋಡೆ ಮಾಡುತ್ತಿದ್ದ ಮಧುಸೂದನ್, ಚೇತನ್, ಹೇಮಂತ್, ಗಿರೀಶ್, ವಿನೋದ್ ಎಂಬವರ ಬಂಧನವಾಗಿದೆ.

    8 ಮಂದಿ ತಂಡ ಕಟ್ಟಿಕೊಂಡು ಮೈಸೂರು ನಂಜನಗೂಡು ರಸ್ತೆಯಲ್ಲಿ ಶ್ರೀಮಂತ ವ್ಯಕ್ತಿಗಳ ಕಾರಿಗೆ ಕೈತೊರಿ ನಿಲ್ಲಿಸಿ ದರೊಡೆಗೆ ಸಂಚು ಹಾಕುತ್ತಿದ್ದರು. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಕಂಡ ಇಬ್ಬರು ಯುವಕರು ಹಾಗೂ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಬಂಧಿತರು ಶ್ರೀಮಂತರನ್ನೆ ಟಾರ್ಗೆಟ್ ಮಾಡುತ್ತಿದ್ದರು ಎಂಬುವುದಾಗಿ ತಿಳೀದುಬಂದಿದೆ. ಮಾಲಾ ಎಂಬ ಯುವತಿಯನ್ನ ಶ್ರೀಮಂತರೊಂದಿಗೆ ಕಳುಹಿಸಿ ನಂತರ ಆ ವ್ಯಕ್ತಿಗಳ ಮೇಲೆ ತಂಡ ದಾಳಿ ಮಾಡುತ್ತಿತ್ತು. ಸದ್ಯ ಬಂಧಿತರಿಂದ 2 ಕಾರು, ಖಾರದಪುಡಿ, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

    ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.