Tag: arrest

  • ವಿಜಯಪುರದಲ್ಲಿ ಪಿಸ್ತೂಲ್ ಮಾರಾಟಗಾರರು ಅರೆಸ್ಟ್: ಎಷ್ಟು ಪಿಸ್ತೂಲ್ ಸಿಕ್ಕಿದೆ?

    ವಿಜಯಪುರದಲ್ಲಿ ಪಿಸ್ತೂಲ್ ಮಾರಾಟಗಾರರು ಅರೆಸ್ಟ್: ಎಷ್ಟು ಪಿಸ್ತೂಲ್ ಸಿಕ್ಕಿದೆ?

    ವಿಜಯಪುರ: ಮೂರು ಜಿಲ್ಲೆಯಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ 12 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 20 ನಾಡ ಪಿಸ್ತೂಲು ಮತ್ತು 49 ಮದ್ದುಗುಂಡುಗಳನ್ನು ವಿಜಯಪುರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಪ್ರಾಥಮಿಕ ವಿಚಾರಣೆ ವೇಳೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಸರಬರಾಜಿನ ಕಿಂಗ್ ಪಿನ್ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬಚ್ಚನ್ ಸಿಂಗ್ ಹಾಗೂ ತನ್‍ಮನ್ ಸಿಂಗ್ ಎಂದು ಹೇಳಿದ್ದಾರೆ. ಹಾಗೂ ಆರೋಪಿಗಳು ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ನಾವು ಅಕ್ರಮವಾಗಿ ಪಿಸ್ತೂಲ್ ಗಳನ್ನು ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    12 ಮಂದಿಯ ವಿರುದ್ಧ 9 ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರ ಕಿಂಗ್ ಪಿನ್ ಆಗಿರುವ ಮಧ್ಯ ಪ್ರದೇಶದ ಇಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದು ಆದಷ್ಟು ಬೇಗ, ಸೆರೆ ಹಿಡಿಯುವುದಾಗಿ ಉತ್ತರ ವಲಯ ಐಜಿಪಿ ಡಾ ಕೆ ರಾಮಚಂದ್ರರಾವ್ ತಿಳಿಸಿದರು.

    ಪೊಲೀಸರಿಗೆ ಬಹುಮಾನ: ಅಕ್ರಮ ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ಜಿಲ್ಲಾ ಪೊಲೀಸರಿಗೆ 1 ಲಕ್ಷ ಬಹುಮಾನವನ್ನು ಐಜಿಪಿ ಘೋಷಿಸಿದ್ದಾರೆ. ವಿಜಯಪುರದಲ್ಲಿ ಅಕ್ರಮ ಪಿಸ್ತೂಲು ಮಾರಾಟ ದಂಧೆ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  • ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ-8 ವರ್ಷಗಳ ಬಳಿಕ ರೇಪಿಸ್ಟ್ ಅಪ್ಪ ಅರೆಸ್ಟ್!

    ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ-8 ವರ್ಷಗಳ ಬಳಿಕ ರೇಪಿಸ್ಟ್ ಅಪ್ಪ ಅರೆಸ್ಟ್!

    ಹೈದರಾಬಾದ್: ಎಂಟು ವರ್ಷಗಳ ಹಿಂದೆ 52 ವರ್ಷದ ತಂದೆ ತನ್ನ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಕಾಮುಕ ಅಪ್ಪ ಪುಂಜಗುಟ್ಟ ಪೊಲೀಸರ ಅಥಿತಿಯಾಗಿದ್ದಾನೆ.

    ಆರೋಪಿಯನ್ನು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬಿಎಸ್ ಮಖ್ತಾದಲ್ಲಿ ನೆಲೆಸಿದ್ದು, ನಾಮ್‍ಪಲ್ಲಿಯಲ್ಲಿ ಡಿಟಿಪಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಪೋಲಿಸರು ತಿಳಿಸಿದರು.

    8 ವರ್ಷಗಳ ಹಿಂದೆ ನಡೆದಿದ್ದೇನು?
    ತಾಯಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಕಾಮುಕ ಅಪ್ಪ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ನಂತರ ತಾಯಿಗೆ ವಿಚಾರ ತಿಳಿಸಿದ್ದಾರೆ. ಆದರೆ ತಾಯಿ ಯಾರಿಗೂ ಹೇಳಬೇಡ ಎಂದು ಭಾಷೆ ತೆಗೆದುಕೊಂಡಿದ್ದಳು. ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಮತ್ತೆ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆ ತಂದೆಯ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಯುವತಿ ಕೊನೆಗೆ ಮನೆ ಬಿಟ್ಟು ಹೋಗಿದ್ದರು. ಒಂದು ಖಾಸಗಿ ಹಾಸ್ಟೆಲ್‍ನಲ್ಲಿ ಉಳಿದುಕೊಂಡು, ಖಾಸಗಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

    ಎಂಡು ವರ್ಷದ ಬಳಿಕ ಸಂತ್ರಸ್ತೆ ಪೋಷಕರನ್ನು ಭೇಟಿ ಮಾಡಲು ಮತ್ತೆ ಮನೆಗೆ ಬಂದಿದ್ದಾರೆ. ಆದರೆ ಕಾಮುಕ ಅಪ್ಪ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಯತ್ನಿಸಿದ್ದು, ಕೊನೆಗೆ ಸಂತ್ರಸ್ತೆ ಕಾಮುಕ ಅಪ್ಪನ ವಿರುದ್ಧ ದೂರು ದಾಖಲಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪುಂಜಗುಟ್ಟ ಠಾಣೆಯ ಇನ್ಸ್ ಪೆಕ್ಟರ್ ಎಸ್. ರವೀಂದರ್ ತಿಳಿಸಿದ್ದಾರೆ.

  • ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸ್ತೀನೆಂದು 5 ಕೋಟಿ ರೂ. ಗುಳುಂ ಮಾಡಿದ್ದ ವಂಚಕ ಅರೆಸ್ಟ್

    ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸ್ತೀನೆಂದು 5 ಕೋಟಿ ರೂ. ಗುಳುಂ ಮಾಡಿದ್ದ ವಂಚಕ ಅರೆಸ್ಟ್

    ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳನ್ನು ನಂಬಿಸಿ ವಂಚಿಸುತ್ತಿದ್ದ ಖದೀಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ರಾಜ್ಯಾದ್ಯಂತ ನೂರಾರು ಮಂದಿ ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ರೈಲ್ವೆ ಇಲಾಖೆಯ ಮಾಜಿ ಉದ್ಯೋಗಿ ಪಿ. ವಿಲ್ಸನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ರಾಜ್ಯಾದ್ಯಂತ ನೂರಾರು ಮಂದಿ ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಎನ್ನಲಾಗಿದೆ.

    ರಾಜ್ಯದಲ್ಲಿ ವಂಚನೆ ನಡೆಸಿ ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ ವಂಚಕನನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ. ಬಾಡಿ ವಾರೆಂಟ್ ಮೇರೆಗೆ ದಾವಣಗೆರೆ ಪೊಲೀಸರು ಮೈಸೂರಿನ ಲಕ್ಷ್ಮೀಪುರಂ ಠಾಣೆ ಪೊಲೀಸರಿಗೆ ವಂಚಕನನ್ನು ಒಪ್ಪಿಸಿದ್ದಾರೆ. ಬೆಂಗಳೂರು ರೈಲ್ವೆ ಡಿವಿಷನ್ ನಲ್ಲಿ ಕಚೇರಿ ಸೂಪರಿಂಟೆಂಡೆಂಟ್ ಆಗಿದ್ದ ವಿಲ್ಸನ್, ಜನರಲ್ ಮ್ಯಾನೇಜರ್ ಕೋಟಾದಲ್ಲಿ ನೇರ ನೇಮಕಾತಿ ಮಾಡಿಸುತ್ತೇನೆಂದು ನಂಬಿಸಿ ನಿರುದ್ಯೋಗಿಗಳಿಂದ ಸುಮಾರು ಐದು ಕೋಟಿ ರೂಪಾಯಿ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ.

    ರಾಜ್ಯಾದ್ಯಂತ 25ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ರೈಲ್ವೆ ಅಧಿಕಾರಿಗಳ ನಕಲಿ ಸಹಿ, ಸೀಲು ಬಳಸಿ ನೇಮಕಾತಿ ಆದೇಶ ಪ್ರತಿಗಳನ್ನು ಈ ಖತರ್ನಾಕ್ ವಂಚಕ ನೀಡಿದ್ದ ಎಂದು ತಿಳಿದುಬಂದಿದೆ.

  • ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ: ಕಾಮುಕರು ವಶ

    ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ: ಕಾಮುಕರು ವಶ

    ಮಂಡ್ಯ: ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ, ಗಂಗಾಧರನಗರದಲ್ಲಿ ನಡೆದಿದೆ.

    ಮಂಜ ಮತ್ತು ಕುಮಾರ ಎಂಬವರೇ ಬಂಧಿತ ಆರೋಪಿಗಳು. ಇವರಿಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು, ಬಾಲಕಿಯನ್ನು ಸಮೀಪದ ಡಣನಾಯಕನ ಬೆಟ್ಟದ ಬಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು, ಇಬ್ಬರನ್ನು ಹಿಡಿದು ಧರ್ಮದೇಟು ನೀಡಿ ಮರಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಬೆಳ್ಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

     

  • ಜನ್ರಿಗೆ ಲಾಂಗು, ಮಚ್ಚು ತೋರಿಸಿ ದರೋಡೆ: ತಿಕ್ಲನ ಗ್ಯಾಂಗಿನ ಐವರು ಅರೆಸ್ಟ್

    ಜನ್ರಿಗೆ ಲಾಂಗು, ಮಚ್ಚು ತೋರಿಸಿ ದರೋಡೆ: ತಿಕ್ಲನ ಗ್ಯಾಂಗಿನ ಐವರು ಅರೆಸ್ಟ್

    ನೆಲಮಂಗಲ: ಹೆದ್ದಾರಿಗಳಲ್ಲಿ ಹಾಗೂ ರೈಲುಗಳಲ್ಲಿ ಸಂಚರಿಸುವ ಮಂದಿಗೆ ಲಾಂಗು, ಮಚ್ಚು ತೋರಿಸಿ ದರೋಡೆ ಮಾಡುತ್ತಿದ್ದ ಐದು ಮಂದಿ ದರೋಡೆಕೋರರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬುಧವಾರ ತಡರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಭಿ, ಕೀರ್ತಿರಾಜು, ಮನೋಜ್, ಅಶ್ರಫ್ ಅಲಿ ಹಾಗೂ ಕಾರ್ತಿಕ್ ಗೌಡ ಬಂಧಿತ ಆರೋಪಿಗಳು. ಈ ಐದು ಮಂದಿ ದರೋಡೆಕೋರರು ತಿಕ್ಲನ ಗ್ಯಾಂಗ್‍ನಲ್ಲಿ ಗುರುತಿಸಿಕೊಂಡಿದ್ದವರು ಎಂದು ಹೇಳಲಾಗಿದೆ.

    ಬಂಧಿತ ದರೋಡೆಕೋರರ ಪೈಕಿ ತನ್ನ ಬೈಕಿನಲ್ಲಿ ‘ನನ್ ನೋಡಿ ಯಾರು ಉರ್ಕೋಬೇಡಿ, ತಾಕತ್ ಇದ್ರೆ ತಡಿರಿ’, ಹೀಗೆ ಬೈಕ್ ನಲ್ಲಿ ಹಾಕೊಂಡು ಜನರಿಗೆ ಹಾಗೂ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ. ಈ ಐದು ಮಂದಿ ಹೆದ್ದಾರಿ ಹಾಗೂ ರೈಲುಗಳಲ್ಲಿ ಲಾಂಗು ಮಚ್ಚು ತೋರಿಸಿ ದರೋಡೆ ಮಾಡುತ್ತಿದ್ದರು. ಸದ್ಯ ಗ್ಯಾಂಗ್ ಲೀಡರ್ ಅಭಿ ಅಲಿಯಾಸ್ ತಿಕ್ಲ ನಾಪತ್ತೆಯಾಗಿದ್ದಾನೆ.

    ಈ ದರೋಡೆಕೋರರು ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತುಮಕೂರು ಹೆದ್ದಾರಿ ಕೆಂಗೇರಿ ರೈಲ್ವೆ ನಿಲ್ದಾಣಗಳಲ್ಲಿ ದರೋಡೆ ಮಾಡುತಿದ್ದರು. ಹಾಗಾಗಿ ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಸಿಂಗಮ್ ಮಂಜುನಾಥ್ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತರಿಂದ 2 ಬೈಕ್, 4 ಮೊಬೈಲ್ ಹಾಗೂ ಮಾರಕಾಸ್ತ್ರಗಳು ವಶಕ್ಕೆ ಪಡೆದು ಹೆಚ್ವಿನ ವಿಚಾರಣೆ ನಡೆಸುತಿದ್ದಾರೆ.

  • ಪ್ರೇಮಿಗಳ ಮಿಲನದ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್: ಕೊನೆಗೆ ಯುವತಿ ಮೇಲೆ ಗ್ಯಾಂಗ್ ರೇಪ್

    ಪ್ರೇಮಿಗಳ ಮಿಲನದ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್: ಕೊನೆಗೆ ಯುವತಿ ಮೇಲೆ ಗ್ಯಾಂಗ್ ರೇಪ್

    ಬೆಂಗಳೂರು: ಪ್ರೇಮಿಗಳು ಏಕಾಂತದಲ್ಲಿದ್ದಾಗ ಅದನ್ನು ಚಿತ್ರೀಕರಣ ಮಾಡಿ ನಂತರ ಪೋಷಕರಿಗೆ ನೀಡುವುದಾಗಿ ಬೆದರಿಕೆ ಒಡ್ಡಿ 5 ಜನ ಕಾಮುಕರು ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ದಾರುಣ ಘಟನೆ ಆನೇಕಲ್‍ನ ಕಕ್ಕಮಲ್ಲೇಶ್ವರ ಬೆಟ್ಟದಲ್ಲಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳು ಆನೇಕಲ್‍ನ ಗೌರೇನಹಳ್ಳಿ ನಿವಾಸಿಗಳಾಗಿದ್ದು, ಮುರುಗೇಶ್, ರಮೇಶ್, ವಿಕಾಸ್ ಮತ್ತು ರಾಜು ಎಂದು ಗುರುತಿಸಲಾಗಿದೆ.

    ಯಲ್ಲರಾಜು 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಒಂದು ದಿನ ಇವರಿಬ್ಬರು ಕಕ್ಕಮಲ್ಲೇಶ್ವರ ಬೆಟ್ಟಕ್ಕೆ ಹೋಗಿದ್ದರು. ಇಬ್ಬರು ಮಿಲನದಲ್ಲಿದ್ದಾಗ ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದರು.

    ನಂತರ ಹುಡುಗಿಗೆ ಬ್ಲಾಕ್ ಮೇಲ್ ಮಾಡಿ ನಮ್ಮೊಂದಿಗೂ ಮಿಲನವಾದರೇ ಈ ವಿಷಯವನ್ನು ಮುಚ್ಚಿಡುತ್ತೇವೆ. ಇಲ್ಲವಾದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿ ಯುವತಿಯನ್ನು ಬೆಟ್ಟಕ್ಕೆ ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

    ಆರೋಪಿಗಳು ನಿತಂತರವಾಗಿ ಬೆದರಿಕೆ ಒಡ್ಡಿ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ. ಈಗ ಯುವತಿ 6 ತಿಂಗಳ ಗರ್ಭಿಣಿಯಾಗಿರುವ ವಿಚಾರ ಮನೆಯವರಿಗೆ ತಿಳಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೋಷಕರು ಆನೇಕಲ್ ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

    ಪೊಲೀಸರು ಆರೋಪಿಗಳ ಜೊತೆಗೆ ಈ ವಿಚಾರವನ್ನು ಮುಚ್ಚಿಟ್ಟದ್ದಕ್ಕೆ ಯುವತಿಯ ಪ್ರೇಮಿ ಯಲ್ಲರಾಜುನನ್ನು ಬಂಧಿಸಿದ್ದಾರೆ.

     

  • ಗಿಫ್ಟ್ ನೀಡ್ತಿನಿ ಅಂತಾ ಕರೆದು 6 ವರ್ಷದ ಬಾಲಕಿಯನ್ನು ರೇಪ್‍ಗೈದು, ಕಲ್ಲು ಎತ್ತಿ ಹಾಕಿ ಕೊಲೆಗೈದ!

    ಗಿಫ್ಟ್ ನೀಡ್ತಿನಿ ಅಂತಾ ಕರೆದು 6 ವರ್ಷದ ಬಾಲಕಿಯನ್ನು ರೇಪ್‍ಗೈದು, ಕಲ್ಲು ಎತ್ತಿ ಹಾಕಿ ಕೊಲೆಗೈದ!

    ಭೋಪಾಲ್: 6 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಕುಂಡಮ್ ಗ್ರಾಮದಲ್ಲಿ ನಡೆದಿದೆ.

    ಅಪ್ರಾಪ್ತೆಯ ಕುಟುಂಬದವರು, ನಮ್ಮ ನೆರೆ ಮನೆಯ ಹುಡುಗ ಉಡುಗೊರೆ ಕೊಡುವುದಾಗಿ ಮನೆಗೆ ಕರೆದುಕೊಂಡು ಹೋಗಿ ಈ ಕೃತ್ಯ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮಾಡಿ ಆರೋಪಿ ಸುಶಿಲ್ ನನ್ನು ಬಂಧಿಸಿದ್ದಾರೆ.

    ನಾನೇ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಯಾರಿಗೂ ತಿಳಿಯಬಾರದು ಎಂದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದೆ ಎಂದು ಆರೋಪಿ ಸುಶಿಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

    ಕುಟುಂಬಸ್ಥರು ಮತ್ತು ನೆರೆಹೊರೆಯವರು ಈ ಕೃತ್ಯದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಯ ಮುಂದೆ ಕುಳಿತು ಆರೋಪಿಗೆ ಗಲ್ಲುಶಿಕ್ಷೆ ಕೊಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

  • ಗ್ಯಾಂಗ್‍ರೇಪ್ ಎಸಗಿ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ರು!

    ಗ್ಯಾಂಗ್‍ರೇಪ್ ಎಸಗಿ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ರು!

    ಅಲಹಾಬಾದ್: ಮಹಿಳೆಯ ಮೇಲೆ ಇಬ್ಬರೂ ಸೇರಿ ಅತ್ಯಾಚಾರ ಎಸಗಿ ಬಳಿಕ ಆಕೆಯ ಗುಪ್ತಾಂಗಕ್ಕೆ ಆಸಿಡ್ ಎರಚಿರುವ ಅಮಾನೀಯ ಘಟನೆ ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಘೋರ್‍ಪುರ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸಂತ್ರಸ್ತೆ ಘೋರ್‍ಪುರ್‍ನ ಶಾಲೆಯೊಂದರಲ್ಲಿ ಕ್ಲೀನರ್ ಕೆಲಸವನ್ನು ಮಾಡುತ್ತಿದ್ದರು. ಆರೋಪಿಯಲ್ಲಿ ಒಬ್ಬನಾದ ಪಂಚರಾಜ್ ಎಂಬುವನೂ ಕೂಡ ಅದೇ ಶಾಲೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ನಾನು ಅವಳು ಕೆಲ ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದೆವು. ನನಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು. ಆದ್ದರಿಂದ ನಾನು ಆಕೆಯಿಂದ ದೂರವಿದ್ದೆ. ಆದರೆ ಆಕೆ ಯಾವಗಲೂ ನನ್ನ ಜೊತೆಯಲ್ಲಿಯೇ ಇರುವಂತೆ ಒತ್ತಾಯಿಸಿ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತು ಕೋಪದಿಂದ ಈ ಕೃತ್ಯ ಎಸಗಿದೆ ಎಂದು ಆರೋಪಿ ಪಂಚ್‍ರಾಜ್ ವಿಚಾರಣೆಯ ವೇಳೆ ತಿಳಿಸಿದ್ದಾನೆ.

    ಶಾಲೆಗೆ ದಸರಾ ರಜೆ ಇರುವುದರಿಂದ ಯಾರು ಬರುತ್ತಿರಲಿಲ್ಲ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಪಂಚರಾಜ್ ಸಂತ್ರಸ್ತೆಯನ್ನು ನಿನ್ನ ಬಳಿ ಮಾತಾಡಬೇಕು ಎಂದು ಹೇಳಿ ಶಾಲೆಗೆ ಕರೆಸಿಕೊಂಡಿದ್ದಾನೆ. ನಂತರ ಏಕಾಂತವಾಗಿ ಇರಬೇಕೆಂದು ಯಾರು ಇಲ್ಲದ ಕಡೆ ಕರೆದುಕೊಂಡು ಹೋಗಿ ಸಹಚರನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯ ಖಾಸಗಿ ಭಾಗಗಳಿಗೆ ಆಸಿಡ್ ಎರಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

    ಸದ್ಯಕ್ಕೆ ಸಂತ್ರೆಸ್ತೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತಯುತ್ತಿದ್ದಾರೆ. ಆದರೆ ಆಕೆಯ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಆಕೆಯ ಪತಿ ಸಾವನ್ನಪ್ಪಿದ್ದಾರೆ ಹಾಗೂ ಆಕೆಯ ಮಕ್ಕಳ ಬಗ್ಗೆನೂ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆತ್ನಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತ

    ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆತ್ನಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತ

    ಬೆಂಗಳೂರು: ಕನ್ನಡಪರ ಸಂಘಟನೆಯ ಉಪಾಧ್ಯಕ್ಷನೋರ್ವ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಪಾಲಾಗಿರುವ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮುರಳಿ ಅಲಿಯಾಸ್ ಜಿಮ್ ಮುರಳಿ ಜೈಲು ಪಾಲಾದ ಮಹದೇವಪುರ ವಲಯ ಜಯಕರ್ನಾಟಕ ಸಂಘದ ಉಪಾಧ್ಯಕ್ಷ. ಸೆಪ್ಟೆಂಬರ್ 22 ರಂದು ಹೂಡಿಯ ಬಸವನಗರ ಮುಖ್ಯರಸ್ತೆಯ ಮಹಿಳೆಯರು ವಾಸವಿದ್ದ ಮನೆಗೆ ನುಗ್ಗಿದ್ದ ಮುರಳಿ ದೌರ್ಜನ್ಯ ಎಸಗಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆಯರು ಕೂಗಾಡಿದಾಗ ಅಕ್ಕಪಕ್ಕದವರು ಬರುತ್ತಾರೆ ಎಂಬ ಭಯದಲ್ಲಿ ಮುರಳಿ ಮೊದಲನೇ ಮಹಡಿಯಿಂದ ರಸ್ತೆಗೆ ಹಾರಿ ಎಸ್ಕೇಪ್ ಆಗಿದ್ದಾನೆ. ಮುರಳಿ ಮಹಡಿಯಿಂದ ಹಾರಿ ಪರರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮುರಳಿ ಅವರನ್ನು ಹಿಂಬಾಲಿಸುತ್ತಿದ್ದ. ಅಲ್ಲದೆ ಘಟನೆ ನಡೆದ ದಿನ ಯುವತಿಯರು ವಾಸವಿದ್ದ ಕಟ್ಟಡದ ಬಳಿ ಅವಿತುಕೊಂಡು ಯುವತಿಯರು ಒಳ ಹೋಗುವುದನ್ನು ನೋಡಿದ್ದ. ಇದರಿಂದಾಗಿ ಈತನ ಕಾಟದಿಂದ ಬೇಸತ್ತ ಯುವತಿಯರು ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮುರಳಿಯನ್ನ ಬಂಧಿಸಿದ ಮಹದೇವಪುರ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

  • ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ ಮಾಡಿ ಕೊಲೆ: ಆರೋಪಿಗಳು ಅರೆಸ್ಟ್!

    ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ ಮಾಡಿ ಕೊಲೆ: ಆರೋಪಿಗಳು ಅರೆಸ್ಟ್!

    ಜೈಪುರ್: ಇಬ್ಬರು ಯುವಕರು ಸೇರಿ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದ್ದು, ಆರೋಪಿಗಳಿಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.

    ಇಬ್ಬರು ಆರೋಪಿಗಳು 17 ವಯಸ್ಸಿನವರಾಗಿದ್ದಾರೆ. ಬುಧವಾರ ರಾತ್ರಿ ಅಪ್ರಾಪ್ತೆಯನ್ನು ಒರಿಯಾ ಕಾಲೋನಿಯಿಂದ ಸುಮಾರು 200 ಮೀಟರ್ ದೂರ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಕೋಟಾದ ಪೊಲೀಸ್ ಅಧಿಕಾರಿ ಅನ್ಸಮಾನ್ ಭೂಮಿಯಾ ಅವರು ತಿಳಿಸಿದ್ದಾರೆ.

    ಆರೋಪಿಗಳು ಅತ್ಯಾಚಾರ ಮಾಡಿದ ನಂತರ ಅಪ್ರಾಪ್ತೆಯ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಹುಡುಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಗುರುವಾರ ಬೆಳಿಗ್ಗೆ ಅಪ್ರಾಪ್ತೆಯ ದೇಹ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿದ ನಂತರ ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.