Tag: arrest

  • ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

    ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

    ಧಾರವಾಡ: ಜಿಲ್ಲೆಯ ಅರಣ್ಯ ಇಲಾಖೆ ಅಂತರಾಜ್ಯ ಶ್ರೀಗಂಧ ಕಳ್ಳರ ತಂಡವನ್ನು ಬೇಧಿಸಿ 4 ಮಂದಿಯನ್ನು ಬಂಧಿಸಿದೆ.

    ಧಾರವಾಡ ಜಿಲ್ಲೆಯಲ್ಲಿ ಶ್ರೀಗಂಧ ಹಾಗೂ ವನ್ಯ ಜೀವಿ ಸಂಪತ್ತಿಗೆ ಕನ್ನ ಹಾಕುತ್ತಿದ್ದ 20 ಜನರ ಈ ಕಳ್ಳರ ತಂಡ, ಮಧ್ಯಪ್ರದೇಶದಿಂದ ರಾಜ್ಯಕ್ಕೆ ಗುಡಿ ಕೈಗಾರಿಕಾ ವಸ್ತುಗಳ ಮಾರಾಟ ವೇಶದಲ್ಲಿ ಬಂದಿದ್ದರು. ಸದ್ಯ ಧಾರವಾಡ ಅರಣ್ಯ ಇಲಾಖೆ 4 ಮಹಿಳೆಯರನ್ನು ಬಂಧಿಸಿದ್ದು, ಉಳಿದ 16 ಜನರ ಬಂಧನಕ್ಕೆ ಜಾಲ ಬಿಸಿದೆ.

    ಧಾರವಾಡ ಜಿಲ್ಲೆಯ ತೋಟದ ಮನೆಯ ಸಿಸಿಟಿವಿಯಲ್ಲಿ ಈ ಕಳ್ಳರ ಓಡಾಟ ಎಲ್ಲಾ ಸೆರೆಯಾಗಿದೆ. ಬಂಧನಕ್ಕೆ ಒಳಗಾದವರಲ್ಲಿ ಅಧೂರಿ ಠಾಕೂರ್, ಪುಂಜಿ ಆದಿವಾಸಿ, ಗರ್ಮಾಬಾಯಿ ಹಾಗೂ ಜಾಮುಂಡಿ ಆದಿವಾಸಿ ಎಂಬ ಮಹಿಳೆಯರಿದ್ದು, ಅವರಿಂದ ಒಟ್ಟು 9 ಕೆಜಿ ಶ್ರೀಗಂಧ ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.

    ಸದ್ಯ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಶ್ರೀರಾಮಸೇನೆ ಗೌರವಾಧ್ಯಕ್ಷರ ಬಂಧನಕ್ಕೆ ವಿರೋಧ- ಹೊತ್ತಿ ಉರಿದ ಜೇವರ್ಗಿ, ಪೊಲೀಸರ ಮೇಲೆ ಕಲ್ಲು

    ಶ್ರೀರಾಮಸೇನೆ ಗೌರವಾಧ್ಯಕ್ಷರ ಬಂಧನಕ್ಕೆ ವಿರೋಧ- ಹೊತ್ತಿ ಉರಿದ ಜೇವರ್ಗಿ, ಪೊಲೀಸರ ಮೇಲೆ ಕಲ್ಲು

    ಕಲಬುರಗಿ: ಶ್ರೀರಾಮಸೇನೆ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಬಂಧನ ಖಂಡಿಸಿ ಜೇವರ್ಗಿ ಪಟ್ಟಣದಲ್ಲಿ ಹಿಂದೂ ಕಾರ್ಯಕರ್ತರಿಂದ ಭಾರೀ ಪ್ರತಿಭಟನೆ ನಡೆಸಲಾಯಿತು.

    400ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಉದ್ರಿಕ್ತ ಪ್ರತಿಭಟನಾಕಾರರು ಜೇವರ್ಗಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಘಟನೆ ವೇಳೆ ಸ್ಟೇಷನ್ ಬಜಾರ್ ಠಾಣೆ ಪೇದೆ ವಿಠಲ್ ಮತ್ತು ಶಹಬಾದ ಠಾಣೆ ಪೇದೆ ಹೋಬಳೆಶ ಎಂಬವರು ಗಾಯಗೊಂಡಿದ್ದಾರೆ.

    ಪೊಲೀಸರು ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

  • ಪ್ರಸಿದ್ಧ ನಟಿಮಣಿಗೆ ಪ್ರೀತಿಸುವಂತೆ ಪೀಡಿಸುತ್ತಿದವನ ಬಂಧನ

    ಪ್ರಸಿದ್ಧ ನಟಿಮಣಿಗೆ ಪ್ರೀತಿಸುವಂತೆ ಪೀಡಿಸುತ್ತಿದವನ ಬಂಧನ

    ಬೆಂಗಳೂರು: ಖ್ಯಾತ ನಟಿಗೆ ಕಿರುಕುಳ ನೀಡುತ್ತಿದ್ದ ಬೆಂಗಳೂರಿನ ಯುವಕನೊಬ್ಬನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

    ಉದಯೋನ್ಮಕ ನಟಿ ರೆಬೋ ಮೋನಿಕಾ ಜಾನ್ ಗೆ ಸ್ನೇಹಿತ ಫ್ರಾಂಕ್ಲಿನ್ ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರತಿ ಭಾನುವಾರ ಚರ್ಚ್ ಗೆ ಪ್ರಾರ್ಥನೆ ಮಾಡಲು ಮೋನಿಕಾ ಹೋಗುತ್ತಿದ್ದರು. ಚರ್ಚ್ ಗೆ ಹೋಗುತ್ತಿದ್ದ ನಟಿಯನ್ನು ಯುವಕ ಒಂದು ವರ್ಷದಿಂದ ಫಾಲೋ ಮಾಡುತ್ತಿದ್ದ.

    ಪ್ರಾರ್ಥನೆ ಮಾಡಲು ಬರುತ್ತಿದವ ನಟಿಯ ಜೊತೆ ಪರಿಚಯ ಮಾಡಿಕೊಂಡ ಫ್ರಾಂಕ್ಲಿನ್ ಬಳಿಕ ಪ್ರೀತಿಸುವಂತೆ, ಮದುವೆಯಾಗುವಂತೆ ಪೀಡಿಸುತ್ತಿದ್ದನು. ಆದರೆ ಇದನ್ನು ನಿರಾಕರಣೆ ಮಾಡಿ ಒಮ್ಮೆ ನಟಿ ಯುವಕನಿಗೆ ಎಚ್ಚರಿಕೆ ನೀಡಿದ್ದರು.

    ಯುವಕ ನಟಿಯ ಫೋನ್ ನಂಬರ್ ಕಲೆಕ್ಟ್ ಮಾಡಿ ಆಕೆಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದನು. ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀನು ನನ್ನನ್ನು ಮದುವೆಯಾಗಬೇಕು ಎಂದು ಮೆಸೇಜ್ ಮಾಡುತ್ತಿದ್ದನು. ನಟಿಯ ಫೋನ್ ನಂಬರ್ ಮಾತ್ರವಲ್ಲದೆ ಆಕೆಯ ಕುಟುಂಬದ ಮಾಹಿತಿ, ಫೋನ್ ನಂಬರ್ ಕೂಡ ಕಲೆಕ್ಟ್ ಮಾಡಿದ್ದನು.

    ನಟಿಯ ಮಾತನ್ನು ಕೇಳದೆ ಮದುವೆಯಾಗುವಂತೆ ಪೀಡಿಸುತ್ತಿದ್ದರಿಂದ ಬೇಸತ್ತ ಮೋನಿಕಾ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದರು. ನಟಿ ಕೊಟ್ಟ ದೂರು ಆಧರಿಸಿ 28 ವರ್ಷದ ಫ್ರಾಂಕ್ಲಿನ್ ವಿಸಿಲ್‍ನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

    ಮೋನಿಕಾ ಜೇಕಬ್ ‘ಇಂಟೇ ಸ್ವರ್ಗರಾಜ್ಯಂ’ ಅನ್ನೋ ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನಷ್ಟು ಚಲನಚಿತ್ರಗಳಲ್ಲಿ ನಟನೆ ಪ್ರಾರಂಭ ಮಾಡಿದ್ದಾರೆ. ಫ್ರಾಂಕ್ಲಿನ್ ಬಸವನಗುಡಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾನೆ.

     

  • ಸರಗಳ್ಳತನ ಮಾಡುತ್ತಿದ್ದ ಸ್ಯಾಂಡಲ್‍ವುಡ್ ನಿರ್ಮಾಪಕ ಅರೆಸ್ಟ್!

    ಸರಗಳ್ಳತನ ಮಾಡುತ್ತಿದ್ದ ಸ್ಯಾಂಡಲ್‍ವುಡ್ ನಿರ್ಮಾಪಕ ಅರೆಸ್ಟ್!

    ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಸ್ಯಾಂಡಲ್‍ವುಡ್ ನಿರ್ಮಾಪಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ನಿರ್ಮಾಪಕನನ್ನು ಪ್ರತಾಪ್ ರಂಗು ಅಲಿಯಾಸ್ ರಂಗ ಎಂದು ಗುರುತಿಸಲಾಗಿದೆ. ಹಲವು ಸರಗಳ್ಳತನ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದು, ಇಂದು ಈತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, 15 ದಿನಗಳ ಹಿಂದೆ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ್ದ. ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

    ಅನಂತಪುರ ಜಿಲ್ಲೆಯ ಮಡಕಸೀರಾದಲ್ಲಿ ಈತ ತಲೆಮರೆಸಿಕೊಂಡಿದ್ದು, ಶುಕ್ರವಾರ ಸಂಜೆ ಎಂಎಸ್ ಬಿಲ್ಡಿಂಗ್ ಬಳಿ ಆರೋಪಿ ನಿರ್ಮಾಪಕನನ್ನು ಬಸವೇಶ್ವರನಗರ ಪೊಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿ `ಡಬಲ್ ಮೀನಿಂಗ್’ ಸಿನಿಮಾದ ನಿರ್ಮಾಪಕನಾಗಿದ್ದು, ಬಸವೇಶ್ವರನಗರ, ಮಹಾಲಕ್ಷ್ಮಿಲೇಔಟ್ ಸುತ್ತಮುತ್ತ ಸರಗಳ್ಳತನ ಮಾಡುತ್ತಿದ್ದ.

    ಸದ್ಯ ಬಂಧಿತ ಆರೋಪಿಯನ್ನ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

    https://www.youtube.com/watch?v=CPERzuU8ct4

    https://www.youtube.com/watch?v=e4ZCzfBn3WY

  • 16 ವರ್ಷಗಳಿಂದ ಗೃಹ ಬಂಧನದಲ್ಲಿ ವ್ಯಕ್ತಿ- ಸ್ಟೋರಿ ಕೇಳಿದರೆ ಕಲ್ಲು ಮನಸು ಕೂಡ ಕರಗುತ್ತೆ

    16 ವರ್ಷಗಳಿಂದ ಗೃಹ ಬಂಧನದಲ್ಲಿ ವ್ಯಕ್ತಿ- ಸ್ಟೋರಿ ಕೇಳಿದರೆ ಕಲ್ಲು ಮನಸು ಕೂಡ ಕರಗುತ್ತೆ

    ಗದಗ: ಮಾನಸಿಕ ಅಸ್ವಸ್ಥನಾದ ವ್ಯಕ್ತಿಯೊಬ್ಬರು ಸುಮಾರು 16 ವರ್ಷಗಳಿಂದ ಕೈ ಕಾಲುಗಳಿಗೆ ಕಬ್ಬಿಣ ಬೇಡಿಗಳಿಂದ ಗೃಹ ಬಂಧನವನ್ನು ಅನುಭವಿಸುತ್ತಿದ್ದಾರೆ. ಇದೆಲ್ಲವನ್ನು ಕಣ್ಣಾರೆ ಕಂಡರೂ ಜನರು ಏನು ಮಾಡದ ಸ್ಥಿತಿಯಲ್ಲಿದ್ದಾರೆ.

    ರೋಣ ತಾಲೂಕಿನ ಹಿರೇಹಾಳ ಗ್ರಾಮದ ಶರಣಪ್ಪ ಕಳೆದ 16 ವರ್ಷಗಳಿಂದ ಬಂಧನದಲ್ಲಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಾನಸಿಕ ಅಸ್ವಸ್ಥನಾಗಿದ್ದಾರೆ.ಅಂದಿನಿಂದ ಕೈ ಕಾಲು ಗಳಿಗೆ ಕಬ್ಬಿಣದ ಬೇಡಿ ಹಾಕಿ ಹೊರಗಿನ ಪ್ರಪಂಚವನ್ನೇ ನೋಡದ ಹಾಗೆ ಕೂಡಿಹಾಕಿದ್ದಾರೆ. ಬೇಡಿ ಹಾಕಿದ ಕೈಗಳಿಂದಲೇ ಊಟ, ಮೆತ್ತನೆಯ ನಡಿಗೆ, ಸ್ವಾತಂತ್ರ್ಯ, ಸ್ವ ಇಚ್ಛೆಯೂ ಇಲ್ಲದ ನರಕದ ಜೀವನ ಅನುಭವಿಸುತ್ತಿದ್ದಾರೆ.

    2002ರಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆ ಮಾನಸಿಕ ಅಸ್ವಸ್ಥನಂತೆ ವರ್ತಿಸಲು ಪ್ರಾರಂಭಿಸಿದ್ದಾರೆ. ಅಂದಿನಿಂದ ಕುಟುಂಬಸ್ಥರು ಇವನನ್ನ ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಮಗನ ಸ್ಥಿತಿಯನ್ನು ಕಂಡು ಹೆತ್ತ ತಾಯಿ ಹನಮವ್ವ ಕೂಡ ಹಾಸಿಗೆ ಹಿಡಿದು ಕುಳಿತು ಬಿಟ್ಟಿದ್ದಾರೆ. ನಂತರ ಈ ಬಡ ಕುಟುಂಬದ ಜವಾಬ್ದಾರಿ ಹೊತ್ತಿದ್ದು, ಶರಣಪ್ಪನ ಸಹೋದರಿ ಯಮನವ್ವ. ಆದರೆ ಮನೆ ನಿರ್ವಹಣೆಗೆ ಈಕೆ ದೇವದಾಸಿಯಾಗಿದ್ದಾರೆ.

    ಈ ಬಗ್ಗೆ ಶರಣಪ್ಪನನ್ನು ಕೇಳಿದರೆ ತನಗೆ ತಿಳಿದಂತೆ ಮಾತನಾಡುತ್ತಾರೆ. ಇಡೀ ಕುಟುಂಬ ಪ್ರತಿದಿನ ಕಣ್ಣಿರಲ್ಲಿ ಕೈ ತೊಳೆಯುತ್ತಿದೆ. ಕಳೆದ 16 ವರ್ಷಗಳಿಂದ ಹೊರಗಿನ ಪ್ರಪಂಚವೇ ನೋಡದಿರುವ ಯುವಕ ನಿತ್ಯ ನರಕದ ಜೀವನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಇವನು ವಿಚಿತ್ರವಾಗಿ ವರ್ತಿಸುತ್ತಾರೆ. ಸಿಕ್ಕ ಸಿಕ್ಕವರಿಗೆ ಹೊಡೆಯುವುದು, ಬಡಿಯುವುದು ಹೀಗೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ. ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಬ್ಬಿಣದ ಬೇಡಿಗಳನ್ನು ಹಾಕಲಾಗಿದೆ.

    ಈ ಕುಟುಂಬದ ಸ್ಥಿತಿಯನ್ನು ನೋಡಿದರೆ ಕಲ್ಲಿನ ಮನಸು ಕೂಡ ಕರುಗುತ್ತದೆ. ಒಂದು ಕಡೆ ಊಟಕ್ಕೆ ಗತಿ ಇಲ್ಲ. ಇನ್ನೊಂದೆಡೆ ಚಿಕಿತ್ಸೆಗೆ ಹಣವಿಲ್ಲ. ಮತ್ತೊಂದೆಡೆ ದಿನಗೂಲಿ ಮಾಡದೆ ಜೀವನ ಸಾಗೋದಿಲ್ಲ. ಈ ರೀತಿಯ ಸ್ಥಿತಿಯಲ್ಲಿ ದಿನ ದೂಡುತ್ತಿರುವ ಈ ಕುಟುಂಬಕ್ಕೆ ಸಂಘ ಸಂಸ್ಥೆಯಿಂದ ನೆರವು ಸಿಗಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

  • 12 ವರ್ಷದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್: ಓರ್ವ ಆರೋಪಿ ಅರೆಸ್ಟ್

    12 ವರ್ಷದ ಬಾಲಕಿಯ ಮೇಲೆ ಗ್ಯಾಂಗ್‍ರೇಪ್: ಓರ್ವ ಆರೋಪಿ ಅರೆಸ್ಟ್

    ಹೈದರಾಬಾದ್: 12 ವರ್ಷದ ಬಾಲಕಿಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಕೃಷ್ಣ ಜಿಲ್ಲೆಯ ಜಗ್ಗಯ್ಯಪೇಟ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ತೊರಗಾಂಡಪಾಲೇಮ್ ಗ್ರಾಮದ ಸ್ಥಳೀಯ ಸರ್ಕಾರಿ ಕಚೇರಿಯ ಹಿಂಭಾಗದ ಕಟ್ಟಡದಲ್ಲಿ ಅಪ್ರಾಪ್ತೆಯ ಮೇಲೆ ಮೂವರು ಕಾಮುಕರು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅತ್ಯಾಚಾರ ಎಸಗಿದ್ದರು.

    ಈ ಘಟನೆಯಿಂದ ಬಾಲಕಿ ಆಘಾತಕ್ಕೆ ಒಳಗಾಗಿ ಕಳೆದ ವಾರ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು. ಭಾನುವಾರ ಆರೋಪಿಗಳ ವಿರುದ್ಧ ಜಗ್ಗಯ್ಯಪೇಟ್ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಎಸ್. ಶ್ರೀಕುಮಾರ್ ಹೇಳಿದ್ದಾರೆ.

    ಈ ಪ್ರಕರಣದ ಸಂಬಂಧ ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗೆ ಜಾಲ ಬೀಸಿದ್ದೇವೆ ಎಂದು ಪೋಲಿಸರು ತಿಳಿಸಿದ್ದಾರೆ.

    ಇದನ್ನು ಓದಿ: ಹಾಡಹಗಲೇ ಫುಟ್ ಪಾತ್‍ನಲ್ಲೇ ರೇಪ್- ಸಹಾಯಕ್ಕೆ ಯಾರು ಬರಲಿಲ್ಲ ಆದ್ರೆ ವಿಡಿಯೋ ಮಾಡಿದ್ರು

  • ಹಾಡಹಗಲೇ ಫುಟ್ ಪಾತ್‍ನಲ್ಲೇ ರೇಪ್- ಸಹಾಯಕ್ಕೆ ಯಾರು ಬರಲಿಲ್ಲ ಆದ್ರೆ ವಿಡಿಯೋ ಮಾಡಿದ್ರು

    ಹಾಡಹಗಲೇ ಫುಟ್ ಪಾತ್‍ನಲ್ಲೇ ರೇಪ್- ಸಹಾಯಕ್ಕೆ ಯಾರು ಬರಲಿಲ್ಲ ಆದ್ರೆ ವಿಡಿಯೋ ಮಾಡಿದ್ರು

    ಹೈದರಾಬಾದ್: ಸಾರ್ವಜನಿಕರು ನೋಡುತ್ತಿದ್ದಂತೆ ಕಾಮುಕನೊಬ್ಬ ಮಹಿಳೆಯ ಮೇಲೆ ಫುಟ್‍ಪಾತ್ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ ಸಹಾಯಕ್ಕೆ ಯಾರು ಬಾರದೇ ಆ ಅಮಾನೀಯ ಕೃತ್ಯವನ್ನು ವಿಡಿಯೋ ಮಾಡಿರುವಂತಹ ಶಾಕಿಂಗ್ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

    ವಿಡಿಯೋ ಆಧಾರದ ಮೇಲೆ ಆರೋಪಿಯನ್ನು 21 ವರ್ಷದ ಗಂಜಿ ಶಿವ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಎಸಗುವ ಸಂದರ್ಭದಲ್ಲಿ ಆತ ಕಂಠ ಪೂರ್ತಿ ಕುಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಸಂತ್ರಸ್ತೆ ಭಾನುವಾರ ಸುಮಾರು ಮಧ್ಯಾಹ್ನ 2 ಗಂಟೆಗೆ ವಿಶಾಖಪಟ್ಟಣದ ರೈಲ್ವೇ ನಿಲ್ದಾಣದ ಫುಟ್‍ಪಾತ್‍ನಲ್ಲಿ ಮರದ ಪಕ್ಕ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಶಿವ ಏಕಾಏಕಿ ಆಕೆಯ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಬಲವಂತವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆ. ಸ್ಥಳದಲ್ಲಿ ಹಲವಾರು ಜನರು ಓಡಾಡುತ್ತಿದ್ದರೂ ಸಂತ್ರಸ್ತೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮಾನವೀಯತೆಯೇ ಇಲ್ಲದಂತೆ ಯಾರೊಬ್ಬರು ಆಕೆಗೆ ಸಹಾಯ ಮಾಡಲು ಮುಂದಾಗಿಲ್ಲ.

    ಘಟನೆ ನಡೆದ ಸ್ಥಳದಲ್ಲಿದ್ದ ಆಟೋ ಚಾಲಕ ಆರೋಪಿ ಎಸಗುತ್ತಿದ್ದ ಕೃತ್ಯವನ್ನು ತನ್ನ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾನೆ. ಕೃತ್ಯವನ್ನು ನೋಡಿದ ಯಾರೋ ಒಬ್ಬರು ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ವಿಡಿಯೋದ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 376 ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ನಾಲ್ವರು ಬೀದಿಕಾಮಣ್ಣರ ಬಂಧನ

    ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ನಾಲ್ವರು ಬೀದಿಕಾಮಣ್ಣರ ಬಂಧನ

    ಗದಗ: ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ನಾಲ್ವರು ಕಾಮುಕರನ್ನು ಗದಗ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ವಿಜಯ್, ದುರುಗಪ್ಪ, ಶರೀಫ್ ಮತ್ತು ಯಶವಂತ್ ಬಂಧಿತ ಆರೋಪಿಗಳು. ಇವರು ಬಸ್ ನಿಲ್ದಾಣ, ಕಾಲೇಜ್ ಬಳಿ, ಸಂತೆ ಮಾರುಕಟ್ಟೆ ಬಳಿ ಕುಡಿದ ಮತ್ತಿನಲ್ಲಿ ತ್ರಿಬಲ್ ರೈಡಿಂಗ್ ಮೂಲಕ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು.

    ಈ ವಿಚಾರವನ್ನು ಮಹಿಳೆಯರು ನರಗುಂದ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಪೊಲಿಸರು ಸ್ಥಳಕ್ಕೆ ದೌಡಾಯಿಸಿ ಗದಗ ಜಿಲ್ಲೆ ನರಗುಂದ ಪಟ್ಟಣದ ಬಸ್ ನಿಲ್ದಾಣದ ಬಳಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ.

    ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಡ್ಯದಲ್ಲಿ ಮರಳು ದಂಧೆಕೋರರ ಅಟ್ಟಹಾಸ – ನಾಲ್ವರು ಪೊಲೀಸರ ಮೇಲೆ ಅಟ್ಯಾಕ್

    ಮಂಡ್ಯದಲ್ಲಿ ಮರಳು ದಂಧೆಕೋರರ ಅಟ್ಟಹಾಸ – ನಾಲ್ವರು ಪೊಲೀಸರ ಮೇಲೆ ಅಟ್ಯಾಕ್

    ಮಂಡ್ಯ: ಮರಳು ದಂಧೆಕೋರರನ್ನು ಪ್ರಶ್ನೆ ಮಾಡಿದ್ದಕ್ಕೆ ನಾಲ್ವರು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಅಟ್ಟಹಾಸ ನಡೆಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕೊರವನಗುಂದಿ ಗ್ರಾಮದ ಬಳಿ ನಡೆದಿದೆ.

    ಎಸ್‍ಪಿ ಸ್ಕ್ವಾಡ್‍ಗೆ ಸೇರಿದ ಗುರುಮೂರ್ತಿ, ಶಶಿ, ಹರೀಶ್, ಮತ್ತು ದೇವರಾಜು ಮರಳು ದಂಧೆಕೋರರಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ. ಗುರುವಾರ ರಾತ್ರಿ ಪೊಲೀಸ್ ಸಿಬ್ಬಂದಿ ಎಂದಿನಂತೆ ರೌಂಡ್ಸ್ ಗೆ ಹೋಗಿದ್ದಾರೆ. ಈ ಸಂದಂರ್ಭದಲ್ಲಿ ರಾತ್ರಿ ಸುಮಾರು 11 ಗಂಟೆಗೆ ಎರಡು ಟ್ರ್ಯಾಕ್ಟರ್‍ನಲ್ಲಿ ಮರಳು ತುಂಬಿಕೊಂಡು ಬರುವುದನ್ನು ನಾಲ್ವರು ಪೊಲೀಸರು ಗಮನಿಸಿದ್ದಾರೆ. ಈ ಬಗ್ಗೆ ಟ್ರ್ಯಾಕ್ಟರ್ ಚಾಲಕರನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಮರಳು ದಂಧೆಕೋರರು ತಕ್ಷಣ ತಮ್ಮವರನ್ನು ಸ್ಥಳಕ್ಕೆ ಕರೆಸಿಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

    ನಂತರ ಅಲ್ಲಿಂದ ಪೊಲೀಸರು ತಪ್ಪಿಸಿಕೊಂಡು ಹೋಗಿ ನಾಗಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ನಾಗಮಂಗಲ ಪೊಲೀಸರು ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕೆ ಬಂದು ಮೂವರು ಮರಳು ದಂಧೆಕೋರರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

    ಈ ಹಿಂದೆ ನಾಗಮಂಗಲ ಡಿವೈಎಸ್‍ಪಿ ಆಗಿದ್ದ ಸವಿತಾ ಹೂಗಾರ್ ಅವರ ವಾಹನಕ್ಕೆ ಡಿಕ್ಕಿ ಹೊಡೆಸಿ ಕೊಲ್ಲಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೂ ಕೂಡ ಹಲ್ಲೆ ನಡೆದಿತ್ತು. ಇದೀಗ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಇದರಿಂದ ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.

  • ಗ್ರಾಹಕರೇ ಎಚ್ಚರ! ದೀಪಾವಳಿಗೆ ಬಟ್ಟೆ ಖರೀದಿಸಲು ಅಂಗಡಿಗೆ ಹೋದವರ ಜೇಬಿಗೆ ಕತ್ತರಿ!

    ಗ್ರಾಹಕರೇ ಎಚ್ಚರ! ದೀಪಾವಳಿಗೆ ಬಟ್ಟೆ ಖರೀದಿಸಲು ಅಂಗಡಿಗೆ ಹೋದವರ ಜೇಬಿಗೆ ಕತ್ತರಿ!

    ಕೊಪ್ಪಳ: ದೀಪಾವಳಿ ಹಬ್ಬಕ್ಕೆಂದು ಬಟ್ಟೆ ಖರೀದಿಸಲು ಅಂಗಡಿಗೆ ಹೋದಾಗ ನಿಮ್ಮ ಜೇಬಿಗೆ ಕತ್ತರಿ ಬೀಳಬಹುದು, ಹುಷಾರಾಗಿರಿ. ಯಾಕಂದ್ರೆ ಇಂತಂಹದೊಂದು ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಜಿಲ್ಲೆಯ ಕುಷ್ಟಗಿಯ ಮಹಾವೀರ ಕ್ಲಾತ್ ಸ್ಟೋರ್‍ಗೆ ಗ್ರಾಹಕರೊಬ್ಬರು ಬಟ್ಟೆ ಖರೀದಿಸಲು ಹೋಗಿದ್ದಾಗ ಪಿಕ್‍ಪಾಕೆಟ್ ಆಗಿದೆ. ಕಳ್ಳತನ ಮಾಡಿರುವುದು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಸಹಾಯದಿಂದ ಪೊಲೀಸರು ಆರೋಪಿ ಸುನೀಲ್ ನಾಯಕ್‍ನನ್ನು ಬಂಧಿಸಿದ್ದಾರೆ.


    ಶರಣಪ್ಪ ಗುರಿಕಾರ ಎಂಬ ಗ್ರಾಹಕ ದೀಪಾವಳಿಗಾಗಿ ಬಟ್ಟೆ ಖರೀದಿಸ ಹೋಗಿದ್ದರು. ಬಟ್ಟೆಗಳನ್ನು ಖರೀದಿಸಿದ ನಂತರ ಬಿಲ್ ಕೊಡಲು ಕೌಂಟರ್‍ಗೆ ಬಂದಿದ್ದಾರೆ. ಆರೋಪಿ ಸುನೀಲ್ ಅಲ್ಲೇ ಅಂಗಡಿಯಲ್ಲಿ ಸುತ್ತಾಡಿಕೊಂಡು ಅವರ ಹಿಂದೆಯೇ ಹೋಗಿದ್ದಾನೆ. ಹಬ್ಬದ ಪ್ರಯುಕ್ತ ಗ್ರಾಹರು ಹೆಚ್ಚಾಗಿದ್ದರಿಂದ ಅವರ ಮಧ್ಯೆ ಸೇರಿಕೊಂಡು ನಿಧಾನವಾಗಿ ಜೇಬಿಗೆ ಕೈ ಹಾಕಿ ಕಳ್ಳತನ ಮಾಡಿದ್ದಾನೆ. ಸುನೀಲ್ ಶರಣಪ್ಪ ಅವರ ಜೇಬಿಗೆ ಕತ್ತರಿ ಹಾಕಿ ನಂತರ ಮೆಲ್ಲಗೆ ಹಿಂದೆ ಸರಿದು ತನ್ನ ಜೇಬಿಗೆ ಹಣವನ್ನು ಇಟ್ಟುಕೊಂಡು ಯಾರಿಗೂ ಅನುಮಾನ ಬರಬಾರದು ಎಂದು ಮೆಲ್ಲಗೆ ಅಂಗಡಿಯಿಂದ ಹೋಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಶರಣಪ್ಪ ಬಿಲ್ ಕೊಡಲು ನೋಡಿದಾಗ ಹಣ ಕಳ್ಳತನವಾಗಿರೋದು ಗೊತ್ತಾಗಿದ್ದು, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಅಂಗಡಿಗೆ ಬಂದು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಬರೋಬ್ಬರಿ 90 ಸಾವಿರ ರೂ. ಹಣವನ್ನು ಜೇಬುಗಳ್ಳತನ ಮಾಡಿದ್ದು, ಬಂಧಿತನಿಂದ ಪೊಲೀಸರು ಹಣವನ್ನು ವಶ ಪಡಿಸಿಕೊಂಡಿದ್ದಾರೆ.