Tag: arrest

  • ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದ ಬಿಜೆಪಿ ಮುಖಂಡ ಅರೆಸ್ಟ್

    ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದ ಬಿಜೆಪಿ ಮುಖಂಡ ಅರೆಸ್ಟ್

    ಬೆಂಗಳೂರು: ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದ ಹಿನ್ನಲೆಯಲ್ಲಿ ಇದೀಗ ರಾಜಾನಕುಂಟೆ ಪೊಲೀಸರು ಬಿಜೆಪಿ ಮುಖಂಡ ಬಡ್ಡಿ ರಾಮಕೃಷ್ಣನನ್ನು ಬಂಧಿಸಿದ್ದಾರೆ.

    ತಿಮ್ಮನಾಯಕನಹಳ್ಳಿ ನಿವಾಸಿಯಾಗಿರುವ ರಾಮಕೃಷ್ಣಪ್ಪ ನಾಲ್ಕು ದಿನಗಳ ಹಿಂದೆ ಸಿಂಗನಾಯಕನಹಳ್ಳಿ ಆರ್ಯನ್ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿಗೆ ಥಳಿಸಿದ್ದ. ಯಲಹಂಕದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿ ಆಶಾ, ರಾಮಕೃಷ್ಣಪ್ಪ ಬಳಿ ಸಾಲ ಪಡೆದಿದ್ದರು. ಸಾಲದ ಬಡ್ಡಿ ಹಣವನ್ನು ಪಡೆಯಲು ಶಾಲೆಗೆ ನುಗ್ಗಿದ ರಾಮಕೃಷ್ಣಪ್ಪ ಮಹಿಳೆ ಎಂದು ನೋಡದೇ ಕಪಾಳಮೋಕ್ಷ ಮಾಡಿದ್ದ. ಈ ಎಲ್ಲ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಈ ಸಂಬಂಧ ಹಲ್ಲೆಗೊಳಗಾದ ಮುಖ್ಯ ಶಿಕ್ಷಕಿ ರಾಮಕೃಷ್ಣಪ್ಪ ವಿರುದ್ಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದ. ಇಂದು ರಾಮಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

    https://www.youtube.com/watch?v=4pCMERtCS1Q

  • ಪ್ರೇಯಸಿಗಾಗಿ ಕರೆಂಟ್ ಶಾಕ್ ಕೊಟ್ಟು ಬೆಂಗ್ಳೂರು ಬ್ಯಾಂಕ್ ಮ್ಯಾನೇಜರ್ ಕೊಲೆ

    ಪ್ರೇಯಸಿಗಾಗಿ ಕರೆಂಟ್ ಶಾಕ್ ಕೊಟ್ಟು ಬೆಂಗ್ಳೂರು ಬ್ಯಾಂಕ್ ಮ್ಯಾನೇಜರ್ ಕೊಲೆ

    ರಾಮನಗರ: ಕೋಟಕ್ ಮಹಿಂದ್ರಾ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಅನಿಲ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಗ್ಗಲೀಪುರ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

    ಕನಕಪುರ ತಾಲೂಕಿನ ಕಚುವನಹಳ್ಳಿ ಗ್ರಾಮದ ನಿವಾಸಿಯಾದ ಮಾರ್ಕೆಟಿಂಗ್ ಮ್ಯಾನೇಜರ್ ಶಿವಬಸವೇಗೌಡ ಬಂಧಿತ ಕೊಲೆಗಾರ. ಇದೇ ಡಿಸೆಂಬರ್ 3 ರಂದು ಡೆಪ್ಯುಟಿ ಮ್ಯಾನೇಜರ್ ಅನಿಲ್ ನಾಪತ್ತೆ ಪ್ರಕರಣ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆ ದಿನದಂದೇ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಿ ಗ್ರಾಮದ ಸ್ಮಶಾನದಲ್ಲಿ ಅನಿಲ್ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕಗ್ಗಲೀಪುರ ಪೊಲೀಸರು ಇದೀಗ ಕೊಲೆಗಾರನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಅನಿಲ್ ಕುಮಾರ್ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದು, ಅವರ ಮೃತದೇಹ ಡಿಸೆಂಬರ್ 4ನೇ ರಂದು ಕಗ್ಗಲೀಪುರ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಕಂಪೆನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿರುವ ಶಿವಬಸವೇಗೌಡನ ಬಗ್ಗೆ ಅನುಮಾನ ಬಂದಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದು ಒಪ್ಪಿಕೊಂಡಿದ್ದ.

    ಕೊಲೆ ಎಸಗಿದ್ದು ಯಾಕೆ?
    ಪ್ರೀತಿಸಿದ ಯುವತಿ ಮೇಲಿನ ಮೋಹಕ್ಕೆ ಶಿವಬಸವೇಗೌಡ ಅನಿಲ್ ನನ್ನು ಕೊಲೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಅನಿಲ್ ಗೆ ಶ್ವೇತಾ ಎಂಬಾಕೆ ಜೊತೆ ವಿವಾಹ ನಿಶ್ಚಯವಾಗಿತ್ತು. ತಾನು ಪ್ರೀತಿಸುತ್ತಿದ್ದ ಶ್ವೇತಾ ಬೇರೊಬ್ಬನ ಜೊತೆ ಮದುವೆಯಾಗುತ್ತಿರುವ ವಿಚಾರ ತಿಳಿದು ಮದುವೆ ತಪ್ಪಿಸಲು ದಾರಿ ಹುಡುಕಿದ್ದ. ಅನಿಲ್ ಜೊತೆ ಸ್ನೇಹ ಬೆಳೆಸಿಕೊಂಡು ಡಿಸೆಂಬರ್ 3 ರಂದು ಫೋನ್ ಮಾಡಿ ಉತ್ತರಿ ಗ್ರಾಮದ ಬಳಿ ಕರೆಸಿಕೊಂಡಿದ್ದ. ಬಳಿಕ 440 ಕೆವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಕರೆದೊಯ್ದು ವಿದ್ಯುತ್ ತಂತಿಯನ್ನು ಅನಿಲ್ ನ ದೇಹಕ್ಕೆ ಹಿಡಿದು ಕೊಲೆ ಮಾಡಿ ಪರಾರಿಯಾಗಿದ್ದ.

    ಸ್ನೇಹ ಸಂಪಾದಿಸಿದ್ದು ಹೇಗೆ: ಶ್ವೇತಾ ತನ್ನ ಮದುವೆ ಬಗ್ಗೆ ಎಲ್ಲರ ಹತ್ತಿರ ಹೇಳಿಕೊಂಡಿದ್ದರು. ಈ ವೇಳೆ ಶುಭಾಶಯ ಕೋರುವುದಾಗಿ ಹೇಳಿ ಆರೋಪಿ ಶಿವಬಸವೇಗೌಡ ಶ್ವೇತಾ ಅವರಿಂದ ಅನಿಲ್ ನಂಬರ್ ಪಡೆದುಕೊಂಡು ಹೊಸ ಸಿಮ್ ಖರೀದಿ ಮಾಡಿದ್ದ. ನಂತರ ಅನಿಲ್ ಅವರಿಗೆ ಮೇಲಿಂದ ಮೇಲೆ ಕರೆ ಮಾಡಿ ಅವರ ಸ್ನೇಹ ಸಂಪಾದಿಸಿದ್ದ.

    ಅನಿಲ್ ಡಿ.4 ರಂದು ಕಗ್ಗಲೀಪುರಕ್ಕೆ ಹೋಗಿದ್ದ ಮಾಹಿತಿ ಶಿವಬಸವೇಗೌಡನಿಗೆ ತಿಳಿದಿತ್ತು. ಆಗ ಶಿವಬಸವೇಗೌಡ ಅನಿಲ್‍ಗೆ ಕರೆ ಮಾಡಿ ರಾತ್ರಿ ಊಟಕ್ಕೆ ಆಹ್ವಾನ ನೀಡಿದ್ದ. ಅದಕ್ಕೆ ಅನಿಲ್ ಕೂಡ ಒಪ್ಪಿಕೊಂಡಿದ್ದರು. ಬಳಿಕ ಅವರಿಬ್ಬರೂ ನಗರದ ಹೊರವಲಯದ ರೆಸ್ಟೋರೆಂಟ್‍ ನಲ್ಲಿ ಊಟ ಮಾಡಿ ಬೈಕ್ ನಲ್ಲಿ ನಗರಕ್ಕೆ ವಾಪಸ್ ಹೊರಟಿದ್ದಾರೆ. ಮಧ್ಯದಲ್ಲಿ ಅನಿಲ್ ಅವರು ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸಿದಾಗ ತನ್ನ ಬಳಿ ಇದ್ದ ವಯರ್ ಅನ್ನು ಅನಿಲ್ ಅವರ ದೇಹಕ್ಕೆ ತಾಗಿಸಿ, ಅದನ್ನು ಅಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಗೆ ಸಂಪರ್ಕಿಸಿದ್ದ. ವಿದ್ಯುತ್ ಶಾಕ್ ಹೊಡೆದು ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರು.

    ಹಲವು ಪ್ರಯತ್ನ ನಡೆಸಿದ್ದ: ಟ್ರಾನ್ಸ್ ಫಾರ್ಮರ್ ಮೂಲಕ ವಿದ್ಯುತ್ ಹರಿಸಿ ಕೊಲೆ ಮಾಡುವುದಕ್ಕೆ ಆರೋಪಿ ಶಿವಬಸವೇಗೌಡ ಹಲವು ಬಾರಿ ಅಭ್ಯಾಸ ಮಾಡಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

  • ಕಾರವಾರದಲ್ಲಿ ಸಂಭ್ರಮಾಚರಣೆ ಬದಲು ಪರೇಶ್ ಮೇಸ್ತ ಹೆಸರಿನಲ್ಲಿ ಬಿಜೆಪಿಯಿಂದ ಪೂಜೆ

    ಕಾರವಾರದಲ್ಲಿ ಸಂಭ್ರಮಾಚರಣೆ ಬದಲು ಪರೇಶ್ ಮೇಸ್ತ ಹೆಸರಿನಲ್ಲಿ ಬಿಜೆಪಿಯಿಂದ ಪೂಜೆ

    ಕಾರವಾರ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆಲುವು ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಂಭ್ರಮಾಚರಣೆ ಮಾಡದೇ ಬಿಜೆಪಿ ಕಾರ್ಯಕರ್ತರು ಹೊನ್ನಾವರದಲ್ಲಿ ಸಾವನ್ನಪ್ಪಿದ್ದ ಪರೇಶ್ ಮೇಸ್ತಾ ಹೆಸರಿನಲ್ಲಿ ಪೂಜೆ ಮಾಡಿದ್ದಾರೆ.

    ಇಂದು ಕಾರವಾರದ ಸುಭಾಷ್ ಸರ್ಕಲ್ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಕಾರ್ಯಕರ್ತರೊಂದಿಗೆ ಪೂಜೆ ಸಲ್ಲಿಸಿ ಮನೋಜ್ ಭಟ್ ಮಾಧ್ಯಮಗಳ ಜೊತೆ ಮಾತನಾಡಿದರು.

    ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಗಲಭೆಗಳಾಗಿದ್ದು, ಈ ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹಾಗೂ ಅಮಾಯಕ ಜನರನ್ನು ಬಂಧಿಸಲಾಗುತ್ತಿದೆ. ಈ ಕಾರಣದಿಂದ ನಾವು ವಿಜಯೋತ್ಸವ ಆಚರಿಸುವುದಿಲ್ಲ, ಬದಲಾಗಿ ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಈ ಮೂಲಕ ಎಲ್ಲ ವಿಘ್ನಗಳು ನಿವಾರಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ ಎಂದು ಕಾರವಾರದ ಬಿಜೆಪಿ ಅಧ್ಯಕ್ಷ ಮನೋಜ್ ಭಟ್ ತಿಳಿಸಿದ್ದಾರೆ.

    ಪರೇಶ್ ಮೇಸ್ತಾ ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರು ವರದಿ ನೀಡಿದ್ದರು. ಆದರೆ ಮರೇಶ್ ಮೇಸ್ತಾ ತಂದೆ ವೈದ್ಯರು ಸುಳ್ಳು ವರದಿ ನೀಡಿದ್ದಾರೆ. ಮಗನನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದ್ದರು. ಭಾರೀ ಪ್ರತಿಭಟನೆಗಳು ನಡೆದ ಬಳಿಕ ಸರ್ಕಾರ ಈ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ವಹಿಸಿದೆ.

  • ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ವ್ಯಕ್ತಿಗಳ ಬಂಧನ

    ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ವ್ಯಕ್ತಿಗಳ ಬಂಧನ

    ಬೆಂಗಳೂರು: ಹೆಣ್ಣು ಮಕ್ಕಳನ್ನು ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಶಿವಶಂಕರ್ ಅಲಿಯಾಸ್ ಗಾಂಧಿ, ಸುರಬ್ ಪಾಷಾ, ಚೋಟು ಹಾಗೂ ರಾಜೇಶ್ ಕುಮಾರ್ ಬಂಧಿತ ಅರೋಪಿಗಳು. 2017 ರ ಆಗಸ್ಟ್ ರಂದು ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಯುವತಿಯನ್ನು ಹುಡುಕಿಕೊಂಡು ಹೊರಟ ಪೊಲೀಸರಿಗೆ ಈ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ.

    ಮಾರತ್ತಹಳ್ಳಿಯಿಂದ ಪ್ರಿಯಕರನನ್ನ ಹುಡುಕಿ ಹೊರಟಿದ್ದ ಯುವತಿ ಕೋಲಾರಕ್ಕೆ ತೆರಳಿದ್ದಳು. ಈ ಕುರಿತು ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯ ಮೊಬೈಲ್ ಟವರ್ ಲೊಕೇಶನ್ ನಿಂದ ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ.

    ದೆಹಲಿಯ ಅಜ್ಮೀರ್ ಗೇಟ್ ಬಳಿ ಕಾಜಲ್ ಎಂಬಾಕೆಗೆ ಯುವತಿಯನ್ನ ಆರೋಪಿಗಳು 70 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಶಿವಶಂಕರ್ ಯುವತಿಗೆ ನಿದ್ದೆ ಮಾತ್ರೆಗಳನ್ನ ನೀಡಿ ವೇಶ್ಯಾವಾಟಿಕೆಗೆ ತಳ್ಳಿದ್ದನು. ಪ್ರಕರಣದ ವಿಚಾರಣೆ ವೇಳೆ ಆರೋಪಿ ಶಿವಶಂಕರ್ ನೂರಾರು ಯುವತಿಯರನ್ನ ನಂಬಿಸಿ ಕರೆದೊಯ್ದು ವೇಶ್ಯಾವಾಟಿಕೆಗೆ ದೂಡಿದ್ದರ ಬಗ್ಗೆ ಬಾಯಿ ಬಿಟ್ಟಿದ್ದಾನೆ.

    ಸದ್ಯ ನಾಲ್ವರು ಆರೋಪಿಗಳನ್ನ ಸೆರೆ ಹಿಡಿದಿರುವ ಪೊಲೀಸರು ಇದೀಗ ದಲ್ಲಾಳಿ ಕಾಜಲ್ ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಪತ್ನಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ಗಂಡ

    ಪತ್ನಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ಗಂಡ

    ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ಮೇಲೆ ಮಹಿಳೆಯ ಗಂಡ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಜಿಲ್ಲೆಯ ಗುಡಿಬಂಡೆ ತಾಲೂಕು ರಾಮಕೃಷ್ಣಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಾಮು ಎಂಬಾತನ ಪತ್ನಿಯ ಮೇಲೆ ಈಶ್ವರ್ ಕಣ್ಣು ಹಾಕಿದ್ದ. ನಂತರ ಶುಕ್ರವಾರ ಮಧ್ಯಾಹ್ನ ಬಲತ್ಕಾರಕ್ಕೆ ಯತ್ನಿಸಿದ್ದಾನೆ.

    ಮನೆಗೆ ಬಂದ ನಂತರ ಮಧ್ಯಾಹ್ನ ನಡೆದ ಘಟನೆ ತಿಳಿದ ರಾಮು, ಮಧ್ಯರಾತ್ರಿಯಲ್ಲಿ ತನ್ನ ಬೆಂಬಲಿಗರ ಗುಂಪು ಕಟ್ಟಿಕೊಂಡು ಈಶ್ವರ್ ಮನೆ ಹಾಗೂ ಸಂಬಂಧಿಕರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ.

    ಘಟನೆಯಲ್ಲಿ ಈಶ್ವರ್ ಸೇರಿದಂತೆ ನಾಲ್ವರು ಸಂಬಂಧಿಕರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಈ ಸಂಬಂಧ ರಾಮು ಸೇರಿದಂತೆ 5 ಮಂದಿಯನ್ನ ಬಂಧಿಸಿರುವ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ನಾನು ಮದುವೆಯಾಗೋ ಹುಡುಗನನ್ನ ಬಂಧಿಸಿದ್ದಾರೆಂದು ಯುವತಿ ದೂರು- ವೇಶ್ಯಾವಾಟಿಕೆ ದಂಧೆ ಅಂತಾರೆ ಪೊಲೀಸರು

    ನಾನು ಮದುವೆಯಾಗೋ ಹುಡುಗನನ್ನ ಬಂಧಿಸಿದ್ದಾರೆಂದು ಯುವತಿ ದೂರು- ವೇಶ್ಯಾವಾಟಿಕೆ ದಂಧೆ ಅಂತಾರೆ ಪೊಲೀಸರು

    ಬೆಳಗಾವಿ: ಪೊಲೀಸರು ತಡರಾತ್ರಿ ಮನೆಗೆ ನುಗ್ಗಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ನಾನು ಮದುವೆಯಾಗುವ ಹುಡುಗನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿ ಹಾಗೂ ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದು, ತಮಗೆ ನ್ಯಾಯ ಒದಗಿಸುವಂತೆ ಇದೀಗ ನಗರ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ.

    ಹೀಗೆ ಗುಂಪಾಗಿ ನಿಂತಿರುವ ಇವರು ಬೆಳಗಾವಿಯ ವೈಭವ ನಗರದ ನಿವಾಸಿಗಳು. ಎಲ್ಲರು ಒಂದೆ ಕುಟುಂಬಕ್ಕೆ ಸೇರಿದ್ದು ತಮಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಡರಾತ್ರಿ 12 ಗಂಟೆಗೆ ನಮ್ಮ ಮನೆಗೆ ನುಗ್ಗಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ನಂತರ ನಾನು ಮದುವೆ ಆಗುವ ಹುಡುಗನನ್ನ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ಯುವತಿ ಹಾಗೂ ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಸೋಮವಾರ ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ನಾನು ಮದುವೆಯಾಗುವ ಹುಡುಗ ವಸೀಮ್ ನನ್ನನ್ನ ಮನೆಗೆ ತಂದು ಬಿಟ್ಟ. ಸ್ವಲ್ಪ ಸಮಯ ಮನೆಯಲ್ಲೆ ಇದ್ದ. ಅದೇ ವೇಳೆ ಎಪಿಎಂಸಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ಸೇರಿ ನಾಲ್ಕು ಜನ ಪೊಲೀಸರು ತಡರಾತ್ರಿ ನಮ್ಮ ಮನೆಗೆ ನುಗ್ಗಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ನಾನು ಮದುವೆಯಾಗುವ ಹುಡುಗನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರ ವಿರುದ್ಧ ಆರೋಪಿದ್ದಾರೆ.

    ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ವಿರುದ್ಧ ಪ್ರಕರಣ ದಾಖಲಿಸಲು ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ನಾನು ವೈಶ್ಯಾವಾಟಿಕೆ ನಡೆಸುತ್ತಿದ್ದೇನೆ ಎಂದು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಮಾಜದಲ್ಲಿ ನಾನು ಬದುಕುವುದು ಹೇಗೆ? ಮೊದಲು ನನ್ನ ಮೇಲಿನ ಆರೋಪಗಳನ್ನ ಸಾಬೀತು ಮಾಡಲಿ. ಇಲ್ಲವಾದರೆ ಪೊಲೀಸ್ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ಸುಳ್ಳು ಆರೋಪ ಮಾಡುತ್ತಿರುವ ಎಪಿಎಂಸಿ ಇನ್ಸ್ ಪೆಕ್ಟರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಯುವತಿ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಎಪಿಎಂಸಿ ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ, ವೈಶಾವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೆಲವರನ್ನ ವಶಕ್ಕೆ ಪಡೆದಿದ್ದೇವೆ ಹೊರತು ಬೇರೆ ಯಾವುದೇ ಕಾರಣಕ್ಕೆ ಅಲ್ಲ ಎಂದು ಯುವತಿ ಮಾಡುತ್ತಿರುವ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಮಾಹಿತಿ ಮೇರೆಗೆ ನಿನ್ನೆ ರಾತ್ರಿ ವೈಭವ ನಗರದ ಮನೆ ಮೇಲೆ ದಾಳಿ ನಡೆಸಿದಾಗ ವೈಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

    ವಾಸಿಮ್ ಕಸ್ಟಮರ್ ಗಳನ್ನ ಕರೆದುಕೊಂಡು ಬರ್ತಿದ್ದ: ಎರಡು ತಿಂಗಳ ಹಿಂದೆ ವೈಭವ ನಗರ ಪ್ರದೇಶದಲ್ಲಿ ಬ್ಯೂಟಿಪಾರ್ಲರ್ ಹೆಸರಲ್ಲಿ ವೈಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಕೆಲವರು ದೂರು ನೀಡಿದ್ದರು. ಯುವತಿ ವಸೀಮ್ ಎಂಬ ವ್ಯಕ್ತಿಯ ಜೊತೆ ಸೇರಿ ದಂಧೆ ನಡೆಸುತ್ತಿದ್ದಳು. ಅಕ್ಕಪಕ್ಕದ ಜನರು ವಾಸಿಮ್ ಬಗ್ಗೆ ಪ್ರಶ್ನೆ ಮಾಡಿದರೆ ಇಬ್ಬರು ಮದುವೆಯಾಗುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದರು. ವಾಸಿಮ್ ಕಸ್ಟಮರ್ ಗಳನ್ನ ಹುಡುಗಿಯ ಮನೆಗೆ ಕರೆದುಕೊಂಡು ಬರುತ್ತಿದ್ದ. ಅಕ್ಕಪಕ್ಕದ ಜನರು ಕೂಡ ಇದರಿಂದ ಬೇಸತ್ತು ಹೋಗಿದ್ದರು. ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದಾಗ ದಂಧೆಯ ಪ್ರಮುಖ ಆರೋಪಿ ವಾಸಿಮ್‍ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಒಂದೆಡೆ ಯುವತಿ ನಾನು ಯಾವುದೇ ದಂಧೆ ನಡೆಸುತ್ತಿಲ್ಲ. ಪೊಲೀಸರೇ ಹೆಣೆದ ಸುಳ್ಳು ಕಥೆ ಎಂದು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದರೆ, ಇನ್ನೊಂದೆಡೆ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸಿರುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಅಂದು ರಾತ್ರಿ ನಡೆದಿದ್ದಾದ್ರೂ ಏನು ಎಂಬ ಸತ್ಯಾಸತ್ಯತೆ ತನಿಖೆ ಮುಖಾಂತರ ಹೊರ ಬರಬೇಕಾಗಿದೆ.

  • ಒಂಟಿಯಾಗಿ ಓಡಾಡೋ ಲವ್ವರ್ಸ್ ಟಾರ್ಗೆಟ್ ಮಾಡಿ ಹಣ, ಆಭರಣ ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಒಂಟಿಯಾಗಿ ಓಡಾಡೋ ಲವ್ವರ್ಸ್ ಟಾರ್ಗೆಟ್ ಮಾಡಿ ಹಣ, ಆಭರಣ ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಳಗಾವಿ: ನಿರ್ಜನ ಪ್ರದೇಶದಲ್ಲಿ ಓಡಾಡುವ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ, ಅವರಿಗೆ ಕೀಟಲೆ ಕೊಟ್ಟು, ಹಣ, ಆಭರಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬೆಳಗಾವಿಯ ಪೊಲೀಸರು ಬಂಧಿಸಿದ್ದಾರೆ.

    ಮಹ್ಮದ್, ಜಾವೀದ್, ಮೊಹ್ಮದ್, ಶಾರೂಕ್, ರಹಿಮ್ ಬಂಧಿತ ಆರೋಪಿಗಳಾಗಿದ್ದು, ಬೆಳಗಾವಿಯ ಕ್ಯಾಂಪ್ ಪೊಲೀಸರು ಈ 5 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ಆರಂಭಿಸಿದ್ದಾರೆ.

    ನಗರದ ಸಿಪಿಎಡ್ ಮೈದಾನ, ಕ್ಯಾಂಪ್ ಪ್ರದೇಶದಲ್ಲಿ ಇರುವ ಪಾರ್ಕ್ ಬಳಿ ಪ್ರೇಮಿಗಳು ಹೆಚ್ಚು ಭೇಟಿ ನೀಡುತ್ತಾರೆ. ಹೀಗೆ ಬರುವ ಜೋಡಿಗಳನ್ನು ಟಾರ್ಗೆಟ್ ಮಾಡಿ ಚಾಕು ತೋರಿಸಿ ಬೆದರಿಸಿ ಅವರಿಂದ ಹಣ, ಆಭರಣವನ್ನು ಆರೋಪಿಗಳು ವಸೂಲಿ ಮಾಡುತ್ತಿದ್ದರು.

    ಪೋಷಕರ ಕಣ್ಣು ತಪ್ಪಿಸಿ ಅಥವಾ ಮಾನಕ್ಕೆ ಹೆದರಿ ಇದುವರೆಗೂ ಪ್ರೇಮಿಗಳು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಇತ್ತೀಚಿಗೆ ಈ ಕುರಿತು ದೂರು ದಾಖಲಾಗಿದ್ದು, ಈ ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಿಸ್ತಿದ್ದಾತನ ಬಂಧನ

    ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಿಸ್ತಿದ್ದಾತನ ಬಂಧನ

    ಬೆಂಗಳೂರು: ಬಾಳೆಹಣ್ಣು, ಕಿತ್ತಳೆ ಆಯ್ತು ಇದೀಗ ಗ್ಯಾಸ್ ಸಿಲಿಂಡರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಿಲಿಂಡರಿನಲ್ಲಿ ಗಾಂಜಾ ಪ್ಯಾಕ್ ಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಇದೀಗ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಈ ಖತರ್ನಾಕ್ ಆರೋಪಿ ಸಿಲಿಂಡರ್ ನ ಕೆಳಭಾಗವನ್ನು ಕತ್ತರಿಸಿ ಅದರೊಳಗಡೆ ಗಾಂಜಾ ಇಟ್ಟು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಿತರಣೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುಮಾರು 576 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇಲ್ಲಿಯವರೆಗೆ ಒಟ್ಟು 318 ಕೇಸ್ ದಾಖಲಾಗಿವೆ. ಅಲ್ಲದೇ ಆರೋಪಿಗಳಿಂದ ಸುಮಾರು 500 ಕೆ.ಜಿ ಗಾಂಜಾ, ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ.

    ಕಳೆದ ವರ್ಷ 138 ಕೇಸ್ ಗಳು ದಾಖಲಾಗಿದ್ದು, 305 ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ. ಇನ್ನು ಬಂಧಿತರಿಂದ 275 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮೀಟರ್ ಬಡ್ಡಿದಂಧೆ!

  • ಕೊಡಲಿಯಿಂದ ಬೆದರಿಸಿ ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ

    ಕೊಡಲಿಯಿಂದ ಬೆದರಿಸಿ ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ

    ಮುಂಬೈ: ತಂದೆಯೇ ತನ್ನ 14 ವರ್ಷದ ಮಗಳನ್ನ ಕೊಡಲಿಯಿಂದ ಬೆದರಿಸಿ ನಿರಂತರ ಅತ್ಯಾಚಾರ ಮಾಡಿರುವ  ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಖಡ್ಕೋಲಿ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಸಂಬಂಧ ಪಾಲ್ಘರ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆಕೆಯ 42 ವರ್ಷದ ತಂದೆ 2014 ರಿಂದಲೂ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಹೇಳಿರುವ ಪ್ರಕಾರ, ಡಿಸೆಂಬರ್ 7 ರಂದು ಖಡ್ಕೋಲಿ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದಾನೆ. ನಂತರ ಸಂತ್ರಸ್ತೆ ಬಂದು ದೂರು ನೀಡಿದ್ದಾಳೆ. ಸಂತ್ರಸ್ತೆಯ ಪೋಷಕರು ಬೇರೆಯಾಗಿದ್ದು, ಈಕೆ ಆರೋಪಿ ತಂದೆಯ ಜೊತೆ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ.

    ಸಂತ್ರಸ್ತೆಯ ದೂರಿನ ಪ್ರಕಾರ, ಆರೋಪಿ ತಂದೆ ಅತ್ಯಾಚಾರ ಮಾಡುವ ಮೊದಲು ಕುಡುಗೋಲು ಅಥವಾ ಕೊಡಲಿಯಿಂದ ಆಕೆಯನ್ನ ಬೆದರಿಸಿ ಈ ಕೃತ್ಯವನ್ನು ಎಸಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸದ್ಯ ಆರೋಪಿ ತಂದೆಯನ್ನ ಇಂದು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಮತ್ತು ಐಪಿಸಿ ಸೆಕ್ಷನ್ 376 ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ.

  • ತಂದೆಯ ಸ್ನೇಹಿತನಿಂದಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ತಂದೆಯ ಸ್ನೇಹಿತನಿಂದಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಜೋರತ್: ತಂದೆಯ ಸ್ನೇಹಿತನೇ 6 ವರ್ಷದ ಮಗುವನ್ನು ಅತ್ಯಾಚಾರ ಮಾಡಿದ ಘಟನೆ ಅಸ್ಸಾಂನ ಜೋರತ್ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿಯ ಪೋಷಕರು ನಾ-ಅಲಿ ಬೋಲಿಯಾಗೋಹೇನ್ ಫುಕುರಿ ನಗರದಿಂದ ಔಷಧಿ ತರಲು ಹೋಗುವಾಗ ತನ್ನ ಸ್ನೇಹಿತನಿಗೆ ಮಗುವನ್ನು ನೋಡಿಕೊಳ್ಳುವುದಾಗಿ ಹೇಳಿ ಹೋಗಿದ್ದರು. ಈ ಸಮಯದಲ್ಲಿ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಪೋಷಕರು ಹಿಂತಿರುಗಿದಾಗ ಮಗು ಅಳುತ್ತಿದ್ದು, ಗುಪ್ತಾಂಗದಲ್ಲಿ ನೋವಾಗುತ್ತಿದೆ ಎಂದು ಹೇಳಿದ್ದಾಳೆ. ತಕ್ಷಣ ಪೋಷಕರು ಬಾಲಕಿಯನ್ನು ಜೋರತ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ಮಗುವಿನ ಮೇಲೆ ಅತ್ಯಾಚಾರ ನಡೆದಿರೋದು ವೈದ್ಯರು ದೃಢಪಡಿಸಿದ್ದರು.

    ಇದಾದ ಬಳಿಕ ಬಾಲಕಿಯ ತಂದೆ ಆರೋಪಿಯನ್ನು ಹುಡುಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮಾಡಿಸಿದ ಮೇಲೆ ಬಾಲಕಿ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.