Tag: arrest

  • ಅವಾಚ್ಯ ಶಬ್ಧಗಳಿಂದ ಶಿಕ್ಷಕ ನಿಂದನೆ- ತಾಯಿ ಜೊತೆ ಕಷ್ಟ ಹೇಳಿಕೊಂಡ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ

    ಅವಾಚ್ಯ ಶಬ್ಧಗಳಿಂದ ಶಿಕ್ಷಕ ನಿಂದನೆ- ತಾಯಿ ಜೊತೆ ಕಷ್ಟ ಹೇಳಿಕೊಂಡ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿರುವ ನವೋದಯ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಜೈಬುನ್ನೀಸ ಆತ್ಮಹತ್ಯೆಗೆ ಶರಣಾಗುವ ಮುನ್ನ ತಾಯಿಯೊಂದಿಗೆ ಮೊಬೈಲ್‍ನಲ್ಲಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜನವರಿ 24ರಂದು ಜೈಬುನ್ನೀಸ ವಸತಿ ಶಾಲೆಯ ಕೊಠಡಿಯಲ್ಲೇ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದ ಜೈಬುನ್ನೀಸ ಸಾವಿಗೆ ವಸತಿ ಶಾಲೆ ಶಿಕ್ಷಕ ರವಿ ಎಂಬವನೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

    ಶಿಕ್ಷಕ ರವಿ ಜೈಬುನ್ನೀಸಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ಆತ್ಮಹತ್ಯೆಗೆ ಶರಣಾಗುವ ಮುಂಚೆ ತಾಯಿಗೆ ಕರೆ ಮಾಡಿದ್ದ ಜೈಬುನ್ನೀಸ, ಅಳುತ್ತಾ ತನ್ನ ಕಷ್ಟ ಹೇಳಿಕೊಂಡಿದ್ದಳು. ಈ ವೇಳೆ ಜೈಬುನ್ನೀಸ ಮನೆಯವರು ಪೊಲೀಸರಿಗೆ ದೂರು ನೀಡುವಂತೆ ಹೇಳಿದ್ದರು. ಶಾಲೆಯ ಮರ್ಯಾದೆ ಹಾಳಾಗುತ್ತೆ ಎಂದು ಸುಮ್ಮನಿದ್ದ ವಿದ್ಯಾರ್ಥಿನಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಬಗ್ಗೆ ವಿದ್ಯಾರ್ಥಿನಿ ಮನೆಯವರು ಕೆ.ಆರ್ ಪೇಟೆ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ಶಿಕ್ಷಕ ರವಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಶಿಕ್ಷಕನ ಬಗ್ಗೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಪೋಷಕರಿಗೆ ಅಳುತ್ತಾ ತನ್ನ ಕಷ್ಟ ಹೇಳಿಕೊಂಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಿಕ್ಷಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

  • ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಗಂಡನ ಎದುರೇ ಗ್ಯಾಂಗ್ ರೇಪ್!

    ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಗಂಡನ ಎದುರೇ ಗ್ಯಾಂಗ್ ರೇಪ್!

    ಗುರ್‍ಗಾಂವ್: 22 ವರ್ಷದ ಮಹಿಳೆಯೊಬ್ಬರನ್ನು ಕಾರಿನಿಂದ ಹೊರ ಎಳೆದು ಗಂಡ ಮತ್ತು ಕುಟುಂಬ ಸದಸ್ಯರ ತಲೆಗೆ ಗನ್ ಇಟ್ಟು ಅತ್ಯಾಚಾರ ಎಸಗಿರುವ ಘಟನೆ ಭಾನುವಾರ ರಾತ್ರಿ ಹರಿಯಾಣದ ಗುರ್‍ಗಾಂವ್ ಸೆಕ್ಟರ್ 26 ರಲ್ಲಿ ನಡೆದಿದೆ. ಘಟನೆ ಸಂಬಂಧ ಈಗಾಗಲೇ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ಹಾಗೂ ಆಕೆಯ ಗಂಡ, ಕುಟುಂಬ ಸದಸ್ಯರೊಂದಿಗೆ ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳಿ ಕಾರಿನಲ್ಲಿ ವಾಪಾಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಪತಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದರು. ಈ ವೇಳೆ ಎರಡು ಕಾರುಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಹಿಳೆಯ ಗಂಡ ಮತ್ತು ಮೈದುನನನ್ನು ಥಳಿಸಿದ್ದಾರೆ.

    ಈ ವೇಳೆ ಕಾರಿನಲ್ಲಿ ಕುಳಿತಿದ್ದ ಮಹಿಳೆಯನ್ನು ಹೊರಕ್ಕೆ ಎಳೆದು ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಮಹಿಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೂವರು ಆರೋಪಿಗಳು ಗಂಡ ಹಾಗೂ ಕುಟುಂಬ ಸದಸ್ಯರ ತಲೆಗೆ ಗನ್ ಇಟ್ಟು ಕೊಲೆ ಮಾಡುವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲಿಸರಿಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಸಂತ್ರಸ್ತೆ ಪತಿ ಆರೋಪಿಗಳ ಕಾರ್ ನಂಬರ್‍ನ್ನು ತಿಳಿದುಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

    ಸಂತ್ರಸ್ತೆಯ ಪತಿ ನೀಡಿದ ದೂರಿನ ಅನ್ವಯ ನಾಲ್ವರು ಆರೊಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಘಟನೆ ನಡೆದ ಪ್ರದೇಶದ ಸ್ಥಳೀಯ ಗ್ರಾಮದ ನಿವಾಸಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ಹರಿಯಾಣದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, 10 ದಿನಗಳಲ್ಲಿ ಸುಮಾರು 10 ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಇದರ ಬೆನ್ನಲ್ಲೇ ಸಿಎಂ ಮನೋಹರ್ ಲಾಲ್ ಕಟ್ಟರ್ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಸೂಚನೆ ನೀಡಿದ್ದು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಕಾನೂನು ತರಲು ಸಿದ್ಧತೆ ನಡೆಸಿದ್ದಾರೆ.

  • ಕಸದ ಮುಸುರಿ ಚೆಲ್ಲುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

    ಕಸದ ಮುಸುರಿ ಚೆಲ್ಲುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

    ಬಾಗಲಕೋಟೆ: ಕಸದ ಮುಸುರಿ ಚೆಲ್ಲುವ ವಿಷಯಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕಟಗಿನ ಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಡವಾಗಿ ಬೆಳಕಿಗೆ ಬಂದ ಈ ಘಟನೆಯಲ್ಲಿ ಮೂಶೆಪ್ಪ ವಿಗ್ನೇಶಪ್ಪ ಗೌಡರ (60) ಮೃತಪಟ್ಟಿದ್ದಾರೆ. ಕಳೆದ ಶುಕ್ರವಾರ ರಾತ್ರಿ ಮೃತ ಮೂಶೆಪ್ಪ ಅದೇ ಗ್ರಾಮದ ಧಾಮಸಪ್ಪ ಗೌಡ ಹಾಗೂ ಚವರಪ್ಪ ಗೌಡ ನಡುವೆ ಕಸದ ಮುಸುರಿ ಚೆಲ್ಲುವ ವಿಚಾರದಲ್ಲಿ ಜಗಳವಾಗಿದೆ.

    ಜಗಳ ಕೈ ಕೈ ಮಿಲಾಯಿಸುವ ಹಂತ ತಲುಪಿ, ವಿಕೋಪಕ್ಕೆ ತಿರುಗಿದ ಪರಿಣಾಮ ಗಲಾಟೆಯಲ್ಲಿ ಮೂಶೆಪ್ಪ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅವರು ಮೃತಪಟ್ಟಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಮಸಪ್ಪ ಹಾಗೂ ಚವರಪ್ಪ ಎಂಬವರನ್ನು ಬಂಧಿಸಿ, ತನಿಖೆಗೆ ಒಳಪಡಿಸಲಾಗಿದೆ ಎಂದು ಸ್ಥಳೀಯ ಠಾಣೆಯ ಪಿಎಸ್‍ಐ ಬಸವರಾಜ ಲಮಾಣಿ ತಿಳಿಸಿದ್ದಾರೆ.

  • ದೂರು ನೀಡಲು ಹೋದ ವಕೀಲನನ್ನೇ ಪೊಲೀಸರು ಬಂಧಿಸಿದ್ರು- ಬಿಜೆಪಿಯಿಂದ ಅಹೋರಾತ್ರಿ ಧರಣಿ

    ದೂರು ನೀಡಲು ಹೋದ ವಕೀಲನನ್ನೇ ಪೊಲೀಸರು ಬಂಧಿಸಿದ್ರು- ಬಿಜೆಪಿಯಿಂದ ಅಹೋರಾತ್ರಿ ಧರಣಿ

    ಮೈಸೂರು: ದೂರು ನೀಡಲು ಹೋದ ವಕೀಲನನ್ನು ಬಂಧಿಸಿದ್ದನ್ನು ಖಂಡಿಸಿ ಮೈಸೂರಿನ ನಜರ್‍ಬಾದ್ ಠಾಣೆ ಬಳಿ ಬಿಜೆಪಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿತು.

    ನಜರ್‍ಬಾದ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ವಕೀಲ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್‍ನನ್ನು ಪೊಲೀಸರು ಬಂಧಿಸಿದ್ದರು.

    ಮುಡಾ ಖಾಲಿ ನಿವೇಶನ ಸಂಬಂಧ ಗೋಕುಲ್ ದೂರು ನೀಡಲು ತೆರಳಿದ್ದಾಗ ಇನ್ಸ್ ಪೆಕ್ಟರ್ ಶೇಖರ್ ಹಾಗೂ ಗೋಕುಲ್ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಗೋಕುಲ್ ನನ್ನು ಅರೆಸ್ಟ್ ಮಾಡಿ ಇನ್ಸ್ ಪೆಕ್ಟರ್ ಶೇಖರ್ ಸೆಲ್‍ಗೆ ಹಾಕಿದ್ದರು. ಇದನ್ನು ಖಂಡಿಸಿ ಗೋಕುಲ್ ಬಿಡುಗಡೆ ಮಾಡುವಂತೆ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಠಾಣೆ ಮುಂದೆ ಧರಣಿ ಕುಳಿತರು. ಬಳಿಕ ಬಿಜೆಪಿ ಕಾರ್ಯಕರ್ತರು ನಜರ್‍ಬಾದ್ ಪೊಲೀಸ್ ಠಾಣೆ ಮುಂಭಾಗ ರಸ್ತೆ ತಡೆ ನಡೆಸಿದ್ರು.

     

  • ಲವ್ ಜಿಹಾದ್ ಕೇಸ್ – ಮುಂಬೈ ಪೊಲೀಸರಿಂದ ಮಂಗ್ಳೂರಿನ ಬಜರಂಗದಳ ಕಾರ್ಯಕರ್ತ ಅರೆಸ್ಟ್

    ಲವ್ ಜಿಹಾದ್ ಕೇಸ್ – ಮುಂಬೈ ಪೊಲೀಸರಿಂದ ಮಂಗ್ಳೂರಿನ ಬಜರಂಗದಳ ಕಾರ್ಯಕರ್ತ ಅರೆಸ್ಟ್

    ಮಂಗಳೂರು: ಮುಂಬೈ ಯುವಕನ ಲವ್ ಜಿಹಾದ್ ಪ್ರಕರಣ ಒಂದರಲ್ಲಿ ಮುಂಬೈ ಪೊಲೀಸರು ಮಂಗಳೂರಿನ ಬಜರಂಗದಳ ಕಾರ್ಯಕರ್ತನನ್ನು ಬಂಧಿಸಿದ್ದಾರೆ.

    ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ರೇಷ್ಮಾಳನ್ನು ಮುಂಬೈ ಮೂಲದ ಮಹಮ್ಮದ್ ಇಕ್ಬಾಲ್ ಎಂಬಾತ ಅಪಹರಿಸಿ ಮುಂಬೈಗೊಯ್ದಿದ್ದು ಲವ್ ಜಿಹಾದ್ ನಡೆಸಿದ್ದಾಗಿ ಆರೋಪ ಕೇಳಿಬಂದಿತ್ತು. ಆದರೆ ಹದಿನೈದು ದಿನಗಳ ಹಿಂದೆ ರೇಷ್ಮಾಳನ್ನು ಮುಂಬೈನಲ್ಲಿ ಪತ್ತೆ ಮಾಡಿದ ಹೆತ್ತವರು ಮತ್ತು ಸಂಘಟನೆ ಸದಸ್ಯರು ಆಕೆಯನ್ನು ಮರಳಿ ಕರೆತಂದಿದ್ದರು.

    ಇದಾದ ಬಳಿಕ ರೇಷ್ಮಾಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಕ್ಕೆ ಮಹಮ್ಮದ್ ಇಕ್ಬಾಲ್ ಈ ಬಗ್ಗೆ ಅಪಹರಣ ದೂರು ದಾಖಲಿಸಿದ್ದಲ್ಲದೆ, ಮುಂಬೈ ಹೈಕೋರ್ಟ್‍ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚನೆಯಂತೆ ಮಂಗಳೂರಿಗೆ ಆಗಮಿಸಿದ ಮುಂಬೈನ ವಾಶಿ ಠಾಣೆಯ ಪೊಲೀಸರು ಬಜರಂಗದಳ ಕಾರ್ಯಕರ್ತ ಸುನಿಲ್ ಪಂಪ್ ವೆಲ್ ಎಂಬಾತನನ್ನು ಬಂಧಿಸಿದ್ದಾರೆ.

    ರೇಷ್ಮಾಳನ್ನು ಅಪಹರಿಸಿದ ಆರೋಪದಲ್ಲಿ ಬಂಧಿಸಿದ್ದು ಮುಂಬೈಗೆ ಕರೆದೊಯ್ದಿದ್ದಾರೆ. ಆದರೆ ರೇಷ್ಮಾ ಪತ್ತೆ ಸಾಧ್ಯವಾಗಿಲ್ಲ. ಆಕೆಯನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಫೇಸ್ ಬುಕ್ ಮೂಲಕ ಪರಿಚಯ ಆಗಿದ್ದ ಇಕ್ಬಾಲ್, ಪ್ರೀತಿಯ ನೆಪದಲ್ಲಿ ಮುಂಬೈಗೆ ಕರೆದೊಯ್ದು ಮದುವೆಯಾಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿತ್ತು.

    ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದೀಗ ಇಕ್ಬಾಲ್ ನೀಡಿದ ದೂರು ಸಂಘಟನೆಗೆ ಮುಳುವಾಗಿ ಪರಿಣಮಿಸಿದೆ.

  • ಆರ್. ಅಶೋಕ್‍ಗೆ ಬಂಧನ ಭೀತಿ- ಜೈಲು ಸೇರ್ತಾರಾ ಮಾಜಿ ಹೋಂ ಮಿನಿಸ್ಟರ್

    ಆರ್. ಅಶೋಕ್‍ಗೆ ಬಂಧನ ಭೀತಿ- ಜೈಲು ಸೇರ್ತಾರಾ ಮಾಜಿ ಹೋಂ ಮಿನಿಸ್ಟರ್

    ಬೆಂಗಳೂರು: ಮಾಜಿ ಗೃಹ ಸಚಿವ ಆರ್. ಅಶೋಕ್ ಅವರಿಗೆ ಬಂಧನ ಭೀತಿ ಎದುರಾಗಿದೆ.

    ಬಗರ್ ಹುಕುಂ ಜಮೀನು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಎಸಿಬಿ ದಾಖಲಿಸಿರೋ ಎಫ್‍ಐಆರ್ ರದ್ದು ಕೋರಿ ಹೈಕೋರ್ಟ್‍ಗೆ ಆರ್ ಅಶೋಕ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಲಿದೆ.

    ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಎಸಿಬಿ ಬಂಧಿಸಿದೆ. ಅಶೋಕ್ ಅವರನ್ನ ಬಂಧಿಸೋ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಅರ್ಜಿಯ ವಿಚಾರಣೆ ಮುಗಿಯುವವರೆಗು ಎಸಿಬಿ ವಿಚಾರಣೆಗೆ ತಾತ್ಕಾಲಿಕ ತಡೆ ನೀಡುವಂತೆ ಅಶೋಕ್ ಪರ ವಕೀಲರು ಮನವಿ ಮಾಡೋ ಸಾಧ್ಯತೆ ಇದೆ.


    ಒಂದು ವೇಳೆ ತನಿಖೆಗೆ ಕೋರ್ಟ್ ತಡೆ ನೀಡಿದರೆ ಆರ್.ಅಶೋಕ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗುತ್ತದೆ. ಒಂದು ವೇಳೆ ತಡೆ ನೀಡದಿದ್ದರೆ ಅಶೋಕ್ ಅವರಿಗೆ ಬಂಧನ ಭೀತಿ ಎದುರಾಗಲಿದೆ.

  • ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನ

    ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನ

    ಕೋಲಾರ: 32 ವರ್ಷದ ಇಬ್ಬರು ಮಕ್ಕಳ ತಂದೆ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರದ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರ ಮಾಸ್ತಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಸ್ವೀಕರಿಸಿರಲಿಲ್ಲ ಎನ್ನಲಾಗಿದೆ. ಸೋಮವಾರ ಬಾಲಕಿ ಹೇಳಿಕೆ ಆಧರಿಸಿ ಮಾಸ್ತಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    35 ವರ್ಷದ ಇಬ್ಬರು ಮಕ್ಕಳ ತಂದೆಯಿಂದ ಈ ಕೃತ್ಯ ನಡೆದಿದ್ದು, ಗರ್ಭಿಣಿ ಅಕ್ಕನಿಗೆ ಸಹಾಯ ಮಾಡಲು ಬಂದಿದ್ದ ಬಾಲಕಿಯ ಕೈ, ಕಾಲು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಹೇಳಿದ್ದಾಳೆ. ಅಲ್ಲದೆ ಮನೆಯಲ್ಲಿ ಹೇಳಿದರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿರುವ ಆರೋಪಿ ಕೃತ್ಯದ ನಂತರ ಪರಾರಿಯಾಗಿದ್ದ.

    ಸದ್ಯ ಮಾಸ್ತಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

  • ದೀಪಕ್ ರಾವ್ ಕೊಲೆ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

    ದೀಪಕ್ ರಾವ್ ಕೊಲೆ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

    ಮಂಗಳೂರು: ಜಿಲ್ಲೆಯ ಕಾಟಿಪಳ್ಳ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಅಬ್ದುಲ್ ಅಜೀಜ್ (42), ಅಬ್ದುಲ್ ಅಜೀಮ್ (34) ಬಂಧಿತ ಆರೋಪಿಗಳು. ಕೊಲೆಯಾದ ದಿನದಂದು ಬಂಧನ ಮಾಡಿದ್ದ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯನ್ನು ಆಧಾರಿಸಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರು ಮಂಗಳೂರಿನ ಕಾಟಿಪಳ್ಳ ನಿವಾಸಿಗಳು ಎಂದು ತಿಳಿದು ಬಂದಿದೆ.

    ಜ.3 ರಂದು ಮಂಗಳೂರಿನ ಕಾಟಿಪಳ್ಳದಲ್ಲಿ ಹಾಡಹಗಲೇ ದೀಪಕ್ ರಾವ್ ನನ್ನು ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ದಿನ ಸ್ಥಳೀಯರು ನೀಡದ ಮಾಹಿತಿ ಆಧಾರಿಸಿ ಅರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು ಎಂದು ತಿಳಿಸಿದ್ದರು. ಈ ಮಾಹಿತಿ ಆಧಾರಿಸಿ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಕಳುಹಿಸಿದ್ದರು. ಈ ವೇಳೆ ಆರೋಪಿಗಳು ರಕ್ತಸಿಕ್ತ ತಲಾವರುಗಳನ್ನು ಇಟ್ಟುಕೊಂಡು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿಯನ್ನು ಕೂಡಲೇ ಕಿನ್ನಿಗೋಳಿಯಲ್ಲಿದ್ದ ಗಸ್ತು ವಾಹನಕ್ಕೆ ತಿಳಿಸಲಾಯಿತು. ವಾಹನಗಳ ತಪಾಸಣೆ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರು ನಿಲ್ಲಿಸುವಂತೆ ಸೂಚನೆ ನೀಡಿದರೂ ನಿಲ್ಲಿಸದೇ ಹೋಗಿತ್ತು. ಸೂಚನೆ ಧಿಕ್ಕರಿಸಿ ಮುಂದಕ್ಕೆ ಹೋದಾಗ ಕೂಡಲೇ ಪೊಲೀಸರು ಅನುಮಾನಗೊಂಡು ಕಾರನ್ನು ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳ ಮೇಲೆ ಗುಂಡಿನ ದಾಳಿಯನ್ನು ಮಾಡಲಾಗಿತ್ತು. ಇದರರಲ್ಲಿ ಪಿಂಕಿ ನವಾಸ್, ರಿಜ್ವಾನ್ ಎಂಬ ಆರೋಪಿಗಳಿಗೆ ಗುಂಡೇಟು ತಗಲಿತ್ತು. ಇದನ್ನೂ ಓದಿ:  ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ಪ್ರಸ್ತುತ ಪಿಂಕಿ ನವಾಸ್, ರಿಜ್ವಾನ್ ಇಬ್ಬರು ಆರೋಪಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಮತ್ತಿಬ್ಬರು ಆರೋಪಿಗಳಾದ ನೌಶಾದ್, ಇರ್ಷಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದೆ.

  • ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿ ಬಂಧನ

    ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿ ಬಂಧನ

    ಹಾವೇರಿ: ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿಯನ್ನ ಜಿಲ್ಲೆಯ ಬ್ಯಾಡಗಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನ ಮೊಹಮ್ಮದ್ ಶಹಜಮಾಲ್ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಶಹಜಮಾಲ್ ಮೂಲತಃ ಪಶ್ಚಿಮ ಬಂಗಾಳದ ಇಸ್ಲಾಂಪುರ ನಿವಾಸಿ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಧರ್ಮ ಬೋಧನೆ ಮಾಡಿಕೊಂಡಿದ್ದನು.

    ಭಾನುವಾರ ಯುವತಿ ದರ್ಗಾದ ಬಳಿ ಇದ್ದ ಅಂಗಡಿವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಮೌಲ್ವಿ ಯುವತಿಯ ಫೋಟೋ ತೆಗೆದಿದ್ದಾನೆ. ಅದನ್ನು ಗಮನಿಸಿದ ಯುವತಿ ಮೌಲ್ವಿಯ ಮೊಬೈಲ್ ಕಸಿದುಕೊಂಡು ತಂದೆಗೆ ವಿಚಾರ ತಿಳಿಸಿದ್ದಾರೆ. ನಂತರ ತಂದೆ ಜೊತೆಗೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ.

     

  • ಮಂಗಳೂರಿನಲ್ಲಿ ಬಶೀರ್ ಹತ್ಯೆ ಪ್ರಕರಣ- ಮತ್ತಿಬ್ಬರು ಆರೋಪಿಗಳ ಬಂಧನ

    ಮಂಗಳೂರಿನಲ್ಲಿ ಬಶೀರ್ ಹತ್ಯೆ ಪ್ರಕರಣ- ಮತ್ತಿಬ್ಬರು ಆರೋಪಿಗಳ ಬಂಧನ

    ಮಂಗಳೂರು: ಅಬ್ದುಲ್ ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತರನ್ನು ಕಾಸರಗೋಡಿನ ಲತೀಶ್(24) ಹಾಗೂ ಪುಷ್ಪರಾಜ್(23) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಮುಂಚೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ ಶ್ರೀಜಿತ್ ಪಿ.ಕೆ(25), ಕಿಶನ್ ಪೂಜಾರಿ(21), ಧನುಷ್ ಪೂಜಾರಿ(22) ಹಾಗೂ ಸಂದೇಶ್ ಕೋಟ್ಯಾನ್ (22) ಎಂಬವರನ್ನ ಬಂಧಿಸಲಾಗಿತ್ತು.

    ಶ್ರೀಜಿತ್ ಕಾಸರಗೋಡಿನ ಉಪ್ಪಳದ ಮಂಗಲ್ಪಾಡಿ ನಿವಾಸಿ, ಸಂದೇಶ್ ಮಂಜೇಶ್ವರದ ಕುಂಜತ್ತೂರು ನಿವಾಸಿ, ಕಿಶನ್ ಮತ್ತು ಧನುಷ್ ಮಂಗಳೂರಿನ ಪಡೀಲ್ ನಿವಾಸಿಗಳು ಎಂದು ತಿಳಿದುಬಂದಿದೆ. ಇದೀಗ ಒಟ್ಟು 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಜ.3 ರಂದು ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರಿ ಅಬ್ದುಲ್ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.  ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಬಶೀರ್ ಮೇಲೆ 7 ಜನರ ತಂಡವೊಂದು ತಲ್ವಾರ್ ದಾಳಿ ನಡೆಸಿತ್ತು. ಪರಿಣಾಮ ಗಂಟಲು, ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಬಶೀರ್ ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಜ.7 ರಂದು  ಬಶೀರ್ ಮೃತಪಟ್ಟಿದ್ದರು.

    https://www.youtube.com/watch?v=prf8LAzRcus

    https://www.youtube.com/watch?v=nqZ3ZShX1q0

    https://www.youtube.com/watch?v=82lslIp7u0w

    https://www.youtube.com/watch?v=XIln_78eJlQ