Tag: arrest

  • ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದ ದಂಪತಿ ಅರೆಸ್ಟ್ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ

    ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದ ದಂಪತಿ ಅರೆಸ್ಟ್ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ

    ಬೆಂಗಳೂರು: ನಗರದಲ್ಲಿ ಬೀಗ ಹಾಕಿದ್ದ ಮನೆ ದೋಚುತ್ತಿದ್ದ ದಂಪತಿಯನ್ನು (Couple) ಹೆಡೆಮುರಿ ಕಟ್ಟುವಲ್ಲಿ ಬೆಂಗಳೂರು (Bengaluru) ಪೊಲೀಸರು (Police) ಯಶಸ್ವಿಯಾಗಿದ್ದಾರೆ.

    ನಾಗರಾಜ್ ಮತ್ತು ರಮ್ಯ ಬಂಧಿತ ದಂಪತಿ. ಇವರಿಬ್ಬರೂ ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದರು. ಬೀಗ ಹಾಕಿದ್ದ ಮನೆಗಳು ಇವರ ಟಾರ್ಗೆಟ್ ಆಗಿತ್ತು. ಮೈಸೂರು (Mysuru) ಮೂಲದ ರಮ್ಯ ಮತ್ತು ಬೆಂಗಳೂರಿನ (Bengaluru) ಉತ್ತರಹಳ್ಳಿ ಮೂಲದ ನಾಗರಾಜ್ ನಡುವೆ ಪರಿಚಯವಾಗಿತ್ತು. ಬಳಿಕ ಇಬ್ಬರೂ ಕೂಡ ಇನ್‍ಸ್ಟಾಗ್ರಾಮ್ ಮೂಲಕ ಚಾಟ್ ಮಾಡಿಕೊಂಡು ಮತ್ತಷ್ಟು ಸ್ನೇಹ ಬೆಳೆಸಿಕೊಂಡಿದ್ದರು. ಈ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ನಂತರ ಮದುವೆಯಾಗಿದ್ದರು. ಮದುವೆಯ ಬಳಿಕ ನಾಗರಾಜ್ ಮತ್ತು ರಮ್ಯ ಸೇರಿಕೊಂಡು ಕಳ್ಳತನ ಮಾಡಲು ಶುರು ಮಾಡಿದ್ದರು. ಇದನ್ನೂ ಓದಿ: JOIN CFI ಗೋಡೆ ಬರಹ- ಶಿರಾಳಕೊಪ್ಪದ 9ಕ್ಕೂ ಹೆಚ್ಚು ಕಡೆ ಕೃತ್ಯ

    ಇಬ್ಬರು ಪ್ರಮುಖ ರಸ್ತೆಗಳಲ್ಲಿ ತಿರುಗಿ ವಸತಿ ಸ್ಥಳಗಳಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡ್ತಿದ್ರು. ನಾಗರಾಜ್ ಕಳ್ಳತನ ಮಾಡಲು ಮನೆ ಒಳಗೆ ಹೋಗಿದ್ರೆ ರಮ್ಯ ಬಾಗಿಲಲ್ಲಿ ನಿಂತು ಕಾಯುತಿದ್ಲು. ಯಾರಾದ್ರು ಬಂದ್ರೆ ನಾಗರಾಜ್‍ಗೆ ಸಿಗ್ನಲ್ ಕೊಟ್ಟು ನಂತ್ರ ಸ್ಥಳದಿಂದ ಎಸ್ಕೇಪ್ ಆಗ್ತಿದ್ರು. ಕದ್ದ ಚಿನ್ನವನ್ನು ರಮ್ಯ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ಹೀಗೆ ಜೀವನ ನಡೆಸುತ್ತಿದ್ದ ಚಾಲಾಕಿ ಜೋಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

    ಒಂಟಿ ಮನೆಗಳ ಕಳ್ಳತನದ ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳ ಹುಡುಕಾಟದ ವೇಳೆ ಈ ದಂಪತಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಮತ್ತು ವಾಹನಗಳು ವಶಕ್ಕೆ ಪಡೆಯಲಾಗಿದ್ದು, ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಯರ್ ಸ್ಪರ್ಶಿಸಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಕಪನೂರ್ ಬಂಧನ

    ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಕಪನೂರ್ ಬಂಧನ

    ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಬಲಗೈ ಬಂಟ ಮಹಾನಗರ ಪಾಲಿಕೆ ಸದಸ್ಯ ರಾಜು ಕಪನೂರ್ (Raju Kapanur) ಅವರನ್ನು ಯಡ್ರಾಮಿ ಪೋಲಿಸರು (Police) ವಿದೇಶಿ ಕಂಟ್ರಿಮೆಡ್ ಪಿಸ್ತೂಲ್‌ ಖರೀದಿ ಆರೋಪದ ಮೇಲೆ ಶನಿವಾರ ಬಂಧಿಸಿದ್ದಾರೆ.

    ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುಲಿಂಗಪ್ಪ ಎಂಬಾತನಿಂದ ರಾಜು ಕಪನೂರ್ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಕಂಟ್ರಿಮೆಡ್ ಪಿಸ್ತೂಲ್‌, ಮತ್ತು 30 ಜೀವಂತ ಗುಂಡುಗಳು ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಗುರುಲಿಂಗಪ್ಪ ಪೋಲಿಸರ ಮುಂದೆ ನೀಡಿದ್ದ ವೀಡಿಯೋ ಹೇಳಿಕೆಯಲ್ಲಿ ಕಪನೂರ್ ಹೆಸರು ಉಲ್ಲೇಖಿಸಿದ್ದ. ಇದರಿಂದ ಪೋಲಿಸರು ರಾಜು ಕಪನೂರ್‌ಗೆ ಎರಡು ಬಾರಿ ನೋಟಿಸ್ ನೀಡಿದ್ದರು. ಆದರೆ ನೋಟಿಸ್‌ಗೆ ಕ್ಯಾರೇ ಎನ್ನದ ರಾಜು ಕಪನೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಿರಿಕಿರಿ ಎಂದು ರೋಗಿಗೆ ಹಾಕಿದ್ದ ವೆಂಟಿಲೇಟರ್‌ನ್ನೇ ಆಫ್ ಮಾಡಿದ ವೃದ್ಧೆ

    ನನ್ನನ್ನು ಕೊಲೆ ಮಾಡಲು ರಾಜು ಕಪನೂರ್ ಗನ್ ಖರೀದಿ ಮಾಡಿದ್ದ ಎಂದು ಶುಕ್ರವಾರ ಬಿಜೆಪಿ (BJP) ಮುಖಂಡ, ಉದ್ಯಮಿ ಮಣಿಕಂಠ ರಾಠೋಡ ಪತ್ರಿಕಾಗೋಷ್ಠಿಯಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದರು. ಇದೀಗ ವೀಡಿಯೋ ರಿಲೀಸ್ ಆದ ಬಳಿಕ ರಾಜು ಕಪನೂರ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ತಂದೆ, ತಾಯಿಯ ಪಾದ ಪೂಜೆ ಮಾಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು

    Live Tv
    [brid partner=56869869 player=32851 video=960834 autoplay=true]

  • ಅಳುವುದನ್ನು ನೋಡಿ ಕೋಪಗೊಂಡ ತಂದೆ – 3 ತಿಂಗಳ ಮಗುವನ್ನೇ ನೆಲಕ್ಕೆ ಎಸೆದು ಕೊಂದ

    ಅಳುವುದನ್ನು ನೋಡಿ ಕೋಪಗೊಂಡ ತಂದೆ – 3 ತಿಂಗಳ ಮಗುವನ್ನೇ ನೆಲಕ್ಕೆ ಎಸೆದು ಕೊಂದ

    ಅಮರಾವತಿ: ಪಾಪಿ ತಂದೆಯೊಬ್ಬ (Father) ಮಗು (Son) ಅಳುತ್ತಿದ್ದನ್ನು ನೋಡಿ ಕೋಪಗೊಂಡು ಅದನ್ನು ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ತಿರುಪತಿಯ ಶ್ರೀಕಾಳಹಸ್ತಿ ಶುಕಬ್ರಹ್ಮ ಆಶ್ರಮದ ಬಳಿಯ ವಾಟರ್ ಹೌಸ್ ಕಾಲೋನಿಯಲ್ಲಿ ನಡೆದಿದೆ.

    ಅನಿಲ್ ತನ್ನ 3 ತಿಂಗಳ ಮಗುವನ್ನು ಕೊಲೆ ಮಾಡಿದ ಆರೋಪಿ. ಈತನಿಗೆ ಹಾಗೂ ಈತನ ಪತ್ನಿ ಸ್ವಾತಿ ಜಗಳ ನಡೆದಿತ್ತು. ಅದೇ ವೇಳೆ ಮಗುವಿಗೂ ಜ್ವರ ಬಂದಿದ್ದರಿಂದ ಒಂದೇ ಸಮನೆ ಅಳುತ್ತಿತ್ತು. ಇದರಿಂದಾಗಿ ಕೋಪಗೊಂಡ ಅನಿಲ್ ಮಗುವನ್ನು ನೆಲಕ್ಕೆ ಎಸೆದಿದ್ದಾನೆ.

    ನಾಲ್ಕು ದಿನದಿಂದ ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದ ಮಗುವು ಅಸ್ವಸ್ಥಗೊಂಡಿತ್ತು. ಅಷ್ಟೇ ಅಲ್ಲದೇ ನೆಲಕ್ಕೆ ಆ ಮಗುವನ್ನು ಎಸೆದಿದ್ದರಿಂದ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದಿತ್ತು. ಇದರಿಂದಾಗಿ ಕೂಡಲೇ ಆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಅರೆಬೆತ್ತಲೆ ನೃತ್ಯ – ಕಾಂಗ್ರೆಸ್ ಸದಸ್ಯರ ನಂಗಾನಾಚ್

    ಸ್ಥಳೀಯರು ಘಟನೆಗೆ ಸಂಬಂಧಿಸಿ ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಅನಿಲ್ ಅನ್ನು ಮಗುವನ್ನು ಕೊಂದ ಆರೋಪದ ಮೇರೆಗೆ ಬಂಧಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – ನಾಲ್ವರು ಮಾವೋವಾದಿಗಳ ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ

    ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ

    ಲಕ್ನೋ: ಪತಿಯೊಬ್ಬ (Husband) ಪತ್ನಿಯ (Wife) ಶವವನ್ನು ತುಂಡರಿಸಿ ದೂರದ ಸ್ಥಳದಲ್ಲಿ ವಿಲೇವಾರಿ ಮಾಡಿರುವ ಪ್ರಕರಣ ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ.

    ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ರಾಮ್‌ಪುರ ಕಲಾನ್ ಪ್ರದೇಶದ ನಿವಾಸಿ ಜ್ಯೋತಿ ಅಲಿಯಾಸ್ ಸ್ನೇಹಾ ಎಂಬಾಕೆ ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ ಪಾಸಿ ಬಂಧಿತ (Arrest) ವ್ಯಕ್ತಿಗಳು.

    crime

    ಪಂಕಜ್ ಹತ್ತು ವರ್ಷದ ಹಿಂದೆ ಸ್ನೇಹಾಳನ್ನು ಮದುವೆಯಾಗಿದ್ದ. ಸ್ನೇಹಾ ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಹಲವು ದಿನಗಳಿಂದ ಆಕೆಗೆ ಬೇರೆಯವರ ಜೊತೆಗೂ ಸಂಬಂಧವಿದ್ದು, ಆಕೆ ಯಾರದ್ದೋ ಮನೆಯಲ್ಲಿ ಇರುತ್ತಿದ್ದಳು. ಇದರಿಂದಾಗಿ ಪ್ರತಿನಿತ್ಯ ಸ್ನೇಹಾ ಹಾಗೂ ಪಂಕಜ್ ಮಧ್ಯೆ ಜಗಳವಾಗುತ್ತಿತ್ತು. ಇದರಿಂದಾಗಿ ಪಂಕಜ್ ಸ್ನೇಹಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

    ಇದಾದ ಬಳಿಕ ಯೋಜನೆಯನ್ನು ರೂಪಿಸಿ ತನ್ನ ಸ್ನೇಹಿತ ದುರ್ಜನ್ ಸಹಾಯದಿಂದ ಪತ್ನಿ ಸ್ನೇಹಾಳನ್ನು ಕೊಲೆ ಮಾಡಿದ್ದಾನೆ. ಅದಾದ ಬಳಿಕ ಯಾರಿಗೂ ಗೊತ್ತಾಗದಂತೆ ಸ್ನೇಹಾಳ ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದಾನೆ. ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ

    ಘಟನೆಗೆ ಸಂಬಂಧಿಸಿ ಸೀತಾಪುರ ಪೊಲೀಸರು ನವೆಂಬರ್ 8 ರಂದು ಗುಲಾರಿಹಾ ಪ್ರದೇಶದಿಂದ ಸ್ನೇಹಾಳ ದೇಹದ ಭಾಗಗಳನ್ನು ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮತ್ತೆ ಧರ್ಮ ದಂಗಲ್ ಶುರು- ಕುಕ್ಕೆಯಲ್ಲಿ ಷಷ್ಠಿ ವೇಳೆ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ

    Live Tv
    [brid partner=56869869 player=32851 video=960834 autoplay=true]

  • ದೆಹಲಿಯಲ್ಲಿ ಮತ್ತೆ ಬರ್ಬರ ಕೊಲೆ- ನಾಲ್ವರು ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ ಮಾದಕ ವ್ಯಸನಿ

    ದೆಹಲಿಯಲ್ಲಿ ಮತ್ತೆ ಬರ್ಬರ ಕೊಲೆ- ನಾಲ್ವರು ಕುಟುಂಬಸ್ಥರನ್ನು ಕತ್ತು ಸೀಳಿ ಕೊಲೆಗೈದ ಮಾದಕ ವ್ಯಸನಿ

    ನವದೆಹಲಿ: ಮಾದಕವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನೇ (Family) ಕೊಂದ ಘೋರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (NewDelhi) ನಡೆದಿದೆ.

    ಕೇಶವ್ (25) ಬಂಧಿತ ಆರೋಪಿ. ಕೇಶವ್ ಒಂದು ತಿಂಗಳ ಹಿಂದೆ ಗುರ್ಗಾಂವ್‍ನಲ್ಲಿ ಕೆಲಸ ಬಿಟ್ಟಿದ್ದ. ಈ ಹಿನ್ನೆಲೆಯಿಂದ ದೀಪಾವಳಿಯಿಂದ ನಿರುದ್ಯೋಗಿಯಾಗಿದ್ದ. ಕೇಶವ್‍ನ ಅತಿಯಾದ ಮದ್ಯವಸನದಿಂದಾಗಿ ಆತನ ಕುಟುಂಬಸ್ಥರು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಅದಾದ ಬಳಿಕ ಮರಳಿ ನೈಋತ್ಯ ದೆಹಲಿಯ ಪಾಲಮ್‍ನಲ್ಲಿರುವ ಮನೆಗೆ ಬಂದಿದ್ದ. ಆದರೆ ಮಂಗಳವಾರ ಆತ ಡ್ರಗ್ಸ್‌ನ ಅಮಲಿನಲ್ಲಿ ತನ್ನ ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ್ (50), ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ (18)ಗೆ ಅನೇಕ ಬಾರಿ ಚಾಕುವಿನಿಂದ ಕತ್ತನ್ನು ಸೀಳಿ ತನ್ನ ವಿಕೃತಿಯನ್ನು ಮರೆದಿದ್ದಾನೆ.

    ಈ ವೇಳೆ ಮನೆಯಲ್ಲಿದ್ದವರ ಕಿರುಚಾಟ ಕೇಳಿದ ಅದೇ ಕಟ್ಟಡದಲ್ಲಿದ್ದ ನೆರೆಹೊರೆಯವರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕೇಶವ್ ಕುಟುಂಬಸ್ಥರ ಜೀವ ಹೊರಟು ಹೋಗಿದ್ದು, ಇಡೀ ಮನೆಯು ರಕ್ತಸಿಕ್ತವಾಗಿತ್ತು. ಕೇಶವ್‍ನ ತಂದೆ- ತಾಯಿಯ ಶವವು ಸ್ನಾನಗೃಹದಲ್ಲಿ ಮತ್ತು ಆತನ ಸಹೋದರಿ ಮತ್ತು ಅಜ್ಜಿಯ ಮೃತದೇಹಗಳು ಇತರ ಕೊಠಡಿಗಳಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಲಿ : ಜೆಡಿಎಸ್ ಒತ್ತಾಯ

    ಪೊಲೀಸರು ಸ್ಥಳಕ್ಕಾಗಮಿಸಿದ್ದನ್ನು ಗಮನಿಸಿದ ಕೇಶವ್ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಸ್ಥಳೀಯರು ಹಾಗೂ ಸಂಬಂಧಿಕರು ಆತನನ್ನು ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿ ಅರೆಸ್ಟ್

    ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿ ಅರೆಸ್ಟ್

    ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋಗಳನ್ನು ಚಿತ್ರೀಕರಣ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಶುಭಂ ಎಂ ಆಜಾದ್ ಎಂದು ಗುರುತಿಸಲಾಗಿದೆ. ಈತ ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ.

    ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ ಕೃತ್ಯ ಎಸಗುತ್ತಿದ್ದ. ಹೀಗೆ 1,200 ಕ್ಕೂ ಅಧಿಕ ವೀಡಿಯೋ (Girls Video) ಹಾಗೂ ಫೋಟೋ (Photo) ಚಿತ್ರೀಕರಿಸಿದ್ದಾನೆ. ಸ್ನೇಹಿತೆಯರು ಜೊತೆಯಲ್ಲಿದ್ದಾಗಲೂ ಅವರ ಅರೆನಗ್ನ ಫೋಟೋ ತೆಗೆದಿದ್ದ.

    ಇತ್ತೀಚೆಗೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಲು ಹೋದಾಗ ಯುವತಿಯರು ಚೀರಾಡಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದ. ಬಳಿಕ ಸಿಸಿಟಿವಿ (CCTV) ಪರಿಶೀಲನೆ ವೇಳೆ ಶುಭಂ ಕೃತ್ಯ ಬೆಳಕಿಗೆ ಬಂದಿದೆ. ಈ ಹಿಂದೆಯೂ ಇದೇ ರೀತಿ ಮಾಡಿ ಕ್ಷಮೆಯಾಚನೆ ಬರೆದುಕೊಟ್ಟಿದ್ದ. ಇದನ್ನೂ ಓದಿ: ಅತ್ಯಾಚಾರಿ, ಕೊಲೆಗಡುಕರ ತಂದೆ ತಾಯಿಗಳನ್ನು ಒಂದೆರಡು ವರ್ಷ ಶಿಕ್ಷಿಸಿ: ಬಿಜೆಪಿ MLA ಆಕಾಶ್

    ಇದೀಗ ಮತ್ತೆ ತನ್ನ ಚಾಳಿ ಮುಂದುವರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನ ಮೊಬೈಲ್ ನಲ್ಲಿ 1,200 ಕ್ಕೂ ಅಧಿಕ ವೀಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ. ಆರೋಪಿ ಬಳಿ ಮತ್ತೊಂದು ಮೊಬೈಲ್ ಇದ್ದು ಅದರಲ್ಲಿ ಮತ್ತಷ್ಟು ವೀಡಿಯೋಗಳು ಪತ್ತೆಯಾಗುವ ಸಾಧ್ಯತೆ ಇದೆ.

    ಸದ್ಯ ಗಿರಿನಗರ ಪೊಲೀಸ್ ಠಾಣೆ (Girinagar Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಪಾಕಿಸ್ತಾನ್ ಜಿಂದಾಬಾದ್’ ಎಂದವರನ್ನು ಬೆಂಬಲಿಸಿದ ನಟ ಚೇತನ್: ವಿವಾದಾತ್ಮಕ ಪೋಸ್ಟ್

    ‘ಪಾಕಿಸ್ತಾನ್ ಜಿಂದಾಬಾದ್’ ಎಂದವರನ್ನು ಬೆಂಬಲಿಸಿದ ನಟ ಚೇತನ್: ವಿವಾದಾತ್ಮಕ ಪೋಸ್ಟ್

    ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವುದರ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಕಾಲೇಜು ಫೆಸ್ಟ್ ಅಲ್ಲಿ ಈ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡ ನಡೆದಿದೆ ಎಂದು ಹೇಳಲಾಗಿತ್ತು. ಈ ಕುರಿತು ನಟ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ಪರ ಧ್ವನಿ ಎತ್ತಿದ್ದಾರೆ.

    ಈ ಕುರಿತು ಚೇತನ್ ಟ್ವಿಟ್ ಮಾಡಿದ್ದು, ‘ನಿನ್ನೆ ನಡೆದ ಕಾಲೇಜು ಫೇಸ್ಟ್ ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ. ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿದ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದೆ. ಇದು ಅಸಂಬಂಧ ಮತ್ತು ಅಪಾಯಕಾರಿ’ ಎಂದು ಅವರು ಟ್ವಿಟ್ ಮಾಡಿದ್ದಾರೆ.

    ಅಲ್ಲದೇ,  ‘ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು ಶತ್ರುಗಳಲ್ಲ. ವಿದ್ಯಾರ್ಥಿಗಳನ್ನು ಥಳಿಸಿ ಬೆದರಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಅಪಾಯಕಾರಿ. ಪಾಕಿಸ್ತಾನ ಕ್ಕೆ ಜೈಕಾರ ಹಾಕೋದು ವಾಕ್ ಸ್ವಾತಂತ್ರ್ಯ’ ಎಂದು ಚೇತನ್ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಕೂಡ ಆಗಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕರೆದ ದೇಶದ್ರೋಹಿಗಳ ಜೊತೆ ಚೇತನ್ ನಿಂತಿದ್ದಾರೆ ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಚೇತನ್ ಬರೆದ ಪ್ರತಿ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ವಿವಾದಕ್ಕೂ ಕಾರಣವಾಗುತ್ತಿವೆ. ಕೆಲವರು ಅವರ ನಡೆಯನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಟ್ವಿಟ್ ಇನ್ನ್ಯಾವ ವಿವಾದದ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಕುರಿ ಕಾಯಲು ಬಂದಿದ್ದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಕತ್ತು ಹಿಸುಕಿ ಕೊಂದ ಮಾಜಿ ಪ್ರಿಯಕರ

    ಕುರಿ ಕಾಯಲು ಬಂದಿದ್ದ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಕತ್ತು ಹಿಸುಕಿ ಕೊಂದ ಮಾಜಿ ಪ್ರಿಯಕರ

    ಚಿಕ್ಕಬಳ್ಳಾಪುರ: ಮಾಜಿ ಪ್ರಿಯಕರನೊರ್ವ (ExLover) ಮಹಿಳೆಯ (Woman) ಬಾಯಿಗೆ ಆಕೆಯ ಸೀರೆಯನ್ನೇ ತುರುಕಿ ಕತ್ತು ಹಿಸುಕಿ ಆಕೆಯ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚೇಳೂರು ತಾಲೂಕಿನ ಗೊಳ್ಳಪಲ್ಲಿಯಲ್ಲಿ ನಡೆದಿದೆ.

    ಗ್ರಾಮದ ನರಸಮ್ಮ (40) ಕೊಲೆಯಾದ ಮಹಿಳೆ. ಇದೇ ಗ್ರಾಮದ ವೆಂಕಟೇಶ್ ಎಂಬಾತ ಕೊಲೆ ಮಾಡಿದ ವ್ಯಕ್ತಿ. ನರಸಮ್ಮ ಕೊಲೆಗಾರ ವೆಂಕಟೇಶ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ ಇತ್ತೀಚೆಗೆ ವೆಂಕಟೇಶ್‍ನನ್ನು ಬಿಟ್ಟು ಬೇರೊಬ್ಬನ ಜೊತೆ ಸಂಬಂಧ ಬೆಳೆಸಿದ್ದಳು. ಇದೇ ವಿಚಾರವಾಗಿ ಕುರಿ ಮೇಯಿಸಲು ಹೋಗಿದ್ದ ನರಸಮ್ಮಳ ಜೊತೆ ಜಗಳಕ್ಕಿಳಿದಿದ್ದ ವೆಂಕಟೇಶ್, ಆಕೆಯ ಜೊತೆ ವಾಗ್ವಾದ ನಡೆದಿದೆ. ಇದನ್ನೂ ಓದಿ:  ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ- ರಾಮ್‍ದಾಸ್ ಪರೋಕ್ಷ ಆರೋಪ

    POLICE JEEP

    ಬೆಟ್ಟದ ಬಳಿಯ ಪೊದೆಯೊಂದರಲ್ಗಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇನ್ನೂ ಕುರಿ ಕಾಯಲು ಹೋಗಿದ್ದ ಮಹಿಳೆ ಮನೆಗೆ ಬರದಿದ್ದಾಗ ಹುಡಕಾಟ ನಡೆಸಿದಾಗ ನರಸಮ್ಮ ಕೊಲೆಯಾಗಿರೋದು ಬಯಲಿಗೆ ಬಂದಿದೆ. ಸದ್ಯ ಆರೋಪಿ ವೆಂಕಟೇಶ್ ನನ್ನ ಚೇಳೂರು ಪೊಲೀಸರು (Police) ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ

    Live Tv
    [brid partner=56869869 player=32851 video=960834 autoplay=true]

  • ASI ಮನೆಯಲ್ಲಿ ದರೋಡೆ- ಮೂವರು ಆರೋಪಿಗಳ ಅರೆಸ್ಟ್

    ASI ಮನೆಯಲ್ಲಿ ದರೋಡೆ- ಮೂವರು ಆರೋಪಿಗಳ ಅರೆಸ್ಟ್

    ಚಿಕ್ಕಬಳ್ಳಾಪುರ: ತಾಲೂಕಿನ ಪೇರೇಸಂದ್ರ ಗ್ರಾಮದ ಎಎಸ್‌ಐ (ASI) ನಾರಾಯಣಸ್ವಾಮಿ ಮನೆಯಲ್ಲಿ ದರೋಡೆ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ (Arrest) ಯಶಸ್ವಿಯಾಗಿದ್ದಾರೆ.

    ಉತ್ತರ ಪ್ರದೇಶದ ಅರೀಫ್(35) ಹಾಗೂ ಜಮಷೀದ್ ಖಾನ್(27) ಸೇರಿದಂತೆ ಆಂಧ್ರಪ್ರದೇಶದ ಪಟಾಣ್ ಯಾರಿಸ್ ಖಾನ್(30) ಬಂಧಿತರು. ನ. 8ರಂದು ಬಾಗೇಪಲ್ಲಿ ಎಎಸ್‌ಐ ನಾರಾಯಣಸ್ವಾಮಿ ಮನೆ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ, ಮನೆಯಲ್ಲಿದ್ದ ನಗನಾಣ್ಯ ಲೂಟಿ ಮಾಡಿದ್ದರು. ಅಡ್ಡ ಬಂದಿದ್ದ ಮನೆ ಮಾಲೀಕ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು. ಜೊತೆಗ ನಾರಾಯಣಸ್ವಾಮಿ ಪುತ್ರ ಶರತ್ ಕಾಲಿಗೆ ಗುಂಡೇಟು ಹಾರಿಸಿದ್ದರು.

    ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಸದ್ಯ ಮೂವರನ್ನ ಬಂಧಿಸಿದ್ದು, ಬಂಧಿತರಿಂದ ಮೂರು ನಾಡ ಪಿಸ್ತೂಲ್‌ಗಳು, ಖಾಲಿ ಮ್ಯಾಗ್ಜಿನ್ ಹೊಂದಿರುವ ಒಂದು ಪಿಸ್ತೂಲ್, 3 ಲಕ್ಷದ 41000 ನಗದು, ಕೃತ್ಯಕ್ಕೆ ಬಳಿಸಿದ ಕಾರು, 71 ಗ್ರಾಂ ತೂಕದ ಮಾಂಗಲ್ಯ ಸರ, 21 ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ

    POLICE JEEP

    ಪ್ರಮುಖ ಆರೋಪಿಗಳು ಉತ್ತರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದು, ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನೂ ಘಟನೆಯಲ್ಲಿ ಗಾಯಾಗೊಂಡಿದ್ದ ಎಎಸ್‌ಐ ನಾರಾಯಣಸ್ವಾಮಿ ಹಾಗೂ ಆತನ ಪುತ್ರ ಶರತ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಶ್ವಾರೋಹಣ ಸ್ಪರ್ಧೆಗೆ ಅಭ್ಯಾಸ ನಡೆಸುತ್ತಿದ್ದ ಬಿಎಸ್‌ಎಫ್ ಯೋಧನಿಗೆ ಕುದುರೆ ತುಳಿದು ಸಾವು

    Live Tv
    [brid partner=56869869 player=32851 video=960834 autoplay=true]

  • ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದಲ್ಲೇ ಸರಗಳ್ಳತನ- ಇಬ್ಬರು ಅರೆಸ್ಟ್

    ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆ ಪಕ್ಕದಲ್ಲೇ ಸರಗಳ್ಳತನ- ಇಬ್ಬರು ಅರೆಸ್ಟ್

    ಬೆಂಗಳೂರು: ಪೊಲೀಸರಿಗೆ ಚಾಲೆಂಜ್ ಹಾಕಿ ಠಾಣೆಯ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡಿರುವ ಆರೋಪಿಗಳಿಬ್ಬರನ್ನು ಇದೀಗ ಬಂಧಿಸಲಾಗಿದೆ.

    ಹರೀಶ್ ಹಾಗೂ ಸುರೇಶ್‍ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಇವರು ಒಂದು ವರ್ಷದಿಂದ ಗಿರಿನಗರ (Girinagar) ಹಾಗೂ ಸಿ.ಕೆ ಅಚ್ಚುಕಟ್ಟು ಸೇರಿ ಹಲವು ಠಾಣೆಗಳ ಪಕ್ಕದ ರಸ್ತೆಯಲ್ಲೇ ಸರಗಳ್ಳತನ ಮಾಡುತ್ತಿದ್ದರು. ಪ್ರತಿಯೊಂದು ತಿಂಗಳು ಒಂದೊಂದು ಠಾಣೆಯ ಪಕ್ಕದ ರಸ್ತೆಯಲ್ಲಿ ಕಳ್ಳತನ ಎಸಗುತ್ತಿದ್ದರು. ಹೀಗೆ ಮಾಡುತ್ತಾ ಒಂದು ವರ್ಷದಿಂದಲೂ ಪೊಲೀಸರಿಗೆ ಸಿಗದೆ ನಾಪತ್ತೆ ಆಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸರು (Girinagar Police) ಸರಗಳ್ಳರ ಬಂಧನಕ್ಕೆ ವಿಶೇಷ ತಂಡಗಳು ರಚನೆ ಮಾಡಿದ್ದರು. ಇದನ್ನೂ ಓದಿ: ದೇಗುಲ ಮಠದ ಮೂವರು ವಿದ್ಯಾರ್ಥಿಗಳು ನಾಪತ್ತೆ‌- ದೂರು ನೀಡಿದ ವಾರ್ಡನ್

    ಒಮ್ಮೆ ಸರಗಳ್ಳತನ ಮಾಡಿದ್ರೆ ಇಡೀ ತಿಂಗಳು ಎದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಸುರೇಶ್ ಝೋಮೋಟೋ ಬಾಯ್ ಆಗಿ ಕೆಲಸ ಮಾಡಿದ್ರೆ, ಹರೀಶ್ ವಿದ್ಯಾರ್ಥಿಯಾಗಿದ್ದ. ಒಂದು ಬಾರಿಯೂ ಬಂಧನವಾಗದೆ ಆರೋಪಿಗಳು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದರು. ಐಷಾರಾಮಿ ಜೀವನ ನಡೆಸಲು ಆರೋಪಿಗಳು ಸರಗಳ್ಳತನ ಮಾಡ್ತಿದ್ದರು. ವೀಕ್ ಎಂಡ್ ನಲ್ಲಿ ಮೋಜು ಮಸ್ತಿ ಮಾಡಲು ಪಬ್ ಗೆ ಹೋಗ್ತಿದ್ದರು.

    ಸದ್ಯ ಸಿಸಿಟಿವಿ ಹಾಗೂ ಕೆಲ ಟೆಕ್ನಿಕಲ್ ಎವಿಡೆನ್ಸ್ ನಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಗಿರಿನಗರ ಪೊಲೀಸರಿಂದ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]