Tag: arrest

  • ಬಿಬಿಎಂಪಿ ಕಚೇರಿಗೆ ನುಗ್ಗಿ ಬೆಂಕಿ ಹಾಕ್ತೀನಿ ಎಂದಿದ್ದ ಪೆಟ್ರೋಲ್ ನಾರಾಯಣ ಅರೆಸ್ಟ್

    ಬಿಬಿಎಂಪಿ ಕಚೇರಿಗೆ ನುಗ್ಗಿ ಬೆಂಕಿ ಹಾಕ್ತೀನಿ ಎಂದಿದ್ದ ಪೆಟ್ರೋಲ್ ನಾರಾಯಣ ಅರೆಸ್ಟ್

    ಬೆಂಗಳೂರು: ಬಿಬಿಎಂಪಿ ಕಚೇರಿಗೆ ನುಗ್ಗಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದಾಗಿ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಕೆಆರ್ ಪುರಂನ ಕಾಂಗ್ರೆಸ್ ಶಾಸಕ ಭೈರತಿ ಭಸವರಾಜ್ ಅವರ ಗೂಂಡಾ ಬಂಟ ನಾರಾಯಣ ಸ್ವಾಮಿಯನ್ನು ಕೊನೆಗೂ ಬಂಧಿಸಲಾಗಿದೆ.

    ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇದೀಗ ಭೈರತಿ ಬಸವರಾಜ್ ಚೇಲಾನನ್ನು ಬಂಧಿಸಿದ್ದಾರೆ. ಘಟನೆಯ ಬಳಿಕ ಪರಾರಿಯಾಗಿದ್ದ ನಾರಾಯಣಸ್ವಾಮಿ ತನ್ನ ಪ್ರೇಯಸಿಯ ಮನೆಯಲ್ಲಿ ಅವಿತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಶಾಸಕ ಭೈರತಿ ಬಸವರಾಜ್ ಬಂಟ ನಾರಾಯಣ ಸ್ವಾಮಿ ಅಮಾನತು

    ಏನಿದು ಪ್ರಕರಣ?: ಕೆಆರ್ ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನೂ ಆಗಿರುವ ನಾರಾಯಣಸ್ವಾಮಿ ಎನ್‍ಆರೈ ಬಡಾವಣೆಯ ಜಮೀನು ವಿಚಾರದಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪಗೆ ಒತ್ತಡ ಹಾಕಿದ್ದ. ಜಮೀನು ವ್ಯಾಜ್ಯ ಕೋರ್ಟ್‍ನಲ್ಲಿದೆ, ಅಕ್ರಮವಾಗಿ ಖಾತೆ ಮಾಡಿಕೊಡಲ್ಲ ಎಂದು ಚೆಂಗಲ್ ರಾಯಪ್ಪ ಹೇಳಿದ್ದರು. ಹೀಗಾಗಿ ಕಳೆದ ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಹೊರಮಾವು ನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿದ ನಾರಾಯಣಸ್ವಾಮಿ ಚೆಂಗಲ್ ರಾಯಪ್ಪ ಅವರ ಮುಂದೆಯೇ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಖಾತೆ ಮಾಡಿಕೊಡದಿದ್ರೆ ಕಚೇರಿಯಲ್ಲಿರುವ ದಾಖಲೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಘಟನೆಯ ಬಳಿಕ ತನ್ನ ಕೃತ್ಯಕ್ಕೆ ಸ್ಪಷ್ಟನೆ ಕೂಡ ನೀಡಿದ್ದ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ – ಸುದ್ದಿ ಪ್ರಸಾರ ಮಾಡಿ: ತನ್ನ ಕೃತ್ಯವನ್ನು ಸಮರ್ಥಿಸಿಕೊಂಡ ನಾರಾಯಣ ಸ್ವಾಮಿ

    ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಬಂಟ ಬೆಂಗಳೂರು ಜಲಮಂಡಳಿ ಸದಸ್ಯನಾಗಿರುವ ನಾರಾಯಣಸ್ವಾಮಿಯನ್ನು ಪಕ್ಷದಿಂದ ಅಮಾನತು ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಶಾಸಕ ಭೈರತಿ ಬಸವರಾಜ್ ಬಂಟನ ಗೂಂಡಾಗಿರಿ- ಸರ್ಕಾರಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ತೀನೆಂದು ಬೆದರಿಕೆ

    https://www.youtube.com/watch?v=1hoUCWe-r14

    https://www.youtube.com/watch?v=NiJf6PUT3Yo

  • ಫೇಸ್‍ ಬುಕ್‍ನಲ್ಲಿ 20 ಮಹಿಳೆಯರಿಗೆ ಮದ್ವೆಯಾಗ್ತೀನೆಂದು ನಂಬಿಸಿ ಹಣ, ಆಭರಣ ದೋಚಿದ್ದ ವ್ಯಕ್ತಿ ಅರೆಸ್ಟ್!

    ಫೇಸ್‍ ಬುಕ್‍ನಲ್ಲಿ 20 ಮಹಿಳೆಯರಿಗೆ ಮದ್ವೆಯಾಗ್ತೀನೆಂದು ನಂಬಿಸಿ ಹಣ, ಆಭರಣ ದೋಚಿದ್ದ ವ್ಯಕ್ತಿ ಅರೆಸ್ಟ್!

    ಹೈದರಾಬಾದ್: ಫೇಸ್ ಬುಕ್‍ನಲ್ಲಿ 20 ಮಹಿಳೆಯರಿಗೆ ಮೋಸ ಮಾಡಿದ ವ್ಯಕ್ತಿಯನ್ನು ರಾಚಕೊಂಡ ಪೊಲೀಸರು ಮಂಗಳವಾರದಂದು ಹೈದರಾಬಾದ್‍ನಲ್ಲಿ ಬಂಧಿಸಿದ್ದಾರೆ.

    ರಂಗಸ್ವಾಮಿ ಬಂಧಿತ ಆರೋಪಿ. ಆರೋಪಿ ಮೂಲತಃ ಅನಂತಪುರದವನಾಗಿದ್ದು, ಹೈದರಬಾದ್‍ನಲ್ಲಿ ವಾಸಿಸುತ್ತಿದ್ದ. ತನ್ನ ಓದನ್ನು ಅರ್ಧದಲ್ಲೇ ನಿಲ್ಲಿಸಿದ್ದ ಈತ ಫೇಸ್‍ಬುಕ್ ನಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಂತರ ಅವರನ್ನು ನೇರವಾಗಿ ಭೇಟಿ ಮಾಡಿ ಪ್ರೀತಿಯ ನಾಟಕವಾಡ್ತಿದ್ದ. ಅವರ ವಿಶ್ವಾಸವನ್ನು ಗಳಿಸಿದ ನಂತರ ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದ.

    ರಂಗಸ್ವಾಮಿಯಿಂದ ಮೋಸ ಹೋದವರು ಸಿಕಂದರಾಬಾದ್ ನ ನಚಾರಾಮ್, ಲಾಲ್‍ಪೇಟ್ ಹಾಗೂ ಲಾಲಗುಡದ ನಿವಾಸಿಗಳಾಗಿದ್ದು, ಎಂಎನ್‍ಸಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಮೋಸ ಹೋದವರು ಭಯ ಹಾಗೂ ಮುಜುಗರದಿಂದ ಆರೋಪಿ ವಿರುದ್ಧ ದೂರನ್ನು ದಾಖಲಿಸಿರಲಿಲ್ಲ. ನಂತರ ಒಬ್ಬರು ಯುವತಿ ಬಂದು ರಂಗಸ್ವಾಮಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ರಂಗಸ್ವಾಮಿ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿ ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಯುವತಿ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಲವಾರು ಸಂದರ್ಭಗಳಲ್ಲಿ ರಂಗಸ್ವಾಮಿ ನನಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಹೇಳಿದ್ದಾರೆ. ಯುವತಿ ದೂರು ದಾಖಲಿಸುತ್ತಿದ್ದಂತೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು.

    ಸದ್ಯ ಪೊಲೀಸರು ಆರೋಪಿ ರಂಗಸ್ವಾಮಿಯನ್ನ ಬಂಧಿಸಿದ್ದಾರೆ. ರಂಗಸ್ವಾಮಿಯ ವಿರುದ್ಧ ಹಲವಾರು ಕಳ್ಳತನ ಹಾಗೂ ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಿಳಾ ಪೋಲಿಸರ ಮುಂದೆಯೇ ಪ್ಯಾಂಟ್ ಜಿಪ್ ತೆಗೆದು ಹಸ್ತಮೈಥುನ ಮಾಡ್ತಿದ್ದ ಕಾಮುಕ ಅರೆಸ್ಟ್

    ಮಹಿಳಾ ಪೋಲಿಸರ ಮುಂದೆಯೇ ಪ್ಯಾಂಟ್ ಜಿಪ್ ತೆಗೆದು ಹಸ್ತಮೈಥುನ ಮಾಡ್ತಿದ್ದ ಕಾಮುಕ ಅರೆಸ್ಟ್

    ಪಂಚಕುಲಾ: ಸಾರ್ವಜನಿಕ ಸ್ಥಳದಲ್ಲಿ ಮಹಿಳಾ ಪೊಲೀಸರ ಮುಂದೇ ಹಸ್ತಮೈಥುನ ಮಾಡುತ್ತಿದ್ದ ಯುವಕ ಈಗ ಪೊಲೀಸರ ಸೆರೆಯಾಗಿದ್ದಾನೆ.

    ಹರ್ಯಾಣದಲ್ಲಿ ಪಂಚಕುಲದಲ್ಲಿ ಈ ಘಟನೆ ನಡೆದಿದ್ದು ಮದ್ಯಪಾನ ಮಾಡಿ ಈ ದುರ್ವತನೆ ತೋರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಂಚಕುಲದ ಐದನೇ ಸೆಕ್ಟರ್ ನ ಪೊಲೀಸ್ ಠಾಣೆ ಮುಖ್ಯ ಪೇದೆಯಾಗಿರುವ ಅನಿತಾ ಅವರು ಸಬ್ ಇನ್ಸ್ ಪೆಕ್ಟರ್ ಜೊತೆ ಪ್ರಕರಣವೊಂದರ ವಿಚಾರಣೆಗೆ ಹೊರಟಿದ್ದರು. ಈ ವೇಳೆ ಹಳೆ ಪಂಚಕುಲ ನಗರದ ಜನನಿಬಿಡ ರಸ್ತೆ ದಾಟಲೆಂದು ನಿಂತಿದ್ದಾಗ, ಇದೇ ರಸ್ತೆಯ ಎಡಭಾಗದಲ್ಲಿ ನಿಂತಿದ್ದ ಕಾಮುಕನೊಬ್ಬ ಇವರನ್ನು ನೋಡಿ ರಸ್ತೆಯಲ್ಲಿಯೇ ಪ್ಯಾಂಟ್ ಜಿಪ್ ತೆಗೆದು ಹಸ್ತಮೈಥುನ ಮಾಡಲು ಪ್ರಾರಂಭಿಸಿದ್ದಾನೆ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ವೇಳೆ ಕಾಮುಕನ ದುರ್ವತನೆ ಕಂಡು ಸಿಗ್ನಲ್‍ ನಲ್ಲಿ ನಿಂತಿದ್ದ ಹಲವು ಪ್ರಯಾಣಿಕರು ಮುಜುಗರಕ್ಕೊಳಗಾಗಿ ತಮ್ಮ ಗಮನ ಬೇರೆಡೆ ಹರಿಸಿ ಮುಂದೆ ಸಾಗಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿ ಮುಂದೆ ಹಸ್ತಮೈಥುನ- ವಿಡಿಯೋ ವೈರಲ್

    ಕಾಮುಕನ ಕೃತ್ಯ ಕಂಡು ಕೋಪಗೊಂಡ ಮಹಿಳಾ ಪೊಲೀಸರು, ತಕ್ಷಣವೇ ಸ್ಥಳೀಯ ಪೊಲೀಸ್ ನಿಯಂತ್ರಣ ಕೊಠಡಿ(ಪಿಸಿಆರ್) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಐದೇ ನಿಮಿಷದಲ್ಲಿ ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

  • ಬೆಂಗಳೂರಿಗರೇ ಹುಷಾರ್- ಬುರ್ಖಾ ಧರಿಸಿ ಭಿಕ್ಷಾಟನೆಗೆ ಇಳಿದು ಕಳ್ಳತನ ಮಾಡೋ ಗ್ಯಾಂಗ್ ಇದೆ ಎಚ್ಚರ

    ಬೆಂಗಳೂರಿಗರೇ ಹುಷಾರ್- ಬುರ್ಖಾ ಧರಿಸಿ ಭಿಕ್ಷಾಟನೆಗೆ ಇಳಿದು ಕಳ್ಳತನ ಮಾಡೋ ಗ್ಯಾಂಗ್ ಇದೆ ಎಚ್ಚರ

    ಬೆಂಗಳೂರು: ಬುರ್ಖಾ ಧರಿಸಿ ಕಳ್ಳತನ ಮಾಡುತ್ತಿದ್ದ 6 ಚಾಲಾಕಿ ಕಳ್ಳಿಯರನ್ನು ಬಂಧಿಸುವಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರು ಹೊರವಲಯದ ರಿಂಗ್ ರಸ್ತೆಗಳಲ್ಲಿ ಭಿಕ್ಷಾಟನೆಗೆ ಇಳಿದು ಈ ಬುರ್ಖಾಧಾರಿ ಗ್ಯಾಂಗ್ ಮನೆಗಳ್ಳತನ ಹಾಗೂ ದರೋಡೆ ಮಡುತ್ತಿತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮದುವೆ ಆಮಂತ್ರಣ ಪತ್ರಿಕೆ, ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಅಂತ ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವ ನೆಪದಲ್ಲಿ ಕಳ್ಳತನ ಹಾಗೂ ರಾಬರಿ ಮಾಡುತ್ತಿದ್ದರು.

    ಈ ಬಗ್ಗೆ ಮಾಹಿತಿ ಪಡೆದ ಮಾರತ್ತಹಳ್ಳಿ ಪೊಲೀಸರು ಈ ದಂಧೆಯಲ್ಲಿ ತೊಡಗಿದ್ದ 6  ಬುರ್ಖಾಧಾರಿ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಗ್ಯಾಂಗ್ ನ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಪರೇಶ್ ಮೇಸ್ತಾ ಸಾವು ಪ್ರಕರಣ- ಮತ್ತಿಬ್ಬರು ಆರೋಪಿಗಳ ಬಂಧನ

    ಪರೇಶ್ ಮೇಸ್ತಾ ಸಾವು ಪ್ರಕರಣ- ಮತ್ತಿಬ್ಬರು ಆರೋಪಿಗಳ ಬಂಧನ

    ಕಾರವಾರ: ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಕಮಲಾಕರ್ ಮೇಸ್ತಾ ನೀಡಿದ್ದ ದೂರಿನ ಆಧಾರದಲ್ಲಿ ಎಲ್ಲಾ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಳೆದ ವಾರ ಮೊದಲ ಆರೋಪಿ ಆಸೀಪ್ ರಫಿಕ್ ಎಂಬವನನ್ನು ಭಟ್ಕಳದ ಶಿರಾಲಿಯಲ್ಲಿ ಬಂಧಿಸಿದ್ರೆ ಹೊನ್ನಾವರದಲ್ಲಿ ಡಿಸಂಬರ್ ನಲ್ಲಿ ಪ್ರಮುಖ ಆರೋಪಿ ಆಜಾದ್ ಅಣ್ಣಿಗೇರಿಯನ್ನು ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಲೀಂ ಶೇಖ್‍ನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಇದನ್ನೂ ಓದಿ:  Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ

    ನಂತರ ಬಂಧಿತರು ನೀಡಿದ ಖಚಿತ ಮಾಹಿತಿ ಆಧರಿಸಿ ಗುರುವಾರ ಶಿರಸಿಯಲ್ಲಿ ಇಮ್ತಿಯಾಜ್ ಶೇಖ್ ಹಾಗೂ ಸಯ್ಯದ್ ಫೈಜಲ್ ನನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಎಲ್ಲಾ ಐದು ಆರೋಪಿಗಳ ಬಂಧನವಾಗಿದೆ. ಇದನ್ನೂ ಓದಿ: ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಈ ಮೂಲಕ ಪ್ರಕರಣವನ್ನು ಸಿ.ಬಿ.ಐ ಕೈಗೆತ್ತಿಕೊಳ್ಳುವ ಮೊದಲು ಹೊನ್ನಾವರ ಪೊಲೀಸರು ಕಮಲಾಕರ್ ಮೇಸ್ತಾ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. ಪರೇಶ್ ಮೇಸ್ತಾ ಸಾವು ಕೊಲೆಯೇ ಅಥವಾ ಸಹಜ ಸಾವೋ ಎಂಬುದಕ್ಕೆ ಆರೋಪಿಗಳ ಹೇಳಿಕೆಯೇ ಪ್ರಮುಖವಾಗಲಿದೆ. ಇದನ್ನೂ ಓದಿ:   ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ

    https://www.youtube.com/watch?v=5XVX-SyTRAI

  • ಹೆಚ್.ವೈ ಮೇಟಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

    ಹೆಚ್.ವೈ ಮೇಟಿ ಬಗ್ಗೆ ಅವಹೇಳನಕಾರಿ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

    ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ಬಗ್ಗೆ ಅವಹೇಳನಕಾರಿಯಾಗಿ ಬರೆದು ಭಾವಚಿತ್ರ ಸಮೇತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಯುವಕನೋರ್ವನನ್ನು ಬಾಗಲಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಡ್ಯಾನಿಯಲ್ ನ್ಯೂಟನ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ನೇಕ್ ಡ್ಯಾನಿಯಲ್ ಎಂದೇ ಹೆಸರುವಾಸಿಯಾಗಿರುವ ಡ್ಯಾನಿಯಲ್ ಮೂಲತಃ ಬಾಗಲಕೋಟೆಯ ಯುವಕ. ಹವ್ಯಾಸಿ ಹಾವು ಹಿಡಿಯುವ ವ್ಯಕ್ತಿಯಾಗಿದ್ದು, ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ಶಾಸಕ ಮೇಟಿ ಅವರ ಬಗ್ಗೆ ಅವಹೇಳನಕಾರಿ ಭಾವಚಿತ್ರ ಹಾಕಿದ್ದಾನೆ. ಇಂತವರನ್ನು ಮಂದಿರ, ಮಸೀದಿ ಚರ್ಚ್‍ಗಳ ಧಾರ್ಮಿಕ ಕಾರ್ಯಕ್ಕೆ ಆಹ್ವಾನಿಸೋದು ಸರಿಯಲ್ಲ. ಹಾಗಂತ ನನಗೆ ಅವರ ಬಗ್ಗೆ ವ್ಯಯಕ್ತಿಕ ದ್ವೇಷವಿಲ್ಲ. ಸಮಾಜ ತಲೆತಗ್ಗಿಸುವಂತ ಕೃತ್ಯವೆಸಗಿದ ಇಂತವರನ್ನು ಧಾರ್ಮಿಕ ಸ್ಥಳಕ್ಕೆ ಆಹ್ವಾನಿಸಿ, ಪವಿತ್ರ ಸ್ಥಳವನ್ನು ಅಪವಿತ್ರ ಮಾಡಬೇಡಿ ಎಂಬ ಕಳಕಳಿ ಎಂದು ಪೋಸ್ಟ್ ಮಾಡಿದ್ದಾನೆ.

    ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಹೋದರರೆ ಎಷ್ಟು ಜನ ಚಿತ್ರದಲ್ಲಿರುವ ವ್ಯಕ್ತಿಯನ್ನು ಪವಿತ್ರ ಸ್ಥಳಕ್ಕೆ ಆಹ್ವಾನಿಸುತ್ತೀರಿ? ಈ ಬಗ್ಗೆ ಪ್ರಾಮಾಣಿಕವಾಗಿ ಕಮೆಂಟ್ ಮಾಡಿ ಎಂದು ಉಲ್ಲೇಖ ಮಾಡಿದ್ದಾನೆ. ಇಂತವರನ್ನು ಆಹ್ವಾನಿಸಿದರೆ ಸಮಾಜಕ್ಕೆ ಅದರಲ್ಲೂ ಯುವಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶಭಕ್ತ ನಾಗರಿಕರು ಇದನ್ನು ಅರ್ಥೈಸಿಕೊಂಡಿದ್ದೀರಿ ಎಂಬ ಭರವಸೆ ಇದೆ. ಇನ್‍ಕಿಲಾಬ್ ಜಿಂದಾಬಾದ್ ಎಂದು ಬರೆದಿದ್ದಾನೆ.

    ಹೆಚ್ ವೈ ಮೇಟಿಯವರನ್ನು ಬಾಗಲಕೋಟೆಯ ಹರನಸಿಕಾರಿ ಕಾಲೋನಿಯಲ್ಲಿನ ಚರ್ಚ್ ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ಬರೆದಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೇಟಿ ಬೆಂಬಲಿಗರು ಪೊಲೀಸರಿಗೆ ತಿಳಿಸಿದ್ದಾರೆ. ಅಹಿತಕರ ಘಟನೆ ತಡೆಯುವ ಹಿನ್ನೆಲೆಯಲ್ಲಿ ಸ್ನೇಕ್ ಡ್ಯಾನಿಯಲ್ ನನ್ನು ನವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸ್ನೇಕ್ ಡ್ಯಾನಿಯಲ್ ಹಾವು ಹಿಡಿಯೋದಕ್ಕೆ ಹೆಸರುವಾಸಿಯಾಗಿದ್ದಾನೆ. ಹಾವಿನ ಬಗ್ಗೆ ಮಕ್ಕಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸೋದರ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ. ಈತನ ಸದ್ಯದ ಪೋಸ್ಟ್ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

  • ಪರೇಶ್ ಮೇಸ್ತಾ ನಿಗೂಢ ಸಾವು ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

    ಪರೇಶ್ ಮೇಸ್ತಾ ನಿಗೂಢ ಸಾವು ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪರೇಶ್ ಮೇಸ್ತಾ(19) ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಪ್ರತ್ಯೇಕ ತಂಡ ರಚಿಸಿ ತನಿಖೆ ಕೈಗೊಂಡಿದ್ದು, ಈ ಹಿಂದೆ ಹೊನ್ನಾವರದ ಗುಡ್ ಲಕ್ ಹೋಟೆಲ್ ಮಾಲೀಕ ಆಜಾದ್ ಅಣ್ಣಿಗೇರಿಯನ್ನು ಮೊದಲು ಬಂಧಿಸಿದ್ದರು. ನಂತರ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಲೀಂ ಶೇಖ್ ಎಂಬವನನ್ನು ಇದೇ ಶುಕ್ರವಾರ ಬಂಧಿಸಿದ್ದು, ಇದೀಗ ಹೊನ್ನಾವರದ ಕಟ್ಟಿಗೆ ಡಿಪೋದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆರೋಪಿ ಆಸೀಫ್ ರಫೀಕ್ ನನ್ನು ಬಂಧಿಸಲಾಗಿದೆ. ಇದನ್ನೂ ಓದಿ:  Exclusive: ವಿಷವುಣಿಸಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ – ಪರೇಶ್ ಮೇಸ್ತಾ ತಂದೆ ಹೇಳಿಕೆ

    ಇನ್ನು ಉಳಿದ ಆರೋಪಿಗಳಾದ ಮಹ್ಮದ್ ಫೈಸಲ್ ಅಣ್ಣಿಗೇರಿ, ಇಮ್ತಿಯಾಜ್ ಗನಿ ಎಂಬವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪರೇಶ್ ಮೇಸ್ತಾ ಸಾವು: ವೈದ್ಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಸಿಬಿಐ ತನಿಖೆ ಪ್ರಾರಂಭವಾಗುವ ಮುನ್ನವೇ ಕಮಲಾಕರ್ ಮೇಸ್ತಾ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಮೂಲಕ ಪರೇಶ್ ಮೇಸ್ತಾ ಸಾವು ಸಹಜ ಸಾವಲ್ಲ. ಇದೊಂದು ಕೊಲೆ ಎನ್ನುವ ಆರೋಪಕ್ಕೆ ಹೆಚ್ಚಿನ ಮಹತ್ವ ಬಂದಿದ್ದು ಆರೋಪಿಗಳ ತನಿಖೆಯಲ್ಲಿ ಮತ್ತಷ್ಟು ವಿಷಯಗಳು ಹೊರಬರುವ ಸಾಧ್ಯತೆಯಿದೆ.

    ಹೊನ್ನಾವರದಲ್ಲಿ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಪರೇಸ್ ಮೇಸ್ತಾ ನಗರದ ಶಟ್ಟಿಕೆರೆಯಲ್ಲಿ ಡಿಸೆಂಬರ್ 8 ರಂದು ಹೆಣವಾಗಿ ಪತ್ತೆಯಾಗಿದ್ದ. ನಿಗೂಢ ಸಾವಿನ ಕುರಿತು ತಂದೆ ಕಮಲಾಕರ್ ಮೇಸ್ತಾ ರವರು ಶವ ಪತ್ತೆಯಾದ ಡಿಸೆಂಬರ್ 8 ರಂದೇ ಐದು ಮಂದಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು. ದೂರು ನೀಡಿದ ಬಳಿಕ ಐದು ಮಂದಿ ನಾಪತ್ತೆಯಾಗಿದ್ದರು. ಇದನ್ನೂ ಓದಿ:   ಪರೇಶ್ ಮೇಸ್ತಾ ಸಾವಿನ ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ

    ಪರೇಶ್ ಮೆಸ್ತಾ ಸಾವು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೇ ಹಲವು ಭಾಗದಲ್ಲಿ ಘರ್ಷಣೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿಬಿಐಗೆ ಪ್ರಕರಣವನ್ನು ನೀಡಿತ್ತು. ಇದನ್ನೂ ಓದಿ: ಪರೇಶ್ ಮೇಸ್ತಾ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

    ಈ ಕುರಿತು ಅಂದು ಪಬ್ಲಿಕ್ ಟಿವಿ ಜೊತೆಗೆ ಮಾತಾಡಿದ ತಂದೆ ಕಮಲಾಕರ್ ಮೇಸ್ತಾ, ನನ್ನ ಮಗನನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ. ವಿಷವುಣಿಸಿ ಹಲ್ಲೆಗೈದು ಕೊಲೆ ಮಾಡಿದ್ದಾರೆ. ಆದ್ರೆ ಕಾಲು ಜಾರಿ ಬಿದ್ದು ಸತ್ತಿದ್ದಾನೆಂಬ ಪೊಲೀಸರ ಹೇಳಿಕೆ ನೀಡಿದ್ದು, ಇದು ಸರಿಯಲ್ಲ. ನಮ್ಮ ಮಗನಿಗೆ ಈಜು ಬರುತ್ತಿತ್ತು ತಂದೆ ಹೇಳಿದ್ದರು.

    ನನ್ನ ಮಗ 6ನೇ ತಾರೀಖು ಕಾಣೆಯಾದ. ಎಲ್ಲಾ ಕಡೆ ಹುಡುಕಿ ನಂತರ ಪೊಲೀಸರಿಗೆ ದೂರು ಕೊಟ್ಟಿದ್ವಿ. ನಂತರ ಶನೀಶ್ವರ ದೇವಸ್ಥಾನದ ಹಿಂದೆ ಶೆಟ್ಟಿ ಕೆರೆಯಲ್ಲಿ ಮಗನ ಶವ ತೇಲುತ್ತಿತ್ತು. ಮುಖ ನೋಡಿದಾಗ ಕಪ್ಪಾಗಿದ್ದು, ಮುಖ ಜಜ್ಜಿತ್ತು, ಕಣ್ಣು ಗೆಡ್ಡೆ ಕಿತ್ತು ಬಂದಿತ್ತು. ಕಿಡ್ನಾಪ್ ಮಾಡಿ ಸಾಯಿಸಿರೋದು ನೂರಕ್ಕೆ ನೂರು ಸತ್ಯ. ಇದಕ್ಕೆ ಪೊಲೀಸ್ ಇಲಾಖೆಯ ಕುಮ್ಮಕ್ಕೂ ಇದೆ. ನನ್ನ ಮಗನಿಗೆ ನ್ಯಾಯ ಸಿಗಬೇಕು. ಪ್ರಕರಣದ ತನಿಖೆಯನ್ನ ಸಿಬಿಐಗೆ ಒಪ್ಪಿಸಬೇಕು ಅಂತ ಒತ್ತಾಯಿಸಿದ್ದರು. ಇದನ್ನೂ ಓದಿ:ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ, ಕೊಲೆ ಹೇಗೆ ಆಗುತ್ತೆ: ಸಿಎಂ ಸಿದ್ದರಾಮಯ್ಯ

    ಪ್ರಕರಣದ ಸಾವಿನ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ನೀಡಿದ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವೈದ್ಯ ಶಂಕರ್ ಒಕ್ಕಣ್ಣನವರ್ ಸುಳ್ಳು ವರದಿ ಕೊಟ್ಟಿದ್ದಾರೆಂದು ಅಸಮಾಧಾನ ವ್ಯಕ್ತವಾಗಿದ್ದು, ಹೀಗಾಗಿ ಅವರ ವಿರುದ್ಧ ಮೇಲೆ ಫೇಸ್ ಬುಕ್- ವಾಟ್ಸಪ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

     

    https://www.youtube.com/watch?v=5XVX-SyTRAI

  • ಮಹಿಳೆ, ಪ್ರಿಯಕರ, ಇಬ್ಬರು ಸ್ನೇಹಿತರು ಸೇರಿ 1 ವರ್ಷದ ಮಗುವನ್ನ ಕೊಂದ್ರು

    ಮಹಿಳೆ, ಪ್ರಿಯಕರ, ಇಬ್ಬರು ಸ್ನೇಹಿತರು ಸೇರಿ 1 ವರ್ಷದ ಮಗುವನ್ನ ಕೊಂದ್ರು

    ಥಾಣೆ: ತನ್ನ ಒಂದು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಹೂತಿಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಥಾಣೆ ಪೊಲೀಸರು ಮಹಿಳೆ ಹಾಗೂ ಇತರೆ ಮೂವರನ್ನು ಇಲ್ಲಿನ ಭಿವಾಂಡಿಯಲ್ಲಿ ಬಂಧಿಸಿದ್ದಾರೆ.

    ಆರೋಪಿಯಾದ 21 ವರ್ಷದ ಮಹಿಳೆ 2016ರ ಮಾರ್ಚ್‍ನಲ್ಲಿ ಮದುವೆಯಾಗಿದ್ದು, ಒಬ್ಬ ಮಗನಿದ್ದ. ಆದ್ರೆ ಗಂಡ ಹೆಂಡತಿ ನಡುವೆ ಜಗಳಗಳಾಗಿ 4 ತಿಂಗಳಿನಿಂದ ಪ್ರತ್ಯೇಕವಾಗಿ ವಾಸವಿದ್ದರು. ನಂತರ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದು, ಮಗುವಿನಿಂದ ಮುಕ್ತಿ ಪಡೆಯಬೇಕು ಎಂದುಕೊಂಡಿದ್ದಳು. ಹೀಗಾಗಿ ಮಂಗಳವಾರ ರಾತ್ರಿ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಂಕೋಲಿ ಗ್ರಾಮದ ಕೈಗಾರಿಕಾ ಕಾಂಪೌಂಡ್‍ನಲ್ಲಿ ಮೃತದೇಹವನ್ನ ಹೂತಿದ್ದಾರೆ ಎಂದು ನಾರ್ಪೊಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಎಸ್‍ಡಿ ಜಾಧವ್ ಹೇಳಿದ್ದಾರೆ.

    ಮಹಿಳೆಯ ಗಂಡನಿಗೆ ಸಂಶಯ ಮೂಡಿ ಮಗ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರರಣೆ ನಡೆಸಿದ ಪೊಲೀಸರು ಬುಧವಾರದಂದು ಬಾಲಕನ ಮೃತದೇಹವನ್ನ ಪತ್ತೆಹಚ್ಚಿದ್ದಾರೆ. ಸ್ಥಳೀಯ ತಹಶಿಲ್ದಾರ್ ಹಾಗೂ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಮೃತದೇಹವನ್ನ ವಶಪಡಿಸಿಕೊಂಡಿದ್ದು, ಭಿವಾಂಡಿಯ ಐಜಿಎಮ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಜಾಧವ್ ಹೇಳಿದ್ದಾರೆ.

    ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 201 ಹಾಗೂ 34 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    Black woman in handcuffs
  • ಪೊಲೀಸರು ಕಾರ್ ಡೋರ್ ಓಪನ್ ಮಾಡಿದಾಗ ಚೆಲ್ಲಿತು 4 ಸಾವಿರ ಕೆಜಿ ಕಿತ್ತಳೆ!

    ಪೊಲೀಸರು ಕಾರ್ ಡೋರ್ ಓಪನ್ ಮಾಡಿದಾಗ ಚೆಲ್ಲಿತು 4 ಸಾವಿರ ಕೆಜಿ ಕಿತ್ತಳೆ!

    ಲಂಡನ್: 4 ಸಾವಿರ ಕೆಜಿ ಕಿತ್ತಳೆ ಹಣ್ಣನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಕಾರಿನಲ್ಲಿ ಕಿತ್ತಳೆ ಹಣ್ಣು ತುಂಬಿರುವ ಫೋಟೋವನ್ನು ಪೊಲೀಸರು ಟ್ವೀಟ್ ಮಾಡಿದ್ದು ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಜನವರಿ 26ರಂದು ಕ್ಯಾರಮೋನ ಬಳಿಯ ಸೆವಿಲ್ಲೆ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಜನವರಿ 26ರಂದು ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಕಾರು ಮತ್ತು ಟ್ರಕ್ ಅನುಮಾನಸ್ಪದವಾಗಿ ಸಂಚರಿಸಿತ್ತು. ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸೆವಿಲ್ಲೆ ಪೊಲೀಸರು ಬೆನ್ನಟ್ಟಿ ಎರಡು ವಾಹನಗಳನ್ನು ನಿಲ್ಲಿಸಿದ್ದಾರೆ. ವಿಚಾರಣೆ ವೇಳೆ ಕಾರಿನಲ್ಲಿದ್ದವರು ತಾವು ದೂರದ ಊರಿನಿಂದ ಬರುತ್ತಿರುವುದಾಗಿ ತಿಳಿಸಿದ್ದಾರೆ.

    ಅನುಮಾನಗೊಂಡು ಕಾರಿನ ಡೋರ್ ಓಪನ್ ಮಾಡಿದಾಗ ಕಿತ್ತಳೆ ಹಣ್ಣುಗಳು ರಸ್ತೆಗೆ ಚೆಲ್ಲಿದೆ. ಮಿನಿ ವ್ಯಾನ್‍ನಲ್ಲಿ ಕಿತ್ತಳೆಗಳನ್ನು ಮೂಟೆಗಳಲ್ಲಿ ಕಟ್ಟಿ ಸಾಗಿಸಲಾಗುತಿತ್ತು. ಈ ಕಾರಿನಲ್ಲಿದ್ದ ಇಬ್ಬರು ಸಹೋದರರು, ಮಿನಿ ವ್ಯಾನ್‍ನಲ್ಲಿದ್ದ ದಂಪತಿ ಹಾಗು ಮಗನನ್ನು ಪೊಲೀಸರು ಬಂಧಿಸಿದ್ದಾರೆ.

    ವಶಕ್ಕೆ ಪಡೆದುಕೊಂಡ ಕಿತ್ತಳೆಗಳನ್ನು ವೇರ್ ಹೌಸ್‍ಗೆ ರವಾನಿಸಲಾಗಿದೆ. ಪೊಲೀಸ್ ತನಿಖೆ ವೇಳೆ ಆರೋಪಿಗಳು ಕಿತ್ತಳೆಗಳನ್ನು ಕೆಲವು ಗಂಟೆಗಳ ಹಿಂದೆಯೇ ಕಳ್ಳತನ ಮಾಡಿದ್ದರು ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

  • 10ರ ಮಗನ ಮೇಲೆ ತಂದೆಯಿಂದ್ಲೇ ಹಲ್ಲೆ ಪ್ರಕರಣ- ಪೊಲೀಸರ ಅಥಿತಿಯಾದ ಬಾಲಕನ ತಂದೆ ಹೇಳಿದ್ದು ಹೀಗೆ

    10ರ ಮಗನ ಮೇಲೆ ತಂದೆಯಿಂದ್ಲೇ ಹಲ್ಲೆ ಪ್ರಕರಣ- ಪೊಲೀಸರ ಅಥಿತಿಯಾದ ಬಾಲಕನ ತಂದೆ ಹೇಳಿದ್ದು ಹೀಗೆ

    ಬೆಂಗಳೂರು: ತನ್ನ 10 ವರ್ಷದ ಮಗ ಸುಳ್ಳು ಹೇಳುತ್ತಾನೆಂದು ಸಿಟ್ಟುಗೊಂಡ ಕ್ರೂರ ತಂದೆ ಆತನಿಗೆ ಮನಬಂದಂತೆ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದೆ. ಆರೋಪಿ ಮಹೇಂದ್ರ ತನ್ನ ಮಗನಿಗೆ ಮನಬಂದಂತೆ ಥಳಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಎಚ್ಚೆತ್ತ ಪೊಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿ ಹೇಳಿದ್ದೇನು?: ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ನನ್ನ ಮಗ ನನ್ನ ಮಾತು ಕೇಳುತ್ತಿರಲಿಲ್ಲ. ಏನೇ ಹೇಳಿದ್ದರೂ ತಿರಸ್ಕರಿಸುತ್ತಿದ್ದ. ಹಾಗಾಗಿ ಅವನ ತಾಯಿ ಮುಂದೆನೇ ಆತನನ್ನು ನಾನು ಹೊಡೆಯುತ್ತಿದ್ದೆ. ಅದನ್ನು ಚಿತ್ರಿಕರಿಸಲು ನಾನೇ ನನ್ನ ಹೆಂಡತಿಗೆ ಹೇಳಿದ್ದೆ. ನನ್ನ ಮಗ ಮತ್ತೊಮ್ಮೆ ಗಲಾಟೆ ಮಾಡಿದರೆ ಆತನಿಗೆ ಹೆದರಿಸಲೆಂದು ಆ ವಿಡಿಯೋ ಮಾಡಲು ನಾನೇ ಹೇಳಿದ್ದೆ ಎಂದು ಮಹೇಂದ್ರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

    ವಿಡಿಯೋ ವೈರಲ್ ಆಗಿದ್ದು ಹೇಗೆ?: ಕೆಲವು ದಿನಗಳ ಹಿಂದೆ ಮಹೇಂದ್ರ ಮೊಬೈಲ್ ಹಾಳಾಗಿದ್ದ ಕಾರಣ ರಿಪೇರಿಗೆ ಎಂದು ಕೊಟ್ಟಿದ್ದನು. ಫೋನ್ ರಿಪೇರಿಗೆ ಕೊಟ್ಟಿದ್ದಾಗ ಫೋನ್ ರಿಪೇರಿ ಮಾಡುವ ಯುವಕ ಮೊಬೈಲ್ ಫ್ಲ್ಯಾಶ್ ಮಾಡುವಾಗ ಎಲ್ಲಾ ಫೋಟೋ, ವಿಡಿಯೋಗಳನ್ನು ತನ್ನ ಕಂಪ್ಯೂಟರ್‍ನಲ್ಲಿ ಹಾಕುತ್ತಿದ್ದರು. ಆಗ ಈ ವಿಡಿಯೋವನ್ನು ನೋಡಿದ್ದಾರೆ. ನೋಡಿದ ತಕ್ಷಣ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಂದೆಯ ಈ ಕ್ರೂರ ವರ್ತನೆಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಕೆಂಗೇರಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಬಾಸ್ಕೊ (ಮಕ್ಕಳ ಮೇಲೆ ನಡೆಯುವ ಹಲ್ಲೆ ಬಗ್ಗೆ ತಿಳಿಸುವುದು) ಗೆ ಮಾಹಿತಿ ನೀಡಿದ್ದಾರೆ.

    ವಿಡಿಯೋದಲ್ಲೇನಿದೆ?: ಈ ಘಟನೆ ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ಸಮೀಪದಲ್ಲಿ ನಡೆದಿದೆ. ಮಗ ಸುಳ್ಳು ಹೇಳುತ್ತಾನೆಂದು ಸಿಟ್ಟುಗೊಂಡ ಕ್ರೂರ ತಂದೆ ಆತನಿಗೆ ಮನಬಂದಂತೆ ಥಳಿಸಿದ್ದಾನೆ. ತನ್ನ ಕೈಯಲ್ಲಿ ಹೊಡೆಯುವುದಲ್ಲದೆ ಕಾಲಿನಿಂದ ತುಳಿದು ವಿಕೃತಿ ಮೆರೆದಿದ್ದಾನೆ. ಬಾಲಕ ಸುಳ್ಳು ಹೇಳಿಲ್ಲ ಎಂದು ಹೇಳುತ್ತಿದ್ದರೂ ಬಿಡದೇ ಚೆಂಡಿನಂತೆ ಬಿಸಾಡಿದ್ದಾನೆ. ಎಷ್ಟು ಸಲ ಸುಳ್ಳು ಹೇಳುತ್ತೀಯಾ ಎಂದು ತಂದೆ ಬೆಲ್ಟ್ ನಲ್ಲಿ ಹೊಡೆದಿದ್ದಾನೆ. ಮಗ ಪದೇ ಪದೇ ಸುಳ್ಳು ಹೇಳ್ತಾನೆ ಎಂದು ತಂದೆ ಕಾಲಿನಲ್ಲಿ ಒದ್ದು, ವಿಕೃತವಾಗಿ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

    https://www.youtube.com/watch?v=j-PFEhOIDnc