Tag: arrest

  • ಮದ್ಯಪಾನಕ್ಕಾಗಿ ಹಣ ಕೇಳಿದ್ದಕ್ಕೆ ನೆಲಕ್ಕೆ ಕೆಡವಿ, ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ!

    ಮದ್ಯಪಾನಕ್ಕಾಗಿ ಹಣ ಕೇಳಿದ್ದಕ್ಕೆ ನೆಲಕ್ಕೆ ಕೆಡವಿ, ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ!

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅನಿಲ್ ಕೊಲೆಯಾದ ವ್ಯಕ್ತಿ. ಈತ ಪೇಂಟರ್ ಕೆಲಸ ಮಾಡಿಕೊಂಡಿದ್ದನು. ಗುರುವಾರ ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಜ್ಯುವೆಲ್ಲರಿ ಸ್ಟ್ರೀಟ್ ನ ಬಾರೊಂದರಲ್ಲಿ ಮದ್ಯಪಾನ ಮಾಡಿ ಹೋಗುತ್ತಿದ್ದ. ಈ ವೇಳೆ ರೌಡಿಶೀಟರ್ ಶಿವು ಅದೇ ಮಾರ್ಗವಾಗಿ ಹೋಗುತ್ತಿದ್ದನು. ಆ ಸಂದರ್ಭದಲ್ಲಿ ಅನಿಲ್ ಆತನ ಬಳಿ ಮದ್ಯಪಾನ ಮಾಡಲು ಹಣವನ್ನು ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಪರಿಣಾಮ ರೌಡಿಶೀಟರ್ ಶಿವು ಅನಿಲ್ ನನ್ನು ನೆಲಕ್ಕೆ ಕೆಡವಿ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾನೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಆರೋಪಿ ಶಿವು ನನ್ನು ಬಂಧಿಸಿದ್ದಾರೆ. ಬಂಧಿತ ಶಿವು ಈ ಹಿಂದೆ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದನು. ಮೂರು ದಿನಗಳ ಹಿಂದೆ ಶಿವು ಜಾಮೀನಿನ ಮೇಲೆ ಹೊರಬಂದಿದ್ದ ಎಂದು ತಿಳಿದುಬಂದಿದೆ.

  • ಕುಮಟಾದ ಬಿಜೆಪಿ ಮುಖಂಡ ಸೂರಜ್ ನಾಯ್ಕ್ ಸೋನಿ ದೆಹಲಿಯಲ್ಲಿ ಬಂಧನ

    ಕುಮಟಾದ ಬಿಜೆಪಿ ಮುಖಂಡ ಸೂರಜ್ ನಾಯ್ಕ್ ಸೋನಿ ದೆಹಲಿಯಲ್ಲಿ ಬಂಧನ

    ಕಾರವಾರ: ಗೋ ಸಾಗಾಣಿಕೆದಾರರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಿಜೆಪಿ ಮುಖಂಡ ಸೂರಜ್ ನಾಯ್ಕ್ ಸೋನಿಯನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್ 7ರಂದು ಅನ್ಯಕೋಮಿನ ಮೂರು ಜನರು ಜಾನುವಾರುವನ್ನು ಹೊನ್ನಾವರದ ಮೂಲಕ ಭಟ್ಕಳಕ್ಕೆ ಸಾಗಿಸುತ್ತಿದ್ದರು. ಈ ವೇಳೆ ಅವರನ್ನು ಹಿಡಿದು ಥಳಿಸಿ ಪೊಲೀಸರಿಗೆ ನೀಡಿದ್ದರು. ನಂತರ ಈ ಘಟನೆಯಲ್ಲಿ ಸೂರಜ್ ನಾಯ್ಕ ಸೋನಿ ಸೇರಿದಂತೆ 127 ಜನರ ಮೇಲೆ ಹೊನ್ನಾವರ ಪೊಲೀಸರು ಕಲಂ 307ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

    ಮೊದಲಿಗೆ ಏಳು ಜನರನ್ನು ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಬಿಜೆಪಿ ಮುಖಂಡ ಸೂರಜ್ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ ವೇಳೆ ನಿಜಾಮುದ್ದಿನ್ ರೈಲ್ವೆ ನಿಲ್ದಾಣದಲ್ಲಿ ದೆಹಲಿ ಹಾಗೂ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸೂರಜ್ ಸೋನಿ ಈ ಬಾರಿ ಕೂಡ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೊನ್ನಾವರ, ಕುಮಟಾದಲ್ಲಿ ನಡೆದ ಕೋಮುಗಲಭೆಯಲ್ಲಿ ಪ್ರಮುಖ ಆರೋಪಿಯೂ ಆಗಿದ್ದಾರೆ. ಈ ಹಿಂದೆ ಚಂದಾವರದಲ್ಲಿ ನಡೆದ ಕೋಮು ಗಲಭೆಯಲ್ಲಿ ಇವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು.

  • ಮದುವೆ ದಿನವೇ ವಧು ಅರೆಸ್ಟ್

    ಮದುವೆ ದಿನವೇ ವಧು ಅರೆಸ್ಟ್

    ವಾಷಿಂಗ್ಟನ್: ವಧುಯೊಬ್ಬಳನ್ನ ಆಕೆಯ ಮದುವೆಗೆ ಕೆಲವೇ ಗಂಟೆಗಳು ಇರುವಾಗ ಪೊಲೀಸರು ಬಂಧಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.

    ಅಮೆರಿಕದ ಅರಿಝೋನಾ ನಗರದಲ್ಲಿ ಕುಡಿದು ವಾಹನ ಚಲಾಯಿಸಿದ ಹಿನ್ನಲೆಯಲ್ಲಿ ವಧುವನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಅಂಬರ್ ಯಂಗ್ ತನ್ನ ಮದುವೆಗೆ ಸಿದ್ಧವಾಗಿದ್ದಳು. ಆದರೆ ಸೋಮವಾರ ಬೆಳಗ್ಗೆ ತನ್ನ ಮದುವೆ ನಡೆಯಬೇಕಿದ್ದ ಸ್ಥಳಕ್ಕೆ ಹೋಗುವಾಗ ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದ ಕಾರಣ ಅಂಬರ್ ಯಂಗ್ ಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

    ವಧು ಮದುವೆಗೆಂದು ಹೊಸ ಗೌನ್ ಧರಿಸಿ ಸುಂದರವಾಗಿ ಅಲಂಕಾರ ಮಾಡಿಕೊಂಡಿದ್ದಳು. ನಂತರ ವಧು ಅರಿಝೋನಾದಿಂದ ತಾನೇ ಕಾರು ಚಲಾಯಿಸಿಕೊಂಡು ಹೊರಟಿದ್ದಾಳೆ. ಮಾರ್ಗ ಮಧ್ಯೆ ಮೂರು ಬಾರಿ ಅಪಘಾತ ಮಾಡಿದ್ದು, ಅಪಘಾತದಲ್ಲಿ ಗಾಯಗೊಂಡ ಒಬ್ಬರನ್ನು ಆಸ್ಪತ್ರೆ ದಾಖಲಿಸಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅಂಬರ್ ಯಂಗ್ ಳನ್ನು ಬಂಧಿಸಿದ್ದಾರೆ. ವಧುವಿನ ಅಲಂಕಾರದಲ್ಲಿದ್ದ ಆಕೆಯ ಕೈಗೆ ಕೋಳ ತೊಡಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆಕೆಗೆ ರಕ್ತ ಪರೀಕ್ಷೆ ಮಾಡಿಸಿ, ಮುಂದಿನ ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಹಿ ಮಾಡಿಸಿಕೊಂಡು ನಂತರ ಬಿಡುಗಡೆ ಮಾಡಲಾಗಿದೆ. ಬಂಧಿಸಿ ಬಿಡುಗಡೆಯಾದ ಬಳಿಕ ಆಕೆಯ ಮದುವೆ ನಡೆಯಿತೋ ಇಲ್ಲವೂ ಎಂಬುದು ತಿಳಿದು ಬಂದಿಲ್ಲ.

  • SSLC ಡುಮ್ಕಿ ಹೊಡೆದವ್ರು ಅಮೆಜಾನ್ ಗೆ 1 ಕೋಟಿ ರೂ.ಗೂ ಅಧಿಕ ಹಣ ಮೋಸ ಮಾಡಿದ್ರು

    SSLC ಡುಮ್ಕಿ ಹೊಡೆದವ್ರು ಅಮೆಜಾನ್ ಗೆ 1 ಕೋಟಿ ರೂ.ಗೂ ಅಧಿಕ ಹಣ ಮೋಸ ಮಾಡಿದ್ರು

    ಚಿಕ್ಕಮಗಳೂರು: ನಕಲಿ ಖಾತೆ ಕ್ರಿಯೆಟ್ ಮಾಡಿ ಒಂದು ವರ್ಷದಿಂದ ಅಮೆಜಾನ್ ಕಂಪನಿಗೆ ಒಂದು ಕೋಟಿ, ಮೂವತ್ತು ಲಕ್ಷ ರೂ. ಹಣವನ್ನು ವಂಚಿಸಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

    ದರ್ಶನ್, ಪುನೀತ್, ಸಚಿನ್ ಶೆಟ್ಟಿ ಹಾಗೂ ಅನಿಲ್ ಬಂಧಿತ ಆರೋಪಿಗಳು. ಸಾರ್ವಜನಿಕರು ಅಮೆಜಾನ್‍ನಲ್ಲಿ ಬುಕ್ ಮಾಡಿದ ವಸ್ತು ಏಕದಂತ ಕೊರಿಯರ್ ಸರ್ವೀಸ್ ಸೆಂಟರ್ ಗೆ ಬರುತ್ತಿತ್ತು. ಸರ್ವಿಸ್ ಸೆಂಟರ್ ನಿಂದ ಬಂದ ವಸ್ತುಗಳನ್ನು ಆರೋಪಿಗಳು ಡೆಲವರಿ ಮಾಡುತ್ತಿದ್ದರು.

    ಹೇಗೆ ಮೋಸ ಮಾಡ್ತಿದ್ದರು?: ಗ್ರಾಹಕರ ಮೊಬೈಲ್‍ಗೆ ಡೆಲವರಿ ಸೆಕ್ಸಸ್ ಫುಲ್ ಅಂತ ಮೆಸೇಜ್ ಬರುತ್ತೆ. ಆದ್ರೆ, ಗ್ರಾಹಕರು ಪಾವತಿಸೋ ಹಣ ಮಾತ್ರ ಹೋಗೋದು ಇವರ ಅಕೌಂಟ್‍ಗೆ. ಈ ರೀತಿಯ ಮಾಸ್ಟರ್ ಮೈಂಡ್ ನಿಂದ ಒಂದು ವರ್ಷದಿಂದ ಅಮೇಜಾನ್ ಕಂಪನಿಗೆ ಒಂದು ಕೋಟಿ, ಮೂವತ್ತು ಲಕ್ಷ ರೂ. ಹಣವನ್ನು ಮೋಸ ಮಾಡಿದ್ದಾರೆ. ಹಣಕ್ಕೆ ಗ್ರಾಹಕರು ಡೆಬಿಟ್ ಕಾರ್ಡ್ ಬಳಸ್ತಾರೆ ಅಂತ ಗೊತ್ತಾದ್ರೆ ಸಾಕು ತಮ್ಮ ಟ್ಯಾಬ್ ನಲ್ಲಿ ಸ್ವೈಪ್ ಮಾಡಿ ಹಣವನ್ನ ಅಕೌಂಟ್‍ಗೆ ಜಮಾ ಮಾಡಿಕೊಳ್ಳುತ್ತಿದ್ದರು. ಇತ್ತ ಗ್ರಾಹಕರಿಗೂ ಡೆಲವರಿ ಮೆಸೇಜ್ ಬರುತ್ತೆ. ಅತ್ತ ಕಂಪನಿಗೂ ಮೆಸೇಜ್ ತಲುಪುತ್ತಿತ್ತು. ಇವರೇ ಅಮೆಜಾನ್‍ನಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿ ತಾವೇ ಆರ್ಡರ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿ ವಸ್ತುವನ್ನ ಬೇರೆಯವರಿಗೆ ಮಾಡುವ ಮೂಲಕ ಕಂಪನಿಗೆ ಟೋಪಿ ಹಾಕುತ್ತಿದ್ದರು.

    ಸದ್ಯ ಬುಲೆಟ್, ಎರಡು ಪಲ್ಸರ್, ಒಂದು ಜಿಕ್ಸರ್ ಬೈಕ್ಗಳು ಸೇರಿದಂತೆ 6 ಲಕ್ಷದ 44 ಸಾವಿರ ನಗದು, 21 ಮೊಬೈಲ್ ಫೋನ್, ಲ್ಯಾಪ್ಟಾಪ್, 2 ಟ್ಯಾಬ್ಗಳು ಸೇರಿದಂತ್ತೆ ಲಕ್ಷಾಂತರ ರೂಪಾಯಿ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳು ಸೆರೆ ಸಿಕ್ಕಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

    ಬೆಂಗಳೂರಿನ ಅಮೆಜಾನ್ ಕಂಪೆನಿಯ ಮ್ಯಾನೇಜರ್ ನವೀನ್ ಕುಮಾರ್ ಅವರಿಗೆ ಆಡಿಟಿಂಗ್ ವೇಳೆ ಈ ಮೋಸ ಗೊತ್ತಾಗಿದೆ. ಕೂಡಲೇ ಎಸ್ಪಿ ಅಣ್ಣಾಮಲೈಗೆ ತಿಳಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡು ಅಣ್ಣಾಮಲೈ ಆ್ಯಂಡ್ ಟೀಂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಲಂಡನ್‍ ನಿಂದ ಬಂದಿಳಿಯುತ್ತಿದ್ದಂತೆ ಚಿದಂಬರಂ ಪುತ್ರ ಕಾರ್ತಿ ಅರೆಸ್ಟ್

    ಲಂಡನ್‍ ನಿಂದ ಬಂದಿಳಿಯುತ್ತಿದ್ದಂತೆ ಚಿದಂಬರಂ ಪುತ್ರ ಕಾರ್ತಿ ಅರೆಸ್ಟ್

    ಚೆನ್ನೈ: ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂನನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘನೆಯ ಆರೋಪದಡಿ ಇಂದು ಸಿಬಿಐ ಬಂಧಿಸಿದೆ.

    ಲಂಡನ್‍ನಿಂದ ಚೆನ್ನೈಗೆ ವಾಪಸ್ಸಾಗಿದ್ದ ಕಾರ್ತಿಯನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ವಲಸೆ ಅಧಿಕಾರಿಗಳು ನಂತರ ಸಿಬಿಐ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಏರ್‍ಪೋರ್ಟ್‍ನಲ್ಲೇ ಸಿಬಿಐ ಅಧಿಕಾರಿಗಳು ಕಾರ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಬಳಿಕ ದೆಹಲಿಗೆ ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಿದಂಬರಂ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದ ವೇಳೆ ಕಾರ್ತಿ ಚಿದಂಬರಂ ತಂದೆಯ ಹೆಸರು ಬಳಸಿ ಐಎನ್‍ಎಕ್ಸ್ ಮೀಡಿಯಾಗೆ 300 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಕಿಕ್‍ಬ್ಯಾಕ್ ಪಡೆದಿದ್ದಾರೆಂಬ ಆರೋಪವಿದೆ. ಮೊದಲು ಪ್ರಕರಣ ದಾಖಲಾದಾಗ 10 ಲಕ್ಷ ರೂ. ಪಡೆದಿದ್ದಾರೆಂದು ಉಲ್ಲೇಖಿಸಲಾಗಿತ್ತು. ಆದ್ರೆ ಈಗ ಅದಕ್ಕೂ ಹೆಚ್ಚಿನ ಮೊತ್ತ ಪಡೆದಿರುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

    ಕಳೆದ ವರ್ಷ ಮೇನಲ್ಲಿ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಸಿಬಿಐ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಕಾರ್ತಿ ಚಿದಂಬರಂ ತೆರಿಗೆಗೆ ಸಂಬಂಧಿಸಿದ ತನಿಖೆ ತಪ್ಪಿಸಲು ಐಎನ್‍ಎಕ್ಸ್ ಮೀಡಿಯಾದಿಂದ ಹಣ ಪಡೆದಿದ್ದಾರೆಂಬ ಆರೋಪವೂ ಇದೆ.

    ಕಾರ್ತಿ ಚಿದಂಬರಂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಗಳಿಗೆ ಅಡ್ಮಿಷನ್ ಮಾಡಿಸುವ ಸಲುವಾಗಿ ನವೆಂಬರ್‍ನಲ್ಲಿ ಇಂಗ್ಲೆಂಡಿಗೆ ಹೋಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಕಾರ್ತಿಯನ್ನ ಬಂಧಿಸಿರುವುದು ಸೇಡಿನ ರಾಜಕೀಯ ಎಂದು ಕಾಂಗ್ರೆಸ್ ಹೇಳಿದೆ.

    ಏನಿದು ಪ್ರಕರಣ?: 2008ರಲ್ಲಿ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳಿಗೆ ಹಣ ಪಾವತಿಸಿ ಶೇರುಗಳನ್ನು ನೀಡಿತ್ತು. ಪೀಟರ್ ಮುಖರ್ಜಿ ಅವರ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಲವು ಕಂತುಗಳಲ್ಲಿ ಹಣವನ್ನ ಪಾವತಿಸಿತ್ತು. ಅಲ್ಲದೆ 60 ಶೇರುಗಳನ್ನು ಲಂಡನ್ ಮೂಲದ ಆರ್ಟಿವಿಯಾ ಡಿಜಿಟಲ್ ಯುಕೆ ಲಿಮಿಟಡ್ ಕಂಪೆನಿಯಿಂದ ಕಾರ್ತಿ ಅವರ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿತ್ತು.

    ಈ ಹಿಂದೆ ಕಾರ್ತಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಕಾರ್ತಿ ಅವರ ಸಂಸ್ಥೆಯ ಬಗ್ಗೆ ಮಾಹಿತಿವುಳ್ಳ ಹಾರ್ಡ್ ಡಿಸ್ಕ್ ಗಳನ್ನ ಜಪ್ತಿ ಮಾಡಲಾಗಿತ್ತು. ಕಾರ್ತಿ ಅವರು ಐಎನ್‍ಎಕ್ಸ್ ಮೀಡಿಯಾದಿಂದ ಕಿಕ್‍ಬ್ಯಾಕ್ ಪಡೆದಿದ್ದಾರೆಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2008 ಸೆಪ್ಟೆಂಬರ್ 22ರಂದು ಎಫ್‍ಐಪಿಬಿ(ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ) ಯಿಂದ 220 ಮಿಲಿಯನ್ ಡಾಲರ್ ಕ್ಲಿಯರೆನ್ಸ್ ಗಾಗಿ ಅರ್ಜಿ ಹಾಕಿದ್ದ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಸಂಸ್ಥೆಗೆ 35 ಲಕ್ಷ ರೂ. ನೀಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ಹಿಂದೆ ಐಎನ್‍ಎಕ್ಸ್ ಮೀಡಿಯಾದ ಮಾಲೀಕರಾಗಿದ್ದ ಪೀಟರ್ ಮುಖರ್ಜಿ ಮತ್ತು ಪತ್ನಿ ಇಂದ್ರಾಣಿ ಮುಖರ್ಜಿ ಸದ್ಯ ತಮ್ಮ ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಕೊಲೆ ಪ್ರಕರಣದ ತನಿಖೆ ವೇಳೆ ಮುಖರ್ಜಿ ಅವರ ಹಣಕಾಸು ವ್ಯವಹಾರಗಳನ್ನ ಪರೀಶಿಲನೆಗೆ ಒಳಪಡಿಸಿದಾಗ ಐಎನ್‍ಎಕ್ಸ್ ಮೀಡಿಯಾ ಡೀಲ್ ಬಗ್ಗೆ ಸುಳಿವು ಸಿಕ್ಕಿತ್ತು. 2009ರಲ್ಲಿ ಮುಖರ್ಜಿ ಐಎನ್‍ಎಕ್ಸ್ ಮೀಡಿಯಾದಿಂದ ಹೊರಬಂದಿದ್ದರು.

  • ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ- 25ರ ಯುವಕನ ಬಂಧನ

    ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ- 25ರ ಯುವಕನ ಬಂಧನ

    ಶಿಮ್ಲಾ: ಮೂರೂವರೆ ವರ್ಷದ ಕಂದಮ್ಮನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ ಹಿಮಾಚಲಪ್ರದೇಶದಲ್ಲಿ ಸೋಮವಾರ ನಡೆದಿದೆ.

    ಪ್ರಕರಣ ಸಂಬಂಧ ಇದೀಗ ಸ್ಥಳೀಯ ಪೊಲೀಸರು 25 ವರ್ಷದ ಬಂಟಿ ಎಂಬಾತನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಬಾಲಕಿಯ ಪೋಷಕರು ಹರಿಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ ಬಳಿಕ ಬೆಳಕಿಗೆ ಬಂದಿದೆ.

    ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ಪರೀಕ್ಷೆಗಾಗಿ ತಂಡಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇತ್ತ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ವಿಗ್ರಹ ಕಳ್ಳತನ ಮಾಡಿ ಕೈ ಶಾಸಕ ಜೆ.ಆರ್.ಲೋಬೋ ಆಪ್ತ ಸಿಕ್ಕಿಬಿದ್ದ

    ವಿಗ್ರಹ ಕಳ್ಳತನ ಮಾಡಿ ಕೈ ಶಾಸಕ ಜೆ.ಆರ್.ಲೋಬೋ ಆಪ್ತ ಸಿಕ್ಕಿಬಿದ್ದ

    ಮಂಗಳೂರು: ವಿಗ್ರಹ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ ಕಾಂಗ್ರೆಸ್ ಮುಖಂಡ, ಶಾಸಕ ಜೆ.ಆರ್.ಲೋಬೋ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

    ಎನ್‍ಎಸ್‍ಯುಐ ಜಿಲ್ಲಾ ಕಾರ್ಯದರ್ಶಿ, ಮಂಗಳೂರಿನ ಕುಲಶೇಖರ ನಿವಾಸಿ ಆಸ್ಟಿನ್ ಪಿರೇರಾ ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಕುಂದಾಪುರದ ಕೋಟೇಶ್ವರ ಬಳಿ ನಾಲ್ಕು ಪಂಚಲೋಹದ ಜೈನ ತೀರ್ಥಂಕರರ ವಿಗ್ರಹಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಈತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.

    ಆ ಪೈಕಿ ಆಸ್ಟಿನ್ ಮಂಗಳೂರಿನ ಯುವ ಕಾಂಗ್ರೆಸ್ ಘಟಕದಲ್ಲಿ ಪ್ರಭಾವಿಯಾಗಿದ್ದು ಶಾಸಕ ಜೆ.ಆರ್ ಲೋಬೋ, ಮೊಯ್ದೀನ್ ಬಾವಾಗೆ ಆಪ್ತನಾಗಿದ್ದ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಂಗಳೂರಿಗೆ ಬಂದಾಗ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಆರೋಪಿಗಳಿಂದ ನೋಟು ಎಣಿಸುವ ಯಂತ್ರ, 40 ಸಾವಿರ ರೂ. ನಗದು ಹಾಗೂ ಎರ್ಟಿಗಾ ಕಾರು ವಶಕ್ಕೆ ಪಡೆಯಲಾಗಿದೆ. ಇದೀಗ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆಸ್ಟಿನ್ ಪಿರೇರಾನನ್ನು ಎನ್‍ಎಸ್‍ಯುಐ ನಿಂದ ತೆಗೆದುಹಾಕಲು ಚಿಂತನೆ ನಡೆದಿದೆ.

  • ಉಡುಪಿಯಲ್ಲಿ ಮನಬಂದಂತೆ ಕಲ್ಲೆಸೆದು ಬೀದಿ ರಂಪಾಟ ಮಾಡ್ತಿದ್ದ ಮಾನಸಿಕ ಅಸ್ವಸ್ಥ ಅರೆಸ್ಟ್

    ಉಡುಪಿಯಲ್ಲಿ ಮನಬಂದಂತೆ ಕಲ್ಲೆಸೆದು ಬೀದಿ ರಂಪಾಟ ಮಾಡ್ತಿದ್ದ ಮಾನಸಿಕ ಅಸ್ವಸ್ಥ ಅರೆಸ್ಟ್

    ಉಡುಪಿ: ಜಿಲ್ಲೆಯ ಮಲ್ಪೆ, ವಡಭಾಂಡೆಶ್ವರ, ಹೂಡೆ, ಆದಿ ಉಡುಪಿ, ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತ ಮಾನಸಿಕ ರೋಗಿಯೊರ್ವ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಾ, ಸೊತ್ತುಗಳನ್ನು ನಾಶ ಮಾಡುತ್ತ, ಪರಿಸರದಲ್ಲಿ ಭಯ ಪಡಿಸುವ ಚಟುವಟಿಕೆಗಳನ್ನು ಮಾಡುವ ಮೂಲಕ ಜನರಲ್ಲಿ ಆತಂಕ ಸೃಷ್ಠಿಸಿದ್ದಾನೆ.

    ಸುಮಾರು 30 ವರ್ಷದ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ಕಾನೂನು ಪ್ರಕ್ರಿಯೆ ನಡೆಸಿ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾನಸಿಕ ವ್ಯಕ್ತಿಯ ಉಗ್ರ ಪ್ರತಾಪಕ್ಕೆ ಬಹಳಷ್ಟು ಜನ ಹಲ್ಲೆಗೊಳಗಾದ ಪ್ರಕರಣಗಳು ಮಲ್ಪೆ ಪರಿಸರದಲ್ಲಿ ಈ ಹಿಂದೆ ನಡೆದಿವೆ.

    ಕಲ್ಲುಗಳನ್ನು ಕಾರಣ ಇಲ್ಲದೆ ಸಾರ್ವಜನಿಕರ ತಲೆಗೆ ಗುರಿಯಿಟ್ಟು ಹೊಡೆಯುತ್ತಿದ್ದನು. ಅಲ್ಲದೇ ಸೋಡಾ ಬಾಟಲಿಗಳನ್ನು ಎಸೆಯುತ್ತಿದ್ದ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಇದರಿಂದಾಗಿ ಸ್ಥಳೀಯರು, ಮಹಿಳೆಯರು, ಶಾಲಾ ಮಕ್ಕಳು ರಸ್ತೆಯಲ್ಲಿ ತಿರುಗಾಡಲು ಹೆದರುತ್ತಿದ್ದರು. ಈತನ ಉಪಟಳ ಎಲ್ಲೆ ಮೀರಿದಾಗ, ಸಾರ್ವಜನಿಕರು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಗಮನಕ್ಕೆ ತಂದಿದ್ದಾರೆ.

    ಸಾರ್ವಜನಿಕರ ಮನವಿಗೆ ಸ್ಪಂದಿಸಿದ ವಿಶು ಶೆಟ್ಟಿ ಅವರು ಮಾನಸಿಕ ವ್ಯಕ್ತಿಯ ರಾದ್ಧಾಂತ ಚಟುವಟಿಕೆಗಳ ವಿಚಾರ ಎಳೆ ಎಳೆಯಾಗಿ ಮನವಿಯಲ್ಲಿ ಉಲ್ಲೇಖಿಸಿ, ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ. ತಿಂಗಳು ಕಾಲ ನೀರಿಕ್ಷಿಸುತ್ತಾ, ಕಾಲ ಕಳೆದರೂ ಜಿಲ್ಲಾಡಳಿತದಿಂದ ಯಾವೊಂದು ಸ್ಪಂದನೆ ಸಿಕ್ಕಿರಲಿಲ್ಲ. ಇತ್ತ ಮಾನಸಿಕನ ರಂಪಾಟವು ಮದಗಜದಂತೆ ಹೆಚ್ಚಾಯಿತು. ವಾಹನಗಳ ಜಖಂಗೊಳಿಸುವುದು, ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡಲು ಶುರು ಮಾಡಲಾರಂಭಿಸಿದ್ದಾನೆ.

    ಈ ಹಿನ್ನೆಲೆಯಲ್ಲಿ ಪೊಲೀಸರ ಸಹಾಯದಿಂದ ಸಮಾಜ ಸೇವಕರು ಒಟ್ಟಾಗಿ ಮಾನಸಿಕ ಯುವಕನನ್ನು ಹಿಡಿದು ಧಾರವಾಡದ ಮಾನಸಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಉಡುಪಿಯಲ್ಲಿ ಸರ್ಕಾರಿ ಮಾನಸಿಕ ಆಸ್ಪತ್ರೆ ಸ್ಥಾಪನೆ ಮಾಡಬೇಕೆಂದು ದಶಕದಿಂದ ಒತ್ತಾಯಿಸುತ್ತಾ ಇದ್ದರೂ ಸರ್ಕಾರಗಳು ಇತ್ತ ಗಮನವನ್ನೇ ಕೊಡುತ್ತಿಲ್ಲ ಎಂಬುದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

  • ಹಳೇ 500, 1000 ರೂ. ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರ ಬಂಧನ- 1.95 ಕೋಟಿ ರೂ. ಹಳೇನೋಟು ವಶ

    ಹಳೇ 500, 1000 ರೂ. ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರ ಬಂಧನ- 1.95 ಕೋಟಿ ರೂ. ಹಳೇನೋಟು ವಶ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಳೇ ನೋಟುಗಳ ಎಕ್ಸ್ ಚೇಂಜ್ ದಂಧೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ನೋಟ್ ಬ್ಯಾನ್ ಆಗಿ 16 ತಿಂಗಳು ಕಳೆದು ಹೋದ್ರೂ ಹಳೇ ನೋಟುಗಳ ಅಕ್ರಮ ಬದಲಾವಣೆ ಮಾತ್ರ ಇನ್ನೂ ನಿಂತಿಲ್ಲ.

    ಕಳೆದ ರಾತ್ರಿ ಹಳೇ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರನ್ನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿಗಳ ಬಳಿ 1.95 ಕೋಟಿ ಹಳೇ ನೋಟುಗಳು ಪತ್ತೆಯಾಗಿದ್ದು, ಇವರು ಮಧ್ಯವರ್ತಿಯೊಬ್ಬನ ಮೂಲಕ ಹೊಸ ನೋಟುಗಳಿಗೆ ಎಕ್ಸ್ ಚೇಂಜ್ ಮಾಡಲು ಬಂದಿದ್ದರು ಎನ್ನಲಾಗಿದೆ.

    ಕೊತ್ತನೂರು ಮುಖ್ಯರಸ್ತೆಯ ಗೋಲ್ಡನ್ ಪಾಮ್ ಅಪಾರ್ಟ್‍ಮೆಂಟ್ ನಲ್ಲಿ ವ್ಯವಹಾರ ಕುದುರಿಸಿದ್ದ ಇವರು ಹೊಸ ನೋಟು ಎಕ್ಸ್ ಚೇಂಜ್ ಮಾಡುತ್ತಿದ್ದ ಮತ್ತೊಬ್ಬ ಮಧ್ಯವರ್ತಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊತ್ತನೂರು ಪೊಲೀಸರು, ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೋಟು ಎಕ್ಸ್ ಚೇಂಜ್ ದಂಧೆ ಬೆಳಕಿಗೆ ಬಂದಿದೆ.

    ಇಷ್ಟು ದೊಡ್ಡ ಪ್ರಮಾಣದ ಹಳೇ ನೋಟುಗಳನ್ನ ಎಲ್ಲಿಂದ ತಂದಿದ್ದಾರೆ ಮತ್ತು ಯಾರಿಗೆ ಸೇರಿದ್ದು ಎಂಬುದನ್ನ ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.

    ಸಾಂದರ್ಭಿಕ ಚಿತ್ರ
  • ಅಮೆರಿಕದ ಮಹಿಳೆಗೆ ಮಸಾಜ್ ಮಾಡೋ ನೆಪದಲ್ಲಿ ಸೆಕ್ಸ್ ಗೆ ಬೇಡಿಕೆ ಇಟ್ಟ ಕಾಮುಕ ಅರೆಸ್ಟ್

    ಅಮೆರಿಕದ ಮಹಿಳೆಗೆ ಮಸಾಜ್ ಮಾಡೋ ನೆಪದಲ್ಲಿ ಸೆಕ್ಸ್ ಗೆ ಬೇಡಿಕೆ ಇಟ್ಟ ಕಾಮುಕ ಅರೆಸ್ಟ್

    ಕೊಪ್ಪಳ: ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು  ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಹನುಮನ ಹಳ್ಳಿ ನಿವಾಸಿ ಆನಂದ ರೆಡ್ಡಿ ಬಂಧಿತ ಆರೋಪಿ. ಅಮೆರಿಕದ ಮಹಿಳೆಯೊಬ್ಬರು ಈತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.

    ಏನಿದು ಪ್ರಕರಣ?
    ವಿದೇಶಿಗರು ತುಂಗಭದ್ರಾ ದಡದ ಕೊಪ್ಪಳದ ಗಂಗಾವತಿ ತಾಲೂಕಿನ ಗ್ರಾಮಗಳಾದ ವಿರುಪಾಪುರ ಗಡ್ಡಿ, ಸಣಾಪುರ್ ಮತ್ತು ಹನುಮನ ಹಳ್ಳಿಗಳಲ್ಲಿರುವ ಹೋಮ್ ಸ್ಟೇ ಗಳಲ್ಲಿ ವಾಸವಾಗುತ್ತಾರೆ. ಇದನ್ನೇ ಮೂಲ ದಂಧೆಯನ್ನಾಗಿಸಿಕೊಂಡ ಆನಂದ ರೆಡ್ಡಿ ಹನುಮನ ಹಳ್ಳಿಯಲ್ಲಿ ತನ್ನದೇ ಆದ ಸ್ಟೇ ಹೋಮ್‍ನಲ್ಲಿ ವಿದೇಶಿಗರಿಗೆ ತಂಗಲು ರೂಮ್‍ ಬಾಡಿಗೆ ನೀಡುವ ಕೆಲಸ ಮಾಡುತ್ತಾನೆ.

    ಇಂತಹ ರೂಮ್ ಗಳಲ್ಲಿ ಉಳಿಯುವ ವಿದೇಶಿಗರ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳುವ ಆರೋಪಿ ಅವರಿಗೆ ಮಸಾಜ್ ಮಾಡುವುದಾಗಿ ನಂಬಿಸಿ ಸ್ಟೇ ಹೋಮ್‍ಗೆ ಕರೆದುಕೊಂಡು ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಈ ಕುರಿತು ಸ್ಥಳೀಯರು ಆರೋಪಿಸಿದ್ದು, ಇಂತಹ ಸಾಕಷ್ಟು ಘಟನೆಗಳು ನಡೆದಿದ್ದರೂ ಯಾರು ಪೊಲೀಸರಿಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ.

    ಇತ್ತೀಚಿಗೆ ಅಮೆರಿಕದಿಂದ ಬಂದ ಮಹಿಳೆಯೊಬ್ಬರು ಆತನ ಹೋಮ್ ಸ್ಟೇ ಬಾಡಿಗೆ ಪಡೆದಿದ್ದಾರೆ. ಈ ವೇಳೆ ಮಹಿಳೆ ಗೆ ಮಸಾಜ್ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ ವೇಳೆ ಆರೋಪಿ ಆನಂದರೆಡ್ಡಿ ಮಹಿಳೆಯನ್ನು ಹೋಮ್ ನಿಂದ ಸ್ಟೇ ಕಳುಹಿಸಿದ್ದಾನೆ. ಘಟನೆ ನಂತರ ಮಹಿಳೆ ಅಮೆರಿಕಕ್ಕೆ ತೆರಳಿದ ವೇಳೆ ತಮ್ಮ ವಿದೇಶಾಂಗ ಇಲಾಖೆಗೆ ಈ ಕುರಿತು ಇಮೇಲ್ ಮುಖಾಂತರ ದೂರು ನೀಡಿದ್ದಾರೆ. ಈ ಹಿನ್ನೆಲೆ ಪ್ರಕರಣದ ಬೆನ್ನೆತ್ತಿದ ಕೊಪ್ಪಳ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅನಂದರೆಡ್ಡಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.