Tag: arrest

  • ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರಡೆ, ಮೂಳೆ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರಡೆ, ಮೂಳೆ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಚಿಕ್ಕಬಳ್ಳಾಪುರ: ಪ್ರೀತಿ, ಪ್ರೇಮ, ಪ್ರಣಯ ಎಂದು ಯುವತಿ ಜೊತೆ ಹಾಸಿಗೆ ಹಂಚಿಕೊಂಡ ಯುವಕನೋರ್ವ ಕೊನೆಗೆ ಯುವತಿ ಮದುವೆಯಾಗು ಅಂತ ಒತ್ತಾಯಿಸಿದ್ದಕ್ಕೆ, ಪ್ರಿಯತಮೆಯ ಮೃತದೇಹವೇ ಸಿಗದ ಹಾಗೆ ಕೊಲೆ ಮಾಡಿರುವ ಭಯಂಕರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಮಾತು ಬಾರದ, ಕಿವಿ ಕೇಳದ ಯುವಕನೋರ್ವ ತನ್ನ ಪ್ರೇಯಸಿಯನ್ನೇ ಪ್ಲಾನ್ ಮಾಡಿ ಮರ್ಡರ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಗೌರಿಬಿದನೂರು ಹೊರವಲಯದ ರೇಮೆಂಡ್ಸ್ ಗಾರ್ಮೆಂಟ್ಸ್ ನಲ್ಲಿ ಸೂಪರ್ ವೈಸರ್ ಆಗಿದ್ದ, ಗೌರಿಬಿದನೂರು ನಗರದ ಮುನೇಶ್ವರ ಬಡಾವಣೆಯ ನಿವಾಸಿ ಕಿಶೋರ್ ಎಂಬಾತ ತನ್ನ ಪ್ರಿಯತಮೆ ಕೋಡಿಗಾನಹಳ್ಳಿ ಗ್ರಾಮದ ಅನಿತಾ (22)ಳನ್ನು ಕೊಲೆ ಮಾಡಿದ್ದಾನೆ.

    ಗಾರ್ಮೆಂಟ್ಸ್ ನಲ್ಲೇ ಕೆಲಸ ಮಾಡುತ್ತಿದ್ದ ಅನಿತಾಳ ಜೊತೆ ಲವ್ವಿ ಡವ್ವಿ ಶುರು ಇಟ್ಟುಕೊಂಡಿದ್ದ ಕಿಶೋರ್ ದೈಹಿಕವಾಗಿ ಆಕೆಯನ್ನೇ ಬಳಸಿಕೊಂಡಿದ್ದಾನೆ. ಕೊನಗೆ ಆಕೆ ಮದುವೆಯಾಗು ಅಂದಾಗ ನಿನ್ನ ಜಾತಿ ಬೇರೆ ನನ್ನ ಜಾತಿ ಬೇರೆ ಅಂತ ಕ್ಯಾತೆ ತೆಗೆದಿದ್ದಾನೆ.

    ಇದೆಲ್ಲದರ ನಡುವೆ ಆನಿತಾ ಹಣಕ್ಕಾಗಿ ಕಿಶೋರ್ ಬಳಿ ಪೀಡಿಸುತ್ತಿದ್ದಳಂತೆ. ಇದರಿಂದ ರೋಸಿ ಹೋದ ಕಿಶೋರ್ ಹಣ ಕೊಡುತ್ತೀನಿ ಬಾ ಅಂತ ಮಾರ್ಚ್ 4ರಂದು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ, ಗೌರಿಬಿದನೂರು ತಾಲೂಕಿನ ನಿರ್ಜನ ಪ್ರದೇಶದವಾದ ದೊಡ್ಡಹನುಮನೇಹಳ್ಳಿ ಅರಣ್ಯಪ್ರದೇಶದಲ್ಲಿ ಗುಂಡಿಗೆ ತಳ್ಳಿ, ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಕೊನೆಗೆ ವೇಲ್ ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿಬಂದಿದ್ದ.

    ಈ ಸಂಬಂಧ ಕೆಲಸಕ್ಕೆ ಹೋದ ಮಗಳು ಬಂದಿಲ್ಲ ಎಂದು ಅನಿತಾಳ ಸಂಬಂಧಿಕರು ಮಾರ್ಚ್ 10 ರಂದು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಘಟನೆ ಬೆಳಕಿಗೆ ಬಂದಿದ್ದು ಹೇಗೆ?
    ಇದೆಲ್ಲದರ ನಡುವೆ ಮಾರ್ಚ್ 30 ರಂದು ದೊಡ್ಡಹನುಮೇನಹಳ್ಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ತಲೆ ಬುರುಡೆ, ಮೂಳೆಗಳು ಹಾಗೂ ಅದರ ಜೊತೆಗೆ ಅಲ್ಲೆ ಸಿಕ್ಕ ಬ್ಯಾಗ್ ನಿಂದ ಅನಿತಾ ಕೊಲೆಯಾಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಅನಿತಾಳ ಕೊಲೆ ಪ್ರಕರಣದ ತನಿಖೆಗೆ ಇಳಿದ ಪೊಲೀಸರು. ಅನಿತಾಳ ಮೊಬೈಲ್ ನಲ್ಲಿದ್ದ ಫೋಟೋಗಳು ಹಾಗೂ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿ, ಕಿಶೋರ್ ನನ್ನ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

    ಈ ಸಂಬಂಧ ಆರೋಪಿ ಕಿಶೋರ್ ನನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿಯ ತಲೆಬುರುಡೆ, ಮೂಳೆಗಳು ಪತ್ತೆ!

  • ಮದ್ವೆಗೆ ಕುದುರೆ ಏರಿ ಮೆರವಣಿಗೆಯೊಂದಿಗೆ ಬರುತ್ತಿದ್ದ ವರ ಅರೆಸ್ಟ್!

    ಮದ್ವೆಗೆ ಕುದುರೆ ಏರಿ ಮೆರವಣಿಗೆಯೊಂದಿಗೆ ಬರುತ್ತಿದ್ದ ವರ ಅರೆಸ್ಟ್!

    ಭೋಪಾಲ್: ಕುದುರೆ ಏರಿ ತನ್ನ ಮರವಣಿಗೆಯೊಂದಿಗೆ ಮದುವೆ ಬರುತ್ತಿದ್ದ ವರನನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯ ಪ್ರದೇಶದ ಬಾಲಾಘಾಟ್‍ನ ವಾರಾಸಿವಾನಿಯ ಸಿಕಂದರ್ ಗ್ರಾಮದಲ್ಲಿ ನಡೆದಿದೆ.

    ದಿನೇಶ್ ಬಂಧಿತ ಆರೋಪಿ. ಮದುವೆ ಮೆರವಣಿಗೆಯಲ್ಲಿ ಬರುತ್ತಿದ್ದ ವರನನ್ನು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ದಿನೇಶ್ ತನ್ನದೇ ಗ್ರಾಮದ ಯುವತಿಯನ್ನು ಎರಡೂ ವರ್ಷದಿಂದ ಪ್ರೀತಿಸುತ್ತಿದ್ದನು. ಅಷ್ಟೇ ಅಲ್ಲದೇ ಮದುವೆಯಾಗುವುದ್ದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದನು ಎಂದು ತಿಳಿಸಿದ್ದಾರೆ.

    ಈ ನಡುವೆ ದಿನೇಶ್ ಪೋಷಕರು ಆತನ ಮದುವೆಯನ್ನು ಬೇರೆ ಯುವತಿ ಜೊತೆ ನಿಶ್ಚಯಿಸಿದ್ದರು. ಇನ್ನೊಂದು ಆಶ್ಚರ್ಯಕರ ವಿಷಯವೆನೆಂದರೆ ಯುವತಿಗೆ ತನ್ನ ಪ್ರಿಯಕರ ದಿನೇಶ್ ಮದುವೆಯ ವಿಷಯದ ಬಗ್ಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲದೇ ದಿನೇಶ್ ಮದುವೆಯ ಎರಡು ದಿನಗಳ ಹಿಂದೆ ಯುವತಿ ಆತನನ್ನು ಭೇಟಿ ಮಾಡಿದ್ದಳು. ಆಗ ದಿನೇಶ್ ಮತ್ತೆ ಆಕೆಯ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಮದುವೆಯ ದಿನವೇ ಯುವತಿಗೆ ವಿಷಯ ಗೊತ್ತಾಗಿದ್ದು, ಆಕೆ ದಿನೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದಿನೇಶ್ ಮದುವೆ ಮಾರ್ಚ್ 31ರಂದು ನೆರವೇರಬೇಕಿತ್ತು. ದಿನೇಶ್ ಕುಟುಂಬದವರು ಹಾಗೂ ಸಂಬಂಧಿಕರು ಆತನ ಮದುವೆಯ ಮೆರವಣಿಗೆಗೆ ಹೊರಟ್ಟಿದ್ದರು. ಆದರೆ ಕಲ್ಯಾಣ ಮಂಟಪಕ್ಕೆ ತಲುಪುವ ಮೊದಲೇ ದಾರಿ ಮಧ್ಯದಲ್ಲಿ ಪೊಲೀಸರು ದಿನೇಶ್‍ನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಿದ್ದಾರೆ.

    ಪೊಲೀಸರು ದೂರನ್ನು ಪರಿಗಣಿಸಿ ದಿನೇಶ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಯುವತಿ ಮೇಲಿನ ಆರೋಪಗಳು ಸಾಬೀತಾಗಿದೆ. ದಿನೇಶ್ ಹಾಗೂ ಯುವತಿ 2016 ರಿಂದ ಪ್ರೀತಿಸುತ್ತಿದ್ದರು. ದಿನೇಶ್‍ನನ್ನು ಬಂಧಿಸುತ್ತಿರುವುದ್ದನ್ನು ನೋಡಿ ಸಂಬಂಧಿಕರು ಪ್ರಶ್ನಿಸಿದ್ದಾರೆ. ಆಗ ಪೊಲೀಸರು ನಡೆದ ಘಟನೆ ಬಗ್ಗೆ ವಿವರಿಸಿದ ಮೇಲೆ ಎಲ್ಲರೂ ತಮ್ಮ ಮನೆಗೆ ಹಿಂತಿರುಗಿದ್ದಾರೆ.

  • ರೂಪದರ್ಶಿಗೆ ವಂಚನೆ- ಕಿರುತೆರೆ ನಟ ಕಿರಣ್‍ರಾಜ್ ಅರೆಸ್ಟ್

    ರೂಪದರ್ಶಿಗೆ ವಂಚನೆ- ಕಿರುತೆರೆ ನಟ ಕಿರಣ್‍ರಾಜ್ ಅರೆಸ್ಟ್

    ಬೆಂಗಳೂರು: ದೈಹಿಕ ಸಂಪರ್ಕ ನಡೆಸಿ ಮದುವೆಯಾಗದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ರೂಪದರ್ಶಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಕಿರುತೆರೆ ನಟ ಕಿರಣ್ ರಾಜ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಸೋಮವಾರ ರಾತ್ರಿ ಸುಮಯಾ(ಹೆಸರು ಬದಲಾಯಿಸಲಾಗಿದೆ) ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದು ಕಿರಣ್ ವಿರುದ್ಧ ದೂರು ದಾಖಲಿಸಿದ್ದರು.

    ದೂರಿನಲ್ಲಿ ಏನಿದೆ?
    ನಾನು ಮತ್ತು ಕಿರಣ್ ರಾಜ್ ಲಿವಿಂಗ್ ರಿಲೇಶನ್ ಶಿಪ್ ಹೊಂದಿದ್ದೆವು. ಮಾರ್ಚ್ 29 ರಂದು ಕಿರಣ್ ನನ್ನ ಮೇಲೆ ಕಾರ್ ನಲ್ಲಿ ಹಲ್ಲೆ ಮಾಡಿದ್ದನು. ಅಲ್ಲದೇ ಮನೆ ಬಳಿಯ ಗ್ಯಾರೇಜ್ ನಲ್ಲಿ ನನ್ನನ್ನು ಕೂಡಿ ಹಾಕಿ ಅಲ್ಲೂ ಸಹ ಹಲ್ಲೆ ನಡೆಸಿದ್ದ. ನಂತರ ನಾನು ಕಿರಣ್ ನಿಂದ ತಪ್ಪಿಸಿಕೊಂಡು ಮುಂಬೈ ಗೆ ಹೋಗಿದ್ದೆ. ಬಳಿಕ ಮುಂಬೈನ ಓಶಿವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಈ ವೇಳೆ ಹಲ್ಲೆ ಬೆಂಗಳೂರಿನಲ್ಲಿ ನಡೆದಿರುವ ಕಾರಣ ಅಲ್ಲೇ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದರು. ಹೀಗಾಗಿ ನಾನು ಇಲ್ಲಿ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಿರಣ್ ನನ್ನ ಜೊತೆ ದೈಹಿಕ ಸಂಪರ್ಕ ಹೊಂದಿ ಕೊನೆಗೆ ಮದುವೆಯಾಗದೆ ಮೋಸ ಮಾಡಿದ್ದಾನೆ ಎಂದು ಸುಮಾಯಾ ದೂರಿನಲ್ಲಿ ಆರೋಪಿಸಿದ್ದಾರೆ.

  • 42 ಆರೋಪಿಗಳ ಬಂಧನ – 140 ಬೈಕ್, 200ಗ್ರಾಂ ಚಿನ್ನ, ಹಣ, ಲ್ಯಾಪ್ ಟಾಪ್, ಮೊಬೈಲ್ ವಶ

    42 ಆರೋಪಿಗಳ ಬಂಧನ – 140 ಬೈಕ್, 200ಗ್ರಾಂ ಚಿನ್ನ, ಹಣ, ಲ್ಯಾಪ್ ಟಾಪ್, ಮೊಬೈಲ್ ವಶ

    ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ, ಸರಗಳ್ಳತನ ಪ್ರಕರಣಗಳನ್ನು ಬೇಧಿಸಿ 42 ಆರೋಪಿಗಳ ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ 1.6 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ. ಮಾರತ್ ಹಳ್ಳಿ, ಮಹದೇವಪುರ, ಎಚ್‍ಎಎಲ್ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಬಗ್ಗೆ ತನಿಖೆ ನಡೆಸಿ ಪೊಲೀಸರು 42 ಆರೋಪಿಗಳ ಬಂಧಿಸಿದ್ದು, ಬಂಧಿತರಿಂದ 140 ಬೈಕ್, 200 ಗ್ರಾಂ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್, ಒಂದು ಕಾರು, ಟೆಂಪೋ ಸೇರಿದಂತೆ ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಎಟಿಎಂಗೆ ಹಣ ಜಮೆ ಮಾಡಲು ಹೋಗಿ 52 ಲಕ್ಷ ಹಣ ದೋಚಿದ ಅಸಾಮಿ ಪರಮೇಶನನ್ನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ಅಷ್ಟು ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ವಿಧಾನಸಭಾ ಎಲೆಕ್ಷನ್ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಭದ್ರತೆ ವಹಿಸಲಾಗಿದೆ. ನಗರದಲ್ಲಿ ಪರವಾನಿಗೆ ಪಡೆದಿರುವ 8000 ವೆಪನ್ಸ್ ಇದೆ. ಈಗಾಗಲೇ 1500 ವೆಪನ್ ಗಳನ್ನ ಡಿಪಾಸಿಟ್ ಮಾಡಲಾಗಿದೆ. ಉಳಿದವರು ಆಯಾ ಠಾಣಾ ವ್ಯಾಪ್ತಿಗಳಲ್ಲಿ ವೆಪನ್ ಗಳನ್ನ ಡೆಪಾಸಿಟ್ ಮಾಡಿ ಅವಶ್ಯಕತೆ ಇದ್ದಲ್ಲಿ ಡಿಸಿಪಿಗೆ ಲೇಟರ್ ನೀಡುವಂತೆ ಸೂಚನೆ ನೀಡಿದ್ದಾರೆ.

  • ಡೆಲಿವರಿ ತಡವಾಗಿದ್ದಕ್ಕೆ ಫ್ಲಿಪ್ ಕಾರ್ಟ್ ಬಾಯ್‍ಗೆ 20 ಬಾರಿ ಇರಿದ ಮಹಿಳೆ

    ಡೆಲಿವರಿ ತಡವಾಗಿದ್ದಕ್ಕೆ ಫ್ಲಿಪ್ ಕಾರ್ಟ್ ಬಾಯ್‍ಗೆ 20 ಬಾರಿ ಇರಿದ ಮಹಿಳೆ

    ನವದೆಹಲಿ: ಮೊಬೈಲ್ ತಡವಾಗಿ ತಲುಪಿಸಿದ್ದಕ್ಕೆ ಮಹಿಳೆಯೊಬ್ಬಳು ಡೆಲಿವರಿ ಬಾಯ್ ಮೇಲೆ 20 ಬಾರಿ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ನವದೆಹಲಿಯ ನಿಹಾರ್ ವಿಹಾಲ್ ಬಳಿ ನಡೆದಿದೆ.

    ಮಹಿಳೆಯಿಂದ ಹಲ್ಲೆಗೊಳಗಾದ ಯುವಕ ಹೆಸರು ಕೇಶವ್. ಆನ್ ಲೈನ್ ಶಾಪಿಂಗ್ ತಾಣಾ ಪ್ಲಿಪ್ ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ.

    ಕಮಲ್ ದೀಪ್ 11 ಸಾವಿರ ರೂ. ಬೆಲೆಯ ಮೊಬೈಲ್ ಬುಕ್ ಮಾಡಿದ್ದಳು. ಇದಾದ ನಾಲ್ಕು ದಿನಗಳ ಬಳಿಕ ಕೇಶವ್ ಮೊಬೈಲ್ ಮನೆಗೆ ತಲುಪಿಸಲು ತೆರಳಿದ ವೇಳೆ ಘಟನೆ ನಡೆದಿದೆ.

    ಕೇಶವ್ ಮನೆಗೆ ತೆರಳಿದ ಮರು ಕ್ಷಣದಲ್ಲಿ ಆತನನ್ನು ಬಲವಂತವಾಗಿ ಮನೆ ಒಳಗೆ ಎಳೆದ ಆಕೆ ಆತನ ಮೇಲೆ ಚಾಕುವಿನಿಂದ 20 ಬಾರಿ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಕಮಲ್ ದೀಪ್ ಸಹೋದರ ಜಿತೇಂದರ್ ಸಹ ಕೃತ್ಯಕ್ಕೆ ಸಹಕಾರ ನೀಡಿದ್ದು, ಇಬ್ಬರು ಸೇರಿ ಶೂ ಲೇಸ್‍ನಿಂದ ಕೇಶವ್‍ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಕೇಶವ್ ಪ್ರಜ್ಞೆತಪ್ಪಿ ಮನೆಯಲ್ಲೇ ಕುಸಿದು ಬಿದಿದ್ದಾನೆ.

    ಸ್ವಲ್ಪ ಸಮಯದ ಬಳಿಕ ಕೇಶವ್ ಬಳಿ ಇದ್ದ 40 ಸಾವಿರ ಹಣ ಹಾಗೂ ಡೆಲಿವರಿ ನೀಡಲು ತಂದಿದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಬೈಕ್ ಮೂಲಕ ಆತನನ್ನು ಚಂದನ್ ವಿಹಾರ್ ಪ್ರದೇಶದ ಕೊಳಚೆ ನೀರು ಕಾಲುವೆಗೆ ಎಸೆದಿದ್ದಾರೆ.

    ಈ ವೇಳೆ ಕೊಳಚೆ ನೀರು ಪೈಪ್ ನಿಂದ ರಕ್ತ ಬರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಕೇಶವ್ ನನ್ನು ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪ್ರಥಮ ಚಿಕಿತ್ಸೆ ಬಳಿಕ ಘಟನೆ ಕುರಿತು ಕೇಶವ್ ನಿಂದ ಮಾಹಿತಿ ಪಡೆದ ಪೊಲೀಸರು ಆರೋಪಿ ಕಮಲ್ ದೀಪ್ ಹಾಗೂ ಜಿತೇಂದರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೇ ನೀಡಿರುವ ಫ್ಲಿಪ್ ಕಾರ್ಟ್ ಸಂಸ್ಥೆ ತನ್ನ ಸಂಸ್ಥೆಯ ಡೆಲಿವರಿ ಬಾಯ್ ಮೇಲೆ ನಡೆದಿರುವ ಹಲ್ಲೆ ದೃಢಪಡಿಸಿದೆ. ಅಲ್ಲದೇ ಆತನ ಆರೋಗ್ಯದ ಚಿಕಿತ್ಸೆಯ ವೆಚ್ಚ ಹಾಗೂ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದೆ.

  • 5 ವರ್ಷ ರಿಲೇಶನ್‍ಶಿಪ್‍ನಲ್ಲಿದ್ದು ಬ್ರೇಕಪ್ ಮಾಡಿದ ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ!

    5 ವರ್ಷ ರಿಲೇಶನ್‍ಶಿಪ್‍ನಲ್ಲಿದ್ದು ಬ್ರೇಕಪ್ ಮಾಡಿದ ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ!

    ಮುಂಬೈ: ಪ್ರಿಯಕರನೊಬ್ಬ ತನ್ನ ಮಾಜಿ ಪ್ರೇಯಸಿಯ ಕುತ್ತಿಗೆಗೆ ಚಾಕು ಹಿಡಿದು ವಿಷ ಕುಡಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಕಿಶನ್ ಸೋನವಾನೇ(24) ತನ್ನ 22 ವರ್ಷದ ಮಾಜಿ ಪ್ರೇಯಸಿ ಜೊತೆ 5 ವರ್ಷದಿಂದ ರಿಲೇಶನ್‍ಶಿಪ್‍ನಲ್ಲಿದ್ದನು. ನಂತರ ಯುವತಿ ಕಳೆದ ತಿಂಗಳು ಕಿಶನ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಳು. ನಂತರ ಆಕೆಗೆ ಬುದ್ಧಿ ಕಲಿಸಲು ಕಿಶನ್ ತನ್ನ ಮಾಜಿ ಪ್ರೇಯಸಿಯನ್ನು ವಿಕ್ರೋಲಿಯಲ್ಲಿರುವ ಪಾರ್ಕ್‍ಗೆ ಕರೆಸಿಕೊಂಡಿದ್ದ.

    ತನ್ನ ಮಾಜಿ ಪ್ರಿಯಕರನ ಮಾತು ಕೇಳಿ ಯುವತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪಾರ್ಕಿಗೆ ಹೋಗಿದ್ದಳು. ನಂತರ ಇಬ್ಬರು ಮಾತನಾಡುತ್ತಿದ್ದರು, ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ವಾದ-ವಿವಾದ ನಡೆಯಿತು ಎಂದು ಪ್ರತಿಕೆಯೊಂದರಲ್ಲಿ ವರದಿಯಾಗಿದೆ.

    ಜಗಳವಾಡುತ್ತಿದ್ದಾಗ ಕಿಶನ್ ನನ್ನನ್ನು ಶಾಂತವಾಗಿರಲು ಹೇಳಿ, ಒಂದು ಮಾತ್ರೆಯನ್ನು ಕೊಟ್ಟಿದ್ದ. ಆದರೆ ಅದು ಇಲಿ ಪಾಷಾಣ ರೀತಿ ಇತ್ತು. ನಾನು ಅದನ್ನು ತಿನ್ನಲು ನಿರಾಕರಿಸಿದೆ. ಆಗ ಅವನು ನನ್ನ ಕುತ್ತಿಗೆ ಹತ್ತಿರ ಚಾಕು ಇಟ್ಟು ಪ್ರಾಣ ಬೆದರಿಕೆ ಹಾಕಿದ್ದ. ಅದಕ್ಕೆ ನಾನು ಹೆದರಿ ಆ ಮಾತ್ರೆಯನ್ನು ನುಂಗಿದೆ. ನಂತರ ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದೆ ಎಂದು ಯುವತಿ ಪೊಲೀಸರ ಹತ್ತಿರ ತಿಳಿಸಿದ್ದಾಳೆ.

    ಈ ಘಟನೆ ನಡೆದ ನಂತರ ಕಿಶನ್ ಆ ಜಾಗದಿಂದ ಪರಾರಿಯಾಗಿದ್ದು, ಪಾರ್ಕ್‍ನಲ್ಲಿದ್ದ ಸ್ಥಳೀಯರು ಯುವತಿಯನ್ನು ಮಹಾತ್ಮ ಪುಲೇ ಮುನಿಸಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಸದ್ಯ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಕಿಶನ್‍ನನ್ನು ಆತನ ಮನೆಗೆ ಹೋಗಿ ಬಂಧಿಸಿದ್ದೇವೆ ಎಂದು ವಿಕ್ರೋಲಿ ಪೊಲೀಸ್ ಠಾಣೆಯ ಅಧಿಕಾರಿಯಾದ ಎಸ್‍ಪಿಐ ಸಂಜಯ್ ಮೋರ್ ತಿಳಿಸಿದ್ದಾರೆ.

  • ಹೆತ್ತ ತಾಯಿಯ ಎದೆಗೆ ಜಾಡಿಸಿ ಒದ್ದ ನೀಚ ಮಗ!

    ಹೆತ್ತ ತಾಯಿಯ ಎದೆಗೆ ಜಾಡಿಸಿ ಒದ್ದ ನೀಚ ಮಗ!

    ಬಳ್ಳಾರಿ: 9 ತಿಂಗಳು ಕಾಲ ಹೊಟ್ಟೆಯಲ್ಲಿ ಹೊತ್ತುಕೊಂಡು ಹೆತ್ತು ಸಾಕಿದ ಮಗನೇ ತಾಯಿ ಎದೆಗೆ ಜಾಡಿಸಿ ಒದ್ದ ಅಮಾನವೀಯ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

    ಹೊಸಪೇಟೆಯ ಸರ್ದಾರ್ ಮೊಹಲ್ಲಾದಲ್ಲಿ ಮಹಮ್ಮದ್ ಗಫೂರ್ ಎಂಬಾತನೇ ತಾಯಿ ಎದೆಗೆ ಒದ್ದ ಪಾಪಿ ಮಗ. ಈತ ಆಸ್ತಿಗಾಗಿ ತನ್ನ 70 ವರ್ಷದ ಹೆತ್ತ ತಾಯಿಯನ್ನು ಒದ್ದು ವಿಕೃತಿ ಮೆರೆದಿದ್ದಾನೆ. ಕಳೆದ ಆರು ತಿಂಗಳಿನಿಂದ ಈ ದುಷ್ಟಮಗ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹಿಂಸಿಸುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

    ಸೋಮವಾರ ಮತ್ತೆ ಆಸ್ತಿಗಾಗಿ ಮಗ ತಗಾದೆ ತೆಗೆದಿದ್ದು, ತಾಯಿ ಮಾಬುನ್ನಿಯನ್ನು ಕಾಲಿನಿಂದ ಒದಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಸದ್ಯ ಮಗನಿಂದ ಹಲ್ಲೆಗೆ ಒಳಗಾದ ಪುತ್ರನ ವಿರುದ್ಧ ತಾಯಿ ಹೊಸಪೇಟೆ ಬಡಾವಣೆ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವಿದ್ಯಾರ್ಥಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ ಮದರಸಾ ಶಿಕ್ಷಕ ಅರೆಸ್ಟ್!

    ವಿದ್ಯಾರ್ಥಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ ಮದರಸಾ ಶಿಕ್ಷಕ ಅರೆಸ್ಟ್!

    ಬೆಂಗಳೂರು: ತಲಘಟ್ಟಪುರ ಪೊಲೀಸರು ಸಲಿಂಗಕಾಮಿ ಶಿಕ್ಷಕನನ್ನು ಬಂಧಿಸಿದ್ದಾರೆ.

    ಅಬ್ದುಲ್ ಜುಬೇರ್ ಅಲಿ ಬಂಧಿತ ಆರೋಪಿ. ಈತ ಮದರಸದಲ್ಲಿ ಶಿಕ್ಷಕನಾಗಿದ್ದು, ವಿದ್ಯಾರ್ಥಿಯೊಬ್ಬನನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ. ನಂತರ ವಿದ್ಯಾರ್ಥಿ ಪೋಷಕರ ಬಳಿ ಶಿಕ್ಷಕ ತನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದನು.

    ನಂತರ ಪೋಷಕರು ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇದೀಗ ತಲಘಟ್ಟಪುರ ಪೊಲೀಸರು ಆರೋಪಿ ಅಬ್ದುಲ್ ಜುಬೇರ್ ಅಲಿನನ್ನು ಬಂಧಿಸಿದ್ದಾರೆ.

  • ಚಿನ್ನದ ಓಲೆ ಕೊಡಲಿಲ್ಲವೆಂದು ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ ಪತಿ!

    ಚಿನ್ನದ ಓಲೆ ಕೊಡಲಿಲ್ಲವೆಂದು ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ ಪತಿ!

    ಇಸ್ಲಾಮಾಬಾದ್: ಪತಿಯೊಬ್ಬ ತನ್ನ ಪತ್ನಿ ಚಿನ್ನದ ಓಲೆ ಕೊಡಲಿಲ್ಲವೆಂದು ಆಕೆಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಪಾಕಿಸ್ತಾನದ ಡೇರಾ ಘಾಸಿಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಈ ದಂಪತಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಆಗಾಗ ಇವರ ಮಧ್ಯೆ ಜಗಳವಾಗುತ್ತಿತ್ತು. ಆದರೆ ಮಂಗಳವಾರ ಪತಿ ತನ್ನ ಪತ್ನಿಯನ್ನು ಚಿನ್ನದ ಓಲೆಯನ್ನು ಕೇಳಿದ್ದಾನೆ. ಆದರೆ ಆಕೆ ಕೊಡಲು ನಿರಾಕರಿಸಿದ್ದಾಳೆ. ಇದ್ದರಿಂದ ರೊಚ್ಚಿಗೆದ್ದ ಪತಿ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ಹೊಡೆಯಲು ಶುರು ಮಾಡಿದ್ದಾನೆ.

     

    ಪತಿಯ ಹೊಡೆತದಿಂದ ಮಹಿಳೆ ಜೋರಾಗಿ ಅಳುತ್ತಾ, ಕಿರುಚಾಡಲು ಶುರು ಮಾಡಿದ್ದಾಳೆ. ಆಗ ರೂಮಿನ ಹತ್ತಿರದಲ್ಲೇ ಇದ್ದ ಮಹಿಳೆಯ ತಂದೆ ಹಾಗೂ ಆಕೆಯ ಚಿಕ್ಕಪ್ಪ ರೂಮಿನ ಹತ್ತಿರ ಓಡಿ ಬಂದಿದ್ದಾರೆ. ಮಹಿಳೆಯ ತಂದೆ ಹಾಗೂ ಆಕೆಯ ಸಂಬಂಧಿಕರು ಬಾಗಿಲು ತಟ್ಟಿದ್ದರು ಆತ ರೂಮಿನ ಬಾಗಿಲನ್ನು ತೆಗೆಯಲಿಲ್ಲ. ನಂತರ ಎಲ್ಲರೂ ಸೇರಿ ಬಾಗಿಲನ್ನು ಹೊಡೆದಿದ್ದಾರೆ.

    ಎಲ್ಲರೂ ರೂಮಿನೊಳಗೆ ಹೋಗಿ ನೋಡಿದ್ದಾಗ ಮಹಿಳೆ ರಕ್ತಸ್ತ್ರಾವದಿಂದ ಪ್ರಜ್ಞೆ ತಪ್ಪಿದ್ದು, ಪತಿ ಆಕೆಯ ಗುಪ್ತಾಂಗವನ್ನೇ ಕತ್ತರಿಸಿದ್ದನು. ನಂತರ ಸಂಬಂಧಿಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪೊಲೀಸರಿಗೆ ಕರೆ ಮಾಡಿದ್ದರು. ವಿಚಾರಣೆ ವೇಳೆ ಕ್ರೂರಿ ಪತಿ ತನ್ನ ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ್ದಾನೆಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

    ಮಹಿಳೆಯ ಕುಟುಂಬಸ್ಥರ ಪ್ರಕಾರ ಈ ಹಿಂದೆ ಪತಿ ತನ್ನ ಪತ್ನಿಯ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾನೆ. ಆಕೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಆತ ಆಗಾಗ ತನ್ನ ಪತ್ನಿಯ ಜೊತೆ ಜಗಳವಾಡುತ್ತುದ್ದನು ಎಂದು ತಿಳಿಸಿದ್ದಾರೆ.

  • ಮದ್ವೆಯಾಗುವುದಾಗಿ ಇಬ್ಬರು ಅಪ್ರಾಪ್ತೆಯರ ಕಿಡ್ನಾಪ್ – ನಿರಂತರ 14 ದಿನಗಳ ಕಾಲ 9 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

    ಮದ್ವೆಯಾಗುವುದಾಗಿ ಇಬ್ಬರು ಅಪ್ರಾಪ್ತೆಯರ ಕಿಡ್ನಾಪ್ – ನಿರಂತರ 14 ದಿನಗಳ ಕಾಲ 9 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

    ಛತ್ತೀಸ್‍ಗಢ: ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಣ ಮಾಡಿ ಸತತ 14 ದಿನಗಳ ಕಾಲ ಅತ್ಯಾಚಾರ ನಡೆಸಿದ ಘಟನೆ ಛತ್ತೀಸ್‍ಗಢ ರಾಜ್ಯದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.

    17 ಮತ್ತು 15 ವರ್ಷದ ವಯಸ್ಸಿನ ಇಬ್ಬರು ಬಾಲಕಿಯರನ್ನು ಸೋಮವಾರ ಪೊಲೀಸರು ಮಧ್ಯ ಪ್ರದೇಶ ಬಿಜುರಿ ರೈಲ್ವೇ ನಿಲ್ದಾಣದ ಸಮೀಪ ರಕ್ಷಣೆ ಮಾಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ನಡೆದಿದ್ದೇನು?
    ಸಂತ್ರಸ್ತೆ ಬಾಲಕಿಯರು ಛತ್ತೀಸ್‍ಗಢ ಮತ್ತು ಮಧ್ಯ ಪ್ರದೇಶದ ಗಡಿಯಲ್ಲಿರುವ ಕೊರಿಯಾದ ಝಾಗ್ರಾಖಂಡ್ ಪ್ರದೇಶಕ್ಕೆ ಸೇರಿದ್ದಾರೆ. ಮಾರ್ಚ್ 4 ರಂದು ಪ್ರಕರಣದ ಪ್ರಮುಖ ಆರೋಪಿ ಅಭಿಜಿತ್ ಪಾಲ್(20) ಯುವತಿಯನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಜೊತೆಗೆ ಆಕೆಯ ಗೆಳತಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಆತ  ಇಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

    ಆರೋಪಿ ತನ್ನ 8 ಸ್ನೇಹಿತರಿಗೂ  ಈ ಕೃತ್ಯದ ಬಗ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಲೆಡ್ರಿ ಮತ್ತು ಬಿಜುರಿಯಲ್ಲಿ ಅವರಿಬ್ಬರನ್ನು ಇರಿಸಿ ಸತತ 14 ದಿನಗಳ ಕಾಲ ಆರೋಪಿಗಳು ಬಾಲಕಿಯರ ಮೇಲೆ  ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ನಿವೇದಿತಾ ಶರ್ಮಾ ಅವರು ತಿಳಿಸಿದ್ದಾರೆ.

    ಮಾರ್ಚ್ 18 ಕುಟುಂಬದವರು ಬಾಲಕಿಯರು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ನಂತರ ಪೊಲೀಸ್ ತಂಡ ಶೋಧ ಕಾರ್ಯ ಆರಂಭಿಸಿ ಬಿಜುರಿ ರೈಲ್ವೇ ನಿಲ್ದಾಣದ ಬಳಿ ದಾಳಿ ಮಾಡಿ ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    9 ಜನ ಆರೋಪಿಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಅಶ್ರಫ್ ಅಲಿ(26), ಮನೋಜ್ ಕುಮಾರ್(28), ಹೇಮಾರಾಜ್ ಪನಿಕಾ(20), ಅವಿನಾಶ್ (28), ಜಿತೇಂದ್ರ ಕುಮಾರ್ ರೈ (26), ರಾಕೇಶ್ ಕುಮಾರ್ (23) ರನ್ನು ಬಂಧಿಸಲಾಗಿದ್ದು, ಮತ್ತಿಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆರೋಪಿಗಳ ವಿರುದ್ಧ ಅಪಹರಣ, ಅತ್ಯಾಚಾರ, ಹಲ್ಲೆ ಸೇರಿದಂತೆ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್‍ಪಿ ತಿಳಿಸಿದ್ದಾರೆ.