Tag: arrest

  • ಇನ್ನೂ ಪತ್ತೆಯಾಗದ ಕರಿ ಚಿರತೆ- ಪೊಲೀಸರಿಂದ ವಿಶೇಷ ತಂಡ ರಚನೆ

    ಇನ್ನೂ ಪತ್ತೆಯಾಗದ ಕರಿ ಚಿರತೆ- ಪೊಲೀಸರಿಂದ ವಿಶೇಷ ತಂಡ ರಚನೆ

    ಬೆಂಗಳೂರು: ಎಫ್‍ಐಆರ್ ದಾಖಲಾದ ಬಳಿಕ ದುನಿಯಾ ವಿಜಯ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

    ಕರ್ತವ್ಯಕ್ಕೆ ಅಡ್ಡಿ ಹಾಗೂ ಆರೋಪಿ ಪರಾರಿಯಾಗಲು ಸಹಕರಿಸಿದ್ದಕ್ಕೆ ನಟ ದುನಿಯಾ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್ ದಾಖಲಾಗುತ್ತಿದ್ದಂತೆ ವಿಜಯ್ ಪರಾರಿಯಾಗಿದ್ದರು. ಇದನ್ನೂ ಓದಿ: ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್‍ಐಆರ್

    ಮೊದಲು ಮಾಸ್ತಿಗುಡಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ ಪಿ.ಗೌಡ ಬಂಧನಕ್ಕೆ ಕೋರ್ಟ್ ಆದೇಶಿಸಿತ್ತು. ಪೊಲೀಸರು ನಿರ್ಮಾಪಕರ ಬಂಧನಕ್ಕೆ ತೆರಳಿದ್ದಾಗ ಸ್ಥಳದಲ್ಲಿದ್ದ ದುನಿಯಾ ಸುಂದರ ಪರಾರಿಯಾಗಲು ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಎಫ್‍ಐಆರ್ ದಾಖಲಾದ ಬಳಿಕ ವಿಜಯ್ ಮೊಬೈಲ್ ಸ್ವಿಚ್ ಆಫ್, ನಾಪತ್ತೆ!

    ಪರಾರಿಯಾಗಿದ್ದ ನಿರ್ಮಾಪಕ ಸುಂದರ ಪಿ. ಗೌಡ ಅವರಿಗೆ ರಾಮನಗರ ಜೆಎಂಎಫ್‍ಸಿ ಕೋರ್ಟ್ ಜಾಮೀನು ನೀಡಿದೆ. ಇತ್ತ ಇದುವರೆಗೂ ಜಾಮೀನು ಸಿಗದ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ನಾಪತ್ತೆಯಾಗಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಶೇಷ ತಂಡ ರಚನೆ ಮಾಡಿ ದುನಿಯಾ ವಿಜಯ್ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಮಾಸ್ತಿಗುಡಿ ನಿರ್ಮಾಪಕ ಇಂದು ಕೋರ್ಟ್ ಲ್ಲಿ ಹಾಜರ್!

  • ದನದ ವ್ಯಾಪಾರಿ ಅನುಮಾನಾಸ್ಪದ ಸಾವು ಪ್ರಕರಣ- ಹಿರಿಯಡ್ಕ ಎಸ್‍ಐ ಬಂಧನ

    ದನದ ವ್ಯಾಪಾರಿ ಅನುಮಾನಾಸ್ಪದ ಸಾವು ಪ್ರಕರಣ- ಹಿರಿಯಡ್ಕ ಎಸ್‍ಐ ಬಂಧನ

    ಉಡುಪಿ: ಜಿಲ್ಲೆಯ ಪೆರ್ಡೂರರಲ್ಲಿ ದನಗಳ ಕಳ್ಳಸಾಗಾಣಿಕೆ ಆರೋಪ ಮತ್ತು ಹಸನಬ್ಬ ಕೊಲೆ ಕೇಸಲ್ಲಿ ಎಸ್‍ಐ ಸೇರಿದಂತೆ ಮೂವರು ಪೊಲೀಸರನ್ನೇ ಬಂಧಿಸಲಾಗಿದೆ.

    ಹಿರಿಯಡ್ಕ ಎಸ್‍ಐ ಡಿ ಎನ್ ಕುಮಾರ್, ಪೊಲೀಸ್ ಜೀಪ್ ಚಾಲಕ ಗೋಪಾಲ್ ಮತ್ತು ಹೆಡ್ ಕಾನ್ಸ್ ಸ್ಟೇಬಲ್ ಮೋಹನ್ ಕೋತ್ವಾಲ್ ಬಂಧಿತ ಆರೋಪಿಗಳು.

    ಮೇ 30ರಂದು ಮಧ್ಯರಾತ್ರಿ 1 ಗಂಟೆಗೆ ಪೆರ್ಡೂರರಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ (ವಿಹೆಚ್‍ಪಿ) ಗುಂಪೊಂದು ದನ ಸಾಗಾಟ ಮಾಡುತ್ತಿದ್ದ ಟೆಂಪೂ ತಡೆದು ನಿಲ್ಲಿಸಿತ್ತು. ಈ ವೇಳೆ ಜೊತೆಗಿದ್ದವರು ಓಡಿಹೋಗಿದ್ದರು. ಆದರೆ 61 ವರ್ಷದ ಹಸನಬ್ಬ ಎರಡೂ ಸಂಘಟನೆಯವರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಪೊಲೀಸ್ ಜೀಪಿನಲ್ಲಿ ಮೃತಪಟ್ಟಿದ್ದರು. ಇದನ್ನು ಓದಿ: ದನದ ವ್ಯಾಪಾರಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು!

    ಮೃತದೇಹವನ್ನು ಪೊಲೀಸ್ ಠಾಣೆಗೆ ತಂದ ನಂತರ ಪೊಲೀಸರ ಸಹಾಯದಿಂದಲೇ ಅಜ್ಞಾತ ಸ್ಥಳದಲ್ಲಿ ಎಸೆದು ಹೋಗಲಾಗಿತ್ತು. ಓಡಿಹೋಗುವ ವೇಳೆ ಹಾರ್ಟ್ ಅಟ್ಯಾಕ್ ಆಗಿ ಹಸನಬ್ಬ ಅಸಹಜವಾಗಿ ಸಾವನ್ನಪ್ಪಿದ್ದಾರೆ ಅಂತ ಕೇಸ್ ದಾಖಲಿಸಿ ಪ್ರಕರಣವನ್ನೇ ಮುಚ್ಚಿಹಾಕುವ ಯತ್ನ ನಡೆಸಿದ್ದರು.

    ಅಲ್ಲದೇ ಘಟನಾ ಸ್ಥಳದಿಂದ ಒಂದು ಕಿಮೀ ದೂರ ಶವ ಇರಿಸಿದ್ದರು. ಈ ಕಾರಣಕ್ಕೆ ಈ ಪ್ರಕರಣದಲ್ಲಿ ಕೇಸ್‍ನಲ್ಲಿ ಭಾಗಿಯಾಗಿದ್ದ ಸೂರಿ, ಪ್ರಸಾದ್, ಉಮೇಶ್, ರತನ್, ಬಜರಂಗದಳ, ವಿಹೆಚ್‍ಪಿ ಕಾರ್ಯಕರ್ತರು ಸೇರಿ ಇಲ್ಲಿವರೆಗೆ 10 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

  • ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿಯ ಬೆಡ್ ರೂಂ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದ!

    ಬೆಳಗಾವಿ: ಪತಿ ಮತ್ತು ಪತ್ನಿ ಇಬ್ಬರು ಬೆಡ್ ರೂಮ್ ನಲ್ಲಿ ಇರುವ ವಿಡಿಯೋ ಮಾಡಲು ಹೋಗಿ ಯುವಕನೊಬ್ಬ ಸಿಕ್ಕಿಹಾಕಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ನಡೆದಿದೆ.

    ಪೀರನವಾಡಿಯ ಬಾಡಿಗೆ ಮನೆಯಲ್ಲಿ ಸಿಂಧೆ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪಕ್ಕದ ಮನೆಯ ನಿವಾಸಿ ಸುನಿಲ್ ವಡ್ಡರ ಈ ರೀತಿಯ ನೀಚ ಕೃತ್ಯವನ್ನು ಎಸಗಿದ್ದಾನೆ.

    ಆರೋಪಿ ಯುವಕ ಮನೆಯ ಕಿಟಕಿಯಲ್ಲಿ ತನ್ನ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದನು. ಮೊಬೈಲ್ ಗೆ ತಂತಿ ಕಟ್ಟಿ ಕಿಟಕಿಯಲ್ಲಿ ಇಡುತ್ತಿದ್ದನು. ಕೆಲವು ದಿನಗಳಿಂದ ಈ ರೀತಿಯ ಕೃತ್ಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಶನಿವಾರ ಮೊಬೈಲ್ ಇಡುವಾಗ ಸಪ್ಪಳವಾಗಿದೆ. ಆಗ ದಂಪತಿ ಗಮನಿಸಿ ನೋಡಿದ್ದಾರೆ. ಈ ವೇಳೆ ಮೊಬೈಲ್ ಇಟ್ಟಿರುವುದು ತಿಳಿದಿದೆ. ನಂತರ ಮೊಬೈಲ್ ತೆಗೆದು ನೋಡಿದಾಗ ಆತನ ಕೃತ್ಯ ಬೆಳಕಿಗೆ ಬಂದಿದೆ.

    ಆರೋಪಿ ಸುನಿಲ್ ತನ್ನ ಮೊಬೈಲ್ ನೀಡುವಂತೆ ದಂಪತಿಗೆ ಕೇಳಿದ್ದಾನೆ. ಆದರ ಪತಿ ಸಂಶಯಗೊಂಡು ಸುನಿಲ್ ಗೆ ಮೊಬೈಲ್ ಮರಳಿ ನೀಡಿಲಿಲ್ಲ. ಬಳಿಕ ದಂಪತಿ ಮೊಬೈಲ್ ಸಮೇತ ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಸದ್ಯಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಸುನಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

  • ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣ- ಮತಗಟ್ಟೆ ಅಧಿಕಾರಿ ಅರೆಸ್ಟ್

    ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣ- ಮತಗಟ್ಟೆ ಅಧಿಕಾರಿ ಅರೆಸ್ಟ್

    ವಿಜಯಪುರ: ಜಿಲ್ಲೆಯ ಉಕ್ಜಲಿಯಲ್ಲಿ ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಉಕ್ಕಲಿ ಗ್ರಾಮದಲ್ಲಿ ಮೇ 27ರಂದು ವಿವಿ ಪ್ಯಾಟ್ ರಶೀದಿ ಪತ್ತೆಯಾಗಿತ್ತು. ಈ ಸಂಬಂಧ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ವಿವಿ ಪ್ಯಾಟ್ ಬಾಕ್ಸ್ ಬಳಿಕ ಪತ್ತೆ ಆಯ್ತು ವಿವಿ ಪ್ಯಾಟ್ ರಶೀದಿ

    ದೂರಿನಲ್ಲಿ ಸ್ಥಳೀಯ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ತಿಳಿಸಿದ್ದರು. ಉಕ್ಕಲಿ ಗ್ರಾಮದ ನ್ಯೂ ಇಂಗ್ಲಿಷ್ ಶಾಲೆಯ ಮತಗಟ್ಟೆ ಸಂಖ್ಯೆ 12ಕ್ಕೆ ಸಂಬಂಧಿಸಿದ ರಶೀದಿಯನ್ನು ವಶಕ್ಕೆ ಪಡೆದು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ನಂತರ ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಬಂಧಿಸಿ ಶುಕ್ರವಾರ ತಡರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಎಸ್‍ಪಿ ಪ್ರಕಾಶ ನಿಕ್ಕಂ ಪಬ್ಲಿಕ್ ಟಿವಿಗೆ ಮಾಹಿತಿ ನಿಡಿದ್ದಾರೆ. ಇದನ್ನೂ ಓದಿ: ಸ್ಟ್ರಾಂಗ್ ರೂಂನಲ್ಲಿರಬೇಕಿದ್ದ ವಿವಿಪ್ಯಾಟ್ ಬಾಕ್ಸ್ ಗಳು ರಸ್ತೆಬದಿಯ ಶೆಡ್‍ನಲ್ಲಿ ಪತ್ತೆ – ಚುನಾವಣಾ ಅಕ್ರಮ ಶಂಕೆ!

    ಏನಿದು ಪ್ರಕರಣ?:
    ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಖಾಲಿ ವಿವಿ ಪ್ಯಾಟ್ ಬಾಕ್ಸ್ ಪತ್ತೆಯಾದ ಪ್ರಕರಣ ಮಾಸುವ ಮುನ್ನವೇ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಮತದಾನದ ಮಾಹಿತಿ ಗುಪ್ತವಾಗಿಡುವ ವಿವಿ ಪ್ಯಾಟ್ ರಶೀದಿ ಪತ್ತೆಯಾಗಿತ್ತು. ರಾಜಕೀಯ ಪಕ್ಷ ವೊಂದಕ್ಕೆ ಮತದಾನ ಮಾಡಿದ ಸಾಕ್ಷಿಯಾಗಿ ಈ ರಶೀದಿಯನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮತದಾನದ ಬಳಿಕ ವಿವಿ ಪ್ಯಾಟ್ ರಶೀದಿ ಹೊಂದಿರುವ ಬಾಕ್ಸ್ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಭದ್ರಪಡಿಸಲಾಗಿರುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿವಿ ಪ್ಯಾಟ್ ರಶೀದಿ ಫೋಟೋ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಬಸವನ ಬಾಗೇವಾಡಿಯ ಗ್ರಾಮದಲ್ಲಿ ಸಿಕ್ಕಿದ್ದು ವಿವಿಪ್ಯಾಟ್ ಖಾಲಿ ಬಾಕ್ಸ್!

  • ಮಾಸ್ತಿಗುಡಿ ದುರಂತ- ಬಂಧಿಸಲು ಹೋದ ಪೊಲೀಸರ ಮುಂದೆ ಪರಾರಿಯಾದ ನಿರ್ಮಾಪಕ

    ಮಾಸ್ತಿಗುಡಿ ದುರಂತ- ಬಂಧಿಸಲು ಹೋದ ಪೊಲೀಸರ ಮುಂದೆ ಪರಾರಿಯಾದ ನಿರ್ಮಾಪಕ

    ರಾಮನಗರ: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗದಿದ್ದ ನಿರ್ಮಾಪಕ ಸುಂದರ್ ಪಿ ಗೌಡಗೆ ರಾಮನಗರ ಜೆಎಂಎಫ್ ಸಿ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್ ಆದೇಶಿಸಿದೆ.

    ಜಾಮೀನು ರಹಿತ ವಾರೆಂಟ್ ಹಿನ್ನೆಲೆಯಲ್ಲಿ ಸುಂದರ್ ಪಿ ಗೌಡನನ್ನ ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಹೈಡ್ರಾಮವೇ ನಡೆದಿದೆ. ಮಂಗಳವಾರ ಸಂಜೆ ವೇಳೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ಬೆಂಗಳೂರಿನ ಸುಂದರ್ ಮನೆಗೆ ತೆರಳಿದ್ದರು.

     

    ಈ ವೇಳೆ ಮನೆಯಲ್ಲಿ ಸುಂದರ್ ಹಾಗೂ ನಟ ದುನಿಯ ವಿಜಯ್ ಚರ್ಚೆಯಲ್ಲಿ ತೊಡಗಿದ್ದರು. ವಾರೆಂಟ್ ವಿಚಾರ ತಿಳಿಸಿದ ಪೊಲೀಸರು ಸುಂದರ್ ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಬಟ್ಟೆ ಧರಿಸಿ ಬರುವುದಾಗಿ ಹೇಳಿ ಹೋಗಿದ್ದ ಸುಂದರಗೌಡ ಪರಾರಿಯಾಗಿದ್ದಾರೆ.

    ಆರೋಪಿಯ ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ತಿಕೆ ವಹಿಸಿದ್ದರು. ದುನಿಯ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಪೊಲೀಸ್ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ವಿಜಯ್ ಮಾತನ್ನು ನಿರಾಕರಿಸಿದ ತಾವರೆಕೆರೆ ಪೊಲೀಸರು ಸುಂದರ್ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.

  • ಆಟೋಗಾಗಿ ಕಾಯ್ತಿದ್ದಾಗ ಕಿಡ್ನಾಪ್- ಐವರಿಂದ ಮಹಿಳೆಯ ಮೇಲೆ ಗ್ಯಾಂಗ್‍ರೇಪ್!

    ಆಟೋಗಾಗಿ ಕಾಯ್ತಿದ್ದಾಗ ಕಿಡ್ನಾಪ್- ಐವರಿಂದ ಮಹಿಳೆಯ ಮೇಲೆ ಗ್ಯಾಂಗ್‍ರೇಪ್!

    ನವದೆಹಲಿ: ಮಾಲ್ ಮುಂದೆ ಆಟೋಗಾಗಿ ಕಾಯುತ್ತಿದ್ದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸೆಗಿರುವ ಘಟನೆ ದಕ್ಷಿಣ ದೆಹಲಿಯ ವಸಂತ್‍ಕುಂಜ್ ಪ್ರದೇಶದಲ್ಲಿ ನಡೆದಿದೆ.

    30 ವರ್ಷದ ಮಹಿಳೆ ಆತ್ಯಾಚಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ ಮಹಿಳೆಯನ್ನು ಅಪಹರಿಸಿದ ಗೆಸ್ಟ್ ಹೌಸ್‍ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಲಾಗಿದೆ.

    ಆಗಿದ್ದೇನು?
    ಸೋಮವಾರ ರಾತ್ರಿ 11 ಗಂಟೆಗೆ ಖಾಸಗಿ ಉದ್ಯೋಗಿಯಾದ ಮಹಿಳೆಯು ಗುರುಗಾಂವ್ ಸಹರಾ ಮಾಲ್ ಬಳಿ ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ಕ್ಯಾಬ್‍ನಲ್ಲಿ ಬಂದ ಕಾಮುಕರು ಡ್ರಾಪ್ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಮಹಿಳೆ ನಿಮ್ಮ ಡ್ರಾಪ್ ಬೇಡವೆಂದು ತಿರಸ್ಕರಿಸಿದ್ದಾರೆ. ಕೂಡಲೇ ಐವರು ಮಹಿಳೆಯನ್ನು ಬಲವಂತವಾಗಿ ಕ್ಯಾಬ್ ನಲ್ಲಿ ಅಪಹರಿಸಿ ಹತ್ತಿರದ ವಸತಿಗೃಹಕ್ಕೆ ಹೋಗಿದ್ದಾರೆ. ಗೆಸ್ಟ್ ಹೌಸ್‍ನಲ್ಲಿ ಐವರು ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸೆಗಿದ್ದಾರೆ. ಕೊನೆಗೆ ಬೆಳಗಿನ ಜಾವ ಮಹಿಳೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹೋಗಿದ್ದಾರೆ.

    ಸಹಾಯಕ್ಕಾಗಿ ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡ ವಸತಿಗೃಹದ ಅಡುಗೆ ಸಿಬ್ಬಂದಿ ಬಂದು ಬಾಗಿಲು ತೆಗೆದಿದ್ದಾನೆ. ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಲ್ಲೇ ಇದ್ದ ಮತ್ತೊಬ್ಬ ಆರೋಪಿ ಮಹಿಳೆಯನ್ನು ತಡೆಯಲು ಮುಂದಾದಾಗ ಕೈಗೆ ಸಿಕ್ಕ ರಾಡ್‍ನಿಂದ ಹೊಡೆದು ತಪ್ಪಿಸಿಕೊಂಡಿದ್ದಾರೆ. ಗೆಸ್ಟ್ ಹೌಸ್ ನಿಂದ ಬಂದು ಫ್ರೆಂಡ್‍ಗೆ ಕರೆ ಮಾಡಿ ವಿಷಯ ತಿಳಿಸಿ, ಬೆಳಗಿನ ಜಾವ 4.30ಕ್ಕೆ ಐವರ ವಿರುದ್ಧ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪೊಲೀಸರು ಅಪಹರಣ ಹಾಗೂ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಂಡು 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ತೆಜ್ವೀರ್ ಸಿಂಗ್, ಗೋಪಾಲ್ ಪ್ರಸಾದ್, ರೂಪ್ ದೇವ್, ಅನ್ಸುಲ್ ಹಾಗೂ ರಾಮಬಾಬು ಹರ್ಯಾಣ ಮೂಲದವರಾಗಿದ್ದು ದೆಹಲಿಯ ಖಾಸಗಿ ಕಂಪೆನಿಯ ಉದ್ಯೋಗಿಗಳೆಂದು ತಿಳಿದುಬಂದಿದೆ.

  • ಗೌರಿ ಹತ್ಯೆ ಕೇಸ್: ಎಸ್‍ಐಟಿಯಿಂದ ಮೂವರು ಅರೆಸ್ಟ್

    ಗೌರಿ ಹತ್ಯೆ ಕೇಸ್: ಎಸ್‍ಐಟಿಯಿಂದ ಮೂವರು ಅರೆಸ್ಟ್

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಎಸ್‍ಐಟಿ ಚುರುಕುಗೊಳಿಸಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಿದೆ.

    ಈಗಾಗಲೇ ಬಂಧನಕ್ಕೆ ಒಳಗಾಗಿರುವ ಹೊಟ್ಟೆ ಮಂಜ ಅಲಿಯಾಸ್ ನವೀನ್ ಕುಮಾರ್ ವಿಚಾರಣೆ ನಡೆಯುತ್ತಿದ್ದಂತೆ ಮತ್ತಷ್ಟು ಆರೋಪಿಗಳ ಬಗ್ಗೆ ಸುಳಿವು ಹೊರಬಿದ್ದಿದೆ.

    ನವೀನ್ ಹೇಳಿಕೆ ದಾಖಲಿಸಿಕೊಂಡು ಮತ್ತಷ್ಟು ತನಿಖೆಗೆ ಇಳಿದಿದ್ದ ಎಸ್‍ಐಟಿ ಶಂಕಿತ ಮೂವರನ್ನ ವಶಕ್ಕೆ ಪಡೆದು ಬಂಧಿಸಿದೆ. ಮಂಗಳೂರಿನಲ್ಲಿ ಸುಚಿತ್, ಅಮಿತ್, ಅಮಲ್ ಎಂಬುವವರನ್ನ ಅರೆಸ್ಟ್ ಮಾಡಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನಕ್ಕೆ ಒಳಗಾದ ಆರೋಪಿಗಳು ಹೊಟ್ಟೆ ಮಂಜನ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಮಹಾರಾಷ್ಟ್ರ ಶಾರ್ಪ್ ಶೂಟರ್ ಗಳ ಕೈವಾಡ ಸಹ ಹತ್ಯೆ ಹಿಂದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಆರೋಪಿ ಸುಚಿತ್ ಕಾಯಿನ್ ಬಾಕ್ಸ್ ಮುಖಾಂತರ ಎಲ್ಲರೊಂದಿಗೂ ಸಂಪರ್ಕದಲ್ಲಿರುತ್ತಿದ್ದ. ನವೀನ್ ಬಂಧನಕ್ಕೆ ಒಳಗಾದ ಬಳಿಕ ವೇಷ ಧರಿಸಿಕೊಂಡು ತಲೆಮರೆಸಿಕೊಂಡು ಮೂವರು ಆರೋಪಿಗಳು ಓಡಾಡುತ್ತಿದ್ದರು. ಕೊನೆಗೆ ಖಚಿತ ಮಾಹಿತಿ ಮೇರೆಗೆ ಎಸ್‍ಐಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

    ಮತ್ತೊಂದೆಡೆ ಎಸ್‍ಐಟಿ ಅಧಿಕಾರಿಗಳು ಗುಜರಾತ್‍ನ ಅಹಮದಾಬಾದ್ ನಲ್ಲಿರುವ ಎಫ್‍ಎಸ್‍ಎಲ್ ಹಾಗು ಕರ್ನಾಟಕ ಎಫ್‍ಎಸ್‍ಎಲ್ ವರದಿ ಪಡೆದಿದ್ದು, ಗೌರಿ ಹತ್ಯೆ ಹಾಗೂ ಕಲಬುರ್ಗಿ ಹತ್ಯೆಗೆ ಒಂದೇ ವೆಪನ್ ಬಳಸಿರೋದು ಬೆಳಕಿಗೆ ಬಂದಿದೆ. 765 ರೈಫಲ್ ಬಳಸಿ ಗೌರಿ, ಕಲಬುರ್ಗಿ ಹತ್ಯೆ ಮಾಡಿರೋದು ತನಿಖೆಯಿಂದ ಹೊರಬಂದಿದೆ.

    ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿರುವ ಗೌರಿ ಹತ್ಯೆಯ ಸಂಬಂಧ ಬುಧವಾರ ಎಸ್‍ಐಟಿ ಚಾರ್ಜ್‍ಶೀಟ್ ಸಲ್ಲಿಸೋ ಸಾಧ್ಯತೆಯಿದೆ.

  • ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚಾಕು ಇರಿತ!

    ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಯುವಕನಿಗೆ ಚಾಕು ಇರಿತ!

    ಹಾವೇರಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಚೂರಿ ಇರಿತಕ್ಕೆ ಒಳಗಾಗಿದ್ದ ಯುವಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಅಮೀರ್ ವೀರಾಪುರ(25) ಮೃತ ಯುವಕ. ಮಂಗಳವಾರ ರಾತ್ರಿ ಚೂರಿ ಇರಿತಕ್ಕೆ ಒಳಗಾಗಿದ್ದ ಅಮೀರ್ ಚಿಕಿತ್ಸೆ ಫಲಿಸದೇ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಅಮೀರ್ ಗೆ ಚೂರಿಯಿಂದ ಇರಿದಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಅಮೀರ್ ವೀರಾಪುರ

    ವಿನಾಯಕ ನುಗ್ಗಿಹಳ್ಳಿ(21) ಬಂಧಿತ ಆರೋಪಿ. ವಿನಾಯಕನಿಗೆ ಅಮೀರ್ ಮೇಲೆ ಹಳೆ ವೈಷಮ್ಯವಿತ್ತು. ಹೀಗಾಗಿ ನೀರು ಕೇಳುವ ನೆಪದಲ್ಲಿ ಅಮೀರ್ ಮನೆಗೆ ಬಂದಿದ್ದ ವಿನಾಯಕ ಈ ಕೃತ್ಯವನ್ನ ಎಸಗಿದ್ದಾನೆ.

    ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿನಾಯಕ ನುಗ್ಗಿಹಳ್ಳಿ
  • ಫೈನಾನ್ಶಿಯರ್ ನನ್ನು ಬಂಧಿಸಿ ಇಬ್ಬರು ಮಕ್ಕಳು, ವಯೋವೃದ್ಧೆಯನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಪೊಲೀಸರು!

    ಫೈನಾನ್ಶಿಯರ್ ನನ್ನು ಬಂಧಿಸಿ ಇಬ್ಬರು ಮಕ್ಕಳು, ವಯೋವೃದ್ಧೆಯನ್ನು ಹೆದ್ದಾರಿಯಲ್ಲಿಯೇ ಬಿಟ್ಟ ಪೊಲೀಸರು!

    ಬೆಂಗಳೂರು: ಫೈನಾನ್ಶಿಯರ್ ನನ್ನು ಬಂಧಿಸುವ ವೇಳೆ ಇಬ್ಬರು ಮಕ್ಕಳು ಹಾಗೂ ವಯೋವೃದ್ಧೆಯೊಬ್ಬರನ್ನು ಹೆದ್ದಾರಿಯಲ್ಲಿಯೇ ಪೊಲೀಸರು ಬಿಟ್ಟು ಹೋಗಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಂಚೀಪುರ ಗೇಟ್‍ ನಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದ ಚಿಕ್ಕರಂಗೇಗೌಡನನ್ನು ಬಂಧಿಸುವ ವೇಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಅಮಾನವೀಯತೆ ಮೆರೆದಿದ್ದಾರೆ.

    ಚಿಕ್ಕರಂಗೇಗೌಡ ಗ್ಲೋಬಲ್ ಫೈನಾನ್ಸ್ ಎನ್ನುವ ವೆಹಿಕಲ್ ಸೀಜಿಂಗ್ ಏಜೆನ್ಸಿ ನಡೆಸುತ್ತಿದ್ದು, ಎರಡು ದಿನದ ಹಿಂದೆ ಒಂದು ಬಸ್ಸನ್ನು ಸೀಝ್ ಪಡೆದಿದ್ದಾರೆ. ಈ ವೇಳೆ ಬಸ್ ಚಾಲಕನ ಅಜಾಗರೂಕತೆಯಿಂದ ಪ್ರಯಾಣಿಕರನ್ನು ಒಳಗೊಂಡಂತೆ ಬಸ್ಸನ್ನು ಗೋಡೌನ್‍ ಗೆ ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ ಗಾಬರಿಗೊಂಡ ಪ್ರಯಾಣಿಕರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:  ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳಿಂದ 42 ಪ್ರಯಾಣಿಕರಿದ್ದ ಬಸ್ ಹೈಜಾಕ್!

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕರಂಗೇಗೌಡ ಎಂಬವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಚಿಕ್ಕರಂಗೇಗೌಡ ಬೆಂಗಳೂರಿನಿಂದ ಕುಣಿಗಲ್ ಮಾರ್ಗವಾಗಿ ತುಮಕೂರಿಗೆ ಹೋಗುತ್ತಿದ್ದರು. ಆಗ ನೆಲಮಂಗಲ ಕುಣಿಗಲ್ ರಸ್ತೆಯ ಹಂಚೀಪುರ ಗೇಟ್ ಬಳಿ ತಮ್ಮ ಟಾಟಾ ಸುಮೋ ಕಾರಿಗೆ ಡೀಸೆಲ್ ತುಂಬಿಸಲು ಕಾರ್ ನಿಲ್ಲಿಸಿದ್ದಾರೆ. ಈ ವೇಳೆ ಚಿಕ್ಕರಂಗೇಗೌಡ ಅವರನ್ನು ಹಿಂಬಾಲಿಸುತ್ತಿದ್ದ ಪೊಲೀಸರು ಬಂಧಿಸಿದ್ದಾರೆ.

    ಕಾರಿನಲ್ಲಿ ಚಿಕ್ಕರಂಗೇಗೌಡರ ಮಕ್ಕಳಾದ ಅಕ್ಷಯ, ದೀಪಕ್ ಹಾಗೂ ಅತ್ತೆ ಸರೋಜಮ್ಮ ಎಷ್ಟೇ ಮನವಿ ಮಾಡಿದ್ರೂ ಬಿಡದೆ, ಅವರೆಲ್ಲರನ್ನು ಹೆದ್ದಾರಿಯಲ್ಲೇ ಬಿಟ್ಟು ಹೋಗುವ ಮೂಲಕ ಮಾನವೀಯತೆ ಮರೆತ್ರು. ಬಸ್ ಸೀಝ್ ಮಾಡಿದ್ದನ್ನ ಹೈಜಾಕ್ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಿಕ್ಕರಂಗೇಗೌಡರನ್ನು ಬಂಧಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  • ಅಪಘಾತದಲ್ಲಿ ತಂದೆ ಮುಂದೇ ಪ್ರಾಣಬಿಟ್ಟ ಮಗಳು- ಬಸ್ ಚಾಲಕನ ಬಂಧನ

    ಅಪಘಾತದಲ್ಲಿ ತಂದೆ ಮುಂದೇ ಪ್ರಾಣಬಿಟ್ಟ ಮಗಳು- ಬಸ್ ಚಾಲಕನ ಬಂಧನ

    ಬೆಂಗಳೂರು: ವಿದ್ಯಾರ್ಥಿನಿಯ ಮೇಲೆ ಬಸ್ ಚಲಾಯಿಸಿದ ಪ್ರಕರಣದಲ್ಲಿ ಹಿಟ್ ಆಂಡ್ ರನ್ ಮಾಡಿ ಪರಾರಿಯಾಗಿದ್ದ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಶಾಂತ್ ಬಂಧಿತ ಆರೋಪಿ. ಎಸ್‍ಆರ್ ಎಸ್ ಬಸ್ ಚಾಲಕನಾಗಿರೋ ಪ್ರಶಾಂತ್ ಮಂಗಳವಾರ ರಾತ್ರಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ವಿನಾಯಕ ದೇವಸ್ಥಾನ ಬಳಿ ಕಾವೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಚೈತ್ರಾ ಮೇಲೆ ಮೇಲೆ ಬಸ್ ಹತ್ತಿಸಿದ್ದನು.

    ಮೃತ ಚೈತ್ರಾ ರಾಜಾಜಿನಗರದಲ್ಲಿ ತನ್ನ ಕಾಲೇಜು ಶಿಕ್ಷಕಿಯ ಮದುವೆಗೆ ತನ್ನ ತಂದೆ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸರು ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದರು. ಮಲ್ಲೇಶ್ವರಂ ಇನ್ಸ್ ಪೆಕ್ಟರ್ ಅಂಜುಮಾಲಾ ಪ್ರಕರಣವನ್ನು ಕೈಗೆತ್ತಿಕೊಂಡು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.

    ಚೈತ್ರಾ ಬೈಕ್‍ನ ಹಿಂಬದಿಯಲ್ಲಿ ಕುಳಿತಿದ್ದರು. ಈ ವೇಳೆ ಖಾಸಗಿ ಬಸ್ ಬೈಕಿಗೆ ಡಿಕ್ಕಿ ಹೊಡೆದಿತ್ತು. ಘಟನೆ ಬಳಿಕ ತೀವ್ರ ರಕ್ತಸ್ರಾವದಿಂದ ಚೈತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿರುವ ಚೈತ್ರಾ ತಂದೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.