Tag: arrest

  • ಅಮೆರಿಕದ ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ನಿರ್ಮಾಪಕ ದಂಪತಿ

    ಅಮೆರಿಕದ ಸೆಕ್ಸ್ ಸ್ಕ್ಯಾಂಡಲ್‍ನಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ನಿರ್ಮಾಪಕ ದಂಪತಿ

    ಹೈದರಾಬಾದ್: ನಟಿಯರನ್ನು ಬಳಸಿಕೊಂಡು ಹೈ-ಸೆಕ್ಸ್ ಸ್ಕ್ಯಾಂಡಲ್ ನಡೆಸುತ್ತಿದ್ದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕ, ತೆಲುಗು ಉದ್ಯಮಿ ಮತ್ತು ಆತನ ಪತ್ನಿಯನ್ನು ಚಿಕಾಗೋದಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಕಿಶನ್ ಅಲಿಯಾಸ್ ಸಿರಾಜ್ ಚೌನಪಟ್ಟಿ (34) ಮತ್ತು ಆತನ ಪತ್ನಿ ಚಂದ್ರಾ (31) ವೇಶ್ಯಾವಾಟಿಕೆಯಲ್ಲಿ ಸಿಕ್ಕಿ ಬಿದ್ದ ದಂಪತಿ. ದಂಪತಿ ಟಾಲಿವುಡ್ ಸಹ ನಟಿಯರನ್ನು ಅಮೆರಿಕಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು. ಅಮೆರಿಕಾದಲ್ಲಿ ನಡೆಯುವ ಭಾರತೀಯ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸ್ಥಳೀಯ ಜಾಹಿರಾತುಗಳಲ್ಲಿ ನಿಮ್ಮ ಕಲೆಯನ್ನು ಪ್ರದರ್ಶಿಸುತ್ತೇವೆ ಅಂತಾ ಹೇಳಿ ಅವರನ್ನು ಈ ದಂಧೆಗೆ ದೂಡುತ್ತಿದ್ದರು.

    ಚಿಕಾಗೋ ಜಿಲ್ಲೆಯ ನ್ಯಾಯಾಲಯಕ್ಕೆ ಆರೋಪಿ ದಂಪತಿ ವಿರುದ್ಧ 42 ಪುಟಗಳ ದೂರು ದಾಖಲಾಗಿದೆ. ದಂಪತಿ ಅಡ್ಡಕ್ಕೆ ಬರುವ ಒಬ್ಬ ವ್ಯಕ್ತಿಯಿಂದ 3 ಸಾವಿರ ಡಾಲರ್ (ಅಂದಾಜು 2 ಲಕ್ಷ ರೂ.) ಪಡೆಯುತ್ತಿದ್ರು. ತಾತ್ಕಾಲಿಕ ವೀಸಾ ಮುಖಾಂತರ ನಟಿಯರನ್ನು ಚಿಕಾಗೋ ಕರೆ ತಂದು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಡ ಹಾಕುತ್ತಿದ್ರು. ಬೆಲ್ಮಾಂಟ್ ಕ್ರಾಗಿನ್ ನಲ್ಲಿರುವ ಎರಡು ಅಂತಸ್ತಿನ ಅಪಾರ್ಟ್ ಮೆಂಟ್ ನಲ್ಲಿ ಉಳಿಯಲು ಅವರನ್ನು ಒತ್ತಾಯಿಸಿರುವುದಾಗಿ ಪೊಲೀಸರು ತನಿಖೆಯಲ್ಲಿ ತಿಳಿದು ಬಂದಿದೆ. ಡಲ್ಲಾಸ್, ನ್ಯೂಜೆರ್ಸಿ ಮತ್ತು ವಾಷಿಂಗ್ಟನ್ ನ ಸಮಾವೇಶಗಳಲ್ಲಿ ಗ್ರಾಹಕರಿಗೆ ನಟಿಯರನ್ನು ಭೇಟಿ ಮಾಡಿಸಲು ಕರೆದೊಯ್ಯಲಾಗುತ್ತಿತ್ತು ಎಂದು ವರದಿಯಾಗಿದೆ.

    ಕಿಶನ್ ಪ್ರಮುಖ ಆರೋಪಿಯಾಗಿದ್ದು, ಟಾಲಿವುಡ್ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ಮಾಪಕನಾಗಿ ಕೆಲಸ ಮಾಡಿದ್ದಾನೆ. ಆರೋಪಿಯ ಬಂಧನದ ನಂತರ ಆತನ ಇ-ಮೇಲ್ ಬಳಸಿ ನಟಿಯನ್ನು ಸಂಪರ್ಕಿಸಿದಾಗ, “ನನಗೆ ಪೋನ್ ಮಾಡಬೇಡಿ ಮತ್ತು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಬೇಡಿ” ಎಂದು ಪೊಲೀಸರು ತಿಳಿಸಿದ್ದಾರೆ

    ಬಂಧಿತ ದಂಪತಿಯನ್ನು ಜೈಲಿನಲ್ಲಿ ಇರಿಸಲಾಗಿದೆ. ದಂಪತಿಯ ಇಬ್ಬರು ಮಕ್ಕಳನ್ನು ವರ್ಜೀನಿಯಾದ ಮಕ್ಕಳ ಕಲ್ಯಾಣ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

  • ಪತ್ರಕರ್ತೆ ಗೌರಿಲಂಕೇಶ್ ಹತ್ಯೆಗೈದ ಶಂಕಿತ ಶೂಟರ್ ಅರೆಸ್ಟ್!

    ಪತ್ರಕರ್ತೆ ಗೌರಿಲಂಕೇಶ್ ಹತ್ಯೆಗೈದ ಶಂಕಿತ ಶೂಟರ್ ಅರೆಸ್ಟ್!

    ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಶಂಕಿತ ಆರೋಪಿಯನ್ನು ಬಂಧಿಸಿದೆ.

    ಸಿಂಧಗಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತನಾದ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಲಾಗಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

    ಸೋಮವಾರ ಮಹಾರಾಷ್ಟ್ರದಲ್ಲಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿದ್ದು, ಮೂರನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಾಗ್ಮೋರೆಯನ್ನು ನೀಡಿದೆ. ಈತ 5 ಅಡಿ ಒಂದು ಇಂಚು ಎತ್ತರ ಹೊಂದಿದ್ದು, 75-80 ಕೆಜಿ ತೂಕವನ್ನು ಹೊಂದಿದ್ದಾನೆ.

    ಕಳೆದ ವರ್ಷದ ಸೆಪ್ಟಂಬರ್ 5 ರಂದು ನಡೆದ ಗೌರಿ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಪ್ರವೀಣ್ ವಿಚಾರಣೆ ಮಾಡುತ್ತಿರುವ ಎಸ್‍ಐಟಿ ಪೊಲೀಸರು ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ಕೆಲ ತಿಂಗಳಿನಿಂದ ಪರುಶುರಾಮ್ ವಾಗ್ಮೋರೆಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು.

    ಪರಶುರಾಮ್ ಹೇಳಿಕೆ ಆಧರಿಸಿ ಮಂಗಳೂರಿನಲ್ಲಿ ನಿನ್ನೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಶಂಕಿತರನ್ನು ಬಂಧಿಸಿದ್ದರೂ ಪಿಸ್ತೂಲ್ ಯಾರ ಬಳಿ ಇದೆ ಎನ್ನುವುದು ತಿಳಿದು ಬಂದಿಲ್ಲ.

    ಸಿಸಿಟಿವಿ ದೃಶ್ಯಾವಳಿ ಆಧಾರದ ಎಸ್‍ಐಟಿ ನಾಲ್ವರು ಆರೋಪಿಗಳ ರೇಖಾಚಿಕತ್ರವನ್ನು ಬಿಡಿಸಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದ ವಿಧಿ ವಿಜ್ಞಾನ ಪ್ರಯೋಗಾಲಯ 5.1 ಅಡಿ ಅಥವಾ 5.2 ಅಡಿ ಎತ್ತರ ಹಾಗೂ 70 ಕೆಜಿಯಷ್ಟು ತೂಕ ಇರುವ ವ್ಯಕ್ತಿಯಿಂದ ಶೂಟ್ ಆಗಿದೆ ಎಂದು ಹೇಳಿತ್ತು.

  • ತಲ್ವಾರ್  ನಿಂದ ಕೇಕ್ ಕತ್ತರಿಸಿದವ ಅರೆಸ್ಟ್

    ತಲ್ವಾರ್ ನಿಂದ ಕೇಕ್ ಕತ್ತರಿಸಿದವ ಅರೆಸ್ಟ್

    ಹುಬ್ಬಳ್ಳಿ: ತಲ್ವಾರ್ ನಿಂದ ಕೇಕ್ ಕತ್ತರಿಸಿಕೊಂಡು ಹುಟ್ಟು ಹಬ್ಬ ಆಚರಿಸಿಕೊಂಡ ಶಂಭು ಬಿಜವಾಡ ಎಂಬಾತನನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿ ಸೆಟ್ಲಮೆಂಟ್ ನಿವಾಸಿಯಾಗಿದ್ದು, ಇತ್ತೀಚಿಗೆ ಈತ ಹುಟ್ಟುಹಬ್ಬ ಆಚರಿಸಿಕೊಂಡಿದ್ದನು. ಆಗ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದನು. ರೌಡಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ.

    ಇತ್ತೀಚೆಗೆ ಗಣೇಶಪೇಟಿಯಲ್ಲಿ ಇರ್ಷಾದ್ ಎಂಬಾತ ಸಹ ತನ್ನ ಹುಟ್ಟುಹಬ್ಬ ಆಚರಣೆ ವೇಳೆ ತಲ್ವಾರ್ ನಿಂದ ಕೇಕ್ ಕತ್ತರಿಸಿಕೊಂಡು ಆಚರಿಸಿಕೊಂಡಿದ್ದನು. ಇದನ್ನೂ ಓದಿ: ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿಚಿತ್ರವಾಗಿ ಹುಟ್ಟುಹಬ್ಬ ಆಚರಿಸಿದ! – ವಿಡಿಯೋ ವೈರಲ್

    ತಲ್ವಾರ್ ನಿಂದ ಸ್ನೇಹಿತರಿಗೆ ಕೇಕ್ ತಿನ್ನಿಸಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪದೇ ಪದೇ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಡುತ್ತಿದೆ. ಹುಟ್ಟು ಹಬ್ಬದ ಹೆಸರಿನಲ್ಲಿ ಮಾರಕಾಸ್ತ್ರಗಳ ಪ್ರದರ್ಶನ ಹಾಗೂ ವಿಕೃತಿ ಮೆರೆಯುವದು ಹೆಚ್ಚಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಿಂದ ಕಟ್ಟುನಿಟ್ಟಿನ ಕ್ರಮವಿಲ್ಲ ಎಂದು ಸಾರ್ವಜನಿಕರು ದೂರಿದ್ದರು.

    ಸಾರ್ವಜನಿಕರ ದೂರಿನಿಂದ ಎಚ್ಚೆತ್ತುಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಕೃತಿ ಮೆರೆಯುವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಹೈ ಪ್ರೊಫೈಲ್ ಸೆಕ್ಸ್ ರ‌್ಯಾಕೆಟ್  – ನಗ್ನವಾಗಿ ಸಿಕ್ಕಿ ಬಿದ್ದ 12 ಜೋಡಿ

    ಹೈ ಪ್ರೊಫೈಲ್ ಸೆಕ್ಸ್ ರ‌್ಯಾಕೆಟ್ – ನಗ್ನವಾಗಿ ಸಿಕ್ಕಿ ಬಿದ್ದ 12 ಜೋಡಿ

    ರಾಯ್ಪುರ: ರಾಯ್ಪುರದ ಬೋರಿಯಾಕಲಾದಲ್ಲಿ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ಮಾಡಿದ್ದು, 12 ಮಂದಿಗೂ ಹೆಚ್ಚು ಹುಡುಗಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಭಾನುವಾರ ರಾತ್ರಿ ನಗರದ ಪ್ರಸಿದ್ಧ ಪ್ರದೇಶದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ಮಾರುವೇಷದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹುಡುಗ ಮತ್ತು ಹುಡುಗಿಯನ್ನು ನಗ್ನ ಸ್ಥಿತಿಯಲ್ಲಿ ಬಂಧಿಸಿದ್ದಾರೆ.

    ಪೊಲೀಸರು ಬಂಧಿಸಿದ ಹುಡುಗಿಯರು ಮುಂಬೈ ಹಾಗೂ ಕೊಲ್ಕತ್ತಾದವರಾಗಿದ್ದು, ಇವರೆಲ್ಲಾ ರಾಯ್ಪುರಕ್ಕೆ ಒಂದು ತಿಂಗಳ ಒಪ್ಪಂದದ ಮೇಲೆ ಮೇರೆಗೆ ಬಂದಿದ್ದರು ಎನ್ನಲಾಗಿದೆ. ಈ ಹುಡುಗಿಯರು ಈಗಾಗಲೇ 28 ದಿನಗಳನ್ನು ಪೂರೈಸಿದ್ದರು. ಆದರೆ ಕೊನೆಯ ದಿನ ಹುಡುಗಿಯರು ಗ್ರಾಹಕರ ಜೊತೆಗಿದ್ದ ವೇಳೆ ಪೊಲೀಸರು ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದಾರೆ.

    ಪೊಲೀಸರು ಮಾಹಿತಿ ಬಂದ ಪ್ರಕಾರ ಬೋರಿಯಾಕಲಾದ ವಸತಿ ಬೋರ್ಡ್ ಕಾಲೊನೀಯ ಒಂದು ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸುತ್ತಾಮುತ್ತಾ ಪೊಲೀಸರು ಮುತ್ತಿಗೆ ಹಾಕಿದ್ದರಿಂದ ಎಲ್ಲರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಹಿಳೆಯೊಬ್ಬಳು ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಳು.

    ಈ ತಂಡ ತಮ್ಮದೆ ಆಗ ವ್ಯಾಟ್ಸಪ್ ಗುಂಪನ್ನು ಸೃಷ್ಟಿಸಿದ್ದು, ಅದರಲ್ಲಿ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾ ಸೇರಿದಂತೆ ಇತರೆ ನಗರಗಳ ಯುವತಿಯರ ಫೋಟೋಗಳು ಮತ್ತು ದರಗಳು ಹಾಕಲಾಗುತ್ತಿತ್ತು. ನಂತರ ಗ್ರಾಹಕರನ್ನು ಇಷ್ಟಪಟ್ಟ ಹುಡುಗಿಯನ್ನ ಬೋರಿಯಾಕಲಾಕ್ಕೆ ಕರೆಸಿಕೊಳ್ಳಲಾಗುತ್ತಿತ್ತು.

    ಬಂಧಿತ ಹುಡುಗಿಯರಿಂದ 61,000 ನಗದು, 8 ಮೊಬೈಲ್ ಫೋನ್ ಗಳು, ಟ್ಯಾಬ್ಲೆಟ್, ಕಾಂಡೋಮ್ ಮತ್ತು ಅಕೌಂಟಿಂಗ್ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗ್ರಾಹಕರು ಮತ್ತು ಹುಡುಗಿಯರರ ವಿರುದ್ಧ ದೂರು ದಾಖಲಿಸಿಕೊಂಡು ಎಲ್ಲರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಯುವತಿಯರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    ಮುಂಬೈ, ದೆಹಲಿ ಮತ್ತು ಕೋಲ್ಕತಾದಿಂದ ಹುಡುಗಿಯರನ್ನು ಕರೆಸಿಕೊಂಡು ಈ ದಂಧೆ ನಡೆಸುತ್ತಿದ್ದ ದಲ್ಲಾಳಿ ತಪ್ಪಿಸಿಕೊಂಡಿದ್ದಾನೆ. ಜಾರ್ಖಂಡ್ ನ ಮಹಿಳೆಯೊಬ್ಬರಿಂದ ಬ್ರೋಕರ್ ಬಗ್ಗೆ ಮಾಹಿತಿ ಪಡೆದಿದ್ದೇವೆ. ಆತನ ಪತ್ತೆಗೆ ನಾವು ಬಲೆ ಬೀಸಿದ್ದು, ಶೀಘ್ರವೇ ಆತನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • 6 ತಿಂಗಳ ಹಿಂದೆ ಪ್ರೇಮವಿಚಾರಕ್ಕೆ ಗಲಾಟೆ ಮಾಡಿದ್ದ ವಿದ್ಯಾರ್ಥಿ ಈಗ ಅರೆಸ್ಟ್!

    6 ತಿಂಗಳ ಹಿಂದೆ ಪ್ರೇಮವಿಚಾರಕ್ಕೆ ಗಲಾಟೆ ಮಾಡಿದ್ದ ವಿದ್ಯಾರ್ಥಿ ಈಗ ಅರೆಸ್ಟ್!

    ಮಂಗಳೂರು: ಆರು ತಿಂಗಳ ಹಿಂದೆ ಕಾಲೇಜಿನಲ್ಲಿ ಮಾಡಿದ್ದ ಗಲಾಟೆ ವಿಡಿಯೋ ಇದೀಗ ವೈರಲ್ ಆಗಿ ಯುವಕ ಪೊಲೀಸರಿಂದ ಬಂಧನಕ್ಕೊಳಗಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

    ಪುತ್ತೂರಿನ ಖಾಸಾಗಿ ಕಾಲೇಜಿನ ವಿದ್ಯಾರ್ಥಿ ನಾಯಕನಾಗಿದ್ದ ಅಜಯ್ ಶೆಟ್ಟಿ ಕಳೆದ ಆರು ತಿಂಗಳ ಹಿಂದೆ ಪ್ರೇಮವಿಚಾರಕ್ಕೆ ಸಂಬಂಧಿಸಿದಂತೆ ಯುವಕನಿಗೆ ಥಳಿಸಿದ್ದು, ಹಲ್ಲೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋವನ್ನು ಖುದ್ದು ಪರಿಶೀಲಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಯುವಕನ ಬಂಧನಕ್ಕೆ ಸೂಚಿಸಿದ್ದು, ಪುತ್ತೂರು ನಗರ ಠಾಣಾ ಪೊಲೀಸರು ಯುವಕ ಅಜಯ್ ಶೆಟ್ಟಿಯನ್ನು ಬಂಧಿಸಿದ್ದಾರೆ.

    ಅಜಯ್ ಶೆಟ್ಟಿ ಸ್ನೇಹಿತರೇ ವಿಡಿಯೋ ವೈರಲ್ ಮಾಡಿದ್ದು, ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಗಲಾಟೆ ಇದೀಗ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಇದನ್ನೂ ಓದಿ: ಸಹಪಾಠಿಗಳ ಮೇಲೆ ಹಲ್ಲೆಗೈದು ವಿದ್ಯಾರ್ಥಿಯಿಂದ ಕಿರುಕುಳ- ದೂರು ನೀಡಿದ್ರೆ ಕೊಲ್ಲುವ ಬೆದರಿಕೆ

  • 251 ರೂ. ಮೊಬೈಲ್ ನೀಡುತ್ತೇನೆ ಎಂದಿದ್ದ ಕಂಪೆನಿ ಮಾಲೀಕ ಅರೆಸ್ಟ್

    251 ರೂ. ಮೊಬೈಲ್ ನೀಡುತ್ತೇನೆ ಎಂದಿದ್ದ ಕಂಪೆನಿ ಮಾಲೀಕ ಅರೆಸ್ಟ್

    ನವದೆಹಲಿ: ಫ್ರೀಡಂ 251 ಸ್ಮಾರ್ಟ್ ಫೋನ್ ಅನ್ನು ಕೇವಲ 251 ರೂ.ಗೆ ನೀಡುತ್ತೇನೆ ಅಂತ ಹೇಳಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿ ಮಾಲೀಕ ಮೋಹಿತ್ ಗೋಯಲ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಹಣ ನೀಡಿದ ಆರೋಪಕ್ಕೆ ಸಂಬಂಧಿüಸಿದಂತೆ ಭಾನುವಾರ ಗೋಯಲ್ ಸೇರಿ ಇತರರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

    ಕಳೆದ ಮಾರ್ಚ್ 6ರಂದು ಮಹಿಳೆಯೊಬ್ಬರು ತನ್ನ ಮೇಲೆ ಐವರು ಉದ್ಯಮಿಗಳು ಸಾಮೂಹಿಕವಾಗಿ ಅತ್ಯಾಚಾರವೆಗಿದ್ದಾರೆ ಅಂತ ರಾಜಸ್ಥಾನದ ಅಲ್ವರ್ ಜಿಲ್ಲೆಯ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು.

    ದೂರಿನಲ್ಲಿ, ತಾನು ನಗರದ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಈ ವೇಳೆ ತನ್ನ ಮೇಲೆ ಐವರು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಅಂತ ಆರೋಪಿಸಿದ್ದರು. ಸದ್ಯ ಮಹಿಳೆಯ ದೂರಿನಂತೆ ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಗೋಯಲ್ ಹೊರತುಪಡಿಸಿ ಉಳಿದ ಬಂಧಿತರ ಹೆಸರನ್ನು ಮಹಿಳೆ ಪ್ರಸ್ತಾಪಿಸಿಲ್ಲ. ಸದ್ಯ ನೇತಾಜಿ ಸುಭಾಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಗೆ 5 ಕೋಟಿ ರೂ. ಪಡೆದುಕೊಂಡು ಸುಮ್ಮನಾಗುವಂತೆ ಉದ್ಯಮಿಗಳು ಹೇಳಿದ್ದರು. ಈ ಸಂಬಂಧ ಹಣ ಪಡೆಯಲು ಬರುತ್ತೇನೆ ಅಂತಾ ಮಹಿಳೆ ತಿಳಿಸಿದ್ದರು. ಭಾನುವಾರ ಉದ್ಯಮಿಯ ಕಚೇರಿಗೆ ಮಹಿಳೆ ಆಗಮಿಸಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

  • ಕೊನೆಗೂ ಬಚಾವಾದ ಕರಿಚಿರತೆ!

    ಕೊನೆಗೂ ಬಚಾವಾದ ಕರಿಚಿರತೆ!

    ಬೆಂಗಳೂರು: ಬಂಧನ ಪ್ರಕ್ರಿಯೆಗೂ ಮುನ್ನವೇ ದುನಿಯಾ ವಿಜಯ್‍ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ.

    ಒಬ್ಬರ ಶ್ಯೂರಿಟಿ ಷರತ್ತು ವಿಧಿಸಿ ಸಿಸಿಎಚ್ 65 ನೇ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಕೂಡಲೇ ಸಹಿ ಮಾಡಿಸಿ ದುನಿಯಾ ವಿಜಿ ಬಿಡುಗಡೆಗೊಳಿಸಬೇಕು. ದುನಿಯಾ ವಿಜಯ್ ಬಂಧನವಾಗಿದ್ದರೂ ಬಿಡುಗಡೆಗೊಳಿಸುವಂತೆ ಕೋರ್ಟ್ ಆದೇಶಿಸಿದೆ.

    ಒಬ್ಬರು ಸಬ್ ಇನ್ಸ್ ಪೆಕ್ಟರ್ ಹಾಗು ನಾಲ್ಕು ಜನ ಸಿಬ್ಬಂದಿ ದುನಿಯಾ ವಿಜಿಯನ್ನು ಇನ್ನೋವಾ ಕಾರಿನಲ್ಲಿ ತಮಿಳುನಾಡಿನಿಂದ ಕರೆತರುತ್ತಿದ್ದಾರೆ. ಸದ್ಯ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷೆನ್ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಹಾಗೂ 225 (ಆರೋಪಿಯ ಬಂಧನಕ್ಕೆ ಅಡ್ಡಿ) ಅಡ್ಡಿಪಡಿಸುವ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?
    ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಮನೆಗೆ ಮೇ 30 ಬುಧವಾರದಂದು ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು.

    ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ಥಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯಾ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಗುರುವಾರದಿಂದ ದುನಿಯಾ ವಿಜಯ್ ನಾಪತ್ತೆಯಾಗಿದ್ದರು. ಈ ಬಗ್ಗೆ ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ದೂರು ನೀಡಿದ್ದು, ಈಗ ರೆಸಾರ್ಟ್‍ವೊಂದರಲ್ಲಿ ಅಡಗಿ ಕುಳಿತಿದ್ದ ದುನಿಯಾ ವಿಜಿಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

  • ತಮಿಳುನಾಡಿನಲ್ಲಿ ನಟ ದುನಿಯಾ ವಿಜಯ್ ಬಂಧನ

    ತಮಿಳುನಾಡಿನಲ್ಲಿ ನಟ ದುನಿಯಾ ವಿಜಯ್ ಬಂಧನ

    ಚೆನ್ನೈ: ಸ್ಯಾಂಡಲ್ ವುಡ್‍ನ ಇಬ್ಬರು ಖಳನಟರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ನಟ ದುನಿಯಾ ವಿಜಯ್ ನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತಮಿಳುನಾಡಿನ ಕೊಯಮತ್ತೂರು ಬಳಿ ದುನಿಯಾ ವಿಜಯ್‍ನನ್ನು ಬಂಧಿಸಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ನಟ ದುನಿಯಾ ವಿಜಯ್ ಮೇಲೆ ಪ್ರಕರಣ ದಾಖಲಾಗಿತ್ತು.

    ಮಾಸ್ತಿಗುಡಿ ಚಿತ್ರೀಕರಣದ ವೇಳೆ ನಟರಾದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣ ಸಂಬಂಧ ನಿರ್ದೇಶಕನ ಮೇಲೆ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ತೀರ್ಪಿನಂತೆ ತಾವರೆಕೆರೆ ಪೊಲೀಸರು ವಾರೆಂಟ್ ಹಿಡಿದು ನಿರ್ದೇಶಕ ಸುಂದರ್ ಪಿ ಗೌಡ ಅವರನ್ನು ಬಂಧಿಸಲು ಸುಂದರ್ ಮನೆಗೆ ತಡರಾತ್ರಿ ಹೋಗಿದ್ದರು. ಸುಂದರ್ ಮನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ. ಈ ವೇಳೆ ದುನಿಯಾ ವಿಜಯ್ ಎಂಟ್ರಿ ಕೊಟ್ಟು ಸುಂದರ್ ಬಂಧಿಸದಂತೆ ಪೊಲೀಸರನ್ನ ತಡೆದಿದ್ದರು. ಇದೇ ಸಂದರ್ಭದಲ್ಲಿ ಸುಂದರ್ ಗೌಡ ಹಿಂಬಾಗಿಲಿನಿಂದ ಪರಾರಿಯಾಗಿದ್ದರು. ಇದನ್ನೂ ಓದಿ: ಇನ್ನೂ ಪತ್ತೆಯಾಗದ ಕರಿ ಚಿರತೆ- ಪೊಲೀಸರಿಂದ ವಿಶೇಷ ತಂಡ ರಚನೆ

    ಸುಂದರ್ ಪಿ ಗೌಡ ತಾಯಿ ಆರೋಗ್ಯದ ಸಮಸ್ಯೆ ಹಿನ್ನೆಲೆ ತಾವೇ ನಾಳೆ ಕರೆತರುವುದಾಗಿ ದುನಿಯಾ ವಿಜಯ್ ಮಧ್ಯಸ್ಥಿಕೆ ವಹಿಸಿದ್ದರು. ಅಷ್ಟೇ ಅಲ್ಲದೇ ದುನಿಯಾ ವಿಜಯ್ ತಾವೇ ಸ್ವತಃ ಸುಂದರ್ ನನ್ನ ಠಾಣೆಗೆ ಕರೆತರುವುದಾಗಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ಬಗ್ಗೆ ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ದೂರು ನೀಡಿದ್ದು, ಈಗ ರೆಸಾರ್ಟ್‍ವೊಂದರಲ್ಲಿ ಅಡಗಿ ಕುಳಿತಿದ್ದ ದುನಿಯಾ ವಿಜಿಯ್‍ನನ್ನು ಪೊಲೀಸರು ಬಂಧಿಸಿದ್ದಾರೆ.

  • ಕಳ್ಳತನ ನೋಡಿದ್ದಕ್ಕೆ ತಾಯಿ, 5 ತಿಂಗ್ಳ ಕಂದಮ್ಮನ ಬರ್ಬರ ಹತ್ಯೆ – ಆರೋಪಿಗಳ ಬಂಧನ

    ಕಳ್ಳತನ ನೋಡಿದ್ದಕ್ಕೆ ತಾಯಿ, 5 ತಿಂಗ್ಳ ಕಂದಮ್ಮನ ಬರ್ಬರ ಹತ್ಯೆ – ಆರೋಪಿಗಳ ಬಂಧನ

    ಕಲಬುರಗಿ: ಮಾರಕಾಸ್ತ್ರಗಳಿಂದ ತಾಯಿ ಮತ್ತು 5 ತಿಂಗಳ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.

    ಬಂಧಿತ ಆರೋಪಿಗಳನ್ನು ದಿನೇಶ್ ಚೌದರಿ(19) ಮತ್ತು ವಿಕ್ರಮ್ ಚೌದರಿ(20) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಐದು ತಿಂಗ್ಳ ಮಗು, ತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ!

    ಕಳೆದ ತಿಂಗಳು 25 ರಂದು ಚಿತ್ತಾಪುರ ಪಟ್ಟಣದಲ್ಲಿ ತಾಯಿ ನಿಶಾದೇವಿ (26) ಹಾಗೂ ಐದು ತಿಂಗಳ ಮಗು ರೀಶಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಚಿತ್ತಾಪುರ್ ಪೊಲೀಸ್ ತನಿಖೆ ಕೈಗೊಂಡಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೊಲೆ ಮಾಡಿದ್ದು ಯಾಕೆ?:
    ನಿಶಾದೇವಿ ವಾಸವಿದ್ದ ಕಟ್ಟಡದ ಅಮೃತ್ ಪಾಲ್ ಮನೆಯಲ್ಲಿ ದಿನೇಶ್ ಹಾಗೂ ವಿಕ್ರಮ್ ಕಳ್ಳತನ ಮಾಡಲು ಬಂದಿದ್ದರು. ಅವರು ಕಳ್ಳತನ ಮಾಡುವುದನ್ನ ನಿಶಾದೇವಿ ಗಮನಿಸಿದ್ದಳು. ಕೃತ್ಯ ಬಯಲಾಗುತ್ತೆ ಅಂತಾ ನಿಶಾದೇವಿ ಮನೆಗೆ ನುಗ್ಗಿ ಕತ್ತು ಕೊಯ್ದು ಹತ್ಯೆ ಮಾಡಿ, ನಂತರ ಮಗು ಅಳುವುದನ್ನ ಕಂಡು ಮಗುವನ್ನ ಸಹ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

    ಎಸ್‍ಪಿ ಎನ್ ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಸದ್ಯ ಬಂಧಿತರಿಂದ 8,11,900 ರೂ. ನಗದು ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 16ರ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್

    16ರ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್

    ಬೆಳಗಾವಿ: 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಹುಕ್ಕೇರಿ ಪೊಲೀಸರು ಬುಧವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶಂಕರ್ ಮಾಳಗಿ (18) ಬಂಧಿತ ಆರೋಪಿ. ಮೇ 1 ರಂದು ಶಂಕರ್ ವಿರುದ್ಧ ಫೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.

    ಕೃತ್ಯದ ನಂತರ ಪರಾರಿಯಾಗಿದ್ದ ಶಂಕರ್ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾವಳೋಜ ಗ್ರಾಮದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದ. ಶಂಕರ್ ಮೊಬೈಲ್ ನಂಬರ್ ಟ್ರ್ಯಾಪ್ ಮಾಡುವ ಮೂಲಕ ಹುಕ್ಕೇರಿ ಪೊಲೀಸ್ ತಂಡ ಶಂಕರ್ ಇರುವ ಸ್ಥಳವನ್ನು ಗುರುತಿಸಿ, ಬಂಧಿಸಿದ್ದಾರೆ.