Tag: arrest

  • ಹಾವೇರಿಯಲ್ಲಿ ದಂಪತಿ ಮರ್ಡರ್ ಕೇಸ್ – ಬುರ್ಖಾ ಧರಿಸಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ

    ಹಾವೇರಿಯಲ್ಲಿ ದಂಪತಿ ಮರ್ಡರ್ ಕೇಸ್ – ಬುರ್ಖಾ ಧರಿಸಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ

    ಹಾವೇರಿ: ಬೆಳ್ಳಂಬೆಳಗ್ಗೆ ದಂಪತಿಯನ್ನು ಬರ್ಬರ ಹತ್ಯೆ ಮಾಡಿ ಬುರ್ಖಾ ಧರಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

    ಕೋಟೆಪ್ಪ ಬಂಧಿತ ಆರೋಪಿಯಾಗಿದ್ದು, ಹತ್ಯೆ ನಡೆದ ವೇಳೆ ಆರೋಪಿ ಹೆಲ್ಮೆಟ್ ಹಾಗೂ ಬುರ್ಖಾ ಧರಿಸಿ ಬಂದಿದ್ದ ಎನ್ನುವ ಮಾಹಿತಿಯನ್ನು ಗ್ರಾಮಸ್ಥರಿಂದ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪೊಲೀಸ್ ತನಿಖೆ ವೇಳೆ ಕೊಲೆಯಾದ ವ್ಯಕ್ತಿ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸುಳಿವು ಸಿಕ್ಕಿತ್ತು. ಬಳಿಕ ಆರೋಪಿಗಾಗಿ ಬಲೆ ಬೀಸಿದ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಕೋಟೆಪ್ಪನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಇಂದು ಬೆಳಗ್ಗೆ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ಮನೆಯಲ್ಲಿದ್ದ ಮಾರ್ತಾಂಡಪ್ಪ ಬಾರ್ಕಿ ಮತ್ತು ಸುಧಾ ಬಾರ್ಕಿ ಎಂಬ ದಂಪತಿ ಹತ್ಯೆಯಾಗಿತ್ತು. ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಕೋಟೆಪ್ಪ ಕೊಲೆ ಮಾಡಿ ಪರಾರಿಯಾಗಿದ್ದ.

    ಕೊಲೆಗೆ ಕಾರಣವೇನು: ಸದ್ಯ ಪೊಲೀಸರು ಬಂಧಿಸಿರುವ ಆರೋಪಿ ಕೋಟೆಪ್ಪನ ಪತ್ನಿಯೊಂದಿಗೆ ಮಾರ್ತಾಡಂಪ್ಪ ಅಕ್ರಮ ಸಂಬಂಧ ಹೊಂದಿದ್ದ. ಇದ್ದರಿಂದ ರೋಚ್ಚಿಗೆದ್ದ ಆರೋಪಿ ಕೋಟೆಪ್ಪ ಬುರ್ಖಾ ಧರಿಸಿಕೊಂಡು ಹೋಗಿ ಮಾರ್ತಾಂಡಪ್ಪನನ್ನು ಹತ್ಯೆ ಮಾಡಿದ್ದ. ಅಲ್ಲದೇ ಪತಿಯನ್ನ ಬಿಡಿಸಿಕೊಳ್ಳಲು ಹೋದ ಮಾರ್ತಾಂಡಪ್ಪನ ಪತ್ನಿ ಸುಧಾರನ್ನು ಕೊಲೆ ಮಾಡಿದ್ದಾಗಿ ಕೋಟೆಪ್ಪ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!

    ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!

    ಹಾಸನ: ಪ್ರವಾಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನ ಕರೆದುಕೊಂಡು ಹೋಗಿದ್ದ ಐವರು ಯುವಕರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

    ಅರುಣ್, ಮಹೇಶ್, ಶರತ್ ರಾಜ್ ಹಾಗೂ ರಾಜೇಶ್ ಬಂಧಿತ ಆರೋಪಿಗಳು. ಓರ್ವನ ಹೆಸರು ತಿಳಿದು ಬಂದಿಲ್ಲ. ನಾಪತ್ತೆಯಾದ ಬಾಲಕಿ ಹಾಸನ ಪದವಿ ಪೂರ್ವ ಹಾಸ್ಟೆಲ್‍ನಲ್ಲಿದ್ದು, ಎಸ್‍ಎಸ್‍ಎಲ್‍ಸಿ ಓದುತ್ತಿದ್ದಳು.

    ಜೂನ್ 19 ರಂದು ಅರುಣ್, ಮಹೇಶ್, ಶರತ್ ರಾಜ್ ಹಾಗೂ ರಾಜೇಶ್ ಎಂಬವರು ಬಾಲಕಿಯನ್ನು ಪ್ರವಾಸಕ್ಕೆಂದು ಮೈಸೂರಿಗೆ ಕರೆದುಕೊಂಡು ಹೋಗಿದ್ದರು. ಪ್ರವಾಸದ ವೇಳೆ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಯುವಕರು ಹೇಳಿದ್ದರು. ಆದರೆ ಇತ್ತ ಬಾಲಕಿಯ ಪೋಷಕರು ಯುವಕರೇ ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಮಹಿಳಾ ಠಾಣೆ ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ.

  • 15ರ ಹುಡುಗಿ ಮೇಲೆ ಎರಗಿದ 10 ಮಂದಿ ಕಾಮುಕರು

    15ರ ಹುಡುಗಿ ಮೇಲೆ ಎರಗಿದ 10 ಮಂದಿ ಕಾಮುಕರು

    ಲಕ್ನೋ: 15 ವರ್ಷದ ಹುಡುಗಿಯನ್ನ 10 ಮಂದಿ ಕಾಮುಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ನ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಚಚೇರಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐಪಿಸಿ ಸೆಕ್ಷನ್ 363 ಮತ್ತು 376 ರ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರನ್ನು ನಿತೀಶ್(18) ಮತ್ತು ಆತನ ಸಹೋದರ ರೋಹಿತ್ ಎಂದು ಗುರುತಿಸಲಾಗಿದೆ. ಜೊತೆಗೆ ಈ ಕುರಿತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಜಹಾಂಗೀರಾಬಾದ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸುಭಾಷ್ ಸಿಂಗ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ತನ್ನ ಕುಟುಂಬದವರ ಜೊತೆ ಸೋದರಸಂಬಂಧಿ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಚೇರಿ ಗ್ರಾಮಕ್ಕೆ ಹೋಗಿದ್ದಳು. ಅಲ್ಲಿ ಆರೋಪಿಗಳಾದ ನಿತೀಶ್ ಮತ್ತು ಸಹೋದರ ರೋಹಿತ್ ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಬಂದಿದ್ದರು. ಬಳಿಕ ನಿತೀಶ್ ಸುಮಾರು 8 ಗಂಟೆಗೆ ನೆರೆಯ ಗ್ರಾಮದ ದೇವಾಲಯಕ್ಕೆ ತನ್ನೊಂದಿಗೆ ಬರಬೇಕೆಂದು ಸಂತ್ರಸ್ತೆಯ ಬಳಿ ಕೇಳಿಕೊಂಡಿದ್ದಾನೆ.

    ಸಂತ್ರಸ್ತೆ ಒಪ್ಪಿಕೊಂಡು ಅವರ ಜೊತೆ ಹೋಗಿದ್ದಾಳೆ. ಆದರೆ ಇವರು ಗ್ರಾಮಕ್ಕೆ ಹೋಗುವಷ್ಟರಲ್ಲಿ ಯುವಕರ ಗುಂಪೊಂದು ಕಾಯುತ್ತಿದ್ದು, ಬಳಿಕ 10 ಮಂದಿ ಕಾಮುಕರು ಆಕೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

    ಇತ್ತ ಕುಟುಂಬದವರು ಮಗಳು ಕಾಣಿಸುತ್ತಿಲ್ಲ ಎಂದು ಹುಡುಕಾಡಿದ್ದಾರೆ. ಮರುದಿನ ಬೆಳಗ್ಗೆ 5 ಗಂಟೆಗೆ ಸಂತ್ರಸ್ತೆ ಪ್ರದೇಶವೊಂದರಲ್ಲಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಳಿಕ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶುಕ್ರವಾರ ಸಂತ್ರಸ್ತೆಯ ಸಹೋದರ ಹತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತೆ ಘಟನೆಯ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕೆಲಸ ಮಾಡುತ್ತಿವೆ ಎಂದು ಎಸ್‍ಪಿ ರಾಯ್ಸ್ ಅಖ್ತರ್ ತಿಳಿಸಿದ್ದಾರೆ.

  • ಚಲಿಸುತ್ತಿದ್ದ ರೈಲಿನಲ್ಲಿ ಪೋಷಕರೊಂದಿಗಿದ್ದಾಗ್ಲೇ ಬಾಲಕಿಗೆ ಯುವಕ ಲೈಂಗಿಕ ಕಿರುಕುಳ!

    ಚಲಿಸುತ್ತಿದ್ದ ರೈಲಿನಲ್ಲಿ ಪೋಷಕರೊಂದಿಗಿದ್ದಾಗ್ಲೇ ಬಾಲಕಿಗೆ ಯುವಕ ಲೈಂಗಿಕ ಕಿರುಕುಳ!

    ಕಾರವಾರ: ರೈಲಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕೇರಳ ಮೂಲದ ಯವಕನನ್ನು ಕಾರವಾರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    ಸಿರಾಜ್ ಮಜಿದ್ (27)ಬಂಧಿತ ವ್ಯಕ್ತಿಯಾಗಿದ್ದು, ಕೊಂಕಣ ರೈಲ್ವೆ ಮಾರ್ಗದಲ್ಲಿ ನೇತ್ರಾವತಿ ಎಕ್ಸ್ ಪ್ರೆಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೇರಳದಿಂದ ಗೋವಾ ಕಡೆ ಮಹಾರಾಷ್ಟ್ರ ಮೂಲದ ಬಾಲಕಿ ತನ್ನ ಕುಟುಂಬದೊಂದಿಗೆ ತೆರಳುತ್ತಿದ್ದಳು. ಈ ವೇಳೆ ಗೋವಾ ಕಡೆ ಅದೇ ರೈಲಿನಲ್ಲಿ ತೆರಳುತ್ತಿದ್ದ ಆರೋಪಿ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ.

    ಈ ಬಗ್ಗೆ ಕಾರವಾರದಲ್ಲಿ ಪೋಷಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆತನನ್ನು ಬಂಧಿಸಿ ಕಾರವಾರ ಗ್ರಾಮೀಣ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ.

    ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  • ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಪತ್ನಿಗೆ ಗುಂಡಿಕ್ಕಿದ ಉದ್ಯಮಿ ಪ್ರಕರಣ- ಬಂಧನವಾಗುವ ಮೊದ್ಲೇ ಮಕ್ಳನ್ನೂ ಮುಗಿಸಲು ಸ್ಕೆಚ್ ಹಾಕಿದ್ದ!

    ಬೆಂಗಳೂರು: ಜಯನಗರದಲ್ಲಿ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಹನಾ(42) ಪತಿ ಗಣೇಶ್ ನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು, ಈ ಘಟನೆ ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ನಡೆದಿತ್ತು. ಆರೋಪಿ ಮಕ್ಕಳ ಮೇಲೂ ಶೂಟ್ ಮಾಡಿದ್ದು, ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆ ವಿವರ:
    ಉದ್ಯಮಿ ಗಣೇಶ್ ಮೂಲತಃ ಸಕಲೇಶಪುರದವನಾಗಿದ್ದಾನೆ. ಅಲ್ಲಿ ಕಾಫಿ ತೋಟ ಮಾರಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದನು. ಕನಕಪುರ ರಸ್ತೆಯಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದನು. ಆದ್ರೆ ಕಳೆದ ಎರಡು ವರ್ಷದಿಂದ ರೆಸಾರ್ಟ್ ನಲ್ಲಿ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನು. ಇತ್ತೀಚೆಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಹೀಗಾಗಿ ಗಣೇಶ್ ಹಾಗೂ ಪತ್ನಿ ಸಹಾನ ನಡುವೆ ಆಗಾಗ ಸಾಲದ ವಿಚಾರಕ್ಕೆ ಜಗಳವಾಗುತ್ತಿತ್ತು. ಗುರುವಾರ ರಾತ್ರಿಯೂ ಇದೇ ವಿಚಾರಕ್ಕೆ ಸಂಬಂಧಿಸಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದ್ದು ಗಣೇಶ್ ತನ್ನ ಲೈಸೆನ್ಸ್ ಗನ್ ನಿಂದ ಪತ್ನಿ ಸಹಾನಾಗೆ ಶೂಟ್ ಮಾಡಿದ್ದನು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಗಣೇಶ್ ತನ್ನ ಪತ್ನಿಗೆ ಶೂಟ್ ಮಾಡಿ ಮುಗಿಸಿದ್ದನು.

    ಅರೆಸ್ಟ್ ಆಗಿದ್ದು ಹೇಗೆ?:
    ಮನೆಯಲ್ಲೇ ಪತ್ನಿ ಸಹಾನ ಸಾವನ್ನಪ್ಪಿದ್ದ ಬಳಿಕ ಮೂರು ಮಕ್ಕಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಬಿಡದಿಯ ಫಾರ್ಮ್ ಹೌಸ್ ನಲ್ಲಿ ತಲೆಮರೆಸಿಕೊಂಡಿದ್ದನು. ಫಾರ್ಮ್ ಹೌಸ್ ನಲ್ಲಿ ಮಕ್ಕಳಿಗೆ ಶೂಟ್ ಮಾಡಿದ್ದಾನೆ. ಪರಿಣಾಮ ಹೆಣ್ಣು ಮಗಳ ಹೊಟ್ಟೆಗೆ ಹಾಗೂ ಮಗನ ಕೈ ಹಾಗೂ ತೊಡೆ ಭಾಗಕ್ಕೆ ಗಾಯಗಳಾಗಿವೆ. ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗ್ತಿದ್ದನು.

    ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಕ್ಕಳು, ಗಣೇಶ್ ಬಳಿ ನೀರು ಕೇಳಿದ್ದಾರೆ. ಹೀಗಾಗಿ ನೀರು ಕುಡಿಸಲೆಂದು ಆತ ಕಾರಿನಲ್ಲೇ ಮುಖ್ಯ ರಸ್ತೆಗೆ ಬಂದಿದ್ದಾನೆ. ಇತ್ತ ಗಣೇಶ್ ಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಆತನ ಕಾರ್ ನಂಬರ್ ಮಾಹಿತಿ ಸಿಕ್ಕಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಗಣೇಶ್ ನನ್ನು ಬೆನ್ನಟ್ಟಿದ್ದು, ಅಂಚೆ ಪಾಳ್ಯದ ಬಳಿ ಬಂಧಿಸಿದ್ದಾರೆ. ಇನ್ನು ಗಾಯಗೊಂಡ ಮಕ್ಕಳಿಬ್ಬರನ್ನ ಕೋಣನಕುಂಟೆಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಕ್ಕಳಿಬ್ಬರ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರು ತನ್ನನ್ನು ಬಂಧಿಸೋ ಮುಂಚೆ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೆ. ಅದಕ್ಕಾಗಿಯೇ ಮಕ್ಕಳ ಮೇಲೆ ಗುಂಡು ಹಾರಿಸಿದ್ದೆ. ನನಗೆ ತುಂಬಾ ಸಾಲ ಇತ್ತು. ಅದಕ್ಕಾಗಿ ಆಸ್ತಿ ಮಾರಾಟ ಮಾಡಲು ಪ್ರಯತ್ನ ಮಾಡ್ತಿದ್ದೆ. ಆಸ್ತಿ ಮಾರಾಟ ಮಾಡಲು ಪತ್ನಿ ಅನುಮತಿ ನೀಡುತ್ತಿರಲಿಲ್ಲ. ಆಸ್ತಿ ಮಾರಾಟ ಮಾಡಿದ್ದರೆ ಮಕ್ಕಳು ಬೀದಿಗೆ ಬರುತ್ತಾರೆ ಎಂದು ಹೇಳುತ್ತಿದ್ದಳು. ಮಕ್ಕಳಿಗಾಗಿ ನಾನು ಜೀವ ಕಳೆದುಕೊಳ್ಳುವ ರೀತಿ ಇರಲಿಲ್ಲ. ಅದಕ್ಕಾಗಿ ನಾನು ಈ ಕೃತ್ಯ ಮಾಡಿದೆ ಅಂತ ಗಣೇಶ್ ತಪ್ಪೊಪ್ಪಿಕೊಂಡಿದ್ದಾನೆ.

    https://www.youtube.com/watch?v=FtP56UNZo1w

     

  • ನಿಧಿ ತಗೆಯಲು ಹೋಗಿ ಸ್ಥಳೀಯರ ಕೈಗೆ ಸಿಕ್ಕು ಗೂಸಾ ತಿಂದರು!

    ನಿಧಿ ತಗೆಯಲು ಹೋಗಿ ಸ್ಥಳೀಯರ ಕೈಗೆ ಸಿಕ್ಕು ಗೂಸಾ ತಿಂದರು!

    ದಾವಣಗೆರೆ: ನಿಧಿ ಆಸೆಗಾಗಿ ವಾಮಾಚಾರ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯಲ್ಲಿ ನಡೆದಿದೆ.

    ಮೌನಾಚಾರಿ ಹಾಗೂ ಭಾಷಾ ವಾಮಾಚಾರ ಮಾಡುತ್ತಿದ್ದ ಆರೋಪಿಗಳು. ವಾಮಾಚಾರ ವಿಷಯ ತಿಳಿಯುತ್ತಿದ್ದಂತೆ ಮೌನಾಚಾರಿ ಹಾಗೂ ಭಾಷಾ ಎನ್ನುವ ವ್ಯಕ್ತಿಯನ್ನು ಅಕ್ಕಪಕ್ಕದ ಮನೆಯವರು ಹಿಡಿದಿದ್ದಾರೆ. ಆದರೆ ಇವರ ಜೊತೆಗಿದ್ದ ಮತ್ತಿಬ್ಬರು ಆರೋಪಿಗಳು ಸ್ಥಳೀಯರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

    ಮುಂಜಾನೆ ಯಾರು ಇಲ್ಲದ ಸಮಯ ನೋಡಿ, ಮೌನಾಚಾರಿ, ಭಾಷಾ ಹಾಗೂ ಪರಾರಿಯಾದ ಇಬ್ಬರು ಸೇರಿ ಕೃತ್ಯ ಎಸಗಿದ್ದಾರೆ. ಮನೆಯೊಂದರ ಮುಂಭಾಗದಲ್ಲಿ ಗುಂಡಿ ತೆಗೆದು, ಕೋಳಿ, ಸಲಿಕೆ ಹಾಗೂ ಹಾರಿಗೆ ಪೂಜೆ ಮಾಡಿ, ಕೋಳಿ ಬಲಿಕೊಟ್ಟಿದ್ದರು. ಅಕ್ಕ ಪಕ್ಕದ ಮನೆಯವರಿಗೆ ಶಂಕೆ ವ್ಯಕ್ತವಾಗಿ ಸ್ಥಳಕ್ಕೆ ಬಂದಿದ್ದು, ಮೌನಾಚಾರಿ ಹಾಗೂ ಭಾಷಾರನ್ನು ಹಿಡಿತು ಥಳಿಸಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಇವರ ಜೊತೆಗಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ.

    ಮೌನಾಚಾರಿ ಹಾಗೂ ಭಾಷಾರನ್ನು ಸ್ಥಳೀಯರು ಜಗಳೂರು ಪೊಲೀಸರಿಗೆ ಒಪ್ಪಿಸಿದ್ದು, ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಜಪ್ತಿ -50 ಲಕ್ಷ ರೂ. ಮೌಲ್ಯದ ವಸ್ತು ವಶ

    ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಜಪ್ತಿ -50 ಲಕ್ಷ ರೂ. ಮೌಲ್ಯದ ವಸ್ತು ವಶ

    ಕಾರವಾರ: ಅಕ್ರಮವಾಗಿ ಗೋವಾದಿಂದ ತೆಲಂಗಾಣಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ 1.2 ಲಕ್ಷ ಮೌಲ್ಯದ ಮದ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನ್ ಮೋಡ್ ಚಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದಿದ್ದು, ಲಾರಿ ಚಾಲಕನ್ನು ಬಂಧಿಸಿದ್ದಾರೆ.

    ತೆಲಂಗಾಣ ಮೂಲದ ರಾಮಸ್ವಾಮಿ ಬಂಧಿತ ಲಾರಿ ಚಾಲಕ. ಬೃಹತ್ ಮೊತ್ತದ ಮದ್ಯವನ್ನು ಎಲೆಕ್ಟ್ರಿಕ್ ಬೋರ್ಡ್ ಲಾರಿಯಲ್ಲಿ ಕರ್ನಾಟಕದ ಗಡಿ ಮಾರ್ಗವಾಗಿ ಗೋವಾದಿಂದ ತೆಲಂಗಾಣಕ್ಕೆ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಅಬಕಾರಿ ಅಧಿಕಾರಿ ಮಂಜುನಾಥ್ ಅವರ ದಾಳಿ ನಡೆಸಿದ್ದರು, ಈ ವೇಳೆ ಲಾರಿ ಸಮೇತ ಚಾಲಕ ಸಿಕ್ಕಿಬಿದ್ದಿದ್ದಾನೆ.

    ಉತ್ತರ ಕನ್ನಡ ಜಿಲ್ಲೆಯ ಅನ್‍ಮೋಡ್ ಮಾರ್ಗವಾಗಿ ಹೊರಟಿದ್ದ ಲಾರಿಯನ್ನು ನಿಲ್ಲಿಸಿ, ಅದರಲ್ಲಿದ್ದ 1.2 ಲಕ್ಷ ಮೌಲ್ಯದ ಮದ್ಯ ಸೇರಿದಂತೆ ಒಟ್ಟು 50 ಲಕ್ಷ ಮೌಲ್ಯದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಈ ಕುರಿತು ಜೋಯಿಡಾ ಅಬಕಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪ್ರಾಪ್ತೆಯನ್ನು ಕಿಡ್ನಾಪ್‍ಗೈದು ರಿಯಾಲಿಟಿ ಶೋ ಸ್ಪರ್ಧಿ, ನೃತ್ಯ ನಿರ್ದೇಶಕನಿಂದ ರೇಪ್

    ಅಪ್ರಾಪ್ತೆಯನ್ನು ಕಿಡ್ನಾಪ್‍ಗೈದು ರಿಯಾಲಿಟಿ ಶೋ ಸ್ಪರ್ಧಿ, ನೃತ್ಯ ನಿರ್ದೇಶಕನಿಂದ ರೇಪ್

    ಮುಂಬೈ: ನೃತ್ಯ ನಿರ್ದೇಶಕ, ರಿಯಾಲಿಟಿ ಶೋ ಸ್ಫರ್ಧಿಯೋರ್ವ ಅಪ್ರಾಪ್ತೆಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಗೈದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಬಂಧಿಸಿಲಾಗಿದೆ. ಸದ್ಯ ಆರೋಪಿ ಆದಿತ್ಯ ಗುಪ್ತಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಏನಿದು ಘಟನೆ?
    17 ವರ್ಷದ ಸಂತ್ರಸ್ತೆಗೆ ಆರೋಪಿ ಆದಿತ್ಯಾ ಗುಪ್ತಾನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿತ್ತು. ಹೀಗೆ ಪರಿಚಯವಾಗಿ ಆದಿತ್ಯ ಒಂದು ದಿನ ಸಂತ್ರಸ್ತೆಯನ್ನು ಭೇಟಿ ಮಾಡುವಂತೆ ತಿಳಿಸಿದ್ದನು. ಹೀಗಾಗಿ ಆಕೆ ಭೇಟಿ ಮಾಡಲು ಬಂದಾಗ ಆದಿತ್ಯಾ ಆಕೆಗೆ ಮತ್ತು ಬರುವ ಪಾನೀಯವನ್ನು ನೀಡಿ ಬಳಿಕ ಅಪಹರಿಸಿ, ಅತ್ಯಾಚಾರವೆಸಗಿದ್ದಾನೆ.

    ಇತ್ತ ಕಾಲೇಜಿಗೆಂದು ಹೋದ ಮಗಳು ಮನೆಗೆ ವಾಪಸ್ಸಾಗದಿದ್ದಾಗ ಆತಂಕಗೊಂಡ ಪೋಷಕರು, ಮಗಳು ಅಪಹರಣವಾಗಿದ್ದಾಳೆಂದು ಅಂಧೇರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ದೂರು ದಾಖಲಿಸಿಕೊಂಡ ಕ್ರೈಂ ಬ್ರ್ಯಾಂಚ್ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸೋಮವಾರದಂದು ಸ್ಥಳೀಯ ರೆಸ್ಟೋರೆಂಟ್ ಒಂದರ ಬಳಿ ಬಾಲಕಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದ್ದಾಳೆ. ಕೂಡಲೇ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆನಂತರ ಆಕೆಯ ಹೇಳಿಕೆಯನ್ನು ಪಡೆದಿದ್ದಾರೆ. ಬಾಲಕಿಯ ಹೇಳಿಕೆಯಂತೆ ಪೊಲಿಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.

    ಸದ್ಯ ಪೊಲೀಸರು ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದು, ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಏನಿದು ಪೋಕ್ಸೋ ಕಾಯಿದೆ?
    ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣ ದಾಖಲಾದಾಗ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಮಕ್ಕಳ ರಕ್ಷಣೆಗೆಂದೆ ರೂಪಿತವಾಗಿರುವ ಕಾಯ್ದೆ ಇದಾಗಿದ್ದು, 18 ವರ್ಷದೊಳಗಿನ ಮಕ್ಕಳನ್ನು ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯಗಳಿಂದ ತಡೆದು ರಕ್ಷಣೆ ನೀಡುತ್ತದೆ. ನವೆಂಬರ್ 14, 2012ರಂದು ಈ ಕಾಯ್ದೆ ಜಾರಿಗೆ ಬಂದಿದೆ.

  • ಬಾಲಕಿಯನ್ನ ಅಪಹರಿಸಿ, ಕೈ-ಕಾಲು ಕಟ್ಟಿ ಗ್ಯಾಂಗ್ ರೇಪ್

    ಬಾಲಕಿಯನ್ನ ಅಪಹರಿಸಿ, ಕೈ-ಕಾಲು ಕಟ್ಟಿ ಗ್ಯಾಂಗ್ ರೇಪ್

    ಭುವನೇಶ್ವರ: ಇಬ್ಬರು ಯುವಕರು 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಬೌಧ್ ನಗರದ ಬಾಪೂಜಿನಗರ ವ್ಯಾಪ್ತಿಯಲ್ಲಿ ನಡೆದಿದೆ.

    ಪಿಂಟು ಬಾಧಿಯಾ(25) ಮತ್ತು ತುಕು ಕಂಬಾರ್(24) ಬಂಧಿತ ಆರೋಪಿಗಳು. ಬಾಪೂಜಿನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಕಟ್ಟಡದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು. ಆ ಕಟ್ಟಡದಲ್ಲಿಯೇ ಆರೋಪಿ ಯುವಕರಿಬ್ಬರು ಕೂಡ ಕೆಲಸ ಮಾಡುತ್ತಿದ್ದರು.

    ಸೋಮವಾರ ಆರೋಪಿಗಳು ನನ್ನ ಮಗಳನ್ನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಯಾರು ಇಲ್ಲದ ವೇಳೆ ಅಪಹರಿಸಿದ್ದಾರೆ. ನಂತರ ಆಕೆಯ ಕೈ, ಕಾಲುಗಳನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

    ಈ ಸಂಬಂಧ ಬೌಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಂದು ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತಕಾಮಿ ಅರೆಸ್ಟ್

    ಚಿತ್ರದುರ್ಗ: ವಿಕೃತಕಾಮಿ ಉಮೇಶ್ ರೆಡ್ಡಿ ತವರೂರು ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೋರ್ವ ಜೂನಿಯರ್ ಉಮೇಶ್ ರೆಡ್ಡಿ ಪೊಲೀಸರ ಅತಿಥಿಯಾಗಿದ್ದಾನೆ.

    ಚಿಕ್ಕಮಗಳೂರು ಮೂಲಕದ ಕಲ್ಲೇಶ(27) ಬಂಧಿತ ಆರೋಪಿ. ಈತ ಹೊಸದುರ್ಗ ನಗರದಲ್ಲಿರುವ ಬಾಲಕಿಯರ ಬಿಸಿಎಂ ಹಾಸ್ಟೆಲ್ ನಲ್ಲಿ ಬೆತ್ತಲಾಗಿ ಹುಡುಗಿಯರ ಒಳ ಉಡುಪುಗಳನ್ನು ಧರಿಸುವುದು ಮತ್ತು ಅವುಗಳನ್ನು ಆಶ್ಲೀಲವಾಗಿ ಉಪಯೋಗ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ವಿಚಾರವಾಗಿ ಹಾಸ್ಟೆಲ್ ಮೇಲ್ವಿಚಾರಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಹೊಸದುರ್ಗ ಪೊಲೀಸರು ಕಲ್ಲೇಶನನ್ನು ಬಂಧಿಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಪತ್ತೆ ಮಾಡಲು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ ಜೋಷಿ ಅವರು ಒಂದು ತಂಡವನ್ನು ರಚಿಸಿದ್ದರು. ಆ ತಂಡವು ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿರುವ ಸಂದರ್ಭದಲ್ಲಿ ದಿನಾಂಕ ಮೇ 2ರಂದು ಅನುಮಾನಾಸ್ಪದನಾಗಿ ಒಬ್ಬ ವ್ಯಕ್ತಿಯು ಬಿಸಿಎಂ ಹಾಸ್ಟೆಲ್ ಬಳಿ ಕಾಣಿಸಿಕೊಂಡಿದ್ದ.

    ಆಗ ಅವನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ನಾನು ಸುಮಾರು ಒಂದೂವರೆ ವರ್ಷದಿಂದ ಹೊಸದುರ್ಗ ನಗರದಲ್ಲಿದ್ದೇನೆ. ಹೊಸದುರ್ಗ ನಗರದ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಮತ್ತು ಹುಡುಗಿಯರ ಹಾಸ್ಟೆಲ್ ಬಳಿ ಹೋಗಿ ಹೆಂಗಸರು ಮತ್ತು ಹುಡುಗಿಯರು ಧರಿಸುವ ಒಳ ಉಡುಪುಗಳನ್ನು ಕದ್ದು ಅವುಗಳನ್ನು ಧರಿಸಿಕೊಳ್ಳುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

    ಈತನನ್ನು ಹೆಚ್ಚಿನ ವಿಚಾರಣೆ ನೆಡೆಸಿದಾಗ ಕಲ್ಲೇಶ ಹೊಸದುರ್ಗ ಶೀರಾಂಪುರ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 7 ಪ್ರಕರಣಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಕೋರ್ಟ್ ಈಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.