Tag: arrest

  • ಪತ್ನಿ ಕೊಲೆಗಾಗಿ 52 ವಿಡಿಯೋಗಳನ್ನ ನೋಡ್ದ!

    ಪತ್ನಿ ಕೊಲೆಗಾಗಿ 52 ವಿಡಿಯೋಗಳನ್ನ ನೋಡ್ದ!

    ಚೆನ್ನೈ: ಪತ್ನಿಯನ್ನು ಕೊಲೆ ಮಾಡಲು ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಫೋನಿನಲ್ಲಿ ಬರೋಬ್ಬರಿ 52 ವಿಡಿಯೋಗಳನ್ನು ಡೌನ್‍ಲೌಡ್ ಮಾಡಿ ವೀಕ್ಷಿಸಿದ್ದ ಪಾತಕಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತಮಿಳು ನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪುಷ್ಪ(28) ಪತಿಯಿಂದಲೇ ಕೊಲೆಯಾದ ದುರ್ದೈವಿ. ಈ ಸಂಬಂಧ ಆರೋಪಿ ಪತಿ ಡಿ. ರಾಮದಾಸ್(34)ನನ್ನು ಬಂಧಿಸಲಾಗಿದೆ. ಈತ ಪತ್ನಿಯನ್ನು ಕೊಲೆ ಮಾಡಿ ಬಳಿಕ ಸ್ನಾನ ಮಾಡುವಾಗ ಮುಳುಗಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.

    ಘಟನೆ ವಿವರ?: ಆರೋಪಿ ರಾಮದಾಸ್ 20 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದನು. ತಮಿಳುನಾಡಿದ ತಿರುಪಾಲಾ ಪಂಡಾಲ್ ಮೂಲದ ಪುಷ್ಪಾರನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದನು. ಈ ದಂಪತಿಗೆ 2 ವರ್ಷದ ಮಗಳಿದ್ದಳು. ಈ ದಂಪತಿ ನಾಲ್ಕು ತಿಂಗಳ ಹಿಂದೆ ಮಗುವಿನ ಸಮೇತ ವಿಲ್ಲಪುರಂನ ಇರುಕುಂಡಿ ಗ್ರಾಮಕ್ಕೆ ಬಂದಿದ್ದರು.

    ಆರೋಪಿ ರಾಮದಾಸ್ ತನ್ನ ಪತ್ನಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಡುತ್ತಿದ್ದನು. ಆದ್ದರಿಂದ ಬೇರೆ ಗ್ರಾಮಕ್ಕೆ ಬಂದಿದ್ದನು. ಆದರೆ ಅಲ್ಲಿಯೋ ಪ್ರತಿದಿನವೂ ಈ ವಿಚಾರವಾಗಿವೇ ಜಗಳ ಮಾಡುತ್ತಿದ್ದನು. ಕೊನೆಗೆ ಆಕೆಯನ್ನ ಕೊಲೆ ಮಾಡಲು ನಿರ್ಧರಿಸಿದ್ದು, ನೀರಿನಲ್ಲಿ ಮುಳಗಿಸಿ ಕೊಂದಿದ್ದನು.

    ಜುಲೈ 15 ರಂದು ಪೊಲೀಸರಿಗೆ ಕೊಳದಲ್ಲಿ ಪುಷ್ಪ ದೇಹ ಪತ್ತೆಯಾಗಿದೆ. ಪೊಲೀಸರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಶಂಕಿಸಿದ್ದರು. ಬಳಿಕ ವಿಚಾರಣೆಯ ವೇಳೆ ಆರೋಪಿಯ ಫೋನ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಸಾಕಷ್ಟು ವಿಡಿಯೋಗಳು ಡಿಲೀಟ್ ಆಗಿರೋದನ್ನ ಪೊಲೀಸರು ಗಮನಿಸಿದ್ದಾರೆ. ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಡಿಲೀಟ್ ಆದ ವಿಡಿಯೋಗಳ ಮತ್ತೆ ಬ್ಯಾಕ್‍ಅಪ್ ಪಡೆದುಕೊಂಡಿದ್ದಾರೆ. ಪೊಲೀಸರೇ ಆ ವಿಡಿಯೋ ನೋಡಿ ಅಚ್ಚರಿ ಪಟ್ಟಿದ್ದರು.

    ಆರೋಪಿ ರಾಮದಾಸ್ ತನ್ನ ಫೋನಿನಲ್ಲಿ ಮಹಿಳೆಯನ್ನು ಹೇಗೆ ಪತ್ತೆ ಹಚ್ಚದಂತೆ ಕೊಲೆ ಮಾಡುವುದು ಎಂದು ಸುಮಾರು 52 ವೀಡಿಯೊಗಳನ್ನು ನೋಡಿದ್ದಾನೆ. ಆಗ ಮೃತ ಪುಷ್ಪ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಆದ್ದರಿಂದ ಗರ್ಭಿಣಿ ಮಹಿಳೆಯನ್ನು ಹೇಗೆ ಕೊಲ್ಲಬೇಕೆಂದು ಕೂಡ ವಿಡಿಯೋಗಳನ್ನು ಅವನು ನೋಡಿದ್ದಾನೆ. ಅದರಂತೆಯೇ ಆಕೆಯ ಬಾಯಿಯನ್ನು ಮುಚ್ಚಿ ಕೊಲೆ ಮಾಡಿದ್ದಾನೆ ಎಂದು ವಿಲ್ಲಪುರಂ ಪೊಲೀಸ್ ಅಧೀಕ್ಷಕ ಎಸ್.ಜಯಕುಮಾರ್ ಅವರು ತಿಳಿಸಿದ್ದಾರೆ.

    ಪೊಲೀಸರಿಗೆ ಪತಿಯೇ ಆರೋಪಿ ಎಂದು ತಿಳಿದು ಬಳಿಕ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿ ಪತಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಆರೋಪಿಯನ್ನು ಶನಿವಾರ ಬಂಧಿಸಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

  • ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಎಸಗ್ತಿದ್ದ ಕಳ್ಳರು ಅಂದರ್: ಸಿಕ್ಕಿಬಿದ್ದಿದ್ದು ಹೇಗೆ?

    ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಎಸಗ್ತಿದ್ದ ಕಳ್ಳರು ಅಂದರ್: ಸಿಕ್ಕಿಬಿದ್ದಿದ್ದು ಹೇಗೆ?

    ಬೆಂಗಳೂರು: ಪಾರಿವಾಳ ಹಿಡಿಯುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅನಿಲ್‍ಕುಮಾರ್ ಜಾನಿ (19), ರಾಹುಲ್ ನಾಯ್ಕ (20) ಹಾಗೂ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಐದಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೇಗೆ ಸಂಚು ರೂಪಿಸುತ್ತಿದ್ದರು?
    ಆರೋಪಿಗಳು ಕ್ಯಾಪ್ ಧರಿಸಿ ಬೈಕ್ ನಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಮನೆಗಳ್ಳತನಕ್ಕೆ ಪ್ಲಾನ್ ಹಾಕಿಕೊಳ್ಳುತ್ತಿದ್ದರು. ಬೀಗ ಹಾಕಿರುವ ಮನೆಗಳ ಮೇಲೆ ಹಾರಲು ಬಾರದ ಪಾರಿವಾಳ ಬಿಟ್ಟು ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡುತ್ತಿದ್ದರು. ಕಳ್ಳತನದ ವೇಳೆ ಯಾರಾದರೂ ಅನುಮಾನಿಸಿ ಪ್ರಶ್ನಿಸಿದರೆ ಪಾರಿವಾಳ ಟೆರೆಸ್ ಮೇಲೆ ಬಂದಿದೆ ಹಿಡಿದುಕೊಳ್ಳೋಕೆ ಬಂದಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಕುಮಾರಸ್ವಾಮಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಓರ್ವ ಬಾಲಕ ಅನುಮಾನಸ್ಪದವಾಗಿ ಪಾರಿವಾಳ ಹಿಡಿದು ಓಡಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಸಿಸಿ ಟಿವಿಯ ಜಾಡನ್ನು ಹಿಡಿದು ಬೆನ್ನತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಓರ್ವ ಬಾಲಕ ಸಿಕ್ಕಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಬಾಲಕ ಕಳ್ಳತನವನ್ನು ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.

  • 1.830 ಕೆ.ಜಿ ಗಾಂಜಾ ಸಾಗಿಸ್ತಿದ್ದ, 15 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯ ಬಂಧನ

    1.830 ಕೆ.ಜಿ ಗಾಂಜಾ ಸಾಗಿಸ್ತಿದ್ದ, 15 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯ ಬಂಧನ

    ಮಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಸುಮಾರು 15 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೊಬ್ಬನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ನಗರದ ಕಾಟಿಪಳ್ಳ ಕೃಷ್ಣಾಪುರದ ಕೇಶವ ಸನಿಲ್ ಬಂಧಿತ ಆರೋಪಿ. ಈತ ಮಂಗಳೂರು ನಗರಕ್ಕೆ ಕೇರಳದಿಂದ ಅಕ್ರಮವಾಗಿ ಗಾಂಜಾವನ್ನು ಕಾರಿನಲ್ಲಿ ತಂದು ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸಿದ್ದನು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ಬಳಿ ಆರೋಪಿಯನ್ನ ಬಂಧಿಸಿದ್ದಾರೆ.

    ಗಾಂಜಾವನ್ನು ಆರೋಪಿಯು ಕೇರಳ ಮೂಲದ ವ್ಯಕ್ತಿಯೊಬ್ಬನಿಂದ ಖರೀದಿ ಮಾಡಿ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ತಂದಿದ್ದನು. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ 1.830 ಕೆಜಿ ಗಾಂಜಾ, ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿ ಹಾಗೂ ವಶಪಡಿಸಿಕೊಂಡ ಗಾಂಜಾ, ಮೊಬೈಲ್ ಫೋನ್ ಹಾಗೂ ಕಾರನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

    ಆರೋಪಿ ಕೇಶವ ಸನಿಲ್ ವಿರುದ್ಧ ಈ ಹಿಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧ ಪಟ್ಟಂತೆ ಒಟ್ಟು 12 ಪ್ರಕರಣ ಸೇರಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಅಲ್ಲದೇ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ಹೀಗೆ ಒಟ್ಟು 15 ಪ್ರಕರಣ ದಾಖಲಾಗಿತ್ತು.

  • ಅಕ್ರಮ ವಿದೇಶಿಗರಿಗೆ ಬೆಳ್ಳಂಬೆಳಗ್ಗೆ ಬೆಂಗ್ಳೂರು ಪೊಲೀಸರಿಂದ ಶಾಕ್

    ಅಕ್ರಮ ವಿದೇಶಿಗರಿಗೆ ಬೆಳ್ಳಂಬೆಳಗ್ಗೆ ಬೆಂಗ್ಳೂರು ಪೊಲೀಸರಿಂದ ಶಾಕ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಅಕ್ರಮ ವಿದೇಶಿಗರಿಗೆ ಬೆಂಗಳೂರು ಪೊಲೀಸರು ಶಾಕ್ ನೀಡಿದ್ದಾರೆ.

    ನಗರದ ಕೆ.ಆರ್ ಪುರಂ ನಲ್ಲಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ವಿಶೇಷ ಕಾರ್ಯಚರಣೆ ನಡೆಸಿದ್ದಾರೆ. ಈ ವೇಳೆ ಅಗತ್ಯ ದಾಖಲೆಯಿಲ್ಲದೇ ವಾಸಿಸುತ್ತಿದ್ದ ಸುಮಾರು 20 ಕ್ಕೂ ಹೆಚ್ಚು ವಿದೇಶಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಕಾರ್ಯಚರಣೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ನಡೆದಿದೆ. ಬಂಧಿತ ವಿದೇಶಿಗರ ಬಳಿಯಲ್ಲಿ ಮಾದಕ ವಸ್ತುಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ. ಕೆ.ಆರ್ ಪುರಂ ಪೊಲೀಸರು ಬಂಧಿತರಿಂದ ದಾಳಿ ವೇಳೆ ದೊರೆತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

  • ರೈಲ್ವೆ ನಿಲ್ದಾಣದಲ್ಲಿ ಬರೋಬ್ಬರಿ 2 ಕೋಟಿ ರೂ. ಪತ್ತೆ

    ರೈಲ್ವೆ ನಿಲ್ದಾಣದಲ್ಲಿ ಬರೋಬ್ಬರಿ 2 ಕೋಟಿ ರೂ. ಪತ್ತೆ

    ಲಕ್ನೋ: ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್ ಪಿ) ತಂಡವು ಮುಘಲ್ಸಾರೈ ರೈಲ್ವೆ ನಿಲ್ದಾಣದಲ್ಲಿ ಕಾರ್ಯಚರಣೆ ಮಾಡುವ ವೇಳೆ ಬರೋಬ್ಬರಿ 2 ಕೋಟಿ ರೂ. ಪತ್ತೆಯಾಗಿದೆ.

    ಸಿಕ್ಕ ಹಣದ ಜೊತೆ ಇಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ತೆರಿಗೆ ಇಲಾಖೆಯ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಉತ್ತರ ಪ್ರದೇಶದ ಮುಘಲ್ಸಾರೈ ರೈಲ್ವೆ ನಿಲ್ದಾಣದ ದುರೊಂಟೋ ಎಕ್ಸ್ ಪ್ರೆಸ್ ಮೂಲಕ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಮುಘಲ್ಸಾರೈ ರೈಲ್ವೆ ನಿಲ್ದಾಣದಿಂದ ಇಬ್ಬರನ್ನು ಬಂಧಿಸಲಾಗಿದೆ. ಜೊತೆಗೆ 2,000 ಮತ್ತು 500 ರೂ. ಮುಖಬೆಲೆಯ ಸುಮಾರು 2 ಕೋಟಿ ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಸದ್ಯಕ್ಕೆ ಆದಾಯ ತೆರಿಗೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರೀಶಿಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ ಎಂದು ಜಿಆರ್ ಪಿ ಇನ್ಸ್ ಪೆಕ್ಟರ್ ಆರ್.ಕೆ. ಸಿಂಗ್ ತಿಳಿಸಿದ್ದಾರೆ.

  • ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬರುತ್ತಿದ್ದ ಖದೀಮರ ಬಂಧನ

    ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬರುತ್ತಿದ್ದ ಖದೀಮರ ಬಂಧನ

    ತುಮಕೂರು: ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಒಂಟಿ ಮಹಿಳೆಯರ ಮನೆ ದೋಚುತ್ತಿದ್ದ ಕಳ್ಳರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

    ಗಣೇಶ್, ರಾಮಚಂದ್ರ ಹಾಗೂ ಫರಿದುಲ್ ಇಂತಿಯಾಸ್ ಬಂಧಿತ ಆರೋಪಿಗಳು. ಈ ಖದೀಮರು ಜೂನ್ 16 ರಂದು ನಗರದ ಸಿ.ಎಸ್.ಐ ಲೇಔಟನ್ ಮನೋರಮಾ ಒಂಟಿ ಮಹಿಳೆಯ ಮನೆಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಹೋಗಿದ್ದಾರೆ. ಬಳಿಕ ಚಿನ್ನಾಭರಣ ಸೇರಿದಂತೆ ಸುಮಾರು 10 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.

    ಬಂಧಿತರು ಶಿವಮೊಗ್ಗ ಹಾಗೂ ತಮಿಳುನಾಡಿನವರಾಗಿದ್ದು, ಮೈಸೂರು ಹಾಗೂ ಬೆಂಗಳೂರಿನಲ್ಲೂ ತಲಾ ಎರಡು ಮನೆಯಲ್ಲಿ ಇದೇ ಕಳ್ಳರು ದೋಚಿದ್ದಾರೆ. ಸದ್ಯಕ್ಕೆ ತುಮಕೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಕದ್ದಿದ್ದ ಹಣ ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.  ಇದನ್ನು ಓದಿ: ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದು ವೃದ್ಧೆಗೆ ವಂಚಿಸಿ 20 ಲಕ್ಷ ರೂ. ಚಿನ್ನಾಭರಣ ದೋಚಿದ್ರು!

  • ಬಾಡಿಗೆ ವಿಚಾರವಾಗಿ ಲಾಡ್ಜ್ ಗೆ ಕರೆದೊಯ್ದು ಏಕಾಏಕಿ ಯುವತಿಯ ಮೇಲೆರಗಿದವನ ಬಂಧನ!

    ಬಾಡಿಗೆ ವಿಚಾರವಾಗಿ ಲಾಡ್ಜ್ ಗೆ ಕರೆದೊಯ್ದು ಏಕಾಏಕಿ ಯುವತಿಯ ಮೇಲೆರಗಿದವನ ಬಂಧನ!

    ಬೆಂಗಳೂರು: ಮನೆ ಬಾಡಿಗೆ ಕೊಡಿಸುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಕಾಮುಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಿಯಲ್ ಎಸ್ಟೇಟ್ ಉದ್ಯಮಿ ಓಬಳಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ. ಈ ಘಟನೆ ಆರ್.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ವಿ ಹಳ್ಳಿ ಸರ್ಕಲ್‍ನಲ್ಲಿ ನಡೆದಿದೆ. ಆರೋಪಿ ಓಬಳಪ್ಪ 25 ವರ್ಷದ ಖಾಸಗಿ ಕಂಪೆನಿಯೊಂದರ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    ಘಟನೆ ವಿವರ:
    ಯುವತಿ ಹಲವು ದಿನಗಳಿಂದ ಬಾಡಿಗೆ ಮನೆಯ ಹುಡುಕಾಟದಲ್ಲಿದ್ದರು. ಆಗ ಇತ್ತೀಚೆಗೆ ಸಹೋದ್ಯೋಗಿಯ ಮೂಲಕ ಯುವತಿಗೆ ಓಬಳಪ್ಪನ ಪರಿಚಯವಾಗಿತ್ತು. ಜುಲೈ 15ರಂದು ಓಬಳಪ್ಪನನ್ನು ಆತನ ಕಚೇರಿಯಲ್ಲೇ ಭೇಟಿಯಾಗಿದ್ದರು. ಈ ವೇಳೆ ಬಾಡಿಗೆ ಮನೆ ಬಗ್ಗೆ ವಿಚಾರಿಸಿದಾಗ ಓಬಳಪ್ಪ ಎರಡು ಮನೆಗಳನ್ನು ತೋರಿಸಿದ್ದನು. ಯುವತಿಗೆ ಆ ಮನೆ ಇಷ್ಟವಾಗಲಿಲ್ಲ ಎಂದು ವಾಪಸ್ಸಾಗಿದ್ದರು. ಆದರೆ ಜುಲೈ 17ರಂದು ಪುನಃ ಕರೆ ಮಾಡಿದ ಓಬಳಪ್ಪ ಮನೆ ತೋರಿಸುವುದಾಗಿ ಹೇಳಿದ್ದನು. ಹೀಗಾಗಿ ಆ ದಿನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಚ್.ವಿ ಹಳ್ಳಿ ಸರ್ಕಲ್ ಬಳಿ ಯುವತಿಯನ್ನು ಕರೆದಿದ್ದನು.

    ಆರೋಪಿ ಓಬಳಪ್ಪ ಅತಿಥಿ ಎಂಬ ಲಾಡ್ಜ್ ಗೆ ಹೋಗಿ ಬಾಡಿಗೆ ವಿಚಾರ ಮಾತನಾಡೋಣ ಎಂದು ಹೇಳಿದ್ದನು. ಆದರೆ ಅಲ್ಲಿ ಹೋಗಿ ಸ್ವಲ್ಪ ಸಮಯದ ನಂತರ ಏಕಾಏಕಿ ಯುವತಿಯ ಮೇಲೆರಗಿ ಆಕೆಯ ಗುಪ್ತಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಅಲ್ಲಿಂದ ಯುವತಿ ತಪ್ಪಿಸಿಕೊಂಡು ಬಂದಿದ್ದಾರೆ. ಆದರೆ ಆರೋಪಿ ಆಕೆಯನ್ನ ಹಿಂಬಾಲಿಸಿಕೊಂಡು ಬಂದು ಪೊಲೀಸರಿಗೆ ದೂರು ಕೊಟ್ಟರೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ. ಅಷ್ಟೇ ಅಲ್ಲದೇ ನಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಸಿದ್ದನು ಅಂತ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

    ಯುವತಿ ಈ ಕುರಿತು ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ಓಬಳಪ್ಪನನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

  • ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ- ಯುವಪಡೆಯಿಂದ ಅಭಿಯಾನ

    ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ- ಯುವಪಡೆಯಿಂದ ಅಭಿಯಾನ

    ತುಮಕೂರು: ಪಾವಗಡದಲ್ಲಿ ಮಟ್ಕಾ ದಂಧೆ ಮೀತಿ ಮೀರಿ ಹೋಗಿದ್ದು, ಪೊಲೀಸ್ ಇಲಾಖೆ ಈ ದಂಧೆ ನಿಯಂತ್ರಿಸುವಲ್ಲಿ ವಿಫಲವಾಗಿತ್ತು. ಇದರಿಂದ ಬೇಸತ್ತ ಯುವ ಪಡೆ ‘ಮಟ್ಕಾ ನಿಲಿಸಿ ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದಾರೆ.

    ಈ ಅಭಿಯಾನದಿಂದ ಮುಜುಗರಕ್ಕೊಳಗಾದ ಪಾವಗಡದ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು, ಮಟ್ಕಾ ದಂಧೆ ನಿಯಂತ್ರಣಕ್ಕೆ ಸಜ್ಜಾಗಿದೆ. ಪಾವಗಡ ತಾಲೂಕಿನಲ್ಲಿ ಪೊಲೀಸ್ ಇಲಾಖೆ ಮಟ್ಕಾ ದಂಧೆ ನಡೆಸುವ ಬುಕ್ಕಿಗಳನ್ನು ಪ್ರತಿದಿನ ತನ್ನ ವಶಕ್ಕೆ ಪಡೆದುಕೊಂಡು ವಾಪಸ್ ಬಿಡುಗಡೆ ಮಾಡುತ್ತಿದೆ. ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 20 ಕ್ಕೂ ಹೆಚ್ಚು ಮಟ್ಕಾ ದಂಧೆ ನಡೆಸುವವರನ್ನು ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ದಿಗ್ಬಂಧನ ಹಾಕಲಾಗುತ್ತಿದೆ.

    ಠಾಣೆ ಎದುರು ಎಲ್ಲರನ್ನು ಕೂರಿಸಲಾಗಿದ್ದು, ದಂಧೆಕೋರರು ಎಲ್ಲೂ ಹೋಗದೇ ಪೊಲೀಸ್ ಕಾವಲು ಹಾಕಲಾಗಿದೆ. ಕಳೆದ ಒಂದು ವಾರದಿಂದ ಪಾವಗಡ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಈ ನಡುವೆ ಮಟ್ಕಾ ದಂಧೆಯಲ್ಲಿ ಶಾಮಿಲಾಗಿದ್ದರು ಎಂಬ ಆರೋಪದ ಮೇಲೆ ಸಿಪಿಐ ಮಹೇಶ್‍ನನ್ನು ಅಮಾನತುಗೊಳಿಸಲಾಗಿದೆ. ಇದರ ಪರಿಣಾಮ ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆ ನಿಯಂತ್ರಣವಾಗಿದೆ.

    ಆದರೂ ಮಟ್ಕಾ ದಂಧೆಯ ಪ್ರಮುಖ ರೂವಾರಿಗಳಾದ ಅಶ್ವಥ್, ರಾಮಾಂಜಿ, ನೂರಿ ತಲೆ ಮರೆಸಿಕೊಂಡಿದ್ದು, ಅವರನ್ನೂ ಬಂಧಿಸಬೇಕು ಎಂದು ಪೊಲೀಸರ ಮೇಲೆ ಸಾರ್ವಜನಿಕರ ಒತ್ತಡವನ್ನು ಹೇರಿದ್ದಾರೆ.

  • ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ದಾಂಧಲೆ!

    ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ದಾಂಧಲೆ!

    ತುಮಕೂರು: ಕಂಠ ಪೂರ್ತಿ ಕುಡಿದ ಆಟೋ ಚಾಲಕನೋರ್ವ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ ಘಟನೆ ಜಿಲ್ಲೆಯ ತಿಪಟೂರು ಬಸ್ ನಿಲ್ದಾಣದ ಬಳಿ ನಡೆದಿದೆ.

    ಆಟೋ ಚಾಲಕ ಅಶೋಕ ಎಂಬಾತ ಅವಾಂತರ ಸೃಷ್ಟಿಸಿದ ಕುಡುಕ ಮಹಾಷಯ. ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದ ಆಟೋ ಚಾಲಕ ಅರೆಬೆತ್ತಲಾಗಿ ನಡು ರಸ್ತೆಯಲ್ಲೇ ದಾಂಧಲೆ ನಡೆಸಿದ್ದಾನೆ. ನಡು ರಸ್ತೆಯಲ್ಲಿ ಬಸ್ ಸೇರಿದಂತೆ ವಾಹನಗಳನ್ನು ಅಡ್ಡಗಟ್ಟಿ ಕಲ್ಲು ತೂರಿದ್ದಾನೆ. ಪರಿಣಾಮ ಹಲವು ಬಸ್ ಗಳ ಗಾಜು ಪುಡಿಪುಡಿಯಾಗಿವೆ.

    ಅಶೋಕನ ರಂಪಾಟ ತಡೆಯಲು ಬಂದ ಸಾರ್ವಜನಿಕರ ಮೇಲೆಯೂ ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆಟೋ ಚಾಲಕ ಎಣ್ಣೆ ಮತ್ತಿನಲ್ಲಿ ಪೊಲೀಸರ ವಾಹನವನ್ನೂ ಸಹ ಜಖಂಗೊಳಿಸಿದ್ದಾನೆ. ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಕುಡುಕ ಆಟೋಚಾಲಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಘಟನೆ ಸಂಬಂಧ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಹಾಗೂ ಅರೆಬೆತ್ತಲಾಗಿ ಅವಾಂತರ ಸೃಷ್ಟಿಸಿದಕ್ಕೆ ಪೊಲೀಸರು ದೂರು ದಾಖಲಿಸಿಕೊಂಡು ಕುಡುಕನನ್ನು ಬಂಧಿಸಿದ್ದಾರೆ.

    https://www.youtube.com/watch?v=7fWPL8He_rs

  • ಕಾರ್ಕಳದಲ್ಲಿ ಒಂಟಿ ಮಹಿಳೆ ಮರ್ಡರ್- ಮಹಾರಾಷ್ಟ್ರದಲ್ಲಿ ಆರೋಪಿ ಅರೆಸ್ಟ್

    ಕಾರ್ಕಳದಲ್ಲಿ ಒಂಟಿ ಮಹಿಳೆ ಮರ್ಡರ್- ಮಹಾರಾಷ್ಟ್ರದಲ್ಲಿ ಆರೋಪಿ ಅರೆಸ್ಟ್

    ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

    ಫ್ಲೋರಿನ್ ಮಚಾದೋ ಎಂಬ ಒಂಟಿ ಮಹಿಳೆ ಕೊಲೆ ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದಿತ್ತು. ಪ್ರಕರಣ ಬೆನ್ನತ್ತಿದ ಕಾರ್ಕಳ ಪೊಲೀಸರು ಮಹಾರಾಷ್ಟ್ರದ ಪನ್ವೇಲ್ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈದು ಗ್ರಾಮದ ಹೊಸ್ಮಾರಿನ ಮೊಹಮ್ಮದ್ ರಿಯಾಜ್ ಆಗಿದ್ದು, ಈತ ದುಬೈಯಲ್ಲಿ ಪಾಸ್‍ಪೋರ್ಟ್, ವೀಸಾ ಕೊಡಿಸುವ ಏಜೆನ್ಸಿಯಲ್ಲಿ ಉದ್ಯೋಗಿಯಾಗಿದ್ದ ಎಂದು ತಿಳಿದು ಬಂದಿದೆ.

    ಇವರಿಬ್ಬರಿಗೂ ಫೇಸ್‍ಬುಕ್ ಮೂಲಕ 5 ವರ್ಷಗಳಿಂದ ಪರಿಚಯವಿದ್ದು, ತುಂಬಾ ಆತ್ಮೀಯವಾಗಿ ಹಣಕಾಸಿನ ವ್ಯವಹಾರದಲ್ಲಿ ಮುಂದುವರಿದಿದ್ದರು. ಆರೋಪಿ ರಿಯಾಜ್‍ನಿಂದ ಫ್ಲೋರಿನ್ 13 ಲಕ್ಷದಷ್ಟು ಸಾಲ ಪಡೆದು ಲೇವಾದೇವಿಗೆ ವಿನಿಯೋಗಿಸಿದ್ದಳು. ಆಕೆ ಹಣ ಮರುಪಾವತಿ ಮಾಡದ ಕಾರಣ ಆಗಾಗ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಶನಿವಾರ ರಾತ್ರಿ ಆತ ಮತ್ತೆ ಫ್ಲೋರಿನ್ ಮನೆಗೆ ಹಣ ವಸೂಲಿಗಾಗಿ ಬಂದಿದ್ದ, ಆ ವೇಳೆ ಹಣ ನೀಡದೇ ಇದ್ದಾಗ ಆಕೆಯನ್ನು ಚಾಕುವಿನಿಂದ ಇರಿದಿದ್ದಾನೆ. ಆಕೆಯ ಮನೆಯಲ್ಲಿದ್ದ ಚಿನ್ನಾಭರಣ, ನಗದು, ಮೊಬೈಲ್ ಹಾಗೂ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು, ಆತನ ಮೊಬೈಲ್ ನೆಟ್‍ವರ್ಕ್ ಆಧಾರದಲ್ಲಿ ಆರೋಪಿ ಅಜ್ಮೀರ್‍ದಲ್ಲಿದ್ದಾನೆಂದು ತಿಳಿಯುತ್ತದೆ. ತಕ್ಷಣವೇ ರೈಲ್ವೆ ನಿಲ್ದಾಣದಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು, ಆತ ಅಹಮದಾಬಾದ್‍ನಿಂದ ಮುಂಬೈ ಮೂಲಕ ಮಂಗಳೂರಿಗೆ ರೈಲಿನಲ್ಲಿ ಬರುತ್ತಿರುವುದಾಗಿ ಖಚಿತ ಮಾಹಿತಿ ಪಡೆದು ಪನ್ವೇಲ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.