Tag: arrest

  • ಮೋಜು ಮಸ್ತಿಗಾಗಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

    ಮೋಜು ಮಸ್ತಿಗಾಗಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

    ಹಾವೇರಿ: ಜಿಲ್ಲೆಯ ಬಂಕಾಪುರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದರೋಡೆ ಮಾಡಲು ಹೊಂಚು ಹಾಕಿದ್ದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಮ್ಮದ್ ಸಾಧಿಕ್ ಸೋನಾರ (20), ಮಹಮ್ಮದ್ ಮಲ್ಲಿಗಾರ (27), ಮೆಹಬೂಬಸಾಬ ಹಿತ್ತಲಮನಿ (23), ಮಲ್ಲಿಕ್ ರೆಹಾನ್ ಮಂಚಗಿ (20) ಮತ್ತು ಮೆಹಬೂಬ ಅಲಿ ಸಾವಿಕೇರಿ (22) ಬಂಧಿತ ಆರೋಪಿಗಳು. ಎಲ್ಲರು ಹಾನಗಲ್ ತಾಲೂಕಿನ ಅಕ್ಕಿ ಆಲೂರು ನಿವಾಸಿಗಳು ಎಂದು ಗುರುತಿಸಲಾಗಿದೆ.

    ದರೋಡೆ ನಡೆಸಲು ಸಂಚು ರೂಪಿಸಿದವರಿಂದ ಎರಡು ಕಾರ್, ಮಚ್ಚು, ಲಾಂಗ್ ಸೇರಿದಂತೆ ವಿವಿಧ ಮಾರಕಾಸ್ತ್ರಗಳ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಬಳಿ ಬಂಧಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳ ವಿರುದ್ಧ ಕಾರ್ಯಾರಚಣೆ ನಡೆಸಲಾಗಿತ್ತು ಎಂಬ ಮಾಹಿತಿ ಲಭಿಸಿದ್ದು, ಆರೋಪಿಗಳು ದರೋಡೆ ಮಾಡಿದ್ದ ಹಣವನ್ನ ಮೋಜು ಮಸ್ತಿ ಮಾಡಲು ಬಳಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

    ಆರೋಪಿಗಳು ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನ ತಡೆದು ದರೋಡೆ ಮಾಡಲು ಹೊಂಚು ಹಾಕಿದ್ದರು. ಬಂಕಾಪುರ ಠಾಣೆಯ ಪಿಎಸ್‍ಐ ಸಂತೋಷ ಪಾಟೀಲ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ  www.instagram.com/publictvnews

  • ನಡುರಸ್ತೆಯಲ್ಲಿಯೇ ಮಹಿಳೆಯ ಪ್ಯಾಂಟ್ ಎಳೆದು ಕಿರುಕುಳ!

    ನಡುರಸ್ತೆಯಲ್ಲಿಯೇ ಮಹಿಳೆಯ ಪ್ಯಾಂಟ್ ಎಳೆದು ಕಿರುಕುಳ!

    ಮುಂಬೈ: 33 ವರ್ಷದ ವ್ಯಕ್ತಿಯೊಬ್ಬ 40 ವರ್ಷದ ಮಹಿಳೆಯ ಪ್ಯಾಂಟ್ ಎಳೆದು ಕಿರುಕುಳ ನೀಡಿದ್ದು, ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

    ಈ ಘಟನೆ ಕಂಡಿವಾಲಿಯ ನ್ಯೂ ಲಿಂಕ್ ರೋಡ್ ನಲ್ಲಿ ನಡೆದಿದೆ. ರಾಮ್‍ರಾಜ್ ಪವಾರ್ ಬಂಧಿತ ಆರೋಪಿ. ಮಹಿಳೆ ಬೋರಿವಲಿಯಲ್ಲಿರುವ ತಮ್ಮ ನಿವಾಸದಿಂದ ಬಿಟ್ಟು ಮಲಾಡ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆರೋಪಿಯು ಕೂಡ ತನ್ನ ಸ್ಕೂಟರಿನಿಂದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಅಲ್ಲದೇ ಸ್ಕೂಟರ್ ನಿಲ್ಲಿಸಿ ಮಹಿಳೆಯ ಹಿಂದೆ ನಡೆದುಕೊಂಡು ಹಿಂಬಾಲಿಸಿ ಹೋಗಿದ್ದಾನೆ. ಬಳಿಕ ಸ್ವಲ್ಪ ದೂರ ಹೋಗುತ್ತಿದ್ದಂತೆ ಆಕೆಯ ಪ್ಯಾಂಟ್ ಎಳೆದು ಅಸಭ್ಯವಾಗಿ ಆಕೆಯನ್ನು ಮುಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಮಹಿಳೆ ತಕ್ಷಣ ಆಘಾತಗೊಂಡು ಕಾಪಾಡಿ ಎಂದು ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಜನರು ದೌಡಾಯಿಸಿದ್ದಾರೆ. ಜನರು ಬರುತ್ತಿದ್ದಂತೆ ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೊಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಆತನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸರು ಸಂತ್ರಸ್ತ ಮಹಿಳೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ನ್ಯಾಯಾಲಯವು ಜಾಮೀನು ನೀಡುವವರೆಗೂ ಆತ ಜೈಲಿನಲ್ಲಿರುತ್ತಾನೆ. ಪೊಲೀಸರು ಬಂಧಿತ ಆರೋಪಿ ಮೇಲೆ ಯಾವುದಾದರೂ ಕ್ರಿಮಿನಲ್ ಕೇಸ್ ಇದೆಯಾ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ಹಿರಿಯ ಇನ್ಸ್ ಪೆಕ್ಟರ್ ಪ್ರಮೋದ್ ಧವಾರೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಎಫ್‍ಬಿಯಲ್ಲಿ 200 ಮಹಿಳೆಯರಿಗೆ ನಗ್ನ ಫೋಟೋ ಕಳುಹಿಸಿದವ ಅರೆಸ್ಟ್

    ಎಫ್‍ಬಿಯಲ್ಲಿ 200 ಮಹಿಳೆಯರಿಗೆ ನಗ್ನ ಫೋಟೋ ಕಳುಹಿಸಿದವ ಅರೆಸ್ಟ್

    ನವದೆಹಲಿ: ಫೇಸ್‍ಬುಕ್ ನಲ್ಲಿ 200 ಮಹಿಳೆಯರಿಗೆ ತನ್ನ ನಗ್ನ ಫೋಟೋ ಕಳುಹಿಸಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಿಜಯ್ ಬಂಧಿತ ಆರೋಪಿ. ಈತ ಫೇಸ್‍ಬುಕ್ ನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕ 200 ಮಹಿಳೆಯರಿಗೆ ತನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದನು. ಈಗ ಈತನನ್ನು ಗುರುಗ್ರಾಮ ಜಿಲ್ಲೆಯಲ್ಲಿರುವ ತನ್ನ ಮನೆಯಲ್ಲಿಯೇ ಹರಿಯಾಣ ಪೋಲೀಸರು ಬಂಧಿಸಿದ್ದಾರೆ.

    ಆರೋಪಿ ವಿಜಯ್ ಯುವತಿಯ ಹೆಸರಲ್ಲಿ ಫೇಸ್‍ಬುಕ್ ನಲ್ಲಿ ನಕಲಿ ಖಾತೆ ತೆರೆದಿದ್ದಾನೆ. ಮೊದಲು ಎಲ್ಲರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದನು. ನಂತರ ಅನೇಕ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ ಅವರಿಗೆ ತಿಳಿಯದಂತೆ ಅವರ ಪ್ರೊಫೈಲ್ ನಲ್ಲಿ ಅವರ ಫೋಟೋಗಳನ್ನು ಕದಿಯುತ್ತಿದ್ದನು ಎಂದು ಡಿಸಿಪಿ ಹೇಳಿದ್ದಾರೆ.

    ಆರೋಪಿ ವಿಜಯ್ ಐಜಿಐಎ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಯುವತಿ ಮತ್ತು ಪುರುಷರ ಹೆಸರಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನು. ಅನೇಕ ಮಹಿಳೆಯರು ಈತ ಯುವತಿ ಎಂದು ತಿಳಿದು ಸ್ನೇಹಿತೆ ಎಂದು ಸ್ವೀಕರಿಸಿದ್ದರು.

    ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡ ನಂತರ ತನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾನೆ. ಒಂದು ವೇಳೆ ಇದನ್ನು ಮಹಿಳೆಯರು ವಿರೋಧಿಸಿದರೆ ಅವರ ಫೋಟೋಗಳನ್ನು ನಗ್ನ ರೀತಿಯಲ್ಲಿ ಬದಲಿಸಿ ಅವರಿಗೆ ಕಳುಹಿಸುತ್ತಿದ್ದನು. ಜೊತೆಗೆ ಅಸಭ್ಯವಾಗಿ ಮೆಸೇಜ್ ಕೂಡ ಮಾಡಲು ಆರಂಭಿಸಿದ್ದನು ಎಂದು ಪೋಲೀಸರು ತಿಳಿಸಿದ್ದಾರೆ.

    ಆರೋಪಿ ಸುಮಾರು ಮಹಿಳೆಯರನ್ನು ಸ್ನೇಹಿತರಾಗಿ ಮಾಡಿಕೊಂಡು ಅಸಭ್ಯವಾಗಿ ಚಾಟ್ ಮಾಡಿ ಕಿರುಕುಳ ನೀಡುತ್ತಿದ್ದನು. ಕೊನೆಗೆ ದೆಹಲಿ ಮೂಲದ ಮಹಿಳೆಯೊಬ್ಬರು ದೆಹಲಿಯ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ತನಿಖೆ ಮಾಡಿ ಆರೋಪಿಯನ್ನು ಈಗ ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವಿದ್ಯಾರ್ಥಿನಿಯ ರೇಪ್ ಯತ್ನ, ಕಗ್ಗೊಲೆ ಪ್ರಕರಣ- ಆರೋಪಿಯ ಬಂಧನ

    ವಿದ್ಯಾರ್ಥಿನಿಯ ರೇಪ್ ಯತ್ನ, ಕಗ್ಗೊಲೆ ಪ್ರಕರಣ- ಆರೋಪಿಯ ಬಂಧನ

    ಕೋಲಾರ: ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣವನ್ನು ಮಾಲೂರು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಯುವಕ ರಂಜಿತ್ (22) ಬಂಧಿತ ಆರೋಪಿಯಾಗಿದ್ದು, ಜಿಲ್ಲೆಯ ಮಾಲೂರು ತಾಲೂಕಿನ ಗ್ರಾಮದವನು. ಈತ ಮೃತ ವಿದ್ಯಾರ್ಥಿನಿ ಮನೆಯ ಬಳಿ ಗಾರೆ ಕೆಲಸ ಮಾಡಲು ಬರುತ್ತಿದ್ದನು. ಆದ್ರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ ಮಾಲೂರು ಪೊಲೀಸರು ಹಾಜರುಪಡಿಸಲಿದ್ದಾರೆ.

    ಏನಿದು ಪ್ರಕರಣ?:
    ಬುಧವಾರ ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ರಕ್ಷಿತಾ (15) ಎಂಬ ವಿದ್ಯಾರ್ಥಿನಿಯನ್ನು ಅಪಹರಿಸಿ ಜಿಲ್ಲೆಯ ಮಾಲೂರು ಪಟ್ಟಣದ ಪಟ್ಟಣದ ರೈಲ್ವೇ ಅಂಡರ್ ಪಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಮಾಲೂರು ಪಟ್ಟಣದ ಇಂದಿರಾನಗರದ ನಿವಾಸಿಯಾಗಿದ್ದ ರಕ್ಷಿತಾ, ಬಿಜಿಎಸ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಬುಧವಾರ ಸಂಜೆ 4.30ರ ವೇಳೆ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳಿಬ್ಬರು ಅಪಹರಣ ಮಾಡಿದ್ದರು. ಬಳಿಕ ಅದೇ ಮಾರ್ಗದಲ್ಲಿದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೇ ವಿದ್ಯಾರ್ಥಿನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು.

    ಘಟನೆ ವೇಳೆ ರಕ್ಷಿತಾ ಜೊತೆಗಿದ್ದ ಸ್ನೇಹಿತೆ, ದುಷ್ಕರ್ಮಿಗಳಿಂದ ತಪ್ಪಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಬಳಿಕ ವಿದ್ಯಾರ್ಥಿನಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಸ್ಥಳಕ್ಕೆ ತಲುಪುವ ವೇಳೆಗೆ ರಕ್ಷಿತಾಳನ್ನು ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ನಡೆದ ಬಳಿಕ ರಕ್ಷಿತಾಳನ್ನು ಅಪಹರಣ ಮಾಡಲು ಆರೋಪಿಗಳು ಬಳಸಿದ್ದ ಬೈಕ್ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ ಯುವಕನ ಬಂಧನ

    ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ ಯುವಕನ ಬಂಧನ

    ಬೆಂಗಳೂರು: ಯುವತಿಯ ಮುಂದೆ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ ಮೆರೆದ ಯುವಕನನ್ನು ಸಿಲಿಕಾನ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

    ವಿದ್ಯಾರಣ್ಯಪುರ ನಿವಾಸಿ ಕಾರ್ತಿಕ್ ಬಂಧಿತ ಅರೋಪಿಯಾಗಿದ್ದು, ಈ ಘಟನೆ ಜುಲೈ 27ರಂದು ಸಂಜೆ 4.30ರ ಸುಮಾರಿಗೆ ನಡೆದಿದೆ. ನಗರದ ನ್ಯೂ ಬಿಇಎಲ್ ರಸ್ತೆ ಎಜಿಎಸ್ ಲೇಔಟ್‍ನ ಪಾರ್ಕ್ ಬಳಿ ಕಾರ್ತಿಕ್ ಯುವತಿ ಮುಂದೆ ಅಸಭ್ಯವಾಗಿ ವರ್ತಿಸಿದ್ದನು.

    ಅಲ್ಲದೇ ಯುವತಿ ಮನೆಗೆ ಹೋಗಬೇಕಾದ್ರೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ವಿಕೃತ ಕಾಮಿ, ಆಕೆಯ ಬಳಿ ಬಂದು ಪ್ಯಾಂಟ್‍ನ ಜಿಪ್ ಬಿಚ್ಚಿ ವಿಕೃತವಾಗಿ ವರ್ತಿಸಿದ್ದನು. ಭಯಗೊಂಡ ಯುವತಿ ಮನೆಗೆ ತೆರಳಿ ಪಾಲಕರಿಗೆ ವಿಷಯ ತಿಳಿಸಿದ್ದಳು. ಯುವತಿಯ ತಂದೆ ನೆರೆಹೊರೆಯವರ ನೆರವಿನೊಂದಿಗೆ ಸ್ಥಳಕ್ಕೆ ತೆರಳಿ ಸಮೀಪದ ಕಟ್ಟಡದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ರು. ಈ ವೇಳೆ ಕಾರಿನ ನೋಂದಣಿ ಸಂಖ್ಯೆ ಗೊತ್ತಾಗಿದ್ದು, ಅದರ ಆಧಾರದಲ್ಲಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಸದ್ಯ ಪ್ರಕರಣ ಸಂಬಂಧ ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಲವ್ ಬ್ರೇಕಪ್ – ಯುವತಿಯಿಂದ ದೂರು, ಯುವಕ ಅರೆಸ್ಟ್

    ಲವ್ ಬ್ರೇಕಪ್ – ಯುವತಿಯಿಂದ ದೂರು, ಯುವಕ ಅರೆಸ್ಟ್

    ಭುವನೇಶ್ವರ: ಯುವಕನೊಬ್ಬ ತನ್ನ ಪ್ರಿಯತಮೆಯ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

    ಒಡಿಶಾದ ಜೈಪುರ್ ನಲ್ಲಿ ಈ ಘಟನೆ ನಡೆದಿದ್ದು, ಕುಕಾಖಿಯ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ. ರಾಮಚಂದ್ರ ಬಾರಿಕ್ ಬಂಧಿತ ಆರೋಪಿ. ಸಂತ್ರಸ್ತೆ ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಆರೋಪಿಯನ್ನು ಕಟಕ್ ನ ಮಂಗೂಲಿಯಲ್ಲಿದ್ದ ಮನೆಯಿಂದ ಬಂಧಿಸಲಾಗಿದೆ.

    ಭುವನೇಶ್ವರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಇಬ್ಬರ ನಡುವೆ ಪರಿಚಯವಾಗಿತ್ತು. ಪರಿಚಯವು ಪ್ರೀತಿಗೆ ತಿರುಗಿತ್ತು. ಆದರೆ ಆರೋಪಿ ರಾಮಚಂದ್ರ, ಆಕೆಯ ಸ್ನೇಹಿತರ ಜೊತೆ ಸೇರಿ ಸಂತ್ರಸ್ತೆಯ ಕೆಲ ಅಸಭ್ಯ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾನೆ. ಕೆಲವು ದಿನಗಳ ನಂತರ ಇವರ ಮಧ್ಯೆ ಜಗಳವಾಗಿ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಈ ಕಾರಣದಿಂದ ಕೋಪಗೊಂಡು ಆತ ತೆಗೆದಿದ್ದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ ಅಂತ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಸಂತ್ರಸ್ತೆಗೆ ಈ ಬಗ್ಗೆ ತಿಳಿದ ತಕ್ಷಣ ಕುಕಾಖಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಾನೇ ಅಪ್ಲೋಡ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಆರೋಪಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

  • ರೌಡಿಸಂನಲ್ಲಿ ಹವಾ ಸೃಷ್ಟಿಸಲು ರೌಡಿ ಶೀಟರ್ ಗೆ  50 ಕಡೆ ಚುಚ್ಚಿ ಬರ್ಬರ ಹತ್ಯೆ

    ರೌಡಿಸಂನಲ್ಲಿ ಹವಾ ಸೃಷ್ಟಿಸಲು ರೌಡಿ ಶೀಟರ್ ಗೆ 50 ಕಡೆ ಚುಚ್ಚಿ ಬರ್ಬರ ಹತ್ಯೆ

    ಬೆಂಗಳೂರು: ರೌಡಿಸಂನಲ್ಲಿ ಹವಾ ಸೃಷ್ಟಿಸಲು ರೌಡಿ ಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್‍ ನ ಮಾಯಸಂದ್ರದ ರೌಡಿಶೀಟರ್ ಜಯಂತ್‍ನನ್ನು ಅಪಹರಿಸಿ ಬಿಯರ್ ಬಾಟಲಿನಿಂದ ಸುಮಾರು 50 ಕಡೆ ಚುಚ್ಚಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಆರೋಪಿ ಸುನಿಲ್ ನನ್ನೂ ಬಂಧಿಸಲಾಗಿದೆ. ಆರೋಪಿ ಸುನಿಲ್ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದನು. ನಂತರ ಅತ್ತಿಬೆಲೆ ಪೊಲೀಸರು 29 ದಿನಗಳ ನಂತರ ಹೊಸಕೋಟೆ ಬಳಿ ಇರುವ ಬಗ್ಗೆ ಮಾಹಿತಿ ತಿಳಿದು ಅಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯು ರೌಡಿಶೀಟರ್ ಆಗಿದ್ದು, ರೌಡಿಸಂನಲ್ಲಿ ಗುರುತಿಸಿಕೊಳ್ಳಲು ಹಾಗೂ ರಿಯಲ್ ಎಸ್ಟೇಟಿನಲ್ಲಿ ಹವಾ ಸೃಷ್ಟಿಸುವ ಸಲುವಾಗಿ ಕೊಲೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಶಿವಕುಮಾರ್ ತಿಳಿಸಿದ್ದಾರೆ.

    ಜುಲೈ 1 ರಂದು ಜಯಂತ್ ನನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಹಳ್ಳಿ ಬಳಿಯ ಲೇಔಟ್ ನಲ್ಲಿ ಈ ಹತ್ಯೆ ಮಾಡಲಾಗಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೆರಟಿಗನಬೆಲೆಯ ನೀಲಗಿರಿ ತೋಪಿನಲ್ಲಿ ಜಯಂತ್ ಮೃತ ದೇಹವನ್ನು ಬಿಸಾಕಿ ಹೋಗಿದ್ದರು.

    ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳಾದ ಲೋಕೇಶ್ ಹಾಗೂ ಪ್ರವೀಣ್ ನನ್ನು ಕೆಲದಿನಗಳ ಹಿಂದಷ್ಟೇ ಬಂಧಿಸಿಲಾಗಿದೆ. ಈ ಪ್ರಕರಣದಲ್ಲಿ ಇನ್ನು ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಗ ಹೊರ ಹೋಗ್ತಿದ್ದಂತೆ ಸೊಸೆ ರೂಮಿಗೆ ಹೋಗಿ ಬಾಗಿಲು ಹಾಕ್ಕೊಂಡ!

    ಮಗ ಹೊರ ಹೋಗ್ತಿದ್ದಂತೆ ಸೊಸೆ ರೂಮಿಗೆ ಹೋಗಿ ಬಾಗಿಲು ಹಾಕ್ಕೊಂಡ!

    ಭೋಪಾಲ್: ಮಗ ಮನೆಯಲ್ಲಿ ಇಲ್ಲದ ವೇಳೆ ಮಾವನೊಬ್ಬ ಸೊಸೆಗೆ ಲೈಂಗಿಕ ಕಿರುಕುಳ ನೀಡಿದ್ದು, ಈಗ ಮಾವನ ವಿರುದ್ಧ ಸೊಸೆ ದೂರು ನೀಡಿದ್ದಾರೆ.

    ಆರೋಪಿಯನ್ನು ಸಚಿವಾಲಯದ ನಿವೃತ್ತ ಕ್ಲರ್ಕ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿ ವಿರುದ್ಧ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಾವನನ್ನು ಬಂಧಿಸಿದ್ದಾರೆ.

    ಘಟನೆಯ ವಿವರ:
    ನಾಗ್ಪುರ ನಿವಾಸಿ 30 ವರ್ಷದ ಮಹಿಳೆಗೆ 63 ವರ್ಷದ ನಿವೃತ್ತ ಕ್ಲರ್ಕ್ ನ ಮಾನಸಿಕ ಅಸ್ವಸ್ಥ ಮಗನ ಜೊತೆ ಏಪ್ರಿಲ್ 24ರಂದು ಮದುವೆ ನಡೆದಿತ್ತು. ಇವರು ಪ್ರೊಫೆಸರ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಮೇ 12 ರಂದು ಮಗ ಮನೆಯಿಂದ ಹೊರ ಹೋಗಿದ್ದಾನೆ. ಈ ವೇಳೆ ಆರೋಪಿ ಮಾವ ಸೊಸೆ ಇದ್ದ ರೂಮಿಗೆ ನುಗ್ಗಿ ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಭಾರತ್ ಪ್ರತಾಪ್ ಸಿಂಗ್ ಅವರು ತಿಳಿಸಿದ್ದಾರೆ.

    ಆರೋಪಿ ಮಾವ ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಸಂತ್ರಸ್ತೆ ಹೆದರಿ ಸುಮ್ಮನಿದ್ದಾರೆ. ಆದರೆ ಆರೋಪಿ ಮಾವ ಮತ್ತೆ ಜುಲೈ 25 ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ ಸಂತ್ರಸ್ತೆ ತಮ್ಮ ಅಜ್ಜನ ಮನೆಗೆ ತೆರಳಿ, ಅಲ್ಲಿ ತನ್ನ ಕುಟುಂಬದವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಕೊನೆಗೆ ಅವರು ಪೊಲೀಸ್ ದೂರು ನೀಡುವಂತೆ ಹೇಳಿದ್ದಾರೆ. ಅದರಂತೆ ಸಂತ್ರಸ್ತೆ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಮಾವನ ವಿರುದ್ಧ ದೂರು ದಾಖಲಿಸಿದ್ದಾರೆ.

    ಆರೋಪಿಯ ಪತ್ನಿ ಒಂದು ವರ್ಷದ ಹಿಂದೆಷ್ಟೇ ಮೃತಪಟ್ಟಿದ್ದಾರೆ. ನನ್ನ ಪತಿ ಮಾನಸಿಕವಾಗಿ ದುರ್ಬಲರಾಗಿದ್ದಾರೆ. ಮದುವೆ ನಂತರ ಮಾವನ ಮಾತುಗಳು, ವರ್ತನೆ ಸರಿ ಇರಲಿಲ್ಲ. ಆದರೂ ನಾನು ಸುಮ್ಮನಿದ್ದೆ. ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲು ನನಗೆ ಧೈರ್ಯವಿರಲಿಲ್ಲ. ಈಗ ನನ್ನ ಕುಟುಂಬದವರ ಸಹಾಯದಿಂದ ದೂರು ನೀಡಿದ್ದೇನೆ ಎಂದು ನೊಂದ ಸಂತ್ರಸ್ತೆ ಹೇಳಿಕೊಂಡಿದ್ದಾರೆ ಅಂತ ಸಿಂಗ್ ಅವರು ತಿಳಿಸಿದ್ದಾರೆ.

  • ಸಾಂಸ್ಕೃತಿಕ ನಗರಿಯನ್ನ ಬೆಚ್ಚಿ ಬೀಳಿಸುವ ಡ್ರಗ್ಸ್ ಮಾರಾಟ ಜಾಲ ಪತ್ತೆ – 18 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಸಾಂಸ್ಕೃತಿಕ ನಗರಿಯನ್ನ ಬೆಚ್ಚಿ ಬೀಳಿಸುವ ಡ್ರಗ್ಸ್ ಮಾರಾಟ ಜಾಲ ಪತ್ತೆ – 18 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಮೈಸೂರು: ಸಾಂಸ್ಕೃತಿಕ ನಗರಿಯನ್ನ ಬೆಚ್ಚಿ ಬೀಳಿಸುವ ಡ್ರಗ್ಸ್ ಮಾರಾಟ ಜಾಲ ಬೆಳಕಿಗೆ ಬಂದಿದೆ. ಭಾರತದಲ್ಲಿ ನಿಷೇಧಿತ ಖಾಟ್ ಡ್ರಗ್ಸ್ ಮಾರಾಟಕ್ಕೆ ಮುಂದಾಗಿದ್ದ ವಿದೇಶಿಗನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಿರುವ ವಿದೇಶಿ ವಿದ್ಯಾರ್ಥಿಗಳಿಂದ ಈ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಸರ್ಕಾರಿ ಕೊರಿಯರ್ ಗಳನ್ನೆ ಡ್ರಗ್ಸ್ ಸಾಗಣಿಕೆಗೆ ದಂಧೆಕೋರರು ಬಳಸಿಕೊಂಡಿದ್ದಾರೆ.

    ಕೊರಿಯರ್ ಮೂಲಕ ಖಾಟ್ ಡ್ರಗ್ಸ್ ನ್ನು ಮುಂಬೈಗೆ ಕಳುಹಿಸುವಾಗ ಯಮನ್ ದೇಶದ ಆಮ್ಜಾ ಅಬ್ದೋವ ಖಾಸಿಂ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. 3 ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಿದ್ದ ಆಮ್ಜಾ ಯಮನ್ ದೇಶದಿಂದ ಕೊರಿಯರ್ ಮೂಲಕವೇ ಖಾಟ್ ಡ್ರಗ್ಸ್ ತರಿಸಿದ್ದಾನೆ. ಈತನ ಬಳಿ ಇದ್ದ ಸುಮಾರು 7 ಕೆ.ಜಿ ತೂಕದ ಖಾಟ್ ಡ್ರಗ್ಸ್ ವಶ ಪಡಿಸಿಕೊಳ್ಳಲಾಗಿದೆ.

    ಒಂದು ಕೆ.ಜಿ. ಖಾಟ್ ಬೆಲೆ ಬರೋಬ್ಬರಿ 2.60 ಲಕ್ಷ ರೂ ಇದ್ದು ಒಟ್ಟು 18 ಲಕ್ಷ ಮೌಲ್ಯದ ಖಾಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ವಿದೇಶಿ ವಿದ್ಯಾರ್ಥಿಗಳ ಅಕ್ರಮ ವಿಸಾ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ವಿದೇಶಿ ವಿದ್ಯಾರ್ಥಿಗಳಿಂದಲೇ ಡ್ರಗ್ಸ್ ಮಾರಾಟ ಜಾಲ ಬೆಳಕಿಗೆ ಬಂದಿದೆ.

  • ವಯಸ್ಸು 63 ಆದ್ರೂ ಐವರು ಗರ್ಲ್ ಫ್ರೆಂಡ್-ಇದು ಶೋಕಿಲಾಲ ತಾತನ ಕಥೆ

    ವಯಸ್ಸು 63 ಆದ್ರೂ ಐವರು ಗರ್ಲ್ ಫ್ರೆಂಡ್-ಇದು ಶೋಕಿಲಾಲ ತಾತನ ಕಥೆ

    ನವದೆಹಲಿ: ಕೆಲವರಿಗೆ ವಯಸ್ಸಾದ್ರೂ ಚಪಲ ಮಾತ್ರ ಕಡಿಮೆ ಆಗಲ್ಲ. ಅಂತಹ ವ್ಯಕ್ತಿಯೊಬ್ಬನು 63 ವರ್ಷವಾದ್ರೂ, ಈತನಿಗೆ ಐವರು ಗರ್ಲ್ ಫ್ರೆಂಡ್ ಇದ್ದಾರೆ ಅಂತೆ. ಐವರು ಗರ್ಲ್ ಫ್ರೆಂಡ್ ಇದ್ದರೂ, ಈತನಿಗೆ ಕೈಯಲ್ಲಿ ಒಂದು ಕೆಲಸವಿಲ್ಲ. ಯುವತಿಯರ ಜೊತೆ ಐಶಾರಾಮಿ ಜೀವನ ನಡೆಸಲು ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

    ಬಂಧು ಸಿಂಗ್ ಬಂಧಿತ ಚಪಲ ಚೆನ್ನಿಗರಾಯ. ಬಂಧು ಸಿಂಗ್‍ಗೆ ವಯಸ್ಸು 63 ಆದರೂ ಮದುವೆ ಆಗಿಲ್ಲ. ಕೇವಲ ಯುವತಿಯರೊಂದಿಗೆ ಮೋಜು, ಮಸ್ತಿ ಮಾಡುವ ಮೂಲಕ ಜೀವನ ಸಾಗಿಸುತ್ತಾ ಬಂದಿದ್ದಾನೆ. ಮೋಜು ಮಸ್ತಿ ನಡೆಸಲು ಬೇಕಾಗುವ ಹಣಕ್ಕಾಗಿ ಕಳ್ಳತನ ಮಾಡಿಕೊಂಡಿದ್ದ. ಆದರೆ ಇವರೆಗೂ ಬಂಧು ಸಿಂಗ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಸದ್ಯ ಕಳ್ಳತನದ ಆರೋಪದಡಿಯಲ್ಲಿ ರೋಹಿಲ್ಲಾ ಠಾಣೆಯ ಪೊಲೀಸರು ಬಂಧು ಸಿಂಗ್‍ನನ್ನು ಬಂಧಿಸಿದ್ದಾರೆ.

    ಸಿಕ್ಕಿದ್ದು ಹೇಗೆ?:
    ಜುಲೈ 28ರ ರಾತ್ರಿ ಬಂಧು ಸಿಂಗ್, ರೋಹಿಲ್ಲಾದ ಇಂಡಸ್ಟ್ರಿ ಏರಿಯಾದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನು. ಕೆಲವು ಕಳ್ಳತನದ ದೃಶ್ಯಗಳು ಫ್ಯಾಕ್ಟರಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ರೊಹಿಲ್ಲಾ ಠಾಣೆಯ ಎಎಸ್‍ಪಿ ಪಿಯೂಷ್, ಎಸ್‍ಹೆಚ್‍ಓ ರಾಮಚಂದ್ರ ತಂಡ ಆರೋಪಿ ಬಂಧು ಸಿಂಗ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧು ಸಿಂಗ್ ಆನಂದ ಪರ್ವತ ನಗರದ ನಿವಾಸಿಯಾಗಿದ್ದು, ಅವಿವಾಹಿತನಾಗಿದ್ದಾನೆ. ಆರೋಪಿ ಐವರು ಗರ್ಲ್ ಫ್ರೆಂಡ್‍ಗಳನ್ನು ಹೊಂದಿದ್ದು, ಅವರನ್ನು ಸಂತೋಷವಾಗಿ ಇರಿಸಲು ಕಳ್ಳತನ, ದರೋಡೆ ಮಾಡಿಕೊಂಡಿದ್ದನು ಎಂದು ತನಿಖೆ ವೇಳೆ ಹೇಳಿದ್ದಾನೆ. ಬಂಧಿತನಿಂದ 2 ಲ್ಯಾಪ್‍ಟಾಪ್, ಎಲ್‍ಇಡಿ ಸ್ಕ್ರೀನ್ ಮತ್ತು 5 ಸಾವಿರ ರೂ. ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿಎಸ್‍ಪಿ ನೂಪುರ ಚಂದ್ರ ತಿಳಿಸಿದ್ದಾರೆ.