Tag: arrest

  • ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ

    ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ

    ಲಕ್ನೋ: ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಉತ್ತರಪ್ರದೇಶದ ಮಹಾರಾಜಗಂಜ್‍ನ ಮದರಸದ ಧರ್ಮಗುರುನನ್ನು ಕೊಲುಹಿ ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಜುನೈದ್ ಅನ್ಸಾರಿ ಬಂಧಿತ ಧರ್ಮಗುರು. ಈತ ಆಗಸ್ಟ್ 15ರಂದು ಮಹಾರಾಜಗಂಜ್ ಪ್ರದೇಶದ ಮದರಸದಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದ ಮಕ್ಕಳನ್ನು ತಡೆದು, ರಾಷ್ಟ್ರಗೀತೆ ಹಾಡದಂತೆ ಎಚ್ಚರಿಸಿದ್ದಾನೆ. ಆದರೆ ಮದರಸದ ಪ್ರಾಂಶುಪಾಲರು ಅನ್ಸಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಸಿಟ್ಟಿಗೆದ್ದ ಇತರೆ ಶಿಕ್ಷಕರು ಅನ್ಸಾರಿಯನ್ನು ತಡೆಯಲು ಮುಂದಾಗಿದ್ದಾರೆ.

    ಈ ವೇಳೆ ಅನ್ಸಾರಿಯು ಇಸ್ಲಾಂನಲ್ಲಿ ರಾಷ್ಟ್ರಗೀತೆಗೆ ಅವಕಾಶವಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ರಾಷ್ಟ್ರಗೀತೆಯನ್ನು ಹಾಡಬಾರೆಂದು ತಾಕೀತು ಮಾಡಿದ್ದಾನೆ. ಸ್ಥಳದಲ್ಲಿದ್ದ ವಿಜ್ಞಾನ ಶಿಕ್ಷಕ ಸುನಿಲ್ ಮಣಿ ತ್ರಿಪಾಟಿ ಎಂಬವರು ಅನ್ಸಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಧರ್ಮಗುರುವಿನ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಾಷ್ಟ್ರಗೀತೆ ಅಪಮಾನ ಮಾಡಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೊಹಮ್ಮದ್ ಜುನೈದ್ ಅನ್ಸಾರಿಯನ್ನು ಬಂಧಿಸಿದ್ದಾರೆ. ಈ ವೇಳೆ ಆತನಿಗೆ ಸಹಾಯಮಾಡಿದ ಇಬ್ಬರು ವ್ಯಕ್ತಿಗಳ ಹುಡುಕಾಟಕ್ಕೆ ವ್ಯಾಪಕ ಶೋಧ ನಡೆಸಿದ್ದಾರೆ.

    ಕೊಲುಹಿ ಉಪ ಜಿಲ್ಲಾವರಿಷ್ಠಾಧಿಕಾರಿ ಅಶುತೋಷ್ ತ್ರಿಪಾಟಿ ಮಾತನಾಡಿ, ಉಮೇಶ್ ಯಾದವ್ ಎಂಬವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅನ್ಸಾರಿಯನ್ನು ಬಂಧಿಸಿದ್ದು, ಅಲ್ಲದೇ ಇನ್ನಿಬ್ಬರ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ. ಅಲ್ಲದೇ ಅನ್ಸಾರಿಗೂ ಮದರಸಗೂ ಯಾವುದೇ ಸಂಬಂಧವಿಲ್ಲ. ಆತ ರಾಷ್ಟ್ರಗೀತೆ ಹಾಡುತ್ತಿರುವಾಗ ಏಕಾಏಕಿ ಬಂದು ತಡೆದಿದ್ದ ಎಂದು ಹೇಳಿದ್ದಾರೆ.

    ಘಟನೆ ಕುರಿತು ಮಾತನಾಡಿದ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಯಾದ ಪ್ರಭಾತ್ ಕುಮಾರ್, ಅನ್ಸಾರಿಯವರಿಗೆ ಮದರಸದೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಅವನು ರಾಷ್ಟ್ರಗೀತೆ ಹಾಡುವಾಗ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳಿಗೆ ಅಡ್ಡಿಪಡಿಸಿದ್ದಾನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದು ಮಗುವಿಗೆ 45 ಲಕ್ಷ ರೂ.ನಂತೆ 300 ಮಕ್ಕಳನ್ನು ಮಾರಾಟ ಮಾಡಿದ್ದ ಕಿಂಗ್‍ಪಿನ್ ಅರೆಸ್ಟ್!

    ಒಂದು ಮಗುವಿಗೆ 45 ಲಕ್ಷ ರೂ.ನಂತೆ 300 ಮಕ್ಕಳನ್ನು ಮಾರಾಟ ಮಾಡಿದ್ದ ಕಿಂಗ್‍ಪಿನ್ ಅರೆಸ್ಟ್!

    ಮುಂಬೈ: ವಿದೇಶಕ್ಕೆ ಮಕ್ಕಳನ್ನು ಮಾರಾಟ ನಡೆಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯು ಗುಜರಾತ್‍ನ ರಾಜುಭಾಯ್ ಗಮ್ಳೆವಾಲಾ ಅಲಿಯಾಸ್ ರಾಜುಭಾಯ್ ಆಗಿದ್ದಾನೆ. ಆರೋಪಿಯು 2007 ರಿಂದಲೂ ಮಕ್ಕಳ ಮಾರಾಟ ದಂಧೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾನೆ. ಒಂದು ಮಗುವನ್ನು ಅಮೆರಿಕಕ್ಕೆ 45 ಲಕ್ಷ ರೂಪಾಯಿಯಂತೆ ಮಾರಾಟ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

    ಭಾರತದಿಂದ ಅಮೆರಿಕಕ್ಕೆ ಸುಮಾರು 300 ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯರನ್ನು ತಲಾ 45 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ಹೆಚ್ಚಿನವರು ಗುಜರಾತ್ ಮೂಲದ ಮಕ್ಕಳಾಗಿದ್ದಾರೆ. ಗುಜರಾತಿನ ಬಡ ಕುಟುಂಬಗಳು ತಮ್ಮ 11 ರಿಂದ 16 ವರ್ಷದ ಮಕ್ಕಳನ್ನು ಸಾಕಲಾಗದೇ ರಾಜುಭಾಯ್‍ನಿಗೆ ಮಾರಾಟ ಮಾಡಿದ್ದಾರೆ. ಆದರೆ ಮಾರಾಟವಾದ ನೂರಾರು ಮಕ್ಕಳ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಾರಾಟ ಹೇಗೆ ನಡೆಯುತ್ತಿತ್ತು? ಹೇಗೆ ಅಮೆರಿಕಕ್ಕೆ ಕಳುಹಿಸುತ್ತಿದ್ದರು?
    ಅಮೆರಿಕದಿಂದ ಮಕ್ಕಳನ್ನು ಕೊಂಡುಕೊಳ್ಳಲು ಗಿರಾಕಿಗಳು ಆರ್ಡರ್ ಮಾಡಿದ ಕೂಡಲೇ ರಾಜುಭಾಯ್ ಹಾಗೂ ಆತನ ಸಹಚರರು ಬಡ ಕುಟುಂಬದ ಮಕ್ಕಳನ್ನು ಹುಡುಕುತ್ತಿದ್ದರು. ಹೆಚ್ಚಾಗಿ ಇವರಿಗೆ ಗುಜರಾತಿನ ಮೂಲದವರು ತಮ್ಮ ಹೆತ್ತಮಕ್ಕಳನ್ನೇ ಮಾರಾಟ ಮಾಡುತ್ತಿದ್ದರು. ಮಗುವನ್ನು ಪಡೆದುಕೊಂಡ ಬಳಿಕ, ಮಗುವಿನ ಹೋಲಿಕೆಯನ್ನೇ ಹೋಲುವ ಪಾಸ್‍ಪೋರ್ಟ್ ಹೊಂದಿರುವ ಮಕ್ಕಳ ಪೋಷಕರನ್ನು ಸಂಪರ್ಕಿಸುತ್ತಿದ್ದರು. ಅವರಿಂದ ಅಸಲಿ ಪಾಸ್‍ಪೋರ್ಟ್ ಪಡೆದುಕೊಂಡು ಮಕ್ಕಳಿಗೆ ಪಾಸ್‍ಪೋರ್ಟ್‍ನಲ್ಲಿರುವಂತೆಯೇ ಮೇಕ್‍ಅಪ್ ಮಾಡಿಸುತ್ತಿದ್ದರು. ನಂತರ ಮಗುವನ್ನು ಅಮೆರಿಕಕ್ಕೆ ಕಳುಹಿಸಿ, ಅಸಲಿ ಪಾಸ್‍ಪೋರ್ಟ್‍ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುತ್ತಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಬಾಲಿವುಡ್ ನಟಿ ಪ್ರೀತಿ ಸೂದ್‍ರವರು ಇದೇ ತಿಂಗಳ ಮಾರ್ಚ್ ನಲ್ಲಿ ನಗರದ ಸಲೂನ್‍ಗೆ ಹೋಗಿದ್ದಾರೆ. ಈ ವೇಳೆ ಸಲೂನ್‍ನಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೇಕಪ್ ಮಾಡುತ್ತಿದ್ದನ್ನು ಕಂಡು ಪ್ರಶ್ನಿಸಿದ್ದಾರೆ. ಮಕ್ಕಳ ಜೊತೆ ಬಂದಿದ್ದ ಮೂವರು ವ್ಯಕ್ತಿಗಳು, ಇವರು ಅಮೆರಿಕ ದೇಶದವರಾಗಿದ್ದು, ಅವರ ಪೋಷಕರ ಬಳಿ ಕಳುಹಿಸಿ ಕೊಡಲು ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ನಟಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮೂವರು ವ್ಯಕ್ತಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು, ಓರ್ವ ಸಿಕ್ಕಿಬಿದ್ದಿದ್ದಾನೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಕ್ಕಳ ಕಳ್ಳ ಸಾಗಾಣಿಕೆ ಬೃಹತ್ ಜಾಲ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಿವೃತ್ತ ಪೊಲೀಸ್ ಇನ್ಸ್‍ಫೆಕ್ಟರ್ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

    ಆದರೆ ಪ್ರಕರಣದ ಕಿಂಗ್‍ಪಿನ್ ರಾಜುಭಾಯ್ ತಲೆಮರೆಸಿಕೊಂಡಿದ್ದ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ವಾಟ್ಸಪ್ ಮೂಲಕ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಈ ಮೊದಲು 2007ರಲ್ಲಿ ಪಾಸ್‍ಪೋರ್ಟ್ ನಕಲು ಮಾಡಿದ್ದ ಆರೋಪದ ಮೇರೆಗೆ ಶಿಕ್ಷೆ ಅನುಭವಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 34 ಹಾಗೂ 373ರಡಿ ಪ್ರಕರಣ ದಾಖಲಾಗಿದ್ದು, ಆಗಸ್ಟ್ 18ರವರೆಗೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಪರಮ್‍ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಟ್ಟು, ಸೆಕ್ಸ್ ಬಗ್ಗೆ ಮಾತಾಡಿ ಕಿರುಕುಳ ನೀಡ್ತಿದ್ದ ಕಂಪೆನಿ ಮ್ಯಾನೆಜರ್ ಅರೆಸ್ಟ್!

    ಮುಟ್ಟು, ಸೆಕ್ಸ್ ಬಗ್ಗೆ ಮಾತಾಡಿ ಕಿರುಕುಳ ನೀಡ್ತಿದ್ದ ಕಂಪೆನಿ ಮ್ಯಾನೆಜರ್ ಅರೆಸ್ಟ್!

    ನವದೆಹಲಿ: 18ರ ವರ್ಷದ ಯುವತಿ ಬಳಿ ಮುಟ್ಟು ಹಾಗೂ ಸೆಕ್ಸ್ ಬಗ್ಗೆ ಮಾತನಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದ ದೆಹಲಿಯ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಯುವತಿ ಉತ್ತರ ದೆಹಲಿಯ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದಳು. ಯುವತಿ ಏಪ್ರೆಲ್ ತಿಂಗಳಿನಲ್ಲಿ ಇಂಟರ್ನ್‍ಶಿಪ್‍ಗಾಗಿ ಕಂಪೆನಿಗೆ ಸೇರಿದ್ದಳು. ಆಗ ಅಲ್ಲಿನ ಮ್ಯಾನೆಜರ್ ಆಕೆ ಜೊತೆ ಮುಟ್ಟು ಹಾಗೂ ಸೆಕ್ಸ್ ಬಗ್ಗೆ ಮಾತನಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದನು.

    ನಾನು 2015ರಿಂದ ಆಶ್ರಯ ಮನೆಯಲೇ ವಾಸಿಸುತ್ತಿದ್ದೇನೆ. ನನ್ನ ಕೇರ್ ಟೇಕರ್ ನನಗೆ ಇಂಟರ್ನ್‍ಶಿಪ್‍ಗಾಗಿ ಕಂಪೆನಿಗೆ ಕಳುಹಿಸಿದ್ದರು. ಆದರೆ ಆ ಕಂಪೆನಿಯಲ್ಲಿ ಮ್ಯಾನೆಜರ್ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದನು. ಮುಟ್ಟು ಹಾಗೂ ಸೆಕ್ಸ್ ಬಗ್ಗೆ ಮಾತನಾಡುತ್ತಿದ್ದ. ಹಲವು ಬಾರಿ ಆತ ನನ್ನ ಹಿಬ್ಬಂದಿಗೆ ಹೊಡೆಯುತ್ತಿದ್ದನು ಎಂದು ಯುವತಿ ದೂರಿದ್ದಾಳೆ.

    ನನ್ನ ಕೆಲಸ ಎಲ್ಲಿ ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ನಾನು ಈ ಬಗ್ಗೆ ದೂರು ನೀಡಿರಲಿಲ್ಲ. ಆದರೆ ಆತ ಹೆಚ್ಚು ಕಿರುಕುಳ ನೀಡಲು ಶುರು ಮಾಡಿದ್ದಾಗ ನಾನು ನನ್ನ ಸ್ನೇಹಿತರ ಬಳಿ ಹಾಗೂ ಕೌನ್ಸಿಲರ್ ಬಳಿ ಹೇಳಿದೆ. ಆಗ ಅವರು ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಈ ಘಟನೆ ನಡೆಯುವಾಗ ಯುವತಿ ಅಪ್ರಾಪ್ತೆಯಾಗಿದ್ದಳು. ಹಾಗಾಗಿ ನಾವು ಮ್ಯಾನೆಜರ್ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಆ ಮ್ಯಾನೆಜರ್ ನನ್ನು ನಾವು ಬಂಧಿಸಿದ್ದೇವೆ ಎಂದು ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಟ್ಕಾ ದಂಧೆ ನಡೆಸೋದು ಕಂಡು ಬಂದ್ರೆ, ರೌಡಿಶೀಟರ್ ತೆರೆಯಬೇಕಾಗುತ್ತೆ: ಉಡುಪಿ ಎಸ್ಪಿ ಎಚ್ಚರಿಕೆ

    ಮಟ್ಕಾ ದಂಧೆ ನಡೆಸೋದು ಕಂಡು ಬಂದ್ರೆ, ರೌಡಿಶೀಟರ್ ತೆರೆಯಬೇಕಾಗುತ್ತೆ: ಉಡುಪಿ ಎಸ್ಪಿ ಎಚ್ಚರಿಕೆ

    ಉಡುಪಿ: ಇನ್ನು ಮುಂದೆ ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಸೋದು ಕಂಡುಬಂದರೆ, ಅಂತವರ ವಿರುದ್ಧ ರೌಡಿ ಶೀಟರ್ ತೆರೆಯಬೇಕಾಗುತ್ತದೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯಾದ್ಯಂತ ಮಟ್ಕಾ ದಂಧೆ ಹೆಚ್ಚುತ್ತಿದ್ದು, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಾನುವಾರವೂ ಸಹ 20 ಮಂದಿ ಮಟ್ಕಾ ದಂಧೆಯ ಆರೋಪಿಗಳನ್ನು ಬಂಧಿಸಿದ್ದಾರೆ. ಮಟ್ಕಾ ದಂಧೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸೋಮವಾರ ಜಿಲ್ಲಾ ಪೊಲೀಸ್ ಕಚೇರಿಯ ಮುಂಭಾಗದಲ್ಲಿ ಮಟ್ಕಾ ಆರೋಪಿಗಳ ಪರೇಡ್ ನಡೆಸಲಾಯಿತು.

    ಜಿಲ್ಲಾವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿಯವರು, ಮಟ್ಕಾ ದಂಧೆಯಲ್ಲಿ ತೊಡಗಿರುವ ಹಳೇ ಆರೋಪಿಗಳನ್ನು ಕರೆಸಿ, ಇನ್ನುಮುಂದೆ ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಸೋದು ಕಂಡುಬಂದರೆ, ಅಂತವರ ವಿರುದ್ಧ ರೌಡಿ ಶೀಟರ್ ತೆರೆಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮಟ್ಕಾ ದಂಧೆಯ ಕಿಂಗ್‍ಪಿನ್‍ಗಳನ್ನು ಆದಷ್ಟು ಬೇಗ ಮಟ್ಟಹಾಕುವುದಾಗಿ ಈ ವೇಳೆ ತಿಳಿಸಿದರು.

    ಪ್ರತೀ ವಾರ ವರಿಷ್ಠಾಧಿಕಾರಿಗಳು ನಡೆಸುವ ಫೋನ್ ಇನ್ ಕಾರ್ಯಕ್ರಮದಲ್ಲಿ ಮಟ್ಕಾ ದಂಧೆಯ ಬಗ್ಗೆ ನಾಗರೀಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವೇಶ್ಯಾವಾಟಿಕೆ ಜಾಲಕ್ಕೆ 2ನೇ ಪತ್ನಿಯನ್ನು ಮಾರಲು ಯತ್ನಿಸಿದವ ಪೊಲೀಸ್ ಬಲೆಗೆ!

    ವೇಶ್ಯಾವಾಟಿಕೆ ಜಾಲಕ್ಕೆ 2ನೇ ಪತ್ನಿಯನ್ನು ಮಾರಲು ಯತ್ನಿಸಿದವ ಪೊಲೀಸ್ ಬಲೆಗೆ!

    ನವದೆಹಲಿ: ಎರಡನೇ ಪತ್ನಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಯತ್ನಿಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಸದ್ದಾಂ ಬಂಧಿತ ಆರೋಪಿಯಾಗಿದ್ದು, 28 ವರ್ಷದ 2ನೇ ಪತ್ನಿ ಸಮೀರಾರನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಡಿ ಬಂಧಿಸಲಾಗಿದೆ. ಪತ್ನಿಯನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಪಿಂಪ್ ರೀತಿ ಆತನನ್ನು ಸಂಪರ್ಕಿಸಿ ಮಾತನಾಡಿಸಿದ್ದಾರೆ. ಬಳಿಕ ಪತ್ನಿಯನ್ನು ಹಣಕ್ಕಾಗಿ ಮಾರಾಟ ಮಾಡಲು ತಿಳಿಸಿದ್ದು, ಆಕೆಯನ್ನು ಪಿಂಪ್ ವಶಕ್ಕೆ ನೀಡಲು ಬಂಧ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

    ಆರೋಪಿ ಸದ್ದಾಂ ತನ್ನ ಪತ್ನಿಗೆ ಸಂಬಂಧಿಗಳ ಮನೆಗೆ ತೆರಳುವುದಾಗಿ ತಿಳಿಸಿದ್ದು, ಪೊಲೀಸರು ಪತಿಯನ್ನು ವಶಕ್ಕೆ ಪಡೆದ ವೇಳೆ ಸಮೀರಾ ಶಾಕ್ ಆಗಿದ್ದಾರೆ. ಸದ್ಯ ಸಮೀರಾರನ್ನು ಮಹಿಳಾ ಸಾಂತ್ವಾನ ಅಧಿಕಾರಿಗಳ ವಶಕ್ಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಕೊಲೆಗೆ ಸಂಚು?
    ಆರೋಪಿ ಸದ್ದಾಂ ಹಾಗೂ ಪತ್ನಿ ಸಮೀರಾ ದೆಹಲಿ ಅಪಾರ್ಟ್ ಮೆಂಟ್‍ವೊಂದರಲ್ಲಿ ವಾಸಿಸುತ್ತಿದ್ದು ಇಬ್ಬರ ನಡುವೆ ಕೌಟುಂಬಿಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು. ಇದರಿಂದ ಅಕ್ಕಪಕ್ಕದ ಮನೆಯವರ ಬಳಿ ಆತ ಅವಮಾನಕ್ಕೆ ಒಳಗಾಗಿದ್ದ. ಅವಮಾನದಿಂದಸ ಬೇಸರಗೊಂಡ ಸದ್ದಾಂ ಪತ್ನಿಯನ್ನು ಕೊಲೆ ಮಾಡಲು ಯೋಚಿಸಿದ್ದ. ಆದರೆ ಬಳಿಕ ತನ್ನ ಸಂಚು ಬದಲಿಸಿ ದೆಹಲಿಯ ವೇಶ್ಯಾವಾಟಿಕೆ ಜಾಲಕ್ಕೆ ಪತ್ನಿಯನ್ನು ಮಾರಾಟ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪತ್ನಿಯನ್ನು ಮಾರಾಟ ಮಾಡುವ ಯತ್ನದಲ್ಲಿ ಸದ್ದಾಂ ಪಿಂಪ್ ಒಬ್ಬರ ಸಹಾಯ ಪಡೆದಿದ್ದ, ಈ ಕುರಿತು ಮಾಹಿತಿ ಪಡೆದ ಪೊಲೀಸರು ಸದ್ದಾಂನನ್ನು ಪ್ಲಾನ್ ಮಾಡಿ ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸೆಕ್ಸ್ ನಿರಾಕರಣೆ- ಎರಡು ಕೊಲೆಯಲ್ಲಿ ಜಗಳ ಅಂತ್ಯ

    ಸೆಕ್ಸ್ ನಿರಾಕರಣೆ- ಎರಡು ಕೊಲೆಯಲ್ಲಿ ಜಗಳ ಅಂತ್ಯ

    ಗಾಂಧಿನಗರ: ಮಹಿಳೆಯೊಬ್ಬರು ಸೆಕ್ಸ್ ಗೆ ನಿರಾಕರಣೆ ಮಾಡಿದಕ್ಕೆ ಆಕೆಯ ಜೊತೆ ಗೆಳೆಯನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಗುಜರಾತ್ ನ ರಾಜ್ ಕೋಟದಲ್ಲಿ ನಡೆದಿದ್ದು, ಆಗಸ್ಟ್ 2 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರ್ಟಿ ಮನೇಕ್ (35) ಮತ್ತು ಲಿವಿಂಗ್ ಟುಗೆದರ್ ನಲ್ಲಿದ್ದ ಗೆಳೆಯ ಸುಲೇಮನ್ ಸಿದ್ದಿ (55) ಕೊಲೆಯಾದ ದುರ್ದೈವಿಗಳು. ಬಂಧಿತ ಆರೋಪಿಗಳನ್ನು ರಾಜ್ಭಾ ಕೆರ್, ಮನೋಜ್ ಸಂಜೋಗ್ ಮತ್ತು ಪ್ಲಾಸ್ ಆಧೇರಾ ಎಂದು ಗುರುತಿಸಲಾಗಿದೆ.

    ಈ ಮೂವರು ಆರೋಪಿಗಳು ಆಗಸ್ಟ್ 1ರಂದು ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಬೈಕ್ ಮೂಲಕ ಪರಾರಿಯಾಗಿದ್ದರು. ನಾವು ಶ್ವಾನ ದಳ ಸಹಾಯದ ಮೂಲಕ ತನಿಖೆ ಮಾಡಲಾಗಿದ್ದು, ಅವರನ್ನು ಒಖಾ ಬಳಿ ತಡೆಗಟ್ಟಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯಲ್ಲಿ ಒಬ್ಬನಾದ ರಾಜ್ಭಾ ಕೆರ್ ಆಗಸ್ಟ್ 1 ರಾತ್ರಿ ಮೃತ ಮನೇಕ್ ಮನೆಗೆ ನುಗ್ಗಿದ್ದಾನೆ. ಬಳಿಕ ಆಕೆಯನ್ನು ಬಲವಂತವಾಗಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ಮಹಿಳೆ ನಿರಾಕರಿಸಿದ್ದಾರೆ. ಇದೇ ವಿಚಾರವಾಗಿ ಜಗಳ ಶುರುವಾಗಿ ಕೊನೆಗೆ ರಾಜ್ಭಾ ಜೊತೆ ಇಬ್ಬರು ಸ್ನೇಹಿತರನ್ನು ಸೇರಿ ಮನೇಕ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸಿದ್ದಿ ಇದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಆರೋಪಿಗಳು ಅವರ ಮೇಲೂ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಲಂಡನ್‍ನಲ್ಲಿ ಅರೆಸ್ಟ್ ಆಗಿದ್ದು ಹೇಗೆ: ವಸಿಷ್ಟ ಸಿಂಹ ಹೇಳ್ತಾರೆ ಓದಿ

    ಲಂಡನ್‍ನಲ್ಲಿ ಅರೆಸ್ಟ್ ಆಗಿದ್ದು ಹೇಗೆ: ವಸಿಷ್ಟ ಸಿಂಹ ಹೇಳ್ತಾರೆ ಓದಿ

    ಬೆಂಗಳೂರು: ಲಂಡನ್ ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಸಿಷ್ಠ ಸಿಂಹ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಲಂಡನ್ ನಲ್ಲಿ ಬಕ್ಹಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ನಾನು ಮತ್ತೆ ಮಾನ್ವಿತಾ ಹರೀಶ್ ಹಾಡಿ ಕುಣಿದಿದ್ದೇವು. ಆಗ ಅಲ್ಲಿನ ಪಾದಚಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಪರೀಶಿಲಿಸಿ ಚಿತ್ರಿಕರಣಕ್ಕೆ ಅವಕಾಶ ಮಾಡಿಕೊಟ್ಟರು ಎಂದು ವಸಿಷ್ಟ ಸಿಂಹ ಸ್ಪಷ್ಟನೆ ನೀಡಿದ್ದಾರೆ.

    ಏನಿದು ಪ್ರಕರಣ?
    ಲಂಡನ್ ನಲ್ಲಿ ಬಕ್ಹಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡಿ ಕುಣಿದಿದ್ದಕ್ಕೆ ಪೊಲೀಸರು ಮಾನ್ವಿತಾ ಹಾಗೂ ವಸಿಷ್ಟರನ್ನು ಬಂಧಿಸಿದ್ದರು. ಬಳಿಕ ಸಿನಿಮಾ ಶೂಟಿಂಗ್ ಎಂದು ಹೇಳಿದ್ದಕ್ಕೆ ಇಬ್ಬರನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. ಜೊತೆಗೆ ಮಾನ್ವಿತಾ ಹರೀಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಲಂಡನ್ ಪೊಲೀಸರು ಮಾನ್ವಿತಾ ಮತ್ತು ವಸಿಷ್ಠ ಸಿಂಹ ಅವರನ್ನು ಬಂಧಿಸಿದ್ದಾರೆ. ಅವರು ಬಕ್ಹಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡು, ನೃತ್ಯ ಜೊತೆಗೆ ಪ್ರೀತಿ ಮಾಡುತ್ತಿದ್ದರು. ಅದಕ್ಕಾಗಿ ಪೊಲೀಸರು ಬಂಧಿಸಿದ್ದರು. ಬಳಿಕ ಮಾನ್ವಿತಾ ಅವರ ಸುಂದರ ಸ್ಮೈಲ್ ಜೊತೆಗೆ ಇದು ಸಿನಿಮಾ ಶೂಟಿಂಗ್ ಎಂದು ಹೇಳಿದ್ದಾಗ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ನಾಗತಿಹಳ್ಳಿ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ತೆರಳಿದೆ. ಚಿತ್ರದ ಬಹುತೇಕ ಶೂಟಿಂಗ್ ಲಂಡನ್ ನಲ್ಲಿ ಮಾಡಲಾಗಿದ್ದು, 40 ದಿನಗಳ ಕಾಲ ಲಂಡನ್ ನಲ್ಲಿ ಚಿತ್ರತಂಡ ಉಳಿದುಕೊಂಡಿದೆ. ಲಂಡನ್ ನ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಲಂಡನ್ ಬ್ರಿಡ್ಜ್ ಮೇಲೆ ಮಾನ್ವಿತಾ ಮಾಡಿದ ಡ್ಯಾನ್ಸ್ ವಿಡಿಯೋವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು “ಮುಂಜಾನೆ ಮಾನ್ವಿತಾ ಮಂಗಾಟ” ಎಂದು ಬರೆದು ಟ್ವೀಟ್ ಮಾಡಿದ್ದರು.

    ಚಂದ್ರಶೇಖರ್ ಅವರು ಬರೆದಿರುವ ಮಗಳು ಕನಸು ಕತೆಯನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಚಿತ್ರದ ಟೈಟಲ್ ಇನ್ನು ಖಚಿತವಾಗಿಲ್ಲ. ಈ ಸಿನಿಮಾದಲ್ಲಿ ಮಾನ್ವಿತಾ ಬೋಲ್ಡ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ವಸಿಷ್ಠ ಸಿಂಹ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಇಂಟರ್‌ನೆಟ್ ನಲ್ಲಿ ವಿಚಿತ್ರ ಅಶ್ಲೀಲ ವಿಡಿಯೋ ಡೌನ್‍ಲೋಡ್ – ವಿಕೃತಕಾಮಿ ವಕೀಲ ಅರೆಸ್ಟ್!

    ಇಂಟರ್‌ನೆಟ್ ನಲ್ಲಿ ವಿಚಿತ್ರ ಅಶ್ಲೀಲ ವಿಡಿಯೋ ಡೌನ್‍ಲೋಡ್ – ವಿಕೃತಕಾಮಿ ವಕೀಲ ಅರೆಸ್ಟ್!

    ಲಂಡನ್: ಇಂಟರ್‌ನೆಟ್ ಮೂಲಕ ವಿಚಿತ್ರ ಅಶ್ಲೀಲ ವಿಡಿಯೋಗಳನ್ನು ಡೌನ್‍ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಪೊಲೀಸರು ವಕೀಲನೊಬ್ಬನನ್ನು ಬಂಧಿಸಿದ್ದಾರೆ.

    ಬ್ರಾಯನ್ ಮಿಲ್ಸ್(46) ಬಂಧನಕ್ಕೊಳಗಾದ ವಕೀಲ. ಮಿಲ್ಸ್ ತನ್ನ ಕಂಪ್ಯೂಟರ್ ನಲ್ಲಿ 70ಕ್ಕೂ ಹೆಚ್ಚು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಡೌನ್‍ಲೋಡ್ ಮಾಡಿದ್ದಾನೆ. ಅಶ್ಲೀಲ ಫೋಟೋಗಳಲ್ಲದೇ ವ್ಯಕ್ತಿಯೊಬ್ಬ ಜೀವಂತ ಹಾವು, ಹಂದಿ, ನಾಯಿ ಹಾಗೂ ಕುದುರೆ ಜೊತೆ ಸೆಕ್ಸ್ ಮಡುತ್ತಿದ್ದ ವಿಡಿಯೋವನ್ನು ಕೂಡ ಡೌನ್‍ಲೋಡ್ ಮಾಡಿದ್ದಾನೆ.

    ನಾನು ಇತಂಹ ಭಯಂಕರ ಹಾಗೂ ಅಶ್ಲೀಲ ವಿಡಿಯೋಗಳನ್ನು ನೋಡುವುದಿಲ್ಲ. ತುಂಬಾ ದಿನಗಳಿಂದ ನಾನು ಈ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಆ ಫೋಟೋ ಹಾಗೂ ವಿಡಿಯೋಗಳು ಡಿಲೀಟ್ ಆಗುತ್ತಿರಲಿಲ್ಲ ಎಂದು ವಕೀಲ ಮಿಲ್ಸ್ ತಿಳಿಸಿದ್ದಾನೆ.

    ಈ ಕೇಸ್ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಮಿಲ್ಸ್ ಗೆ ಈಗ ಜಾಮೀನು ಸಿಕ್ಕಿದ್ದು, ಸೆಪ್ಟೆಂಬರ್ ನಲ್ಲಿ ಪ್ರಕಣದ ತೀರ್ಪು ಪ್ರಕಟವಾಗಲಿದೆ. ಪ್ರಾಣಿಗಳ ಜೊತೆ ವ್ಯಕ್ತಿ ಸೆಕ್ಸ್ ಮಾಡುತ್ತಿದ್ದ ಫೋಟೋ ಹಾಗೂ ವಿಡಿಯೋ ಡೌನ್‍ಲೋಡ್ ಮಾಡಿದ ಆರೋಪ ಸಾಬೀತಾದರೆ ಒಂದು ವರ್ಷ ಜೈಲಿಗೆ ಹೋಗುವ ಸಾಧ್ಯತೆಗಳಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಲಂಡನ್ ನಲ್ಲಿ ನಟಿ ಮಾನ್ವಿತಾ ಹರೀಶ್, ವಸಿಷ್ಠ ಸಿಂಹ ಅರೆಸ್ಟ್

    ಲಂಡನ್ ನಲ್ಲಿ ನಟಿ ಮಾನ್ವಿತಾ ಹರೀಶ್, ವಸಿಷ್ಠ ಸಿಂಹ ಅರೆಸ್ಟ್

    ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಹರೀಶ್ ಮತ್ತು ನಟ ವಸಿಷ್ಠ ಸಿಂಹ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ.

    ಲಂಡನ್ ನಲ್ಲಿ ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡಿ ಕುಣಿದಿದ್ದಕ್ಕೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಸಿನಿಮಾ ಶೂಟಿಂಗ್ ಎಂದು ಹೇಳಿದ್ದಕ್ಕೆ ಇಬ್ಬರನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. ಜೊತೆಗೆ ಮಾನ್ವಿತಾ ಹರೀಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಲಂಡನ್ ಪೊಲೀಸರು ಮಾನ್ವಿತಾ ಮತ್ತು ವಸಿಷ್ಠ ಸಿಂಹ ಅವರನ್ನು ಬಂಧಿಸಿದ್ದಾರೆ. ಅವರು ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡು, ನೃತ್ಯ ಜೊತೆಗೆ ಪ್ರೀತಿ ಮಾಡುತ್ತಿದ್ದರು. ಅದಕ್ಕಾಗಿ ಪೊಲೀಸರು ಬಂಧಿಸಿದ್ದರು. ಬಳಿಕ ಮಾನ್ವಿತಾ ಅವರ ಸುಂದರ ಸ್ಮೈಲ್ ಜೊತೆಗೆ ಇದು ಸಿನಿಮಾ ಶೂಟಿಂಗ್ ಎಂದು ಹೇಳಿದ್ದಾರೆ. ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ನಾಗತಿಹಳ್ಳಿ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ತೆರಳಿದೆ. ಚಿತ್ರದ ಬಹುತೇಕ ಶೂಟಿಂಗ್ ಲಂಡನ್ ನಲ್ಲಿ ಮಾಡಲಾಗಿದ್ದು, 40 ದಿನಗಳ ಕಾಲ ಲಂಡನ್ ನಲ್ಲಿ ಚಿತ್ರತಂಡ ಉಳಿದುಕೊಂಡಿದೆ. ಲಂಡನ್ ನ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಲಂಡನ್ ಬ್ರಿಡ್ಜ್ ಮೇಲೆ ಮಾನ್ವಿತಾ ಮಾಡಿದ ಡ್ಯಾನ್ಸ್ ವಿಡಿಯೋವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು “ಮುಂಜಾನೆ ಮಾನ್ವಿತಾ ಮಂಗಾಟ” ಎಂದು ಬರೆದು ಟ್ವೀಟ್ ಮಾಡಿದ್ದರು.

    ಚಂದ್ರಶೇಖರ್ ಅವರು ಬರೆದಿರುವ ಮಗಳು ಕನಸು ಕತೆಯನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಚಿತ್ರದ ಟೈಟಲ್ ಇನ್ನು ಖಚಿತವಾಗಿಲ್ಲ. ಈ ಸಿನಿಮಾದಲ್ಲಿ ಮಾನ್ವಿತಾ ಬೋಲ್ದ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ವಸಿಷ್ಠ ಸಿಂಹ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕ ಅರೆಸ್ಟ್!

    ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಮತ್ತೊಬ್ಬ ಬಾಲಕ ಅರೆಸ್ಟ್!

    ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡಿ ಫೇಸ್‍ಬುಕ್ ಪೋಸ್ಟ್ ಮಾಡಿದ್ದ ಬಾಲಕನನ್ನು ಆರ್.ಟಿ ನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

    ಬಾಲಕ ಬೈಕ್ ವ್ಹೀಲಿಂಗ್ ಮಾಡಿ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿದ್ದನು. ಫೇಸ್ ಬುಕ್ ಪೋಸ್ಟ್ ಆಧರಿಸಿ ಆರ್.ಟಿ ನಗರ ಸಂಚಾರಿ ಪೊಲೀಸರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ಬಂಧಿಸಿದ್ದಾರೆ. ಆರ್.ಟಿ ನಗರದ ಡಾಲರ್ಸ್ ಕಾಲೋನಿಯ 1ನೇ ಮುಖ್ಯರಸ್ತೆಯ ಬಳಿ ಬಾಲಕ ವ್ಹೀಲಿಂಗ್ ಮಾಡಿದ್ದು, ನಂತರ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದನು. ಫೇಸ್‍ಬುಕ್ ಪೋಸ್ಟ್ ನೋಡಿದ ಪೊಲೀಸರು ಬಾಲಕನ ಮನೆಗೆ ಹೋಗಿ ಆತನನ್ನು ಬಂಧಿಸಿದ್ದಾರೆ.

    ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಯಮಹ ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕ ಅಪ್ರಾಪ್ತನಾಗಿರುವುದರಿಂದ ಪೋಷಕರ ಮೇಲೂ ಆರ್.ಟಿ ನಗರ ಸಂಚಾರಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಸದ್ಯ ಆರ್.ಟಿ ನಗರ ಪೊಲೀಸ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಯುವಕರ ಅಪಾಯಕಾರಿ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಪೊಲೀಸ್ ತಂಡವೊಂದು ರಚನೆಯಾಗಿದೆ. ಈ ಪೊಲೀಸ್ ತಂಡ ವ್ಹೀಲಿಂಗ್ ಮಾಡಿ ಅದನ್ನು ಫೇಸ್‍ಬುಕ್ ಗೆ ಪೋಸ್ಟ್ ಮಾಡಿದರೆ ಅವರನ್ನು ಬಂಧಿಸುತ್ತಾರೆ. ಈಗಾಗಲೇ ಆರ್.ಟಿ ನಗರ ಸಂಚಾರಿ ಪೊಲೀಸರಿಂದ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದರು.

    ಬಾಲಕ ಆರ್.ಟಿ ನಗರದ ಮುಖ್ಯ ರಸ್ತೆಯ ಕಬಾಬ್ ಮ್ಯಾನರ್ ಹೊಟೆಲ್ ಬಳಿ ವ್ಹೀಲಿಂಗ್ ಮಾಡುತ್ತಿದ್ದನು. ನಂತರ ವ್ಹೀಲಿಂಗ್ ಮಾಡಿದ್ದ ತನ್ನ ಫೋಟೋವನ್ನ ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಗಮನಿಸಿದ ಪೊಲೀಸರು ಫೇಸ್‍ಬುಕ್ ಪೋಸ್ಟ್ ನೋಡಿ ಬಾಲಕನ ಮನೆಗೆ ಬಂದು ಪೋಷಕರಿಗೆ ನೋಟೀಸ್ ಕೊಟ್ಟಿದ್ದಾರೆ. ಈ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಹೀಲಿಂಗ್ ವೇಳೆ ಬಾಲಕ ಬಳಸಿದ್ದ ಡಿಯೋ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews