Tag: arrest

  • ಮಟ್ಕಾ ಅಡ್ಡೆ ಮೇಲೆ ದಾಳಿ: 3 ಲಕ್ಷ ರೂ., 40 ಬೈಕ್ ವಶ!

    ಮಟ್ಕಾ ಅಡ್ಡೆ ಮೇಲೆ ದಾಳಿ: 3 ಲಕ್ಷ ರೂ., 40 ಬೈಕ್ ವಶ!

    ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಕುದುರೆಮನೆ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, 3 ಲಕ್ಷ ರೂಪಾಯಿ ನಗದು ಹಾಗು 40ಕ್ಕೂ ಹೆಚ್ಚಿನ ಬೈಕುಗಳ ಭರ್ಜರಿ ಬೇಟೆಯಾಡಿದ್ದಾರೆ.

    ಗುರುವಾರ ಬೆಳ್ಳಂಬೆಳಗ್ಗೆ ಡಿಸಿಪಿ ಸೀಮಾ ಲಾಟಕರ ಹಾಗೂ ಇಬ್ಬರು ಪಿಎಸ್‍ಐ ಸೇರಿದಂತೆ 15 ಮಂದಿಯಿಂದ ಕುದುರೆಮನೆ ಗ್ರಾಮದ ತೋಟದ ಮನೆಯ ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 40 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಜೂಜಿಗೆ ಬಳಸುತ್ತಿದ್ದ 3 ಲಕ್ಷ ರೂಪಾಯಿ ಹಾಗೂ 40ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ದಾಳಿ ವೇಳೆ ದಂಧೆಕೋರರು ಕ್ರೈಂ ವಿಭಾಗದ ಪಿಎಸ್‍ಐ ರಮೇಶ್ ಹೂಗಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ಗಾಯಗೊಂಡಿದ್ದಾರೆ. ದಂಧೆಕೋರರು ತೋಟದ ಮನೆಯಲ್ಲಿ ತಾತ್ಕಾಲಿಕ ಶೆಡ್ಡಿನ ಮನೆಯನ್ನು ನಿರ್ಮಿಸಿಕೊಂಡು, ಹಲವು ದಿನಗಳಿಂದ ಜೂಜು ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಮಟ್ಕಾ ದಂಧೆಯ 40 ಮಂದಿಯನ್ನು ಬಂಧಿಸಿದ್ದು, ಸುಮಾರು 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡು ಹೋಗಿದ್ದಾರೆಂದು ಡಿಸಿಪಿ ಸೀಮಾ ಲಾಟಕರ್ ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲ ಪಡೆದ ಹಣವನ್ನು ವಾಪಸ್ ಕೇಳಿದ್ದಕ್ಕೆ ಆತನನ್ನೇ ಕೊಂದ!

    ಸಾಲ ಪಡೆದ ಹಣವನ್ನು ವಾಪಸ್ ಕೇಳಿದ್ದಕ್ಕೆ ಆತನನ್ನೇ ಕೊಂದ!

    ಯಾದಗಿರಿ: 2.5 ಲಕ್ಷ ರೂ. ಸಾಲ ಪಡೆದ ಹಣವನ್ನು ವಾಪಸ್ ಕೇಳಿದಕ್ಕೆ ಸಾಲ ಕೊಟ್ಟ ವ್ಯಕ್ತಿಯನ್ನೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಹೊರಭಾಗದಲ್ಲಿ ನಡೆದಿದೆ. ದುಂಡಪ್ಪ ಹೂಗಾರ (24) ಕೊಲೆಯಾದ ವ್ಯಕ್ತಿ. ಇದೇ ತಿಂಗಳು 19ಕ್ಕೆ ಮರೆಪ್ಪ ಎಂಬವನು ದುಂಡಪ್ಪ ಅವರಿಗೆ ಪಡೆದು ಸಾಲದ ಹಣವನ್ನು ಕೊಡುತ್ತೇನೆಂದು ನಂಬಿಸಿ, ಅವರನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದು ಮರೆಪ್ಪ, ದುಂಡಪ್ಪ ಅವರನ್ನು ಕೊಲೆ ಮಾಡುತ್ತಾನೆ. ಬಳಿಕ ಶವವನ್ನು ಕಾಲುವೆಯಲ್ಲಿ ಬಿಸಾಕಿದ್ದಾನೆ.

    ಘಟನೆ ಬಳಿಕ ದುಂಡಪ್ಪ ಅವರ ತಂದೆ ಸಾಹೇಬ್ ಅವರು ನಾಪತ್ತೆಯಾಗಿದ್ದಾರೆ ಎಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಆರೋಪಿ ಮರೇಪ್ಪನನ್ನು ಬಂಧಿಸಿದ್ದಾರೆ. ಸದ್ಯ ಅಗ್ನಿಶಾಮಕ ದಳದವರು ಶವಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಡಿದ ನಶೆಯಲ್ಲಿ ಹಿರಿಯ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಮಾಡೆಲ್ ಅರೆಸ್ಟ್!

    ಕುಡಿದ ನಶೆಯಲ್ಲಿ ಹಿರಿಯ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಮಾಡೆಲ್ ಅರೆಸ್ಟ್!

    ಗುರುಗ್ರಾಮ: ಕುಡಿದ ನಶೆಯಲ್ಲಿ ಹಿರಿಯ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಯೂರೋಪ್‍ನ ಎಸ್ಟೋನಿಯಾದ ಮಾಡೆಲ್‍ವೊಬ್ಬನನ್ನು ಹರ್ಯಾಣದ ಗುರುಗ್ರಾಮದ ಪೊಲೀಸರು ಬಂಧಿಸಿದ್ದಾರೆ.

    ಸೋವೊಲೆವ್ ವ್ಲಾಡಿಸ್ಲಾವ್(21) ಬಂಧಿತ ಮಾಡೆಲ್. ಭಾನುವಾರ ಗುರುಗ್ರಾಮ ಮಾಲ್‍ವೊಂದರಲ್ಲಿ ಸೋವೊಲೆವ್ ಇಂಗ್ಲೀಷ್‍ನಲ್ಲಿ ಮಾತನಾಡುತ್ತಾ, ಹಿರಿಯ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಪಾರ್ಕಿಂಗ್ ಸ್ಥಳದಲ್ಲಿ ಅವರ ಮೇಲೆ ಕಲ್ಲು ತೂರಿದ್ದಾನೆ.

    ಸೋವೊಲೆವ್ ಕುಡಿದ ನಶೆಯಲ್ಲಿ ಅರ್ಧ ಗಂಟೆ ಹೈ ಡ್ರಾಮಾ ನಡೆಸಿ ಅಲ್ಲಿದ ಹಿರಿಯ ಮಹಿಳೆ ಕೆನ್ನೆಗೆ ಹೊಡೆದಿದ್ದಾನೆ. ಅಲ್ಲದೇ ಮಹಿಳೆಯ ಕೈ ಜೋರಾಗಿ ತಿರುಗಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಸ್ಥಳೀಯರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

    ಸೋವೊಲೆವ್ ಡಿ.ಟಿ ಮಾಲ್‍ನಲ್ಲಿರುವ ರೆಸ್ಟೋ ಬಾರ್ ಗೆ ಬಂದಿದ್ದನು. ನಂತರ ಅಲ್ಲಿಂದ ತನ್ನ ಗೆಸ್ಟ್ ಹೌಸ್‍ಗೆ ಹೋಗುವಾಗ ದಾರಿಯಲ್ಲಿ ಸಿಗುವವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಗುರುಗ್ರಾಮದ ಪೊಲೀಸ್ ಅಧಿಕಾರಿ ಶುಭಾಷ್ ಬೋಕನ್ ಹೇಳಿದ್ದಾರೆ.

    ಕುಡಿದ ನಶೆಯಲ್ಲಿ ಸೋವೊಲೆವ್ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಸೋವೊಲೆವ್ ಮದ್ಯಪಾನ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸದ್ಯ ಸೋವೊಲೆವ್ ಶಾಂತಿಯನ್ನು ಹಾಳು ಮಾಡಿದ್ದಕ್ಕೆ ನಾವು ಆತನನ್ನು ಬಂಧಿಸಿದ್ದೇವೆ ಎಂದು ಎಸಿಪಿ ಶಮ್‍ಶೇರ್ ಸಿಂಗ್ ತಿಳಿಸಿದ್ದಾರೆ.

    ಸೋವೊಲೆವ್ ಮಾಡೆಲಿಂಗ್‍ನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉದ್ಯೋದ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದನು. ಸದ್ಯ ಆರೋಪಿ ಸೋವೊಲೆವ್‍ನನ್ನು ಸಿಟಿ ಮ್ಯಾಜಿಸ್ಟ್ರೇಟ್ ಬಳಿ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಸಲಾಕೆಯಿಂದ ತಲೆಗೆ ಹೊಡೆದು ತಂದೆಯಿಂದ್ಲೇ ಮಗನ ಬರ್ಬರ ಹತ್ಯೆ!

    ಸಲಾಕೆಯಿಂದ ತಲೆಗೆ ಹೊಡೆದು ತಂದೆಯಿಂದ್ಲೇ ಮಗನ ಬರ್ಬರ ಹತ್ಯೆ!

    ಮಂಡ್ಯ: ಅಪ್ಪನೇ ಮಗನನ್ನು ಬರ್ಬರವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕೋಣಹಳ್ಳಿತಿಟ್ಟು ಗ್ರಾಮದಲ್ಲಿ ನಡೆದಿದೆ.

    ಕೋಣಹಳ್ಳಿತಿಟ್ಟು ಗ್ರಾಮದ ವಾಸು (26) ಕೊಲೆಯಾದ ದುರ್ದೈವಿ ಮಗ. ವಾಸುವಿನ ತಾಯಿ ತೀರಿಕೊಂಡಿದ್ದು, ಮನೆಯಲ್ಲಿ ತಂದೆ ಕೃಷ್ಣಪ್ಪರೊಂದಿಗೆ ವಾಸು ವಾಸವಾಗಿದ್ದನು. ಮಂಗಳವಾರ ರಾತ್ರಿ ವಾಸು ಮತ್ತು ತಂದೆ ಕೃಷ್ಣಪ್ಪರ ನಡುವೆ ಗಲಾಟೆಯಾಗಿದೆ. ಇದರಿಂದ ಸಿಟ್ಟಿಗೆದ್ದ ಕೃಷ್ಣಪ್ಪ ಮಗನ ತಲೆಗೆ ಸಲಾಕೆಯಿಂದ ಹೊಡೆದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವಾಸು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ವಾಸುವಿನ ತಂದೆಯನ್ನು ವಿಚಾರಿಸಿದಾಗ, ಕೃಷ್ಣಪ್ಪನು ಮಗನನ್ನು ಯಾರೋ ಕೊಂದು ಮೃತದೇಹವನ್ನು ಮನೆಯ ಮುಂದೆ ಹಾಕಿ ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಕೃಷ್ಣಪ್ಪನನ್ನು ವಿಚಾರಣೆಗೊಳಪಡಿಸಿದಾಗ,  ತಾನೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1 ರೂ. ನಾಣ್ಯ ಹಾಕಿ ಪರಿಶೀಲನೆ: ಕೊನೆಗೆ ಹುಂಡಿಯೇ ಕಳ್ಳತನ!

    1 ರೂ. ನಾಣ್ಯ ಹಾಕಿ ಪರಿಶೀಲನೆ: ಕೊನೆಗೆ ಹುಂಡಿಯೇ ಕಳ್ಳತನ!

    – ಬೆಂಗಳೂರು ಪೊಲೀಸರಿಂದ ಕಳ್ಳರು ಅರೆಸ್ಟ್

    ಬೆಂಗಳೂರು: ದೇವಸ್ಥಾನದ ಹುಂಡಿಗೆ 1 ರೂ. ನಾಣ್ಯ ಹಾಕಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಕುಮಾರ, ಮಂಜ, ಕೃಷ್ಣ, ವಿಜಯ, ಈ ನಾಲ್ವರು ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಸ್ಟವ್ ರಿಪೇರಿ ಮಾಡೋದಾಗಿ ಏರಿಯಾಗಳಲ್ಲಿ ಓಡಾಡಿ ಕಳ್ಳತನ ಮಾಡುತ್ತಿದ್ದರು.

    ಈ ವೇಳೆ ಏರಿಯಾ ಸುತ್ತಾಡುವಾಗ ದೇವಸ್ಥಾನ ಕಂಡರೆ ಆರೋಪಿಗಳಿಗೆ ಎಲ್ಲಿಲ್ಲದ ಭಕ್ತಿ ಮೂಡುತ್ತಿತ್ತು. ಒಮ್ಮೆ ದೇವಸ್ಥಾನದ ಒಳಗೆ ಪ್ರವೇಶಿಸಿದರೆ ಅವರ ಕಣ್ಣು ಹುಂಡಿಯ ಮೇಲೆ ಬೀಳುತ್ತಿದ್ದು, ಹುಂಡಿಯಲ್ಲಿ ಹಣ ಇದೆಯಾ ಇಲ್ಲವೇ ಎನ್ನುವುದನ್ನು 1 ರೂ. ನಾಣ್ಯ ಹಾಕಿ ಖಚಿತ ಪಡಿಸಿಕೊಳ್ಳುತ್ತಿದ್ದರು. ಬಳಿಕ ಹಣ ಇದೆ ಅಂತ ಗೊತ್ತಾದರೆ ಹುಂಡಿಯನ್ನೇ ಕಳ್ಳತನ ಮಾಡುತ್ತಿದ್ದರು.

    ಆರೋಪಿಗಳು ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಮೈಕೋಲೇಔಟ್ ಇನ್ಸ್ ಪೆಕ್ಟರ್ ಅಜಯ್ ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ.

    ಪೊಲೀಸರು ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳ ಬಂಧನದಿಂದ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ್ದ 17 ಪ್ರಕರಣಗಳು ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆರಗಿದ 11 ಮಂದಿ ಕಾಮುಕರು!

    ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆರಗಿದ 11 ಮಂದಿ ಕಾಮುಕರು!

    ರಾಂಚಿ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಮಂದಿ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

    ಜಾರ್ಖಂಡ್ ನ ಲೋಹರ್ದಾಗಾ ಜಿಲ್ಲೆಯಲ್ಲಿ ಈ ಘಟನೆ ಆಗಸ್ಟ್ 16 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು 18 ಮತ್ತು 28 ವಯಸ್ಸಿನರಾಗಿದ್ದು, ಹಿರಿ ಹರ್ರಾ ಟೋಲಿ ಪ್ರದೇಶದಲ್ಲಿ ದಾಳಿ ಮಾಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಆಶಿಶ್ ಕುಮಾರ್ ಮಹ್ಲಿ ಹೇಳಿದ್ದಾರೆ.

    ನಡೆದಿದ್ದೇನು?
    ಆಗಸ್ಟ್ 16 ರಂದು ಇಬ್ಬರು ಬಾಲಕಿಯರು ಪಕ್ಕದ ಮನೆಯ ಮಹಿಳೆ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದರು. ದಾರಿ ಮಧ್ಯೆ ಅಂದರೆ ಹಿರಿ ಹೆರ್ರ ಟೋಪಿ ರೈಲ್ವೇ ಪ್ರದೇಶದಲ್ಲಿ ಬೈಕ್ ಕೆಟ್ಟು ನಿಂತು ಹೋಗಿದೆ. ಈ ವೇಳೆ ಬಾಲಕಿಯೊಬ್ಬಳು ಸ್ನೇಹಿತನಿಗೆ ಕರೆ ಮಾಡಿ ಸಹಾಯ ಮಾಡುವಂತೆ ಕೇಳಿದ್ದಾಳೆ. ಆದರೆ ಸ್ನೇಹಿತ ಸಹಾಯಕ್ಕೆ ಬದಲು 11 ಮಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದಾನೆ.

    ಸ್ಥಳಕ್ಕೆ ಬಂದ ಆರೋಪಿಗಳು ಮಹಿಳೆಯ ಮೇಲೆ ಹಲ್ಲೆ ಮಾಡಿ ಬೆದರಿಸಿ ಅಲ್ಲಿಂದ ಓಡಿಸಿದ್ದಾರೆ. ಬಳಿಕ ಇಬ್ಬರು ಬಾಲಕಿಯರನ್ನು ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ 11 ಮಂದಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು ಅತ್ಯಾಚಾರ ಎಸಗಿದ್ದಲ್ಲದೆ ಅವರ ಬಳಿಯಿದ್ದ ಮೊಬೈಲ್ ಫೋನ್ ಗಳನ್ನು ಸಹ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.

    ಸದ್ಯಕ್ಕೆ ಇಬ್ಬರು ಬಾಲಕಿಯರ ಹೇಳಿಕೆಯ ಆಧಾರದ ಮೇರೆಗೆ ಸರ್ದಾರ್ ಪೊಲೀಸ್ ಠಾಣೆಯಲ್ಲಿ 11 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 113 ಪ್ರಕರಣಗಳಲ್ಲಿ ಬೇಕಿದ್ದ 63 ವರ್ಷದ ಲೇಡಿ ಡಾನ್ ಆರೆಸ್ಟ್

    113 ಪ್ರಕರಣಗಳಲ್ಲಿ ಬೇಕಿದ್ದ 63 ವರ್ಷದ ಲೇಡಿ ಡಾನ್ ಆರೆಸ್ಟ್

    ನವದೆಹಲಿ: ದೆಹಲಿಯಲ್ಲಿ ಅತೀ ಹೆಚ್ಚು ಅಪರಾಧ ಹಿನ್ನೆಲೆ ಹೊಂದಿರುವ ಲೇಡಿ ಡಾನ್ ಎಂದೇ ಕುಖ್ಯಾತಿ ಪಡೆದಿದ್ದ 62 ವರ್ಷದ ಬಸಿರಾನ್‍ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಹಲವು ದಶಕಗಳಿಂದ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ತನ್ನ 8 ಮಕ್ಕಳೊಂದಿಗೆ ಬಸಿರಾನ್ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಳು. ಬಸಿರಾನ್ ಮೇಲೆ ಕೊಲೆ, ಸುಪಾರಿ, ಹಣಕ್ಕಾಗಿ ಅಪಹರಣ, ಅಕ್ರಮ ಮದ್ಯ ವ್ಯವಹಾರ, ದರೋಡೆ ಸೇರದಂತೆ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿತ್ತು.

    2017 ರಲ್ಲಿ ಕೊಲೆ ಪ್ರಕರಣ ಸೇರಿದಂತೆ ಇದುವರೆಗೂ ಬಸಿರಾನ್ 9 ಬಾರಿ ಬಂಧಿಸಲಾಗಿದೆ. ಮತ್ತೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸಿರಾನ್ ಇಬ್ಬರು ಪುತ್ರರು ಜೈಲು ಶಿಕ್ಷೆ ಅನುಭವಿಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ ಪೊಲೀಸರ ಮಾಹಿತಿ ಅನ್ವಯ ಬಸಿರಾನ್ ಅಪರಾಧ ಕೃತ್ಯ ಕೇಂದ್ರ ಬಿಂದುವಾಗಿದ್ದು, ಈ ಪ್ರದೇಶ ಪ್ರಮುಖ ಕುಡಿಯುವ ನೀರಿನ ಕೇಂದ್ರಗಳ ಮೇಲೆ ತಮ್ಮ ಹಿಡಿತ ಹೊಂದಿದ್ದಳು. ಅಲ್ಲದೇ ಹಲವು ಅಕ್ರಮ ವ್ಯವಹಾರ ನಡೆಸುತ್ತಿದ್ದಳು ಎಂದು ತಿಳಿಸಿದ್ದಾರೆ.

    ವ್ಯಕ್ತಿಯೊಬ್ಬರಿಂದ 21 ವರ್ಷದ ಮೀರಾಜ್ ಎಂಬ ಯುವಕನ್ನು ಕೊಲೆ ಮಾಡಲು ಬಸಿರಾನ್ 60 ಸಾವಿರ ರೂ. ಸುಪಾರಿ ಪಡೆದ್ದಳು. ಈ ಪ್ರಕರಣದಲ್ಲಿ ಕಳೆದ 8 ತಿಂಗಳಿನಿಂದ ಬಸಿರಾನ್ ನನ್ನು ಬಂಧಿಸಿಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಆದರೆ ಸಂಬಂಧಿಗಳ ಸಹಾಯದಿಂದ ಪೊಲೀಸರ ಕೈಗೆ ಸಿಗದೆ ಬಸಿರಾನ್ ವಂಚಿಸುತ್ತಿದ್ದಳು. ಪೊಲೀಸರು ದೆಹಲಿಯ ಸಂಗಮ್ ವಿಹಾರ್ ಪ್ರದೇಶದ ಕೆಲ ಸಾರ್ವಜನಿಕರು ಹಾಗೂ ವಕೀಲರ ಸಹಾಯ ಪಡೆದು ಬಸಿರಾನ್ ರನ್ನು ಬಂಧಿಸಿದ್ದಾರೆ.

    1990 ರಲ್ಲಿ ಅಪರಾಧ ಜಗತ್ತಿಗೆ ಪ್ರವೇಶಿಸಿದ ಬಸಿರಾನ್ ಮೊದಲು ಕಳ್ಳಭಟ್ಟಿ ವ್ಯವಹಾರ ನಡೆಸಿದ್ದಳು. ಬಳಿಕ ಅನೇಕ ಅಪರಾಧ ಕೃತ್ಯಗಳಲ್ಲಿ ತೊಡಗಿ ತನ್ನ ಮಕ್ಕಳಿಗೂ ಪ್ರೇರಣೆ ನೀಡಿದ್ದಳು. ವಿಶೇಷವೆಂದರೆ ಬಸಿರಾನ್ ಕುಟುಂಬದಲ್ಲಿ ಆಕೆಯ ಪತಿ ಮಲ್ಖನ್ ಸಿಂಗ್ ಮೇಲೆ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ.

  • ದಾವೂದ್ ಇಬ್ರಾಹಿಂ ಮ್ಯಾನೇಜರ್ ಅರೆಸ್ಟ್

    ದಾವೂದ್ ಇಬ್ರಾಹಿಂ ಮ್ಯಾನೇಜರ್ ಅರೆಸ್ಟ್

    ಲಂಡನ್: ಭೂಗತ ಪಾತಕಿ, 1993ರ ಮುಂಬೈ ಸರಣಿ ಬಾಂಬ್ ದಾಳಿ ಮಾಡಿದ್ದ ದಾವೂದ್ ಇಬ್ರಾಹಿಂ ಆರ್ಥಿಕ ವ್ಯವಸ್ಥಾಪಕನನ್ನು ಲಂಡನ್‍ನ ಹಿಲ್ಟನ್ ಹೋಟೆಲ್‍ನಲ್ಲಿ ಶುಕ್ರವಾರ ಬಂಧಿಸಲಾಗಿದೆ.

    ಜಬಿರ್ ಮೋತಿ ಬಂಧಿತ ಆರೋಪಿ. ಜಬಿರ್ ದಾವೂದ್ ಇಬ್ರಾಹಿಂ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದು, ದಾವೂದ್ ಕುಟುಂಬ ಹಾಗೂ ಸಹಚರರೊಂದಿಗೆ ಸಂಪರ್ಕ ಹೊಂದಿದ್ದ ಎಂದು ವರದಿಯಾಗಿದೆ.

    ಇಂಗ್ಲೆಂಡ್, ಯುನೈಟೆಡ್ ಅರಬ್ ಎಮಿರೈಟರ್ಸ್ (ಯುಎಇ), ಆಫ್ರಿಕಾ, ಯುರೋಪ್, ಆಗ್ನೇಯ ಏಷ್ಯಾ ಹಾಗೂ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ದಾವೂದ್ ಇಬ್ರಾಹಿಂ ವ್ಯವಹಾರಗಳನ್ನು ಮೋತಿ ನೋಡಿಕೊಳ್ಳುತ್ತಿದ್ದನು ಎಂದು ವರದಿಯಾಗಿದೆ.

    ಈ ಹಿಂದೆಯೇ ಮೋತಿ ಬಂಧನಕ್ಕಾಗಿ ಭಾರತವು ಮನವಿ ಮಾಡಿಕೊಂಡಿತ್ತು. ಮೋತಿ ಸ್ಮಗಲಿಂಗ್, ಸುಲಿಗೆ ಸೇರಿದಂತೆ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಪಾಕಿಸ್ತಾನ, ಮಧ್ಯಪ್ರಾಚ್ಯ ದೇಶಗಳಲ್ಲಿ ಇರುತ್ತಿದ್ದ, ಕೆಲವು ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್ ನಲ್ಲಿ ಉಳಿದುಕೊಳ್ಳಲು 10 ವರ್ಷಗಳ ವಿಸಾ ಪಡೆದುಕೊಂಡಿದ್ದನು. ಇದರ ಜೊತೆ ಆತನು ಬಾರ್ಬಡೋಸ್ ಮತ್ತು ಆಂಟಿಗುವಾ ದೇಶಗಳ ನಾಗರೀಕತ್ವ ಪಡೆಯಲು ಮುಂದಾಗಿದ್ದನಂತೆ.

    ಕರಾಚಿಯ ದಾವೂದ್ ಹಾಗೂ ಆತನ ಕುಟುಂಬ ನಡೆಸುತ್ತಿದ್ದ ‘ಡಿ ಕಂಪೆನಿ’ಯಲ್ಲಿ ಮೋತಿ ಕೂಡ ಸೇರುದಾರ ಎನ್ನಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಕ್ಕಿ ಡ್ರಾ ಹೆಸರಿನಲ್ಲಿ ಭಾರೀ ಮೋಸ!

    ಲಕ್ಕಿ ಡ್ರಾ ಹೆಸರಿನಲ್ಲಿ ಭಾರೀ ಮೋಸ!

    ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿರುವ ಶ್ರೀಸಾಯಿ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಲಕ್ಕಿ ಡ್ರಾ ಹೆಸರಿನಲ್ಲಿ ಗ್ರಾಹಕರಿಗೆ ಭಾರೀ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಲಕ್ಕಿ ಡ್ರಾ ಮಾಡೋದಾಗಿ ಶ್ರೀಸಾಯಿ ಎಂಟರ್ಪ್ರೈಸಸ್ ಮಾಲೀಕ ಪ್ರತಿಯೊಬ್ಬರಿಂದ 750 ರೂಪಾಯಿ ವಸೂಲಿ ಮಾಡಿದ್ದನು. ಆದರೆ ಇಂದು ಲಕ್ಕಿ ಡ್ರಾ ಮಾಡದೆ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಮಾಲೀಕ ಪರಾರಿಯಾಗಿದ್ದಾನೆ. ಇದರಿಂದಾಗಿ ಗ್ರಾಹಕರು ಕುರ್ಚಿ, ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶವನ್ನು ಹೊರಹಾಕಿದ್ದಾರೆ. ಇದರಿಂದಾಗಿ ಜನರನ್ನ ಚದುರಿಸಲು ಸಿಪಿಐ ದ್ಯಾಮನ್ನವರ್ ತಂಡ ಲಘು ಲಾಠಿ ಪ್ರಹಾರ ನಡೆಸಿದೆ.

    ಸದ್ಯಕ್ಕೆ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಸಿದಂಗಿ ಪೊಲೀಸರು ಡ್ರಾ ಸಮಿತಿ ಸದಸ್ಯರನ್ನ ಬಂಧಿಸಿದ್ದು, ಸ್ಥಳಕ್ಕೆ ಡಿಎಸ್ಪಿ ರವೀಂದ್ರ ಶಿರೂರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೋಕಿ ಜೀವನಕ್ಕಾಗಿ ಕಳ್ಳತನ- ಅಂತರ್ ರಾಜ್ಯ ಗ್ಯಾಂಗ್ ಅಂದರ್, ಅರ್ಧ ಕೆಜಿ ಚಿನ್ನ ವಶ

    ಶೋಕಿ ಜೀವನಕ್ಕಾಗಿ ಕಳ್ಳತನ- ಅಂತರ್ ರಾಜ್ಯ ಗ್ಯಾಂಗ್ ಅಂದರ್, ಅರ್ಧ ಕೆಜಿ ಚಿನ್ನ ವಶ

    – ಕಳ್ಳತನ ಮಾಡಿದ ಹಣದೊಂದಿಗೆ ಯುವತಿರೊಂದಿಗೆ ಟೂರ್, ಐಷಾರಾಮಿ ಜೀವನ

    ಕಲಬುರಗಿ: ಐಷಾರಾಮಿ ಜೀವನ ನಡೆಸಲು ಕಳ್ಳತನ ದಂಧೆಗೆ ಇಳಿದಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಕಲಬುರಗಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ, ಒಂದು ನಾಡಪಿಸ್ತೂಲ್ ಸೇರಿದಂತೆ ಕೃತ್ಯಕ್ಕೆ ಬಳಕೆ ಮಾಡಲಾಗುತ್ತಿದ್ದ ಶಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತರನ್ನು ಜಿಲ್ಲೆಯ ನಾಗರಾಜ್ ಕಚೇರಿ, ಮಹಾರಾಷ್ಟ್ರ ರಾಜ್ಯದ ಸೋಲ್ಲಾಪುರ ಮೂಲದ ಹುಸೇನ್ ಗಾಯ್ಕ್ವಡ್, ಶ್ರೀಕಾಂತ್ ಸಿಂಧೆ ಹಾಗೂ ಶಂಕರ್ ಜಾಧವ್ ಎಂದು ಗುರುತಿಸಲಾಗಿದೆ.

    ಬಂಧಿತ ಕಳ್ಳರು ಕಳೆದ ಹಲವು ವರ್ಷಗಳಿಂದ ಕರ್ನಾಟಕದ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಅನೇಕ ಮನೆಗಳನ್ನ ಕಳ್ಳತನ ಮಾಡಿದ್ದಾರೆ. ಹಗಲಿನ ವೇಳೆಯಲ್ಲಿ ಬೀಗ ಇರುವ ಮನೆಗಳನ್ನು ನೋಡಿ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ರಾತ್ರಿಯಾಗುತ್ತಿದಂತೆ ಕಳ್ಳತನಕ್ಕೆ ಇಳಿಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮನೆಯ ಬೀಗ ಮುರಿದು ಒಳ ಪ್ರವೇಶಿಸುತ್ತಿದ್ದ ಆರೋಪಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಚಿನ್ನಭರಣ ದೋಚಿ ಪರಾರಿಯಾಗುತ್ತಿದ್ದರು. ಹೀಗೆ ಕದ್ದ ಹಣದಲ್ಲಿ ವಿವಿಧೆಡೆ ಯುವತಿಯರ ಜೊತೆ ಪ್ರವಾಸ ಕೈಗೊಂಡು ಮೋಜು ಮಸ್ತಿ ಮಾಡುತ್ತಿದ್ದರು. ಕಳೆದ ತಿಂಗಳಷ್ಟೇ ಕಲಬುರಗಿ ನಗರದ ಖೂಬಾ ಪ್ಲಾಟ್‍ನಲ್ಲಿ ಖ್ಯಾತ ವಕೀಲರೊಬ್ಬರ ಮನೆಗೆ ಸಹ ಈ ಗ್ಯಾಂಗ್ ಕನ್ನ ಹಾಕಿತ್ತು. ತಾವು ಕಳ್ಳತನ ಮಾಡುವ ನಗರದಲ್ಲಿ 15 ದಿನಗಳು ಮಾತ್ರ ಇರುತ್ತಿದ್ದ ಈ ಗ್ಯಾಂಗ್ ಈ ವೇಳೆಯಲ್ಲೇ ವಿವಿಧೆಡೆ ಮನೆಗಳಿಗೆ ಕನ್ನ ಹಾಕಿ ತಮ್ಮ ಕೈಚಳಕ ತೋರುತ್ತಿದ್ದರು. ಕೃತ್ಯದ ವೇಳೆ ಯಾರಾದರೂ ಪ್ರತಿರೋಧ ತೋರಿದರೆ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗುತ್ತಿದ್ದರು.

    ಬಂಧಿತರಿಂದ ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ, ಒಂದು ನಾಡಪಿಸ್ತೂಲ್ ಸೇರಿದಂತೆ ಒಂಭತ್ತು ಜೀವಂತ ಗುಂಡುಗಳು, ಮಹಿಂದ್ರಾ ಎಕ್ಸ್‍ಯುವಿ ಕಾರು, ಕಳ್ಳತನಕ್ಕೆ ಬಳಸುವ ವಸ್ತುಗಳಾದ ಕಬ್ಬಿಣದ ರಾಡ್, ಸ್ಕ್ರೂಡ್ರೈವರ್, ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ. ಕಲಬುರಗಿ ನಗರದ ಬ್ರಹ್ಮಪುರ, ಅಶೋಕನಗರ, ಚೌಕ್ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಹದಿನಾರು ಮನೆಗಳನ್ನ ಕಳ್ಳತನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv